Saturday, November 10, 2018

ಶ್ರೀಲಂಕಾ ಸಂಸತ್ ವಿಸರ್ಜಿಸಿದ ಅಧ್ಯಕ್ಷ ಸಿರಿಸೇನಾ


ಶ್ರೀಲಂಕಾ ಸಂಸತ್ ವಿಸರ್ಜಿಸಿದ ಅಧ್ಯಕ್ಷ ಸಿರಿಸೇನಾ

ಕೊಲಂಬೊ: ಶ್ರೀಲಂಕಾದ ಪ್ರಧಾನ ಮಂತ್ರಿಯನ್ನು ಬದಲಾಯಿಸುವ  ಪ್ರಯತ್ನದ ನಂತರ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಶುಕ್ರವಾರ ಮಧ್ಯರಾತ್ರಿ ಸಂಸತ್ತನ್ನು ವಿಸರ್ಜಿಸಿದ್ದಾರೆ.


ಶುಕ್ರವಾರ ಮಧ್ಯರಾತ್ರಿ ಜಾರಿಗೊಳಿಸಲಾಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಸಂಸತ್ತಿನ 2019 ಜನವರಿ ಜನವರಿ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಆದರೆ ಅಧಿಸೂಚನೆಯನ್ನು  ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಅವಕಾಶವಿದೆ.

ಅಧ್ಯಕ್ಷ ಸಿರಿಸೇನಾ ಅವರಿಂದ ವಜಾಗೊಂಡಿರುವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಸಂಸತ್ ವಿಸರ್ಜನೆಯ ಕ್ರಮ ತೆಗೆದುಕೊಳ್ಳಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ.


ಕಳೆದ ತಿಂಗಳು ಪ್ರಧಾನಿ ರಾನಿಲ್ ವಿಕ್ರ, ಸಿಂಘೆ ಮತ್ತು ಅವರ ಸಚಿವ ಸಂಪುಟವನ್ನು ವಜಾಗೊಳಿಸಿ, ಸಂಸತ್ತನ್ನು ಅಮಾನತುಗೊಳಿಸಿದ್ದ ಅಧ್ಯಕ್ಷ ಸಿರಿಸೇನಾ ಅವರು ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು.

ಆದರೆ ಶ್ರೀ ವಿಕ್ರಮಸಿಂಘೆ ಅವರು ಪ್ರಧಾನಿಯ ಅಧಿಕೃತ ನಿವಾಸವನ್ನು ತೆರವುಗೊಳಿಸಲು ನಿರಾಕರಿಸಿದ್ದಾರೆ.
ಸಂಸತ್ ವಿಸರ್ಜನೆ ಕ್ರಮವು "ಅಕ್ರಮ" ಎಂದು ರಾನಿಲ್ ವಿಕ್ರಮಸಿಂಘೆ ಅವರ  ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಸಂಸದರೊಬ್ಬರು ಪ್ರತಿಪಾದಿಸಿದ್ದು, ಅದು ತಿರಸ್ಕೃತವಾಗುವುದು ಎಂಬುದು ತಮ್ಮ ನಂಬಿಕೆ ಎಂದು ಹೇಳಿದ್ದಾರೆ.


ದೇಶದಲ್ಲಿ ರಕ್ತಪಾತವಾಗದಂತೆ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸುವಂತೆ ನಾವು ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಸಂಸದ ಎಂದು ಸಂಸದ ಅಜಿತ್ ಪೆರೇರಾ ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.


ಸಿರಿಸೇನಾ-ರಾಜಪಕ್ಸೆ ಗುಂಪು ಸಂಸತ್ತಿನಲ್ಲಿ ತಮಗೆ ಅಗತ್ಯವಿರುವಷ್ಟು ಸಂಖ್ಯಾಬಲ ಇಲ್ಲದ ಕಾರಣ ಕ್ಷಿಪ್ರ ಚುನಾವಣೆ ಮನಸ್ಸು ಮಾಡಿದೆ ಎಂದು ವರದಿಗಳು ತಿಳಿಸಿವೆ.


ಆದರೆ ಇದೇ ವೇಳೆಗೆ ಇದೇ ಸಮಯದಲ್ಲಿ ರಾಷ್ಟ್ರೀಯ ಚುನಾವಣೆಗೆ ಸಂಸತ್ತಿನ ಒಪ್ಪಿಗೆಯನ್ನು ಪಡೆಯಬೇಕು ಎಂದು ಯುಪಿಪಿಯು ಬಯಸುತ್ತದೆ ಎಂದು ವರದಿಗಳು ತಿಳಿಸಿವೆ.


ಅಧ್ಯಕ್ಷ ಸಿರಿಸೇನಾ ಮತ್ತು ಪ್ರಧಾನ ಮಂತ್ರಿಸ್ಥಾನದಿಂದ ವಜಾಗೊಂಡ ರಾನಿಲ್ ವಿಕ್ರಮ್ ಸಿಂಘೆ ಅವರು 2015 ಚುನಾವಣೆಯಲ್ಲಿ ಸುದೀರ್ಘ ಕಾಲದಿಂದ ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸೆ ಅವರನ್ನು ಸೋಲಿಸಲು ಪರಸ್ಪರ ಕೈಜೋಡಿಸಿದ್ದರು.


ಆದರೆ ಅವರಲ್ಲಿ ಭಿನ್ನಮತಗಳು ಬೆಳೆದು, ಸಿರಿಸೇನಾ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಮಾಡುವುದರೊಂದಿಗೆ ಮೈತ್ರಿಕೂಟವು ಪತನಗೊಂಡಿತ್ತು. ರಾನಿಲ್ ಅವರಿಂದ ದೂರವಾದ ಸಿರಿಸೇನಾ ಅವರು ರಾಜಪಕ್ಸೆ ಅವರೊಂದಿಗೆ ಕೈಜೋಡಿಸಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿರುವುದಾಗಿ ಘೋಷಿಸಿದ್ದರು.


ಬಂದರು ಒಂದನ್ನು ಭಾರತಕ್ಕೆ ಗುತ್ತಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿರಿಸೇನಾ ಮತ್ತು ವಿಕ್ರಮಸಿಂಘೆ ಅವರ ಮಧ್ಯೆ ಘರ್ಷಣೆ ಉಂಟಾಗಿ ಬಾಂಧವ್ಯ ಹಳಸಿತ್ತು ಎಂದು ವರದಿಗಳು ಹೇಳಿವೆ.


ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಿರುವುದಾಗಿ ಘೋಷಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಒಂದೆಡೆಯಲ್ಲಿ ರಾಜಪಕ್ಸೆ ಮತ್ತು ಇನ್ನೊಂದೆಡೆಯಲ್ಲಿ ವಿಕ್ರಮಸಿಂಘೆ ತಾವು ಸರ್ಕಾರದ ಮೇಲೆ ನಿಯಂತ್ರಣ ಹೊಂದಿರುವುದಾಗಿ ಪ್ರತಿಪಾದಿಸಿದರು. ರಾಜಪಕ್ಸೆ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸದ ವಿನಃ ಅವರನ್ನು ಪ್ರಧಾನಿಯಾಗಿ ಮಾನ್ಯ ಮಾಡಲಾಗದು ಎಂದು ಸಂಸತ್ತಿನ ಸ್ಪೀಕರ್ ಕೂಡಾ ಘೋಷಿಸಿದ್ದರು.


ಅಧ್ಯಕ್ಷರ ಕ್ರಮ ಸಂವಿಧಾನ ಬಾಹಿರ ಎಂಬುದಾಗಿ ಪ್ರತಿಪಾದಿಸಿದ ರಾನಿಲ್ ವಿಕ್ರಮಸಿಂಘೆ ಅವರು ಅಧಿಕೃತ ನಿವಾಸವನ್ನು ತೆರವುಗೊಳಿಸಲು ನಿರಾಕರಿಸುವುದರ ಜೊತೆಗೆ ಸಂಸತ್ ಸಮಾವೇಶಕ್ಕೆ ಆಗ್ರಹಿಸಿದ್ದರು. ಮಧ್ಯೆ ರಾಜಪಕ್ಸೆ ಅವರು ಸಚಿವ ಸಂಪುಟವನ್ನು ರಚಿಸಿ ಖಾತೆಗಳನ್ನೂ ಹಂಚಿದ್ದರು. ರಾನಿಲ್ ವಿಕ್ರಮಸಿಂಘೆ ಪಕ್ಷದ ನಾಲ್ವರಿಗೂ ಖಾತೆಗಳನ್ನು ನೀಡಿದ್ದರು.


ಘಟನಾವಳಿಗಳು ಹಿಂಸಾಚಾರಕ್ಕೆ ಕಾರಣವಾದವು. ಪದಚ್ಯುತ  ತೈಲಸಚಿವರ  ಅಂಗರಕ್ಷಕ ಅವರ ಕಚೇರಿಯ ಹೊರಗೆ ಪ್ರತಿಭಟನಾಕಾರರ ಗುಂಪಿನಲ್ಲಿ ಗುಂಡುಹಾರಿಸಿದಾಗ ಒಬ್ಬ ವ್ಯಕ್ತಿ ಸಾವನ್ನಪ್ಪಿದ.


ಪ್ರಾದೇಶಿಕ ಪ್ರತಿಸ್ಪರ್ಧಿಗಳು ಬೆಳವಣಿಗೆಗಳನ್ನು  ನಿಕಟವಾಗಿ ಗಮನಿಸುತ್ತಿದ್ದು,  ಚೀನಾ ರಾಜಪಕ್ಸೆ ಅವರನ್ನು ಅಭಿನಂದಿಸಿತ್ತು.  ಆದರೆ ಭಾರತ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಸಂವಿಧಾನವನ್ನು ಗೌರವಿಸಬೇಕೆಂದು ಕರೆ ನೀಡಿವೆ.

No comments:

Post a Comment