Saturday, November 17, 2018

ಇಂದಿನ ಇತಿಹಾಸ History Today ನವೆಂಬರ್ 17

ಇಂದಿನ ಇತಿಹಾಸ History Today ನವೆಂಬರ್ 17
2018: ನವದೆಹಲಿಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ೧೮೨ ಮೀಟರ್ ಎತ್ತರದ ಉಕ್ಕು ಮತ್ತು ಕಂಚಿನಏಕತಾ ಪ್ರತಿಮೆ (ಸ್ಟ್ಯಾಚ್ಯು ಆಫ್ ಯುನಿಟಿ) ಬಾಹ್ಯಾಕಾಶದಿಂದ ತೆಗೆಯಲಾಗಿರುವ ಅತ್ಯದ್ಭುತ ಚಿತ್ರವೊಂದನ್ನು ಅಮೆರಿಕದ ಕಂಪೆನಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತು. ಪ್ರತಿದಿನ ಭೂಮಿಯ ಚಿತ್ರವನ್ನು ತೆಗೆಯುವ ಪ್ಲಾನೆಟ್ ಲ್ಯಾಬ್ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿತು. ವಿಶ್ವದ ಅತ್ಯಂತ ಎತ್ತರದ ಪ್ರತಿಮೆ, ಅದರ ಪಕ್ಕದಲ್ಲೇ ಹರಿಯುತ್ತಿರುವ ನರ್ಮದಾ ನದಿ, ಸುತ್ತಮುತ್ತಣ ನಿಸರ್ಗದ ರಮಣೀಯ ದೃಶ್ಯ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿತು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊತ್ತ ಮೊದಲ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರ ೧೪೩ನೇ ಜನ್ಮದಿನಾಚರಣೆ ಸಂದರ್ಭದಲ್ಲಿ (೨೦೧೮ರ ಅಕ್ಟೋಬರ್ ೩೧) ಗುಜರಾತಿನ ನರ್ಮದಾ ಜಿಲ್ಲೆಯಲ್ಲಿನ ಕೇವಡಿಯಾದಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿರುವ ಪ್ರತಿಮೆಯನ್ನು ರಾಷ್ಟ್ರಾರ್ಪಣೆ ಮಾಡಿದ್ದರು,೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹಕ್ಕಿಂತಲೂ ಎತ್ತರವಾಗಿದೆ. ಅಮೆರಿಕದಸ್ಟ್ಯಾಚ್ಯು ಆಫ್ ಲಿಬರ್ಟಿ ಎರಡು ಪಟ್ಟು ದೊಡ್ಡದಾಗಿರುವ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹವು ಈವರೆಗೂ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂದು ಪರಿಗಣಿತವಾಗಿತ್ತು. ಅದನ್ನುಏಕತೆಯ ಪ್ರತಿಮೆ ಮೀರಿಸಿದೆಸಾಧು ಬೆಟ್ ಎಂಬುದಾಗಿ ಕರೆಯಲಾಗುವ ಏಕತಾ ಪ್ರತಿಮೆಯು ನರ್ಮದಾ ನದಿಯಿಂದ . ಕಿಮೀ ದೂರದಲ್ಲಿದೆ. ೨೫೦ ಮೀಟರ್ ಉದ್ದದ ಸೇತುವೆ ಮೂಲಕ ದ್ವೀಪವೊಂದಕ್ಕೆ ಇದನ್ನು ಜೋಡಿಸಲಾಗಿದೆ. ಪ್ರತಿಮೆಯ ಒಳಭಾಗದಲ್ಲಿ ೧೩೫ ಮೀಟರ್ ಎತ್ತರದಲ್ಲಿ ವೀಕ್ಷಕರ ಗ್ಯಾಲರಿಯನ್ನು ಹೊಂದಿರುವುದು ಪ್ರತಿಮೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಗ್ಯಾಲರಿಯಲ್ಲಿ ಏಕಕಾಲಕ್ಕೆ ೨೦೦ ಜನ ನಿಂತುಕೊಳ್ಳಬಹುದು. ಅತಿವೇಗದ ಲಿಫ್ಟ್ ಮೂಲಕ ವೀಕ್ಷಣಾ ಗ್ಯಾಲರಿವರೆಗೆ ಹೋಗಬಹುದು. ಲಿಫ್ಟ್ ಪ್ರತಿದಿನ ,೦೦೦ ಮಂದಿಯನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆಸ್ವಾತಂತ್ರ್ಯ ಲಭಿಸುವ ವೇಳೆಗೆ ಹರಿದು ಹಂಚಿಹೋಗಿದ್ದ ವಿವಿಧ ಭಾಗಗಳಲ್ಲಿ ಭಾರತ ಸರ್ಕಾರದ ವ್ಯಾಪ್ತಿಗೆ ತಂದು ಒಗ್ಗೂಡಿಸಿದ ಮಹಾನ್ ಕಾರ್ಯವನ್ನು ಮಾಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಸ್ಮರಣೆಗಾಗಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

2018: ವಾಷಿಂಗ್ಟನ್: ಎರಡು ಬಿಲಿಯನ್ (೨೦೦ ಕೋಟಿ) ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಮೆರಿಕದ ೨೪ ಬಹೂಪಯೋಗಿ ಎಂಎಚ್-೬೦ರೋಮಿಯೋ ಜಲಾಂತರ್ಗಾಮಿ ನಿರೋಧಿ ಹೆಲಿಕಾಪ್ಟರ್ಗಳನ್ನು ತನ್ನ ನೌಕಾಪಡೆಗಾಗಿ ಖರೀದಿಸುವ ಪ್ರಸ್ತಾವವನ್ನು ಭಾರತ ಅಮೆರಿಕದ ಮುಂದಿಟ್ಟಿದೆ ಎಂದು ವಾಷಿಂಗ್ಟನ್ನಲ್ಲಿ ರಕ್ಷಣಾ ಕೈಗಾರಿಕಾ ಮೂಲಗಳು ಹೇಳಿದವು. ಭಾರತಕ್ಕೆ ಪ್ರಬಲ ಜಲಾಂತರ್ಗಾಮಿ ನಿರೋಧಿ ಬೇಟೆ ಹೆಲಿಕಾಪ್ಟರ್ಗಳ ಅಗತ್ಯ ಕಳೆದ ಒಂದು ದಶಕದಿಂದಲೂ ಇತ್ತು. ’ರೋಮಿಯೋ ವಹಿವಾಟು ಒಪ್ಪಂದವು ಕೆಲವೇ ತಿಂಗಳುಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಿಂಗಾಪುರದಲ್ಲಿ ಪ್ರಾದೇಶಿಕ ಶೃಂಗಸಭೆಯ ಸಂದರ್ಭದಲ್ಲಿ ನಡೆಸಿದ ಯಶಸ್ವೀ ಸಭೆಯ ಬಳಿಕ, ಮೂಲಗಳು ಸುದ್ದಿಯನ್ನು ದೃಢ ಪಡಿಸಿದವು. ೨೪ ಬಹೂಪಯೋಗಿ  ’ಎಂಎಚ್ ೬೦  ರೋಮಿಯೋ  ಸೀಹಾಕ್ ಹೆಲಿಕಾಪ್ಟರುಗಳನ್ನು ತುರ್ತಾಗಿ ಒದಗಿಸುವಂತೆ ಭಾರತವು ಅಮೆರಿಕಕ್ಕೆ ಬೇಡಿಕೆ ಪತ್ರವನ್ನು ಕಳುಹಿಸಿದೆ ಎಂದು ಮೂಲಗಳು ಹೇಳಿದವು.  ಇತ್ತೀಚಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ಬಾಂಧವ್ಯಗಳು ಗಮನಾರ್ಹವಾಗಿ ಹೆಚ್ಚಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದ ಹೈಟೆಕ್ ಸೇನಾ ಉಪಕರಣಗಳನ್ನು ಭಾರತದ ರಕ್ಷಣಾ ಅಗತ್ಯಗಳಿಗೆ ತಕ್ಕಂತೆ ಒದಗಿಸುತ್ತಿದೆ. ಸಿಂಗಾಪುರದಲ್ಲಿ ನಡೆದ ಮೋದಿ-ಪೆನ್ಸ್ ಮಾತುಕತೆಯಲ್ಲಿ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವೇ ಪ್ರಮುಖ ಕಾರ್ಯಸೂಚಿಯಾಗಿತ್ತು. ಮಾತುಕತೆಯ ಮುಂದುವರೆದ ಭಾಗವಾಗಿ ಶೃಂಗಮಟ್ಟದ ದ್ವಿಪಕ್ಷೀಯ ಮಾತುಕತೆ ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯೆ ಅರ್ಜೆಂಟೀನಾದಲ್ಲಿ ನವೆಂಬರ್ ೩೦ ಮತ್ತು ಡಿಸೆಂಬರ್ ೧ರಂದು ಸಮಾವೇಶಗೊಳ್ಳಲಿರುವ ಜಿ೨೦ ಶೃಂಗಸಭೆಯ ಕಾಲದಲ್ಲಿ ನಡೆಯುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಎಂಎಚ್-೬೦ ರೋಮಿಯೋ ವಹಿವಾಟಿಗೆ ಆಫ್ ಸೆಟ್ ಪಾಲುದಾರಿಕೆಯ ಅಗತ್ಯವಿದೆ ಎಂದು ನಿರೀಕ್ಷಿಸಲಾಗಿದೆ. ತುರ್ತು ಅಗತ್ಯ ಪೂರೈಕೆಯೊಂದಿಗೆ ಮಾದರಿಯ ೧೨೩ ಹೆಲಿಕಾಪ್ಟರ್ಗಳನ್ನು ಭಾರತದಲ್ಲೇ ನಿರ್ಮಿಸುವ ದೀರ್ಘಗಾಮೀ ಯೋಜನೆಯನ್ನು ಭಾರತ ರೂಪಿಸಿದೆ ಎಂದು ಮೂಲಗಳು ಸುಳಿವು ನೀಡಿದವು. ಪ್ರಸ್ತುತ ಅಮೆರಿಕ ನೌಕಾಪಡೆಯಲ್ಲಿ ಬಳಕೆಯಾಗುತ್ತಿರುವ ಲಾಕ್ಹೀಡ್ ಮಾರ್ಟಿನ್ ಅವರ ಎಂಎಚ್-೬೦ ಸೀಹಾಕ್ ಹೆಲಿಕಾಪ್ಟರ್ ವಿಶ್ವದಲ್ಲೇ ಅತ್ಯಾಧುನಿಕವಾದ ನೌಕಾ ಹೆಲಿಕಾಪ್ಟರ್ ಎಂದು ಪರಿಗಣಿಸಲ್ಪಟ್ಟಿದೆ. ಉದ್ಯಮ ತಜ್ಞರ ಪ್ರಕಾರ, ಇದು ಈಗ ಲಭ್ಯವಿರುವ ಅತ್ಯಂತ ಸಮರ್ಥವಾದ ನೌಕಾ ಹೆಲಿಕಾಪ್ಟರ್ ಆಗಿದ್ದು ಯುದ್ಧ ನಾವೆಗಳು (ಫ್ರಿಗೇಟ್ಗಳು), ವಿಧ್ವಂಸಕಗಳು (ಡಿಸ್ಟ್ರಾಯರ್ಗಳು), ಯುದ್ಧದ ಹಡಗುಗಳು (ಕ್ರೂಸರ್ಗಳು) ಮತ್ತು ವಿಮಾನ ವಾಹಕಗಳಿಂದ ಕಾರ್ಯಾಚರಣೆ ಮಾಡುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆಎಂಎಚ್-೬೦ ರೋಮಿಯೋ ಸೀಹಾಕ್ಗಳು ಭಾರತೀಯ ನೌಕಾಪಡೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಚೀನಾವು ಹಿಂದೂ ಮಹಾಸಾಗರದಲ್ಲಿ ತೋರುತ್ತಿರುವ ಆಕ್ರಮಣಕಾರಿ ಪ್ರವೃತ್ತಿಯ ಹಿನ್ನೆಲೆಯಲ್ಲಿ ಇವು ಸಮಯದ ಆವಶ್ಯಕತೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೀಹಾಕ್ ವಹಿವಾಟಿನೊಂದಿಗೆ ಅಮೆರಿಕ-ಭಾರತ ನಡುವಣ ಒಟ್ಟಾರೆ ರಕ್ಷಣಾ ವ್ಯಾಪಾರವು ೨೦ ಬಿಲಿಯನ್ (೨೦೦೦ ಕೋಟಿ) ಅಮೆರಿಕನ್ ಡಾಲರ್ ಮೀರುವ ಸಾಧ್ಯತೆ ಇದೆ ಎಂದು ಉದ್ಯಮ ಮೂಲಗಳು ಹೇಳಿದವು. ಅಮೆರಿಕದ ನೌಕಾ ವಾಯು ವ್ಯವಸ್ಥೆ ಕಮಾಂಡ್ ಪ್ರಕಾರ ಎಂಎಚ್-೬೦ ಆರ್ ಸೀಹಾಕ್ ಯೋಜನೆಗಳು ಜಲಾಂತರ್ಗಾಮಿ ನಿರೋಧಿ ಯುದ್ಧ, ಭೂಮೇಲ್ಮೈ ನಿರೋಧಿ ಸಮರ, ಕಣ್ಗಾವಲು, ಸಂಪರ್ಕ, ದಾಳಿ ಶೋಧ ಮತ್ತು ರಕ್ಷಣೆ, ನೌಕಾ ಗುಂಡಿನ ದಾಳಿಗೆ ಬೆಂಬಲ ಮತ್ತು ಸಾಗಣೆ ಬೆಂಬಲ ಉದ್ದೇಶಗಳಿಗೂ ಬಳಕೆಯಾಗುತ್ತವೆ.  ಮುಂದಿನ ತಲೆಮಾರಿನ ಜಲಾಂತರ್ಗಾಮಿ ಬೇಟೆ ಮತ್ತು ಭೂಮೇಲ್ಮೈ ನಿರೋಧಿ ಸಮರ ಹೆಲಿಕಾಪ್ಟರ್ ಆಗಿ ಎಂಎಚ್ ೬೦ ಆರ್ ಸೀಹಾಕ್ ನೌಕಾಪಡೆಯ ಹೆಲಿಕಾಪ್ಟರ್ ಕಾರ್ಯಾಚರಣೆ ಕಲ್ಪನೆಯಲ್ಲಿ ಮೂಲೆಗಲ್ಲು ಎಂದು ಪರಿಗಣಿಸಲಾಗಿದೆ. ಅಮೆರಿಕದ ನೌಕಾಪಡೆಯಲ್ಲಿ ಎಸ್ಎಚ್-೬೦ ಬಿ ಮತ್ತು ಎಸ್ಎಚ್- ೬೦ ಎಫ್ ವಿಮಾನಗಳಿಗೆ ಬದಲಿಯಾಗಿ ಎಂಎಚ್-೬೦ ಆರ್ ಹೆಲಿಕಾಪ್ಟರುಗಳು ಬಂದಿವೆ.
2018: ಶಬರಿಮಲೈ(ಕೇರಳ): ವಿಶ್ವ ಪ್ರಸಿದ್ಧ ಶಬರಿಮಲೈ ನಲ್ಲಿ ೬೨ ದಿನಗಳ ಮಕರ ಪೂಜೆ ಆರಂಭವಾ ಗಿದ್ದು, ಲಕ್ಷಾಂತರ ಭಕ್ತರು ಪ್ರವಾಹೋಪಾದಿ ಯಲ್ಲಿ ಶ್ರೀ ಸ್ವಾಮಿ ಅಯ್ಯಪ್ಪ ಸನ್ನಿಧಾನಕ್ಕೆ ಹರಿದು ಬರುತ್ತಿದ್ದಾರೆ. ಇದೇ ವೇಳೆ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಬಂಧನ ಖಂಡಿಸಿ ಹಿಂದೂಐಕ್ಯವೇದಿ ಮತ್ತು ಶಬರಿಮಲೆಕ್ರಿಯಾ ಸಮಿತಿಕರೆ ನೀಡಿದ್ದ ಕೇರಳ ಬಂದ್ ಸಂಪೂರ್ಣ ವಾಗಿ ಯಶಸ್ವಿಯಾಯಿತು.  ಬೆಳಗ್ಗೆ ೬ರಿಂದ ಸಂಜೆ ತನಕ ಕೇರಳ ಬಂದ್ಗೆಕರೆ ನೀಡಲಾಗಿತ್ತು. ಪೊಲೀಸ್ ಆದೇಶವನ್ನು ಉಲ್ಲಂಘಿಸಿ ಶಬರಿಮಲೆಗೆ ತೆರಳು ತ್ತಿದ್ದ ಹಿಂದೂಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಅವರನ್ನು  ಪೊಲೀಸರು ಬಂಧಿಸಿದ್ದರು.  ಬಂದ್ನಿಂದಾಗಿ ಬಸ್ಸುಗಳು ಮತ್ತುಇತರ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ ದ್ದವು. ರಾಜ್ಯ ಸರ್ಕಾರಿ ಬಸ್ಗಳೂ ಸೇರಿದಂತೆ ಯಾವುದೇ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಶಬರಿ ಮಲೆಕರ್ಮ ಸಮಿತಿ ಕೇರಳ ಬಂದ್ಗೆ ಕರೆ ನೀಡಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಇದು ಭಕ್ತರ ಮೇಲೆಯೂ ಪರಿಣಾಮ ಬೀರಿದೆ. ಸುಪ್ರೀಂಕೋರ್ಟ್ ಆದೇಶವಿದ್ದರೂ ಸಹ ಮಹಿಳಾ ಭಕ್ತರಿಗೆ ದರ್ಶನ ಅವಕಾಶ ಲಭಿಸದೆ ಇರುವು ದರಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಾಮ ರ್ಶಿಸಿ ಸಮಸ್ಯೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಮಹತ್ವದ ಸಭೆ ನಡೆಸಿದರು. ಮಕರ ಪೂಜೆ ಪ್ರಯುಕ್ತ ನಿನ್ನೆ ಸಂಜೆ ಶಬರಿಮಲೆಅಯ್ಯಪ್ಪ ಸ್ವಾಮಿದೇಗುಲದ ಬಾಗಿಲು ತೆರೆದಿದ್ದು ೬೨ ದಿನಗಳ ಕಾಲ ಅಯ್ಯಪ್ಪ ಭಕ್ತರಿಗೆ ದರ್ಶನ ಲಭಿಸಲಿದೆ. ಮಲೆಯಾಳಂ ಪಂ ಚಾಂಗದಲ್ಲಿ ವೃಶ್ಚಿಕಂ ದಿನ ಸಹ ಸ್ರಾರು ಭಕ್ತರು ಪಂಪಾ ನದಿಯಲ್ಲಿ ಮಿಂದು ಶಬರಿಮಲೆಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.

2018: ಮುಂಬೈ: ಆಡ್ ಗುರು ಎಂದೇ ಖ್ಯಾತರಾ ಗಿದ್ದ, ನಟ ಆಲಿಕ್ ಪದಾಮ್ಸೀ ವಿಧಿವಶರಾದರು.  ಪ್ರಸಿದ್ಧ ರಂಗಭೂಮಿ ಕಲಾವಿದರಾಗಿದ್ದ ೯೦ ವರ್ಷದ ಆಲಿಕ್, ೧೯೮೨ರ ಜನಪ್ರಿಯಗಾಂಧಿ ಸಿನಿಮಾದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಪಾತ್ರಕ್ಕಾಗಿ ಆಲಿಕ್ ಪದಾಮ್ಸೀ ಪ್ರಸಿದ್ಧಿ ಪಡೆದಿದ್ದರು. ಅಲ್ಲದೇ ಭಾರತದ ಆಧು ನಿಕ ಜಾಹೀರಾತಿನ ಪಿತಾಮಹ ಎಂದೇ ಖ್ಯಾತರಾಗಿದ್ದರು.  ೧೯೨೮ರಲ್ಲಿ ಧಾರ್ಮಿಕ ಖೋಜಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಆಲಿಕ್ ಪದಾಮ್ಸೀ, ಮೂಲತಃ ಗುಜರಾತ್ ಕಚ್ ಪ್ರದೇಶದವರು. ಅವರ ತಾತ ಅಂದಿನ ಸಮಯದಲ್ಲಿಯೇ ಗ್ರಾಮದ ಮುಖ್ಯಸ್ಥರಾಗಿದ್ದು, ಗ್ರಾಮಕ್ಕೆ ಬರ ಅಪ್ಪಳಿಸಿದಾಗ ತಮ್ಮ ಬಹುತೇಕ ಆಸ್ತಿಯನ್ನು ದಾನ ನೀಡಿದ್ದರಂತೆ. ಹೀಗಾಗಿಯೇ ಅವರನ್ನು ಪದ್ಮಶ್ರೀ ಎಂದೂ ಕರೆಯಲಾಗುತ್ತಿತ್ತು. ಕೊನೆಗೆ ಪದ್ಮಶ್ರೀ ಇದ್ದಿದ್ದು ಆಡು ಮಾತಿನಲ್ಲಿ ಪದಾಮ್ಸೀ ಅಂತಾಗಿ ಅದೇ ಅಡ್ಡ ಹೆಸರು ಅವರ ಕುಟುಂಬಕ್ಕೆ ಬಂದಿತು. ಇವರ ಪಾಲಕರ ಜನ ಮಕ್ಕಳಲ್ಲಿ ಒಬ್ಬರಾಗಿದ್ದ ಆಲಿಕ್ ಅವರ ಕುಟುಂಬದಲ್ಲಿಯೇ ಮೊದಲ ಇಂಗ್ಲಿಷ್ ಶಿಕ್ಷಣ ಪಡೆದ ವರು. ಇನ್ನು ಮೂಲತಃ ಶ್ರೀಮಂತ ಕುಟುಂಬದಿಂದ ಬಂದ ಆಲಿಕ್ ನಂತರದಲ್ಲಿ ತಮ್ಮನ್ನು ರಂಗಭೂಮಿ, ಸಿನಿಮಾ ಹಾಗೂ ಜಾಹೀರಾತಿನಲ್ಲಿ ತೊಡಗಿಸಿಕೊಂಡಿದ್ದರು. ನಂತರ ಗಾಂಧೀ ಚಿತ್ರ ದಲ್ಲಿ ಇವರು ನಿರ್ವಹಿಸಿದ್ದ ಜಿನ್ನಾ ಪಾತ್ರ ಪದಾಮ್ಸೀಗೆ ವಿಶ್ವ ಖ್ಯಾತಿಯನ್ನು ತಂದುಕೊಟ್ಟಿತ್ತು.  ಪದಾಮ್ಸೀ ಸ್ಥಾಪಿಸಿದ ಲಿಂಟಾಸ್ ಜಾಹಿರಾತು ಏಜೆನ್ಸಿ ದೇಶದ ಟಾಪ್ ಅಡ್ವರ್ಟೈಸಿಂಗ್ ಏಜೆನ್ಸಿಗಳಲ್ಲಿ ಒಂದಾಗಿದೆ. ಲಿರಿಲ್ ಸೋಪ್, ಹಮಾರಾ ಬಜಾಜ್, ಚೆರಿ ಬ್ಲಾಸಮ್ ಶೂ ಪಾಲಿಶ್ ನಲ್ಲಿ ಚಾರ್ಲಿ ವಾಪ್ಲಿನ್ ಜಾಹೀರಾತು, ಸರ್ಫ್ ಲಲಿತಾಜೀ ಯಂತಹ ಹಲವಾರು ಮರೆಯಲಾಗದ ಜಾಹೀರಾತುಗಳನ್ನ ಪದಾಮ್ಸೀ ನೀಡಿದ್ದರುಪದಾಮ್ಸೀ ಅವರಿಗೆ ೨೦೦೦ ಇಸವಿಯಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ೨೦೧೨ರಲ್ಲಿ ಸಂಗೀತ ನಾಟಕ ಅಕಾ ಡಮಿ ಹಾಗೂ ಠ್ಯಾಗೋರ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಪದ್ಮಾಮ್ಸಿ ಅವರ ನಿಧನಕ್ಕೆ ರಾ?ಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.
2018: ಚಂಡೀಗಢ : 1971ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದಿದ್ದ ಲೋಂಗೇವಾಲಾ ಸಮರದಲ್ಲಿ ಎಂಟೆದೆಯ ಹೀರೋ ಆಗಿ ಮೂಡಿ ಬಂದಿದ್ದ ಬ್ರಿಗೇಡಿಯರ್‌ (ನಿವೃತ್ತ) ಕುಲದೀಪ್ಸಿ,ಗ್ಚಾಂದ್ಪುರಿ ಅವರು ತಮ್ಮ 78 ಹರೆಯದಲ್ಲಿ ನಿಧನರಾದರುಕ್ಯಾನ್ಸರ್ಪೀಡಿತರಾಗಿದ್ದ ಬ್ರಿಗೇಡಿಯರ್ಚಾಂದ್ಪುರಿ ಅವರು ಈದಿನ  ನಸುಕಿನ ವೇಳೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದರು. ಬ್ರಿಗೇಡಿಯರ್ಚಾಂದ್ಪುರಿ ಅವರು 1962ರಲ್ಲಿ ಭಾರತೀಯ ಸೇನೆಯನ್ನು ಸೇರಿಕೊಂಡಿದ್ದರು. ಅವರನ್ನು ಪಂಜಾಬ್ರೆಜಿಮೆಂಟ್ 23ನೇ ಬೆಟಾಲಿಯನ್ಗೆ ನಿಯೋಜಿಸಲಾಗಿತ್ತು. ವಿಶ್ವಸಂಸ್ಥೆಯ ಹಲವಾರು ಶಾಂತಿ ಪಡೆ ಅಭಿಯಾನದಲ್ಲಿ ದುಡಿದಿದ್ದ ಅವರು 1971ರಲ್ಲಿ ನಡೆದಿದ್ದ ಪಾಕ್ವಿರುದ್ಧದ ಸಮರದಲ್ಲಿ ಲೋಂಗೇವಾಲಾ ಠಾಣೆಯನ್ನು ಎಂಟೆದೆಯ ಸಾಹಸದ ಹೋರಾಟದಲ್ಲಿ ಬೃಹತ್ಸಂಖ್ಯೆಯಲ್ಲಿದ್ದ  ಶತ್ರುಗಳ ವಶವಾಗದಂತೆ ಯಶಸ್ವಿಯಾಗಿ ರಕ್ಷಿಸಿದ್ದರುಇವರ ಅಪ್ರತಿಮ ಹೋರಾಟದ ಕಥೆಯನ್ನು ಆಧರಿಸಿ "ಬಾರ್ಡರ್‌' ಹಿಂದಿ ಸಿನೇಮಾ ಮಾಡಲಾಗಿತ್ತು. ಅದರಲ್ಲಿ ಸನ್ನಿ ದೇವಲ್ಅವರು ಬ್ರಿಗೇಡಿಯರ್ಚಾಂದ್ಪುರಿ ಪಾತ್ರವನ್ನು ನಿರ್ವಹಿಸಿದ್ದರು


2018: ವಾಷಿಂಗ್ಟನ್: ಭಾರತೀಯರೂ ಸೇರಿದಂತೆ ಎಚ್- ಬಿ ವೀಸಾ ಹೊಂದಿರುವ ವಲಸಿಗರ ಸಂಗಾತಿಗಳ ನೌಕರಿ ದೃಢೀಕರಣವನ್ನು ಹಿಂತೆಗೆದುಕೊಳ್ಳುವ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವನ್ನು ನಿಷೇಧಿಸುವಂತೆ ಕೋರುವ ಮಸೂದೆಯೊಂದನ್ನು ಅಮೆರಿಕ ಕಾಂಗ್ರೆಸ್ಸಿನ ಇಬ್ಬರು ಸದಸ್ಯರು (ಶಾಸನಕರ್ತರು) ಸದನದಲ್ಲಿ ಮಂಡಿಸಿದರು. ಎಚ್-೧ಬಿ ವೀಸಾ ಹೊಂದಿರುವ ವಲಸಿಗರಿಗೆ ಇರುವ ಸವಲತ್ತನ್ನು ಕಿತ್ತು ಹಾಕುವುದರಿಂದ ಹಲವು ವಿದೇಶೀ ಕೆಲಸಗಾರರು ತಮ್ಮ ಪ್ರತಿಭೆಗಳನ್ನು ಅಮೆರಿಕದ ವ್ಯವಹಾರಕ್ಕೆ ವಿರುದ್ಧವಾಗಿ ಬಳಸುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಸಿದರು. ಅಮೆರಿಕದಲ್ಲಿ ಎಚ್-೧ಬಿ ವೀಸಾ ಹೊಂದಿರುವ ವಿದೇಶೀ ಕೆಲಸಗಾರರ ಸಂಗಾತಿಗಳಿಗೆ ಎಚ್- ವೀಸಾ ನೀಡಲಾಗುತ್ತದೆ. ಎಚ್-೧ಬಿ ವೀಸಾವು ವಲಸೆಯೇತರ (ನಾನ್ ಇಮ್ಮಿಗ್ರೆಂಟ್) ವೀಸಾವಾಗಿದ್ದು ಇದರ ಮೂಲಕವೇ ಬಹಳಷ್ಟು ಭಾರತೀಯ ಕೆಲಸಗಾರರು ಅಮೆರಿಕದ ಕಂಪನಿಗಳಲ್ಲಿ ನೇಮಕಗೊಂಡಿದ್ದಾರೆ. ಇದು ಅಮೆರಿಕ ಕಂಪೆನಿಗಳಿಗೆ ವಿದೇಶೀ ಕೆಲಸಗಾರರನ್ನು ತಾತ್ವಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯ ಕೆಲಸಗಳಿಗೆ ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಭಾರತೀಯ ಐಟಿ ವೃತ್ತಿನಿರತರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೋರುವ ವೀಸಾ ಇದಾಗಿದೆ. ಎಚ್- ವೀಸಾಗಳನ್ನು ಎಚ್-೧ಬಿ ವೀಸಾ ಹೊಂದಿರುವವರ ಅತ್ಯಂತ ನಿಕಟ ಬಂಧುಗಳಿಗೆ ಅಥವಾ ಕುಟುಂಬ ಸದಸ್ಯರಿಗೆ ಮಾತ್ರವೇ ನೀಡಲಾಗುತ್ತದೆ. ಒಬಾಮಾ ಆಡಳಿತದಲ್ಲಿ ಎಚ್-೧ಬಿ ವೀಸಾ ಹೊಂದಿರುವವರ ಸಂಗಾತಿಗಳ ಕೆಲಸದ ದೃಢೀಕರಣವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಳವಡಿಸಲಾಗಿದ್ದ ರಕ್ಷಣಾತ್ಮಕ ಕ್ರಮವನ್ನು ಹಿಂತೆಗೆದುಕೊಳ್ಳಲು ಟಂಪ್ ಆಡಳಿತ ಹಿಂತೆಗೆದುಕೊಳ್ಳಲು ಹೊರಟಿರುವ ಹೊತ್ತಿನಲ್ಲೇ  ಶಾಸನಕರ್ತರಾದ ಅನ್ನಾ ಜಿ ಎಶೂ ಮತ್ತು ಜೋಯಿ ಲೊಫ್ಗ್ರೆನ್ ಅವರು ಎಚ್- ಉದ್ಯೋಗ ರಕ್ಷಣಾ ಕಾಯ್ದೆಯನ್ನು ಅಳವಡಿಸಲು ಕೋರಿದರು. ಒಬಾಮಾ ಆಡಳಿತಾವಧಿಯಲ್ಲಿ ನಿಯಮ ಅಳವಡಿಸಿದಂದಿನಿಂದ ಲಕ್ಷಕ್ಕೂ ಹೆಚ್ಚು ಕೆಲಸಗಾರರು, ಮುಖ್ಯವಾಗಿ ಮಹಿಳೆಯರು ಅದೂ ಭಾರತೀಯರಿಗೆ ಉದ್ಯೋಗ ದೃಢೀಕರಣ ಲಭಿಸಿದ್ದು, ಪರಿಣಾಮವಾಗಿ ಅಮೆರಿಕದ ಸ್ಪರ್ಧಾತ್ಮಕತೆ ಸುಧಾರಿಸಿದೆ ಮತ್ತು ಸಹಸ್ರಾರು ಎಚ್-೧ಬಿ ಕೆಲಸಗಾರರ ಮತ್ತು ಅವರ ಕುಟುಂಬಗಳ ಆರ್ಥಿಕ ಹೊರೆ ತಗ್ಗಿದೆ ಎಂದು ಶಾಸನಕಕರ್ತರಿಬ್ಬರೂ ತಮ್ಮ ಮಸೂದೆಯನ್ನು ಮಂಡಿಸುತ್ತಾ ಪ್ರತಿಪಾದಿಸಿದರು. ಟ್ರಂಪ್ ಆಡಳಿತವು ವರ್ಷಾಂತದಲ್ಲಿ ಹಿಂತೆಗೆದುಕೊಳ್ಳಲು ಉದ್ದೇಶಿಸಿರುವ ಮಹತ್ವದ ನಿಯಮವನ್ನು ಹಿಂತೆಗೆದುಕೊಳ್ಳದಂತೆ ಎಚ್- ಉದ್ಯೋಗ ರಕ್ಷಣಾ ಕಾಯ್ದೆಯು ಟ್ರಂಪ್ ಆಡಳಿತವನ್ನು ನಿಷೇಧಿಸುತ್ತದೆ ಎಂದು ಶಾಸನಕರ್ತರಿಬ್ಬರೂ ತಿಳಿಸಿದರು.  ಎಚ್- ವೀಸಾದಾರರ ಕೆಲಸದ ದೃಢೀಕರಣವನ್ನು ರಕ್ಷಿಸುವ ವಿಷಯವು ಆರ್ಥಿಕ ಅನುಕೂಲದ ಜೊತೆಗೆ ಕುಟುಂಬದ ಏಕತೆಯನ್ನೂ ರಕ್ಷಿಸುತ್ತದೆ ಎಂದು ಎಶೂ ಹೇಳಿದರು.   ಸವಲತ್ತನ್ನು ಕಿತ್ತು ಹಾಕುವುದರಿಂದ ಹಲವಾರು ವಲಸೆಗಾರರು ತಮ್ಮ ಕುಟುಂಬವನ್ನು ಒಡೆಯುವ ನೋವಿನ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಅಥವಾ ತಮ್ಮ ಸ್ವದೇಶಕ್ಕೆ ವಾಪಸಾಗಿ ತಮ್ಮ ಪ್ರತಿಭೆಗಳನ್ನು ಅಮೆರಿಕದ ವ್ಯವಹಾರದ ವಿರುದ್ಧ ಸ್ಪರ್ಧಿಸಲು ಬಳಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ನುಡಿದರುಇವರು ತಮ್ಮ ನಂಬರ್ ಬರುವುದು ಎಂದು ಸರತಿಯ ಸಾಲಿನಲ್ಲಿ ಕಾಯುತ್ತಿರುವ ಅಮೆರಿಕದ ನಾಗರಿಕರಾಗಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್ಸಿಗೆ ಲೊಫ್ಗ್ರೆನ್ ಅವರುಎಚ್-೧ಬಿ ವೀಸಾದಾರರನ್ನು ಅವಲಂಬಿಸಿರುವ ಸಂಗಾತಿಗಳು ಕೆಲಸ ಮಾಡದಂತೆ ನಿಷೇಧಿಸುವುದು ನಮ್ಮ ರಾಷ್ಟ್ರಕ್ಕೆ ಅನುಕೂಲಕರವಲ್ಲ, ಆಡಳಿತಕ್ಕೆ ಮುಂದುವರೆಯಲು ಬಿಟ್ಟರೆ ನಮ್ಮ ಕೆಲಸಗಾರರ ಪಡೆಗೆ ತಮ್ಮ ಕಾಣಿಕೆ ಕೊಡಬಹುದಾದ ಕುಟುಂಬಗಳ ಹಲವರು ವಲಸೆಗಾರರ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರುವ ರಾಷ್ಟ್ರಗಳಿಗೆ ತೆರಳಬಹುದು. ಆದ್ದರಿಂದ ಟ್ರಂಪ್ ಆಡಳಿತವು ನಮ್ಮ ಆರ್ಥಿಕತೆಗೆ ಮತ್ತು ಕುಶಲ ವಲಸೆ ಕುಟುಂಬಗಳ ಬದುಕಿಗೆ ಅನಗತ್ಯವಾಗಿ ಹಾನಿ ಉಂಟು ಮಾಡದಂತೆ ಮಸೂದೆಯು ತಡೆಯುತ್ತದೆ ಎಂದು ಹೇಳಿದರು.

2018: ಮಾಲೆ: ಚೀನಾದ ನೆರಳಿನಿಂದ ಹೊರಬಂದಿರುವ ಮಾಲ್ದೀವ್ಸ್ಗೆ ತಮ್ಮ ಚೊಚ್ಚಲ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡರು.  ಸೊಲಿಹ್ ಅವರು ಸೆಪ್ಟೆಂಬರಿನಲ್ಲಿ ನಡೆದ ಚುನಾವಣೆಯಲ್ಲಿ ಮಾಲ್ದೀವ್ಸ್ ಚೀನೀ ಪರ ಪ್ರಬಲ ನಾಯಕ ಅಬ್ದುಲ್ಲ ಯಾಮೀನ್ ಅವರನ್ನು ಅಚ್ಚರಿದಾಯಕವಾಗಿ ಪರಾಭವಗೊಳಿಸಿದ್ದರು. ಸೊಲಿಹ್ ಪ್ರಮಾಣವಚನ ಸಮಾರಂಭದಲ್ಲಿ ಮೋದಿಯವರು ಮಾಲ್ದೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನೌಶೀದ್ ಮತ್ತು ಮೌಮೂನ್ ಅಬ್ದುಲ್ ಗಯೂಮ್ ಅವರ ಪಕ್ಕದಲ್ಲೇ ಕುಳಿತಿದ್ದರು. ಶ್ರೀಲಂಕೆಯ ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೋದಿ ಅವರಿಗೆ ಮಾಲ್ದೀವ್ಸ್ ಸ್ಪೀಕರ್ ಅಬ್ದುಲ್ಲ ಮಸೀಹ್ ಮೊಹಮ್ಮದ್ ಅವರು ಕೆಂಪುಹಾಸಿನ ಸ್ವಾಗತ ನೀಡಿದರು. ಪ್ರಮಾಣವಚನ ಸಮಾರಂಭದ ವೇಳೆಯಲ್ಲಿ ಮೋದಿಯವರು ದ್ವೀಪರಾಷ್ಟ್ರದ ನಾಯಕರು ಮತ್ತು ವಿಶ್ವದ ಇತರ ಭಾಗಗಳಿಂದ ಸಮಾರಂಭಕ್ಕೆ ಆಗಮಿಸಿದ ನಾಯಕರ ಜೊತೆ ಮಾತುಕತೆ ನಡೆಸಿದರು. ಪ್ರಧಾನಿಯಾಗಿ ಮೋದಿ ಅವರು ಮಾಲ್ದೀವ್ಸ್ ಗೆ ನೀಡಿದ ಪ್ರಥಮ ಭೇಟಿ ಇದು. ಹಿಂದೆ ೨೦೧೧ರಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿಂದೂ ಮಹಾಸಾಗರದಲ್ಲಿನ ದ್ವೀಪರಾಷ್ಟ್ರಕ್ಕೆ ಭೇಟಿ ಕೊಟ್ಟಿದ್ದರುಭೇಟಿಗೆ ಮುನ್ನ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಮೋದಿಮಾಲ್ದೀವ್ಸ್ ಅಭಿವೃದ್ಧಿ ಆದ್ಯತೆಯ ಕೆಲಸಗಳಲ್ಲಿ ನಿಕಟವಾಗಿ ಸಹಕಾರ ನೀಡುವ ಭಾರತ ಸರ್ಕಾರದ ಇಚ್ಛೆಯನ್ನು ಮಾಲ್ದೀವ್ಸ್ ಹೊಸ ಸರ್ಕಾರಕ್ಕೆ ತಿಳಿಸುವೆ. ಮುಖ್ಯವಾಗಿ ಮೂಲಸವಲತ್ತು, ಆರೋಗ್ಯ ಕಾಳಜಿ, ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತ ನೆರವಾಗಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದರು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಸದಸ್ಯ ರಾಷ್ಟ್ರಗಳ ಪೈಕಿ ಮಾಲ್ದೀವ್ಸ್ ಗೆ ಮಾತ್ರ ಮೋದಿ ಅವರು ಈವರೆಗೂ ಭೇಟಿ ನೀಡಿರಲಿಲ್ಲ. ವ್ಯೂಹಾತ್ಮಕವಾಗಿ ಮಹತ್ವ ಪಡೆದಿರುವ, ಜನಪ್ರಿಯ ಪ್ರವಾಸೀ ತಾಣವಾಗಿರುವ ಮಾಲ್ದೀವ್ಸ್ ಗೆ ೨೦೧೫ರ ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ ಭೇಟಿ ಅಲ್ಲಿನ ರಾಜಕೀಯ ಅತಂತ್ರ ಸ್ಥಿತಿಯ ಪರಿಣಾಮವಾಗಿ ರದ್ದಾಗಿತ್ತು.   ವರ್ಷ ಫೆಬ್ರವರಿ ೫ರಂದು ಯಾಮೀನ್ ಅವರು ತುರ್ತುಸ್ಥಿತಿ ಘೋಷಿಸಿದ ಬಳಿಕ ಭಾರತ ಮತ್ತು ಮಾಲ್ದೀವ್ಸ್ ಬಾಂಧವ್ಯ ಇನ್ನಷ್ಟು ನಶಿಸಿತ್ತು. ಚುನಾವಣಾ ವಿಶ್ವಾಸಾರ್ಹತೆಯನ್ನು ಮರುಸ್ಥಾಪನೆ ಮಾಡುವಂತೆ ಮತ್ತು ರಾಜಕೀಯ ಸೆರೆಯಾಳುಗಳ ಬಿಡುಗಡೆ ಮಾಡುವಂತೆ ಆಗ್ರಹಿಸಿದ ಭಾರತ, ಯಾಮೀನ್ ನಿರ್ಧಾರವನ್ನು ಟೀಕಿಸಿತ್ತು. ತುರ್ತು ಪರಿಸ್ಥಿತಿ ೪೫ ದಿನಗಳ ಕಾಲ ಮುಂದುವರೆದಿತ್ತು. ಚೀನೀಪರ ಯಾಮೀನ್ ಪರಾಭವದೊಂದಿಗೆ ಭಾರತ- ಮಾಲ್ದೀವ್ಸ್ ಬಾಂಧವ್ಯಕ್ಕೆ ಹೊಸ ಕಿಟಕಿ ತೆರೆದಂತಾಗಿದೆ ಎಂದು ರಾಜಕೀಯ ಪಂಡಿತರು ಹೇಳಿದ್ದರು.

 2016: ನವದೆಹಲಿನವೆಂಬರ್ 18ರ ಶುಕ್ರವಾರದಿಂದ ನೋಟು ಬದಲಾವಣೆ ಮಿತಿಯನ್ನು 4,500
ರೂಪಾಯಿಗಳಿಂದ  2,000 ರೂಪಾಯಿಗಳಿಗೆ  ಇಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಇದೇ ಸಂದರ್ಭದಲ್ಲಿ  ರೈತರು ಕೃಷಿಸಾಲ ಖಾತೆಯಿಂದ 25 ಸಾವಿರ ರೂಪಾಯಿಗಳಷ್ಟು ಹಣ ಹಿಂಪಡೆಯಬಹುದು. ಕೃಷಿ ಉತ್ಪನ್ನ ವ್ಯಾಪಾರಗಳಿಗೆ ವರ್ತಕರು 50 ಸಾವಿರ ರೂ. ತೆಗೆಯಬಹುದು. ಮದುವೆಗೆ 2.5 ಲಕ್ಷ ರೂಪಾಯಿವರೆಗಿನ ಮೊತ್ತವನ್ನು ಬ್ಯಾಂಕ್ಖಾತೆಗಳಿಂದ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿ ನಿಯಮಗಳಲ್ಲಿ ಮಾರ್ಪಾಡನ್ನೂ ಕೇಂದ್ರ ಸರ್ಕಾರ ಮಾಡಿತು. 1,000, 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದಿರುವುದರಿಂದ ಉಂಟಾಗಿರುವ ಹಣಕಾಸು ವ್ಯವಹಾರಗಳ ತೊಂದರೆ ನಿವಾರಣೆಗೆ ಹಲವು ಬದಲಾವಣೆ ಮಾಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಇಲಾಖೆ ಕಾರ್ಯದರ್ಶಿ ಶಶಿಕಾಂತ್ದಾಸ್ ಪ್ರಕಟಿಸಿದರು. ಹೊಸ ಬದಲಾವಣೆಗಳು; ಖಾತೆಯಿಂದ ಹಣ ತೆಗೆಯುವ ಮಿತಿ ಹೆಚ್ಚಳ: * ಚಲಾವಣೆಯಿಂದ ಹಿಂತೆಗೆದ ನೋಟು ಬದಲಾವಣೆಯ ಮಿತಿಯನ್ನು .18 ಶುಕ್ರವಾರದಿಂದ  ರೂ.4,500ರಿಂದ 2,000ಕ್ಕೆ ಇಳಿಕೆ ಮಾಡಲಾಗಿದೆ. * ರೈತರು ಕೃಷಿ ಸಾಲ ಖಾತೆ ಹಾಗೂ ಕಿಸಾನ್ಕಾರ್ಡ್ಬಳಸಿ ವಾರಕ್ಕೆ ರೂ 25 ಸಾವಿರ ಪಡೆದುಕೊಳ್ಳಬಹುದು. * ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಪ್ರತಿ ವಾರಕ್ಕೆ ರೂ. 50 ಸಾವಿರವನ್ನು ತೆಗೆದುಕೊಳ್ಳಬಹುದು.  * ಕೃಷಿ ಸಾಲ ವಿಮೆ ಮೊತ್ತ ಪಾವತಿಗೆ 15 ದಿನಗಳ ಕಾಲಾವಕಾಶ ವಿಸ್ತರಣೆ. * ಮದುವೆ ಸಮಾರಂಭಕ್ಕೆ  ರೂ.2.5 ಲಕ್ಷವರೆಗೆ ಹಣ ತೆಗೆಯಲು ಅವಕಾಶ.
2016: ನವದೆಹಲಿ: ಹೊಸ ರೂ.500 ಮತ್ತು ರೂ.2,000 ನೋಟುಗಳಿಗೆ ಹೊಂದುವಂತೆ 22,500 ಎಟಿಎಂ ಯಂತ್ರಗಳಲ್ಲಿ ಈದಿನ ತಾಂತ್ರಿಕ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ತಿಳಿಸಿದರು. ದೇಶದಲ್ಲಿ ಸುಮಾರು ಎರಡು ಲಕ್ಷ ಎಟಿಎಂಗಳಿದ್ದು, ಹೊಸ ನೋಟುಗಳಿಗೆ ತಕ್ಕಂತೆ ತಾಂತ್ರಿಕ ಬದಲಾವಣೆ ಮಾಡಲು ಎರಡರಿಂದ ಮೂರು ವಾರ ಬೇಕಾಗುತ್ತದೆ ಎಂದು ಇತ್ತೀಚೆಗೆ ಜೇಟ್ಲಿ ಹೇಳಿದ್ದರು. ರೂ.1,000 ಮುಖಬೆಲೆಯ ನೋಟುಗಳು ಸದ್ಯಕ್ಕಿಲ್ಲ: ಹಳೆಯ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ ಆದಷ್ಟು ಬೇಗ ರೂ.1,000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಬಹುದೆಂಬ ನಿರೀಕ್ಷೆ ಜನ ಸಾಮಾನ್ಯರಲ್ಲಿತ್ತು. ಆದರೆ, ರೂ.1,000 ಮುಖಬೆಲೆಯ ನೋಟುಗಳ ಚಲಾವಣೆ ಸದ್ಯಕ್ಕಿಲ್ಲ ಎಂದು ಜೇಟ್ಲಿ ಹೇಳಿದರು. .
2016: ಅಹಮದಾಬಾದ್‌: ಖಾಸಗಿ ಸಂಸ್ಥೆಯಿಂದ ರೂ.2.9 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಕಾಂಡ್ಲಾ ಪೋರ್ಟ್ಟ್ರಸ್ಟ್ ಸಿಬ್ಬಂದಿ ಹಾಗೂ ಮಧ್ಯವರ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಬಂಧಿಸಿದರು. ಇತ್ತೀಚೆಗೆ ಚಲಾವಣೆಗೆ ಬಂದಿರುವ ರೂ.2000 ನೋಟುಗಳಲ್ಲಿ ಲಂಚ ಪಡೆಯಲಾಗುತ್ತಿತ್ತು. ರೂ.1 ಕೋಟಿಯಷ್ಟು ಪಾವತಿಯಾಗಬೇಕಾದ ಬಿಲ್ ಉಳಿಸಿಕೊಳ್ಳಲಾಗಿತ್ತು. ಇದರೊಂದಿಗೆ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೊಟೀಸ್ಜಾರಿ ಮಾಡಿದ್ದರು. ಹೈ ಟೆನ್ಷನ್ವಿದ್ಯುತ್ಲೈನ್ಗಳ ನಿರ್ವಹಣೆ ಹಾಗೂ ಪೋರ್ಟ್ಟ್ರಸ್ಟ್ಗೆ ಇತರೆ ಅಗತ್ಯ ವಸ್ತುಗಳ ಸರಬರಾಜನ್ನು ಮಾಡುವ ಸಂಸ್ಥೆಯಿಂದ ಅಧಿಕಾರಿಗಳು ಲಂಚ ಕೇಳಿದ್ದರು. ಕುರಿತು ಸಂಸ್ಥೆಯ ಮಾಲೀಕ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಸೂಪರಿಂಟೆಂಡೆಂಟ್ಇಂಜಿನಿಯರ್‌, ಸಬ್ಡಿವಿಷನಲ್ಆಫೀಸರ್ಹಾಗೂ ಒಬ್ಬ ಮಧ್ಯವರ್ತಿಯನ್ನು ಬಂಧಿಸಲಾಯಿತು. ಒಟ್ಟು ರೂ.4.4 ಲಕ್ಷ ವಶಕ್ಕೆ ಪಡೆಯಲಾಗಿದ್ದು, ಎಲ್ಲ ನೋಟಗಳು ರೂ.2000 ಮುಖಬೆಲೆಯದ್ದಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
2016: ಪ್ಯಾರಿಸ್‌ : ಬಾಲಿವುಡ್ನಟಿ ಮಲ್ಲಿಕಾ ಶೆರಾವತ್ಮೇಲೆ ಮೂವರು ಮುಸುಕುಧಾರಿಗಳು ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ಘಟನೆ ಅವರು ನೆಲೆಸಿದ್ದ ಇಲ್ಲಿಯ ಪ್ಯಾರಿಸ್ಅಪಾರ್ಟ್ಮೆಂಟ್ಬ್ಲಾಕ್ಹೊರಗೆ ನಡೆದಿದೆ ಎಂದು ಪೊಲೀಸರು  ತಿಳಿಸಿದರು.  ನಟಿ ಶೆರಾವತ್ಮತ್ತು ಅವರ ಗೆಳೆಯನ ಮೇಲೆ ಮುಸುಕುಧಾರಿಗಳು ಅಶ್ರುವಾಯು ಪ್ರಯೋಗಿಸಿ ನಂತರ ಹಲ್ಲೆ ನಡೆಸಿದರು. ಕಳೆದ ಶುಕ್ರವಾರ  (ನ.11) ರಾತ್ರಿ 9.40 ಸುಮಾರಿಗೆ ತನ್ನ ಸ್ನೇಹಿತರೊಬ್ಬರ ಜತೆ ಅಪಾರ್ಟ್ಮೆಂಟ್ಗೆ ಬಂದಾಗ ಘಟನೆ ಘಟಿಸಿತು. ಘಟನೆಯ ನಂತರ ಆಘಾತಕ್ಕೆ ಒಳಗಾಗಿದ್ದ  ಮಲ್ಲಿಕಾ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ದೂರು ದಾಖಲಿಸಿರುವ ಪೊಲೀಸರು, ಇದೊಂದು ದರೋಡೆ ಯತ್ನ ಎಂದು ಶಂಕಿಸಿ ತನಿಖೆ ಆರಂಭಿಸಿದರು.  ಫ್ರಾನ್ಸ್ ರಾಜಧಾನಿಯಲ್ಲಿ  ಕೆಲವೇ ದಿನಗಳ ಹಿಂದೆ ರಿಯಾಲಿಟಿ ಶೋ ಖ್ಯಾತಿಯ ಕಿಮ್ಕರ್ದಾಸಿಯನ್ಅವರಿಗೆ ಬಂದೂಕು ತೋರಿಸಿ ದರೋಡೆ ನಡೆಸಿದ ಘಟನೆ  ಘಟಿಸಿತ್ತು.

2016: ; ಲಖನೌ:  ಹಳೆಯ ನೋಟು ಬದಲಾಯಿಸಿಕೊಳ್ಳಲು ಬ್ಯಾಂಕಿಗೆ ತೆರಳಿದ್ದ ವೃದ್ಧೆಯೊಬ್ಬರಿಗೆ ಸಿಬ್ಬಂದಿ 17 ಕೆ.ಜಿ. ತೂಗುವಷ್ಟು 1 ರೂ. ನಾಣ್ಯಗಳನ್ನು ನೀಡಿರುವ ಪ್ರಹಸನ ಲಖನೌನಲ್ಲಿ ನಡೆಯಿತು. ಇಲ್ಲಿಗೆ ಸಮೀಪದ ಮೋಹನ್ಲಾಲ್ಗಂಜ್ ಎಂಬ ಪ್ರದೇಶದಲ್ಲಿ ವೃದ್ಧ ಮಹಿಳೆಯೊಬ್ಬರು ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕಿಗೆ ತೆರಳಿದರು.. ಆದರೆ ಮಹಾನುಭಾವ ಕ್ಯಾಷಿಯರ್ ವೃದ್ಧ ಮಹಿಳೆಗೆ 17 ಕೆ.ಜಿ. ತೂಕದ ನಾಣ್ಯ ನೀಡಿ ಕಳುಹಿಸಿದರು.. ನಾಣ್ಯಗಳೇ ತುಂಬಿದ ದೊಡ್ಡ ಚೀಲವನ್ನು ಹೇಗೆ ಕೊಂಡೊಯ್ಯುವುದೆಂದು ಕಂಗಾಲಾದ ವೃದ್ಧೆ ನಾಣ್ಯ ವಾಪಸ್ಸು ತೆಗೆದುಕೊಂಡು ನೂರು ರೂ. ನೋಟು ನೀಡುವಂತೆ ಕೇಳಿದರು.  ಇದಕ್ಕೆ ಸ್ಪಂದಿಸದ ಕ್ಯಾಷಿಯರ್ ನಮ್ಮ ಬಳಿ ಇರುವುದನ್ನು ನೀಡಿದ್ದೇವೆ, ಬೇಕಾದರೆ ತೆಗೆದುಕೊಂಡು ಹೋಗಿ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಉಡಾಫೆ ಉತ್ತರ ನೀಡಿದರು ಎಂದು ಹೇಳಲಾಯಿತು.. ಚೀಲವನ್ನು ಮನೆಗೆ ಹೊತ್ತೊಯ್ಯಲಾಗದೆ, ತನ್ನ ರೋಗ ಪೀಡಿತ ಮಗನನ್ನು ವೃದ್ಧೆ ನೆರವಿಗಾಗಿ ಬ್ಯಾಂಕಿಗೆ ಕರೆಸಿಕೊಂಡರು. ಮಗನಿಗೆ ಉದರ ಕ್ಯಾನ್ಸರ್ ಇದ್ದು, ದಿನವೂ ಚಿಕಿತ್ಸೆ ಕೊಡಿಸಬೇಕು. ನಮ್ಮ ಬಳಿ ಹಣ ಇದೆ ಆದರೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. 1 ರೂ. ನಾಣ್ಯಗಳ ಚೀಲವನ್ನು ತೆಗೆದುಕೊಂಡು ಯಾರೂ 100 ರೂ. ನೋಟು ನೀಡುತ್ತಿಲ್ಲ. ಹಾಗಾಗಿ 3 ದಿನದಿಂದ ಮಗನಿಗೆ ರೇಡಿಯೋ ಥೆರಪಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ ಎಂದು ವೃದ್ಧೆ ತಮ್ಮ ಅಳಲು ತೋಡಿಕೊಂಡರು..

2008: ನಟ ಅಂಬರೀಷ್ ಅವರಿಗೆ ಹೈದರಾಬಾದಿನಲ್ಲಿ 2005ರ ಸಾಲಿನ ಎನ್ಟಿಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡಾ.ರಾಜಕುಮಾರ್ ಅವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ . ಪ್ರಶಸ್ತಿಯು ಐದು ಲಕ್ಷ ರೂಪಾಯಿಗಳ ನಗದು ಮತ್ತು ಫಲಕ ಒಳಗೊಂಡಿದೆ.

2008:  ಸೆಪ್ಟೆಂಬರ್ 2000ದಲ್ಲಿ ಸಂಭವಿಸಿದ ಚೆರುವನ್ಚೆರಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಣ್ಣೂರು ಸ್ಥಳೀಯ ನ್ಯಾಯಾಲಯವು 13 ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ  ಐದುವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಸೆಪ್ಟೆಂಬರ್ 27, 2000ರಲ್ಲಿ ನಡೆದ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಆರೋಪಿಗಳು ನಡೆಸಿದ್ದ ಬಾಂಬ್ ದಾಳಿಯಿಂದ ಆರುವರ್ಷದ ಬಾಲಕಿ ಸಹಿತ ಇತರೆ ಮೂವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಆರೋಪವನ್ನು ಹೊರಿಸಿ, ಜೈಲಿಗೆ ಕಳುಹಿಸಲಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡ ಥಾಲ್ಸೆರಿ ನ್ಯಾಯಾಲಯ ತೀರ್ಪು ನೀಡಿತು. ಹದಿಮೂರು ಮಂದಿಗೆ ಐಪಿಸಿ ಸೆಕ್ಷನ್ 307 ಪ್ರಕಾರ ಐದು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆಯನ್ನು ತೀರ್ಪಿನಲ್ಲಿ ವಿಧಿಸಲಾಗಿದೆ.

2008: ಅರಸೊತ್ತಿಗೆಯಿಂದ ಗಣರಾಜ್ಯವಾಗಿ ಪರಿವರ್ತನೆ ಹೊಂದಿದ ನೇಪಾಳದಲ್ಲಿ 2010ರ ಮೇ ತಿಂಗಳೊಳಗೆ ಹೊಸ ಸಂವಿಧಾನ ಅಸ್ತಿತ್ವಕ್ಕೆ ತರಲು ಅಲ್ಲಿನ ರಾಜಕೀಯ ಪಕ್ಷಗಳು ಒಪ್ಪಿಕೊಂಡವು. ಈ ನಿಟ್ಟಿನಲ್ಲಿ ಶಾಸನ ಸಭೆ ಅಧಿಕೃತವಾಗಿ ನಿರ್ಣಯ ತೆಗೆದುಕೊಂಡಿದೆ ಎಂದು ಸಂಸತ್ ಮೂಲಗಳು ಹೇಳಿದವು.

2007: ಶತಮಾನದಲ್ಲೇ ಅತ್ಯಂತ ಭೀಕರವೆನ್ನಲಾದ 'ಸಿದ್ರ್' ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದಲ್ಲಿ ಮೃತರಾದವರ ಸಂಖ್ಯೆ 2,000 ತಲುಪಿತು. ನಾಪತ್ತೆಯಾದವರ ಸಂಖ್ಯೆ ಹಲವು ಸಾವಿರಕ್ಕೆ ಏರಿತು. ಗಂಟೆಗೆ ಸುಮಾರು 223 ಕಿ.ಮೀ. ವೇಗದಲ್ಲಿ ಸತತ ಐದು ಗಂಟೆಗಳ ಕಾಲ ಬೀಸಿದ ಬಿರುಗಾಳಿ 1876ರಿಂದ ಈಚೆಗೆ ಅತ್ಯಂತ ಭೀಕರವಾದದ್ದು. ಇದರಿಂದಾಗಿ ಸುಮಾರು 15 ಅಡಿ ಎತ್ತರದ ಸಮುದ್ರದಲೆಗಳು ಕಾಣಿಸಿಕೊಂಡಿದ್ದವು.

2007: `ತಿರಂಗಾ ಕೇಕ್' ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ನ್ಯಾಯಾಲಯವು ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರಿಗೆ ನೋಟಿಸ್ ಜಾರಿಮಾಡಿತು. ತ್ರಿವರ್ಣ ಧ್ವಜವನ್ನು ಹೋಲುವ ಕೇಕನ್ನು ಸಚಿನ್ ಅವರು ವೆಸ್ಟ್ ಇಂಡೀಸಿನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆದ ಸಂದರ್ಭದಲ್ಲಿ ಕತ್ತರಿಸಿದ್ದರು. ಜಮೈಕಾದಲ್ಲಿ ಇದೇ ವರ್ಷದ ಆದಿಯಲ್ಲಿ ಈ ಘಟನೆ ನಡೆದಿತ್ತು. ಸಚಿನ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಇಂದೋರಿನ ನಾಗರಿಕ ರಾಜೇಶ್ ಬಿಡ್ಕರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದನ್ನು ವಿಚಾರಣೆಗೆ ಎತ್ತಿಕೊಂಡ ವಿಶೇಷ ನ್ಯಾಯಾಧೀಶ ಮೊಹಮ್ಮದ್ ಶಮೀಮ್ ಅವರು `ಮಾಸ್ಟರ್ ಬ್ಲಾಸ್ಟರ್' ಗೆ ನೋಟಿಸ್ ನೀಡಿದರು.

2007: ತುರ್ತುಸ್ಥಿತಿಯನ್ನು ಕೊನೆಗೊಳಿಸಿ ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಸ್ಪಷ್ಟ ಸಂದೇಶವನ್ನು ಬುಷ್ ಆಡಳಿತ ಮುಷರಫ್ ಅವರಿಗೆ ನೀಡಿತು.ಪಾಕಿಸ್ಥಾನಕ್ಕೆ ಭೇಟಿ ನೀಡಿದ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನೆಗ್ರೊಪೊಂಟೆ ಅವರು ಇಸ್ಲಾಮಾಬಾದಿನಲ್ಲಿ ಮುಷರಫ್ ಮತ್ತು ಜನರಲ್ ಅಷ್ಫಕ್ ಪರ್ವೇಜ್ ಕಿಯಾನಿ ಅವರನ್ನು ಭೇಟಿ ಮಾಡಿ ತುರ್ತುಸ್ಥಿತಿಯನ್ನು ವಾಪಸ್ ಪಡೆಯಬೇಕು ಮತ್ತು ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಅಮೆರಿಕದ ಅಧ್ಯಕ್ಷ ಬುಷ್ ಅವರ ಸಂದೇಶವನ್ನು ತಿಳಿಸಿದರು.

2006: ಭಾರತ ಜೊತೆಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಸಂಸತ್ತಿನ ಮೇಲ್ಮನೆ ಸೆನೆಟಿನಲ್ಲಿ ಅಪೂರ್ವ ಬೆಂಬಲ ವ್ಯಕ್ತಗೊಂಡಿತು. ಒಪ್ಪಂದ ಅನುಷ್ಠಾನಕ್ಕೆ ಮಂಡಿಸಲಾಗಿದ್ದ ಮಸೂದೆಯನ್ನು ಭಾರಿ ಬಹುಮತದೊಂದಿಗೆ ಸದನ ಅಂಗೀಕರಿಸಿತು. ಇಡೀ ದಿನ ನಡೆದ ಸುದೀರ್ಘ ಕಾವೇರಿದ ಚರ್ಚೆಯ ಬಳಿಕ 18 ತಿದ್ದುಪಡಿಗಳ ಪೈಕಿ ಐದು ತಿದ್ದುಪಡಿಗಳನ್ನು ತಿರಸ್ಕರಿಸಿದ ಸೆನೆಟ್, 85-12 ಮತಗಳ ಅಂತರದಿಂದ ಮಸೂದೆಯನ್ನು ಅನುಮೋದಿಸಿತು.

2006: ಹೌರಾ ಜಿಲ್ಲೆಯ ಕೆ.ಕೆ. ಸಿಂಹಾನಿಯಾ ಅವರು ಪರಿಸರದ ಮಾಲಿನ್ಯ ನಿವಾರಣೆಗಾಗಿ 1008 ಹೋಮಕುಂಡಗಳೊಂದಿಗೆ ಮೂರು ದಿನಗಳ `ಆಶ್ವಮೇಧ ಯಜ್ಞ'ವನ್ನು ಕೋಲ್ಕತಾದಲ್ಲಿ (ಹಿಂದಿನ ಕಲ್ಕತ್ತ) ಆರಂಭಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ಮಧ್ಯೆ ನಗರದ ಗುಲ್ ಮೊಹರ್ ರೈಲ್ವೇ ಮೈದಾನದಲ್ಲಿ ಈ ಮಹಾ ಯಜ್ಞ ಆರಂಭಗೊಂಡಿತು. ವೇದ ಮಂತ್ರಗಳೊಂದಿಗೆ ಆರಂಭವಾದ ಯಜ್ಞವನ್ನು ವೀಕ್ಷಿಸಲು ಸಹಸ್ರಾರು ಮಂದಿ ಸೇರಿದ್ದರು.  ಯಜ್ಞಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಹೈಕೋರ್ಟ್ ನಿರಾಕರಿಸಿತ್ತು.

2006: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿದ ನಾಲ್ಕು ದಿನಗಳ ಕೃಷಿ ಮೇಳ ಹಾಗೂ ರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಚಾಲನೆ ನೀಡಿದರು. ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲವಾದ ಶಾಶ್ವತ ಮೇಳ ಪ್ರಾಂಗಣದಲ್ಲಿ ಆರಂಭಗೊಂಡ `ಬೇಸಾಯದ ಹಬ್ಬ'ಕ್ಕೆ ನೆರೆದಿದ್ದ ರಾಜ್ಯದ 15 ಜಿಲ್ಲೆಗಳ ಸಹಸ್ರಾರು ರೈತರು ಸಾಕ್ಷಿಯಾದರು.

