Monday, September 30, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 30

2019: ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದ ಪ್ರಕರಣದ ವಿಚಾರಣೆಯ ಜೊತೆಗೇ ಪುನರಾಂಭಗೊಂಡಿರುವ ಸಂಧಾನ ಮಾತುಕತೆ ಯತ್ನದಲ್ಲಿ ಪ್ರಕರಣದ ಪ್ರಮುಖ ಕಕ್ಷಿದಾರರಲ್ಲಿ ಒಬ್ಬರಾಗಿರುವ ರಾಮಲಲ್ಲಾ ವಿರಾಜಮಾನ್ ಪಾಲ್ಗೊಳ್ಳುವುದಿಲ್ಲ ಎಂದು ರಾಮಲಲ್ಲಾ ಪರ ಹಾಜರಾದ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಅವರು 2019 ಸೆಪ್ಟೆಂಬರ್ 30ರ ಸೋಮವಾರ ಸುಪ್ರಿಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠಕ್ಕೆ ತಿಳಿಸಿದರು. ಮುಸ್ಲಿಂ ಕಕ್ಷಿದಾರರ ಮನವಿ ಮೇರೆಗೆ ಭೂ ವಿವಾದಕ್ಕೆ ಸಂಧಾನದ ಇತ್ಯರ್ಥ ಸಲುವಾಗಿ ನ್ಯಾಯಾಲಯ ಕಲಾಪಕ್ಕೆ ಪರ್ಯಾಯವಾಗಿ ಸಂಧಾನ ಮಾತುಕತೆ ಯತ್ನವನ್ನೂ ನಡೆಸಲು ಸುಪ್ರೀಂಕೋಟ್ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ರಾಮಲಲ್ಲಾ ಪರ ವಕೀಲರು ಸ್ಪಷ್ಟನೆಯನ್ನು ನ್ಯಾಯಾಲಯಕ್ಕೆ ನೀಡಿದರು. ಪರ್ಯಾಯವಾಗಿ ಸಂಧಾನಯತ್ನ ನಡೆದರೂ, ಕೋರ್ಟ್ ವಿಚಾರಣೆಯ ಪ್ರಕ್ರಿಯೆಯಲ್ಲಿ ವಾದ ಮಂಡನೆಗಳು ಅಕ್ಟೋಬರ್ ೧೮ರ ವೇಳೆಗೆ ಮುಗಿಯಬೇಕು ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು. ವಿಚಾರಣೆ ಮತ್ತು ಸಂಧಾನಯತ್ನ ಎರಡೂ ಏಕಕಾಲಕ್ಕೆ ನಡೆಯುತ್ತವೆ ಎಂದು ಪೀಠ ತಿಳಿಸಿತ್ತು. ಅಯೋಧ್ಯೆಯ ವಿವಾದಿತ ಭೂಮಿಯನ್ನು ಪ್ರಕರಣದ ಮೂವರು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ ವಿರಾಜಮಾನ ಅವರಿಗೆ ಸಮಾನವಾಗಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಒಟ್ಟು ೧೪ ಮೇಲ್ಮನವಿಗಳು ಸುಪ್ರೀಂಕೋಟಿಗೆ ಸಲ್ಲಿಕೆಯಾಗಿದ್ದವು. ಕಳೆದ ತಿಂಗಳು ವಿಚಾರಣೆ ಕಾಲದಲ್ಲಿ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರುಭಗವಾನ್ ಶೀರಾಮನ ಜನ್ಮಸ್ಥಾನವು ಸ್ವತಃ ದೇವತೆಯಾಗಿರುವುದರಿಂದ ಅದರ ಮೇಲೆ ಜಂಟಿ ಸ್ವಾಮ್ಯ ಸಾಧ್ಯವಿಲ್ಲಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಜಂಟಿ ಸ್ವಾಮ್ಯದಿಂದ ಹಾನಿಯಾಗುತ್ತದೆ ಮತ್ತು ದೇವತೆಯ ವಿಭಜನೆ ಸಾಧ್ಯವಿಲ್ಲಎಂದು ಅವರು ಹೇಳಿದ್ದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್  2019 ಸೆಪ್ಟೆಂಬರ್ 30ರ ಸೋಮವಾರ ತಿರಸ್ಕರಿಸಿತು. ೭೪ರ ಹರೆಯದ ಚಿದಂಬರಂ ಅವರನ್ನು ಕೇಂದ್ರೀಯ ತನಿಖಾ ದಳವು ೪೦ ದಿನಗಳ ಹಿಂದೆ ರಾಷ್ಟ್ರೀಯ ರಾಜಧಾನಿ ದೆಹಲಿಯ ಅವರ ಜೋರ್ ಬಾಗ್ ನಿವಾಸದಲ್ಲಿ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಸುಮಾರು ೧೪ ದಿನಗಳ ಕಾಲ ಸಿಬಿಐ ವಶದಲ್ಲಿ ತನಿಖೆ ನಡೆಸಿದ ಬಳಿಕ ಅವರನ್ನು ತಿಹಾರ್ ಸೆರೆಮನೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಕಳೆದ ೨೫ ದಿನಗಳಿಂದ ಚಿದಂಬರಂ ಅವರು ತಿಹಾರ್ ಸೆರೆಮನೆಯಲ್ಲಿ ಇದ್ದಾರೆ. ಚಿದಂಬರಂ ಬಿಡುಗಡೆಯ ವಿರುದ್ಧ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ಅವರು ವಿದೇಶಕ್ಕೆ ಹಾರುವ ಅಪಾಯವಿದೆ  ಎಂದು ಹೇಳಿದರು. ಚಿದಂಬರಂ ಅವರು ಗಂಭೀರವಾದ ಅಪರಾಧದಲ್ಲಿ ಆರೋಪಿಯಾಗಿರುವ ಕಾರಣ ಮತ್ತು ಶಿಕ್ಷೆಗೆ ಗುರಿಯಾಗಬಹುದಾದ ಕಾರಣ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಅನಿರ್ದಿಷ್ಟ ಕಾಲ ಬದುಕುವಷ್ಟು ಹಣ ಅವರ ಬಳಿ ಇದೆ ಎಂದು ಮೆಹ್ತ ವಾದಿಸಿದರು. ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ತಮ್ಮ ತೀರ್ಪಿನಲ್ಲಿ ವಾದವನ್ನು ಅಂಗೀಕರಿಸಲಿಲ್ಲ. ’ಚಿದಂಬರಂ ಅವರು ಪರಾರಿಯಾಗಬಹುದಾದ ಅಪಾಯವಿದೆ ಎಂಬುದಕ್ಕೆ ಅಥವಾ ಅವರು ಸಾಕ್ಷ್ಯಾಧಾರದಲ್ಲಿ ಕೈಯಾಡಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆದರೆ ಕಾಂಗ್ರೆಸ್ ನಾಯಕ ಸಂಸತ್ ಸದಸ್ಯರಾಗಿದ್ದು ಪ್ರಭಾವಶಾಲಿಯಾದ ವ್ಯಕ್ತಿಯಾಗಿದ್ದಾರೆಎಂದು ನ್ಯಾಯಮೂರ್ತಿ ಹೇಳಿದರು.‘ತನಿಖೆಯು ಮುಂದುವರೆದ ಹಂತದಲ್ಲಿದೆ. ಹಂತದಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ತಳ್ಳಿಹಾಕಲಾಗದುಎಂದು ನ್ಯಾಯಮೂರ್ತಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್    ಮಾಡಿರಿ)

2019: ಪಾಟ್ನಾ: ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಉಂಟಾದ ಪ್ರವಾಹದ ಮಧ್ಯೆ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿಯೇ ಸಿಕ್ಕಿಹಾಕಿಕೊಂಡ ಘಟನೆ ಘಟಿಸಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ 2019 ಸೆಪ್ಟೆಂಬರ್  30ರ ಸೋಮವಾರ ಅವರನ್ನು ರಕ್ಷಿಸಿದರು. ಸುಶೀಲ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ತಮಗೆ ಬೇಕಾದ ಕೆಲವು ವಸ್ತುಗಳೊಂದಿಗೆ ಎನ್ಡಿಆರ್ಎಫ್ ಸಿಬ್ಬಂದಿ ನೆರವಿನೊಂದಿಗೆ ಜಲಾವೃತಗೊಂಡಿದ್ದ ತಮ್ಮ ಮನೆಯಿಂದ ಪಾರಾಗಿ ಬಂದಿದ್ದಾರೆ ಎಂದು ವರದಿಗಳು ಹೇಳಿದವು. ರಾಜ್ಯದಲ್ಲಿ ನಾಲ್ಕು ದಿನಗಳಿಂದ ಸುರಿದ ಜಡಿಮಳೆಗೆ ಕನಿಷ್ಠ ೨೮ ಜನ ಬಲಿಯಾಗಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಜಡಿಮಳೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

2019: ನವದೆಹಲಿ: ಉತ್ತರ ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ ಸುಮಾರು೭೦ ಮಂದಿ ಪ್ರಯಾಣಿಕರಿದ್ದ ಖಾಸಗಿ ಸುಖಾಸೀನ (ಲಕ್ಷುರಿ) ಬಸ್ಸು  2019 ಸೆಪ್ಟೆಂಬರ್  30ರ ಸೋಮವಾರ ಸಂಜೆ ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದ ಬಳಿಅಂಬಾಜಿ -ದಾಂತ ರಸ್ತೆಯಲ್ಲಿನ ತ್ರಿಶೂಲಿಯಾ ಘಾಟ್ ಬಳಿ ಪಲ್ಟಿ ಹೊಡೆದು ಕಮರಿಗೆ ಉರುಳಿದ ಪರಿಣಾಮವಾಗಿ ಕನಿಷ್ಠ ೨೧ ಮಂದಿ ಸಾವನ್ನಪ್ಪಿ, ಇತರ ೫೦ ಮಂದಿ ಗಾಯಗೊಂಡರು. ಭಾರೀ ಮಳೆಯಿಂದಾಗಿ ಚಾಲಕನಿಗೆ ಬಸ್ಸಿನ ಮೇಲಿನ ನಿಯಂತ್ರಣ ತಪ್ಪಿದ್ದರಿಂದ ದುರಂತ ಘಟಿಸಿದೆ ಎಂದು ಅಧಿಕಾರಿಗಳು ಹೇಳಿದರು. ದುರಂತ ಸ್ಥಳವು ಅಹ್ಮದಾಬಾದಿನಿಂದ ಸುಮಾರು ೧೬೦ ಕಿಮೀ ದೂರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದುರಂತಕ್ಕೆ ದುಃಖ ವ್ಯಕ್ತ ಪಡಿಸಿ ಟ್ವೀಟ್ ಮಾಡಿ ತುರ್ತು ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

2019: ವಾಷಿಂಗ್ಟನ್: ಇತ್ತೀಚೆಗಷ್ಟೇ ಪ್ರತಿಷ್ಠಿತ ಟ್ರಾವೆಲ್ ಬ್ರ್ಯಾಂಡ್ ಥಾಮಸ್ ಕುಕ್ ಕಂಪನಿ ದಿವಾಳಿಯಾದ ಸುದ್ದಿ ಹೊರಬಿದ್ದಿತ್ತು, ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಡಿಮೆ ಬೆಲೆಗೆ ಹೆಸರಾಗಿರುವ ಜನಪ್ರಿಯ ಫ್ಯಾಶನ್ ಬ್ರಾಂಡ್ ಆಗಿರುವಫಾರ್ ಎವರ್ 21” ಕೋರ್ಟ್ ಗೆ ಚಾಪ್ಟರ್ 11 ಪ್ರಕಾರ ದಿವಾಳಿಯಿಂದ ರಕ್ಷಣೆ ಕೋರಿ(ಉದ್ಯಮ ಪುನಶ್ಚೇತನ) ಅರ್ಜಿಯನ್ನು 2019 ಸೆಪ್ಟೆಂಬರ್ 30ರ ಸೋಮವಾರ ಸಲ್ಲಿಸಿತು. ಏನಿದು ಚಾಪ್ಟರ್ 11 ದಿವಾಳಿ ಅರ್ಜಿ: ಅಮೆರಿಕದಲ್ಲಿ ಬ್ಯಾಂಕ್ ರಪ್ಸಿ(ದಿವಾಳಿ) ಕೋಡ್ ಇದೆ. ಕೋರ್ಟ್ ನ್ಯಾಯಸಮ್ಮತವಾಗಿ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ. ಕಾನೂನು ಚಾಪ್ಟರ್ 7(ನ್ಯಾಯಾಲಯದಲ್ಲಿರುವ ದಿವಾಳಿ ಪ್ರಕರಣಗಳಿಗೆ ಸಂಬಂಧಿಸಿದ್ದು), ಚಾಪ್ಟರ್ 11( ಉದ್ಯಮ ಪುನಶ್ಚೇತನ), ಚಾಪ್ಟರ್ 15(ಅಂತಾರಾಷ್ಟ್ರೀಯ ದಿವಾಳಿತನಕ್ಕೆ ಸಂಬಂಧಿಸಿದ್ದು) ಕಾಯ್ದೆ ಚಾಲ್ತಿಯಲ್ಲಿದೆ. 57 ದೇಶಗಳಲ್ಲಿ 800 ಮಳಿಗೆ: ಲಾಸ್ ಏಂಜಲೀಸ್ ಮೂಲದಫಾರ್ ಎವರ್ 21” ಫ್ಯಾಶನ್ ಕಂಪನಿ 178 ಮಳಿಗೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ. ಕಂಪನಿ 57 ದೇಶಗಳಲ್ಲಿ 800 ಮಳಿಗೆಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆಅಮೆರಿಕದಲ್ಲಿರುವ ಫಾರ್ ಎವರ್ 21 ಮಳಿಗೆಗಳ ಮೌಲ್ಯವನ್ನು ಹೆಚ್ಚಿಸಲು ಹೆಚ್ಚು ನಿಗಾ ವಹಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರದೇಶಗಳಲ್ಲಿ ಇರುವ ಕೆಲವು ಮಳಿಗೆಗಳನ್ನು ಮುಚ್ಚಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ವಿವರಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)
.
2019: ನವದೆಹಲಿ:ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫರೂಖ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಎಂಡಿಎಂಕೆ ಮುಖಂಡ ವೈಕೋ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 2019  ಸೆಪ್ಟೆಂಬರ್  30ರ ಸೋಮವಾರ ವಜಾಗೊಳಿಸಿತು. ಫರೂಖ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ(ಪಿಎಸ್ )ಯಡಿ ಬಂಧಿಸಲಾಗಿದೆ. ಹೀಗಾಗಿ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಪೀಠ ವೈಕೋ ಅರ್ಜಿಯನ್ನು ತಿರಸ್ಕರಿಸಿತು.
2019: ನವದೆಹಲಿಭಾರತೀಯ ವಾಯುಪಡೆಯ  ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ರಾಕೇಶ ಕುಮಾರ್ ಸಿಂಗ್ ಭದೌರಿಯಾ (ಆರ್ಕೆಎಸ್ ಭದೌರಿಯಾ 2019 ಸೆಪ್ಟೆಂಬರ್  30ರ ಸೋಮವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅಧಿಕಾರ ಹಸ್ತಾಂತರಿಸಿದರು.ಧನೋವಾ ಅವರು ಈದಿನ (ಸೆಪ್ಟೆಂಬರ್ 30) ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಕೆಎಸ್ ಭದೌರಿಯಾ ಅವರನ್ನು ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ 2019ರ ಸೆಪ್ಟೆಂಬರ್ 19ರಂದು ಘೋಷಣೆ ಮಾಡಿತ್ತು.‘ಸದ್ಯ ವಾಯುಪಡೆಯ ಉಪ ಮುಖ್ಯಸ್ಥರಾಗಿರುವ ಆರ್ಕೆಎಸ್ ಭದೌರಿಯಾ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆಎಂದು ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರರು ಟ್ವೀಟ್ ಮಾಡಿದ್ದರು. ಬೆಂಗಳೂರಿನಲ್ಲಿರುವವಾಯುಪಡೆ ತರಬೇತಿ ಕಮಾಂಡ್ ಮುಖ್ಯಸ್ಥರಾಗಿದ್ದ ಭದೌರಿಯಾ,ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ  ಸಂಬಂಧಿಸಿ ಭಾರತದ ಸಮಾಲೋಚನಾ ತಂಡದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ).

2019: ನವದೆಹಲಿ: ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗೆ ದೀರ್ಘಕಾಲದವರೆಗೆ ಅಪ್ಗ್ರೇಡ್ ಮಾಡದ ಐಫೋನ್ ಬಳಕೆದಾರರು, ಹಾಗೆ ಮಾಡಲು ಇನ್ನೂ ಒಂದು ಕಾರಣವಿದೆ. ನಿಮ್ಮ ಐಒಎಸ್ ಸಾಧನದಲ್ಲಿ ಪ್ರಸ್ತುತ ವಾಟ್ಸಪ್ ಸಕ್ರಿಯವಾಗಿದ್ದರೆ, ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಪ್ರಕಟಣೆಯ  ಪ್ರಕಾರ, ಫೆಬ್ರವರಿ , ೨೦೨೦ ರವರೆಗೆ ಮಾತ್ರ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಆವೃತ್ತಿ .. ಮತ್ತು ಅದಕ್ಕಿಂತ ಹೆಚ್ಚಿನ ಹಳೆಯ ಬಳಕೆದಾರರು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಮರುಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಪ್  ಹೇಳಿದೆ. ಆದರೂ ಅವರು ಫೆಬ್ರವರಿ , ೨೦೨೦ ರವರೆಗೆ ವಾಟ್ಸಪ್  ಬಳಕೆಯನ್ನು ಮುಂದುವರಿಸಲು ಸಾಧ್ಯ ಎಂದು ಸಂಸ್ಥೆ ತಿಳಿಸಿದೆ."ಐಒಎಸ್ ನಲ್ಲಿ, ನೀವು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ" ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.’ ಆದ್ದರಿಂದ ಐಫೋನ್ ಬಳಕೆದಾರರಿಗೆ  ವಾಟ್ಸಪ್ ಬಳಸಲು  ಐಒಎಸ್ ಅಥವಾ ನಂತರದ  ಅವೃತ್ತಿಯ ಅಗತ್ಯವಿದೆ. ಹೀಗಾಗಿ ನಿಮ್ಮ ಫೋನ್ಗೆ ಲಭ್ಯವಿರುವ ಐಒಎಸ್ ಇತ್ತೀಚಿನ ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ" ಎಂದು ವಾಟ್ಸಪ್  ಹೇಳಿದೆ.(ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)