Tuesday, January 23, 2024

PARYAYA: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ

ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ 


ವದೆಹಲಿ: ಬಿಹಾರದ ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 2024 ಜನವರಿ 23ರ ಮಂಗಳವಾರ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಮರಣೋತ್ತರವಾಗಿ ಘೋಷಿಸಲಾಯಿತು.

ಕರ್ಪೂರಿ ಠಾಕೂರ್ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ದುಡಿದ ಕಾರಣಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. ಅವರು "ಜನನಾಯಕ" ಎಂದೇ ಖ್ಯಾತರಾಗಿದ್ದರು.

 ಕರ್ಪೂರಿ ಠಾಕೂರ್ ಅವರು ಜನವರಿ 24, 1924 ರಂದು ಬಿಹಾರದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮಾಜದಲ್ಲಿ ಜನಿಸಿದರು. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮಾ ಗಾಂಧಿಯವರು ಕರೆ ನೀಡಿದ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದರು.

ಅವರು 1952 ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರುಅಂದಿನಿಂದ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ಸೋಲಲಿಲ್ಲ.

ಠಾಕೂರ್ ಅವರು ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ 1977 ರಿಂದ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ತಮ್ಮ ಆರಂಭಿಕ ಅಧಿಕಾರಾವಧಿಯಲ್ಲಿ ಜನತಾ ಪಕ್ಷದೊಂದಿಗೆ ಸೇರಿಕೊಂಡರು.

ಕರ್ಪೂರಿ ಠಾಕೂರ್ ಫೆಬ್ರವರಿ 17, 1988 ರಂದು ನಿಧನರಾದರು.

ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ, ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವಾರು ಗಣ್ಯರು ಸ್ವಾಗತಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

1. ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಕಾರಣಿಬರಹಗಾರವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ) - 1954

2. ಸರ್ವಪಲ್ಲಿ ರಾಧಾಕೃಷ್ಣನ್ (ತತ್ತ್ವಶಾಸ್ತ್ರಜ್ಞರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) - 1954

3. ಚಂದ್ರಶೇಖರ ವೆಂಕಟ ರಾಮನ್ (ಭೌತಶಾಸ್ತ್ರಜ್ಞ)- 1954

4. ಭಗವಾನ್ ದಾಸ್ (ಸ್ವಾತಂತ್ರ್ಯ ಕಾರ್ಯಕರ್ತತತ್ವಜ್ಞಾನಿ ಮತ್ತು ಶಿಕ್ಷಣತಜ್ಞ)- 1955

5. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸಿವಿಲ್ ಇಂಜಿನಿಯರ್ರಾಜನೀತಿಜ್ಞಮತ್ತು ಮೈಸೂರಿನ ದಿವಾನ್) - 1955

6. ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಕಾರ್ಯಕರ್ತಲೇಖಕ ಮತ್ತು ಭಾರತದ ಮಾಜಿ ಪ್ರಧಾನಿ)- 1955

7. ಗೋವಿಂದ ಲ್ಲಭ್ ಪಂತ್ (ಸ್ವಾತಂತ್ರ್ಯ ಕಾರ್ಯಕರ್ತ) - 1957

8. ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ)- 1958

9. ಬಿಧನ್ ಚಂದ್ರ ರಾಯ್ (ವೈದ್ಯರಾಜಕೀಯ ನಾಯಕಲೋಕೋಪಕಾರಿಶಿಕ್ಷಣತಜ್ಞ ಮತ್ತು ಸಮಾಜ ಸೇವಕ)- 1961

10. ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಕಾರ್ಯಕರ್ತ) - 1961

11. ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಕಾರ್ಯಕರ್ತವಕೀಲರಾಜಕಾರಣಿವಿದ್ವಾಂಸ ಮತ್ತು ಭಾರತದ ಮಾಜಿ ರಾಷ್ಟ್ರಪತಿ)- 1962

12. ಜಾಕಿರ್ ಹುಸೇನ್ (ಸ್ವಾತಂತ್ರ್ಯ ಕಾರ್ಯಕರ್ತ)- 1963

13. ಪಾಂಡುರಂಗ್ ವಾಮನ್ ಕೇನ್ (ಇಂಡಾಲಜಿಸ್ಟ್ ಮತ್ತು ಸಂಸ್ಕೃತ ವಿದ್ವಾಂಸ) -1963

14. ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ಪ್ರಧಾನಿ) - 1966

15. ಇಂದಿರಾ ಗಾಂಧಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1971

16. ವರಾಹಗಿರಿ ವೆಂಕಟ ಗಿರಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1975

17. ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) (ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ) 1976

18. ಮದರ್ ಮೇರಿ ತೆರೇಸಾ ಬೊಜಾಕ್ಸಿಯು (ಮದರ್ ತೆರೇಸಾ) (ಮಿಷನರೀಸ್ ಆಫ್ ಚಾರಿಟಿಯ ಸ್ಥಾಪಕರು) - 1980

19. ವಿನೋಬಾ ಭಾವೆ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆಸಮಾಜ ಸುಧಾರಕ) -1983

20. ಖಾನ್ ಅಬ್ದುಲ್ ಗಫಾರ್ ಖಾನ್ (ಸ್ವಾತಂತ್ರ್ಯ ಕಾರ್ಯಕರ್ತ) -1987

21. ಮರುದೂರು ಗೋಪಾಲನ್ ರಾಮಚಂದ್ರನ್ (ಮರಣೋತ್ತರ) (ರಾಜಕಾರಣಿಯಾಗಿ ಮಾರ್ಪಟ್ಟ ನಟ) -1988

22. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ (ಮರಣೋತ್ತರ) (ಸಮಾಜ ಸುಧಾರಕ) -1990

23. ನೆಲ್ಸನ್ ರೋಲಿಹ್ಲಾ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ) - 1990

24. ರಾಜೀವ್ ಗಾಂಧಿ (ಮರಣೋತ್ತರ) (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1991

25. ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) - 1991

26. ಮೊರಾರ್ಜಿ ರಾಂಚೋಡ್ಜಿ ದೇಸಾಯಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಪ್ರಧಾನ ಮಂತ್ರಿ) - 1991

27. ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) -1992

28. ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ (ಕೈಗಾರಿಕೋದ್ಯಮಿ) - 1992

29. ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ) - 1992

30. ಗುಲ್ಜಾರಿ ಲಾಲ್ ನಂದಾ (ಸ್ವಾತಂತ್ರ್ಯ ಕಾರ್ಯಕರ್ತ) - 1997

31. ಅರುಣಾ ಅಸಫ್ ಅಲಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1997

32. ಎ.ಪಿ.ಜೆ. ಅಬ್ದುಲ್ ಕಲಾಂ (ಏರೋಸ್ಪೇಸ್ರಕ್ಷಣಾ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1997

33. ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಕರ್ನಾಟಿಕ್ ಶಾಸ್ತ್ರೀಯ ಗಾಯಕಿ) -1998

34. ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಕಾರ್ಯಕರ್ತ) - 1998

35. ಜಯಪ್ರಕಾಶ್ ನಾರಾಯಣ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತಸಮಾಜ ಸುಧಾರಕ) - 1999

36. ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ) - 1999

37. ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1999

38. ರವಿಶಂಕರ್ (ಸಿತಾರ್ ವಾದಕ) - 1999

39. ಲತಾ ದೀನಾನಾಥ್ ಮಂಗೇಶ್ಕರ್ (ಹಿನ್ನೆಲೆ ಗಾಯಕಿ) - 2001

40. ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ) - 2001

41. ಭೀಮಸೇನ್ ಗುರುರಾಜ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ) - 2009

42. C. N. R. ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ) - 2014

43. ಸಚಿನ್ ರಮೇಶ್ ತೆಂಡೂಲ್ಕರ್ (ಕ್ರಿಕೆಟರ್) - 2014

44. ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) 2015

45. ಮದನ್ ಮೋಹನ್ ಮಾಳವೀಯ (ಮರಣೋತ್ತರ) (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ) - 2015

46. ನಾನಾಜಿ ದೇಶಮುಖ್ (ಮರಣೋತ್ತರ) (ಸಾಮಾಜಿಕ ಕಾರ್ಯಕರ್ತ) - 2019

47. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) (ಹಿನ್ನೆಲೆ ಗಾಯಕಗೀತರಚನೆಕಾರಸಂಗೀತಗಾರಕವಿ ಮತ್ತು ಚಲನಚಿತ್ರ ನಿರ್ಮಾಪಕ) - 2019

48. ಪ್ರಣಬ್ ಮುಖರ್ಜಿ (ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) 2019

49. ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ) - 2024

PARYAYA: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ  ನ ವದೆಹಲಿ: ಬಿಹಾರದ ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 2024 ಜನವರ...

Monday, January 22, 2024

PARYAYA: ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

 ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

ವದೆಹಲಿ: "ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇದು ನನ್ನ ಮೊದಲ ನಿರ್ಧಾರ" ಎಂಬುದಾಗಿ ಹೇಳಿದ ಪ್ರಧಾನಿ  ನರೇಂದ್ರ ಮೋದಿ ಅವರು ಹೊಸ ʼಪ್ರಧಾನಮಂತ್ರಿ ಸೂರ್ಯೋದಯ ಯೋಜನೆʼಯನ್ನು 2024 ಜನವರಿ 22ರ ಸೋಮವಾರ ಸಂಜೆ ಪ್ರಕಟಿಸಿದರು.

"ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವುದಲ್ಲದೆಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಹಿಂದಿರುಗಿದ ನಂತರಜನರು ತಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಸಹಾಯ ಮಾಡುವ ಹೊಸ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವು "ಜಗತ್ತಿನ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತಾರೆ" ಎಂಬ ಅರಿವಿನಿಂದ ಪ್ರೇರಿತವಾಗಿದೆ ಎಂದು ಅವರು ನುಡಿದರು.

"ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯನ್ನು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಅಳವಡಿಸುವ ಗುರಿಯೊಂದಿಗೆ ಪ್ರಾರಂಭಿಸುವುದುʼ ಎಂದು ಪ್ರಧಾನಿ ಮೋದಿ ಟ್ವಿಟರಿನಲ್ಲಿ ಪೋಸ್ಟ್ ಮಾಡಿದರು.

"ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ" ಎಂದು ಅವರು ಬರೆದರು.

ಅಯೋಧ್ಯೆಯಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿನಂತರ ತಮ್ಮ ಭಾಷಣದಲ್ಲಿ ಭಗವಾನ್ ರಾಮನು "ಶಕ್ತಿ" ಮತ್ತು ಇಂದು "ಹೊಸ ಯುಗದ ಉದಯ" ಎಂದು ಹೇಳಿದರು.

"ರಾಮನು ಬೆಂಕಿಯಲ್ಲಅವನು ಶಕ್ತಿ. ರಾಮನು ವಿವಾದವಲ್ಲಅವನು ಪರಿಹಾರ. ರಾಮನು ನಮ್ಮವನಲ್ಲಅವನು ಪ್ರತಿಯೊಬ್ಬರಿಗೂ ಸೇರಿದವನು" ಎಂದು ಪ್ರಧಾನಿ ಹೇಳಿದರು.

"ಇಂದುನಾವು ಕೇವಲ ರಾ ಲಲ್ಲಾ ಅವರ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನೋಡಿದ್ದಲ್ಲ, ಭಾರತದ ಮುರಿಯಲಾಗದ ಏಕತೆಯ ಪ್ರಾಣ ಪ್ರತಿಷ್ಠೆಯನ್ನು ಸಹ ನೋಡಿದ್ದೇವೆ" ಎಂದು ದೆಹಲಿಯ ಮನೆಯಲ್ಲಿ ಹಣತೆ ಬೆಳಗಿ ದೀಪಾವಳಿ ಆಚರಿಸುತ್ತಾ ಸಂಜೆ ಮೋದಿ ಹೇಳಿದರು.

ರಾಮ ಜನ್ಮಭೂಮಿ ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ರೂಪುಗೊಂಡಿದೆ, 392 ಸ್ತಂಭಗಳೂ ಮತ್ತು 44 ಬಾಗಿಲುಗಳನ್ನು ಹೊಂದಿದೆ. ಸ್ತಂಭಗಳು ಮತ್ತು ಗೋಡೆಗಳು ಹಿಂದೂ ದೇವತೆಗಳ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸಿವೆ.

ಭಕ್ತರಿಗೆ ರಾಮಲಲ್ಲಾ ದರ್ಶನ

ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 23ರ ಮಂಗಳವಾರದಿಂದ ಭಕ್ತರಿಗೆ ಬಾಲರಾಮನ ದರ್ಶನ ಲಭಿಸಲಿದ್ದು ಬೆಳಗ್ಗೆ 7ರಿಂದ 10.30 ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದರ್ಶನ ಅವಕಾಶ ಒದಗಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ನಡೆಯಲಿದ್ದು ಭಕ್ತರು ಒಂದು ದಿನ ಮೊದಲೇ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಬೇಕು ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಬಾಲ ರಾಮನಿಗೆ ಆರತಿ ನಡೆಯಲಿದ್ದು, ಆರತಿ ದರ್ಶನಕ್ಕೆ ಬರುವ ಭಕ್ತರು ಮುಂಚಿತವಾಗಿ ಟ್ರಸ್ಟ್‌ ಕಚೇರಿಯಿಂದ ಪಾಸ್‌ ಪಡೆದಿರಬೇಕು ಎಂದು ಹೇಳಿದರು.

ಬಾನಿನಿಂದ ರಾಮ ಮಂದಿರದ ವಿಡಿಯೋ

ಈ ಮಧ್ಯೆ ಹೆಲಿಕಾಪ್ಟರ್‌ ಮೂಲಕ ಇಂದು ಚಿತ್ರಿಸಲಾದ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಂದರ್ಭದ ವಿಡಿಯೋ ಒಂದು ವೈರಲ್‌ ಆಗಿದ್ದು ಅದನ್ನು ನೋಡಲು ಕೆಳಗೆ ಕ್ಲಿಕ್‌ ಮಾಡಬಹುದು.


ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

PARYAYA: ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ:   ʼ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ʼ ಪ್ರಕಟಿಸಿದ ಪ್ರಧಾನಿ ನ ವದೆಹಲಿ: " ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇದು ನನ್ನ ಮೊದಲ ನಿರ್ಧಾರ" ಎಂಬುದಾಗಿ ಹೇಳಿ...

PARYAYA: ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

 ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೂತನವಾಗಿ ನಿರ್ಮಿಸಿದ ಸುಂದರ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ 2024 ಜನವರಿ 22ರ ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕದ ಶುಭ ಮುಹೂರ್ತದಲ್ಲಿ ಸಡಗರೋತ್ಸಾಹದೊಂದಿಗೆ ನೆರವೇರಿತು.

ಇದರೊಂದಿಗೆ ಸುಮಾರು 500 ವರ್ಷಗಳ ಬಳಿಕ ಶ್ರೀ ರಾಮ ಚಂದ್ರನು ಮೂಲಸ್ಥಾನದಲ್ಲಿ ಬಾಲರಾಮನ (ರಾಮಲಲ್ಲಾ) ರೂಪದಲ್ಲಿ ಪುನರ್‌ ಪ್ರತಿಷ್ಠೆಗೊಂಡಿದ್ದಾನೆ. ಇದಕ್ಕೆ ಮುನ್ನ ವಿವಾದಿತ ಕಟ್ಟಡದಲ್ಲಿ ಪೂಜೆಗೊಳ್ಳುತ್ತಿದ್ದ ರಾಮ ಲಲ್ಲಾ ವಿಗ್ರಹಗಳನ್ನೂ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗ್ವತ್‌, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಮುಖರ ಸಮ್ಮುಖದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೂರ್ತಿಗೆ ಕಮಲದ ಹೂ, ಅಕ್ಷತೆ, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿದರು. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂಗಳಾರತಿಯನ್ನೂ ಬೆಳಗಿದರು.

ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿಯವರು ಅರ್ಚಕರಿಗೆ ವಸ್ತ್ರದಾನ ಮಾಡಿದರು.

ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಗರ್ಭಗುಡಿಯೊಳಗೆ ಪ್ರಧಾನಿ ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಪ್ರವೇಶವಿತ್ತು. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂರಾರು ಮಂದಿ ಸಂತರು, ದೇಶ ವಿದೇಶಗಳಿಂದ ಆಗಮಿಸಿದ್ದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಹೊರಭಾಗದಲ್ಲಿ ಸಹಸ್ರಾರು ಮಂದಿ ಭಕ್ತರು ನೆರೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಬಳಿಕ ದೇವಾಲಯದ ಹೊರಭಾಗದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿಯವರು ದೇವಾಲಯ ನಿರ್ಮಾಣಕ್ಕಾಗಿ ದುಡಿದ ಕಾರ್ಯಕ್ರಮರಿಗೆ ಗೌರವ ಸಲ್ಲಿಸಿದರು.

ಪ್ರಾಣಪ್ರತಿಷ್ಠೆಯ ಈ ಸಂಭ್ರಮದ ಕ್ಷಣ ವಿಶ್ವಾದ್ಯಂತ ಬೃಹತ್‌ ಪರದೆಗಳಲ್ಲಿ ಪ್ರಸಾರಗೊಂಡಿತು. ಕೋಟ್ಯಂತರ ಭಕ್ತರು ದೇವಾಲಯಗಳಲ್ಲಿ ನೆರೆದು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಗೊಂಡದ್ದಲ್ಲದೆ, ಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ಬಾಲರಾಮನ ಪ್ರತಿಷ್ಠಾ ಸಮಾರಂಭದ ಕ್ಷಣಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್ಕಿಸಿ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ


PARYAYA: ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ:   ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ ಅ ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ...

Sunday, January 21, 2024

PARYAYA: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ...

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ


ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು,
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ,

ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ,
ಜಸವು  ಜನ ಜೀವನಕೆ ಮಂಕು ತಿಂಮ್ಮ!

ಕನ್ನಡದ ಖ್ಯಾತ ಕವಿ ಡಿವಿಜಿ ಅವರ ಈ ಕವನವನ್ನು ಕ್ಷಣ ಕ್ಷಣಕ್ಕೂ ನೆನಪಿಸುವಂತೆ ಮೂಡಿ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮ ಮಂದಿರ. ಭಾರತೀಯ ಚಿಂತನೆ, ವಾಸ್ತು, ಕಲೆ ಮತ್ತು ವಿಜ್ಞಾನ ಇವೆಲ್ಲವೂ ಇಲ್ಲಿ ಮೇಳೈಸಿವೆ.

ಭಾರತದ ಪ್ರಾಚೀನ ಚಿಂತನೆ, ವಾಸ್ತುಶಿಲ್ಪ ಮತ್ತು ಆಧುನಿಕ ವಿಜ್ಞಾನ ಮಿಳಿತವಾದ ಸುಂದರ ಮಂದಿರವನ್ನು ಭಾರತದ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಎತ್ತರ ಕುತುಬ್‌ ಮಿನಾರ್‌ ಕಟ್ಟಡದ ಶೇಕಡಾ 70ರಷ್ಟು ಇದೆ.

ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಬಿ ಸೋಂಪುರ ಅವರು ತಮ್ಮ ಮಗ ಆಶಿಶ್ ಸಹಾಯದಿಂದ ವಿನ್ಯಾಸಗೊಳಿಸಿರುವ ರಾಮ ಮಂದಿರದ ಕಲ್ಪನೆಯನ್ನು 30 ವರ್ಷಗಳಷ್ಟು ಹಿಂದೆಯೇ ವಿವರಿಸಿದ್ದರು.

2024 ಜನವರಿ 22ರ  ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಯ ರಾಮಮಂದಿರವು ಇದೀಗ ಅಲಂಕೃತವಾಗಿ ನಿಂತಿದೆ.

ದೇವಾಲಯಗಳ ಪಟ್ಟಣ ಎಂಬುದಾಗಿಯೇ ಹೆಸರು ಪಡೆದಿರುವ ಅಯೋಧ್ಯೆಯಲ್ಲಿ 2.7 ಎಕರೆ ಭೂಮಿಯಲ್ಲಿ ಮೈತಳೆದು ನಿಂತಿರುವ ಈ ದೇವಾಲಯ 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಎಲ್ಲ ವೈದಿಕ ಆಚರಣೆಗಳನ್ನು ಅನುಸರಿಸಿ, ಪ್ರಾಚೀನ  ಭಾರತದ ಎರಡು ವಿಶಿಷ್ಟವಾದ ಕಟ್ಟಡ ಶೈಲಿಗಳಲ್ಲಿ ಒಂದಾದ ನಾಗರಾ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿಗಳು. ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ಎತ್ತರಿಸಿದ ಪಾಯದ ಮೇಲೆ ಗರ್ಭಗುಡಿ ನಿರ್ಮಾಣಗೊಂಡಿದೆ. ಮೂರು ಅಂತಸ್ತುಗಳನ್ನು ಹೊಂದಿರುವ ದೇವಾಲಯದ ಗರ್ಭಗುಡಿಯ ಮೇಲೆ ಅತ್ಯಂತ ಎತ್ತರದ ಶಿಖರವಿದೆ. ದೇವಾಲಯ ಹೊಂದಿರುವ ಐದು ಮಂಟಪಗಳು ಒಟ್ಟು ಐದು ಶಿಖರಗಳನ್ನು ಹೊಂದಿವೆ. ಮಂಟಪಗಳು 300 ಸ್ತಂಭಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿವೆ.

ಭಗವಾನ್ ರಾಮನ ಹೆಸರನ್ನು ವಿವಿಧ ಭಾಷೆಗಳಲ್ಲಿ ಕೆತ್ತಿದ ಮತ್ತು 30 ವರ್ಷಗಳಿಂದ ಸಂಗ್ರಹಿಸಲಾದ ಸುಮಾರು ಎರಡು ಲಕ್ಷ ಇಟ್ಟಿಗೆಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ತಾಜ್‌ ಮಹಲ್‌ ನಿರ್ಮಿಸಲು ಬಳಸಲಾಗಿದ್ದ ಅಮೃತಶಿಲೆಗಳನ್ನೇ ಬಳಸಿ ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ. ಉಕ್ಕು ಮತ್ತು ಕಬ್ಬಿಣವನ್ನು ಒಂದಿಷ್ಟೂ ಬಳಸಿಲ್ಲ ಎಂಬುದು ಇದರ ವಿಶೇಷ. ಹಾಗೆಯೇ ಈ ಮಂದಿರ ನಿರ್ಮಾಣಕ್ಕೆ ಒಂದಿಷ್ಟೂ ಸಿಮೆಂಟ್‌ ಅಥವಾ ಗಾರೆ ಕೂಡಾ ಬಳಸಿಲ್ಲ.

ನಾಗರ ಶೈಲಿಯ ಕಟ್ಟಡಗಳ ನಿರ್ಮಾಣ ಆರಂಭವಾದದ್ದು ಭಾರತವು ಸುವರ್ಣ ಯುಗವನ್ನು ಕಂಡಿದ್ದ ಗುಪ್ತರ ಕಾಲದಲ್ಲಿ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷ ಮಾತ್ರ. ಹೀಗಾಗಿ ದೇವಾಲಯವನ್ನು ಕನಿಷ್ಠ ಒಂದು ಸಾವಿರ ವರ್ಷ ಕಾಲ ದೃಢವಾಗಿ ನಿಲ್ಲುವಂತೆ ಗ್ರಾನೈಟ್‌, ಮರಳುಗಲ್ಲು, ಅಮೃತಶಿಲೆ ಬಳಸಿ ಲಾಕ್‌ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಈ ಪ್ರದೇಶವನ್ನು 15 ಮೀಟರ್‌ ಆಳಕ್ಕೆ ಅಗೆದು, 47 ಪದರಗಳಲ್ಲಿ ಮಣ್ಣನ್ನು ಗಟ್ಟಿಯಾಗಿ ತುಂಬಿ ಪಾಯವನ್ನು ನಿರ್ಮಿಸಲಾಗಿತ್ತು. ಅದಕ್ಕೆ 1.5 ಮೀಟರ್‌ ದಪ್ಪದ ಎಂ-35 ದರ್ಜೆಯ ಕಾಂಕ್ರೀಟ್‌ ಹಾಕಲಾಯಿತು. ಗಟ್ಟಿಮಟ್ಟು ಆಗಲು 6.3 ಮೀಟರ್‌ ದಪ್ಪದ ಘನ ಗ್ರಾನೈಟ್‌ ಕಲ್ಲನ್ನು ಹೊದಿಸಲಾಯಿತು.

ವಿಜ್ಞಾನದ ಕೊಡುಗೆ

ರಾಮಮಂದಿರವನ್ನು ನಿರ್ಮಿಸಲು ಕೆಲವು ಉನ್ನತ ಭಾರತೀಯ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ನಿರ್ಮಾಣದಲ್ಲಿ ಇಸ್ರೋ ತಂತ್ರಜ್ಞಾನವನ್ನೂ ಬಳಸಲಾಗಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ನಿರ್ದೇಶಕ ಪ್ರದೀಪ್ ಕುಮಾರ್ ರಾಮಂಚರ್ಲಾ ಅವರು ಯೋಜನೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವಿಶೇಷ ‘ಸೂರ್ಯ ತಿಲಕ್’ ಕನ್ನಡಿ ಎಂಬ ಮಸೂರ ಆಧಾರಿತ ಉಪಕರಣವನ್ನು ಸಿಬಿಆರ್‌ ಐ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ/ IIA) ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ. ಇದರ ಮೂಲಕ ಪ್ರತಿವರ್ಷ ರಾಮನವಮಿಯ ದಿನದಂದು ಮಧ್ಯಾಹ್ನದ ಸಮಯದಲ್ಲಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕಿನ ಅಭಿಷೇಕವಾಗುತ್ತದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



ಇವುಗಳನ್ನೂ ಓದಿ:

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ


PARYAYA: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ...: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ, ಋಷಿವಾಕ್...