ಲಕ್ನೋ: ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆ ತಾರಕಕ್ಕೆ ಏರಿರುವುದರ
ಮಧ್ಯೆಯೇ, ಅಯೋಧ್ಯೆಯಲ್ಲಿ
೨೨೧ ಮೀಟರ್ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ (ಮಾಹಿತಿ) ಅವನೀಶ್ ಅವಸ್ತಿ ೨೦೧೮ ರ ನವೆಂಬರ್ ೨೫ ರ ಭಾನುವಾರ ಪ್ರಕಟಿಸಿದರು.
ಪ್ರತಿಮೆಯ ನೈಜ ಎತ್ತರವು ೧೫೧ ಮೀಟರ್ ಆಗಿದ್ದರೆ, ಪ್ರತಿಮೆಯ ತಲೆಯ ಮೇಲಿನ
ಛತ್ರಿ ೨೦ ಮೀಟರ್ ಮತ್ತು ಪೀಠ ೫೦ ಮೀಟರ್ ಎತ್ತರ ಆಗುತ್ತದೆ ಎಂದು ಅವರು ಹೇಳಿದರು.
ಪೀಠದಲ್ಲಿ
ವಸ್ತುಸಂಗ್ರಹಾಲಯದ ವ್ಯವಸ್ಥೆ ಮಾಡಲಾಗುವುದು ಎಂದು
ಅವಸ್ತಿ ನುಡಿದರು.
ಪ್ರತಿಮೆಯನ್ನು ನಿರ್ಮಿಸಲು ಐದು ಕಂಪನಿಗಳನ್ನು
ಪಟ್ಟಿ ಮಾಡಲಾಗಿದ್ದು, ಶನಿವಾರ ಸಂಜೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅ ಮುಂಚೆ ಅವರ ವಿನ್ಯಾಸಗಳನ್ನು ಪ್ರಸ್ತುತ ಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಪ್ರತಿಮೆಯ
ಸ್ಥಾಪನೆಗಾಗಿ ಮಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ನುಡಿದರು.
ಅಕ್ಟೋಬರ್ ೩೧ ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊತ್ತ ಮೊದಲ ಗೃಹ ಸಚಿವ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೨ ಮೀಟರ್ ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ಲೋಕಾರ್ಪಣೆ
ಮಾಡಿದ್ದರು. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ
ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಯೋಧ್ಯಾ
ವರದಿ: ಈ ಮಧ್ಯೆ ಅಯೋಧ್ಯೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣದ ಬೇಡಿಕೆಯನ್ನು ಪುನರುಚ್ಚರಿಸಿದರು. ೨೦೧೮ ರ ನವೆಂಬರ್ ೨೫ ರ ಭಾನುವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರಾಮ ಮಂದಿರವನ್ನು ನಿರ್ಮಿಸದಿದ್ದರೆ, ಬಿಜೆಪಿ
ಸರ್ಕಾರವು ಕೇಂದ್ರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಪಕ್ಷ ಅಧಿಕಾರದಲ್ಲಿದ್ದರೆ ಅಥವಾ ಇಲ್ಲದೇ ಇದ್ದರೂ ರಾಮ ಮಂದಿರವನ್ನು ಖಂಡಿತವಾಗಿಯೂ ನಿರ್ಮಿಸಲಾಗುವುದು ಎಂದು ಉದ್ಧವ್ ಹೇಳಿದರು.
"ಮಂದಿರವನ್ನು ನಿರ್ಮಿಸದಿದ್ದರೆ, ಈ ಸರ್ಕಾರವು ಉಳಿಯಲು ಸಾಧ್ಯವಿಲ್ಲ, ಆದರೆ ಸರ್ಕಾರ ಉಳಿಯದೇ ಇದ್ದರೂ ಮಂದಿರವನ್ನು ನಿರ್ಮಿಸಲಾಗುವುದು" ಎಂದು ಅವರು ನುಡಿದರು.
"ಮಂದಿರವನ್ನು ನಿರ್ಮಿಸದಿದ್ದರೆ, ಈ ಸರ್ಕಾರವು ಉಳಿಯಲು ಸಾಧ್ಯವಿಲ್ಲ, ಆದರೆ ಸರ್ಕಾರ ಉಳಿಯದೇ ಇದ್ದರೂ ಮಂದಿರವನ್ನು ನಿರ್ಮಿಸಲಾಗುವುದು" ಎಂದು ಅವರು ನುಡಿದರು.
ಭಾನುವಾರ ಬೆಳಗ್ಗೆ ರಾಮಲಲ್ಲಾ ದರ್ಶನಕ್ಕೆ ಹೋಗಿದ್ದಾಗ ರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸಲು ಸಂತರ
ಆಶೀರ್ವಾದ ಪಡೆದುದಾಗಿ ಠಾಕ್ರೆ ಹೇಳಿದರು.
"ನಿಮ್ಮ ಆಶೀರ್ವಾದ ಇಲ್ಲದೆ ನಾವು ಕೈಗೊಳ್ಳಲು ಹೊರಟಿರುವ ಕಾರ್ಯವನ್ನು ಪೂರ್ಣಗೊಳಿಸಲು
ಆಗುವುದಿಲ್ಲ ಎಂದು ನಾನು ನನ್ನನ್ನು ಆಶೀರ್ವದಿಸಿದ ಸಂತರಿಗೆ ಹೇಳಿದ್ದೇನೆ’
ಎಂದು ಅವರು ನುಡಿದರು.
ಅಯೋಧ್ಯೆಗೆ ಯಾವುದೇ ರಹಸ್ಯ ಕಾರ್ಯಸೂಚಿಯೊಂದಿಗೆ
ಬಂದಿಲ್ಲ. ಪ್ರಪಂಚದಾದ್ಯಂತದ ಎಲ್ಲಾ ಭಾರತೀಯರ ಮತ್ತು ಹಿಂದೂಗಳ ಭಾವನೆಗಳನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ. ಅವರು ರಾಮ ಮಂದಿರವನ್ನು ಕಟ್ಟಲು ಕಾಯುತ್ತಿದ್ದಾರೆ "ಎಂದು ಠಾಕ್ರೆ ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ
ಠಾಕ್ರೆ, "ಮಂಡಿರ್ ಥಾ, ಹೈ ಔರ್ ರಹೇಗಾ" (’ಅಲ್ಲಿ ಮಂದಿರವಿತ್ತು, ಅಲ್ಲಿ ಮಂದಿರವಿದೆ ಮತ್ತು ಮಂದಿರವು ಉಳಿಯುತ್ತದೆ.’) ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ನಾನು ಕೇಳಿದೆ. ಆದರೆ ಅದು ನಮ್ಮ ನಂಬಿಕೆ, ನಮ್ಮ ಬದ್ಧತೆ ಮತ್ತು ನಮ್ಮ ಭಾವನೆ. ಅಲ್ಲಿ ಮಂದಿರವನ್ನು
ನಾವು ಕಾಣುತ್ತಿಲ್ಲ ಎಂಬುದು ನಮ್ಮ ನೋವು. ಈ ಮಂದಿರವನ್ನು ನಾವು ಕಾಣುವುದು ಯಾವಾಗ?’ ಎಂದು ಠಾಕ್ರೆ ಪ್ರಶ್ನಿಸಿದರು.
No comments:
Post a Comment