2006: ದುಬೈಯ ಹೈಪರ್ ಮಾರ್ಕೆಟ್ಟಿಗೆ ಭೇಟಿ ನೀಡುತ್ತಿದ್ದ ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ಬ್ರಿಟಿಷ್ ಕಂಪೆನಿಯೊಂದರ ಜನರಲ್ ಮ್ಯಾನೇಜರನಿಗೆ ಆರು ತಿಂಗಳುಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 34 ವರ್ಷ ವಯಸ್ಸಿನ ಈ ಬ್ರಿಟಿಷ್ ಪ್ರಜೆಯನ್ನು ಕೇವಲ `ಪಿಎಸ್' ಎಂಬುದಾಗಿ ಗುರುತಿಸಲಾಗಿದ್ದು, ಮಿನಿಸ್ಕರ್ಟ್ ಧರಿಸುತ್ತಿದ್ದ ಮಹಿಳೆಯರ ಗುಪ್ತಭಾಗಗಳ ಚಿತ್ರೀಕರಣ ನಡೆಸುವ ಮೂಲಕ ಅವರ ಖಾಸಗಿ ಬದುಕಿಗೆ ಕನ್ನ ಹಾಕಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ಈ ಆರೋಪಿಯು ಡಿಜಿಟಲ್ ವಿಡಿಯೋ ಕ್ಯಾಮ್ ಕಾರ್ಡರ್ ಬಳಸಿ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ ಮಾಡುತ್ತಿದ್ದ.

2006: ಭಾರತದ ಅತ್ಯಂತ ಶ್ರೀಮಂತ ನಿವಾಸಿ ಎನಿಸಿದ್ದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರನ್ನು, ಕಳೆದ ವರ್ಷ ಪ್ರತ್ಯೇಕ ಮಾರ್ಗಗಳಲ್ಲಿ ಕ್ರಮಿಸಲು ನಿರ್ಧರಿಸಿದ ಅಂಬಾನಿ ಸಹೋದರರಾದ ಮುಖೇಶ್ ಮತ್ತು ಅನಿಲ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದು, ದೇಶದ ಅತ್ಯಂತ ಶ್ರೀಮಂತರ ಸ್ಥಾನಕ್ಕೆ ಏರಿದ್ದಾರೆ. ಆದರೆ ಜಗತ್ತಿನಲ್ಲಿ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿರುವ ಉಕ್ಕು ಉದ್ಯಮಿ ಅನಿವಾಸಿ ಭಾರತೀಯ ಲಕ್ಷ್ಮಿ ನಿವಾಸ್ ಮಿತ್ತಲ್ `ಭಾರತದ 40 ಶ್ರೀಮಂತರ ಪಟ್ಟಿ'ಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ ಎಂದು `ಫೋಬ್ಸ್ ಏಷ್ಯಾ' ನಿಯತಕಾಲಿಕವು `ಭಾರತದ 40 ಶ್ರೀಮಂತರ' ಪಟಿಯಲ್ಲಿ ಪ್ರಕಟಿಸಿತು.

2006: ಅನಾರೋಗ್ಯದಿಂದ ಬಳಲುತ್ತಿದ್ದ ಹಂಗೇರಿಯ ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಫರೆನ್ಸ್ ಪುಸ್ಕಾಸ್ (79) ಬುಡಾಪೆಸ್ಟಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. 85 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 85 ಗೋಲುಗಳನ್ನು ಪಡೆದಿದ್ದರು. 1952ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫುಟ್ಬಾಲ್ ವಿಭಾಗದಲ್ಲಿ ಚಿನ್ನ ಗೆದ್ದ ಹಂಗೇರಿ ತಂಡದ ನಾಯಕ ಇವರೇ ಆಗಿದ್ದರು.

2005: ಇರಾನಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಖ್ಯಾತ ತನಿಖಾ ವರದಿಗಾರ ಅಕ್ಬರ್ ಗಾಂಜಿ ಅವರಿಗೆ ವಿಶ್ವ ದಿನ ಪತ್ರಿಕೆಗಳ ಸಂಘದ 2006ನೇ ಸಾಲಿನ `ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿ ಘೋಷಿಸಲಾಯಿತು. ರಾಜಕೀಯ ಕಾರಣಕ್ಕಾಗಿ 2000ನೇ ಇಸವಿಯಲ್ಲಿ ಬಂಧಿತರಾದ ಗಾಂಜಿ ಅವರಿಗೆ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಲಾಗಿದೆ.

2005: ಕೆಲವು ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿತು.

2005: ಭಾರತದ ಅಗ್ರಮಾನ್ಯ ಮಹಿಳಾ ಹೆಪಥ್ಲಾನ್ ಪಟು ಜೆ.ಜೆ. ಶೋಭಾ ಅವರು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಾಕಿಪಟು ಅಜಯಕುಮಾರ್ ಅವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಅಡಿ ಇರಿಸಿದರು.

1988: ಬೆನಜೀರ್ ಭುಟ್ಟೋ ಅವರು ಇಸ್ಲಾಮಿಕ್ ರಾಷ್ಟ್ರವೊಂದರ ಮೊತ್ತ ಮೊದಲ ನಾಯಕಿಯಾದರು. ಪಾಕಿಸ್ಥಾನದಲ್ಲಿ 11 ವರ್ಷಗಳ ಬಳಿಕ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಅವರ ಪಕ್ಷ ಜಯಗಳಿಸಿ ಅವರು ನಾಯಕಿಯಾಗಿ ಆಯ್ಕೆಯಾದರು.

1970: ಸಂಶೋಧಕ ಡಗ್ಲಾಸ್ ಎಂಗೆಲ್ಬರ್ಟ್ ಅವರು ಸಂಶೋಧಿಸಿದ `ಕಂಪ್ಯೂಟರ್ ಮೌಸ್' ಗೆ ಅಮೆರಿಕನ್ ಪೇಟೆಂಟ್ ನೀಡಲಾಯಿತು.

1966: ಲಂಡನ್ನಿನ ಲೈಸಿಯಮ್ ಥಿಯೇಟರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ರೀಟಾ ಫರಿಯಾ `ವಿಶ್ವ ಸುಂದರಿ' ಕಿರೀಟ ಧರಿಸಿ, ವಿಶ್ವ ಸುಂದರಿ ಎನಿಸಿದ ಭಾರತದ ಮೊತ್ತ ಮೊದಲ ಮಹಿಳೆಯಾದರು.

1932: ಮೂರನೇ `ದುಂಡು ಮೇಜಿನ ಪರಿಷತ್ತು' (ರೌಂಡ್ ಟೇಬಲ್ ಕಾನ್ಫರೆನ್ಸ್) ಲಂಡನ್ನಿನಲ್ಲಿ ಆರಂಭವಾಯಿತು. ಕಾಂಗ್ರೆಸ್ ಮತ್ತು ಬ್ರಿಟಿಷ್ ಲೇಬರ್ ಪಾರ್ಟಿ ಅದರಲ್ಲಿ ಪಾಲ್ಗೊಳ್ಳದೇ ಇದ್ದುದರಿಂದ ಅದು ಮೊದಲ ಪರಿಷತ್ತುಗಳಷ್ಟು ಮಹತ್ವ ಪಡೆಯಲಿಲ್ಲ. ಪರಿಣಾಮವಾಗಿ ಪ್ರಾಂತೀಯ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆ ಸ್ಥಾಪನೆ ಉದ್ದೇಶದ 1935ರ ಭಾರತ ಸರ್ಕಾರ ಕಾಯ್ದೆ ಅನುಷ್ಠಾನಗೊಳ್ಳಲಿಲ್ಲ.

1928: ಭಾರತದ ರಾಷ್ಟ್ರೀಯ ನಾಯಕ ಲಾಲಾ ಲಜಪತರಾಯ್ ಅವರು ಸೈಮನ್ ಕಮೀಷನ್ ವಿರೋಧಿ ಪ್ರದರ್ಶನಕಾಲದಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಆದ ಗಾಯಗಳ ಪರಿಣಾಮವಾಗಿ ಮೃತರಾದರು.

1869: ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರವನ್ನು (ರೆಡ್ ಸೀ) ಸಂಪರ್ಕಿಸುವ ಸುಯೆಜ್ ಕಾಲುವೆ ಈಜಿಪ್ಟಿನಲ್ಲಿ ಸಂಚಾರಕ್ಕಾಗಿ ತೆರೆಯಲಾಯಿತು. ಉತ್ತರದ ಪೋರ್ಟ್ ಸೆಡ್ ನಿಂದ ದಕ್ಷಿಣದ ಸುಯೆಜ್ ವರೆಗೆ ಈ ಕಾಲುವೆಯ ಉದ್ದ 163 ಕಿ.ಮೀ.ಗಳು. ಇದು ಆಫ್ರಿಕಾ ಖಂಡವನ್ನು ಏಷ್ಯಾ ಖಂಡದಿಂದ ಬೇರ್ಪಡಿಸುತ್ತದೆ. ಹಿಂದೂ ಸಾಗರ ಮತ್ತು ಪಶ್ಚಿಮದ ಫೆಸಿಫಿಕ್ ಸಾಗರ ಪ್ರದೇಶಗಳಿಗೆ ಯುರೋಪಿನಿಂದ ಸಂಪರ್ಕ ಕಲ್ಪಿಸುವ ಅತ್ಯಂತ ಹತ್ತಿರದ ಜಲಮಾರ್ಗವಿದು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment