ನಾನು ಮೆಚ್ಚಿದ ವಾಟ್ಸಪ್

Wednesday, February 12, 2025

PARYAYA: ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ

 ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ

ಮಾಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ 12) ಲಕ್ಷಾಂತರ ಭಕ್ತರು ʼಮಾಘ ಪೂರ್ಣಿಮೆ ಪವಿತ್ರ ಸ್ನಾನʼ ಆರಂಭಿಸುವುದರೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ ನ ಗಂಗಾ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 2025ರ ಮಹಾಕುಂಭವು ಉತ್ತುಂಗಕ್ಕೆ ಏರಿದೆ.

ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮಾ ಪವಿತ್ರ ಸ್ನಾನ ಮಾಡುತ್ತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್‌ ಮೂಲಕ ʼಪುಷ್ಪ ವೃಷ್ಟಿʼ ಮಾಡಲಾಯಿತು.

ಪುಷ್ಪ ವೃಷ್ಟಿಯ ANI ವಿಡಿಯೋ ಇಲ್ಲಿದೆ.


ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಪವಿತ್ರ ಸ್ನಾನಕ್ಕಾಗಿ ಅಧಿಕಾರಿಗಳು ವಿಶೇಷ ವ್ಯವಸ್ಥೆಗಳನ್ನು ಅಳವಡಿಸಿದ್ದು, ಕಲ್ಪವಾಸಿಗಳ ವಾಹನಗಳಿಗೆ ಅವರ ಧಾರ್ಮಿಕ ಸ್ನಾನದ ನಂತರವೇ ಜಾತ್ರೆಗೆ ಪ್ರವೇಶವನ್ನು ಅನುಮತಿ ನೀಡಲಾಗುತ್ತಿದೆ.

ಕಲ್ಪವಾಸಿಗಳಿಗೆ ಮಾಘ ಪೂರ್ಣಿಮವು ಮತ್ತೊಂದು ಪವಿತ್ರ ಸ್ನಾನದ ಸಂದರ್ಭವಾಗಿದ್ದು ಸ್ನಾನದಾನ ಮತ್ತು ಪೂಜೆಯ ಧಾರ್ಮಿಕ ಮಹತ್ವದ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.

ಒಂದು ತಿಂಗಳ ಕಲ್ಪವಾಸದ  ಅವಧಿಯು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.

ಜನವರಿ 13ರಿಂದ ಈವರೆಗೆ 45 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದು, ಎರಡು ಪ್ರಮುಖ ಸ್ನಾನ ಹಬ್ಬಗಳು ಉಳಿದಿರುವುದರಿಂದಪವಿತ್ರ ಸ್ನಾನ ಮಾಡುವ ಒಟ್ಟು ಭಕ್ತರ ಸಂಖ್ಯೆ 50 ಕೋಟಿ ಮೀರುವ ನಿರೀಕ್ಷೆಯಿದೆ.

ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ. ಫೆಬ್ರವರಿ 3ರಂದು ಬಸಂತ್ ಪಂಚಮಿ - ಮೂರನೇ ಶಾಹಿ ಸ್ನಾನ ನಡೆದಿದ್ದು, ಇಂದು-ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಶಾಹಿ ಸ್ನಾನ ನಡೆಯುತ್ತಿದೆ. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಇನ್ನೊಂದು ಪವಿತ್ರ ಸ್ನಾನ ನೆರವೇರಲಿದೆ.

ಈ ಕೆಳಗಿನವುಗಳನ್ನೂ ಓದಿರಿ:

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

PARYAYA: ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ:   ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ ಮಾ ಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ 12) ಲಕ್ಷಾಂತರ ಭಕ್ತರು ʼ ಮಾಘ ಪೂರ್ಣಿಮೆ ಪವಿತ್ರ ಸ್ನಾನ ...

Tuesday, February 11, 2025

PARYAYA: ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

 ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

ಇದು ಸುವರ್ಣ ನೋಟ

ಬೆಂಗಳೂರಿನಲ್ಲಿ ಏರೋ ಇಂಡಿಯಾದ 15 ನೇ ಆವೃತ್ತಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಂದ 2025ರ ಫೆಬ್ರುವರಿ 10ರಂದು ಬೆಂಗಳೂರಿನ ಯಲಹಂಕ ಏರ್‌ ಫೋರ್ಸ್‌ ಸ್ಟೇಷನ್ನಿನಲ್ ಉದ್ಘಾಟನೆಗೊಂಡಿದೆ. ಇದರೊಂದಿಗೆ ಏಷ್ಯಾದ ಅತಿದೊಡ್ಡ ಏರೋಸ್ಪೇಸ್‌ ಮತ್ತು ರಕ್ಷಣಾ ಪ್ರದರ್ಶನ ಅನಾವರಣಗೊಂಡಿವೆ.

ʼದಿ ರನ್‌ ವೇ ಟು ಎ ಬಿಲಿಯನ್‌ ಅಪರ್ಚುನಿಟೀಸ್‌ʼ ಎಂಬ ವಿಶಾಲ ಥೀಮಿನೊಂದಿಗೆ ಆರಂಭವಾಗಿರುವ ಈ ʼಲೋಹದ ಹಕ್ಕಿಗಳʼ ಐದು ದಿನಗಳ ಮೇಳದಲ್ಲಿ ಭಾರತ ಸೇರಿದಂತೆ 90 ದೇಶಗಳ 900 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಅಂದಾಜು 30 ರಕ್ಷಣಾ ಮಂತ್ರಿಗಳು ಮತ್ತು 100 ಕ್ಕೂ ಹೆಚ್ಚು OEM ಗಳು (ಮೂಲ ಸಲಕರಣೆ ತಯಾರಕರು) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜಾಗತಿಕ ಏರೋಸ್ಪೇಸ್‌ ಕಂಪೆನಿಗಳ ಅತ್ಯಾಧುನಿಕ ವಿಮಾನಗಳು, ಹೆಲಿಕಾಪ್ಟರ್‌ ಇತ್ಯಾದಿ ಉತ್ಪನ್ನಗಳ ಜೊತೆಗೆ ಅತ್ಯಾಧುನಿಕ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ, ದೇಶೀ ಉತ್ಪನ್ನಗಳ ಉತ್ಪಾದನೆಯಲ್ಲಿ ಅಂತಾರಾಷ್ಟ್ಟೀಯ ಸಹಯೋಗ ಸಾಧನೆಯ ವೇದಿಕೆ ರೂಪಿಸಲು ಈ ಮೇಳ ಅನುವು ಮಾಡಿಕೊಡಲಿದೆ. ತನ್ಮೂಲಕ ʼಆತ್ಮ ನಿರ್ಭರ ಭಾರತʼ ಮತ್ತು ʼಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್‌ʼ ದೃಷ್ಟಿಗೆ ಅನುಗುಣವಾಗಿ 2047 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಅನುಗಣವಾದ ʼವಿಕಸಿತ ಭಾರತʼದ ಗುರಿ ಸಾಧನೆಗೆ ಒತ್ತು ಸಿಗಲಿದೆ.

ಗಡಚಿಕ್ಕುವ ಸದ್ದಿನೊಂದಿಗೆ ಬಾನಿನಲ್ಲಿ ಮೋಡಿ ಮಾಡುವ ವೈವಿಧ್ಯಮಯ ವಿಮಾನ, ಹೆಲಿಕಾಪ್ಟರುಗಳ ʼಬಾನಿನಾಟʼ ನೋಡಲು ತೆರಳಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಈ ʼವೈಮಾನಿಕ ಮೇಳʼ ಮೂಡಿ ಬಂದ ಬಗೆ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.

-ನೆತ್ರಕೆರೆ ಉದಯಶಂಕರ
















ಕೆಳಗಿನವುಗಳನ್ನೂ ಓದಿರಿ: 

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!:   ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…! ಇದು ಸುವರ್ಣ ನೋಟ ಬೆಂ ಗಳೂರಿನಲ್ಲಿ ಏರೋ ಇಂಡಿಯಾದ 15 ನೇ ಆವೃತ್ತಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿ...

Sunday, February 9, 2025

PARYAYA: ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌

 ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌

ಬೆಂಗಳೂರು: ಇದು ಬಹುಶಃ ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌ ಎಂಬುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳು 300 ಕಿಲೋಮೀಟರ್‌ಗಳಷ್ಟು ದೂರದಿಂದಲೇ ವಾಹನಗಳ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ ಎಂದು ವರದಿಗಳು ಹೇಳುತ್ತಿವೆ.

ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ಲಕ್ಷಾಂತರ ಯಾತ್ರಿಕರು 2025 ಫೆಬ್ರುವರಿ 9ರ ಭಾನುವಾರ ಕುಂಭಮೇಳದಿಂದ ನೂರಾರು ಕಿಲೋಮೀಟರ್‌ ದೂರದಲ್ಲೇ ತಮ್ಮ ಕಾರುಗಳಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ.

5 ಕಿಮೀ ಸಾಗಲು 5 ಗಂಟೆ ಹಿಡಿಯಿತು ಎಂದು ಭಾಸ್ಕರ ಸರ್ಮಾ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದರೆ, ವಾಹನ ದಟ್ಟಣೆಯ ವಿಡಿಯೋ ಪೋಸ್ಟ್‌ ಮಾಡಿರುವ ನಿತುನ್‌ ಕುಮಾರ್‌ ಪ್ರಯಾಗರಾಜ್‌ ಗೆ ಬರುವ ಮುನ್ನ ಯೋಚಿಸಿ ಯೋಜನೆ ಮಾಡಿಕೊಂಡು ಬನ್ನಿ ಎಂದು ಸಲಹೆ ಮಾಡಿದ್ದಾರೆ.

ಇಲ್ಲಿ ವಿಡಿಯೋ ನೋಡಿ:

ಈ ಅಭೂತಪೂರ್ವ ವಾಹನದಟ್ಟಣೆ ದಟ್ಟಣೆಮಧ್ಯಪ್ರದೇಶದ ಮೂಲಕ ಮಹಾ ಕುಂಭಮೇಳಕ್ಕೆ ಹೋಗುವ ವಾಹನಗಳ ಯಾತ್ರಿಕರ ಅನುಭವಕ್ಕೆ ಬಂದಿದೆ. ಈ ವಾಹನ ದಟ್ಟಣೆ ಸುಮಾರು 200-300 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ ಎಂದು ವರದಿಗಳು ಹೇಳಿವೆ.

ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಂಚಾರವನ್ನು ಪೊಲೀಸರು ನಿಲ್ಲಿಸಿದರು. ಇದಕ್ಕೆ ಮಧ್ಯಪ್ರದೇಶದಿಂದ ಪ್ರಯಾಗರಾಜ್‌ಗೆ ಹೋಗುವ ರಸ್ತೆಗಳಲ್ಲಿ ಉಂಟಾಗಿರುವ ಭಾರೀ ದಟ್ಟಣೆ ಕಾರಣ. ವಾಹನ ಹಾಗೂ ಜನದಟ್ಟಣೆ ನಿವಾರಿಸಲು ಈ ವಾಹನಗಳ ಸಂಚಾರ ತಡೆಗಟ್ಟಬೇಕಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಮಧ್ಯಪ್ರದೇಶದಲ್ಲೇ ಸುರಕ್ಷಿತರ ಆಶ್ರಯಗಳನ್ನು ಹುಡುಕಿಕೊಳ್ಳುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ ಎಂದೂ ವರದಿ ಹೇಳಿದೆ.

ಕಟ್ನಿ ಜಿಲ್ಲೆಯಲ್ಲಿ  ಸೋಮವಾರದವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಹಾರ್ ಪೊಲೀಸರು ವಾಹನಗಳು ಕಟ್ನಿ ಮತ್ತು ಜಬಲ್ಪುರದ ಕಡೆಗೆ ಹಿಂತಿರುಗಿ ಅಲ್ಲಿಯೇ ಇರಬೇಕೆಂದು ಅವರು ಕೇಳಿಕೊಂಡಿದ್ದಾರೆ. "ಇಂದು ಪ್ರಯಾಗರಾಜ್ ಕಡೆಗೆ ಚಲಿಸುವುದು ಅಸಾಧ್ಯ ಏಕೆಂದರೆ 200-300 ಕಿಲೋಮೀಟರ್ ಟ್ರಾಫಿಕ್ ಜಾಮ್ ಇದೆ" ಎಂದು ಪೊಲೀಸರು ಹೇಳಿರುವುದಾಗಿ ವರದಿ ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿನ ಹಲವಾರು ವೀಡಿಯೊಗಳು ಮಧ್ಯಪ್ರದೇಶದ ಕಟ್ನಿಜಬಲ್ಪುರಮೈಹಾರ್ ಮತ್ತು ರೇವಾ ಜಿಲ್ಲೆಗಳಾದ್ಯಂತ ರಸ್ತೆಗಳಲ್ಲಿ ಸಾವಿರಾರು ಕಾರುಗಳು ಮತ್ತು ಟ್ರಕ್‌ಗಳ ಬೃಹತ್ ಸರತಿ ಸಾಲುಗಳನ್ನು ತೋರಿಸಿವೆ.

ರೇವಾ ಜಿಲ್ಲೆಯ ಚಕ್ಘಾಟ್‌ನಲ್ಲಿ ಕಟ್ನಿಯಿಂದ ಮಧ್ಯಪ್ರದೇಶ-ಉತ್ತರ ಪ್ರದೇಶದ ಗಡಿಗಳವರೆಗಿನ 250 ಕಿಮೀ ವ್ಯಾಪ್ತಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜನವರಿ 13 ರಂದು ಆರಂಭವಾಗಿ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳವುಗಂಗಾಯಮುನಾಸರಸ್ವತಿ ನದಿಗಳ ಸಂಗಮಸ್ಥಳವಾದ ಪ್ರಯಾಗರಾಜ್‌ ನಲ್ಲಿ ʼಪವಿತ್ರ ಸ್ನಾನʼಕ್ಕಾಗಿ ದೇಶಾದ್ಯಂತ ಮತ್ತು ವಿದೇಶಗಳಿಂದ 40 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಇದು 144 ವರ್ಷಗಳ ಬಳಿಕ ಬಂದಿರುವುದು ವಿಶೇಷವಾಗಿದ್ದು, ಇನ್ನೊಮ್ಮೆ ಬರಲು 144 ವರ್ಷ ಕಾಯಬೇಕಾಗಿರುವುದರಿಂದ ಜನದಟ್ಟಣೆ ಹೆಚ್ಚಿದೆ.

ಇದನ್ನೂ ಓದಿ:

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ! 

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌:   ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌ ಬೆಂ ಗಳೂರು: ಇದು ಬಹುಶಃ ವಿಶ್ವದ ಅತಿದೊಡ್ಡ ಟ್ರಾಫಿಕ್‌ ಜಾಮ್‌ ಎಂಬುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ. ಉತ್ತರ ಪ್ರದೇಶದ ಪ್...

Saturday, February 8, 2025

Friday, February 7, 2025

PARYAYA: ದೆಹಲಿ ಯಾರಿಗೆ?

ದೆಹಲಿ ಯಾರಿಗೆ?


ಕ್ಷಣ ಕ್ಷಣದ ಫಲಿತಾಂಶಕ್ಕೆಇಲ್ಲಿ ಕ್ಲಿಕ್‌ ಮಾಡಿ
PARYAYA: ದೆಹಲಿ ಯಾರಿಗೆ?: ದೆಹಲಿ ಯಾರಿಗೆ? ಕ್ಷಣ ಕ್ಷಣದ ಫಲಿತಾಂಶಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Sunday, January 26, 2025

PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫

ಗಣರಾಜ್ಯೋತ್ಸವ ಸಂಭ್ರಮ-೨೦೨೫

ಭಾರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕವಿ, ಬರಹಗಾರ, ಸಮಾಜ ಸೇವಕ ಸ್ಟೀಫನ್‌ ಜೋಸೆಫ್‌ ಅವರು ಧ್ವಜಾರೋಹಣ ನೆರವೇರಿಸಿ ದೇಶದ ಬಗ್ಗೆ ತಾವೇ ರಚಿಸಿದ ಕವನವನ್ನು ವಾಚಿಸಿದರು. ಪುಟ್ಟ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು.

ಸಂಘದ ಅಧ್ಯಕ್ಷ ರಾಜೇಶ ಕಮಲಾಕರ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.  ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.




ನೆತ್ರಕೆರೆ ಉದಯಶಂಕರ ಭಟ್‌
 ಕಾರ್ಯಕ್ರಮ ನಿರ್ವಹಣೆ.


ಸ್ಟೀಫನ್‌ ಜೋಸೆಫ್‌ ಮುಖ್ಯ ಅತಿಥಿ.
                                                                                                    ರಾಜೇಶ ಕಮಲಾಕರ ಹೆಗಡೆ ಅಧ್ಯಕ್ಷ ಭಾಷಣ.

ಹಾಗೆಯೇ ರಾಷ್ಟ್ರಮಟ್ಟದಲ್ಲಿ ನಡೆದ ಗಣರಾಜ್ಯೋತ್ಸವದ ಸಂಭ್ರಮವನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ. 


PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫: ಗಣರಾಜ್ಯೋತ್ಸವ ಸಂಭ್ರಮ-೨೦೨೫ ಭಾ ರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್...

Tuesday, January 14, 2025

PARYAYA: ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

 ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಇದು ಸುವರ್ಣ ನೋಟ!

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್‌ ಮಹಾ ಕುಂಭಮೇಳದ ಭಕ್ತರಿಂದ ಮೈ ನಡುಗುವ ಚಳಿಯಲ್ಲೂ ಗಿಜಿಗಿಡುತ್ತಿದೆ. ಯಾವ ಚಳಿಯನ್ನೂ ಲೆಕ್ಕಿಸದೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.

ಈ ಭವ್ಯ ಮೇಳದ ಸಂಭ್ರಮದ ಚಿತ್ರಗಳು, ವಿಡಿಯೋಗಳು ಯೂ ಟ್ಯೂಬ್‌, ಪತ್ರಿಕೆ, ಟಿವಿ ಚಾನೆಲ್‌ ಗಳಲ್ಲಿ ರಾರಾಜಿಸುತ್ತಿವೆ    ಮೇಳದ ಭವ್ಯತೆಯ ಕ್ಷಣಗಳ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಳಿಯಲ್ಲಿ ಗಢಗಢ ನಡುಗುವ ಈ ಹೊತ್ತಿನಲ್ಲಿ ʼಹೊಳೆ – ನದಿʼಗಳಲ್ಲಿ ಮುಳುಗೇಳುವ ಭಕ್ತರ ಸಂಭ್ರಮದ ಹೊತ್ತಿನಲ್ಲಿ, ʼನಾಗರ ಹೊಳೆʼ ಹೇಗಿರುತ್ತದೋ ಏನೋ ಎಂದು ನೋಡುವ ಇಚ್ಛೆಯಾಯಿತು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ.

ಯೋಚನೆ ಬಂದ ಬಳಿಕ ಸುಮ್ಮನೇ ಕೂರುವ ಜಾಯಮಾನ ಅವರದಲ್ಲ. ಹೆಗಲಿಗೆ ಕ್ಯಾಮರಾ ಏರಿಸಿ ಹೊರಟೇ ಬಿಟ್ಟರು ಸುವರ್ಣ ʼನಾಗರಹೊಳೆʼಗೆ. ನಾಗರ ಹೊಳೆಯ ಈ ಪಯಣ ʼಮಂಜು ಮುಸುಕಿದ ಹಾದಿʼಯಾಗಿತ್ತು.



ʼನಾಗರ ಹೊಳೆʼಯಲ್ಲಿ ಚಳಿಗಾಲದ ಸಂಭ್ರಮ ಹೇಗಿತ್ತು ಎಂಬುದು ಸುವರ್ಣ ಅವರ ಕ್ಯಾಮರಾದಲ್ಲಿ ಸೆರೆಯಾಯಿತು. ಅದನ್ನು ನೋಡುವ ಅವಕಾಶ ಇಲ್ಲಿದೆ. ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಬಿಂಬ-ಪ್ರತಿಬಿಂಬ!
ಹಿಮಾಲಯವಲ್ಲ, ಹಿಮದ ನಾಗರ ಹೊಳೆ!
ಮುಸುಕಿದೀ ಮಬ್ಬಿನಲಿ...
    ಹೊಟ್ಟೆ ತಾಳ ಹಾಕದಿರುತ್ತದೆಯೇ..?

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!:   ನಾಗರ ʼ ಹೊಳೆ ʼ ಯಲ್ಲಿ ಹಿಮ-ಚಳಿ ಮೇಳ! ಇದು ಸುವರ್ಣ ನೋಟ! ಗಂ ಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್‌ ಮಹಾ ಕುಂಭಮೇಳದ ಭಕ್ತರಿಂ...