ಇಂದಿನ ಇತಿಹಾಸ History Today ಮಾರ್ಚ್ 07
2018: ಬೆಂಗಳೂರು: ಕರ್ನಾಟಕ
ಲೋಕಾಯುಕ್ತ
ನ್ಯಾಯಮೂರ್ತಿ
ಪಿ.
ವಿಶ್ವನಾಥ
ಶೆಟ್ಟಿ
ಅವರನ್ನು
ಅವರ
ಕಚೇರಿಯಲ್ಲೇ
ದುಷ್ಕರ್ಮಿಯೊಬ್ಬ
ಚೂರಿಯಿಂದ
ಇರಿದ
ಘಟನೆ
ಮಧ್ಯಾಹ್ನ
ಘಟಿಸಿತು.
ಲೋಕಾಯುಕ್ತರು ಪ್ರಾಣಾಪಾಯದಿಂದ
ಪಾರಾಗಿದ್ದಾರೆ
ಎಂದು
ಆಸ್ಪತ್ರೆ
ಮೂಲಗಳು
ತಿಳಿಸಿದವು.
ಘಟನೆ
ಬಗ್ಗೆ
ಉನ್ನತ
ತನಿಖೆಗೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಆಜ್ಞಾಪಿಸಿದರು.
ಲೋಕಾಯುಕ್ತರನ್ನು ಇರಿದ ದುಷ್ಕರ್ಮಿಯನ್ನು
ಬಂಧಿಸಲಾಗಿದ್ದು,
ತೇಜಸ್
ಯಾನೆ
ತೇಜರಾಜ
ಶರ್ಮ
ಎಂಬುದಾಗಿ
ಗುರುತಿಸಲಾಯಿತು.
ಲೋಕಾಯುಕ್ತ
ಕಚೇರಿಯ
ಪ್ರವೇಶ
ದಾಖಲೆಯಲ್ಲಿ
ಈತ
ತಾನು
ವಕೀಲ
ಎಂಬುದಾಗಿ
ಬರೆದು
ಲೋಕಾಯುಕ್ತ
ಕಚೇರಿಯನ್ನು
ಪ್ರವೇಶಿಸಿದ್ದ
ಎಂದು
ಲೋಕಾಯುಕ್ತ
ಮೂಲಗಳು
ತಿಳಿಸಿದವು. ದೂರು ದಾಖಲಿಸುವ
ನೆಪದಲ್ಲಿ
ಶರ್ಮ
ಲೋಕಾಯುಕ್ತ
ಕಚೇರಿಯನ್ನು
ಪ್ರವೇಶಿಸಿದ್ದ.
ಐದು
ನಿಮಿಷಗಳ
ಬಳಿಕ
ಹೊರಗಿದ್ದ
ಸಿಬ್ಬಂದಿಗೆ
ಒಳಗಿನಿಂದ
ಚೀರಾಟದ
ಸ್ವರ
ಕೇಳಿಸಿತು.
ತತ್
ಕ್ಷಣವೇ
ಅವರು
ಒಳಕ್ಕೆ
ಧಾವಿಸಿದರು.
ಅಷ್ಟರಲ್ಲೇ
ಮೂರು
ಬಾರಿ
ಇರಿತಕ್ಕೆ
ಒಳಗಾಗಿದ್ದ
ವಿಶ್ವನಾಥ
ಶೆಟ್ಟಿ
ಅವರು
ರಕ್ತದ
ಮಡುವಿನಲ್ಲಿ
ಬಿದ್ದಿದ್ದರು.
ತತ್
ಕ್ಷಣವೇ
ಅವರನ್ನು
ಸಮೀಪದ
ಮಲ್ಯ
ಆಸ್ಪತ್ರೆಗೆ
ಒಯ್ದು
ದಾಖಲಿಸಲಾಯಿತು
ಎಂದು
ಮೂಲಗಳು
ಹೇಳಿದವು.
ಬಳಿಕ ಆಸ್ಪತ್ರೆಯ
ವೈದ್ಯರು
ನ್ಯಾಯಮೂರ್ತಿ
ವಿಶ್ವನಾಥ
ಶೆಟ್ಟಿ
ಅವರು
ಅಪಾಯದಿಂದ
ಪಾರಾಗಿದ್ದು,
ಅವರ
ಆರೋಗ್ಯ
ಸ್ಥಿರವಾಗಿದೆ
ಎಂದು
ತಿಳಿಸಿದರು. ಘಟನೆ ನಡೆದ
ಬೆನ್ನಲ್ಲೇ
ಧಾವಿಸಿದ
ಪೊಲೀಸರು
ಚೂರಿಯಿಂದ
ಇರಿದ
ಶರ್ಮನನ್ನು
ನಿರಾಯುಧನನ್ನಾಗಿ
ಮಾಡಿ
ವಶಕ್ಕೆ
ತೆಗೆದುಕೊಂಡರು.
ಹಲ್ಲೆಗೆ
ಕಾರಣವೇನು
ಎಂಬುದಾಗಿ
ಪೊಲೀಸರು
ತನಿಖೆ
ನಡೆಸುತ್ತಿದ್ದಾರೆ.ಉಪಲೋಕಾಯುಕ್ತ
ನ್ಯಾಯಮೂರ್ತಿ
ಸುಭಾಶ್
ಬಿ.
ಅಡಿ
ಅವರು
ಹಲ್ಲೆಯ
ವೇಳೆಯಲ್ಲಿ
ಕಚೇರಿಯಲ್ಲಿ
ಇರಲಿಲ್ಲ
ಎಂದು
ಮೂಲಗಳು
ಹೇಳಿದವು. ಮುಖ್ಯಮಂತ್ರಿ ಭೇಟಿ, ತನಿಖೆಗೆ
ಆದೇಶ:
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಸುದ್ದಿ
ತಿಳಿಯುತ್ತಿದ್ದಂತೆಯೇ
ಸಂಪುಟ
ಸಹೋದ್ಯೋಗಿಗಳಾದ
ಗೃಹ
ಸಚಿವ
ರಾಮಲಿಂಗಾ
ರೆಡ್ಡಿ,
ನಗರಾಭಿವೃದ್ಧಿ
ಸಚಿವ
ಕೆ.ಜೆ.
ಜಾರ್ಜ್,
ಜಲ
ಸಂಪನ್ಮೂಲಾಭಿವೃದ್ಧಿ
ಸಚಿವ
ಎಂ.ಬಿ.
ಪಾಟೀಲ್
ಮತ್ತು
ಹಿರಿಯ
ಪೊಲೀಸ್
ಅಧಿಕಾರಿಗಳೊಂದಿಗೆ
ಆಸ್ಪತ್ರೆಗೆ
ಧಾವಿಸಿದರು.
ಸಿದ್ದರಾಮಯ್ಯ
ಅವರು
ಶೆಟ್ಟಿ
ಅವರಿಗೆ
ಚಿಕಿತ್ಸೆ
ನೀಡುತ್ತಿರುವ
ವೈದ್ಯರ
ಬಳಿ
ಮಾತನಾಡಿದರು
ಎಂದು
ಮೂಲಗಳು
ಹೇಳಿದವು.
ಆಸ್ಪತ್ರೆಯ ಹೊರಗೆ
ವರದಿಗಾರರ
ಜೊತೆ
ಮಾತನಾಡಿದ
ಮುಖ್ಯಮಂತ್ರಿ,
ದಾಳಿಕೋರ
ಲೋಕಾಯುಕ್ತರ
ಕಚೇರಿಗೆ
ಕೊಲ್ಲುವ
ಉದ್ದೇಶದಿಂದಲೇ
ಬಂದಂತೆ
ಕಾಣುತ್ತದೆ
ಎಂದು
ಹೇಳಿದರು.
ಘಟನೆಯ
ಬಗ್ಗೆ
ಉನ್ನತ
ಮಟ್ಟದ
ತನಿಖೆ
ನಡೆಸುವಂತೆ
ತಾವು
ಆಜ್ಞಾಪಿಸಿದ್ದು,
ಭದ್ರತಾ
ವ್ಯವಸ್ಥೆಯಲ್ಲಿ
ಏನಾದರೂ
ಲೋಪ
ಸಂಭವಿಸಿದೆಯೇ
ಎಂದು
ತಿಳಿಯುವಂತೆಯೂ
ಪೊಲೀಸ್
ಮಹಾನಿರ್ದೇಶಕರಾದ
ನೀಲಮಣಿ
ಎನ್
ರಾಜು
ಅವರಿಗೆ
ನಿರ್ದೇಶಿಸಿದರು.
ಲೋಕಾಯುಕ್ತರಿಗೆ
ದಾಳಿಕೋರ
ಚೂರಿಯಿಂದ
ಇರಿದ
ಸಂದರ್ಭದಲ್ಲಿ
ಲೋಕಾಯುಕ್ತರ
ಗನ್
ಮ್ಯಾನ್
ಚೇಂಬರಿನಿಂದ
ಹೊರಗಿದ್ದ.
ಪೊಲೀಸರು
ಆತನನ್ನು
ಬಂಧಿಸಿ
ತನಿಖೆ
ನಡೆಸುತ್ತಿದ್ದಾರೆ
ಎಂದು
ಮುಖ್ಯಮಂತ್ರಿ
ನುಡಿದರು.
ಲೋಕಾಯುಕ್ತರು
ಈಗ
ಪ್ರಾಣಾಪಾಯದಿಂದ
ಪಾರಾಗಿರುವುದಾಗಿ
ವೈದ್ಯರು
ತಿಳಿಸಿದ್ದಾರೆ
ಎಂದು
ಮುಖ್ಯಮಂತ್ರಿ
ಹೇಳಿದರು.
’ಆತನಿಗೆ
(ಆರೋಪಿ)
ಲೋಕಾಯುಕ್ತರ
ಚೇಂಬರಿಗೆ
ಹೋಗಲು
ಬಿಡಲಾಗಿತ್ತು.
ಲೋಕಾಯುಕ್ತರು
ಗನ್
ಮ್ಯಾನ್
ರಕ್ಷಣೆ
ಹೊಂದಿದ್ದಾರೆ.
ಆದರೆ
ಆತ
ಹೊರಗೆ
ಕುಳಿತಿದ್ದ.
ನನ್ನನ್ನು
ನೋಡಲೂ
ಬಹಳಷ್ಟು
ಮಂದಿ
ಬರುತ್ತಾರೆ.
ಎಲ್ಲರನ್ನೂ
ಕೂಲಂಕಷ
ತನಿಖೆಗೆ
ಒಳಪಡಿಸಲಾಗುವುದಿಲ್ಲ.
ಭದ್ರತಾ
ಲೋಪದ
ಆಯಾಮದ
ಬಗೆಗೂ
ನಾವು
ಪರಿಶೀಲಿಸುತ್ತಿದ್ದೇವೆ
ಎಂದು
ಮುಖ್ಯಮಂತ್ರಿ
ಹೇಳಿದರು.
ಲೋಕಾಯುಕ್ತರಿಗೆ
ಲಭ್ಯವಿರುವ
ಅತ್ಯುತ್ತಮ
ಚಿಕಿತ್ಸೆ
ಒದಗಿಸಲಾಗುತ್ತಿದೆ
ಎಂದು
ಗೃಹ
ಸಚಿವ
ರಾಮಲಿಂಗಾರೆಡ್ಡಿ
ನುಡಿದರು.
’ಆರೋಪಿ
ಲೋಕಾಯುಕ್ತರ
ಜೊತೆಗೆ
ಭೇಟಿಗೆ
ಮೊದಲೇ
ಸಮಯಾವಕಾಶ
ಪಡೆದಿದ್ದನೇ
ಅಥವಾ
ಲೋಕಾಯುಕ್ತ
ಚೇಂಬರಿಗೆ
ಏಕಾಏಕಿ
ನುಗ್ಗಿದನೇ
ಎಂಬುದು
ಗೊತ್ತಿಲ್ಲ.
ಪೊಲೀಸರು
ಆತನನ್ನು
ಪ್ರಶ್ನಿಸುತ್ತಿದ್ದಾರೆ’
ಎಂದು
ರೆಡ್ಡಿ
ಹೇಳಿದರು.ಮಾಜಿ
ಲೋಕಾಯುಕ್ತ
ನ್ಯಾಯಮೂರ್ತಿ
ಸಂತೋಷ್
ಹೆಗ್ಡೆ
ಪ್ರತಿಕ್ರಿಯೆ:
’ದಾಳಿ
ಘಟನೆ
ದುರದೃಷ್ಟಕರ.
ಇದು
ಭದ್ರತಾ
ವೈಫಲ್ಯ’
ಎಂದು
ಮಾಜಿ
ಲೋಕಾಯುಕ್ತ
ನ್ಯಾಯಮೂರ್ತಿ
ಎನ್.
ಸಂತೋಷ
ಹೆಗ್ಡೆ
ಪ್ರತಿಕ್ರಿಯಿಸಿದ್ದಾರೆ. ’ಲೋಕಾಯುಕ್ತ ಕಚೇರಿಯಲ್ಲಿ
ಲೋಹಶೋಧಕ
ಇದೆ.
ಸಂದರ್ಶಕರ
ತಪಾಸಣೆಗೆ
ಪೊಲೀಸರು
ಕೈಯಲ್ಲಿ
ಹಿಡಿಯುವ
ಲೋಹಶೋಧಕವನ್ನು
ಬಳಸಬೇಕಿತ್ತು.
ಈ
ಪ್ರಕರಣದಲ್ಲಿ
ಇದನ್ನು
ಮಾಡಿಲ್ಲ
ಎಂಬುದು
ಸ್ಪಷ್ಟ’
ಎಂದು
ಹೆಗ್ಡೆ
ನುಡಿದರು.
ರಾಜಕೀಯ
ಕೆಸರೆರಚಾಟ:
ಘಟನೆಗೆ
ಸಂಬಂಧಿಸಿದಂತೆ
ಈಗಾಗಲೇ
ರಾಜಕೀಯ
ಕೆಸರೆರಚಾಟ
ಆರಂಭವಾಗಿದ್ದು
ವಿರೋಧಿ
ಬಿಜೆಪಿ
ಮತ್ತು
ಜನತಾದಳಗಳು
ಚುನಾವಣೆಗೆ
ಸಜ್ಜಾಗುತ್ತಿರುವ
ರಾಜ್ಯದ
ಆಡಳಿತಾರೂಢ
ಕಾಂಗ್ರೆಸ್
ಪಕ್ಷವನ್ನು
ಕಾನೂನು
ಸುವ್ಯವಸ್ಥೆ
ಕುಸಿತಕ್ಕಾಗಿ
ತರಾಟೆಗೆ
ತೆಗೆದುಕೊಂಡವು. ಮಾಜಿ ಪ್ರಧಾನಿ
ಮತ್ತು
ಜೆಡಿ
(ಎಸ್)
ಮುಖ್ಯಸ್ಥ
ಎಚ್.ಡಿ.
ದೇವೇಗೌಡ
ಅವರು
ಘಟನೆಯನ್ನು
ಖಂಡಿಸಿ,
’ಇದು
ಸಿದ್ದರಾಮಯ್ಯ
ಸರ್ಕಾರದ
ವೈಫಲ್ಯ’
ಎಂದು
ಹೇಳಿದರು. ಬಿಜೆಪಿಗೆ ಆಘಾತ:
ದಾಳಿ
ಬಗ್ಗೆ
ಆಘಾತ
ವ್ಯಕ್ತ
ಪಡಿಸಿದ
ಬಿಜೆಪಿ,
ರಾಜ್ಯದಲ್ಲಿ
ಕಾನೂನು
ಸುವ್ಯವಸ್ಥೆ
ಕುಸಿದಿದೆ
ಎಂಬ
ತನ್ನ
ಆಪಾದನೆಗೆ
ಇದು
ಇನ್ನೊಂದು
ನಿದರ್ಶನ
ಎಂದು
ಹೇಳಿತು.
’ನ್ಯಾಯಮೂರ್ತಿ
ವಿಶ್ವನಾಥ
ಶೆಟ್ಟಿ
ಅವರಿಗೆ
ವ್ಯಕ್ತಿಯೊಬ್ಬ
ಅವರ
ಕಚೇರಿಯಲ್ಲಿಯೇ
ಇರಿದ
ಘಟನೆಯಿಂದ
ನಾನು
ಆಘಾತಗೊಂಡಿದ್ದೇನೆ.
ಕರ್ನಾಟಕದ
ಗೌರವಾನ್ವಿತ
ನ್ಯಾಯಮೂರ್ತಿಯವರಿಗೇ
ಹೀಗಾಗಿದೆ.
ಕರ್ನಾಟಕದಲ್ಲಿ
ಅರಾಜಕತೆ
ತಾಂಡವವಾಡುತ್ತಿದೆ.
ಶ್ರೀ
ವಿಶ್ವನಾಥ
ಶೆಟ್ಟಿ
ಅವರ
ಆರೋಗ್ಯಕ್ಕಾಗಿ
ಪ್ರಾರ್ಥಿಸೋಣ’
ಎಂದು
ಕೇಂದ್ರ
ಸಚಿವ
ಡಿ.ವಿ.
ಸದಾನಂದ
ಗೌಡ
ಟ್ವೀಟ್
ಮಾಡಿದರು.
’ದುಷ್ಕರ್ಮಿಗೆ
ಲೋಕಾಯುಕ್ತರನ್ನು
ಅವರ
ಕಚೇರಿಯಲ್ಲಿಯೇ
ಇರಿಯುವ
ಧೈರ್ಯ
ಬಂದ
ವಾಸ್ತವಾಂಶವು
ದುರ್ಬಲ
ಕಾನೂನು
ಸುವ್ಯವಸ್ಥೆಯ
ಸ್ಪಷ್ಟ
ಸೂಚಕ’
ಎಂದು
ಬಿಜೆಪಿ
ರಾಜ್ಯ
ಅಧ್ಯಕ್ಷ
ಬಿ.ಎಸ್.
ಯಡಿಯೂರಪ್ಪ
ತಮ್ಮ
ಪ್ರಕಟಣೆಯಲ್ಲಿ
ತಿಳಿಸಿದರು.
ದುಷ್ಕರ್ಮಿಯ ವಿರುದ್ಧ
ಕಟ್ಟು
ನಿಟ್ಟಿನ
ಕ್ರಮ
ಕೈಗೊಳ್ಳುವಂತೆ
ಸರ್ಕಾರವನ್ನು
ಒತ್ತಾಯಿಸಿದ
ಯಡಿಯೂರಪ್ಪ,
’ದುಷ್ಕರ್ಮಿಯ
ವಿರುದ್ಧ
ಕೈಗೊಳ್ಳುವ
ಕ್ರಮವು
ಇಂತಹ
ಚಟುವಟಿಕೆಗಳಲ್ಲಿ
ಶಾಮೀಲಾಗುವ
ವ್ಯಕ್ತಿಗಳಿಗೆ
ಸೂಕ್ತ
ಎಚ್ಚರಿಕೆಯಾಗಬೇಕು’
ಎಂದು
ಹೇಳಿದರು.
ಈ
ಮಧ್ಯೆ
ಇನ್ನೊಬ್ಬ
ಬಿಜೆಪಿ
ನಾಯಕ
ಆರ್.
ಅಶೋಕ್
ಅವರು
ಕರ್ನಾಟಕದಲ್ಲಿ
ರಾಷ್ಟ್ರಪತಿ
ಆಳ್ವಿಕೆ
ಹೇರಬೇಕು
ಎಂದು
ಆಗ್ರಹಿಸಿದರು.
ರಕ್ಷಿಸಿದ
ಉಡುಪು:
ಕೋಟು,
ಶರ್ಟ್
ಮತ್ತು
ಒಳ
ಉಡುಪು
ಹೀಗೆ
ಧರಿಸಿದ್ದ
ತ್ರಿವಿಧ
ಉಡುಪು
ನ್ಯಾಯಮೂರ್ತಿ
ವಿಶ್ವನಾಥ
ಶೆಟ್ಟಿ
ಅವರ
ಪ್ರಾಣವನ್ನು
ಉಳಿಸಿತು
ಎಂದು
ಮೂಲಗಳು
ಹೇಳಿದವು.
ಮೂರು
ರೀತಿಯ
ಉಡುಪು
ಚೂರಿ
ಹೆಚ್ಚು
ಆಳಕ್ಕೆ
ಹೋಗದಂತೆ
ತಡೆಯಿತು
ಎಂದು
ಮೂಲಗಳು
ಹೇಳಿದವು. ತುಮಕೂರಿನ ನಿವಾಸಿ
ಎನ್ನಲಾಗಿರುವ
ಆರೋಪಿ
ಶರ್ಮ,
ಪೀಠೋಪಕರಣ
ವ್ಯವಹಾರ
ನಡೆಸುತ್ತಿದ್ದಾನೆ.
ಆತ
ಲೋಕಾಯುಕ್ತರ
ಚೇಂಬರಿಗೆ
ಮಧ್ಯಾಹ್ನ
೧.೩೦ರ
ವೇಳೆಗೆ
ಭ್ರಷ್ಟಾಚಾರ
ಪ್ರಕರಣವೊಂದಕ್ಕೆ
ಸಂಬಂಧಿಸಿದಂತೆ
ಹೋಗಿದ್ದ
ಮತ್ತು
ಅದೇ
ವೇಳೆಯಲ್ಲಿ
ಇರಿದ.
ಸಂದರ್ಶಕರ
ಪುಸ್ತಕದಲ್ಲಿಯೂ
ಆತ
ತನ್ನ
ಹೆಸರು
ಮತ್ತು
ವಿಳಾಸವನ್ನು
ಬರೆದಿದ್ದ
ಎಂದು
ಪೊಲೀಸ್
ಮೂಲಗಳು
ಹೇಳಿದವು. ಪೀಠೋಪಕರಣ ಸರಬರಾಜು
ವ್ಯವಹಾರಕ್ಕೆ
ಸಂಬಂಧಿಸಿದ
ಭ್ರಷ್ಟಾಚಾರಕ್ಕೆ
ಸಂಬಂಧಿಸಿದಂತೆ
೧೦
ಮಂದಿ
ಅಧಿಕಾರಿಗಳ
ವಿರುದ್ಧ
ಆರೋಪಿ ಶರ್ಮ
ಲೋಕಾಯುಕ್ತರಿಗೆ
ದೂರು
ನೀಡಿದ್ದ
ಎಂಬುದು
ಪ್ರಾಥಮಿಕ
ತನಿಖೆಯಿಂದ
ಬೆಳಕಿಗೆ
ಬಂದಿದೆ
ಎಂದು
ಬೆಂಗಳೂರು
ಪೊಲೀಸ್
ಕಮೀಷನರ್
ಸುನೀಲ್
ಕುಮಾರ್
ಹೇಳಿದರು.
’ತಮ್ಮ
ದೂರನ್ನು
ಆಲಿಸಲಾಗುತ್ತಿಲ್ಲ
ಎಂದು
ಆತ
ಅಸಮಾಧಾನಗೊಂಡಿದ್ದ.
ಲೋಕಾಯುಕ್ತರಿಗೆ
ಆತ
ದೂರು
ನೀಡುತ್ತಿರುವುದು
ಇದು
ನಾಲ್ಕನೇ
ಬಾರಿ
ಎನ್ನಲಾಗಿದ್ದು,
ಆತನಿಗೆ
ಟೆಂಡರುಗಳು
ಲಭಿಸುತ್ತಿರಲಿಲ್ಲ.
ಚೂರಿಯಿಂದ
ಇರಿಯಲು
ಈ
ಅಸಮಾಧಾನವೇ
ಕಾರಣ
ಇರಬಹುದು.
ಏನಿದ್ದರೂ
ಈ
ಪ್ರಕರಣವನ್ನು
ಕೊಲೆ
ಯತ್ನ
ಎಂಬುದಾಗಿಯೇ
ಪರಿಗಣಿಸಲಾಗಿದೆ’
ಎಂದು
ಅವರು
ನುಡಿದರು.
’ಆರೋಪಿ
ಚೂರಿ
ಸಹಿತವಾಗಿ
ಚೇಂಬರಿನ
ಒಳಕ್ಕೆ
ಹೋದದ್ದು
ಹೇಗೆ’
ಎಂಬ
ಪ್ರಶ್ನೆಗೆ,
’ಹೊರಗೆ
ಅಳವಡಿಸಲಾಗಿರುವ
ಲೋಹಶೋಧಕ
ಕೆಲಸ
ಮಾಡುತ್ತಿರಲಿಲ್ಲ’
ಎಂದು
ಪೊಲೀಸ್
ಕಮೀಷನರ್
ಹೇಳಿದರು.
ಭದ್ರತಾ
ಲೋಪಗಳ
ಬಗೆಗೂ
ನಾವು
ಪರಿಶೀಲಿಸುತ್ತಿದ್ದೇವೆ.
ಲೋಕಾಯುಕ್ತರು
ಗನ್
ಮ್ಯಾನನ್ನು
ಹೇಗೆ
ಇರಿಸಿಕೊಳ್ಳುತ್ತಿದ್ದರು
ಎಂಬುದು
ಸ್ಪಷ್ಟವಿಲ್ಲ.
ಈ
ಬಗ್ಗೆ
ನಾವು
ಸ್ಪಷ್ಟನೆ
ಪಡೆಯಬೇಕಾಗಿದೆ’
ಎಂದು
ಅವರು
ನುಡಿದರು.
2018: ನವದೆಹಲಿ:
ತ್ರಿಪುರಾ,
ತಮಿಳುನಾಡು,
ಉತ್ತರ
ಪ್ರದೇಶ
ಮತ್ತಿತರ
ರಾಜ್ಯಗಳಲ್ಲಿ
ನಡೆದ
ಪ್ರತಿಮೆಗಳ
ಧ್ವಂಸ
ಕೃತ್ಯಗಳನ್ನು
ಪ್ರಧಾನಿ
ನರೇಂದ್ರ
ಮೋದಿ
ಉಗ್ರವಾಗಿ
ಖಂಡಿಸಿ,
ಇಂತಹ
ಕೃತ್ಯಗಳ
ವಿರುದ್ಧ
ಕಟ್ಟಿನಿಟ್ಟಿನ
ಕ್ರಮ
ಕೈಗೊಳ್ಳುವಂತೆ
ಸೂಚಿಸಿದರು. ಗೃಹಸಚಿವ
ರಾಜನಾಥ್
ಸಿಂಗ್
ಅವರ
ಜೊತೆ
ಮಾತನಾಡಿದ
ಪ್ರಧಾನಿ,
ಇಂತಹ
ವಿಧ್ವಂಸಕ
ಕೃತ್ಯಗಳನ್ನು
ಸಹಿಸಲಾಗದು.
ವಿಧ್ವಂಸಕತೆ
ತಡೆಯಲು
ಎಲ್ಲ
ರಾಜ್ಯಗಳಿಗೂ
ಕಟ್ಟುನಿಟ್ಟಿನ
ನಿರ್ದೇಶನ
ನೀಡಿ
ಎಂದು
ನಿರ್ದೇಶಿಸಿದರು.
’ರಾಷ್ಟ್ರದ
ಹಲವು
ಭಾಗಗಳಿಂದ
ಪ್ರತಿಮೆಗಳ
ವಿಧ್ವಂಸದ
ವರದಿಗಳು
ಬರುತ್ತಿವೆ.
ಪ್ರಧಾನಿ
ಮೋದಿ
ಅವರು
ಗೃಹಸಚಿವರ
ಬಳಿ
ಮಾತುಕತೆ
ನಡೆಸಿ
ಕಾನೂನು
ಉಲ್ಲಂಘಿಸುವವರ
ವಿರುದ್ಧ
ಕಠಿಣ
ಕ್ರಮ
ಕೈಗೊಳ್ಳುವಂತೆ
ಸೂಚಿಸಿದ್ದಾರೆ’
ಎಂದು
ಗೃಹಸಚಿವಾಲಯದ
ಪ್ರಕಟಣೆ
ತಿಳಿಸಿತು. ’ಇಂತಹ ಘಟನೆಗಳು
ಮರುಕಳಿಸದಂತೆ
ತಡೆಯಲು
ಕಟ್ಟುನಿಟ್ಟಿನ
ಕ್ರಮ
ಕೈಗೊಳ್ಳಿ.
ವಿಧ್ವಂಸಕ
ಕೃತ್ಯಗಳಲ್ಲಿ
ತೊಡಗಿದ
ವ್ಯಕ್ತಿಗಳ
ವಿರುದ್ಧ
ನಿರ್ದಾಕ್ಷಿಣ್ಯವಾಗಿ
ಕಾನೂನು
ಕ್ರಮ
ಜರುಗಿಸಿ’
ಎಂದು
ಗೃಹಸಚಿವಾಲಯವು
ರಾಜ್ಯ
ಸರ್ಕಾರಗಳಿಗೆ
ಸುತ್ತೋಲೆ
ಕಳುಹಿಸಿತು.
ಕಮ್ಯುನಿಸ್ಟ್
ಧುರೀಣ
ವ್ಲಾಡಿಮೀರ್
ಲೆನಿನ್
ಅವರ
ಎರಡು
ಪ್ರತಿಮೆಗಳನ್ನು
ದಕ್ಷಿಣ
ತ್ರಿಪುರಾದಲ್ಲಿ
ಹಾನಿಗೊಳಿಸಲಾಗಿದ್ದು,
ತಮಿಳುನಾಡಿನ
ವೆಲ್ಲೂರು
ಜಿಲ್ಲೆಯಲ್ಲಿ
ಪೆರಿಯಾರ್
ಪ್ರತಿಮೆಗೆ
ಹಾನಿ
ಮಾಡಲಾಗಿತ್ತು.
ಕೋಲ್ಕತದಲ್ಲಿ
ಜನಸಂಘದ
ಸ್ಥಾಪಕ
ಡಾ.
ಶ್ಯಾಮ
ಪ್ರಸಾದ
ಮುಖರ್ಜಿ
ಅವರ
ಪ್ರತಿಮೆಯನ್ನು
ಹಾನಿಪಡಿಸಿದ
ಘಟನೆ
ಬುಧವಾರ
ಘಟಿಸಿತು.
ಈ
ಸಂಬಂಧ
ಆರು
ವಿದ್ಯಾರ್ಥಿಗಳನ್ನು
ಬಂಧಿಸಿರುವುದಾಗಿ
ಪೊಲೀಸರು
ತಿಳಿಸಿದರು.
ಪಶ್ಚಿಮ ಬಂಗಾಳದ
ಜಾಧವಪುರ
ವಿಶ್ವ
ವಿದ್ಯಾಲಯದಲ್ಲಿ
ಶ್ಯಾಮ
ಪ್ರಸಾದ
ಮುಖರ್ಜಿ
ಅವರ
ಪ್ರತಿಮೆಗೆ
ಬಣ್ಣಬಳಿತು
ಮುಖದ
ಅವಯವಗಳಿಗೆ
ಹಾನಿ
ಉಂಟು
ಮಾಡಲಾಗಿದೆ
ಎಂದು
ವರದಿಗಳು
ಹೇಳಿದವು.
ಪ್ರತಿಮೆಯನ್ನು
ಕೆಡವಿ
ಹಾಕಲೂ
ಯತ್ನ
ನಡೆದಿದ್ದು,
ಕೃತ್ಯದಲ್ಲಿ
ಪಾಲ್ಗೊಂಡ
೬
ವಿದ್ಯಾರ್ಥಿಗಳನ್ನು
ಬಂಧಿಸಲಾಯಿತು
ಎಂದು
ಪೊಲೀಸ್
ಮೂಲಗಳು
ಹೇಳಿದವು.
ತ್ರಿಪುರಾದ
ಬೆಲೋನಿಯಾ
ಪಟ್ಟಣದಲ್ಲಿ
ಲೆನಿನ್
ಪ್ರತಿಮೆ
ಭಗ್ನಗೊಳಿಸಿರುವುದನ್ನು
ಸಿಪಿಎಂ
ಜಿಲ್ಲಾ
ಕಾರ್ಯದರ್ಶಿ
ತಪಸ್
ದತ್ತಾ
ಖಂಡಿಸಿದರು.
ಈ
ಕೃತ್ಯವನ್ನು
ಬಿಜೆಪಿ
ಕಾರ್ಯಕರ್ತರೇ
ಎಸಗಿದ್ದಾರೆ
ಎಂದು
ಅವರು
ಆಪಾದಿಸಿದರು.
ತೃಣಮೂಲ
ಕಾಂಗ್ರೆಸ್
ವರಿಷ್ಠೆ,
ಪಶ್ಚಿಮ
ಬಂಗಾಳ
ಮುಖ್ಯಮಂತ್ರಿ
ಮಮತಾ
ಬ್ಯಾನರ್ಜಿ
ಕೂಡ
ಈ
ಕೃತ್ಯಗಳನ್ನು
ಖಂಡಿಸಿದ್ದು,
ಇದಕ್ಕೆ
ಬಿಜೆಪಿ-ಆರೆಸ್ಸೆಸ್ಗಳೇ
ಹೊಣೆ
ಎಂದು
ದೂಷಿಸಿದರು. ಅಮಿತ್ ಶಾ
ಎಚ್ಚರಿಕೆ:
ಬಿಜೆಪಿ
ರಾಷ್ಟ್ರೀಯ
ಅಧ್ಯಕ್ಷ
ಅಮಿತ್
ಶಾ
ಅವರೂ
ಪ್ರತಿಮೆಗಳ
ಧ್ವಂಸವನ್ನು
ಖಂಡಿಸಿದ್ದು,
ಪಕ್ಷದ
ಯಾವನೇ
ಕಾರ್ಯಕರ್ತ
ಇಂತಹ
ಕೃತ್ಯಗಳಲ್ಲಿ
ಸಿಕ್ಕಿಬಿದ್ದರೆ
ಕಠಿಣ
ಕ್ರಮ
ಎದುರಿಸಬೇಕಾದೀತು
ಎಂದು
ಎಚ್ಚರಿಸಿದರು.’ಕೆಲವು
ರಾಜ್ಯಗಳಲ್ಲಿ
ಪ್ರತಿಮೆಗಳನ್ನು
ಧ್ವಂಸ
ಗೊಳಿಸುವ
ಕೃತ್ಯಗಳು
ಘಟಿಸುತ್ತಿರುವುದು
ಅತ್ಯಂತ
ದುರದೃಷ್ಟಕರ.
ಪಕ್ಷವಾಗಿ
ಯಾವುದೇ
ವ್ಯಕ್ತಿಯ
ಪ್ರತಿಮೆ
ಧ್ವಂಸವನ್ನು
ನಾವು
ಬೆಂಬಲಿಸುವುದಿಲ್ಲ’
ಎಂದು
ಅಮಿತ್
ಶಾ
ಟ್ವೀಟ್
ಮಾಡಿದರು. ಪೆರಿಯಾರ್ ಪ್ರತಿಮೆ:
ವೆಲ್ಲೂರಿನ
ತಿರುಪತ್ತೂರು
ಕಾರ್ಪೊರೇಷನ್
ಕಚೇರಿಯ
ಒಳಗೆ
ಇದ್ದ
ಪೆರಿಯಾರ್
ಪ್ರತಿಮೆಯ
ಕನ್ನಡಕ
ಮತ್ತು
ಮೂಗಿಗೆ
ಮಾರ್ಚ್
6ರ ಮಂಗಳವಾರ ರಾತ್ರಿ
ಹಾನಿ
ಎಸಗಲಾಯಿತು.
ಕೃತ್ಯ
ಎಸಗುತ್ತಿದ್ದವರನ್ನು
ಸ್ಥಳೀಯರು
ತತ್
ಕ್ಷಣವೇ
ಹಿಡಿದು
ಪೊಲೀಸರಿಗೆ
ಒಪ್ಪಿಸಿದ
ಕಾರಣ
ಪ್ರತಿಮೆಗೆ
ಹೆಚ್ಚಿನ
ಹಾನಿಯಾಗಲಿಲ್ಲ
ಎಂದು
ಪೊಲೀಸರು
ಹೇಳಿದರು.
ಪೆರಿಯಾರ್ ಅವರು
ಜಾತಿವಾದಿಯಾಗಿದ್ದು
ಅವರ
ಪ್ರತಿಮೆಯನ್ನು
ನಾಶಪಡಿಸಬೇಕು
ಎಂಬುದಾಗಿ
ಬಿಜೆಪಿ
ನಾಯಕ
ಎಚ್.
ರಾಜಾ
ಅವರು
ಅವರು
ಫೇಸ್
ಬುಕ್
ಪೋಸ್ಟ್
ಪ್ರಕಟಿಸಿದ
ಬಳಿಕ
ಈ
ಕೃತ್ಯ
ನಡೆಸಲಾಗಿದ್ದು,
ಕೃತ್ಯ
ಘಟಿಸುತ್ತಿದ್ದಂತೆಯೇ
ರಾಜಾ
ಅವರು
ಪೋಸ್ಟನ್ನು
ಕಿತ್ತು
ಹಾಕಿದರು. ’ಲೆನಿನ್
ಯಾರು?
ಭಾರತಕ್ಕೂ
ಲೆನಿನ್
ಗೂ ಏನು ಸಂಬಂಧ?
ಕೋಮುವಾದ
ಮತ್ತು
ಭಾರತಕ್ಕೆ
ಏನು
ಸಂಬಂಧ
ಇದೆ?
ಲೆನಿನ್
ಪ್ರತಿಮೆಗಳನ್ನು
ತ್ರಿಪುರಾದಲ್ಲಿ
ಧ್ವಂಸಗೊಳಿಸಲಾಗಿದೆ,
ನಾಳೆ
ತಮಿಳುನಾಡಿನಲ್ಲಿ
ಜಾತಿವಾದಿ
ಪೆರಿಯಾರ್
ಪ್ರತಿಮೆಗಳು
ಧ್ವಂಸಗೊಳ್ಳಲಿವೆ’
ಎಂದು
ರಾಜಾ
ಫೇಸ್
ಬುಕ್
ಪೋಸ್ಟಿನಲ್ಲಿ
ಬರೆದಿದ್ದರು. ರಾಜಾ
ಫೇಸ್
ಬುಕ್
ಪೋಸ್ಟಿಗೆ
ಅಂತರ್ಜಾಲದಲ್ಲಿ
ವ್ಯಾಪಕ
ಟೀಕೆ
ವ್ಯಕ್ತವಾಗಿದ್ದು,
ಬೆನ್ನಲ್ಲೇ
ಅದನ್ನು
ಕಿತ್ತು
ಹಾಕಲಾಯಿತು.
ತಮ್ಮ
ಫೇಸ್
ಬುಕ್
ನಲ್ಲಿ
ಯಾರೋ
ಈ
ದುಸ್ಸಾಹಸ
ಮಾಡಿದ್ದಾರೆ
ಎಂದು
ರಾಜಾ
ಆಪಾದಿಸಿದರು. ಅಂಬೇಡ್ಕರ್ ಪ್ರತಿಮೆಗೆ
ಹಾನಿ:
ಈ
ಮಧ್ಯೆ
ಬುಧವಾರ
ಬೆಳಗ್ಗೆ
ಉತ್ತರ
ಪ್ರದೇಶದ
ಮಾವನ
ಖುರ್ದ್
ಜಿಲ್ಲೆಯ
ಮೀರತ್
ನಲ್ಲಿ
ಬಿ.ಆರ್.
ಅಂಬೇಡ್ಕರ್
ಅವರ
ಪ್ರತಿಮೆಯನ್ನೂ
ಧ್ವಂಸ
ಗೊಳಿಸಿದ
ಘಟನೆ
ಘಟಿಸಿತು. ಉತ್ತರ ಪ್ರದೇಶ
ಪೊಲೀಸರು
ತತ್
ಕ್ಷಣವೇ
ಸ್ಥಳಕ್ಕೆ
ಧಾವಿಸಿ
ಹೆಚ್ಚಿನ
ಅಹಿತಕರ
ಘಟನೆಗಳು
ನಡೆಯದಂತೆ
ತಡೆದರು
ಎಂದು
ಸುದ್ದಿ
ಮೂಲಗಳು
ತಿಳಿಸಿದವು. ಅಂಬೇಡ್ಕರ್ ಪ್ರತಿಮೆಗೆ
ಹಾನಿ
ಎಸಗಿದ್ದು
ಯಾವುದೇ
ರಾಜಕೀಯ
ಸೇಡಿನ
ಹಿನ್ನೆಲೆಯಲ್ಲಿ
ಅಲ್ಲ,
ಸ್ಥಳೀಯ
ಜಾತಿ
ಪ್ರಕ್ಷುಬ್ಧತೆಯ
ಹಿನ್ನೆಲೆಯಲ್ಲಿ
ಎಂದು
ಮೂಲಗಳು
ತಿಳಿಸಿದವು.
ಪ್ರದೇಶದಲ್ಲಿ
ಯಾವುದೇ
ಘರ್ಷಣೆಗಳು
ಸಂಭವಿಸಿಲ್ಲ,
ಪ್ರತಿಮೆಯನ್ನು
ಮರುಸ್ಥಾಪನೆ
ಮಾಡಲಾಗಿದೆ
ಎಂದು
ಮೂಲಗಳು
ಹೇಳಿದವು.
ಎರಡು ದಿನಗಳ
ಹಿಂದೆ
ಅಲಿಘಡದಲ್ಲಿ
ಬಿ.ಆರ್.
ಅಂಬೇಡ್ಕರ್
ಪ್ರತಿಮೆಗೆ
ಹಾನಿ
ಎಸಗಿದ
ಘಟನೆ
ಬೆಳಕಿಗೆ
ಬಂದಿತ್ತು.
ಸ್ಥಳೀಯ
ನಿವಾಸಿಗಳು
ಇದನ್ನು
ಪ್ರತಿಭಟಿಸಿದ್ದರು.
ಕಳೆದ
ವರ್ಷ
ಕೂಡಾ
ಮೀರತ್
ಮತ್ತು
ಮುಜಾಫ್ಫರನಗರದಲ್ಲಿ
ಅಂಬೇಡ್ಕರ್
ಪ್ರತಿಮೆಗೆ
ಹಾನಿ
ಎಸಗಿದ
ಘಟನೆಗಳ
ಬಗ್ಗೆ
ವರದಿಗಳು
ಬಂದಿದ್ದವು.
’ಬಿ.ಆರ್.
ಅಂಬೇಡ್ಕರ್
ಅವರು
’ಪವಿತ್ರ
ಸಂಕೇತ’
ಎಂಬುದಾಗಿ
ಬಣ್ಣಿಸಿದ
ದಲಿತ
ಕಾರ್ಯಕರ್ತ
ಜಾನ್
ದಯಾಲ್ ಅವರು ಘಟನೆಯನ್ನು
ಖಂಡಿಸಿ,
’ಪೆರಿಯಾರ್
ಅವರನ್ನು
ಜಾತಿವಾದಿ
ಎಂಬುದಾಗಿ
ಟೀಕಿಸಿ
ಫೇಸ್
ಬುಕ್
ಪೋಸ್ಟ್
ಪ್ರಕಟಿಸಿದ್ದಕ್ಕಾಗಿ
ಎಚ್.
ರಾಜಾ
ಅವರನ್ನು
ಬಿಜೆಪಿಯು
ಪಕ್ಷದಿಂದ
ಉಚ್ಚಾಟಿಸಬೇಕು
ಎಂದು
ಆಗ್ರಹಿಸಿದರು.
2018: ನವದೆಹಲಿ: ೨೦೧೮
ರಾಷ್ಟ್ರೀಯ
ಅರ್ಹತೆ
ಮತ್ತು
ಪ್ರವೇಶ
ಪರೀಕ್ಷೆ
(ನೀಟ್)
ಮತ್ತು
ಇತರ
ಅಖಿಲ
ಭಾರತ
ಪರೀಕ್ಷೆಗಳನ್ನು
ಎದುರಿಸುವ
ಅಭ್ಯರ್ಥಿಗಳ
ನೋಂದಾವಣೆಗೆ ಆಧಾರ್ ನಂಬರ್
ಕಡ್ಡಾಯ
ಮಾಡಬಾರದು
ಎಂದು
ಸುಪ್ರೀಂ
ಕೋರ್ಟ್
ಕೇಂದ್ರೀಯ
ಮಾಧ್ಯಮಿಕ
ಶಿಕ್ಷಣ
ಮಂಡಳಿಗೆ
(ಸಿಬಿಎಸ್
ಇ)
ನಿರ್ದೇಶನ
ನೀಡಿತು.
ಮುಖ್ಯ
ನ್ಯಾಯಮೂರ್ತಿ
ದೀಪಕ್
ಮಿಶ್ರ
ನೇತೃತ್ವದ
ಪಂಚ
ಸದಸ್ಯ
ಸಂವಿಧಾನ
ಪೀಠವು
ತನ್ನ
ವೆಬ್
ಸೈಟಿನಲ್ಲಿ ಈ ಮಾಹಿತಿಯನ್ನು
ಅಪ್ಲೋಡ್
ಮಾಡುವಂತೆ
ಕೇಂದ್ರೀಯ
ಮಾಧ್ಯಮಿಕ
ಶಿಕ್ಷಣ
ಮಂಡಳಿಗೆ
ಆಜ್ಞಾಪಿಸಿತು. ಇದಕ್ಕೆ
ಮುನ್ನ
೨೦೧೮ರ
ನೀಟ್
ಪರೀಕ್ಷೆ
ಎದುರಿಸುವ
ವಿದ್ಯಾರ್ಥಿಗಳ
ನೋಂದಾವಣೆಗೆ ಆಧಾರ್ ನಂಬರ್
ಕಡ್ಡಾಯ
ಮಾಡುವಂತೆ
ತಾನು
ಹೇಳಿಲ್ಲ
ಎಂದು
ಭಾರತದ
ವಿಶಿಷ್ಟ
ಗುರುತು
ಪ್ರಾಧಿಕಾರವು
(ಯುಐಡಿಎಐ)
ನ್ಯಾಯಾಲಯಕ್ಕೆ
ತಿಳಿಸಿತು. ಅಟಾರ್ನಿ
ಜನರಲ್
ಕೆ.ಕೆ.
ವೇಣುಗೋಪಾಲ್
ಅವರು
ಜಮ್ಮು
ಮತ್ತು
ಕಾಶ್ಮೀರ,
ಮೇಘಾಲಯ
ಹಾಗೂ
ಅಸ್ಸಾಮ್ಗಳಲ್ಲಿ
ಇರುವಂತೆ
ಪಾಸ್
ಪೋರ್ಟ್,
ಮತದಾರರ
ಗುರುತಿನ
ಚೀಟಿ
ಮತ್ತು
ಪಡಿತರ
ಚೀಟಿಯನ್ನು
ಬಳಸಿಕೊಂಡು
ಸಿಬಿಎಸ್ಇ
ಪರೀಕ್ಷೆಗೆ
ನೋಂದಾವಣೆ
ಮಾಡಬಹುದು
ಎಂಬುದಾಗಿ
ತನಗೆ
ಯುಐಡಿಎಐ
ಸೂಚನೆ
ನೀಡಿದೆ
ಎಂದು
ಕೋರ್ಟಿಗೆ
ತಿಳಿಸಿದರು.ನೀಟ್
ಪರೀಕ್ಷೆಗೆ
ಹಾಜರಾಗಬಯಸುವ
ವಿದ್ಯಾರ್ಥಿಗಳ
ನೋಂದಾವಣೆಗೆ
ಆಧಾರ್
ನಂಬರ್
ಅಥವಾ
ಆಧಾರ್
ವಿಶಿಷ್ಟ
ಗುರುತಿನ
ಚೀಟಿಯನ್ನು
ಕೋರಲು
ಸಿಬಿಎಸ್
ಇ
ಕೈಗೊಂಡ
ನಿಧಾರವನ್ನು
ಪ್ರಶ್ನಿಸಿ
ಗುಜರಾತ್
ಮೂಲದ
ವ್ಯಕ್ತಿಯೊಬ್ಬರು
ಸಲ್ಲಿಸಿದ್ದ
ಮೇಲ್ಮನವಿಯ
ವಿಚಾರಣೆ
ಕಾಲದಲ್ಲಿ
ಯುಐಡಿಎಐ
ಈ
ಸ್ಪಷ್ಟನೆ
ನೀಡಿತು.
ಮನವಿಯನ್ನು
ಗುಜರಾತ್
ಹೈಕೋರ್ಟ್
ಫೆಬ್ರುವರಿ
೨೭ರಂದು
ವಜಾಗೊಳಿಸಿತ್ತು.
ಅರ್ಜಿದಾರರು
ಹೈಕೋರ್ಟ್
ಆದೇಶದ
ವಿರುದ್ಧ
ಸುಪ್ರೀಂಕೋರ್ಟಿಗೆ
ಮೇಲ್ಮನವಿ
ಸಲ್ಲಿಸಿದ್ದರು.
ನೀಟ್
ಪರೀಕ್ಷೆಗೆ
ಹಾಜರಾಗಬಯಸುವವರು
ಅರ್ಜಿ
ಜೊತೆಗೆ
ಕಡ್ಡಾಯವಾಗಿ
ಆಧಾರ್
ಸಂಖ್ಯೆ
ನಮೂದಿಸಬೇಕು
ಎಂದು
ಸಿಬಿಎಸ್ಇ
ತಿಳಿಸಿತ್ತು.
2018: ನವದೆಹಲಿ: ಪ್ರಧಾನಿ
ನರೇಂದ್ರ
ಮೋದಿ
ಅವರಿಗೆ
ಅಗೌರವ
ತೋರಿಸಿದ್ದಕ್ಕೆ
ದಂಡವಾಗಿ
ಬಿಎಸ್
ಎಫ್
ಯೋಧನೊಬ್ಬನಿಗೆ
ಏಳು
ದಿನಗಳ
ವೇತನವನ್ನು
ದಂಡವಾಗಿ
ಪಾವತಿಸುವ
ಶಿಕ್ಷೆಯನ್ನು
ಸ್ವತಃ
ಪ್ರಧಾನಿ
ನರೇಂದ್ರ
ಮೋದಿ
ಅವರ
ಹಸ್ತಕ್ಷೇಪದ
ಬಳಿಕ
ಗಡಿಭದ್ರತಾ
ಪಡೆ
ರದ್ದು
ಪಡಿಸಿತು.
ಬಿಎಸ್ ಎಫ್
ಯೋಧನಿಗೆ
ದಂಡ
ವಿಧಿಸಿದ
ಆದೇಶವನ್ನು
ಹಿಂತೆಗೆದುಕೊಳ್ಳುವಂತೆ
ಪ್ರಧಾನಿ
ನರೇಂದ್ರ
ಮೋದಿ
ಅವರು
ಗಡಿ
ಭದ್ರತಾ
ಪಡೆ
(ಬಿಎಸ್
ಎಫ್)
ಮಹಾನಿರ್ದೇಶಕ
ಕೆ.ಕೆ.
ಶರ್ಮ
ಅವರಿಗೆ
ಸೂಚಿಸಿದ್ದರು.
’ಪ್ರಧಾನಿ ನರೇಂದ್ರ
ಮೋದಿ
ಅವರು
ಯೋಧನಿಗೆ
ಶಿಕ್ಷೆ
ವಿಧಿಸಿದ್ದಕ್ಕೆ
ತೀವ್ರ
ಅತೃಪ್ತಿ
ವ್ಯಕ್ತ
ಪಡಿಸಿದ್ದಲ್ಲದೆ,
ಆದೇಶ
ಹಿಂತೆಗೆದುಕೊಳ್ಳುವಂತೆ
ಬಿಎಸ್
ಎಫ್
ಮಹಾ
ನಿರ್ದೇಶಕರಿಗೆ
ನಿರ್ದೇಶನ
ನೀಡಿದ್ದರು.
ಬಿಎಸ್
ಎಫ್
ಆದೇಶವನ್ನು
ರದ್ದು
ಪಡಿಸಿ,
ವಿವೇಚನಾ
ರಹಿತ
ಕ್ರಮಕ್ಕಾಗಿ
ಸಂಬಂಧಪಟ್ಟ
ಕಮಾಂಡೆಂಟ್
ಗೆ
ಎಚ್ಚರಿಕೆ
ನೀಡಿದೆ
ಎಂದು
ಗೃಹ
ವ್ಯವಹಾರಗಳ
ಸಚಿವಾಲಯ
ತಿಳಿಸಿತು. ಜೀರೋ ಪರೇಡ್
ಕುರಿತು
ಉಲ್ಲೇಖಿಸುವಾಗ
ಕಾನ್
ಸ್ಟೇಬಲ್
ಸಂಜೀವ
ಕುಮಾರ್
ಅವರು
ಫೆಬ್ರುವರಿ
೨೧
ರಂದು
’ಮೋದಿ
ಕಾರ್ಯಕ್ರಮ’
ಎಂಬುದಾಗಿ
ಉಲ್ಲೇಖಿಸಿದ್ದಕ್ಕಾಗಿ
ಸಂಬಂಧಿಸಿದ
ಮೇಲಧಿಕಾರಿ
ಕುಮಾರ್
ವಿರುದ್ಧ
ಶಿಸ್ತುಕ್ರಮ
ಜರುಗಿಸಿದ್ದರು.
ಬಿಎಸ್
ಎಫ್
ನ
ಎಲ್ಲ
ಘಟಕಗಳಲ್ಲೂ
ಪ್ರತಿದಿನ
ಬೆಳಗ್ಗೆ
ಎಲ್ಲ
ಸಿಬ್ಬಂದಿ
ಹಾಜರಾತಿ
ನೀಡಲು
ಒಂದೇ
ಕಡೆ
ಸಮಾವೇಶಗೊಳ್ಳುವ
ವೇಳೆಯಲ್ಲಿ
ಜೀರೋ
ಪರೇಡ್
ನಡೆಯುತ್ತದೆ.
ಪಶ್ಚಿಮ
ಬಂಗಾಳ
ಜಿಲ್ಲೆಯ
ನಾಡಿಯಾ
ಜಿಲ್ಲೆಗೆ
ನಿಯೋಜಿತರಾಗಿದ್ದ
ಸಂಜೀವ
ಕುಮಾರ್
ಅವರು
ಜೀರೋ
ಪರೇಡ್
ಬಗ್ಗೆ
ವರದಿ
ನೀಡುವಾಗ
೧೯೬೮ರ
ಬಿಎಸ್
ಎಫ್
ಕಾಯ್ದೆಯ
ಸೆಕ್ಷನ್
೪೦ರ
ಅಡಿಯಲ್ಲಿ
ತಪ್ಪೆಸಗಿದ್ದಾರೆ
ಎಂದು
ಹೇಳಲಾಗಿತ್ತು.
೨೦೧೮ರ
ಫೆಬ್ರುವರಿ
೨೧ರ
ಜೀರೋ
ಪರೇಡ್
ವೇಳೆ
ವರದಿ
ನೀಡುವಾಗ
ನೀವು
’ಮೋದಿ
ಕಾರ್ಯಕ್ರಮ’
ಪದವನ್ನು
ಬಳಸಿದ್ದೀರಿ.
ಇದು
ಗೌರವಾನ್ವಿತ
ಪ್ರಧಾನ
ಮಂತ್ರಿಯವರ
ಬಗೆಗಿನ
ಅಗೌರವವನ್ನು
ತೋರಿಸುತ್ತದೆ’
ಎಂದು
ಹೇಳಿದ್ದ
ಬಿಎಸ್
ಎಫ್
ಆದೇಶ
’ಈ
ತಪ್ಪಿಗಾಗಿ
೭
ದಿನಗಳ
ವೇತನವನ್ನು
ದಂಡವಾಗಿ
ಪಾವತಿ
ಮಾಡಬೇಕು’
ಸಂಜೀವ
ಕುಮಾರ್ ಅವರಿಗೆ ಆಜ್ಞಾಪಿಸಿತ್ತು.
2008: ಮೊದಲ ಬಾರಿಗೆ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಹೊತ್ತ ಪ್ರಯೋಗಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆಯಿತು. ಕಿಂಗ್ ಫಿಷರ್ ಏರ್ ಲೈನ್ಸ್, ಭಾರತೀಯ ವಾಯುಪಡೆಗಳ ವಿಮಾನ ಮತ್ತು ಏರ್ ಡೆಕ್ಕನ್ ವಿಮಾನಗಳು ಈದಿನ ಬೆಳಗ್ಗೆ ಇಲ್ಲಿ ಇಳಿಯುವ ಮತ್ತು ಹಾರುವ ಮೂಲಕ ಮಾರ್ಚ್ 30ರಿಂದ ಪ್ರಾರಂಭವಾಗುವ ವಿಮಾನ ನಿಲ್ದಾಣದ ಕಾರ್ಯಾರಂಭವನ್ನು ಸುಗಮಗೊಳಿಸಿದವು. ಮುಂಬೈಯಿಂದ ಅತಿಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊತ್ತ ಕಿಂಗ್ ಫಿಷರ್ ವಿಮಾನವು ಬೆಳಿಗ್ಗೆ 10 ಗಂಟೆಗೆ ನೂತನ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ಈ ನಿಲ್ದಾಣದಲ್ಲಿ ಇಳಿದ ಮೊದಲ ವಿಮಾನವೆಂಬ ಕೀರ್ತಿಗೆ ಭಾಜನವಾಯಿತು. ನಂತರ 15 ನಿಮಿಷಗಳ ಅಂತರದಲ್ಲಿ ಬಿಜಿನೆಸ್ ಕ್ಲಾಸಿನ ಎಲ್ ಆಂಡ್ ಟಿ ಸಂಸ್ಥೆಯ ಪುಟ್ಟ ವಿಮಾನ ಬಂದಿಳಿಯಿತು. ಆಮೇಲೆ ಒಂದರ ಹಿಂದೆ ಒಂದರಂತೆ ಭಾರತೀಯ ವಾಯು ಪಡೆಯ ಮೂರು ವಿಮಾನಗಳು ಬಂದಿಳಿದವು.
2008: ಪ್ರಾಚೀನ ಸೂರ್ಯ ಸಿದ್ಧಾಂತದ ಪ್ರಕಾರ ಜ್ಯೋತಿಷ್ಯ ಶಾಸ್ತ್ರದ ನೆರವಿನೊಂದಿಗೆ ಆಕರ್ಷಕ ಚತುರ್ಭಾಷಾ ಗಡಿಯಾರ ತಾವು ಸಿದ್ಧಪಡಿಸಿರುವುದಾಗಿ ಗುಲ್ಬರ್ಗದ ಸುರಪುರದ ವೆಂಕಟೇಶ ಎ. ಸುಗಂಧಿ ಪ್ರಕಟಿಸಿದರು. ಕೇವಲ ಮೂರನೇ ತರಗತಿ ವ್ಯಾಸಂಗ ಮಾಡಿ, ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ವೆಂಕಟೇಶ್ ಅವಿರತ ಅಭ್ಯಾಸದಿಂದ ಈ ಗಡಿಯಾರ ನಿರ್ಮಿಸಿದರು. `ಪ್ರಾಚೀನ ಶಿವಲಿಖಿತ (ಮುಹೂರ್ತ) ಚಕ್ರದ ಪ್ರಕಾರ ಆಧುನಿಕ ಸಮಯ ತಿಳಿಯುವಂತೆ ಸರಳವಾಗಿ ಈ ಗಡಿಯಾರ ನಿರ್ಮಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಶುಭ ಮುಹೂರ್ತಗಳನ್ನು ತತ್ ಕ್ಷಣ ನೋಡಿ ಗ್ರಹಿಸಬಹುದು. ಗ್ರಹದ ಪ್ರಭಾವಗಳನ್ನು ಗಣನೆಗೆ ತೆಗೆದುಕೊಂಡು ಸಮಯ ಹೊಂದಾಣಿಕೆ ಮಾಡಲಾಗಿದೆ' ಎಂದು ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. `ಉದ್ವೇಗ, ಅಮೃತ, ಚಂಚಲ, ರೋಗ, ಶುಭ, ಲಾಭ, ಚಕ್ರ ಶುಭಾಶುಭ ಮುಹೂರ್ತಗಳ ಪರಿಚಯ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಮಾಡಲಾಗಿದೆ. ಹಿಂದಿ, ಕನ್ನಡ, ತಮಿಳು ಹಾಗೂ ಉರ್ದು ಭಾಷೆಯಲ್ಲಿ, ಪಂಚಾಂಗವನ್ನು ಅವಲೋಕಿಸಿ ಸಿದ್ಧಪಡಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.
2008: ಬಾಗಲಕೋಟೆ ತಾಲ್ಲೂಕಿನ ಹಳೆ ಮುಗಳೊಳ್ಳಿ ಗ್ರಾಮದ ಬಳಿ ಸೇತುವೆ ಕುಸಿದ ಪರಿಣಾಮ ಚಕ್ಕಡಿಯೊಂದು ನೀರಿಗೆ ಬಿದ್ದು, ಹಸುಗೂಸು ಸೇರಿದಂತೆ ಆರು ಜನರು ಜಲಸಮಾಧಿಯಾದ ಘಟನೆ ಸಂಭವಿಸಿತು. ಅಮಾವಾಸ್ಯೆ ನಿಮಿತ್ತ ದೇವರ ದರ್ಶನಕ್ಕೆ ಹೋಗುವ ವೇಳೆ ಈ ದುರ್ಘಟನೆ ನಡೆಯಿತು. ಮೃತರೆಲ್ಲರೂ ಸಂಗೊಂದಿ ಗ್ರಾಮಕ್ಕೆ ಸೇರಿದವರು. ಬಾಗಲಕೋಟೆಯಿಂದ ನಾಲ್ಕು ಕಿ.ಮೀ. ದೂರದ ರಾಮಾರೂಢ ಮಠದ ಸಮೀಪ ಘಟಪ್ರಭಾ ನದಿಯ ಹಿನ್ನೀರಿನ ಮೇಲಿರುವ ಶಿಥಿಲಗೊಂಡ ಸೇತುವೆ ಕುಸಿದದ್ದು ಈ ದುರಂತಕ್ಕೆ ಕಾರಣವಾಯಿತು.
2008: ತ್ರಿಪುರಾ ಮತ್ತು ಮೇಘಾಲಯದಲ್ಲಿ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತು. ತ್ರಿಪುರಾದಲ್ಲಿ ಎಡರಂಗ ನಾಲ್ಕನೇಯ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
2008: ಚಿತ್ರನಟಿ ಜಯಪ್ರದಾ ದಿವಾಳಿಯಾಗಿದ್ದಾರೆ ಎಂಬುದಾಗಿ ಹೊರಡಿಸಿದ್ದ 2006ರ ತನ್ನ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತು. 20 06ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 500 ದಿನಗಳಷ್ಟು ವಿಳಂಬವಾದುದನ್ನು ಮನ್ನಿಸುವಂತೆ ಕೋರಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಜಯಪ್ರದಾ ಅವರ ವಕೀಲರು ತಮ್ಮ ಕಕ್ಷಿದಾರರು ಎಲ್ಲ ಬಾಕಿಗಳನ್ನು ತುಂಬಿ ಹಣಕಾಸು ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯಂ ದಿವಾಳಿ ಆದೇಶ ರದ್ದುಗೊಳಿಸಿದರು. 19.20 ಲಕ್ಷ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟುಗಳನ್ನು ಜಯಪ್ರದಾ ವಕೀಲರು ಹಸ್ತಾಂತರಿಸಿದರು. ಆಸ್ತಿ ತೆರಿಗೆಗೆ ಸಂಬಂಧಿಸಿ ಜಯಪ್ರದಾ ಚೆನ್ನೈ ಪಾಲಿಕೆಗೆ 6.5 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ವುಡ್ ಲ್ಯಾಂಡ್ಸ್ ಥಿಯೇಟರಿನ ಮಾಲೀಕರಿಗೂ ಆಕೆ ಭಾರಿ ಮೊತ್ತದ ಹಣ ಪಾವತಿಸಬೇಕಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯ ವಕೀಲರು ಜಯಪ್ರದಾ ಮತ್ತು ಅವರ ಸಹೋದರರು 1 ಲಕ್ಷ 91 ಸಾವಿರ ರೂಪಾಯಿ ಪಾವತಿಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.
2008: ಪಾಕಿಸ್ಥಾನದ ಜೈಲಿನಲ್ಲಿ 35 ವರ್ಷ ಸೆರೆಯಲ್ಲಿದ್ದು ಈಚೆಗಷ್ಟೇ ಬಿಡುಗಡೆಯಾದ ಕಾಶ್ಮೀರ ಸಿಂಗ್ ತಾನು ಭಾರತದ ಗೂಢಚಾರನಾಗಿದ್ದುದು ನಿಜ ಎಂದು ಒಪ್ಪಿಕೊಂಡರು. ಇದೇ ಸಂದರ್ಭದಲ್ಲಿ ಅವರು ತಾವು 35 ವರ್ಷ ಸೆರೆಮನೆಯಲ್ಲಿದ್ದಾಗ ಕೇಂದ್ರದಲ್ಲಿದ್ದ ಯಾವ ಸರ್ಕಾರವೂ ತನ್ನ ಕುಟುಂಬಕ್ಕೆ ಸಹಾಯ ನೀಡಲಿಲ್ಲ ಎಂದು ವ್ಯಥೆಪಟ್ಟರು. ತನ್ನ ಪತ್ನಿ ಪರಮ್ ಜಿತ್ ಕೌರ್ ಜತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
2008: ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸ್ಥಾಪಿತವಾದ ಪ್ರೊ. ಸ.ಸ.ಮಾಳವಾಡ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯನ್ನು 2006ನೇ ಸಾಲಿನಲ್ಲಿ ಬೆಂಗಳೂರಿನ ಆಕಾಶವಾಣಿ ಕೇಂದ್ರದ ಸಹ ನಿರ್ದೇಶಕ ಡಾ. ಬಸವರಾಜ ಸಾದರ ಅವರ ಕೃತಿ `ತಮಂಧಕ್ಕೆ ಬೆಳಗು' ಪಡೆದುಕೊಂಡಿದೆ ಎಂದು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಎಚ್.ಎಂ.ಮಹೇಶ್ವರಯ್ಯ ತಿಳಿಸಿದರು.
2008: ಎಂಟು ಮಂದಿ ನಕ್ಸಲ್ ಬೆಂಬಲಿಗರನ್ನು ಉಡುಪಿ ಜಿಲ್ಲೆಯ ನಾಡ್ಪಾಲು ಗ್ರಾಮದ ಮೇಗದ್ದೆಯಲ್ಲಿ ನಸುಕಿನ ವೇಳೆ ದಾಳಿ ನಡೆಸಿ ಬಂಧಿಸಲಾಯಿತು. ಬಂಧಿತರು ಹೆಬ್ರಿ ಠಾಣೆಯನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು. ಇವರ ಬಂಧನದೊಂದಿಗೆ ದೊಡ್ಡ ಅನಾಹುತ ತಪ್ಪಿದಂತಾಯಿತು. ಬಂಧಿತರನ್ನು ಇದೇ ಗ್ರಾಮದ ಸುಧಾಕರ ಶೆಟ್ಟಿ, ದಯಾನಂದ ಗೌಡ, ಕೆಂಪೇಗೌಡ, ಕೃಷ್ಣಪ್ಪ ಗೌಡ, ಕರಿಯ ಗೌಡ, ಆನಂದ ಗೌಡ, ಸತೀಶ್ ಶೆಟ್ಟಿ ಮತ್ತು ಸುರೇಶ್ ಗೌಡ ಎಂದು ಗುರುತಿಸಲಾಯಿತು.
2008: ಕೊಡಗಿನ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಅರಣ್ಯ, ಉತ್ತರ ಕೊಡಗಿನ ಕುಶಾಲನಗರ ಅರಣ್ಯ ವಲಯದ ಆನೆಕಾಡು ಮೀಸಲು ಅರಣ್ಯ ಪ್ರದೇಶ ಹಾಗೂ ನಿಡ್ತ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಬಾಣಾವರದ ಬಳಿಯ ಎರಪರೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆಯಷ್ಟು ಅರಣ್ಯ ಸುಟ್ಟು ಭಸ್ಮವಾಯಿತು.
2008: ಶಿಯಾ ಸಮುದಾಯದವರು ಹೆಚ್ಚಾಗಿದ್ದ ಬಾಗ್ದಾದ್ ನಗರದ ಮಧ್ಯ ಭಾಗದ ಕರ್ರಾಡ್ ಪ್ರದೇಶದಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಬಾಂಬ್ ಸ್ಫೋಟಗಳಲ್ಲಿ 68 ಜನ ಸತ್ತು, 120ಕ್ಕೂ ಅಧಿಕ ಮಂದಿ ಗಾಯಗೊಂಡರು.
2008: ಪಾಕಿಸ್ಥಾನದಲ್ಲಿ ಫೆಬ್ರುವರಿ 18ರಂದು ನಡೆದ ಸಾರ್ವತ್ರಿಕ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿತು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರ್ಕಾರ ರಚನೆಗೊಳ್ಳುವುದು ನಿಶ್ಚಿತವಾದರೂ, ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಉಚ್ಛಾಟನೆಯಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಅಗತ್ಯವಾದ ಮೂರನೇ ಎರಡು ಬಹುಮತ ಗಳಿಸಲು ಪಕ್ಷ ಇನ್ನೂ 5 ಸ್ಥಾನಗಳ ಕೊರತೆ ಅನುಭವಿಸಿತು.
2008: ನಿಯಮದ ಪ್ರಕಾರ ಆದೇಶ ಹೊರಡಿಸಿಲ್ಲ ಎಂದು ಅಧೀನ ನ್ಯಾಯಾಧೀಶರೊಬ್ಬರ ವಿರುದ್ಧ ಹೈಕೋರ್ಟಿಗೆ ದೂರು ದಾಖಲಿಸಿರುವ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆಯಿತು. ಅಧೀನ ನ್ಯಾಯಾಧೀಶರೊಬ್ಬರ ವಿರುದ್ಧ ಹೈಕೋರ್ಟಿನಲ್ಲಿ ಹೀಗೆ ದೂರು ದಾಖಲಿಸಿರುವುದು ಇದೇ ಪ್ರಥಮ ಎನ್ನಲಾಗಿದೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಚಿಕ್ಕ ಕಾರಣಕ್ಕೆ ಆರೋಪಿಯನ್ನು ಖುಲಾಸೆ ಮಾಡಿದ ನಗರದ 20ನೇ ಎಸಿಎಂಎಂ ಕೋರ್ಟಿನ ನ್ಯಾಯಾಧೀಶ ಚಿನ್ನಪ್ಪನವರ್ ವಿರುದ್ಧ ವಕೀಲ ಎಂ.ಜಿ.ಕುಮಾರ್ ಈ ದೂರು ದಾಖಲಿಸಿದರು.
2007: ಇಂಡೋನೇಷಿಯಾದ ಪ್ರಯಾಣಿಕರ ವಿಮಾನವೊಂದು ಯೋಗ್ಯಕರ್ತ (ಹಿಂದಿನ ಜಕಾರ್ತ) ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಗ್ನಿಗೆ ಆಹುತಿಯಾಗಿ 23 ಜನ ಮೃತರಾದರು. ಆದರೆ ಅದೃಷ್ಟವಶಾತ್ ವಿಮಾನದಲ್ಲಿದ್ದ 140 ಮಂದಿಯ ಪೈಕಿ 100ಕ್ಕೂ ಹೆಚ್ಚು ಮಂದಿ ಪಾರಾದರು.
2007: ಎಂಟು ವರ್ಷದ ಪುಟ್ಟ ಬಾಲಕ ಬಿಸ್ಮೆ ಭುವನೇಶ್ವರದಲ್ಲಿ ಹೈಸ್ಕೂಲ್ ಸರ್ಟಿಫಿಕೇಟ್ (ಎಚ್ ಎಸ್ ಸಿ) ಪರೀಕ್ಷೆಗೆ ಹಾಜರಾದ. ಒರಿಸ್ಸಾ ಹೈಕೋರ್ಟ್ ಆತನ ಪರವಾಗಿ ತೀರ್ಪು ನೀಡಿದ ಬಳಿಕ ಬಿ ಎಸ್ ಇ (ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ಈ ಬಾಲಕನಿಗೆ 10 ದಿನಗಳ ಸುದೀರ್ಘ ಅವಧಿಯ ಈ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡಿತ್ತು. ಉತ್ತರ ಬಾಲಸೋರ್ ಜಿಲ್ಲೆಯ ನಿವಾಸಿಯಾದ ಬಿಸ್ಮೆಯ ಪಾಲಕರು, ಮತ್ತು ಶಿಕ್ಷಕರು ಬಾಲಕನಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡುವಂತೆ ಬಿ ಎಸ್ ಇಗೆ ಮನವಿ ಮಾಡಿದ್ದರು.
2007: ಹನ್ನೆರಡು ವರ್ಷಗಳ ಹಿಂದೆ ಪಣಜಿಯ ಅನಾಥಾಲಯವೊಂದರ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದ ಆಸ್ಟ್ರೇಲಿಯಾದ ಶಿಶುಕಾಮಿ ವೆರ್ನರ್ ವೂಲ್ಫ್ ಇಂಗೊ ಎಂಬ ಆರೋಪಿಗೆ ಮಾರ್ಗೋವಾ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆಯನ್ನು ವಿಧಿಸಿತು. ಇಬ್ಬರು ಸ್ಥಳೀಯ ಮಕ್ಕಳನ್ನು ಅಪಹರಿಸಿ ಅವರಿಗೆ ಲೈಂಗಿಕ ಹಿಂಸೆ ನೀಡಿದ್ದಕ್ಕಾಗಿ ನ್ಯಾಯಾಲಯವು ಈ ಶಿಕ್ಷೆ ವಿಧಿಸಿತು. ಈತನಿಗಾಗಿ ಸಿಬಿಐ 10 ವರ್ಷಗಳ ಹಿಂದಿನಿಂದ ಹುಡುಕಾಟ ಆರಂಭಿಸಿತ್ತು. ಇಂಗೊನನ್ನು 2005ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಇಂಡೊ-ಜರ್ಮನ್ ಫ್ರೆಡ್ಡಿ ಪೀಟ್ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಶಿಶುಕಾಮಿ ಜಾಲದಲ್ಲಿ ಷಾಮೀಲಾದ ಅಪರಾಧಕ್ಕಾಗಿ ಭಾರತಕ್ಕೆ ಹಸ್ತಾಂತರಗೊಂಡು ಶಿಕ್ಷೆಗೆ ಈಡಾದ ಮೂರನೆಯ ವಿದೇಶಿ ವ್ಯಕ್ತಿ ಇಂಗೊ. ಮಾರ್ಗೋವಾ ಅನಾಥಾಲಯವನ್ನು ರಕ್ಷೆಯಾಗಿ ಬಳಸಿಕೊಂಡು, ಶಿಶುಕಾಮಿಗಳಿಗೆ ನಿಯಮಿತವಾಗಿ ಲೈಂಗಿಕ ಶೋಷಣೆಗೆ ಮಕ್ಕಳನ್ನು ಒದಗಿಸುವ ಜಾಲವನ್ನು ಪೀಟ್ ಹೆಣೆದಿದ್ದ. ಶಿಶುಕಾಮಿಗಳು ಈ ಮಕ್ಕಳನ್ನು ಸ್ಥಳೀಯ ಹೋಟೆಲುಗಳಿಗೆ ಒಯ್ದು ಅವರನ್ನು ಶೋಷಣೆಗೆ ಒಳಪಡಿಸಿದ್ದಲ್ಲದೆ ಅವರ ಛಾಯಾಚಿತ್ರಗಳನ್ನೂ ತೆಗೆದುಕೊಳ್ಳುತ್ತಿದ್ದರು. ಶೋಷಣೆಗೆ ಒಳಗಾದ ಇಬ್ಬರು ಮಕ್ಕಳು ನ್ಯಾಯಾಲಯದಲ್ಲಿ ರಹಸ್ಯವಾಗಿ ಸಾಕ್ಷಿ ನುಡಿದಿದ್ದರು. ಆದರೆ ಅವರಲ್ಲಿ ಒಬ್ಬ ಬಾಲಕ ನಂತರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದ. 1991ರಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಶೀಲಾ ಬಾರ್ಸೆ ಈ ಜಾಲವನ್ನು ಬಯಲಿಗೆಳೆದಾಗ ಪೀಟ್ ನನ್ನು ಬಂಧಿಸಲಾಗಿತ್ತು. 1996ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಆತ ಅಗುವಾಡ ಸೆರೆಮನೆಯಲ್ಲಿ ಅಸು ನೀಗಿದ್ದ. ಶಿಕ್ಷೆಗೆ ಒಳಗಾಗಿದ್ದ ಇನ್ನೊಬ್ಬ ವಿದೇಶಿ ಇ.ಸಿ. ಮೆಕ್ ಬ್ರೈಡ್ನನ್ನು 7 ವರ್ಷಗಳ ಸೆರೆವಾಸ ಮುಗಿಸಿದ ಬಳಿಕ ನ್ಯೂಜಿಲೆಂಡಿಗೆ ಕಳುಹಿಸಲಾಗಿತ್ತು. ಫ್ರೆಡ್ಡಿ ಪೀಟ್ನ ಇನ್ನೂ ಇಬ್ಬರು ವಿದೇಶಿ ಸಹಚರರಾದ ನೀಲ್ಸ್ ಜಾನ್ಸನ್ ಮತ್ತು ಡೊಮಿನಿಕ್ ಸಬೀರೆಗಾಗಿ ಸಿಬಿಐ ಇನ್ನೂ ಹುಡುಕಾಟ ನಡೆಸುತ್ತಿದೆ. ಫ್ರೆಂಚ್ ರಾಷ್ಟ್ರೀಯನಾದ ಸಬೀರೆಯನ್ನು 1998ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆದರೆ ಆತ ಸೆರೆಮನೆಯಿಂದ ಜಿಗಿದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.
2007: ಪ್ರಸ್ತುತ ವರ್ಷ ತನ್ನ `ಅಮೃತ ಮಹೋತ್ಸವ' (ಪ್ಲಾಟಿನಂ ಜ್ಯುಬಿಲಿ) ಆಚರಿಸುತ್ತಿರುವ ಭಾರತೀಯ ವಾಯುಪಡೆಯು, ಚಂಡೀಗಢದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ತಾನು ಭೂ ಮೇಲ್ಮೈಯಲ್ಲಿ ಹಾಗೂ ಬಾನಿನಲ್ಲಿ ಕಾರ್ಯಾಚರಣೆಗೆ ಬಳಸುವ ಎಲ್ಲ 27 ಮಾದರಿಯ ವಿಮಾನಗಳನ್ನು ಪ್ರದರ್ಶಿಸಿತು. ಸಶಸ್ತ್ರ ಪಡೆಗಳ ಸಮಗ್ರ ಪರಿಶೀಲನೆ ಸಂದರ್ಭದಲ್ಲಿ ವಾಯುಪಡೆ ಈ ಪ್ರದರ್ಶನ ನಡೆಸಲಾಯಿತು. ಭಾರತೀಯ ವಾಯುಪಡೆಯ ಇತಿಹಾಸದಲ್ಲೇ ಇದು ನಾಲ್ಕನೆಯ ಸಮಗ್ರ ಪರಿಶೀಲನೆ. 1954ರ ಏಪ್ರಿಲ್ 1ರಂದು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತೀಯ ವಾಯುಪಡೆ ಪೆರೇಡಿನ `ಮೊತ್ತ ಮೊದಲ ಪರಿಶೀಲನೆ' ನಡೆಸಿದ್ದರು. ಆಗ ವಾಯುಪಡೆ ವಿಮಾನಗಳ ಸ್ಥಬ್ಧ ಪ್ರದರ್ಶನ ಏರ್ಪಡಿಸಲಾಗಿತ್ತು. ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥ ಏರ್ ಮಾರ್ಷಲ್ ಸುಬ್ರತೊ ಮುಖರ್ಜಿ ಅವರು ಇದೇ ದಿನ ಅಧಿಕಾರ ವಹಿಸಿಕೊಂಡದ್ದೂ ಕಾಕತಾಳೀಯವಾಗಿತ್ತು. ಎರಡನೇ ವಾಯುಪಡೆ ಪೆರೇಡ್ ಪರಿಶೀಲನೆ 1972ರ ಏಪ್ರಿಲ್ 1ರಂದು ವಿ.ವಿ. ಗಿರಿ ಅವರು ರಾಷ್ಟ್ರಪತಿಯಾಗಿದ್ದಾಗ ನಡೆದಿತ್ತು. ಆಗ ಮೊದಲ ಬಾರಿಗೆ ವಾಯುಪಡೆ ವಿಮಾನಗಳ ವಾಯುಪ್ರದರ್ಶನ ನಡೆಸಲಾಗಿತ್ತು ಈ ಪರಿಶೀಲನೆ ಪಾಲಂನ ವಾಯುಪಡೆ ನಿಲ್ದಾಣದಲ್ಲಿ ನಡೆದಿತ್ತು. ಮೂರನೇ ವಾಯುಪಡೆ ಪೆರೇಡ್ ಪರಿಶೀಲನೆ `31 ವರ್ಷಗಳ ಹಿಂದೆ' 1976ರ ಜನವರಿ 19ರಂದು ಚಂಡಿಗಢದಲ್ಲಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರಿಂದ ನಡೆದಿತ್ತು. ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ನಡೆದ ನಾಲ್ಕನೇ ಪರಿಶೀಲನೆಯಲ್ಲಿ ಚೀತಾ, ಚೇತಕ್, ಚೀತಲ್, ಎಂಐ-8, ಎಂಐ-17, ಎಂಐ-26, ಎಂಐ-35, ಧ್ರುವ (ಆಧುನಿಕ ಹಗುರ ಹೆಲಿಕಾಪ್ಟರ್) ಹೆಲಿಕಾಪ್ಟರುಗಳು, ಮಿಗ್-21, ಮಿಗ್ -23, ಮಿಗ್-27, ಮಿಗ್-29, ಸುಖೋಯ್ ಎಸ್ ಯು-30, ಎಂಕೆಐ, ಮಿರಾಜ್-2000, ಜಾಗ್ವಾರ್, ಕ್ಯಾನ್ ಬೆರ್ರಾ ಯುದ್ಧ ವಿಮಾನಗಳು, ಎಚ್ ಎಸ್ - 748, ಎಎನ್-32, 11-76 ಸಾರಿಗೆ ವಿಮಾನಗಳು, ಬೋಯಿಂಗ್-737 ಮತ್ತು ಎಂಬ್ರಾಯೆರ್ ವಿಐಪಿ ವಿಮಾನಗಳು, 11-78 ಮರು ಇಂಧನ ವಾಹನ ಹಾಗೂ ಎಚ್ ಪಿ ಟಿ -32, ಎಚ್ ಜೆ ಟಿ-16 (ಕಿರಣ್) ಮತ್ತು ಇಸ್ಕಾರ ಟಿಎಸ್-11 ತರಬೇತಿ ವಿಮಾನಗಳ ಪ್ರದರ್ಶನ ನಡೆಯಿತು.
2007: ಕೇಂದ್ರ ತನಿಖಾ ದಳದ ವಂಚನೆ ಮತ್ತು ದುರುಪಯೋಗ ತಡೆ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ಕೇರಳದ ತ್ರಿಶ್ಯೂರು ಮೂಲದ ಎಂ.ಜಿ. ಸುಕುಮಾರ ಎಂಬ ವ್ಯಕ್ತಿಯನ್ನು ಬಂಧಿಸಿ ಆತನಿಂದ ಐದು ಕೋಟಿ ರೂಪಾಯಿ ಮೌಲ್ಯದ ಪುರಾತನ ಕಾಲದ ಕುರಾನ್ ಗ್ರಂಥ ಹಾಗೂ ಅಮೂಲ್ಯ ಕಲಾಕೃತಿಯನ್ನು ವಶಪಡಿಸಿಕೊಂಡಿತು. 400 ವರ್ಷಗಳಷ್ಟು ಹಳೆಯದಾದ ಈ ಕುರಾನ್ ಗ್ರಂಥವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ ಬರೆದದ್ದು ಎಂದು ನಂಬಲಾಗಿದೆ. ಜೊತೆಗೆ ಲಭಿಸಿದ ಇನ್ನೊಂದು ಕಲಾಕೃತಿ ಬಂಗಾರ ಮಿಶ್ರಿತ ಬಣ್ಣದದಾಗಿದ್ದು 140 ಕಿ.ಗ್ರಾಂ. ತೂಕ ಹೊಂದಿದೆ.
2007: ಫೆಬ್ರುವರಿಯಲ್ಲಿ ಲೋಕಸಭೆಗೆ ಪುನರಾಯ್ಕೆಗೊಂಡ ನವಜೋತ್ ಸಿಂಗ್ ಸಿಧು ಅವರು ಈದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಬೀದಿ ಬದಿಯಲ್ಲಿ ನಡೆದ ಜಗಳದಲ್ಲಿ 18 ವರ್ಷದ ಯುವಕನ ಸಾವಿಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಿಂದ ಶಿಕ್ಷೆಗೆ ಒಳಗಾಗಿದ್ದ ಸಿಧು ಕಳೆದ ಡಿಸೆಂಬರಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2007: ಕೇರಳ ಪ್ರವಾಸೋದ್ಯಮದಲ್ಲಿ ಹೊಸತನದ ಅಲೆಯೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ದುಬಾರಿ ಸಮುದ್ರಯಾನದ `ಕ್ವೀನ್ ಮೇರಿ-2' ಹಡಗು ಕೊಚ್ಚಿಗೆ ಬಂದಿಳಿಯಿತು. ಅಲೆಯ ಮೇಲೆ ಅಂತರಿಕ್ಷ ತೋರಿಸುವ ತಾರಾ ವೀಕ್ಷಣಾಲಯ, ಜಗತ್ತಿನ ಸಮುದ್ರದ ಮೇಲಿನ ಅತಿದೊಡ್ಡ ಗ್ರಂಥಾಲಯ (4000 ಗ್ರಂಥಗಳು, 8000 ಪುಸ್ತಕಗಳು, 200 ಸಿಡಿರಾಂಗಳು ಈ ಗ್ರಂಥಾಲಯದಲ್ಲಿ ಇವೆ) ಮತ್ತು ಬಾಲ್ ರೂಂ ಈ ಹಡಗಿನ ವಿಶೇಷಗಳು.
2006: ವಾರಣಾಸಿಯ ದಂಡು ರೈಲು ನಿಲ್ದಾಣ ಮತ್ತು ಸಂಕಟ ಮೋಚನ ದೇವಸ್ಥಾನದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಕನಿಷ್ಠ 20 ಜನ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಸಂಕಟಮೋಚನ ದೇವಸ್ಥಾನದ ಒಳಗೆ ಸಂಜೆ ಪೂಜೆ ನಡೆಯುತ್ತಿದ್ದಾಗ ಮೊದಲ ಸ್ಫೋಟದಲ್ಲಿ 6 ಜನ, ಕೆಲವೇ ನಿಮಿಷಗಳಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಮತ್ತು ನಿರೀಕ್ಷಣಾ ಕೊಠಡಿಯಲ್ಲಿ ಸಂಭವಿಸಿದ ಇನ್ನೊಂದು ಬಾಂಬ್ ಸ್ಫೋಟದಲ್ಲಿ 14 ಜನ ಮೃತರಾದರು.
2006: ಟೊರಂಟೋದ ಬಾಟಾ ಶೂ ವಸ್ತು ಸಂಗ್ರಹಾಲಯದಿಂದ ಜನವರಿ 22ರಂದು ಕಳುವಾಗಿದ್ದ 1.60 ಲಕ್ಷ ಡಾಲರ್ ಬೆಲೆಯ ಹೈದರಾಬಾದ್ ನಿಜಾಮ ಧರಿಸುತ್ತಿದ್ದ ವಜ್ರಖಚಿತ ಪಾದರಕ್ಷೆಯನ್ನು ಮತ್ತೆ ವಶಪಡಿಸಿಕೊಳ್ಳಲಾಯಿತು. 1790ರಲ್ಲಿ ನಿಜಾಮ ಧರಿಸುತ್ತಿದ್ದ ಈ ಪಾದರಕ್ಷೆಯ ಜೊತೆಗೆ ಕಳುವಾಗಿದ್ದ 11,000 ಡಾಲರ್ ಬೆಲೆಯ ಅಪರೂಪದ ಹರಳುಗಳನ್ನು ಒಳಗೊಂಡ ಚಿನ್ನದ ಉಂಗುರ, 45,000 ಡಾಲರ್ ಮೌಲ್ಯದ ಕಾಲ್ಚೈನು ಕೂಡಾ ಟೊರೊಂಟೋ ಇಗರ್ಜಿ (ಚರ್ಚ್) ಬಳಿ ಪ್ಲಾಸ್ಟಿಕ್ ಚೀಲ ಒಂದರಲ್ಲಿ ಲಭಿಸಿದವು.
2006: ತೀವ್ರ ವಿವಾದಕ್ಕೆ ಒಳಗಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿಯ ಯೋಜನೆ ಆರಂಭಿಸಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಆದೇಶ ನೀಡಿದರು.
2006: ಅಮೆರಿಕದ ಖ್ಯಾತ ಚಿತ್ರ ನಿರ್ದೇಶಕ ಗೋರ್ಡಾನ್ ಪಾರ್ಕ್ಸ್ ನಿಧನರಾದರು.
1987: ಅಹಮದಾಬಾದಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 10,000ನೇ ರನ್ ಬಾರಿಸಿ, ಈ ದಾಖಲೆ ಮಾಡಿದ ಮೊತ್ತ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1960: ಇವಾನ್ ಲೆಂಡ್ಲ್ ಹುಟ್ಟಿದರು. ಝೆಕ್ ಸಂಜಾತ ಅಮೆರಿಕ್ ಟೆನಿಸ್ ಆಟಗಾರರಾದ ಇವರು 1985ರಿಂದ 1987ರವರೆಗಿನ ಅವಧಿಯಲ್ಲಿ ವಿಂಬಲ್ಡನ್ ಹೊರತಾಗಿ ಎಲ್ಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡು ಜಗತ್ತಿನ ಅಪ್ರತಿಮ ಟೆನಿಸ್ ಆಟಗಾರ ಎನಿಸಿಕೊಂಡಿದ್ದರು.
1953: ಡಿ ಎನ್ ಎ ಅತಿಸಣ್ಣ ಕಣದ `ಜೋಡಿ ಪಾವಟಿಗೆ' (ಎ ಡಬಲ್ ಹೆಲಿಕ್ಸ್) ಮಾದರಿಯನ್ನು ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ವಾಟ್ಸನ್ ಅವರು ಕೇಂಬ್ರಿಜ್ನ ಕ್ಯಾವೆಂಡಿಶ್ ಲ್ಯಾಬೋರೇಟರಿಯಲ್ಲಿ ಅನಾವರಣಗೊಳಿಸಿದರು. 1953ರ ಏಪ್ರಿಲ್ 25ರಂದು `ನೇಚರ್' ಪತ್ರಿಕೆಯಲ್ಲಿ ತಮ್ಮ ಮಾದರಿಯನ್ನು ವಿವರಿಸುವ ಪ್ರಬಂಧವನ್ನು (ಮಾಲೆಕ್ಯುಲೀರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಯಿಕ್ ಆ್ಯಸಿಡ್ಸ್) ಪ್ರಕಟಿಸಿದರು. 1962ರಲ್ಲಿ ವೈದ್ಯಕೀಯ ಕ್ಷೇತ್ರಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಮಾರಿಸ್ ವಿಕಿನ್ಸ್ ಜೊತೆಗೆ ಅವರು ಹಂಚಿಕೊಂಡರು.
1952: ಭಾರತೀಯ ಆಧ್ಯಾತ್ಮಿಕ ಗುರು `ಕ್ರಿಯಾ ಯೋಗ'ದ ಪ್ರತಿಪಾದಕ ಪರಮಹಂಸ ಯೋಗಾನಂದ (1893-1952) ಅವರು `ಮಹಾ ಸಮಾಧಿ' ಹೊಂದಿದರು.
1911: ಸಚ್ಚಿದಾನಂದ ಎಚ್. ವಾತ್ಸಾಯನ (1911-87) ಹುಟ್ಟಿದರು. ಖ್ಯಾತ ಹಿಂದಿ ಕವಿಯಾದ ಇವರು 1979ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು.
1905: ಚಿತ್ರ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ಶಂಕರರಾವ್ ಅಳಂದಕರ (7-3-1905ರಿಂದ 31-5-1971) ಅವರು ಸರಾಫ ವೃತ್ತಿಯವರಾದ ನಾರಾಯಣ ನಾಯಕ್ - ಚಂದೂಬಾಯಿ ದಂಪತಿಯ ಮಗನಾಗಿ ಗುಲ್ಬರ್ಗದಲ್ಲಿ(ಕಲ್ಬುರ್ಗಿ) ಜನಿಸಿದರು.
1876: ಅಲೆಗ್ಸಾಂಡರ್ ಗ್ರಹಾಂಬೆಲ್ಗೆ ಟೆಲಿಫೋನ್ ಸಂಶೋಧನೆಗಾಗಿ ಪೇಟೆಂಟ್ ನೀಡಲಾಯಿತು. ಎಲಿಶಾ ಗ್ರೇ ಜೊತೆಗೆ ಕಾನೂನು ಸಮರದ ಬಳಿಕ ಗ್ರಹಾಂಬೆಲ್ ಅವರಿಗೆ ಈ ಪೇಟೆಂಟ್ ಲಭಿಸಿತು. ಬೆಲ್ ಅವರಿಗೆ ಪೇಟೆಂಟ್ ನೀಡಿದ್ದರ ವಿರುದ್ಧ ಇದೇ ದಿನ ಎಲಿಶಾ ಗ್ರೇ ಕೇವಿಯಟ್ ಸಲ್ಲಿಸಿದರೂ ಅಮೆರಿಕಾದ ಸುಪ್ರೀಂಕೋರ್ಟಿನಲ್ಲಿ ದೀರ್ಘ ಕಾನೂನು ಸಮರದ ಬಳಿಕ ಪೇಟೆಂಟ್ ಹಕ್ಕುಗಳನ್ನು ಕಳೆದುಕೊಂಡ.
1835: ಶೈಕ್ಷಣಿಕ ಅನುದಾನಗಳನ್ನು ಇನ್ನು ಮುಂದೆ ಪಾಶ್ಚಾತ್ಯ ತಿಳಿವಳಿಕೆ ವೃದ್ಧಿಗಾಗಿ ಬಳಸಲಾಗುವುದು ಎಂದು ಘೋಷಿಸುವ ಮೂಲಕ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಹಣೆಬರಹವನ್ನೇ ಬದಲಾಯಿಸಿದ. ಗವರ್ನರ್ ಜನರಲ್ನ ಎಕ್ಸಿಕ್ಯೂಟಿವ್ ಕೌನ್ಸಿಲಿನ ಕಾನೂನು ಸದಸ್ಯ ಥಾಮಸ್ ಬೇಬಿಂಗ್ಟನ್ ಮೆಕಾಲೆ ಸಲ್ಲಿಸಿದ ಶಿಕ್ಷಣ ಸಂಬಂಧಿತ ವರದಿಯನ್ನು ಆಧರಿಸಿ ಬೆಂಟಿಂಕ್ ಈ ಕ್ರಮ ಕೈಗೊಂಡ. ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇದರಿಂದಾಗಿ ಎದ್ದಿದ್ದ ವಿವಾದ ಕೊನೆಗೆ ಇಂಗ್ಲಿಷ್ ಶಿಕ್ಷಣ ಪ್ರತಿಪಾದಕರ ಕೈ ಮೇಲಾಗುವುದರೊಂದಿಗೆ ಅಂತ್ಯಗೊಂಡಿತು. ಬ್ರಿಟಿಷ್ ಸರ್ಕಾರವು `ಇಂಗ್ಲಿಷ್ ಶಿಕ್ಷಣ' ಪದ್ಧತಿಯನ್ನು ಅಂಗೀಕರಿಸಿತು.
1765: ಜೋಸೆಫ್ ನೀಸ್ (Joseph Niepce) (1765-1833) ಹುಟ್ಟಿದ ದಿನ. ಫ್ರೆಂಚ್ ಸಂಶೋಧಕನಾದ ಈತ ದೀರ್ಘಕಾಲ ಬಾಳುವಂತಹ ಮೊತ್ತ ಮೊದಲ ಫೋಟೋಗ್ರಾಫ್ ಸೃಷ್ಟಿಸಿದ.
No comments:
Post a Comment