ಪತ್ರಕರ್ತ ಶುಜಾತ್ ಬುಖಾರಿ ಹಂತಕ ನವೀದ್ ಜಟ್ಟ್ ಹತ್ಯೆ
ಶ್ರೀನಗರ: ಕಾಶ್ಮೀರದ ಬಡಗಮ್ ಜಿಲ್ಲೆಯಲ್ಲಿ ಹಿರಿಯ ಪತ್ರಕರ್ತ, ‘ರೈಸಿಂಗ್ ಕಾಶ್ಮೀರ’ ಸಂಪಾದಕ ಶುಜಾತ್ ಬುಖಾರಿ ಅವರನ್ನು ಕೊಲೆ ಮಾಡಿದ ಭಯೋತ್ಪಾದಕ ನವೀದ್ ಜಟ್ಟ್ ಸೇರಿದಂತೆ ಲಷ್ಕರ್-ಇ-ತೊಯ್ಬಾ (ಎಲ್ ಇಟಿ)ಭಯೋತ್ಪಾದಕ ಸಂಘಟನೆಯ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳೊಂದಿಗೆ 2018 ನವೆಂಬರ್ 28ರ ಬುಧವಾರ ನಡೆದ ಗುಂಡಿನ ಘರ್ಷಣೆಯಲ್ಲಿ ಹತರಾಗಿದ್ದಾರೆ.
ಬುಕಾರಿ ಅವರು ಹಿರಿಯ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ’ ಪತ್ರಿಕೆಯ ಸಂಪಾದಕರಾಗಿದ್ದು, ಈ ವರ್ಷದ ಜೂನ್ ತಿಂಗಳಲ್ಲಿ ಶ್ರೀನಗರದ ಹೃದಯಭಾಗದಲ್ಲಿರುವ ತಮ್ಮ ಪತ್ರಿಕಾ ಕಚೇರಿಯ ಹೊರಭಾಗದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದರು.
ಬುಧವಾರ ಬೆಳಗ್ಗೆ ಉಗ್ರಗಾಮಿಗಳು ಅಡಗಿರುವ ಬಗ್ಗೆ ಲಭಿಸಿದ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಉಗ್ರಗಾಮಿಗಳು ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳೂ ಪ್ರತಿಗುಂಡು ಹಾರಿಸಿದವು. ಬಳಿಕ ತೀವ್ರ ಗುಂಡಿನ ಘರ್ಷಣೆ ನಡೆಯಿತು ಎಂದು ಸುದ್ದಿಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಬಡ್ಗಮ್ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ಹೇಳಿದವು.
ಪಾಕಿಸ್ತಾನದ ಮೂಲದ ಎಲ್ ಇಟಿ ಸದಸ್ಯನಾಗಿದ್ದ ಉಗ್ರಗಾಮಿ ನವೀದ್ ಜಟ್ಟ್ ಶ್ರೀನಗರದ ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆಯಿಂದ 2018ರ ಫೆಬ್ರುವರಿಯಲ್ಲಿ ತಪ್ಪಿಸಿಕೊಂಡಿದ್ದ. ಬಳಿಕ
ಆತ ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ೨೦೧೩-೨೦೧೪ರ ಅವಧಿಯಲ್ಲಿ ಹಲವಾರು ಉಗ್ರಾಗಾಮಿ ದಾಳಿಗಳಲ್ಲಿ ಪಾಲ್ಗೊಂಡಿದ್ದ.
ಆತ ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ೨೦೧೩-೨೦೧೪ರ ಅವಧಿಯಲ್ಲಿ ಹಲವಾರು ಉಗ್ರಾಗಾಮಿ ದಾಳಿಗಳಲ್ಲಿ ಪಾಲ್ಗೊಂಡಿದ್ದ.
ಮುಲ್ತಾನಿನ ಟ್ರಕ್ ಚಾಲಕನೊಬ್ಬನ ಮಗನಾದ ಜಟ್ಟ್ ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ದಾಖಲೆಗಳ ಪ್ರಕಾರ, ಅನಂತನಾಗ್ ಜಿಲ್ಲೆಯ ಸೆಂಪೋರಾ ಬಿಜ್ ಬೆಹರಾದಲ್ಲಿ ೨೦೧೪ ರ ಸೆಪ್ಟೆಂಬರ್ ೧೯ ರಂದು ನವೀದ್ ಜಟ್ಟ್ ನನ್ನು ಬಂಧಿಸಲಾಗಿತ್ತು. ಕೊಲೆ ಮತ್ತು ಕೊಲೆಯತ್ನ ಆರೋಪದ ಪ್ರಕರಣಗಳಲ್ಲಿ ಆತನನ್ನು ಶ್ರೀನಗರ ರೈನಾವರಿ ಸೆರೆಮನೆಯಲ್ಲಿ ಬಂಧಿಸಿ ಇಡಲಾಗಿತ್ತು.
ರಾಜ್ಯದ ಅನೇಕ ಭಯೋತ್ಪಾದನಾ ದಾಳಿ ಕೃತ್ಯಗಳಿಗೆ ಸಂಬಂಧಿಸಿದಂತೆ ಜಟ್ಟ್ ಪೊಲೀಸರಿಗೆ ಬೇಕಾಗಿದ್ದ.
ಅಬು ಹಂಜುಲ್ಲ ಎಂಬುದಾಗಿಯೂ ಕರೆಯಲ್ಪಡುತ್ತಿದ್ದ ಜಟ್ಟ್, ದಾಳಿಯೊಂದರಲ್ಲಿ ಇಬ್ಬರು ಪೊಲೀಸರನ್ನು ಮತ್ತು ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರನನ್ನು ಕೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಿವಾಸಿಯಾಗಿದ್ದ ಆತ ಇನ್ನೊಂದು ದಾಳಿಯಲ್ಲಿ ಐವರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಗಂಭೀರವಾಗಿ ಗಾಯಗೊಳಿಸಿದ್ದ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಿವಾಸಿಯಾಗಿದ್ದ ಆತ ಇನ್ನೊಂದು ದಾಳಿಯಲ್ಲಿ ಐವರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಗಂಭೀರವಾಗಿ ಗಾಯಗೊಳಿಸಿದ್ದ.
No comments:
Post a Comment