Saturday, July 29, 2023

PARYAYA: ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

 ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂʼ

ಕ್ಷ ಪುರುಷೋತ್ತಮ ಶ್ರೀ ದೀಪಕ್ ರಾವ್ ಪೇಜಾವರ ಅವರ ‘ಹರಿ ದರುಶನ - ಏಕ ವ್ಯಕ್ತಿ ನವರೂಪಂ’ ಎಂಬ ಯಕ್ಷಗಾನ ಪ್ರದರ್ಶನ ಇದೀಗ ಶಾಲೆ.ಕಾಮ್‌ ನಲ್ಲಿ ನಡೆಯುತ್ತಿದೆ.

ಇದರಲ್ಲಿ ದೀಪಕ್ ಅವರು ಒಂಬತ್ತು ಪಾತ್ರಗಳನ್ನು ಸ್ವತಃ ತಾವೇ ನಿರ್ವಹಿಸಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ ಪ್ರದರ್ಶನ ಇದು. ಸಂಪೂರ್ಣ ಪ್ರಸ್ತುತಿಯು ಸುಧನ್ವ ಮೋಕ್ಷವನ್ನು ಆಧರಿಸಿದೆಇದು ಜೈಮಿನಿ ಭಾರತದಿಂದ ಆಯ್ಕೆ ಮಾಡಿರುವ ಉಪಕಥೆ.

ಹಂಸಧ್ವಜಧೂತಸುಧನ್ವಸುಗರ್ಭೆಕುವಳೆಪ್ರಭಾವತಿಅರ್ಜುನಅನುಸಾಲ್ವಕೃಷ್ಣ ಎಂಬ ಒಂಬತ್ತು ಪಾತ್ರಗಳನ್ನೂ ದೀಪಕ್ ಅನಾಯಾಸವಾಗಿ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯವರಾದ ದೀಪಕ್‌ ಪ್ರಸ್ತುತ ಬಹರೇನಿನ ಅಲ್‌ ನೂರ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾರೆ.

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದ ದೀಪಕ್‌  ಸ್ವಲ್ಪ ಕಾಲ ಮಂಗಳೂರಿನ ಮಿಲಾಗ್ರಿಸ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದರು.

ʼಹರಿದರುಶನ- ಏಕ ವ್ಯಕ್ತಿ ನವರೂಪಂʼ ಗಂಡು ಕಲೆ ಯಕ್ಷಗಾನದ ಇತಿಹಾಸದಲ್ಲಿಯೇ ಒಂದು ವಿನೂತನ ಪ್ರಯೋಗ. ಇದರ ಸೊಬಗನ್ನು ನೋಡಿಯೇ ಆನಂದಿಸಬೇಕು.

ಶಾಲೆ.ಕಾಮ್‌ ನಲ್ಲಿ (Shaale.com) ಜುಲೈ 29ರ ಬೆಳಗ್ಗೆ 8.30ರಿಂದ ಇದರ ಪ್ರದರ್ಶನ ಆರಂಭವಾಗಿದ್ದು, ಆಗಸ್ಟ್‌ 29ರ ಮಧ್ಯಾಹ್ನ 12.30ರವರೆಗೆ ವೀಕ್ಷಣೆಗೆ ಲಭಿಸುತ್ತದೆ.

ಯಕ್ಷಗಾನ ಪ್ರಯೋಗದ ಒಂದು  ವಿಡಿಯೋ ಝಲಕ್‌ ಇಲ್ಲಿದೆ:


ಕಲಾ ಪ್ರೇಮಿಗಳು https://shaale.com/watch/ಹರಿದರುಶನ ಈ ಕೊಂಡಿಯನ್ನು (ಲಿಂಕ್)‌ ಬಳಸಿ ಇದರ ಸ್ವಾದವನ್ನು ಆಸ್ವಾದಿಸಬಹುದು.

-      ನೆತ್ರಕರೆ ಉದಯಶಂಕರ

PARYAYA: ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ:   ವಿನೂತನ ಯಕ್ಷಗಾನ ಪ್ರದರ್ಶನ ʼ ಹರಿದರುಶನ-ಏಕವ್ಯಕ್ತಿ ನವರೂಪಂʼ ಯ ಕ್ಷ ಪುರುಷೋತ್ತಮ ಶ್ರೀ ದೀಪಕ್ ರಾವ್ ಪೇಜಾವರ ಅವರ ‘ಹರಿ ದರುಶನ - ಏಕ ವ್ಯಕ್ತಿ ನವರೂಪಂ’ ಎಂಬ ಯಕ್...

Saturday, July 15, 2023

PARYAYA: ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

 ಪಾಕಿಸ್ತಾನ ವರ್ಸಸ್‌ ಭಾರತಇಲ್ಲಿ ಉಂಟು 'ಆದ್ಯತೆʼ!

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ್ದದುಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಈ ಮಧ್ಯೆ ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಈ ಸ್ಕ್ರೀನ್‌ಶಾಟ್ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400 ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ., ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ 'ನೋವಿನ ಮೂಲಕ ನಗುತ್ತಿರುವಎಮೋಜಿಯು ಎರಡು ದೇಶಗಳ ವಿಭಿನ್ನ 'ಆದ್ಯತೆಗಳನ್ನುಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.


PARYAYA: ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!:   ಪಾಕಿಸ್ತಾನ ವರ್ಸಸ್‌ ಭಾರತ : ಇಲ್ಲಿ ಉಂಟು ' ಆದ್ಯತೆ ʼ! ಬೆಂಗಳೂರು:   ಭಾರತ ವು ನಡೆಸಿರುವ ಚಂದ್ರಯಾನ- 3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸ...