Thursday, January 2, 2020

ಇಂದಿನ ಇತಿಹಾಸ History Today ಜನವರಿ 02

2020: ತುಮಕೂರು:  ತುಮಕೂರು ನಗರದ  ಜೂನಿಯರ್ ಕಾಲೇಜು ಮೈದಾನದಲ್ಲಿ  2020 ಜನವರಿ 02ರ ಗುರುವಾರ ಕೇಂದ್ರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ೩೨ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕರ್ಮಣ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಮಧುಗಿರಿ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯದ ರೈತ ರಂಗಪ್ಪ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೇ ಮಧ್ಯಪ್ರದೇಶದ ರೈತ ಕರಣ್ ದೇವ್ ಸಿಂಗ್, ಬಿಹಾರದ ಗೋಪಾಲ್ ಪ್ರಸಾದ್, ಮಹಾರಾಷ್ಟ್ರದ ನರೇಂದ್ರ ಗೋವಲ್ ಪಾಟೀಲ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ೩೨ ರೈತರು ಪ್ರಶಸ್ತಿ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕೃಷಿ ಕರ್ಮಣ್ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿದ್ದರು. ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್   ಮತ್ತು    ಅದರ  ಮಿತ್ರ ಪಕ್ಷಗಳ ವಿರುದ್ಧ 2020 ಜನವರಿ 02  ಗುರುವಾರ ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರುಹಾಲಿ ಪ್ರತಿಭಟನೆಗಳು ಸಂಸತ್ತಿನ ವಿರುದ್ಧಎಂದು ಟೀಕಿಸಿ, ಕಳೆದ ೭೦ ವರ್ಷಗಳಿಂದ ತನ್ನ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತರಿಸಿ ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಭಟನಕಾರರಿಗೆ ಕರೆ ನೀಡಿದರು. ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು. ‘ಭಾರತದಲ್ಲಿ ಆಶ್ರಯ ಕೋರಿ ಬಂದಿರುವ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಬೆಂಬಲ ನೀಡುವುದು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆಎಂದು ಪ್ರಧಾನಿ ನುಡಿದರು. ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಪಾಕಿಸ್ತಾನದ ಕುಕೃತ್ಯಗಳನ್ನು ವಿಶ್ವಮಟ್ಟದಲ್ಲಿ ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಲು ನಾನು ಬಯಸುತ್ತೇನೆನೀವು ಪ್ರತಿಭಟಿಸಲು ಬಯಸುವಿರಾದರೆ ಕಳೆದ ೭೦ ವರ್ಷಗಳಲ್ಲಿ ಪಾಕಿಸ್ತಾನ ನಡೆಸಿರುವ ಕೃತ್ಯಗಳವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟಿಸಬೇಕು ಎಂದು ನಾನು ಬಯಸುತ್ತೇನೆ, ನಿಮಗೆ ಅಂತಹ ಎದೆಗಾರಿಕೆ ಇರಬೇಕುಎಂದು ಮೋದಿ ನುಡಿದರು. ‘ನೀವು ಘೋಷಣೆಗಳನ್ನು ಕೂಗಲು ಬಯಸುವುದಾದರೆ ಅಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ರೀತಿಯ ವಿರುದ್ಧ ಘೋಷಣೆ ಕೂಗಿ. ನೀವು ರ್ಯಾಲಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದಿಂದ (ಭಾರತಕ್ಕೆ) ಬಂದಿರುವ ದಲಿತರು, ತುಳಿತಕ್ಕೆ ಒಳಗಾದವರ ಪರವಾಗಿ ಸಂಘಟಿಸಿ, ನೀವು ಧರಣಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದ ಕೃತ್ಯಗಳ ವಿರುದ್ಧ ನಡೆಸಿಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ತುಮಕೂರಿನ ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ
ನರೇಂದ್ರ ಮೋದಿ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್ಡಿಒ) ಯುವ ವಿಜ್ಞಾನಿಗಳಿಗೆ ಅತ್ಯಾಧುನಿಕ ಸಂಶೋಧನೆ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಸಲುವಾಗಿ ಐದು ಪ್ರಯೋಗಾಲಯಗಳನ್ನು (ಲ್ಯಾಬೋರೇಟರಿ) ಉದ್ಘಾಟಿಸಿದರು. ಅತ್ಯಂತ ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ರಕ್ಷಣಾ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಹೊಸ ಆವಿಷ್ಕಾಗಳಿಗಾಗಿ ಹೋಡಿಕೆ ಮಾಡುವುದು ಅತಿ ಮುಖ್ಯ, ಸಂಶೋಧನೆಯಲ್ಲಿ ನಮ್ಮ ಯುವಕರು ಹಿಂದೆ ಬೀಳಬಾರದು ಎಂದು ಅವರು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹವು ೨೦೧೯ ಡಿಸೆಂಬರಿನಲ್ಲಿ  ಸತತ ಎರಡನೇ ತಿಂಗಳು ಲಕ್ಷ ಕೋಟಿ ರೂ.ಗಳ ಮಾನದಂಡವನ್ನು ದಾಟಿದೆ
.೦೩ ಲಕ್ಷ ಕೋಟಿ ರೂ.ಸಂಗ್ರಹದೊಂದಿಗೆ, ಸಂಖ್ಯೆಯು ಹೆಚ್ಚಿದ ಬಳಕೆಯ ಹಿನ್ನೆಲೆಯಲ್ಲಿ ವರ್ಷಕ್ಕೆ % ಬೆಳವಣಿಗೆ ಮತ್ತು ಉತ್ತಮ ಅನುಸರಣೆ ಯನ್ನು ದಾಖಲಿಸಿದೆ. ಅದಕ್ಕಿಂತ ಮುಖ್ಯವಾಗಿ, ಸಂಖ್ಯೆಯು  ಆರ್ಥಿಕತೆಯ ಹಿಂದೆ ಕೆಟ್ಟದ್ದಾಗಿರಬಹುದು  ಎಂಬುದಾಗಿ ಸರ್ಕಾರಿ ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಿರುವುದಕ್ಕೆ ಅನುಗುಣವಾಗಿದೆ ಎಂದು ಭಾವಿಸಲಾಯಿತು.   
ಸಂಗ್ರಹವು ಇನ್ನೂ ಉತ್ತಮವಾಗಬಹುದಿತ್ತು ಆದರೆ ಆಮದುಗಳ ಮೇಲೆ ಸಮಗ್ರ ಜಿಎಸ್ಟಿ (ಐಜಿಎಸ್ಟಿ) ಮೂಲಕ ಗಳಿಸಿದ ಆದಾಯದಲ್ಲಿ ೧೦% ಕುಸಿತವಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶೀಯ ವಹಿವಾಟಿನ ಆದಾಯ ಸಂಗ್ರಹವು ೧೬% ನಷ್ಟು ಹೆಚ್ಚಾಗಿದೆ ಎಂದು ವಿಷಯದ ನೇರ ಜ್ಞಾನ ಹೊಂದಿರುವ ಅನಾಮಧೇಯರಾಗಿ ಇರಬಯಸಿದ ಇಬ್ಬರು ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಸಿದರು. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ೨೦೧೯ ಸತತ ಮೂರು ತಿಂಗಳ ಕಾಲ ಜಿಎಸ್ಟಿ ಸಂಗ್ರಹವು ಲಕ್ಷ ಕೋಟಿ ರೂ.ಗಿಂತ ಕಡಿಮೆಯಾದ ನಂತರ ಇದೀಗ ಚೇತರಿಸಿಕೊಂಡಿದೆ. ಸೆಪ್ಟೆಂಬರ್ ಸಂಗ್ರಹವು ೯೧,೯೧೬ ಕೋಟಿ ರೂ., ಇದು ಫೆಬ್ರವರಿ ೨೦೧೮ ನಂತರದ ಅತಿ ಕಡಿಮೆ. ಜಿಎಸ್ಟಿಯಲ್ಲಿ ಚೇತರಿಕೆ, ಇದು ತೆರಿಗೆ ಬಳಕೆಯ ಮೇಲೆ, ಇದು ಸಕಾರಾತ್ಮಕ ಸಂಕೇತವಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಉಳಿದ ತಿಂಗಳುಗಳಲ್ಲಿ ಸುಮಾರು . ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂದು ಸೂಚಿಸುತ್ತದೆ ಎಂದು ಇಬ್ಬರು ಅಧಿಕಾರಿಗಳು ಹೇಳಿದರು(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)


2020: ನವದೆಹಲಿ: ೨೦೧೯ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರಿನಲ್ಲಿ ಕಂಡು ಬಂದಿರುವ ಸೂಚನೆಗಳು ಭಾರತೀಯ ಆರ್ಥಿಕತೆಯಲ್ಲಿ ಒಂದು ರೀತಿಯ ಪುನರುಜ್ಜೀವನವನ್ನು ಸೂಚಿಸುತ್ತವೆ   ಎಂದು  ಆರ್ಥಿಕ ತಜ್ಞರು 2020 ಜನವರಿ 02ರ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಭಾರತೀಯ ಆರ್ಥಿಕತೆಯ ಕೆಟ್ಟ ದಿನಗಳು ಮುಗಿದಿವೆ ಎಂಬ ತೀರ್ಮಾನಕ್ಕೆ  ಬರಲು ಕಾಲ ಪಕ್ವಗೊಂಡಿಲ್ಲ, ಇನ್ನಷ್ಟು ಕಾಲ ಕಾಯುವುದು ಒಳಿತು ಎಂದು ಅವರು ಹೇಳಿದ್ದಾರೆ. ಐಎಚ್ಎಸ್ ಮಾರ್ಕಿಟ್ ಸಂಗ್ರಹಿಸಿದ ನಿಕ್ಕಿ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವು ೨೦೧೯ ಡಿಸೆಂಬರ್ನಲ್ಲಿ ೫೨. ಕ್ಕೆ ಏರಿದ್ದು, ಇದು ೨೦೧೯ ಮೇ ತಿಂಗಳ ನಂತರದ ಗರಿಷ್ಠ ಸೂಚ್ಯಂಕವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಸತತ ಎರಡನೇ ತಿಂಗಳಲ್ಲಿ ಲಕ್ಷ ಕೋಟಿ ರೂ. ದಾಟಿದೆ. ಮಾರುತಿ ಸುಜುಕಿಯಂತಹ ಆಟೋ ಕಂಪೆನಿಗಳ ದೇಶೀಯ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಕ್ಯಾಪೆಕ್ಸ್ ಡೇಟಾಬೇಸ್ ಹೊಸ ಹೂಡಿಕೆ ಪ್ರಕಟಣೆಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದನ್ನು ತೋರಿಸಿವೆ. ಡಿಸೆಂಬರ್ ತ್ರೈಮಾಸಿಕ ಸಕಾರಾತ್ಮಕ ಬೆಳವಣಿಗೆಯು, ಜೂನ್ ೨೦೧೮ ರಿಂದ ಕಂಡು ಬಂದ ಮೊದಲನೆಯ ಸಕಾರಾತ್ಮಕ ಬೆಳವಣಿಗೆಯಾಗಿದ್ದುಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಅಂತಿಮವಾಗಿ ಆರು ತ್ರೈಮಾಸಿಕ ಬೆಳವಣಿಗೆಯ ಕುಸಿತದಿಂದ ಮುರಿಯುವ ಲಕ್ಷಣಗಳು ಇದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿವೆ. ಏನಿದ್ದರೂ ಭಾರತದ ಆರ್ಥಿಕತೆಯ ಕೆಟ್ಟದಿನಗಳು ಮುಕ್ತಾಯವಾಗಿವೆ ಎಂಬ ತೀರ್ಮಾನಕ್ಕೆ ಬರಲು ಇನ್ನಷ್ಟು ಸಮಯ ಕಾಯುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಜಸ್ಥಾನದ ಕೋಟಾದಲ್ಲಿನ ಜೆಕೆ ಲೋನ್ ಆಸ್ಪತ್ರೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪುವುದರೊಂದಿಗೆ ಡಿಸೆಂಬರ್ ಆರಂಭದಿಂದ ಈವರೆಗೆ ಸಾವನ್ನಪ್ಪಿದ ಶಿಶುಗಳ 
ಸಂಖ್ಯೆ  ೧೦೨ಕ್ಕೆ ಏರಿದೆ. ಕಳೆದ ೭೨ ಗಂಟೆಗಳ ಅವಧಿಯಲಿ ೧೧ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು 2020 ಜನವರಿ 02ರ ಗುರುವಾರ  ಮಧ್ಯಪ್ರವೇಶ ಮಾಡಿದರು. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ವರ್ಷ ಶಿಶುಗಳ ಮರಣದ ಸಂಖ್ಯೆ ಖಂಡಿತವಾಗಿ ಹೆಚ್ಚಾಗಿದೆ ಎಂದು ಹೇಳಿದ ಕೇಂದ್ರ ಸಚಿವರು ಆರೋಗ್ಯ ಬಿಕ್ಕಟ್ಟು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಬೆಂಬಲದ ಭರವಸೆ ನೀಡಿದರು. ’ನಾನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಪತ್ರ ಬರೆದು ವಿಷಯದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದೇನೆಎಂದು ಅವರು ಹೇಳಿದರು.  ಡಿಸೆಂಬರ್ ತಿಂಗಳಲ್ಲಿ ಕನಿಷ್ಠ ೧೦೦ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ೨೦೧೮ರಲ್ಲಿ ಸಂಭವಿಸಿದ್ದ ೭೭ ಮಕ್ಕಳ ಸಾವಿನ ಸಂಖ್ಯೆಯನ್ನು ಮೀರಿದೆ. ೨೦೧೯ರ ಕೊನೆಯ ಎರಡು ದಿನಗಳಲ್ಲಿ ಶಿಶುಗಳು ಅಸು ನೀಗಿದ್ದು, ಎಲ್ಲ ಸಾವುಗಳೂ ಜನನ ಕಾಲದಲ್ಲಿನ ಕಡಿಮೆ ತೂಕದ ಕಾರಣ ಸಂಭವಿಸಿದೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುರೇಶ್ ದುಲೇರಾ ನುಡಿದರು.  ಶಿಶು ಮರಣದ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೂಡಾ ಪಕ್ಷದ ರಾಜ್ಯ ಅಧ್ಯಕ್ಷ ಅವಿನಾಶ್ ಪಾಂಡೆ ಅವರಿಂದ ವಿವರಣೆ ಕೇಳಿದ್ದಾರೆ. ಸಾವುಗಳ ಬಗ್ಗೆ ವಿವರವಾದ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಪಾಂಡೆ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 02  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment