Friday, November 2, 2018

ಇಂದಿನ ಇತಿಹಾಸ History Today ನವೆಂಬರ್ 02

ಇಂದಿನ ಇತಿಹಾಸ History Today ನವೆಂಬರ್ 02
2018: ನವದೆಹಲಿ: ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ನೆರವಾಗಲುದೀಪಾವಳಿ ಕೊಡುಗೆ’ಯಾಗಿ ೫೯ ನಿಮಿಷದಲ್ಲಿ ಕೋಟಿ ರೂಪಾಯಿಗಳವರೆಗೆ ಸಾಲ ನೀಡುವ ನೂತನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದರು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ (ಎಂಎಸ್ಎಂಇ) ಬೆಂಬಲ ಹಾಗೂ ಅವರನ್ನು ತಲುಪುವ ಉಪಕ್ರಮದ (ಸಪೋರ್ಟ್ ಅಂಡ್ ಔಟ್ ರೀಚ್ ಪ್ರೋಗ್ರಾಮ್) ಅಂಗವಾಗಿ ವಿಜ್ಞಾನಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಯೋಜನೆಯನ್ನು ಪ್ರಕಟಿಸಿದರು. ‘೫೯ ನಿಮಿಷಗಳ ಸಾಲ ಯೋಜನೆ ಪೋರ್ಟಲ್ ನ್ನು ನಾನು ನಿಮಗಾಗಿ ಸಮರ್ಪಿಸುತ್ತಿದ್ದೇನೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇದನ್ನು ಆರಂಭಿಸಲಾಗಿದೆ ಎಂದು ಪ್ರಧಾನಿ ನುಡಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಂಗಕ್ಕೆ ಬೆಂಬಲ ನೀಡುವ ಸಲುವಾಗಿ ತಮ್ಮ ಸರ್ಕಾರವು ೧೨ ನೀತಿಗಳನ್ನು ಜಾರಿಗೊಳಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿ ನೋಂದಣಿಯಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು (ಎಂಎಸ್ ಎಂಇ) ಯೋಜನೆಯಡಿ ಕೋಟಿ ರೂಪಾಯಿವರೆಗಿನ ಹೆಚ್ಚಳ ಸಾಲಕ್ಕೆ ಶೇಕಡಾ ರಷ್ಟು ರಿಯಾಯ್ತಿ (ರಿಬೇಟ್) ಪಡೆಯುವರು ಎಂದು ಪ್ರಧಾನಿ ಹೇಳಿದರು. ಸಾಲ ಯೋಜನೆಯನ್ನುದೀಪಾವಳಿ ಕೊಡುಗೆ ಎಂಬುದಾಗಿ ಬಣ್ಣಿಸಿದ ಮೋದಿ, ಉಪಕ್ರಮವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ರಂಗದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ನುಡಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಬೆಂಬಲ ಮತ್ತು ತಲುಪುವ ಯೋಜನೆಯು ದೇಶಾದ್ಯಂತ ೧೦೦ ಜಿಲ್ಲೆಗಳಲ್ಲಿ ೧೦೦ ದಿನಗಳ ಕಾಲ ನಡೆಯಲಿದೆ. ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ೭೭ನೇ ಸ್ಥಾನಕ್ಕೆ ಜಿಗಿದ ರಾಷ್ಟ್ರದ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿಜನರು ಕಲ್ಪಿಸಲು ಕೂಡಾ ಸಾಧ್ಯವಾಗದಿದ್ದಂತಹ ಸಾಧನೆಯನ್ನು ಭಾರತವು ಮಾಡಿದೆ ಎಂದು ಹೇಳಿದರು. ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ಭಾರತವು ೫೦ರ ಒಳಗಿನ ಸ್ಥಾನಕ್ಕೆ ಜಿಗಿಯುವುದು ದೂರವೆನಿಲ್ಲ ಎಂದು ಪ್ರಧಾನಿ ನುಡಿದರು. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಭಾರೀ ಹಿನ್ನಡೆಯಾಗಿದೆ ಎಂಬುದಾಗಿ ವಿರೋಧಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ಟೀಕೆಗೆ ಪ್ರತಿಯಾಗಿ ಸರ್ಕಾರದಿಂದ ಪ್ರಕಟಣೆ ಬಂದಿದೆ. ಮುಂದಿನ ವರ್ಷದ ಮಹಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಬೆಂಬಲವಾಗಿ ರಾಷ್ಟ್ರದ ಆರ್ಥಿಕ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ ತಿಂಗಳಲ್ಲಿ ಹೇಳಿದ್ದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಂಗದ ಏಳಿಗೆಗಾಗಿ ತಮ್ಮ ಸರ್ಕಾರ ಕೈಗೊಂಡ ೧೨ ಪ್ರಮುಖ ನಿರ್ಧಾರಗಳನ್ನು ಒತ್ತಿ ಹೇಳಿದ ಪ್ರಧಾನಿ ಮೋದಿಸಾಮೂಹಿಕ ಉಪಕ್ರಮಗಳು, ಸಾಮೂಹಿಕ ಹೊಣೆಗಾರಿಕೆಗಳ ಮೂಲಕ ಸಾಮೂಹಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಅವು ಸಮಗ್ರ ಪರಿಣಾಮ ಬೀರುತ್ತಿವೆ ಎಂದು ವಿವರಿಸಿದರು. ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರಕ್ಕೆ ಸರ್ಕಾರವು ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಿದೆ. ದೇಶಾದ್ಯಂತ ೧೦೦ ದಿನಗಳ ಕಾಲ ಮುಂದುವರೆಯಲಿರುವ ಬೆಂಬಲ ಮತ್ತು ತಲುಪುವ ಕಾರ್ಯಕ್ರಮವು ರಂಗದಲ್ಲಿ ಮಾಡುವ ಯತ್ನಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ.

2018: ಸಿಂಗಾಪುರ: ಟೆಹರಾನ್ ವಿರುದ್ಧ ಮುಂದಿನವಾರ ತನ್ನ ದಿಗ್ಬಂಧನ ಮರುಜಾರಿಯ ಬಳಿಕ ನಿಕಟ ಮಿತ್ರರಾಷ್ಟ್ರಗಳಾದ ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ರಾಷ್ಟ್ರಗಳನ್ನು ದಿಗ್ಬಂಧನದಿಂದ ಹೊರತುಪಡಿಸಲು ಅಮೆರಿಕ ಸರ್ಕಾರ ಒಪ್ಪಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಮಾಡಿತು. ಏಷ್ಯಾದಲ್ಲಿನ ಇರಾನಿನ ಬೃಹತ್ ತೈಲ ಗ್ರಾಹಕ ದೇಶಗಳು ಅಮೆರಿಕ ಮರುಜಾರಿಗೊಳಿಸಲು ಉದ್ದೇಶಿಸಿರುವ ದಿಗ್ಬಂಧನ ಮನ್ನಾ ಮಾಡುವಂತೆ ಅಮೆರಿಕವನ್ನು ಕೋರಿವೆ. ಇನ್ನೂ ಸ್ವಲ್ಪ ಕಾಲ ಇರಾನಿನಿಂದ ತೈಲ ಖರೀದಿಗೆ ಆಸ್ಪದ ನೀಡಬೇಕು ಎಂದು ರಾಷ್ಟ್ರಗಳು ಮನವಿ ಮಾಡಿದವು. ಅಮೆರಿಕದ ನಿಕಟ ಮಿತ್ರ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಭಾರತದ ಜೊತೆಗೆ ದಿಗ್ಬಂಧನದಿಂದ ಮುಕ್ತವಾಗಿರುವ ರಾಷ್ಟ್ರಗಳಲ್ಲಿ ಸೇರಿವೆ. ರಾಷ್ಟ್ರಗಳು ದೊಡ್ಡ ಪ್ರಮಾಣದ ತೈಲಕ್ಕಾಗಿ ಇರಾನನ್ನೇ ಅವಲಂಬಿಸಿವೆ. ದಿಗ್ಬಂಧನ ಮನ್ನಾ ಲಭಿಸಿರುವ ರಾಷ್ಟ್ರಗಳ ಪಟ್ಟಿ ಸೋಮವಾರ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎಂದು ವರದಿ ಹೇಳಿತು. ದಿಗ್ಬಂಧನ ಮನ್ನಾ ಸಲುವಾಗಿ ಅಮೆರಿಕ ಸರ್ಕಾರದ ಜೊತೆಗೆ ತಾನು ಮಾತುಕತೆ ನಡೆಸುತ್ತಿರುವುದಾಗಿ ಚೀನೀ ಅಧಿಕಾರಿಯೊಬ್ಬರು ತಿಳಿಸಿದರು. ಮುಂದಿನ ಕೆಲವು ದಿನಗಳಲ್ಲಿ ಮಾತುಕತೆಯ ಫಲಿತಾಂಶ ಹೊರಬೀಳಲಿದೆ ಎಂದು ಅವರು ಹೇಳಿದರು.  ‘ಭಾರತ ಮತ್ತು ದಕ್ಷಿಣ ಕೊರಿಯಾಗಳಿಗೆ ಲಭಿಸಿರುವಂತೆಯೇ ಚೀನಾ ದೇಶಕ್ಕೂ ಸ್ವಲ್ಪ ಪ್ರಮಾಣದ ತೈಲ ಆಮದಿಗೆ ಟ್ರಂಪ್ ಅವರು ಒಪ್ಪುವರು ಎಂಬುದು ನಮ್ಮ ಭಾವನೆ ಎಂದು ಹೈಟ್ ಸೆಕ್ಯುರಿಟೀಸ್ ವಿಶ್ಲೇಷಕ ಕ್ಲೇಟನ್ ಅಲೆನ್ ಶುಕ್ರವಾರ ಟಿಪ್ಪಣಿಯೊಂದರಲ್ಲಿ ತಿಳಿಸಿದರು. ಏನಿದ್ದರೂ ಇರಾನ್ ತೈಲ ಖರೀದಿ ಮೇಲಿನ ನಿರ್ಬಂಧ ಮನ್ನಾಕ್ಕೆ ಸಂಬಂಧಿಸಿದಂತೆ ತಮಗೆ ಯಾವುದೇ ಲಿಖಿತ ಸೂಚನೆ ಬಂದಿಲ್ಲ. ಆದರೆ ದಿಗ್ಬಂಧನ ಮನ್ನಾ ಕುರಿತ ವದಂತಿಗಳು ತಮಗೂ ಬಂದಿವೆ ಎಂದು ಟರ್ಕಿ ಹೇಳಿತು. ಈ ಮಧ್ಯೆಇರಾನ್ ತೈಲ ಖರೀದಿ ಮೇಲಿನ ನಿರ್ಬಂಧ ಮನ್ನಾವು ಏನಿದ್ದರೂ ತಾತ್ಕಾಲಿಕ ಮಾತ್ರ. ಅಮೆರಿಕವು ನಿಧಾನ ಅನುಷ್ಠಾನ ಕ್ರಮವಾಗಿ ಮನ್ನಾವನ್ನು ಬಳಸಬಹುದು, ಆದರೆ ದಿಗ್ಬಂಧನ ಮನ್ನಾ ಅನಿರ್ದಿಷ್ಟ ಅವಧಿಗೆ ಅನ್ವಯಿಸಲಾರವು ಎಂದು ಅಲೆನ್ ಹೇಳಿದರು. ಇರಾನಿನ ಕಚ್ಚಾತೈಲ ರಫ್ತು ೨೦೧೮ರ ಮಧ್ಯಾವಧಿಯಲ್ಲಿದ್ದ ದೈನಂದಿನ . ಮಿಲಿಯನ್ ಬ್ಯಾರೆಲ್ಗಳಿಂದ (ಬಿಪಿಡಿ) ದಿನಕ್ಕೆ .೧೫ ಮಿಲಿಯನ್ ಬ್ಯಾರೆಲ್ಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಗೋಲ್ಡ್ಮನ್ ಸಾಚ್ಸ್ ನಿರೀಕ್ಷಿಸಿದರು. ಟ್ರಂಪ್ ಆಡಳಿತವು ಇರಾನಿನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ತಡೆ ಹಾಕುವ ಸಲುವಾಗಿ ಅದರ ಆರ್ಥಿಕತೆಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದ್ದು, ಇರಾನಿನಿಂದ ತೈಲ ಖರೀದಿ ಪ್ರಮಾಣವನ್ನು ಇಳಿಸುವ ರಾಷ್ಟ್ರಗಳಿಗೆ ದಿಗ್ಬಂಧನ ಮನ್ನಾ ಮಾಡುವುದಾಗಿ ಹೇಳಿತ್ತು. ಅಮೆರಿಕದ ದಿಗ್ಬಂಧನ ಮನ್ನಾ ಪಟ್ಟಿಯಲ್ಲಿರುವ ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾವನ್ನು ಹೊರತು ಪಡಿಸಿ, ಸವಲತ್ತು ಪಡೆಯುವ ಇತರ ನಾಲ್ಕು ರಾಷ್ಟ್ರಗಳು ಯಾವುವು ಎಂಬುದು ಸ್ಪಷ್ಟವಾಗಲಿಲ್ಲ. ಕಳೆದ ತಿಂಗಳು ಬ್ಯಾರೆಲ್ ಗೆ ೮೫ ಡಾಲರ್ ಇದ್ದ ಜಾಗತಿಕ ಕಚ್ಚಾ ತೈಲ ಬೆಲೆ ಶೇಕಡಾ ೧೫ರಷ್ಟು ಕುಸಿದಿದ್ದು, ಕನಿಷ್ಠ ಕೆಲವು ರಾಷ್ಟ್ರಗಳಾದರೂ ನಿರ್ಬಂಧ ಮನ್ನಾ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿತು.

2018: ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಣಿಯಲು ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ಇಲ್ಲಿ ಹೇಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುತನಿಖೆ ಶುರು ಆಗಲಿ. ಮೋದಿ ಅವರು ಬಚಾವಾಗಲು ಸಾಧ್ಯವೇ ಇಲ್ಲ. ಇದು ಖಡಾ ಖಂಡಿತ ಎಂದು ನುಡಿದರು.  ‘ಅನಿಲ್ ಅಂಬಾನಿ ಮಾಲೀಕತ್ವದ ಕಂಪೆನಿಯು ರಫೇಲ್ ವ್ಯವಹಾರದಲ್ಲಿ ಡಸ್ಸಾಲ್ಟ್ ಎವಿಯೇಶನ್ ಸಂಸ್ಥೆಯಿಂದ ದೊಡ್ಡ ಪ್ರಮಾಣದ ಲಂಚ ಪಡೆದಿದೆ. ಫ್ರೆಂಚ್ ಇಸಿಒ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಿಸುವುದಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ರಾಹುಲ್ ಆಪಾದಿಸಿದರು. ‘ಡಸಾಲ್ಟ್ ಸಿಇಒ ಸುಳ್ಳು ಹೇಳುತ್ತಿದ್ದಾರೆ. ಅವರು ರಾಷ್ಟ್ರವನ್ನು ಮುನ್ನಡೆಸುತ್ತಿರುವ ಏಕೈಕ ವ್ಯಕ್ತಿಯನ್ನು ರಕ್ಷಿಸುತ್ತಿದ್ದಾರೆ... ತನಿಖೆ ಶುರುವಾದರೆ ಮೋದಿ ಅವರು  ಬಚಾವ್ ಆಗುವುದಿಲ್ಲ. ಇದು ಖಡಾ ಖಂಡಿತ. ಏಕೆಂದರೆ ಒಂದು: ಭ್ರಷ್ಟಾಚಾರದ ಕಾರಣಕ್ಕಾಗಿ , ಎರಡು: ನಿರ್ಣಯ ಕೈಗೊಂಡವರು ಯಾರು ಎಂಬುದು ಸ್ಪಷ್ಟವಾಗಿರುವುದರಿಂದ. ಅದು ನರೇಂದ್ರ ಮೋದಿ. ಇದು ಅನಿಲ್ ಅಂಬಾನಿಯವರಿಗೆ ೩೦,೦೦೦ ಕೋಟಿ ರೂಪಾಯಿಗಳನ್ನು ನೀಡುವ ಸಲುವಾಗಿ ನರೇಂದ್ರ ಮೋದಿಯವರೇ ವ್ಯವಹಾರ ಕುದುರಿಸಿದ್ದಾರೆ ಎಂದು ರಾಹುಲ್ ಹೇಳಿದರು. ಡಸ್ಸಾಲ್ಟ್ ಕಂಪೆನಿಯು ಅನಿಲ್ ಅಂಬಾನಿ ಅವರ ಕಂಪೆನಿಯಲ್ಲಿ ೨೮೪ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಅನಿಲ್ ಅಂಬಾನಿ ಕಂಪೆನಿಯು ಹಣದಿಂದಲೇ ಭೂಮಿ ಖರೀದಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಆಪಾದಿಸಿದರು. ’ಡಸ್ಸಾಲ್ಟ್ ಸಿಇಒ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟ. ಅವರು ಯಾಕೆ ನಷ್ಟದಲ್ಲಿದ್ದ ಕಂಪೆನಿಯಲ್ಲಿ ೨೮೪ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರು? ಎಂದು ರಾಹುಲ್ ಪ್ರಶ್ನಿಸಿದರು.  ‘ಅನಿಲ್ ಅಂಬಾನಿ ಅವರ ಬಳಿ ಭೂಮಿ ಇದ್ದದ್ದು ಎಚ್ಎಎಲ್ಗೆ ಗುತ್ತಿಗೆ ನೀಡದೇ ಇರಲು ಕಾರಣ ಎಂದು ಡಸ್ಸಾಲ್ಟ್ ಸಿಇಒ ಹೇಳಿದ್ದಾರೆ. ಅನಿಲ್ ಅಂಬಾನಿ ಅವರು ಭೂಮಿ ಖರೀದಿಸಿದ್ದು ಡಸ್ಸಾಲ್ಟ್ ಕೊಟ್ಟ ಹಣದಿಂದ ಎಂಬುದು ಈಗ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಅವರು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸುತ್ತ ಹೇಳಿದರು. ಇದಕ್ಕೆ ಮುನ್ನ ಟೆಲಿವಿಷನ್ ಚಾನೆಲ್ ಒಂದಕ್ಕೆ ಪ್ಯಾರಿಸ್ಸಿನಲ್ಲಿ ನೀಡಿದ ವಿಶೇಷ ಸಂದರ್ಶನ ಒಂದರಲ್ಲಿ ಡಸ್ಸಾಲ್ಟ್ ಕಂಪೆನಿಯ ಸಿಇಒ ಎರಿಕ್ ಟ್ರಾಪ್ಪಿಯರ್ ಅವರುಅನಿಲ್ ಅಂಬಾನಿ ಕಂಪೆನಿಯು ನಾಗಪುರದ ಹೊರಭಾಗದಲ್ಲಿ ಏರ್ ಫೀಲ್ಡ್ ಸಮೀಪ ಭೂಮಿಯನ್ನು ಹೊಂದಿದ್ದು, ಅಲ್ಲಿ ತನ್ನ ಉತ್ಪಾದನಾ ಸವಲತ್ತುನ್ನು ಕಲ್ಪಿಸಬಹುದು ಎಂಬ ಕಾರಣಕ್ಕಾಗಿ ಕಾರಣ ಡಸ್ಸಾಲ್ಟ್ ಕಂಪೆನಿಯು ರಿಲಯನ್ಸನ್ನು ತನ್ನ ಪಾಲುದಾರದಾಗಿ ಆಯ್ಕೆ ಮಾಡಿಕೊಂಡಿತು ಎಂದು ಹೇಳಿದ್ದರು. ವ್ಯವಹಾರದಲ್ಲಿನ ನ್ಯೂನತೆಗಳನ್ನು ಮುಚ್ಚಿ ಹಾಕುವ ಸಲುವಾಗಿ ಸಿಬಿಐ ಮುಖ್ಯಸ್ಥರನ್ನು ಕಿತ್ತು ಹಾಕಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಆಪಾದಿಸಿದರು. ಇದು ಭ್ರಷ್ಟಾಚಾರದ ಸ್ಪಷ್ಟ ಪ್ರಕರಣ ಎಂದು ರಾಹುಲ್ ನುಡಿದರು. ರಫೇಲ್ ವ್ಯವಹಾರವು ನೇರ ಮತ್ತು ನಿರ್ಣಾಯಕವಾದ ಪ್ರಕರಣ ಎಂದು ಒತ್ತಿ ಹೇಳಿದ ರಾಹುಲ್ಯುದ್ಧ ವಿಮಾನಗಳ ದರವನ್ನು ಸರ್ಕಾರ ಏಕೆ ಬಹಿರಂಗ ಪಡಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.
 
2018: ಚೆನ್ನೈ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 7ಗಂಟೆ ಮತ್ತು ರಾತ್ರಿ 7ರಿಂದ 8 ಗಂಟೆ ಅವಧಿಯಲ್ಲಿ ಮಾತ್ರವೇ ಸುಡುಮದ್ದು/ ಪಟಾಕಿ ಸಿಡಿಸಲು ತಮಿಳುನಾಡು ಸರ್ಕಾರ ಸಮಯ ನಿಗದಿ ಪಡಿಸಿ, ಪ್ರಕಟಣೆ ಹೊರಡಿಸಿತು. ಅತ್ಯಂತ ಕಡಿಮೆ ಸದ್ದಿನ ಹಾಗೂ ಕಡಿಮೆ ಮಾಲಿನ್ಯ ಉಂಟು ಮಾಡುವ ಪಟಾಕಿ/ ಸುಡುಮದ್ದು ಬಳಸುವಂತೆ, ಆಸ್ಪತ್ರೆ, ದೇವಸ್ಥಾನಗಳ ಸಮೀಪ ಸುಡುಮದ್ದು ಸಿಡಿಸದಂತೆ ಸರ್ಕಾರ ಆಜ್ಞಾಪಿಸಿತು.

2018: ನವದೆಹಲಿ: ಒಂದೇ ಬಾರಿಗೆ ತ್ರಿವಳಿ ತಲಾಖ್ನೀಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ನಿರಾಕರಿಸಿತು. ಸುಗ್ರೀವಾಜ್ಞೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.  ಈದಿನ ವಿಚಾರಣೆ ವೇಳೆ ವಕೀಲರು ಬಗ್ಗೆ ಪ್ರಸ್ತಾಪಿಸಿದಾಗ, ಸುಗ್ರೀವಾಜ್ಞೆಗೆ 6 ತಿಂಗಳು ಚಾಲ್ತಿಯಲ್ಲಿರುತ್ತದೆ. ಸಂಸತ್ ಚಳಿಗಾಲದ ಅಧಿವೇಶನವೂ ಸದ್ಯದಲ್ಲೇ ನಡೆಯಲಿದೆ. ಹೀಗಾಗಿ, ಇದರಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ನ್ಯಾಯಪೀಠ ಹೇಳಿತು.

2018: ಬೆಂಗಳೂರು: ಬಾಲಿವುಡ್ಬೆಡಗಿ ದೀಪಿಕಾ ಪಡುಕೋಣೆ ಮದುವೆ ಕಾರ್ಯಗಳಿಗೆ ಚಾಲನೆ ಸಿಕ್ಕಿತು. ದೀಪಿಕಾ ಮತ್ತು ಕುಟುಂಬದವರು ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಸಂಪ್ರದಾಯದಂತೆ ನಂದಿ ಪೂಜೆ ಮಾಡುವ ಮೂಲಕ ವಿವಾಹ ಕಾರ್ಯವನ್ನು ಆರಂಭಿಸಿದರುಸಭ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ ವಿಶೇಷ ವಿನ್ಯಾಸದ ಉಡುಪನ್ನು ಧರಿಸಿ ಪೂಜೆಯಲ್ಲಿ ಭಾಗಿಯಾದ ದೀಪಿಕಾ, ತಮ್ಮ ಇನ್ಸ್ಟಾಗ್ರಾಂನಲ್ಲಿ ಪೂಜೆ ಮಾಡುತ್ತಿರುವ ಫೋಟೋ ಹಾಗೂ ಕುಟುಂಬದವರ ಜೊತೆಯಿರುವ ಫೋಟೋವನ್ನು  ಪೋಸ್ಟ್ ಮಾಡಿದರು. ದೀಪಿಕಾ ಹಾಗೂ ರಣವೀರ್ಸಿಂಗ್ಮದುವೆಯ 10 ದಿನದ ಮೊದಲು ದೀಪಿಕಾ ಅವರ ತಾಯಿ ಉಜ್ಜಲಾ ಪಡುಕೋಣೆ ಇಬ್ಬರಿಗಾಗಿ ನಂದಿ ಪೂಜಾ ಕಾರ್ಯವನ್ನು ಹಮ್ಮಿಕೊಂಡಿದ್ದರು. ರಣವೀರ್ಹಾಗೂ ದೀಪಿಕಾ ತಿಂಗಳು 14 ಹಾಗೂ 15ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಇಟಲಿಯ ಕೋಮೋ ಸಿಟಿಯಲ್ಲಿ ಮದುವೆ ನಡೆಯಲಿದೆ. ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಯಿತು.


2018: ಉತ್ತಾನ್‌/ಲಕ್ನೋ: ದಿನ ಕಳೆದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ  ಮೇಲೆ ಒತ್ತಡ ಹೆಚ್ಚಾಗತೊಡಗಿತು. ನಡುವೆ ಅಯೋಧ್ಯೆಯಲ್ಲಿ  ಶ್ರೀರಾಮನ ಬೃಹತ್ಪ್ರತಿಮೆ ನಿರ್ಮಾಣಕ್ಕೂ ತಯಾರಿ ನಡೆಯಿತು. ಸುಪ್ರೀಂ ಕೋರ್ಟ್ನಲ್ಲಿ ರಾಮಮಂದಿರ ಇರುವ ಜಮೀನಿನ ಮಾಲಕತ್ವ ಯಾರಿಗೆ ಸೇರಬೇಕು ಎಂಬ ಬಗ್ಗೆ ಶೀಘ್ರವೇ ಇತ್ಯರ್ಥವಾಗದೇ ಇರುವುದು ಹಿಂದೂಗಳಿಗೆ ಅವಮಾನದ ವಿಚಾರ. ಅಗತ್ಯಬಿದ್ದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 1992ರಲ್ಲಿ ನಡೆಸಿದ ಮಾದರಿಯಲ್ಲೇ ದೇಶವ್ಯಾಪಿ ಆಂದೋಲನ ನಡೆಸಲಿದೆ ಎಂದು ಸಂಘಟನೆಯ ಸರ ಕಾರ್ಯವಾಹ ಭಯ್ನಾಜಿ ಜೋಶಿ ಮುಂಬಯಿ ಹೊರ ವಲಯದ ಉತ್ತಾನ್ನಲ್ಲಿ ತಿಳಿಸಿದರು. ಮೂರು ದಿನಗಳ ಆರೆಸ್ಸೆಸ್ರಾಷ್ಟ್ರೀಯ ಕಾರ್ಯ ಕಾರಿಣಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಯ್ನಾಜಿ ಜೋಶಿ, ಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರದ ಮೇಲೆ ನಾವು ಒತ್ತಡ ಹೇರುತ್ತಿಲ್ಲ. .29ರಂದು ಸುಪ್ರೀಂ ಕೋರ್ಟ್ನಲ್ಲಿ ಭೂವಿವಾದದ ವಿಚಾರಣೆ ನಡೆಯಲಿದೆ ಎಂದು ಹೇಳಿದಾಗ ಸಂತೋಷ ವಾಗಿತ್ತು. ಆದರೆ ಅದನ್ನು ಜನವರಿಗೆ ಮುಂದೂಡಿ ರುವುದು ಬಹಳ ನೋವು ತಂದಿದೆ ಎಂದರು. ಸುಪ್ರೀಂ ಕೋರ್ಟ್ಬಗ್ಗೆ ಗೌರವವಿದೆ. ಹಿಂದೂಗಳ ಭಾವನೆ ಗೌರವಿಸಬೇಕೆನ್ನುವುದು ನಮ್ಮ ಮನವಿ. ಈಗಾಗಲೇ ದೀರ್ಘಸಮಯ ಕಳೆದು ಹೋಗಿದೆ. ಮಂದಿರದ ವಿಚಾರಣೆ ನಮ್ಮ ಆದ್ಯತೆಯಲ್ಲ ಎಂದು ನ್ಯಾಯಾಲಯ ಹೇಳಿರುವುದು ಹಿಂದೂಗಳಿಗೆ ಅವಮಾನ ಮಾಡಿದಂತೆ ಎಂದು ಜೋಶಿ ಪ್ರತಿಪಾದಿಸಿದರು.


2018: ರಾವಲ್ಪಿಂಡಿ: 'ತಾಲಿಬಾನ್ ಗಾಡ್ಫಾದರ್‌' ಎಂದೇ ಕುಖ್ಯಾತನಾಗಿದ್ದ, ಪಾಕಿಸ್ತಾನದ ಧಾರ್ಮಿಕ-ರಾಜಕೀಯ ಮುಖಂಡ ಮೌಲಾನಾ ಸಮಿ ಉಲ್ಹಕ್ನನ್ನು ಕಗ್ಗೊಲೆ ಮಾಡಲಾಯಿತು.  ರಾವಲ್ಪಿಂಡಿಯ ನಿವಾಸದಲ್ಲಿ ಕೊಠಡಿಯಲ್ಲಿ ಮಲಗಿದ್ದ ಮೌಲಾನಾನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು.  ಪುತ್ರ ಹಮೀದುಲ್ಹಕ್ ವಿಷಯ ಖಚಿತಪಡಿಸಿದರು. ಕಾರು ಚಾಲಕ ಮನೆಯಿಂದ ಹೊರಗೆ ಹೋಗಿದ್ದಾಗ ಘಟನೆ ನಡೆಯಿತು. ಆತ ಮನೆಗೆ ಹಿಂದಿರುಗುವ ವೇಳಗೆ ಮೌಲಾನಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಪುತ್ರ ಮಾಹಿತಿ ನೀಡಿದರು. ಮೌಲಾನಾ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ. ಉಗ್ರರು ಈತನ ಮಾತನ್ನು ಕಟ್ಟಾಜ್ಞೆಯೆಂಬಂತೆ ಪಾಲಿಸುತ್ತಿದ್ದರು.


2018: ನವದೆಹಲಿ:  ಕ್ರಿಮಿನಲ್ಪ್ರಕರಣಗಳಲ್ಲಿ ದೋಷಿಯಾದ ರಾಜಕಾರಣಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿರ್ಸದಂತೆ ಅಜೀವ ನಿಷೇಧ ಹೇರುವ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ಹೇಳಿತು. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ಮುಖ್ಯ ನ್ಯಾಯಮೂರ್ತಿ ರಂಜನ್ಗೊಗೋಯ್ನೇತೃತ್ವದ ತ್ರಿ ಸದಸ್ಯ ನ್ಯಾಯಪೀಠ, ವಿಚಾರಣೆಯನ್ನು ಡಿ.4ಕ್ಕೆ ನಿಗದಿಪಡಿಸಿತು.  ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವ ಸರಕಾರಿ ನೌಕರರಿಗೆ ಶಾಶ್ವತವಾಗಿ ಸೇವೆಯಿಂದ ಕಿತ್ತುಹಾಕಲಾಗುತ್ತದೆ. ಆದರೆ ಕಳಂಕಿತ ರಾಜಕಾರಣಿಗಳ ವಿಷಯದಲ್ಲಿ ಆರು ವರ್ಷದವರೆಗೆ ಮಾತ್ರ ಚುನಾವಣೆ ಸ್ಪರ್ಧೆಗೆ ನಿಷೇಧವಿದೆ. ಸರಕಾರಿ ನೌಕರರಿಗೆ ಇರುವ ನಿಯಮವನ್ನು ರಾಜಕಾರಣಿಗಳ ವಿಷಯದಲ್ಲೂ ಅಳವಡಿಸುವಂತೆ ಉಪಾಧ್ಯಾಯ ಕೋರಿದರು.
2008: ಹದಿನೆಂಟು ವರ್ಷಗಳಿಂದ ಭಾರತ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದರು. ತಮ್ಮ ನೆಚ್ಚಿನ ಅಂಗಳ ಎನಿಸಿದ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಈದಿನ ಕುಂಬ್ಳೆ ಈ ನಿರ್ಧಾರ ಪ್ರಕಟಿಸಿದರು. ಡ್ರಾದಲ್ಲಿ ಅಂತ್ಯಗೊಂಡ ಈ ಪಂದ್ಯದಲ್ಲಿ ಗಾಯಗೊಂಡಿದ್ದರೂ ಬೌಲಿಂಗ್ ಮಾಡಿದ ಅವರು ಮೂರು ವಿಕೆಟ್ ಪಡೆದರು. 1990ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರಿನಲ್ಲಿ ಪದಾರ್ಪಣೆ ಮಾಡಿದ್ದ ಕುಂಬ್ಳೆ ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ (619). `ಟಾಪ್ ಸ್ಪಿನ್' ಖ್ಯಾತಿಯ ಕುಂಬ್ಳೆ ಆಡಿರುವ 132 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 29.65 ಸರಾಸರಿಯಲ್ಲಿ ಒಟ್ಟು 619 ಹೊಂದಿದ್ದಾರೆ. 1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಾಕ್ ವಿರುದ್ಧದ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸಿನಲ್ಲಿ ಎಲ್ಲ ಹತ್ತು ವಿಕೆಟ್ ಪಡೆದು
ವಿಶ್ವದಾಖಲೆ ಸರಿಗಟ್ಟಿದ್ದು ಕುಂಬ್ಳೆ ಅವರ ಕ್ರಿಕೆಟ್ ಜೀವನದ ಅವಿಸ್ಮರಣೀಯ ಕ್ಷಣ.

2008: ಪುಣೆ- ಮುಂಬೈ ಎಕ್ಸ್ ಪ್ರೆಸ್ಸಿನ ಬಾಳೆವಾಡಿಯ ಶಿವಛತ್ರಪತಿ ಕ್ರೀಡಾನಗರದ ಒಳಾಂಗಣ ಬ್ಯಾಡ್ಮಿಂಟನ್ ಅಂಕಣದಲ್ಲಿ ಆಕರ್ಷಕ ಆಟದ ಪ್ರದರ್ಶನ ತೋರಿದ ಸೈನಾ ನೆಹ್ವಾಲ್ `ಯೋನೆಕ್ಸ್-ಸನ್ ರೈಸ್ ವಿಶ್ವ ಜೂನಿಯರ್' ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ಸಿಂಗಲ್ಸಿನ ಫೈನಲ್ ಪಂದ್ಯದಲ್ಲಿ ಅವರು 21-9, 21-18ರಲ್ಲಿ ಜಪಾನಿನ ಸಾಟೊ ಸಯಾಕಾ ಅವರನ್ನು ಸೋಲಿಸಿದರು.

2008: ಮಾವೋವಾದಿಗಳು ಹೆಚ್ಚಿರುವ ಪಶ್ಚಿಮ ಬಂಗಾಳದ ಪಶ್ವಿಮ ಮಿಡ್ನಾಪುರ ಜಿಲ್ಲೆಯ ಬರೋವಾ ಬಳಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಮತ್ತು ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರ ಬೆಂಗಾವಲು ಪಡೆ ತೆರಳಿದ ಕೆಲ ನಿಮಿಷಗಳಲ್ಲೇ ನೆಲಬಾಂಬ್ ಸ್ಫೋಟಗೊಂಡು, ಇಬ್ಬರೂ ಮುಖಂಡರು ಕೂದಲೆಳೆ ಅಂತರದಲ್ಲಿಪಾರಾದರು. ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡರು. ಬುದ್ಧದೇವ, ಪಾಸ್ವಾನ್, ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ಮತ್ತು ಉದ್ಯಮಿ ಸಜ್ಜನ್ ಜಿಂದಾಲ್ ಅವರು ಜಿಂದಾಲ್ ಸ್ಟೀಲ್ ವರ್ಕ್ಸ್ ಪ್ಲಾಂಟಿನ ಶಂಕುಸ್ಥಾಪನೆ ನೆರವೇರಿಸಿ ಹಿಂತಿರುಗುತ್ತಿದ್ದಾಗ ಸಾಲ್ಬಾನಿಯಿಂದ 17 ಕಿ.ಮೀ. ದೂರದ ಬರೋವಾದಲ್ಲಿ `ದೂರ ನಿಯಂತ್ರಿತ ನೆಲಬಾಂಬ್' ಸ್ಫೋಟಗೊಂಡಿತು.

2007: ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಚ್ ಐ ವಿ ಸೋಂಕು ಬಾಧಿತೆ ಮತ್ತು ಸಾಮಾಜಿಕ ಕಾರ್ಯಕರ್ತೆ ವೀಣಾಧರಿ (54) ಈದಿನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರು ಸಮೀಪದ ಮಂಜೇಶ್ವರ ನಿವಾಸಿಯಾದ ವೀಣಾಧರಿ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಎಚ್ ಐ ವಿ ಸೋಂಕಿನಿಂದ ಬಳಲುತ್ತಿದ್ದ ಅವರು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದರು. ಎಚ್ ಐ ವಿ ಸೋಂಕು ಮತ್ತು ಏಡ್ಸ್ ನಿಂದ ಬಳಲುತ್ತಿದ್ದವರಿಗೆ ನೆಮ್ಮದಿಯಿಂದ ಜೀವನ ನಡೆಸುವಂತೆ ಧೈರ್ಯ ಹೇಳುತ್ತಿದ್ದರು. ಖಾಸಗಿ ಸಂಸ್ಥೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ತಮಗೆ ಎಚ್ ಐ ವಿ ಸೋಂಕಿದೆ ಎಂದು ಯಾವತ್ತೂ ಧೃತಿಗೆಟ್ಟವರಲ್ಲ. ಬೆಂಗಳೂರಿನ ಜೆ.ಸಿ.ರಸ್ತೆ ಬಳಿಯಿರುವ ಕಚೇರಿಯೊಂದರಲ್ಲಿ ಎಚ್ ಐ ವಿ ಸೋಂಕು ಬಾಧಿತ ಮತ್ತು ಏಡ್ಸ್ ಕಾಯಿಲೆ ಪೀಡಿತರಿಗಾಗಿ ಅವರು ಪ್ರತಿ ವಾರ ಸಲಹಾ ಶಿಬಿರ ನಡೆಸುತ್ತಿದ್ದರು. ಕರಾವಳಿ ಎಚ್ ಐವಿ ಸೋಂಕು ಬಾಧಿತ ಮಹಿಳಾ ಮತ್ತು ಮಕ್ಕಳ ಜಾಲ ಸಂಘವನ್ನು ಸ್ಥಾಪಿಸಿದ್ದ ವೀಣಾಧರಿ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿಗಳನ್ನು ಪಡೆದಿದ್ದರು. ಬ್ಯಾಂಕ್ ಉದ್ಯೋಗಿಯಾದ ಪತಿಯಿಂದ ವೀಣಾಧರಿ ಅವರಿಗೆ ಎಚ್ ಐ ವಿ ಸೋಂಕು ತಗುಲಿತು. ಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಎಚ್ ಐ ವಿ ಸೋಂಕು ಸೇರಿದಂತೆ ಬೇರೆ ಕಾಯಿಲೆಗಳು ಇರುವುದು ಬೆಳಕಿಗೆ ಬಂತು. ನಂತರ ಪತಿಯನ್ನು ತೊರೆದ ವೀಣಾ ಮಂಗಳೂರಿನಲ್ಲಿ ನೆಲೆಸಿದರು. ಎಚ್ ಐ ವಿ ಸೋಂಕಿನಿಂದ ಬಾಧಿತರಾಗಿದ್ದಾರೆ ಎಂದು ತಿಳಿದ ನಂತರ ಅವರನ್ನು ತಂದೆ ತಾಯಿ ಸಹ ದೂರವಿರಿಸಿದ್ದರು.

2007: ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ಸಂದರ್ಭದಲ್ಲಿ ನಿಯಮದಂತೆ ಶ್ರೀಕೃಷ್ಣನ ಪೂಜೆ ಮಾಡುವಂತಿಲ್ಲ. ಆದರೆ ಪುತ್ತಿಗೆ ಪರ್ಯಾಯ ಸಂದರ್ಭದಲ್ಲಿ ಕೃಷ್ಣಮಠದ ಆಡಳಿತ ಜವಾಬ್ದಾರಿಯನ್ನು ಸುಗುಣೇಂದ್ರ ತೀರ್ಥರಿಗೆ ನೀಡಬಹುದು ಎಂದು ಉಡುಪಿಯಲ್ಲಿ ಜರುಗಿದ ಅಷ್ಟ ಮಠಾಧೀಶರ ಸಭೆ ನಿರ್ಣಯಿಸಿತು. ಆದರೆ ಈ ನಿರ್ಣಯವನ್ನು ಈ ತಿಂಗಳ 28ರ ಸಭೆಯ ಬಳಿಕವೇ ಜಾರಿಗೆ ತರಲು ನಿರ್ಧರಿಸಲಾಯಿತು. ಅಷ್ಟ ಮಠಾಧೀಶರಾದ ಪರ್ಯಾಯ ಕೃಷ್ಣಾಪುರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಕಾಣಿಯೂರು ಹಾಗೂ ಸೋದೆ ಸ್ವಾಮೀಜಿಗಳು ನಡೆಸಿದ ಸಭೆಯ ಕಾಲಕ್ಕೆ ಈ ನಿರ್ಧಾರ ತೆಗೆದು ಕೊಳ್ಳಲಾಯಿತು. ಆದರೆ ಅದಮಾರು ಮಠಾಧೀಶರು ಮತ್ತು ಪುತ್ರಿಗೆ ಮಠಾಧೀಶರ ಅನುಪಸ್ಥಿತಿಯಲ್ಲಿ ಈ ಸಭೆ ನಡೆಯಿತು.

2007: ಮನೆಯ ತಾರಸಿಯ ಮೇಲೆ ವಿದ್ಯುತ್ ಘಟಕವನ್ನು ಸ್ಥಾಪಿಸಿ ಮನೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸಿಕೊಳ್ಳಬಹುದಾದ ಗಾಳಿ ಮತ್ತು ಸೌರಶಕ್ತಿಗಳನ್ನು ಜೊತೆಯಾಗಿ ಬಳಸುವ ವಿದ್ಯುತ್ ಉತ್ಪಾದನಾ ಘಟಕವನ್ನು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಕ್ರೆಡಲ್) ರೂಪಿಸಿರುವುದಾಗಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಡಾ. ಎಚ್. ನಾಗನಗೌಡ ಮೈಸೂರಿನಲ್ಲಿ ಪ್ರಕಟಿಸಿದರು. ರಾಜ್ಯದಲ್ಲಿ ಈಗಾಗಲೇ ಸುಮಾರು 21 ಮನೆಗಳಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು ಎಲ್ಲ ಕಡೆ ಅತ್ಯುತ್ತಮ ಕಾರ್ಯ ನಿರ್ವಹಣೆ ಇದೆ ಎಂದು ಅವರು ಹೇಳಿದರು. ಎರಡು ಕಡೆ ಬೀದಿ ದೀಪ ಹಾಗೂ ಒಂದು ಕಡೆ ನಾಡದೋಣಿ ಓಡಿಸಲು ಈ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. 550 ವಾಟ್ ಸಾಮರ್ಥ್ಯದ ಘಟಕವನ್ನು ಮನೆಯ ಮೇಲೆ ಸ್ಥಾಪಿಸಿಕೊಂಡರೆ 8 ದೀಪಗಳನ್ನು ನಿರಂತರವಾಗಿ 5 ಗಂಟೆಗಳ ಕಾಲ ಉರಿಸಬಹುದು. ಜೊತೆಗೆ ಒಂದು ಟಿವಿಯನ್ನು 6 ಗಂಟೆಗಳ ಕಾಲ ಬಳಸಬಹುದು. ಜೊತೆಗೆ ಟೇಪ್ ರೆಕಾರ್ಡರ್, ರೇಡಿಯೋ, ಫ್ಯಾನ್, ಫ್ರಿಜ್ಜುಗಳಿಗೂ ಕೂಡ ಈ ವಿದ್ಯುತ್ ಬಳಸಬಹುದು. ಒಟ್ಟಾರೆಯಾಗಿ ಮನೆಗೆ ಬೇಕಾಗುವಷ್ಟು ವಿದ್ಯುತ್ತನ್ನು ಇದರಿಂದ ಪಡೆಯಬಹುದು. ವಿದ್ಯುತ್ ಖೋತಾ, ವೋಲ್ಟೇಜ್ ಸಮಸ್ಯೆ ಮುಂತಾದ ತೊಂದರೆಗಳು ಇಲ್ಲ. 550 ವಾಟ್ ಸಾಮರ್ಥ್ಯದ ಈ ಗಾಳಿ ಮತ್ತು ಸೌರಶಕ್ತಿಗಳನ್ನು ಜೊತೆ ಜೊತೆಯಾಗಿ ಬಳಸುವ ವಿದ್ಯುತ್ ಘಟಕವನ್ನು ಸ್ಥಾಪಿಸಲು 95 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ವೈಯಕ್ತಿಕ ಉಪಯೋಗ, ಕೈಗಾರಿಕೆಗಳು, ಸಂಶೋಧನೆ ಮತ್ತು ಅಬಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾರ್ವಜನಿಕ ಉಪಯೋಗ, ಕೇಂದ್ರ, ರಾಜ್ಯ ಸರ್ಕಾರಿ ಕಚೇರಿಗಳಿಗಾದರೆ ಶೇ 75ರಷ್ಟು ಸಬ್ಸಿಡಿ, ಅಲ್ಲದೆ ಅತ್ಯಂತ ಕುಗ್ರಾಮಗಳಿಗಾದರೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬುದು ನಾಗನಗೌಡ ವಿವರಣೆ. ಈ ಘಟಕ ಸ್ಥಾಪಿಸಿಕೊಳ್ಳಬಯಸಿದರೆ, ಕ್ರೆಡಲ್ ಸಂಸ್ಥೆ ನಿಮ್ಮ ಮನೆಯ ಜಾಗವನ್ನು ನೋಡಿ ಪರಿಶೀಲಿಸುತ್ತದೆ. ಗಾಳಿ ಯಂತ್ರವನ್ನು ಭೂಮಿಯ ಮಟ್ಟಕ್ಕಿಂತ ಕನಿಷ್ಠ 18 ಅಡಿ ಎತ್ತರದಲ್ಲಿ ಇಡಬೇಕು. ಘಟಕದ ನೂರು ಮೀಟರ್ ವ್ಯಾಪ್ತಿಯೊಳಗೆ ಎತ್ತರವಾದ ಮರಗಳು, ಕಟ್ಟಡಗಳಂತಹ ಅಡೆತಡೆ ಇರಬಾರದು. ಗಾಳಿ ಯಾವ ದಿಕ್ಕಿನಲ್ಲಿ ಯಾವ ವೇಗದಲ್ಲಿ ತಿರುಗುತ್ತದೆ ಎನ್ನುವುದನ್ನು ನೋಡಿಕೊಂಡು ಘಟಕ ಸ್ಥಾಪಿಸಲಾಗುತ್ತದೆ. ಗಾಳಿ ಮತ್ತು ಸೂರ್ಯ ಇರುವವರೆಗೂ ವಿದ್ಯುತ್ ಉತ್ಪಾದನೆ ಸಾಧ್ಯ. ಚಲಿಸುವ ಭಾಗಗಳು ಕಡಿಮೆ ಇರುವುದರಿಂದ ನಿರ್ವಹಣೆ ವೆಚ್ಚ ಕಡಿಮೆ. ಸುಲಭವಾಗಿ ನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸ್ಥಾವರಕ್ಕೆ 2 ವರ್ಷಗಳ ಖಾತರಿ ಇದೆ. ಸೋಲಾರ್ ಪಿವಿ ಮಾಡ್ಯೂಲುಗಳಿವೆ 10 ವರ್ಷದ ಗ್ಯಾರಂಟಿ. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದ್ದು ವಿದ್ಯುತ್ ಬಿಲ್ ಪಾವತಿ ಮಾಡುವ ಅಗತ್ಯವೇ ಇಲ್ಲ. ಇದು ಪರಿಸರ ಸ್ನೇಹಿ ಹಾಗೂ ಶುದ್ಧ ಇಂಧನ ಮೂಲ. ದೃಢವಾದ ವೋಲ್ಟೇಜ್ ಮತ್ತು ಪ್ರೀಕ್ವೆನ್ಸಿ ಹೊಂದಿರುವ ವಿದ್ಯುತ್ ಉತ್ಪಾದನೆ ಇರುವುದರಿಂದ ವಿದ್ಯುತ್ ಅಡೆತಡೆಯ ಪ್ರಶ್ನೆ ಇಲ್ಲ. ಆಸಕ್ತರು ಡಾ.ನಾಗನಗೌಡ ಅವರನ್ನು 9845787698 ಮೂಲಕ ಸಂಪರ್ಕಿಸಬಹುದು.

2007: ಸ್ವಿಟ್ಜರ್ಲೆಂಡಿನ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರು ತಮ್ಮ ಟೆನಿಸ್ ಜೀವನಕ್ಕೆ ಜ್ಯೂರಿಸ್ಸಿನಲ್ಲಿ ವಿದಾಯ ಹೇಳಿದರು. ವಿಂಬಲ್ಡನ್ ಟೂರ್ನಿಯ ವೇಳೆಯಲ್ಲಿ ತಾನು ಉದ್ದೀಪನ ಮದ್ದು ಕೊಕೇನ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಸಂಗತಿಯನ್ನೂ ಅವರು ಇದೇ ವೇಳೆ ಬಹಿರಂಗಪಡಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದರು. ಆದರೆ ತಾನು ಯಾವುದೇ ಉದ್ದೀಪನ ಮದ್ದು ಸೇವಿಸಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಹಿಂಗಿಸ್ ವೃತ್ತಿಪರ ಟೆನಿಸಿನಿಂದ ನಿವೃತ್ತಿ ಹೊಂದುತ್ತಿರುವುದು ಇದು ಎರಡನೇ ಬಾರಿ. ಐದು ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡ ಅವರು 2003ರಲ್ಲಿ ಮೊದಲ ಬಾರಿ ಟೆನಿಸಿಗೆ ನಿವೃತ್ತಿ ಘೋಷಿಸಿದ್ದರು. ಪಾದದ ಗಾಯದಿಂದ ಬಳಲಿದ ಅವರು ಈ ನಿರ್ಧಾರ ಕೈಗೊಂಡಿದ್ದರು. 2006 ರಲ್ಲಿ ಮತ್ತೆ ಟೆನಿಸ್ ಕಣಕ್ಕೆ ಮರಳಿದರೂ ಅವರಿಗೆ ಹಳೆಯ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮೂಲಕ ತಮ್ಮ ಪುನರಾಗಮವನ್ನು ಭರ್ಜರಿಯಾಗಿಸಿದ್ದರೂ ಅವರು ಮತ್ತೆ ಗಾಯದ ಸಮಸ್ಯೆ ಎದುರಿಸಬೇಕಾಯಿತು.

2007: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ವಿರೋಧಿಸುತ್ತಿರುವ ದೇಶದ ಸಂಸದರನ್ನು `ರುಂಡವಿಲ್ಲದ ಕೋಳಿಗಳು' ಎಂದು ಟೀಕಿಸಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ರೊನೆನ್ ಸೇನ್ ರಾಜ್ಯಸಭೆಯ ಉಪ ಸಭಾಪತಿ ಕೆ. ರೆಹಮಾನ್ ನೇತೃತ್ವದ ಹಕ್ಕುಬಾಧ್ಯತಾ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚನೆ ಮಾಡಿದರು. ಇಂತಹ ಹೇಳಿಕೆ ನೀಡುವ ಮೂಲಕ ಸೇನ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದರು, ತತ್ ಕ್ಷಣವೇ ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಮತ್ತು ಸಂಸತ್ತಿನಿಂದ ಛೀಮಾರಿ ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನ್ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದರು.

2006: ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆ ಸಂಬಂಧ ನಡೆದ ಸುದೀರ್ಘ ಕಾನೂನು ಸಮರದಲ್ಲಿ ನೈಸ್ ಕಂಪೆನಿ ವಿಜಯ ಗಳಿಸಿತು. ನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣ, ಎಸ್.ಬಿ. ಸಿನ್ಹ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಮರುಪರಿಶೀಲನೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ತನ್ಮೂಲಕ ಹೈಕೋರ್ಟ್ ತೀರ್ಪನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಇದರಿಂದಾಗಿ ಬೆಂಗಳೂರು- ಮೈಸೂರು ನಡುವಣ 111 ಕಿ.ಮೀ. ಉದ್ದದ ಎಕ್ಸ್ಪ್ರೆಸ್ ಮಾರ್ಗ ನಿರ್ಮಾಣ ಯೋಜನೆಗೆ ಇದ್ದ ಕಾನೂನು ಅಡಚಣೆ ನಿವಾರಣೆ ಗೊಂಡಂತಾಯಿತು.

2006: ಡಾ. ಸೀ. ಹೊಸಬೆಟ್ಟು ಎಂದೇ ಖ್ಯಾತರಾಗಿದ್ದ ವಾಗ್ಮಿ, ಚಿಂತಕ, ಕವಿ, ಅಂಕಣಕಾರ ಡಾ. ಸೀತಾರಾಮಾಚಾರ್ಯ (74) ಸುರತ್ಕಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಸೀತಾರಾಮಾಚಾರ್ಯ ಅದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

2005: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಧುರೀಣ ಗುಲಾಂ ನಬಿ ಆಜಾದ್ ಪ್ರಮಾಣ ವಚನ ಸ್ವೀಕರಿಸಿದರು.

1999: ಭಾರತೀಯ ಪೌರತ್ವದಿಂದ ಸೋನಿಯಾ ಗಾಂಧಿ ಹೆಸರನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನವದೆಹಲಿಯ ಹೈಕೋರ್ಟ್ ತಳ್ಳಿಹಾಕಿತು.

1975: ಸಾಹಿತಿ ಚಂದ್ರಕಲಾ ಎಸ್.ಎನ್. ಜನನ.

1965: ಭಾರತದ ಚಿತ್ರನಟ ಶಾರುಖ್ ಖಾನ್ ಜನ್ಮದಿನ.

1963: ದಕ್ಷಿಣ ವಿಯೆಟ್ನಾಂ ಅಧ್ಯಕ್ಷ ನೊ ಡಿಹ್ನ್ ಡೀಮ್ ಅವರನ್ನು ಸೇನಾ ದಂಗೆಯೊಂದರಲ್ಲಿ ಕೊಲೆಗೈಯಲಾಯಿತು.

1955: ಸಾಹಿತಿ ಓಂಕಾರಯ್ಯ ತವನಿಧಿ ಜನನ.

1951: ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆ ಅವರು ಶರಣಪ್ಪ ದಂಡೆ- ಬಂಡಮ್ಮ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ ಜನಿಸಿದರು.

1950: ಐರಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಅವರು ಹೆರ್ಟ್ ಫೋರ್ಡ್ ಶೈರಿನ ಅಯೊಟ್ ಸೇಂಟ್ ಲಾರೆನ್ಸಿನಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತರಾದರು.

1930: ಡ್ಯುಪಾಂಟ್ ಕಂಪೆನಿಯು ಮೊತ್ತ ಮೊದಲ ಸಿಂಥೆಟಿಕ್ ರಬ್ಬರ್ ತಯಾರಿಯನ್ನು ಪ್ರಕಟಿಸಿತು. ಕಂಪೆನಿಯು ಅದನ್ನು `ಡ್ಯುಪ್ರೇನ್' ಎಂದು ಹೆಸರಿಸಿತು. ಇದೇ ದಿನ ಹೈಲೆ ಸೆಲೆಸೀ ಇಥಿಯೋಪಿಯಾದ ಚಕ್ರವರ್ತಿಯಾದರು.

1917: ಪ್ಯಾಲೆಸ್ಟೈನಿನ ಯಹೂದ್ಯರಿಗೆ `ರಾಷ್ಟ್ರೀಯ ನೆಲೆ'ಗೆ ಬೆಂಬಲ ವ್ಯಕ್ತಪಡಿಸುವ `ಬಾಲ್ ಫೋರ್ ಘೋಷಣೆ'ಗೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ ಫೋರ್ ಬೆಂಬಲ ವ್ಯಕ್ತಪಡಿಸಿದರು.

1885: ಮೊದಲ ಮರಾಠಿ ಸಂಗೀತ ನಾಟಕಕಾರ ಬಲವಂತ ಪಾಂಡುರಂಗ ಕಿರ್ಲೋಸ್ಕರ್ (ಅಣ್ಣಾಸಾಹೇಬ್) ನಿಧನ.

1871: ಗ್ರೇಟ್ ಬ್ರಿಟನ್ನಿನ ಎಲ್ಲ ಸೆರೆಯಾಳುಗಳ ಛಾಯಾಚಿತ್ರ ತೆಗೆಯಲಾಯಿತು. ಇದರೊಂದಿಗೆ `ರೋಗ್ಸ್ ಗ್ಯಾಲರಿ' ಆರಂಭವಾಯಿತು.

1774: ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಲಾರ್ಡ್ ರಾಬರ್ಟ್ ಕ್ಲೈವ್ ತನ್ನ 49ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸು ನೀಗಿದ. ಭಾರತದ ಕಂಪೆನಿ ವ್ಯವಹಾರದಲ್ಲಿ ್ಲಅವ್ಯವಹಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಕ್ಲೈವ್, ಇದೇ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.

1607: ಹಾರ್ವರ್ಡ್ ಕಾಲೇಜು ಸ್ಥಾಪನೆಗೆ ಮೂಲಕಾರಣನಾದ ಜಾನ್ ಹಾರ್ವರ್ಡ್ (1607-38) ಜನ್ಮದಿನ.

No comments:

Post a Comment