ಬಾನಿನಿಂದ
ಕಾಣುತ್ತಿದೆ ‘ಏಕತಾ ಪ್ರತಿಮೆ’ ಹೀಗೆ…!
ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ೧೮೨ ಮೀಟರ್ ಎತ್ತರದ ಉಕ್ಕು ಮತ್ತು ಕಂಚಿನ ’ಏಕತಾ ಪ್ರತಿಮೆ’ಯ (ಸ್ಟ್ಯಾಚ್ಯು ಆಫ್ ಯುನಿಟಿ) ಬಾಹ್ಯಾಕಾಶದಿಂದ ತೆಗೆಯಲಾಗಿರುವ ಅತ್ಯದ್ಭುತ ಚಿತ್ರವೊಂದನ್ನು ಅಮೆರಿಕದ ಕಂಪೆನಿಯೊಂದು ಸಾಮಾಜಿಕ ಜಾಲತಾಣದಲ್ಲಿ 2018ರ ನವೆಂಬರ 17ರ ಶನಿವಾರ ಹಂಚಿಕೊಂಡಿತು.
ಪ್ರತಿದಿನ ಭೂಮಿಯ ಚಿತ್ರವನ್ನು ತೆಗೆಯುವ ಪ್ಲಾನೆಟ್ ಲ್ಯಾಬ್ ಈ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿತು.
ವಿಶ್ವದ ಅತ್ಯಂತ ಎತ್ತರದ ಪ್ರತಿಮೆ, ಅದರ ಪಕ್ಕದಲ್ಲೇ ಹರಿಯುತ್ತಿರುವ ನರ್ಮದಾ ನದಿ, ಸುತ್ತಮುತ್ತಣ ನಿಸರ್ಗದ ರಮಣೀಯ ದೃಶ್ಯ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊತ್ತ ಮೊದಲ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರ ೧೪೩ನೇ ಜನ್ಮದಿನಾಚರಣೆ ಸಂದರ್ಭದಲ್ಲಿ (೨೦೧೮ರ ಅಕ್ಟೋಬರ್ ೩೧) ಗುಜರಾತಿನ ನರ್ಮದಾ ಜಿಲ್ಲೆಯಲ್ಲಿನ ಕೇವಡಿಯಾದಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿರುವ ಈ ಪ್ರತಿಮೆಯನ್ನು ರಾಷ್ಟ್ರಾರ್ಪಣೆ ಮಾಡಿದ್ದರು.
೨,೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹಕ್ಕಿಂತಲೂ ಎತ್ತರವಾಗಿದೆ. ಅಮೆರಿಕದ ’ಸ್ಟ್ಯಾಚ್ಯು ಆಫ್ ಲಿಬರ್ಟಿ’ಯ ಎರಡು ಪಟ್ಟು ದೊಡ್ಡದಾಗಿರುವ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹವು ಈವರೆಗೂ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂದು ಪರಿಗಣಿತವಾಗಿತ್ತು. ಅದನ್ನು ’ಏಕತೆಯ ಪ್ರತಿಮೆ’ ಮೀರಿಸಿದೆ.
’ಸಾಧು
ಬೆಟ್’ ಎಂಬುದಾಗಿ ಕರೆಯಲಾಗುವ ಏಕತಾ ಪ್ರತಿಮೆಯು ನರ್ಮದಾ ನದಿಯಿಂದ ೩.೫ ಕಿಮೀ ದೂರದಲ್ಲಿದೆ. ೨೫೦ ಮೀಟರ್ ಉದ್ದದ ಸೇತುವೆ ಮೂಲಕ ದ್ವೀಪವೊಂದಕ್ಕೆ ಇದನ್ನು ಜೋಡಿಸಲಾಗಿದೆ.
ಪ್ರತಿಮೆಯ ಒಳಭಾಗದಲ್ಲಿ ೧೩೫ ಮೀಟರ್ ಎತ್ತರದಲ್ಲಿ ವೀಕ್ಷಕರ ಗ್ಯಾಲರಿಯನ್ನು ಹೊಂದಿರುವುದು ಈ ಪ್ರತಿಮೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಗ್ಯಾಲರಿಯಲ್ಲಿ ಏಕಕಾಲಕ್ಕೆ ೨೦೦ ಜನ ನಿಂತುಕೊಳ್ಳಬಹುದು. ಅತಿವೇಗದ ಲಿಫ್ಟ್ ಮೂಲಕ ವೀಕ್ಷಣಾ ಗ್ಯಾಲರಿವರೆಗೆ ಹೋಗಬಹುದು. ಈ ಲಿಫ್ಟ್ ಪ್ರತಿದಿನ ೫,೦೦೦ ಮಂದಿಯನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಪ್ರತಿಮೆಯ ಒಳಭಾಗದಲ್ಲಿ ೧೩೫ ಮೀಟರ್ ಎತ್ತರದಲ್ಲಿ ವೀಕ್ಷಕರ ಗ್ಯಾಲರಿಯನ್ನು ಹೊಂದಿರುವುದು ಈ ಪ್ರತಿಮೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಗ್ಯಾಲರಿಯಲ್ಲಿ ಏಕಕಾಲಕ್ಕೆ ೨೦೦ ಜನ ನಿಂತುಕೊಳ್ಳಬಹುದು. ಅತಿವೇಗದ ಲಿಫ್ಟ್ ಮೂಲಕ ವೀಕ್ಷಣಾ ಗ್ಯಾಲರಿವರೆಗೆ ಹೋಗಬಹುದು. ಈ ಲಿಫ್ಟ್ ಪ್ರತಿದಿನ ೫,೦೦೦ ಮಂದಿಯನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಸ್ವಾತಂತ್ರ್ಯ ಲಭಿಸುವ ವೇಳೆಗೆ ಹರಿದು ಹಂಚಿಹೋಗಿದ್ದ ವಿವಿಧ ಭಾಗಗಳಲ್ಲಿ ಭಾರತ ಸರ್ಕಾರದ ವ್ಯಾಪ್ತಿಗೆ ತಂದು ಒಗ್ಗೂಡಿಸಿದ ಮಹಾನ್ ಕಾರ್ಯವನ್ನು ಮಾಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಸ್ಮರಣೆಗಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
No comments:
Post a Comment