Sunday, December 4, 2022

PARYAYA: ನಮ್ಮ ಲಾಂಛನ.

 ನಮ್ಮ ಲಾಂಛನ...


ಇದು ಸುವರ್ಣ ನೋಟ

ಇದು ನಮ್ಮ ಲಾಂಛನ. ವಿಧಾನ ಸೌಧದ ಮೇಲಿರುವ ಈ ಲಾಂಛನ ಮುಂಜಾವಿನ ಹೊತ್ತಿನಲ್ಲಿ ಕಂಗೊಳಿಸಿದ ಬಗೆ ಇದು. ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ವಾಕಿಂಗ್‌ ಮಾಡುವ ಹೊತ್ತಿನಲ್ಲಿ ಕಂಡ ದೃಶ್ಯ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ. ಸಮೀಪ ದೃಶ್ಯಕ್ಕಾಗಿ ಚಿತ್ರವನ್ನು ಕ್ಲಿಕ್‌ ಮಾಡಿ.

ಇನ್ನಷ್ಟು ಚಿತ್ರಗಳ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


PARYAYA: ನಮ್ಮ ಲಾಂಛನ.:   ನಮ್ಮ ಲಾಂಛನ... ಇದು ಸುವರ್ಣ ನೋಟ ಇದು ನಮ್ಮ ಲಾಂಛನ. ವಿಧಾನ ಸೌಧದ ಮೇಲಿರುವ ಈ ಲಾಂಛನ ಮುಂಜಾವಿನ ಹೊತ್ತಿನಲ್ಲಿ ಕಂಗೊಳಿಸಿದ ಬಗೆ ಇದು. ಹಿರಿಯ ಛಾಯಾಗ್ರಾಹಕ ವಿಶ್ವನಾ...

Tuesday, November 29, 2022

PARYAYA: ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!ʼ

ಇದು ಸುವರ್ಣ ನೋಟ

ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದಲಾವಣೆಯೂ ಇಲ್ಲ.

ಆದರೆ ಕಾಣುವ ಕಣ್ಣುಗಳಿಗೆ ಇದೇ ಸೂರ್ಯ ಹೊಸ ಹೊಸ ರೂಪ ತಾಳುತ್ತಾನೆ.

೨೦೨೨ರ ನವೆಂಬರ್‌ ೨೯ರ ಮಂಗಳವಾರ ಸೂರ್ಯ ಇದೇ ರೀತಿ ತನ್ನ ಮಾರ್ಗದಲ್ಲಿ ಸಾಗಿದ್ದ. ಸಂಜೆಯ ಹೊತ್ತು ಇನ್ನೇನು ಮುಳುಗಬೇಕು. ಅಷ್ಟರಲ್ಲಿ….


ಅಲ್ಲಿಗೆ…. ಅಂದರೆ ಶಕ್ತಿಸೌಧದ ಬಳಿಗೆ ಬಂದದ್ದು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ. ದಿನವೂ ಅದೇ ಮಾರ್ಗದಲ್ಲಿ ಸಾಗಿ ಹೋಗುವ ಸೂರ್ಯ ಸುವರ್ಣರ ಕ್ಯಾಮರಾಕಣ್ಣುಗಳಿಗೆ ಬೇರೆಯೇ ರೀತಿಯಲ್ಲಿ ಕಾಣಿಸಿದ. ಅಷ್ಟೆ ಕೆಲವು ಕ್ಷಣಗಳು ಸುವರ್ಣರ ಕ್ಯಾಮರಾ ಅತ್ತಿಂದಿತ್ತ ಇತ್ತಿಂದತ್ತ ಚಲಿಸಿತು. ಅದರ ಫಲಿತಾಂಶ ಇದು.

ಇಲ್ಲಿ ಒಂದರೆಡು ಚಿತ್ರಗಳನ್ನು ಹಾಕುತ್ತಿದ್ದೇನೆ. ಪೂರ್ತಿ ನೋಡಬೇಕು ಎಂದರೆ ಕೆಳಗಿನ ಫೊಟೋ ಕ್ಲಿಕ್ಲಿಸಿ. ಅಥವಾ ಅದಕ್ಕೂ ಕೆಳಗಿರುವ ವಿಡಿಯೋ ಕ್ಲಿಕ್ಕಿಸಿ

-ನೆತ್ರಕೆರೆ ಉದಯಶಂಕರ  



PARYAYA: ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ: ಶಕ್ತಿ ಸೌಧದ ಬಳಿ ʼ ಸುವರ್ಣ ಸೂರ್ಯ..! ಇದು ಸುವರ್ಣ ನೋಟ ಪೂ ರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದ...

Friday, November 4, 2022

PARYAYA: ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿ...

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ನವದೆಹಲಿ: ಭವಿಷ್ಯನಿಧಿ ಸಂಸ್ಥೆಯು ರೂಪಿಸಿದ 2014 ರ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 2022 ನವೆಂಬರ್‌ 04ರ ಶುಕ್ರವಾರ ಎತ್ತಿಹಿಡಿಯಿತು. ಆದರೆ ಪಿಂಚಣಿ ನಿಧಿಗೆ ಸೇರಲು ವಿಧಿಸಲಾದ 15,000 ರೂ ಮಾಸಿಕ ವೇತನದ ಮಿತಿಯನ್ನು ರದ್ದು ಪಡಿಸಿತು.

2014 ರ ತಿದ್ದುಪಡಿಯು ಗರಿಷ್ಠ ಪಿಂಚಣಿ ವೇತನವನ್ನು (ಮೂಲ ವೇತನ ಮತ್ತು ತುಟ್ಟಿಭತ್ಯೆ) ತಿಂಗಳಿಗೆ 15,000 ರೂ. ಎಂಬುದಾಗಿ ಪರಿಷ್ಕರಿಸಿತ್ತು.  ತಿದ್ದುಪಡಿಗೆ ಮೊದಲುಗರಿಷ್ಠ ಪಿಂಚಣಿ ವೇತನವನ್ನು ತಿಂಗಳಿಗೆ 6,500 ರೂ. ಎಂಬುದಾಗಿ ನಿಗದಿ ಪಡಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 2014ರ ಪಿಂಚಣಿ ಯೋಜನೆಯನ್ನು ಕಾನೂನುಬದ್ಧ ಎಂಬುದಾಗಿ ಹೇಳಿತಾದರೂ ಅದರ ಕೆಲವು ನಿಬಂಧನೆಗಳು ಮಾನ್ಯವಲ್ಲ ಎಂದು ಹೇಳಿತು.

2014ರ ಯೋಜನೆಯಲ್ಲಿ ನೌಕರರು 15,000 ರೂ.ಗಿಂತ ಹೆಚ್ಚಿನ ವೇತನದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆಯನ್ನು ನೀಡಬೇಕೆಂಬ ಷರತ್ತನ್ನು ಅಮಾನ್ಯವೆಂದು ಪೀಠವು ಪರಿಗಣಿಸಿತು.

ಪಿಂಚಣಿ ಯೋಜನೆಗೆ ಸೇರುವ ಆಯ್ಕೆಯನ್ನು ಚಲಾಯಿಸದ ನೌಕರರು ಆರು ತಿಂಗಳೊಳಗೆ ಹಾಗೆ ಮಾಡಬೇಕು ಎಂದು ಪೀಠ ಹೇಳಿತು. ತನ್ಮೂಲಕ ಭವಿಷ್ಯನಿಧಿಯ ಹಾಲಿ ಸದಸ್ಯ ನೌಕರರಿಗೆ ಯೋಜನೆ ಸೇರುವ ಆಯ್ಕೆ ಚಲಾಯಿಸಲು ಕಾಲಾವಕಾಶವನ್ನು ಆರು ತಿಂಗಳ ಕಾಲ ನೀಡಿತು.

ಕೇರಳರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳು ನೀಡಿದ ತೀರ್ಪಿನ ದೃಷ್ಟಿಯಿಂದ, ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದರಿಂದ ಕಟ್-ಆಫ್ ದಿನಾಂಕದೊಳಗೆ ಯೋಜನೆಗೆ ಸೇರಲು ಸಾಧ್ಯವಾಗದ ಅರ್ಹ ಉದ್ಯೋಗಿಗಳಿಗೆ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಅದು ಹೇಳಿತು.

ನ್ಯಾಯಾಲಯವು ಆರ್‌ಸಿ ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಪ್ರಕರಣದ ತೀರ್ಪನ್ನು ಒಪ್ಪಿಕೊಂಡಿರುವಾಗಿ ಹೇಳಿತು.

ಆರ್.‌ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯನಿಧಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ವಿಭಾಗೀಯ ಪೀಠವು ಆಯ್ಕೆಯನ್ನು ಚಲಾಯಿಸಲು ಯಾವುದೇ ಕಟ್-ಆಫ್ ದಿನಾಂಕ ಇರುವಂತಿಲ್ಲ ಎಂದು ಹೇಳಿತ್ತು.

ಮಿತಿಯನ್ನು ಮೀರಿದ ಸಂಬಳದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆ ನೀಡಬೇಕೆಂಬ ಷರತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿತು. ಆದರೆ ಅಧಿಕಾರಿಗಳಿಗೆ ಹಣವನ್ನು ಹೊಂದಿಸಲು ಸಾಧ್ಯವಾಗುವಂತೆ ತೀರ್ಪಿನ ಈ ಭಾಗವನ್ನು ಆರು ತಿಂಗಳವರೆಗೆ ಅಮಾನತಿನಲ್ಲಿ ಇಡಲಾಗುವುದು ಎಂದು ಅದು ಹೇಳಿತು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2014 ರ ಯೋಜನೆಯನ್ನು ರದ್ದುಗೊಳಿಸಿದ ಕೇರಳರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿದ್ದವು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

PARYAYA: ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿ...: ಪಿಂಚಣಿ (ತಿದ್ದುಪಡಿ) ಯೋಜನೆ   ಸಿಂಧು, ರೂ.  15,000  ವೇತನ   ಮಿತಿ ರದ್ದು ನವದೆಹಲಿ: ಭವಿಷ್ಯನಿಧಿ ಸಂಸ್ಥೆಯು ರೂಪಿಸಿದ 2014 ರ ನೌಕರರ ಪಿಂಚಣಿ (ತಿದ್ದುಪಡಿ) ಯೋಜ...

Wednesday, November 2, 2022

PARYAYA: ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 ರದ್ದುಗೊಳಿಸಿದ ಕೇರಳರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸಲ್ಲಿಸಿದ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಈ ವಾರ ಪ್ರಕಟಿಸುವ ಸಾಧ್ಯತೆಯಿದೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಮೂರ್ತಿಗಳ  ಪೀಠವು 6 ದಿನಗಳ ವಿಚಾರಣೆಯ ನಂತರ 2022 ಆಗಸ್ಟ್ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು 2022 ನವೆಂಬರ್ 8ರಂದು ನಿವೃತ್ತರಾಗಲಿರುವ ಕಾರಣಅದಕ್ಕೂ ಮುನ್ನ ಪೀಠವು ತೀರ್ಪು ನೀಡುವ ಸಾಧ್ಯತೆಯಿದೆ. ರಾಷ್ಟ್ರಪತಿಯವರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್‌  ಅವರು ಹಾಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

2018 ರಲ್ಲಿಕೇರಳ ಹೈಕೋರ್ಟ್ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, (2014] ಅನ್ನು ರದ್ದುಪಡಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ಮಾಡಿಕೊಟ್ಟಿತು. ಪಿಂಚಣಿ ಯೋಜನೆಗೆ ಸೇರಲು ಯಾವುದೇ ಕಟ್-ಆಫ್ ದಿನಾಂಕ ಇರಬಾರದು ಎಂದು ಹೈಕೋರ್ಟ್ ಹೇಳಿತ್ತು.

2019 ರಲ್ಲಿಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಇಪಿಎಫ್‌ಒ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು (ಎಸ್‌ ಎಲ್‌ ಪಿ) ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನಂತರಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರವು ಕೋರಿದ ಪರಿಶೀಲನಾ ಕೋರಿಕೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್‌,  ಎಸ್‌ಎಲ್‌ಪಿ ವಜಾ ಮಾಡಿದ ತನ್ನ ತೀರ್ಪನ್ನು ಹಿಂಪಡೆದಿತ್ತು ಮತ್ತು ಅರ್ಹತೆಯ ಮೇಲೆ ವಿಚಾರಣೆಗಾಗಿ ವಿಷಯವನ್ನು ಪುನಃ ತೆರೆದಿತ್ತು.

2021ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸಲು ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿಗಳನ್ನು ಒಪ್ಪಿಸಿತ್ತು:

1. ಉದ್ಯೋಗಿಗಳ ಪಿಂಚಣಿ ಯೋಜನೆಯ ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ ಮತ್ತು

2. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸಲು ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು (2016) ಪ್ರಕರಣದ ತೀರ್ಪು ಆಧಾರ ತತ್ವವಾಗಿದೆಯೇ?

ಪಿಂಚಣಿ ನಿಧಿ ಮತ್ತು ಭವಿಷ್ಯ ನಿಧಿಗಳು ವಿಭಿನ್ನವಾಗಿವೆ ಮತ್ತು ನಂತರದ ಸದಸ್ಯತ್ವವು ಮೊದಲಿನ ಸದಸ್ಯತ್ವಕ್ಕೆ ಸ್ವಯಂಚಾಲಿತವಾಗಿ ಅನುವಾದಿಸುವುದಿಲ್ಲ. ಪಿಂಚಣಿ ಯೋಜನೆಯು ಕಡಿಮೆ ವಯಸ್ಸಿನ ಉದ್ಯೋಗಿಗಳಿಗೆ ಉದ್ದೇಶಿಸಲಾಗಿದೆ ಮತ್ತು ಕಟ್-ಆಫ್ ಮಿತಿಗಿಂತ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳಿಗೆ ಪಿಂಚಣಿ ಪಡೆಯಲು ಅವಕಾಶ ನೀಡಿದರೆಅದು ನಿಧಿಯೊಳಗೆ ದೊಡ್ಡ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ಎಂದು ಇಪಿಎಫ್‌ ಒ ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು.

2014 ರ ತಿದ್ದುಪಡಿಗಳನ್ನು ಪಿಂಚಣಿ ಮತ್ತು ಭವಿಷ್ಯ ನಿಧಿಗಳ ನಡುವಿನ ಅಡ್ಡ-ಸಬ್ಸಿಡಿಕರಣದ ಸಮಸ್ಯೆಯನ್ನು ಪರಿಹರಿಸಲು ತರಲಾಯಿತು ಎಂದು ಅದು ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು.

 ಇಪಿಎಫ್‌ಒ ಎತ್ತಿರುವ ಆರ್ಥಿಕ ಹೊರೆಯ ವಾದವನ್ನು ಪಿಂಚಣಿದಾರರು ಆಕ್ಷೇಪಿಸಿದ್ದರು. ಮೂಲನಿಧಿಯು (ಕಾರ್ಪಸ್ ಫಂಡ್) ಹಾಗೆಯೇ  ಉಳಿದಿದೆ ಮತ್ತು ಬಡ್ಡಿಯಿಂದ ಪಿಂಚಣಿ ಪಾವತಿ ಮಾಡಲಾಗಿದೆ ಎಂದು ಅವರು ವಾದಿಸಿದ್ದರು. ಪಿಂಚಣಿ ಯೋಜನೆಗೆ ಸೇರಲು ಕಟ್-ಆಫ್ ಅವಧಿಯೊಳಗೆ ಪ್ರತ್ಯೇಕ ಆಯ್ಕೆಯನ್ನು ಬಳಸಬೇಕು ಎಂಬ ಇಪಿಎಫ್‌ಒನ ವಾದವನ್ನು ಪಿಂಚಣಿದಾರರು ವಿರೋಧಿಸಿದ್ದರು ಮತ್ತು ಇಪಿಎಫ್‌ಒ ನಿಲುವು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

PARYAYA: ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?: ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು? ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ , 2014 ರದ್ದುಗೊಳಿಸಿದ ಕೇರಳ , ರಾಜಸ್ಥಾನ ಮತ್ತು ದೆಹ...

Friday, October 28, 2022

PARYAYA: ಮೊಳಗಿತು ಕೋಟಿ ಕಂಠ ಗಾಯನ

ಮೊಳಗಿತು ಕೋಟಿ ಕಂಠ ಗಾಯನ

ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂಠʼ ಗಾಯನ ಮೊಳಗಿತು.

ನೆಲದಲ್ಲಷ್ಟೇ ಅಲ್ಲ ಜಲದಲ್ಲೂ ದೋಣಿಗಳಲ್ಲಿ, ಆಕಾಶದಲ್ಲಿ ವಿಮಾನದಲ್ಲಿ ಕೂಡಾ ʼಕನ್ನಡ ಡಿಂಡಿಮʼ ಭಾರಿಸಿತು.

ಬೆಂಗಳೂರಿನಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು.


ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು  ಬೆಂಗಳೂರಿನಲ್ಲಿ ತೆಗೆದ ಛಾಯಾಚಿತ್ರಗಳ ವಿಡಿಯೋ ಇಲ್ಲಿದೆ.  ಕ್ಲಿಕ್‌ ಮಾಡಿ ನೋಡಿ:


ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಕರ್ನಾಟಕದಾದ್ಯಂತ ಕನ್ನಡದ ಹಾಡು ಮೊಳಗಿದ ಪರಿಯನ್ನು ವೀಕ್ಷಿಸಿ:


PARYAYA: ಮೊಳಗಿತು ಕೋಟಿ ಕಂಠ ಗಾಯನ:   ಮೊಳಗಿತು ಕೋಟಿ ಕಂಠ ಗಾಯನ ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂ...

Monday, October 24, 2022

PARYAYA: ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

 ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ಹಿರಿತಲೆಗಳ ನಾಲಿಗೆಯಲ್ಲಿ ಬರುತ್ತಿರುತ್ತದೆ:” ಭಾರತೀಯರು ಸ್ವಾತಂತ್ರ್ಯಕ್ಕೆ ಲಾಯಕ್ಕಲ್ಲ. ಸಿಕ್ಕಿದರೂ ಅವರು ಸ್ವಾತಂತ್ರ್ಯ ಉಳಿಸಿಕೊಳ್ಳಲಾರರು… ಅವರು ಆಡಳಿತ ನಡೆಸಲು ಸಾಧ್ಯವಿಲ್ಲ” ಅಂತ.

ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತದ ಹಿರಿಮೆ ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ.

ಆದರೆ, ವಿಶ್ವವನ್ನೇ ಆಳಿದ್ದ ದೇಶ. ಇಂಗ್ಲೆಂಡ್…‌ ಈಗಿನ ಯುನೈಟೆಡ್‌ ಕಿಂಗ್‌ ಡಮ್‌ʼ (ಯುಕೆ) ಆರ್ಥಿಕವಾಗಿ ನಲುಗುತ್ತಿದೆ. ಗೆದ್ದಿದ್ದ ಪ್ರಧಾನಿ ಲಿಜ್‌ ಟ್ರಸ್‌ ಕೇವಲ ೪೫ ದಿನ ಆಡಳಿತ ನಡೆಸಿ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ೨೦೨೨ರ ಅಕ್ಟೋಬರ್‌ ೨೪ರ ಸೋಮವಾರ ಭಾರತದ ಅದರಲ್ಲೂ ಕರ್ನಾಟಕದ ಅಳಿಯ ಯುವ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಯುನೈಟೆಡ್‌ ಕಿಂಗ್‌ ಡಮ್‌ ಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಆಡಳಿತ ಮುನ್ನಡೆಸುವಂತಹ ಸ್ಥಿತಿ ಬಂದಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಯುಕೆಯ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು ಯುಕೆಯ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿಸ್ಪರ್ಧಿಯಾಗಬಯಸಿದ್ದ ಬೋರಿಸ್‌ ಜಾನ್ಸನ್‌ ಪುನರಾಯ್ಕೆ ಬಯಸುವುದಿಲ್ಲ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಸೋಮವಾರ ಸಂಜೆಯ ವೇಳೆಗೆ ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕಟಣೆ ಹೊರಬಿದ್ದಿತು. ಸುನಕ್‌ ಅವರು ಅಕ್ಟೋಬರ್‌ ೨೮ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.

ವಿಶ್ವವನ್ನೇ ಆಳಿದ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ನಾಲಾಯಕ್‌ ಜನ ಎಂದು ಹೇಳಿದ ದೇಶಕ್ಕೆ ಇದೀಗ ಆಡಳಿತ ನಡೆಸಲು ಭಾರತೀಯರೇ ಬರಬೇಕಾಯಿತು. ಇದಕ್ಕೇ ಹೇಳುವುದು: ಕಾಲಾಯ ತಸ್ಮೈ ನಮಃ.

PARYAYA: ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!:   ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ! ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ...

Sunday, October 23, 2022

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

 ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

ಅಯೋಧ್ಯೆ: ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯೆ ವಿಶ್ವದಾಖಲೆಯನ್ನು ಬರೆಯಿತು. ಇದರೊಂದಿಗೆ  ಲೇಸರ್‌ ಬೆಳಕಿನಲ್ಲಿ ರಾಮಾಯಣ, ಅಯೋಧ್ಯಾ ಮಂದಿರದ ದೃಶ್ಯಗಳೂ ಕಣ್ಮನ ಸೆಳೆದವು.

ಅಯೋಧ್ಯೆಯ ಅಭೂತಪೂರ್ವ ದೀಪಾವಳಿ, ಗಂಗಾರತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಪಾಲ್ಗೊಂಡರು.

ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಕೆಳಗಿನ ವಿಡಿಯೋ ಕ್ಲಿಕ್‌ ಮಾಡಿ. ಇದು ಎನ್‌ಎನ್‌ಐ  ವಿಡಿಯೋ.


ಇನ್ನೊಂದು ವಿಡಿಯೋ ನೋಡಿ: 

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ:   ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ ಅಯೋಧ್ಯೆ : ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯ...

Monday, October 17, 2022

PARYAYA: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಎಲ್ಲಿ ಮಾರಾಯರೇ ಈ ಆಟ?

ಇದು ಸುವರ್ಣ ನೋಟ...!

ಬೆಳಗ್ಗೆ ಮೊಬೈಲಿನಲ್ಲಿ ವಾಟ್ಸಪ್‌ ನೋಡುತ್ತಿದ್ದಾಗ ಮೂರು ಚಿತ್ರಗಳು ಗಮನ ಸೆಳೆದವು.

ತತ್‌ ಕ್ಷಣವೇ ಮೆಸ್ಸೇಜ್‌ ಮಾಡಿದೆ: “ಸೂಪರ್‌ ಓಳು ಮಾರಾಯರೇ ಈ ಗೊಬ್ಬು” (ಸೂಪರ್‌ ಎಲ್ಲಿ ಮಾರಾಯರೇ ಈ ಆಟ ) ಅಂತ.

ಸ್ವಲ್ಪ ಹೊತ್ತಿನಲ್ಲೇ ಸುವರ್ಣರ ಫೋನ್‌ ಬಂತು. ʼಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂಡು. ನ್ಯಾಷನಲ್‌ ಗೇಮ್ಸ್‌ ಆವೋಂಡು ಉಂಡತ್ತೇ? ಅಳ್ಪದ” (ಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂನದ್ದು. ರಾಷ್ಟ್ರೀಯ ಕ್ರೀಡಾಕೂಟಾ ನಡೆಯುತ್ತಿದೆಯಲ್ಲವೇ? ಅಲ್ಲಿಯದ್ದು.)

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರ ಚಿತ್ರಗಳೇ ಹಾಗೆ. ಮನಸ್ಸಿನ ಆಳಕ್ಕೆ ಹೊಕ್ಕು ಬಿಡುತ್ತವೆ.

ಇವು ಕ್ರೀಡಾಕೂಟದಲ್ಲಿ ನಡೆದ ಲಾಂಗ್‌ ಜಂಪ್‌ ಆಟೋಟದ್ದು. ಈಜಲು ನೀರಿಗೆ ಜಿಗಿದಾಗ ನೀರು ಮೇಲಕ್ಕೆ ಚಿಮ್ಮುವ ಅಪೂರ್ವ ದೃಶ್ಯದ ಹಾಗೆಯೇ ಉದ್ದ ಜಿಗಿತದಲ್ಲಿ ಅಷ್ಟು ದೂರಕ್ಕೆ ಹಾರಿ ಕೆಳಗ್ಗೆ ಬಿದ್ದೊಡನೆಯೇ ಮರಳಿನ ಕಣಗಳು ಚಿಮ್ಮಿದ ಕ್ಷಣದ ಚಿತ್ರಗಳಿವು.

ಜೊತೆಗೇ ಆ ಹೊತ್ತಿನಲ್ಲಿ ಸ್ಪರ್ಧಾಳುಗಳ ಮುಖಭಾವ ಕೂಡಾ ಅದೆಷ್ಟು ಸುಂದರವಾಗಿ ಮೂಡಿ ಬಂದಿದೆ. ನೋಡಿ.

ಅಭಿನಂದನೆಗಳು ಸುವರ್ಣ.

ಚಿತ್ರದ ಸಮೀಪ ದೃಶ್ಯದ ಅನುಭವಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ

-ನೆತ್ರಕೆರೆ ಉದಯಶಂಕರ

PARYAYA: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ ...! ಬೆಳಗ್ಗೆ ಮೊಬೈಲಿನಲ್ಲಿ ವಾಟ್ಸಪ್‌ ನೋಡುತ್ತಿದ್ದಾಗ ಮೂರು ಚಿತ್ರಗಳು ಗಮನ ಸೆಳೆದವು. ತತ್‌ ಕ್ಷಣವೇ ಮೆಸ್ಸೇಜ್‌ ಮಾಡಿ...

Tuesday, October 11, 2022

PARYAYA: ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

 ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಅಕ್ಟೋಬರ್‌ 11ರ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ 'ಶ್ರೀ ಮಹಾಕಾ ಲೋಕʼದ (ಕಾರಿಡಾರ್) ಮೊದಲ ಹಂತವನ್ನು ರಾಷ್ಟ್ರಾರ್ಪಣೆ ಮಾಡಿದರು. 856 ಕೋಟಿ ರೂಪಾಯಿ ವೆಚ್ಚದ ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಈ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಮಹಾಕಾ ಲೋಕ’ದ ಮೊದಲ ಹಂತವನ್ನು 316 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮಹಾಕಾಳ ಲೋಕ ಅಂದರೆ ಮಹಾಕಾಳ ಕಾರಿಡಾರ್‌ 900 ಮೀಟರ್‌ ಉದ್ದವಿದ್ದು, ರುದ್ರಸಾಗರ ಸರೋವರದ ಸುತ್ತ ಹರಡಿಕೊಂಡಿದೆ.


900 ಮೀಟರ್‌ಗಿಂತಲೂ ಹೆಚ್ಚು ಉದ್ದದ 'ಮಹಾಕಾ ಲೋಕಕಾರಿಡಾರ್ದೇಶದಲ್ಲೇ ಅತಿ ದೊಡ್ಡ ಕಾರಿಡಾರುಗಳಲ್ಲಿ ಒಂದಾಗಿದೆ. ಹಳೆಯ ರುದ್ರಸಾಗರ ಸರೋವರದ ಸುತ್ತಲೂ ಪಸರಿಸಿರುವ  ಇದನ್ನು ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಸುತ್ತ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಳಿಸಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಾಳೇಶ್ವರ ಲಿಂಗವು ಭಾರೀ ಸಂಖ್ಯೆಯ ಭಕ್ತರನ್ನು ಸೆಳೆಯುತ್ತದೆ.

ಎರಡು ಭವ್ಯ ಮಹಾದ್ವಾರಗಳು:  ನಂದಿ ದ್ವಾರ ಮತ್ತು ಪಿನಾಕಿ ದ್ವಾರ ಈ ಎರಡು ಮಹಾದ್ವಾರಗಳನ್ನು ಅನತಿ ದೂರದಲ್ಲಿ ಕಾರಿಡಾರ್‌ ಆರಂಭವಾಗುವ ಸ್ಥಳದ ಸಮೀಪದಲ್ಲೇ ನಿರ್ಮಿಸಲಾಗಿದೆ.  ಸ್ವಲ್ಪ ದೂರದಿಂದ ಬೇರ್ಪಟ್ಟುಕಾರಿಡಾರ್‌ನ ಪ್ರಾರಂಭದ ಸಮೀಪದಲ್ಲಿ ನಿರ್ಮಿಸಲಾಗಿದೆವು ದೇವಾಲಯದ ಪ್ರವೇಶದ್ವಾರಕ್ಕೆ ಸಾಗುತ್ತವೆ. ದಾರಿಯುದ್ದಕ್ಕೂ ರಮಣೀಯ ನೋಟವನ್ನು ನೀಡುತ್ತವೆ.

ಭವ್ಯ ಮಹಾಕಾ ಲೋಕ

ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ನಿರ್ಮಿಸಲ್ಪಟ್ಟಿರುವ 108 ಅಲಂಕೃತ ಕಂಬಗಳ ಭವ್ಯವಾದ ಸ್ತಂಭಗಳುಚಿಮ್ಮುವ ಕಾರಂಜಿಗಳು ಮತ್ತು 'ಶಿವ ಪುರಾಣ'ದ ಕಥೆಗಳನ್ನು ಚಿತ್ರಿಸುವ 50 ಕ್ಕೂ ಹೆಚ್ಚು ಚಲಿಸುವ ಭಿತ್ತಿಚಿತ್ರಗಳ ಫಲಕವು ಉಜ್ಜಯಿನಿಯ ಮಹಾಕಾ ಲೋಕವನ್ನು ಸ್ಮರಣೀಯ  ಅನುಭವವನ್ನಾಗಿ ಮಾಡುತ್ತವೆ.

ಪಾದಚಾರಿ ಮಾರ್ಗವು 108 ಭಿತ್ತಿಚಿತ್ರಗಳು ಮತ್ತು ಶಿವನಿಗೆ ಸಂಬಂಧಿಸಿದ ಕಥೆಗಳನ್ನು ಚಿತ್ರಿಸುವ 93 ಪ್ರತಿಮೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಶಿವ ವಿವಾಹತ್ರಿಪುರಾಸುರ ವಧೆಶಿವ ಪುರಾಣ ಮತ್ತು ಶಿವ ತಾಂಡವ  ಸ್ವರೂಪ. ಈ ಪಾದಚಾರಿ ಮಾರ್ಗದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ 128 ಸ್ಥಳಗಳಿವೆ. ಇಲ್ಲಿ ತಿಂಡಿ ತಿನಸು, ಮತ್ತು ಶಾಪಿಂಗ್ ಸ್ಥಳಗಳೂ, ಹೂ ಮಾರುವವರು, ಕರಕುಶಲ ಮಳಿಗೆಗಳು ಇತ್ಯಾದಿಗಳಿವೆ.

ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್‌ ಮಾಡಿರಿ 

ದೇಗುಲ ವಿಸ್ತಾರ

ಯೋಜನೆಯಡಿಯಲ್ಲಿಸುಮಾರು 2.82 ಹೆಕ್ಟೇರಿನಷ್ಟಿರುವ ಮಹಾಕಾಳೇಶ್ವರ ದೇವಾಲಯದ ಆವರಣವನ್ನು 47 ಹೆಕ್ಟೇರುಗಳಿಗೆ ಹೆಚ್ಚಿಸಲಾಗುತ್ತಿದೆ ಉಜ್ಜಯಿನಿ ಜಿಲ್ಲಾಡಳಿತವು ಎರಡು ಹಂತಗಳಲ್ಲಿ ಇದನ್ನು ಅಭಿವೃದ್ಧಿಪಡಿಸುತ್ತದೆ. ಇದರಲ್ಲಿ 17 ಹೆಕ್ಟೇರ್ ರುದ್ರಸಾಗರ ಕೆರೆ ಕೂಡಾ ಸೇರಲಿದೆ. ಈ ಯೋಜನೆಯಿಂದ ನಗರಕ್ಕೆ ಆಗಮಿಸುವ ಯಾತ್ರಿಕರ ಸಂಖ್ಯೆ  ಈಗಿನ 1.50 ಕೋಟಿಯಿಂದ ಸುಮಾರು ಮೂರು ಕೋಟಿಗೆ ಹೆಚ್ಚುವ ನಿರೀಕ್ಷೆಯಿದೆ.

2ನೇ ಹಂತದಲ್ಲಿ ಏನೇನು?


ಯೋಜನೆಯ ಎರಡನೇ ಹಂತಕ್ಕಾಗಿ  310.22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆಇದು ದೇವಾಲಯದ ಪೂರ್ವ ಮತ್ತು ಉತ್ತರದ ಮುಂಭಾಗಗಳ ವಿಸ್ತರಣೆಯನ್ನು ಒಳಗೊಂಡಿದೆ. ಉಜ್ಜಯಿನಿ ನಗರದ ವಿವಿಧ ಪ್ರದೇಶಗಳಾದ ಮಹಾರಾಜವಾಡಮಹಲ್ ಗೇಟ್ಹರಿ ಫಾಟಕ್ ಸೇತುವೆರಾಮಘಾಟ್ ಮುಂಭಾಗ ಮತ್ತು ಬೇಗಂ ಬಾಗ್ ರಸ್ತೆಗಳ ಅಭಿವೃದ್ಧಿಯನ್ನು ಸಹ ಇದು ಒಳಗೊಂಡಿದೆ. ಮಹಾರಾಜವಾಡದಲ್ಲಿನ ಕಟ್ಟಡಗಳನ್ನು ಮರುಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಮಹಾಕಾ ದೇವಾಲಯದ ಆವರಣಕ್ಕೆ ಸಂಪರ್ಕಿಸಲಾಗುತ್ತದೆಆದರೆ ಪಾರಂಪರಿಕ ಧರ್ಮಶಾಲಾ ಮತ್ತು ಕುಂಭ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತದೆ.

PARYAYA: ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ:   ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಅಕ್ಟೋಬರ್‌ 11ರ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ' ಶ್ರೀ ಮ...