Tuesday, November 27, 2018

ಇಂದಿನ ಇತಿಹಾಸ History Today ನವೆಂಬರ್ 27

ಇಂದಿನ ಇತಿಹಾಸ History Today ನವೆಂಬರ್ 27
2018: ಬೆಂಗಳೂರು: ಕೇಂದ್ರ ಜಲ ಆಯೋಗ ರಾಜ್ಯ ಸರ್ಕಾರದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿತು. ಹಿಂದೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾ ರಕ್ಕೆ ಯೋಜನೆಯ ಸಾಧ್ಯತಾ ವರದಿ ಸಿದ್ಧಪಡಿಸಿ ಕಳುಹಿಸಿತ್ತು. ಈಗ ಯೋಜನೆಯ ಸಮಗ್ರ ವರದಿಯನ್ನ ಸಿದ್ಧಪಡಿಸಿ ಕಳುಹಿಸಿ ಕೊಡುವಂತೆ ಕೇಂದ್ರ ಸೂಚಿಸಿತು. ಆದರೆ ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯಾಗುವ ಪ್ರಮಾ ಣದಲ್ಲಿ ವ್ಯತ್ಯಯ ಆಗಬಾರದು ಎಂದು ಷರತ್ತು ಹಾಕಿತು.  ರಾಜ್ಯದ ಮಹತ್ವದ ಯೋಜನೆಗೆ ತಮಿಳು ನಾಡು ಆರಂಭದಿಂದಲೇ ತಗಾದೆ ತೆಗೆಯುತ್ತಿದ್ದು, ಕೇಂದ್ರ ಜಲ ಆಯೋಗ, ರಾಜ್ಯ ಸಲ್ಲಿಸಿದ್ದ ಯೋಜನೆಯ ಪೂರ್ವ ಸಾಧ್ಯತಾ ವರದಿಗೆ ಒಪ್ಪಿಗೆ ಸೂಚಿಸಿತು. ಅಲ್ಲದೆ ಯೋಜನೆಯ ಸಂ ಪೂರ್ಣ ವರದಿಯನ್ನು ಕಳುಹಿಸಬೇಕು. ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿ ವರ್ಷ ಬಿಡುವ ಕಾವೇರಿ ನೀರು ಯಥಾವತ್ ಆಗಿರಬೇಕು. ಅಂಶವನ್ನು ಗಮದಲ್ಲಿರಿಸಿಕೊಂಡು ಯೋ ಜನಾ ವರದಿ ಸಿದ್ಧಪಡಿಸಲು ಅನುಮತಿ ನೀಡಿದೆ ಎಂದೂ ತಿಳಿದು ಬಂದಿತು.  ಇದರಿಂದ ತಮಿಳುನಾ ಡಿಗೆ ಬಹುದೊಡ್ಡ ಹಿನ್ನೆಡೆಯುಂಟಾದಂತಾಯಿತು. ಕಾವೇರಿ ನದಿಗೆ ಅಡ್ಡಲಾಗಿ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಯೋಜನೆ ನಿರ್ಮಿಸಲು ೨೦೧೩ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಈಗ ಕೇಂದ್ರ ಜಲ ಆಯೋಗವು (ಅಉW) ಮೇಕೆದಾಟು ಯೋಜನೆ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಯಾವುದೇ ಕಾನೂನಿನ ತೊಡಕಿಲ್ಲ. ತಮಿಳುನಾಡಿಗೆವಾರ್ಷಿಕ ೧೭೭.೨೫ ಟಿಎಂಸಿ ನೀರು ಹರಿಸುವುದ ರಿಂದ, ತಮಿಳುನಾಡು ತಕರಾರು ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ವರದಿ (ಡಿಪಿಎಅರ್) ಸಲ್ಲಿಸಲು ಸೂಚಿಸಿತು. ಮೇಕೆದಾಟು ಯೋಜನೆಯನ್ನ ಸುಮಾರು ,೯೧೨ಕೋಟಿಯಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ ಮಾಡಲಾಗಿದೆ. ಅಣೆಕಟ್ಟಿನಲ್ಲಿ ೬೬ ಟಿಎಂಸಿ ನೀರು ಸಂಗ್ರಹಣೆ ಮಡಲು ಸಾಧ್ಯವಾಗಲಿದೆ. ಇದರಲ್ಲಿ ೧೬ ಟಿಎಂಸಿ ನೀರು ಕುಡಿಯುವ ನೀರಿನ ಯೋಜನೆಗೆ ಬಳಕೆಯಾಗಲಿದೆ. ಸುಮಾರು ಸಾವಿರ ಕೋಟಿ ರೂ. ಮೊತ್ತದಲ್ಲಿ ರಾಮನಗರದ ಮೇಕೆದಾಟುವಿಲ್ಲಿ ಅಣೆಕಟ್ಟು ನಿರ್ಮಿಸಲು ೨೦೧೩ರಲ್ಲಿ ರಾಜ್ಯ ಸರಕಾರ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ವಿಚಾರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದ್ದು, ಅಂದಿನ ಸಿಎಂ ಜಯಲಲಿತಾ, ಯೋಜನೆಗೆ ಅನುಮತಿ ನೀಡಿದರೆ ತಮಿಳುನಾಡಿಗೆ ಸಮಸ್ಯೆಯಾಗುವುದೆಂದು ಕೇಂದ್ರಕ್ಕೆ ಪತ್ರ ಬರೆದಿದ್ದರು.  ೬೬ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ, ರಾಮನಗರ ಹಾಗೂ ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರು ಹಾಗೂ ವಿದ್ಯುತ್ ಉತ್ಪಾದನೆ ಮಾಡುವುದು ಯೋಜನೆ ಪ್ರಮುಖ ಉದ್ಧೇಶವಾಗಿದೆ. ಬೆಂಗಳೂರು ಭಾಗಕ್ಕೆ ಸುಮಾರು ೧೬ ಟಿಎಂಸಿ ನೀರು ತರಲು ಉದ್ಧೇಶಿಸಲಾಗಿದ್ದು, ಸುಮಾರು ೪೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರಲಿದೆ. ಮೂಲಕ ರಾಜಧಾನಿಯ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಸರಕಾರ ಯೋಜನೆ ರೂಪಿಸಿದೆ.  .ನಾಡಿಗೆ ಸಮಸ್ಯೆಯಾಗದ ರೀತಿ ಯೋಜನೆ ಜಾರಿ: ಡಿಕೆಶಿ -ಯೋಜನೆ ಗಡಿ ಭಾಗದಲ್ಲಿ ಮಾಡುವುದರಿಂದ ನೀರು ಕೃಷಿಗೆ ಬಳಸಲಾಗುವುದಿಲ್ಲ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಬಿಡುವ ನೀರಿನಲ್ಲಿ ವ್ಯತ್ಯಾಸ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಕರ್ನಾಟಕಕ್ಕೆ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಸಿದ್ಧನಿದ್ದೇನೆ. ತಮಿಳುನಾಡು ಸರ್ಕಾರ ಮಾತುಕತೆಗೆ ಆಹ್ವಾನಿಸಿದರೆ ಖುದ್ದು ನಾನೇ ಹೋಗಲು ಸಿದ್ದನಿದ್ದೇನೆ. ಒಂದು ವೇಳೆ ತಮಿಳುನಾಡಿನವರು ಬಂದರೂ ಮಾತುಕತೆ ನಡೆಸಲು ನಾವು ಸಿದ್ದ. ಇದರಲ್ಲಿ ಯಾವುದೇ ರಾಜ್ಯಗಳು ಪ್ರತಿ? ಮಾಡುವ ಅಗತ್ಯವಿಲ್ಲ. ನಮಗೆ ಕುಡಿಯುವ ನೀರು ಅಗತ್ಯವಿರುವುದರಿಂದ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಈಗಾಗಲೇ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ನೆರೆ ರಾಜ್ಯ ಯಾವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಮಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಜಲ ಆಯೋಗ ಯೋಜನೆ ಆರಂಭಿಸಲು ನಮಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಯೋಜನೆಯ ರೂಪುರೇ?ಗಳನ್ನು ತಿಳಿಸಲಾಗುವುದು. ಡಿ.೬ರಂದು ಕರೆದಿರುವ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರು, ಕಾನೂನು ತಜ್ಞರು ಭಾಗವಹಿಸಲಿದ್ದಾರೆ. ಅಲ್ಲಿ ಚರ್ಚಿಸಿ ಅಂತಿಮವಾದ ರೂಪುರೇ?ಗಳನ್ನು ಸಿದ್ಧಪಡಿಸುತ್ತೇವೆ ಎಂದು ಹೇಳಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಯೋಜನೆಯ ಸಾಧ್ಯತಾ ವರದಿ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಕಳುಹಿಸುವಂತೆ ಸೂಚಿಸಿದೆ. ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವಲ್ಲಿ ರಾಜ್ಯ ಸರ್ಕಾರದ ಯತ್ನಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೨೦೧೩ ರಲ್ಲಿ ರಾಜ್ಯ ಸರ್ಕಾರ ಕಾವೇರಿ ನದಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ತೀರ್ಮಾನಿಸಿತ್ತು. ಅದರಂತೆ ಕೇಂದ್ರ ಜಲ ಆಯೋಗಕ್ಕೆ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಆಗಿನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕೆ.ಜಯಲಲಿತಾ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಹಿನ್ನೆಲೆಯಲ್ಲಿ ಯೋಜನೆ ಕೇಂದ್ರ ಸರ್ಕಾರದ ಅಂಗಳದಲ್ಲಿ ಉಳಿದುಕೊಂಡಿತ್ತು.

2018: ನವದೆಹಲಿ: ಪ್ರಾದೇಶಿಕ ಪಕ್ಷಗಳು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಹಿಂದೆ ಸುತ್ತುತ್ತಿದ್ದಾಗ ಕೇಂದ್ರ ಸರ್ಕಾರವು ಬಿಜೆಪಿ ಬೆಂಬಲಿತ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನ್ ಅವರನ್ನು ತಾನು ಆಹ್ವಾನಿಸಬೇಕು ಎಂದು ಬಯಸಿದ ಕಾರಣ ವಿಧಾನಸಭೆ ವಿಸರ್ಜನೆ ತಮಗೆ ಅನಿವಾರ್ಯವಾಯಿತು ಎಂಬುದಾಗಿ ನೀಡಿದ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಸಮರ್ಥಿಸಿದರು. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ಸಮಾರಂಭ ಒಂದರಲ್ಲಿ ಮಲಿಕ್ ಅವರುಇತಿಹಾಸದಲ್ಲಿ ಅಪ್ರಾಮಾಣಿಕ ವ್ಯಕ್ತಿ ಎಂಬುದಾಗಿ ಹೆಸರು ದಾಖಲಾಗಲು ಇಷ್ಟವಿಲ್ಲದ ಕಾರಣ ಉಭಯ ಕಡೆಗಳ ದಾಕ್ಷಿಣ್ಯಕ್ಕೆ ಒಳಗಾಗದೆ ವಿಧಾನಸಭೆ ವಿಸರ್ಜನೆಯ ಆಯ್ಕೆ ಮಾಡಿದೆ ಎಂದು ಹೇಳಿದ್ದರು.  ‘ದೆಹಲಿಯ ಕಡೆಗೆ ನೋಡಿದರೆ ನಾನು ಲೋನ್ ಸರ್ಕಾರವನ್ನು ಪ್ರತಿಷ್ಠಾಪಿಸಬೇಕಾಗಿತ್ತು. ಇತಿಹಾಸದಲ್ಲಿ ನಾನೊಬ್ಬ ಭ್ರಷ್ಟ ವ್ಯಕ್ತಿ ಎಂದು ದಾಖಲಾಗುತ್ತಿತ್ತು. ನಾನು ಪೂರ್ತಿ ವಿಷಯವನ್ನೇ ಕೊನೆಗೊಳಿಸಿದೆ. ದೂಷಿಸಬಯಸುವವರು ತಮಗೆ ಬೇಕಾದಂತೆ ದೂಷಿಸಬಹುದು. ಆದರೆ ನಾನು ಸರಿಯಾದ ಕೆಲಸ ಮಾಡಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ ಎಂದು ಮಲಿಕ್ ಹೇಳಿದ್ದರು. ಮಲಿಕ್ ಹೇಳಿಕೆಯು ವಿಧಾನಸಭೆ ವಿಸರ್ಜನೆಗೆ ಸಂಬಂಧಿಸಿದಂತೆ ಹೊಸ ವಿವಾದದ ಕಿಡಿ ಹಚ್ಚಿತು.  ಮಾಧ್ಯಮ ಒಂದರ ಜೊತೆ ಮಾತನಾಡಿದ ಮಲಿಕ್ ತಮ್ಮ ಹೇಳಿಕೆಗೆ ಬದ್ಧತೆ ವ್ಯಕ್ತ ಪಡಿಸಿದರು. ’ನಾನು ಏನು ಹೇಳಿದ್ದೇನೋ ಅದು ಸರಿಯಾದುದು. ಸಜ್ಜದ್ ಲೋನ್ ಬಳಿ ಸಂಖ್ಯೆ ಇದ್ದರೆ, ಖಂಡಿತವಾಗಿ ದೆಹಲಿ ಅವರ ಪರ ಒತ್ತಡ ಹಾಕುತ್ತಿತ್ತು ಎಂದು ಮಲಿಕ್ ನುಡಿದರು. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಅವರು ತಮ್ಮ ಜೊತೆ ಸಂಪರ್ಕ ಇಟ್ಟುಕೊಳ್ಳುವಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ ಎಂಬ ತಮ್ಮ ಹಿಂದಿನ ಪ್ರತಿಪಾದನೆಯನ್ನು ಮಲಿಕ್ ಪುನರುಚ್ಚರಿಸಿದರು. ’ನೀವು ಕೇವಲ ಫ್ಯಾಕ್ಸ್ ಮಾಡಿ ಅಥವಾ ಟ್ವೀಟ್ ಮಾಡಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅವರು ಜಮ್ಮುವಿಗೆ ಏಕೆ ಬರಲಿಲ್ಲ? ಅವರು ನನಗೆ ಏಕೆ ಕರೆ ಮಾಡಲಿಲ್ಲ?’ ಎಂದು ಮಲಿಕ್ ಪ್ರಶ್ನಿಸಿದರುಮಲಿಕ್ ಹೇಳಿಕೆಯನ್ನು ವಿರೋಧಿಸಿದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಖ್ ಅಬ್ದುಲ್ಲ ಅವರುವಿಧಾನಸಭೆಗೆ ಸ್ವತಃ ತನ್ನ ಸಂಖ್ಯೆಗಳನ್ನು ಪರೀಕ್ಷಿಸಲು ಅವಕಾಶ ನೀಡಬೇಕಿತ್ತು ಎಂದು ಹೇಳಿದರು. ‘ಅವರಿಗೆ (ಮಲಿಕ್) ದೆಹಲಿ ಸರ್ಕಾರದ ಮುಂದೆ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳಬೇಕಾಗಿದೆ. ಸರ್ಕಾರದ ಬಗ್ಗೆ ನಿಮಗೆ ಎಲ್ಲವೂ ಗೊತ್ತಿದೆ. ವಿಧಾನಸಭೆಯಲ್ಲಿ ಯಾರಿಗೆ ಬಹುಮತ ಇದೆ ಎಂದು ಪರೀಕ್ಷಿಸಬೇಕಾಗಿತ್ತು. ಅದನ್ನು ರಾಜಭವನದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅವರು ಮುನ್ನವೇ ವಿಧಾನಸಭೆಯನ್ನು ಏಕೆ ವಿಸರ್ಜಿಸಲಿಲ್ಲ?’ ಎಂದು ಅಬ್ದುಲ್ಲ ಪ್ರಶ್ನಿಸಿದರು. ಕಳೆದವಾರ ಪಿಡಿಪಿಯು ತನ್ನ ಪ್ರತಿಸ್ಪರ್ಧಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ದಿಢೀರನೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಇಬ್ಬರು ಸದಸ್ಯರ ಪೀಪಲ್ಸ್ ಕಾನ್ಫರೆನ್ಸ್  ಕೂಡಾ ತನಗೆ ಬಿಜೆಪಿ ಮತ್ತು ಇತರ ಪಕ್ಷಗಳ ೧೮ ಸದಸ್ಯರ ಬೆಂಬಲ ಇರುವುದಾಗಿ ಹೇಳಿ ಸರ್ಕಾರ ರಚನೆಯ ಹಕ್ಕುಮಂಡನೆಗೆ ಹೊರಟ ಬಳಿಕ ರಾಜ್ಯಪಾಲರು ಕ್ರಮ ಕೈಗೊಂಡಿದ್ದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವೈಯಕ್ತಿಕ ದಾಳಿಗಳಿಂದ ಎದ್ದಿರುವ ವಿವಾದದಲ್ಲಿ ಮಧ್ಯಪ್ರವೇಶ ಮಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರುಪ್ರಧಾನಿ ಮೋದಿ ಅವರ ತಂದೆಯ ಬಗ್ಗೆ ಮಾಡಲಾಗಿರುವ ಕೀಳು ಅಭಿರುಚಿಯ ಟೀಕೆಯು ಕಾಂಗ್ರೆಸ್ ನಾಯಕನ  ’ಸ್ವಾರ್ಥದ ಗುರಿಯನ್ನು ಹೊಂದಿದೆ ಎಂದು ಹೇಳಿದರು. ‘ಮಹಾನ್ ಕುಲನಾಮವನ್ನು ಮಾತ್ರವೇ ಕಾಂಗ್ರೆಸ್ ರಾಜಕೀಯಬ್ರ್ಯಾಂಡ್ ಆಗಿ ಪರಿಗಣಿಸುತ್ತದೆ ಎಂದು ಜೇಟ್ಲಿ ಅವರು ತಮ್ಮ ಬ್ಲಾಗ್ನಲ್ಲಿ ಬರೆದರು.  ‘ಕಾಂಗ್ರೆಸ್ ಪಕ್ಷದ ಮಧ್ಯಮ ನಾಯಕತ್ವವು ಮಾಡಿರುವ ವಿವಾದಾತ್ಮಕ ಹೇಳಿಕೆಗಳ ಜಾಡು ಹಿಡಿದು ಕಾಂಗ್ರೆಸ್ಸನ್ನು ಝಾಡಿಸುವ ಕೆಲಸವನ್ನು ಬಿಜೆಪಿ ಮುಂದುವರೆಸಲಿದೆ ಎಂದು ಜೇಟ್ಲಿ ಒತ್ತಿ ಹೇಳಿದರು. ವೈಯಕ್ತಿಕ ದಾಳಿಗಳು ನಾಯಕರು ಮಾಡಿರುವ ವೈಯಕ್ತಿಕ ದಾಳಿಗಳಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚೋದನೆಯಿಂದಲೇ ದಾಳಿಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣಗಳಲ್ಲಿ ಈಗಾಗಲೇ ಹೇಳಿದ್ದಾರೆಡಿಸೆಂಬರ್ ೭ರಂದು ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಿರತರಾಗಿರುವ ಜೇಟ್ಲಿ ಅವರು ಕಾಂಗ್ರೆಸ್ ನಾಯಕ ವಿಲಾಸರಾವ್ ಮುತ್ತೆಮ್ವಾರ್ ಅವರು ರಾಜಸ್ಥಾನದಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಮಾಡಿದ ಟೀಕೆಯನ್ನು ಜೇಟ್ಲಿ ಅವರು ತಮ್ಮ ಬ್ಲಾಗ್ ಬರಹದಲ್ಲಿ ಉಲ್ಲೇಖಿಸಿದರು.  ಮಾಜಿ ಸಚಿವ ವಿಲಾಸರಾವ್ ಅವರು ರಾಹುಲ್ ಗಾಂಧಿ ಅವರ ಹೆತ್ತವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತು, ಆದರೆ ಮೋದಿಯವರ ತಂದೆ ಯಾರು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದರು.  ‘ನೀವು ಚಿರಪರಿಚಿತ ಕುಟುಂಬವನ್ನು ಪ್ರತಿನಿಧಿಸುವ ವ್ಯಕ್ತಿ ಆಗಿದ್ದರೆ ರಾಜಕೀಯದ ಬಲವು ನಿಮ್ಮ ಪರವಾಗಿರುತ್ತದೆ ಎಂಬುದು ಕಾಂಗ್ರೆಸ್ ನಾಯಕನ ವಾದವಾಗಿದೆ ಎಂದು ಜೇಟ್ಲಿ ಪ್ರತಿಪಾದಿಸಿದರು.  ಈ ವಾದವನ್ನು ವಿಸ್ತರಿಸಿದ ಹಣಕಾಸು ಸಚಿವರುಇದೇ ಮಾನದಂಡ ಅಳವಡಿಸಿದರೆ, ಮಧ್ಯಮದರ್ಜೆಯ ಕುಟುಂಬಗಳಿಂದ ಬರುವ ಲಕ್ಷಾಂತರ ಮಂದಿ ಪ್ರತಿಭಾವಂತ ರಾಜಕೀಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ನಾಯಕತ್ವ ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ ಎಂದು ಜೇಟ್ಲಿ ಬರೆದರು. ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಲು ಕೇಂದ್ರ ಸಚಿವರುನಾನು ಮೂರು ಸರಳ ಪ್ರಶ್ನೆಗಳನ್ನು ನನ್ನ ಪರಿಚಿತರಿಗೆ ಕೇಳಿದೆ. ನಿಖರ ಉತ್ತರ ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಶ್ನೆಗಳು ಯಾವುವು ಎಂದರೆ: ಗಾಂಧೀಜಿ ಅವರ ತಂದೆಯ ಹೆಸರೇನು?, ಸರ್ದಾರ್ ಪಟೇಲ್ ಅವರ ತಂದೆಯ ಹೆಸರೇನು? ಸರ್ದಾರ ಪಟೇಲ್ ಅವರ ಪತ್ನಿಯ ಹೆಸರೇನು?’ -ಇವು ನನ್ನ ಪ್ರಶ್ನೆಗಳಾಗಿದ್ದವು ಎಂದು ಬರೆದರು.  ‘ಸಾಕಷ್ಟು ವಿಚಾರಗಳನ್ನು ತಿಳಿದಿದ್ದ ನನ್ನ ಯಾವ ಗೆಳೆಯರ ಬಳಿಯೂ ಪ್ರಶ್ನೆಗಳಿಗೆ ಖಚಿತ ಉತರ ಇರಲಿಲ್ಲ. ಇದು ಕಾಂಗ್ರೆಸ್ ರಾಜಕೀಯದ ದುರಂತ ಮತ್ತು ರಾಷ್ಟ್ರದ ಮೇಲೆ ಕಾಂಗ್ರೆಸ್ ರಾಜಕೀಯದಿಂದ ಆಗಿರುವ ಪರಿಣಾಮ ಎಂದು ಜೇಟ್ಲಿ ಹೇಳಿದರು. ‘ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಕೆಲವೇ ಕುಟುಂಬಗಳ ಮತ್ತು ಪಕ್ಷಗಳ ವರ್ಚಸ್ಸುಗಳು ಸಂಪೂರ್ಣವಾಗಿ ಚೂರುಚೂರಾಗಿ, ಅರ್ಹತೆ ಮತ್ತು ಸ್ಪರ್ಧಾತ್ಮಕತೆಯ ಮೂಲಕ ಹೊಸ ನಾಯಕರು ಉದಿಸಿ ಬರುವುದೇ ಭಾರತೀಯ ಪ್ರಜಾಪ್ರಭುತ್ವದ ನೈಜ ಶಕ್ತಿ. ೨೦೧೯ರ ಭಾರತ ೧೯೭೧ರ ಭಾರತಕ್ಕಿಂತ ಸಂಪೂರ್ಣ ಭಿನ್ನ ಎಂದು ಜೇಟ್ಲಿ ಬರೆದರು.

2018: ಜೈಪುರ: ಡಿಸೆಂಬರ್ ೭ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತನ್ನಗೌರವ ಸಂಕಲ್ಪ-೨೦೧೮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ,  ೨೦೧೩ರಲ್ಲಿ ತಾನು ನೀಡಿದ್ದ ಭರವಸೆಗಳನ್ನು ಶೇಕಡ ೯೫ರಷ್ಟು ಈಡೇರಿಸಲಾಗಿದೆ ಎಂದು ಹೇಳಿತು.  ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪ್ರಕಾಶ್ ಜಾವಡೇಕರ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಜೈಪುರದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.  ‘ಸಂಕಲ್ಪ ಪತ್ರವು ರಾಜಸ್ಥಾನದಲ್ಲಿ ಮುಂದಿನ ಐದು ವರ್ಷಗಳಲ್ಲಿ ಖಾಸಗಿ ರಂಗದಲ್ಲಿ ೫೦ ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಮತ್ತು ಪ್ರತಿವರ್ಷ ಸರ್ಕಾರಿ ರಂಗದಲ್ಲಿ ಪ್ರತಿವರ್ಷ ೩೦,೦೦೦ ನೌಕರಿ ಕೊಡಲಾಗುವುದು ಎಂದು ಭರವಸೆ ನೀಡಿತು. ೨೧ ವರ್ಷ ಮೀರಿದ ಅರ್ಹ ಯುವಕರಿಗೆ ಮಾಸಿಕ ೫೦೦೦ ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನೂ ನೀಡಲಾಗುವುದು ಎಂದು ಪ್ರಣಾಳಿಕೆ ಭರವಸೆ ಕೊಟ್ಟಿತು. ರಾಜ್ಯದ ಬಿಜೆಪಿ ಸರ್ಕಾರವು ೨೦೧೩ರ ಪ್ರಣಾಳಿಕೆಯಲ್ಲಿ ನೀಡಿದ್ದ ೬೬೫ ಭರವಸೆಗಳ ಪೈಕಿ ೬೩೦ ಭರವಸೆಗಳನ್ನು  ಈಡೇರಿಸಿದೆ ಎಂದು ವಸುಂಧರಾ ರಾಜೆ ಅವರು ಪ್ರಣಾಳಿಕೆ ಬಿಡುಗಡೆಗೆ ಮುನ್ನ ಹೇಳಿದರು. ಶೇಕಡಾ ೯೫ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಅವರು ನುಡಿದರುಬಿಜೆಪಿಯು ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ಸಿಗಿಂತ ಮುಂದಿತ್ತು, ಹಾಗೆಯೇ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವಲ್ಲೂ ಕಾಂಗ್ರೆಸ್ಸಿಗಿಂತ ಮುಂದಿದೆ ಎಂದು ರಾಜೆ ಹೇಳಿದರು. ಮಹಿಳೆಯರ ಸುರಕ್ಷತೆ ಬಗ್ಗೆ ಪಕ್ಷವು ಹೆಚ್ಚಿನ ಗಮನ ಹರಿಸಲಿದೆ ಮತ್ತು ಎಲ್ಲ ವಯಸ್ಸಿನ ಮಹಿಳೆಯರಿಗಾಗಿ ಹಿಂದೆಯೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ನುಡಿದರು. ‘ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿಸಂತಸದ ಸೂಚ್ಯಂಕವನ್ನು ಪರಿಗಣಿಸಲಾಗುವುದು ಎಂದೂ ವಸುಂಧರಾ ರಾಜೆ ನುಡಿದರು. ಗ್ರಾಮೀಣರನ್ನು ತಲುಪುವ ವಿಚಾರವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚನ ಪ್ರಭಾವ ಬೀರುವುದು, ಸರ್ಕಾರದ ಹಿಂದಿನ ಅವಧಿಯಲ್ಲೂ ಅದು ಪ್ರಭಾವ ಬೀರಿತ್ತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.  ಗ್ರಾಮೀಣ ನೈರ್ಮಲ್ಯವು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಮಿಷನ್ ಘೋಷಿಸಿದಂದಿನಿಂದ ಶೇಕಡಾ ೩೯ರಿಂದ ಶೇಕಡಾ ೯೨ಕ್ಕೆ ಏರಿದೆ ಎಂದು ಜೇಟ್ಲಿ ನುಡಿದರು. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸಲುವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಬಲ ಪರಿಸುವ ಮತ್ತು ಸರಳೀಕರಿಸುವ ಗುರಿಯನ್ನು ಹೊಂದಲಾಗಿದೆ ಎಂದೂ ಪ್ರಣಾಳಿಕೆ ತಿಳಿಸಿತು.

2018: ನಿಜಾಮಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಕಾಂಗ್ರೆಸ್ ಕುಟುಂಬ ಆಡಳಿತವನ್ನು ಶಾಶ್ವತಗೊಳಿಸಲು ಯತ್ನಿಸುತ್ತಿವೆ ಎಂಬುದಾಗಿ ಇಲ್ಲಿ ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತೆಲಂಗಾಣ ಚುನಾವಣೆಯಲ್ಲಿ ಉಭಯ ಪಕ್ಷಗಳುಫ್ರೆಂಡ್ಲಿ ಮ್ಯಾಚ್ ಆಡುತ್ತಿವೆ ಎಂದು ಟೀಕಿಸಿದರು. ರಾಜ್ಯದಲ್ಲಿ ತಮ್ಮ ಚೊಚ್ಚಲ ಚುನಾವಣಾ ಪ್ರಚಾರ ಸಭೆಯಲ್ಲಿಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಬಿಜೆಪಿ ಬದ್ಧತೆಯನ್ನು ಪುನರುಚ್ಚರಿಸಿದ ಮೋದಿ, ’ವೋಟ್ ಬ್ಯಾಂಕ್ ರಾಜಕೀಯವು ಅಭಿವೃದ್ಧಿಗೆ ಗೆದ್ದಲಿನಂತೆ ಹಾನಿ ಉಂಟು ಮಾಡುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ಸಿನಂತೆ ಏನೂ ಕೆಲಸ ಮಾಡದೇ ಇದ್ದರೂ ಬಚಾವ್ ಆಗಬಹುದು ಎಂದು ತೆಲಂಗಾಣದ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಚಿಸಿದ್ದಾರೆ. ಏನನ್ನೂ ಮಾಡದೆ ೫೦-೫೨ ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಶೈಲಿಯನ್ನು ಅವರು ಅಳವಡಿಸಿಕೊಂಡಿದ್ದಾರೆ. ಆದರೆ ಅದು ಈಗ ಸಾಧ್ಯವಿಲ್ಲ ಎಂದು ನಿಜಾಮಾಬಾದ್ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಹೇಳಿದರುಟಿಆರ್ಎಸ್ ಮತ್ತು ಕಾಂಗ್ರೆಸ್ ಕುಟುಂಬ ಆಡಳಿತದ ಪಕ್ಷಗಳಾಗಿದ್ದು ತೆಲಂಗಾಣ ಚುನಾವಣೆಯಲ್ಲಿಫ್ರೆಂಡ್ಲಿ ಮ್ಯಾಚ್ (ಗೆಳೆತನದ ಸ್ಪರ್ಧೆ) ಆಡುತ್ತಿವೆ ಎಂದು ಅವರು ನುಡಿದರು. ಕೆ. ಚಂದ್ರಶೇಖರ ರಾವ್ ನೇತೃತ್ವದ ಟಿಆರ್ ಎಸ್ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಿಲ್ಲ ಎಂದು ನುಡಿದ ಮೋದಿ, ಮುಖ್ಯಮಂತ್ರಿಯವರು ಒಮ್ಮೆ ತಾವು ನಿಜಾಮಾಬಾದನ್ನು ಲಂಡನ್ ಮಾದರಿಯಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ದರು. ಆದರೆ ನಗರವು ಈಗಲೂ ನೀರು, ವಿದ್ಯುತ್ ಮತ್ತು ಸಮರ್ಪಕ ರಸ್ತೆಗಳ ಕೊರತೆಯಿಂದ ನಲುಗುತ್ತಿದೆ ಎಂದು ಹೇಳಿದರು. ಅಭದ್ರತೆಯ ಭೀತಿಯಿಂದ ಬಳಲುತ್ತಿರುವ ರಾವ್ ಅವರು ಆಯುಷ್ಮಾನ್ ಭಾರತ ಯೋಜನೆಗೆ ತೆಲಂಗಾಣ ರಾಜ್ಯವನ್ನು ಸೇರ್ಪಡೆ ಮಾಡಿಲ್ಲ. ಯೋಜನೆಯ ಅಡಿಯಲ್ಲಿ ಬಡವರ ಲಕ್ಷ ರೂಪಾಯಿಗಳವರೆಗಿನ ವೈದ್ಯಕೀಯ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ ಎಂದು ಮೋದಿ ಪ್ರತಿಪಾದಿಸಿದರು. ‘ ಮುಖ್ಯಮಂತ್ರಿ ಎಷ್ಟೊಂದು ಅಭದ್ರತೆಯ ಭೀತಿಗೆ ಒಳಗಾಗಿದ್ದಾರೆ ಅಂದರೆ, ಅವರು ಜ್ಯೋತಿಷಿಗಳನ್ನು ನಂಬುತ್ತಾರೆ, ಪೂಜೆ ಮಾಡುತ್ತಾರೆ, (ಕೆಟ್ಟ ಶಕ್ತಿಗಳ ನಿವಾರಣೆಗಾಗಿ) ನಿಂಬೆ -ಮೆಣಸಿನಕಾಯಿ ಕಟ್ಟುತ್ತಾರೆ, ಹೀಗಾಗಿ ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಂಡಾಗ ಅವರು ಅದಕ್ಕೆ ಸೇರ್ಪಡೆ ಆಗದೇ ಇರಲು ನಿರ್ಧರಿಸಿದರು.  ’ಮೋದಿಕೇರ್ ಬಂದರೆ ಜನರು ತಮ್ಮನ್ನು ತಿರಸ್ಕರಿಸಬಹುದು ಎಂದು ಅವರು ಭಯ ಪಟ್ಟಿದ್ದಾರೆ. ತನ್ಮೂಲಕ ರಾಜ್ಯದ ಬಡ ಜನತೆಗೆ ಅವರು ಅನ್ಯಾಯ ಮಾಡಿದ್ದಾರೆ ಎಂದು ಮೋದಿ ಹೇಳಿದರುಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಪ್ರತ್ಯೇಕ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಒದಗಿಸುವ ಭರವಸೆಯಿರುವ ಪ್ರಣಾಳಿಕೆಯನ್ನು ಸಿದ್ಧ ಪಡಿಸುತ್ತಿದೆ ಎಂಬ ವರದಿಗಳ ಮಧ್ಯೆ ಮೋದಿ ಅವರುಬಿಜೆಪಿ ಅನುಸರಿಸುತ್ತಿರುವ ಏಕೈಕ ಮಂತ್ರಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಅದು ವೋಟ್ ಬ್ಯಾಂಕ್ ರಾಜಕೀಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.  ‘ಎಲ್ಲೆಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮತ್ತು ಜಾತಿ, ಕೋಮು ಮತ್ತು ಸ್ವಜನಪಕ್ಷಪಾತವನ್ನು ವಿಜೃಂಭಿಸುವ ರಾಜಕೀಯ ಇರುತ್ತದೋ ಅಲ್ಲೆಲ್ಲ ಅಭಿವೃದ್ಧಿ ಸಾಯುತ್ತದೆ. ಅಭಿವೃದ್ಧಿಯಲ್ಲಿ ನಂಬಿಕೆ ಇರುವವರು, ಹೊಸ ಭಾರತ ಮತ್ತು ಹೊಸ ತೆಲಂಗಾಣ ನಿರ್ಮಾಣದಲ್ಲಿ ಆಸಕ್ತಿ ಇರುವವರು ಬಿಜೆಪಿಯನ್ನು ಅತ್ಯಧಿಕವಾಗಿ ನಂಬುತ್ತಾರೆ ಎಂದು ಪ್ರಧಾನಿ ಹೇಳಿದರು.

2018: ನವದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ  (ಸಾರ್ಕ್) ಶೃಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಡಾ. ಮೊಹಮ್ಮದ್ ಫೈಸಲ್ ಅವರು ಹೇಳಿದರು. ಇಸ್ಲಾಮಾಬಾದಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಫೈಸಲ್ ಅವರು ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಚೊಚ್ಚಲ ಭಾಷಣದಲ್ಲೇಭಾರತ ಒಂದು ಹೆಜ್ಜೆ ಮುಂದೆ ಬಂದರೆ, ಪಾಕಿಸ್ತಾನ ಎರಡು ಹೆಜ್ಜೆ ಮುಂದೆ ಬರುವುದು ಎಂದು ಹೇಳಿದ್ದರು ಎಂದು ನೆನಪಿಸಿದರು. ಪ್ರಧಾನಿ ಮೋದಿ ಅವರನ್ನು ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು ಎಂಬುದಾಗಿ ಫೈಸಲ್ ಅವರನ್ನು ಉಲ್ಲೇಖಿಸಿ ಪಾಕಿಸ್ತಾನದಡಾನ್ ಪತ್ರಿಕೆ ವರದಿ ಮಾಡಿತು. ಪಾಕಿಸ್ತಾನದ ಕಡೆಯಲ್ಲಿ ಕರ್ತಾರಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ  ಪಾಲ್ಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು  ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನ ಆಹ್ವಾನ ನೀಡಿತ್ತು.  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಕಡೆಯಲ್ಲಿ ಕರ್ತಾರಪುರ ಕಾರಿಡಾರ್ ಸಲುವಾಗಿ ಭಾರತದ ಇಬ್ಬರು ಸಚಿವರೊಂದಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಾರಿಡಾರ್ ಭಾರತದ ಸಿಖ್ ಯಾತ್ರಿಕರಿಗೆ ೨೦೧೯ರಲ್ಲಿ ಅವರ ಪವಿತ್ರ ಸ್ಥಳವಾದ ಕರ್ತಾರಪುರ ಸಾಹಿಬ್ ಗುರುದ್ವಾರದಲ್ಲಿ (ಸಿಖ್ ಮಂದಿರ) ನಡೆಯಲಿರುವ ಗುರು ನಾನಕ್ ಅವರ ೫೫೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡುವುದು. ಭಾರತದ ಕಡೆಯಲ್ಲಿ ಕರ್ತಾರಪುರ ಕಾರಿಡಾರ್ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್  ಹಿಂದಿನ ದಿನ ಶಿಲಾನ್ಯಾಸ ನೆರವೇರಿಸಿದ್ದರುಭಾರತದ ಭದ್ರತಾ ಪಡೆಗಳ ಮೇಲೆ ಎರಡು ದಶಕದಲ್ಲೇ ಅತ್ಯಂತ ಭೀಕರವಾದ ದಾಳಿಯನ್ನು ಉರಿಯಲ್ಲಿ ಪಾಕಿಸ್ತಾನ ನಡೆಸಿದ್ದನ್ನು ಅನುಸರಿಸಿ ೨೦೧೬ರಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾರ್ಕ್ ಶೃಂಗದಲ್ಲಿ ಭಾಗವಹಿಸಿದ ಬಳಿಕ ಭಾರತದ ಯಾವ ಸಚಿವರೂ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿಲ್ಲ. ಜೈಶ್-- ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಮಂದಿ ನಡೆಸಿದ ದಾಳಿಯಲ್ಲಿ ಭಾರತದ ೧೯ ಯೋಧರು ಹುತಾತ್ಮರಾಗಿದ್ದರು. ಮಂದಿ ಭಯೋತ್ಪಾದಕರನ್ನೂ ಕೊಲ್ಲಲಾಗಿತ್ತು. ಉರಿ ದಾಳಿಯ ಬಳಿಕ ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಿ ಸೇಡು ತೀರಿಸಿಕೊಂಡಿತ್ತುಸಾರ್ಕ್ ಶೃಂಗಗಳನ್ನು ಸಾಮಾನ್ಯವಾಗಿ ಎರಡು ವರ್ಷಗಳಿಗೆ ಒಮ್ಮೆ ನಡೆಸಲಾಗುತ್ತದೆ. ಇಂಗ್ಲಿಷ್ ಅಕ್ಷರಮಾಲೆಗೆ ಅನುಗುಣವಾಗಿ ಸದಸ್ಯ ರಾಷ್ಟ್ರಗಳು ಶೃಂಗಕ್ಕೆ ಆತಿಥ್ಯ ನೀಡುತ್ತವೆ. ಆತಿಥ್ಯ ನೀಡುವ  ಸದಸ್ಯ ರಾಷ್ಟ್ರವೇ ಸಾರ್ಕ್ ಅಧ್ಯಕ್ಷತೆಯನ್ನು ವಹಿಸುತ್ತದೆ. ಹಿಂದಿನ ಸಾರ್ಕ್ ಶೃಂಗಸಭೆಯು ೨೦೧೪ರಲ್ಲಿ ಕಠ್ಮಂಡುವಿನಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರಿನಲ್ಲಿ ನ್ಯೂಯಾರ್ಕಿನ ವಿಶ್ವಸಂಸ್ಥೆ ಅಧಿವೇಶನ ಕಾಲದಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಸಭೆ ನಡೆಸುವುದಾಗಿ ಪ್ರಕಟಿಸಲಾಗಿತ್ತು. ಆದರೆ ಕಾಶ್ಮೀರದ ಮೂವರು ವಿಶೇಷ ಪೊಲೀಸ್ ಅಧಿಕಾರಗಳ ಹತ್ಯೆಯನ್ನು ಅನುಸರಿಸಿ ಪ್ರಸ್ತಾಪಿತ ಮಾತುಕತೆಗಳನ್ನು ಭಾರತವು ರದ್ದು ಪಡಿಸಿತ್ತು. ಪಾಕಿಸ್ತಾನ ಮೂಲದ ಶಕ್ತಿಗಳು ಕೃತ್ಯ ಎಸಗಿವೆ ಎಂದು ಭಾರತ ಆಪಾದಿಸಿತ್ತು.  ‘ಇಂತಹ ಪರಿಸ್ಥಿತಿಯಲ್ಲಿ ಮಾತುಕತೆ ಅರ್ಥರಹಿತ ಎಂದು ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಜುಲೈ ತಿಂಗಳಲ್ಲಿ ಕಾಶ್ಮೀರಿ ಉಗ್ರಗಾಮಿ ಬುರ್ಹಾನ್ ವನಿ ನೆನಪಿಗಾಗಿ ಜುಲೈ ತಿಂಗಳಲ್ಲಿ ಪಾಕಿಸ್ತಾನವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು ಕೂಡಾ ಮಾತುಕತೆ ರದ್ದಿಗೆ ಕಾರಣ ಎಂದೂ ತಿಳಿಸಿತ್ತು.  ಮಾತುಕತೆ ರದ್ದು ಪಡಿಸಿದ ಭಾರತದ ಕ್ರಮವನ್ನು ಟೀಕಿಸಿದ ಇಮ್ರಾನ್ ಖಾನ್ ಅವರು ಶಾಂತಿ ಮಾತುಕತೆಯ ತಮ್ಮ ಕರೆಗೆ ಭಾರತದ ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆಯಿಂದ ಭ್ರಮನಿರಸನವಾಗಿದೆ ಎಂದು ಹೇಳಿದ್ದರು.

2018:  ಬೆ ಗಾವಿ: ಉಗ  ಜೊತೆಗಿನ ಹೋರಾಟದಲ್ಲಿ  ಬೆ ಗಾವಿಯ  ಯೋಧ ಭೋಜರಾಜ ಜಾಧವ್ (೨೮) ಮೃತರಾದರು.  ಮೂಲತಃ ಬೂದಿಹಾಳ ಗ್ರಾಮದವರಾದ ಭೋಜರಾಜ್ ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಡರಾತ್ರಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ವೀರಮರಣವನ್ನಪ್ಪಿದರು.  ಕಳೆದ ಒಂದೂವರೆ ವರ್ಷಗಳ ಹಿಂದೆ ಭೋಜರಾಜ್ ಜಾಧವ್ ಸೇನೆಗೆ ಸೇರಿದ್ದರು. ಅವರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿತು.

2018: ನ ದೆ ಲಿ: ಉಗ್ರ  ನಿಗ ಕ್ಕೆ  ಭಾರತ ಡೆ ಸುತ್ತಿರುವ  ಕಾರ್ಯಾಚರಣೆಗೆ ಈಗ ಬಲ ಸಿಕ್ಕಂತಾಯಿತು.ಭಯೋ ತ್ಪಾದನೆ ನಿಗ್ರಹದ ವಿಷಯದಲ್ಲಿ ನಾವು ಭಾರ ತೀಯರ ಪರವಾಗಿ ನಿಲ್ಲುತ್ತೇವೆ ಎಂದು ಅಮೆ ರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದರು. ಮುಂಬೈನಲ್ಲಿ ನಡೆದ ಉಗ್ರರ ದಾಳಿಗೆ ೧೦ ವರ್ಷಗಳಾಗಿವೆ. ಕಹಿ ಘಟನೆ ಯನ್ನು ನೆನೆದು ಟ್ರಂಪ್ ಟ್ವೀಟ್ ಮಾಡಿದರು. ಈ ವೇಳೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಅವರು ಸೂಚ್ಯ ವಾಗಿ ಹೇಳಿದರು.  ಅಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಸಮರ ಸಾರುವುದಾಗಿಯೂ ಎಚ್ಚರಿ ಸಿದರು.   ದಾಳಿಯಲ್ಲಿ ಅಮೆರಿಕ ಪ್ರಜೆಗಳು ಸೇರಿದಂತೆ ೧೬೬ ಮಂದಿ
ಮೃತಪಟ್ಟಿದ್ದರು. ಭಯೋತ್ಪಾದನೆ ಗೆಲ್ಲಲು ಅಥವಾ ಗೆಲುವಿನ ಸಮೀಪ ಬರಲು ನಾವು ಬಿಡುವುದಿಲ್ಲ ಎಂದು ಟ್ರಂಪ್ ಟ್ವಿಟರ್ನಲ್ಲಿ ಬರೆದರು. ಮುಂಬೈ ದಾಳಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಅಮೆರಿಕದ ಶ್ವೇತ ಭವನ ತಿಳಿಸಿತು.   ಮೊದಲು ಲಷ್ಕರ್--ತೊಯ್ಬಾ  ಸ್ಥಾಪಕ ಹಫೀಜ್ ಮೊಹಮದ್ ಬಗ್ಗೆ ಮಾಹಿತಿ ನೀಡಿದರೆ ೭೦ ಕೋಟಿ ರೂ. ಹಾಗೂ ಇದೇ ಉಗ್ರ ಸಂಘಟನೆಯ ಮತ್ತೋರ್ವ ಭಯೋತ್ಪಾದಕ ಅಬ್ದುಲ್ ರೆಹ್ಮಾನ್ ಬಗ್ಗೆ ಮಾಹಿತಿ ಕೊಟ್ಟರೆ ೧೪ ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಮೊದಲು ಘೋಷಣೆ ಮಾಡಿತ್ತು. ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಭಯೋತ್ಪಾದಕರು ನಡೆಸಿದ್ದ ಅಟ್ಟಹಾಸದಲ್ಲಿ ೧೬೦ ಮಂದಿ ಸಾವಿಗೀಡಾಗಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು. ದಾಳಿಯಲ್ಲಿ ಹುತಾತ್ಮರಾದ ಯೋಧರು, ಪೊಲೀಸರನ್ನು ಸ್ಮರಿಸಿ ದೇಶದಾದ್ಯಂತ ಗೌರವ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಅಮೆರಿಕ ೨೬/೧೧ ದಾಳಿಯ ರುವಾರಿಯ ಸುಳಿವು ನೀಡಿದವರಿಗೆ ೩೫ ಕೋಟಿ ಬಹುಮಾನ ನೀಡುವುದಾಗಿಯೂ ಘೋಷಿಸಿತು.



2017: ನವದೆಹಲಿ:  ಲವ್ ಜಿಹಾದ್ ವಿವಾದದ ಕೇಂದ್ರ ಬಿಂದುವಾದ ಕೇರಳದ ಮಹಿಳೆ ಹದಿಯಾ ಸುಪ್ರೀಂಕೋರ್ಟ್ ಮುಂದೆ ಹಾಜರಾಗಿ ತನಗೆ ಸ್ವಾತಂತ್ರ್ಯ ಬೇಕು ಎಂದು ಕೋರಿದಳು. ತಾನು ಪತಿಯ ಜೊತೆಗೆ ಹೋಗಬಯಸುವುದಾಗಿ ಆಕೆ ಹೇಳಿದರೂ, ಸುಪ್ರೀಂಕೋರ್ಟ್ ಆಕೆಗೆ ಕಾಲೇಜು ಶಿಕ್ಷಣ ಮುಂದುವರೆಸಲು ನಿರ್ದೇಶಿಸಿ, ಆಕೆಯನ್ನು ಮರುನೋಂದಣಿ ಮಾಡಿಕೊಂಡು ವಸತಿ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ವಿಶ್ವ ವಿದ್ಯಾಲಯಕ್ಕೆ ಆಜ್ಞಾಪಿಸಿತು. ತಮಿಳುನಾಡಿನ ಸೇಲಂ ಮೂಲದ ಹೋಮಿಯೋಪತಿ ಕಾಲೇಜಿನ ಡೀನ್ ಅವರನ್ನು ಹದಿಯಾಳ ಪಾಲಕನಾಗಿ ನೇಮಕ ಮಾಡಿದ ಸುಪ್ರೀಂಕೋರ್ಟ್,  ಏನಾದರೂ ಸಮಸ್ಯೆ ಉಂಟಾದರೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಕಾಲೇಜಿನ ಡೀನ್ ಗೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿಯಲ್ಲಿ ನಡೆಸಲು ನ್ಯಾಯಾಲಯ ನಿರ್ದೇಶಿಸಿತು. ನವರಿ ೩ನೇ ವಾರದಲ್ಲಿ ವಿಚಾರಣೆ ನಡೆಯಬಹುದು ಎಂದು ಮೂಲಗಳು ಹೇಳಿದವು. ವಸತಿ ಗೃಹದ ನಿಯಮಗಳ ಪ್ರಕಾರ ಇತರ ವಿದ್ಯಾರ್ಥಿನಿಯರನ್ನು ನಡೆಸಿಕೊಳ್ಳುವಂತೆಯೇ ಹದಿಯಾಳನ್ನೂ ನಡೆಸಿಕೊಳ್ಳಲು ಕಾಲೇಜು ಆಡಳಿತಕ್ಕೆ ಸುಪ್ರೀಂಕೋರ್ಟ್ ಸೂಚಿಸಿತು. ಆದರೆ ಶಫೀನ್ ಜಹಾಂ ಅಥವಾ ಆಕೆಯ ಪಾಲಕರಿಗೆ ಆಕೆ ಅಧ್ಯಯನ ಪೂರೈಸಿದ ಬಳಿಕ ಭೇಟಿ ಮಾಡಲು ಅವಕಾಶ ನೀಡಲಾಗುವುದೇ ಎಂಬ ಬಗ್ಗೆ ನ್ಯಾಯಾಲಯ ಮೌನ ವಹಿಸಿತು. ರಾಜ್ಯ ಸರ್ಕಾರದ ವೆಚ್ಚದಲ್ಲಿ ಅಧ್ಯಯನ ಮುಂದುವರೆಸಲು ಇಚ್ಛಿಸುವೆಯಾ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಕೇಳಿದ ಪ್ರಶ್ನೆಗೆ ಹದಿಯಾ ಶಿಕ್ಷಣ ಮುಂದುವರೆಸಬಯಸುತ್ತೇನೆ. ಆದರೆ ರಾಜ್ಯದ ವೆಚ್ಚದಲ್ಲಿ ಅಲ್ಲ, ನನ್ನ ಪತಿ ನನ್ನ ಬಗ್ಗೆ ಕಾಳಜಿ ತೆಗೆದುಕೊಂಡಾಗ ಎಂದು ಉತ್ತರಿಸಿದಳು.  ಮುಂದಿನ ೧೧ ತಿಂಗಳ ಕಾಲ ತನ್ನ ಮೆಡಿಕಲ್ ಇಂಟರ್ನ್ಶಿಪ್ ಪೂರ್ಣಗೊಳಿಸುವವರೆಗೆ ಹದಿಯಾಳಿಗೆ ಭದ್ರತೆ ಒದಗಿಸುವಂತೆಯೂ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಆಜ್ಞಾಪಿಸಿತು. ಕಳೆದ ೧೧ ತಿಂಗಳಿನಿಂದ ನಾನು ಅಕ್ರಮ ಬಂಧನಲ್ಲಿ ಇದ್ದೇನೆ. ನಾನು ಒಳ್ಳೆಯ ಪ್ರಜೆ ಮತ್ತು ವೈದ್ಯೆಯಾಗಬಯಸಿದ್ದೇನೆ. ಆದರೆ ನಾನು ನನ್ನ ನಂಬಿಕೆಗೆ ಅನುಗುಣವಾಗಿ ಬಾಳಬಯಸಿದ್ದೇನೆ. ನನ್ನನ್ನು ವಾಪಸ್ ಕಾಲೇಜಿಗೆ ಕೋರ್ಸ್ ಮುಗಿಸಲು ಕಳುಹಿಸಿದರೆ, ನನ್ನ ಪತಿ ನನ್ನ ಪಾಲಕನಾಗಬೇಕು ಎಂದು ನಾನು ಬಯಸುವೆ ಎಂದು ಹದಿಯಾ ಹೇಳಿದಳು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಆಕೆಯ ಬಳಿ ಭವಿಷ್ಯದ ಕನಸುಗಳ ಬಗ್ಗೆ ಪ್ರಶ್ನಿಸಿದರು. ನನಗೆ ಸ್ವಾತಂತ್ರ್ಯ ಬೇಕು ಎಂದು ಹದಿಯಾ ಉತ್ತರಿಸಿದಳು.  ಸಾಮಾನ್ಯ ಪ್ರಕರಣದಲ್ಲಿ ನಾವು ಹುಡುಗಿಯನ್ನು ಆಲಿಸಿ ನಿರ್ಧರಿಸುತ್ತಿದ್ದೆವು, ಆದರೆ ಇದು ಅಸಾಮಾನ್ಯ ಪ್ರಕರಣ ಎಂದು ನ್ಯಾಯಮೂರ್ತಿ ಖಾನ್ವಿಲ್ಕರ್ ನುಡಿದರು. ನನ್ನ ಜೀವಮಾನದಲ್ಲೇ ಇಂತಹ ಪ್ರಕರಣ ಕಂಡಿಲ್ಲ ಎಂದು ಸಿಜೆಐ ದೀಪಕ್ ಮಿಶ್ರ ನುಡಿದರು. ಹದಿಯಾ ಪತಿ ಶಫೀನ್ ಜಹಾಂ ಪರವಾಗಿ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್ ಹದಿಯಾ ಮಾತು ಆಲಿಸುವಂತೆ ಕೋರಿದರು. ಕೇರಳ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಸಿರುವ ಎನ್ ಐಎ ತಾನು ೧೦೦ ಪುಟಗಳ ವರದಿ ಸಲ್ಲಿಸಿದ್ದು, ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಅದನ್ನು ಪರಿಶೀಲಿಸಬೇಕು ಎಂದು ಕೋರಿತು.

2017: ನವದೆಹಲಿ: ಕೇಂದ್ರ ಸರ್ಕಾರವು ತಮ್ಮ ತಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್  ಯಾದವ್ ಅವರ ಭದ್ರತೆಯನ್ನು  ಕುಗ್ಗಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚರ್ಮ ಸುಲಿಯುವುದಾಗಿ ಲಾಲೂ  ಪ್ರಸಾದ್  ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಬೆದರಿಕೆ ಹಾಕಿದರು. ಲಾಲೂ ಪ್ರಸಾದ್ ಅವರಿಗೆ ಹಾನಿ ಉಂಟು ಮಾಡಲು ಸಂಚು ಹೆಣೆಯಲಾಗಿದೆ ಎಂದು ಆಪಾದಿಸಿದ ತೇಜ್  ಪ್ರತಾಪ್,  ತಮ್ಮ ತಂದೆ ಹತ್ಯೆಗೆ ಸಂಚು ನಡೆದಿದೆ ಎಂದು ದೂರಿದರು. ಇದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ. ನರೇಂದ್ರ ಮೋದಿ ಜಿ ಕಾ ಖಾಲ್ ಉದ್ದೇದ್ವ ಲೇಂಗೆ (ನಾವು ನರೇಂದ್ರ ಮೋದಿ ಚರ್ಮ ಸುಲಿಯುತ್ತೇವೆ). ಹೋಗಿ ಅವರಿಗೆ ಹೇಳಿ ಎಂದು  ವರದಿಗಾರರಿಗೆ  ತಿಳಿಸಿದ  ತೇಜ್ ಪ್ರತಾಪ್ ತಮ್ಮನ್ನು ತಡೆಯಲು ಏನನ್ನಾದರೂ ಮಾಡಿ ಎಂದು ಪ್ರಧಾನಿಗೆ ಸವಾಲು ಎಸೆದರು. ನಿಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಮಾಧ್ಯಮ ಮಂದಿ ಕೇಳಿದಾಗ, ಶಹಾಬುದ್ದೀನ್ ಪ್ರಕರಣ ಮತ್ತು  ಗೌರಿ ಲಂಕೇಶ್  ಹತ್ಯೆಯಂತೆ  ಅವರು ನಮ್ಮ ತಂದೆಯನ್ನು ಕೊಲ್ಲಬಹುದು ಎಂಬ ಭೀತಿ ನಮಗಿದೆ..ಅವರು  ಏನು ಬೇಕಿದ್ದರೂ ಮಾಡಬಹುದು. ಏನಾದರೂ ಸಂಭವಿಸಿದರೆ, ಅದಕ್ಕೆ ಮೋದಿ ಮತ್ತು ನಿತೀಶ್ ಕುಮಾರ್ ಅವರೇ ಹೊಣೆಗಾರರಾಗುತ್ತಾರೆ ಎಂದು ತೇಜ್ ಪ್ರತಾಪ್ ಹೇಳಿದರು. ಬಿಹಾರದ ಮಾಜಿ ಮುಖ್ಯಮಂತ್ತಿಗೆ ಈಗ ಝಡ್ ದರ್ಜೆಯ ಭದ್ರತೆ ನೀಡಲಾಗುವುದು ಮತ್ತು  ಕೇಂದ್ರೀಯ  ಮೀಸಲು ಪೊಲೀಸ್ ಪಡೆಯ  ಸಶಸ್ತ್ರ ಕಮಾಂಡೋದಳವು ಅವರಿಗೆ ರಕ್ಷಣೆ ಒದಗಿಸುವುದು ಎಂದು ಮೂಲUಳು ಹೇಳಿವೆ. ವಿವಿಧ ವ್ಯಕ್ತಿಗಳಿಗೆ ಒದಗಿಸಲಾದ ಭದ್ರತೆಯ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ಧಾರಕ್ಕೆ ಅನುಗುಣವಾಗಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಇನ್ನು ಮುಂದೆ ಬ್ಲಾಕ್ ಕ್ಯಾಟ್ ಕಮಾಂಡೋ ರಕ್ಷಣೆ ಇರುವುದಿಲ್ಲ. ಎನ್ ಎಸ್ ಜಿ  ಝಡ್ ಪ್ಲಸ್ ಭದ್ರತೆಯನ್ನು ಮಾತ್ರವೇ ಒದಗಿಸಲಾಗುತ್ತದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್  ರಾಮ್ ಮಾಂಝಿ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಸಿಆರ್ ಪಿ ಎಫ್  ವಿಐಪಿ ಭದ್ರತೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ಅವರಿಗೆ ಈಗ ರಾಜ್ಯ ಪೊಲೀಸ್ ಭದ್ರತೆ ಮಾತ್ರ ಲಭಿಸುತ್ತದೆ. ಕೇಂದ್ರ ಸಚಿವ ಹರಿಭಾಯಿ ಪಿ ಚೌಧರಿ ಅವರ ಝಡ್ ಭದ್ರತೆಯನ್ನೂ ವೈ ಪ್ಲಸ್ ಭದ್ರತೆಗೆ ಇಳಿಸಲಾಗಿದೆ ಎಂದು ಮೂಲಗಳು ಹೇಳಿದವು. ತೇಜ್ ಪ್ರತಾಪ್ ಅವರು ಇಂತಹ ಗಂಭೀರ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವಾರ ಅವರು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರ ಪುತ್ರನ ವಿವಾಹ ಸಮಾರಂಭವನ್ನು ಹಾಳುಗೆಡವುದಾಗಿ ಅವರ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ನನಗೆ ಮದುವೆಗೆ ಬರುವಂತೆ ಆಹ್ವಾನ ಬಂದಿದೆ. ನಾನು ಅಲ್ಲಿಗೆ ಹೋದರೆ, ಅವರನ್ನು ಬಹಿರಂಗವಾಗಿ ಬಿಚ್ಚಿಡುತ್ತೇನೆ. ಅವರನ್ನು ಮನೆಯಲ್ಲೇ ಚಚ್ಚಿ ಮದುವೆ ಮನೆಯಲ್ಲೇ ಬಹಿರಂಗ ಸಭೆ ನಡೆಸುತ್ತೇನೆ. ಮದುವೆ ಮನೆಯನ್ನೆಲ್ಲ ಧ್ವಂಸ ಮಾಡಿಬಿಡುತ್ತೇನೆ. ಮೋದಿ ವಿವಾಹ ಸಮಾರಂಭವನ್ನು ಮಾಡಲಿ ನೋಡೋಣ ಎಂದು ತೇಜ್ ಪ್ರತಾಪ್ ಬೆದರಿಕೆ ಹಾಕಿದ್ದರು. ಬೆದರಿಕೆಯ ಹಿನ್ನೆಲೆಯಲ್ಲಿ ಸುಶೀಲ್ ಮೋದಿ ವಿವಾಹ ಸಮಾರಂಭದ ಸ್ಥಳವನ್ನೇ ಬದಲಾಯಿಸಿದ್ದರು. ತೇಜ್ ಪ್ರತಾಪ್ ಎಂತಹವರೆಂದು ಗೊತ್ತಿರುವ ಕಾರಣ ನಾವು ಸ್ಥಳಬದಲಿಸಲು ನಿರ್ಧರಿಸಿದೆವು ಎಂದು ಅವರು ಹೇಳಿದ್ದರು.

2017: ಭುಜ್ (ಗುಜರಾತ್): ಗುಜರಾತಿನ ಮುಂಬರುವ ಚುನಾವಣೆಯು ಅಭಿವೃದ್ಧಿ ಮೇಲಿನ ವಿಶ್ವಾಸ ಮತ್ತು ವಂಶಾಡಳಿತ ರಾಜಕೀಯ ನಡುವಣ ಹೋರಾಟ ಎಂದು ಹೇಳುವ ಮೂಲಕ ಪ್ರಧಾನಿನರೇಂದ್ರ ಮೋದಿ ಅವರು ಇಲ್ಲಿ ಕಾಂಗ್ರೆಸ್ ವಿರುದ್ಧ ಪ್ರಬಲ ಟೀಕಾ ಪ್ರಹಾರ ಮಾಡಿದರು.  ಡಿಸೆಂಬರ್ ೯ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಮುಂಚಿತವಾಗಿ ಕಛ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ಬಿಜೆಪಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಚುನಾವಣಾ  ಪ್ರಚಾರದಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿದ ಆಪಾದನೆಗಳನ್ನೂ ಅವರು ಅಲ್ಲಗಳೆದರು. ಗುಜರಾತಿನ ಪುತ್ರನ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಗಳಿಲ್ಲ. ನೀವು ರಾಜ್ಯಕ್ಕೆ ಬಂದು ಮಣ್ಣಿನ ಮಗನ ವಿರುದ್ಧ ಬುಡರಹಿತ ಆರೋಪಗಳನ್ನು ಮಾಡಿದ್ದೀರಿ. ರಾಜ್ಯದ ಜನ ನಿಮ್ಮನ್ನು  ಕ್ಷಮಿಸುವುದಿಲ್ಲ ಎಂದು ಮೋದಿ ನುಡಿದರು. ಗುಜರಾತಿನ ತಮ್ಮ ಚುನಾವಣಾ ಪ್ರಚಾರದಲ್ಲಿ ರಾಹುಲ್  ಗಾಂಧಿ ಅವರು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಫೇಲ್ ಯುದ್ದ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಟೀಕಾ ಪ್ರಹಾರ ಮಾಡಿದ್ದರು. ಗುಜರಾತ್ ಚುನಾವಣೆ ಅಭಿವೃದ್ಧಿ ಮೇಲಿನ ವಿಶ್ವಾಸ ಮತ್ತು ವಂಶಾಡಳಿತ ರಾಜಕೀಯ ನಡುವಣ ಹೋರಾಟ ಎಂದು ಪ್ರಧಾನಿ ಹೇಳಿದರು. ರಾಜ್ಯದಲ್ಲಿ ಬಿಜೆಪಿಯ  ಸುದೀರ್ಘ ಆಡಳಿತವನ್ನು ತೊಲಗಿಸುವ ತನ್ನ ಯತ್ನವಾಗಿ ಸರ್ವ ಪ್ರಯತ್ನಗಳನ್ನು ಮಾಡುತ್ತಿರುವ ವಿರೋಧ ಪಕ್ಷದತ್ತ್ತ ಇನ್ನೊಂದು ಬಾಣವನ್ನೂ ಪ್ರಧಾನಿ ಬಿಟ್ಟರು. ನಮ್ಮ ಸೈನಿಕರು ಡೊಕ್ಲಾಮ್ ನಲ್ಲಿ ಕಣ್ಣಲ್ಲಿ ಕಣ್ಣಿಟ್ಟುಕೊಂಡು ೭೦ ದಿನ ಕಾಯುತ್ತಿದ್ದಾಗ ನೀವು ಏಕೆ ಚೀನೀ ರಾಯಭಾರಿಯನ್ನು ಅಪ್ಪಿಕೊಂಡಿದ್ದಿರಿ? ಎಂದೂ ಮೋದಿ ಪ್ರಶ್ನಿಸಿದರು. ಚಹಾ ಮಾರಿದ್ದೇನೆ, ದೇಶ ಮಾರಿಲ್ಲ: ನಾನು ಚಹಾ ಮಾರಿರುವುದು ನಿಜ. ಚಹಾ ಮಾರುವವನೂ ಹೌದು. ಆದರೆ ಎಂದಿಗೂ ದೇಶವನ್ನು ಮಾರಾಟ ಮಾಡಿಲ್ಲ. ಎಂದೂ ಪ್ರತಿ ಪಕ್ಷಗಳಂತೆ ಇಂತಹ ಕೀಳುಮಟ್ಟಕ್ಕೆ ಇಳಿದಿಲ್ಲ ಎಂದು ಮೋದಿ ರಾಜಕೋಟ್  ಚುನಾವಣಾ ಪ್ರಚಾರ ಸಭೆಯಲ್ಲಿ ನುಡಿದರು. ಕಾಂಗೆಸ್ ಪಕ್ಷದವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ನಾನು ಬಡತನದಿಂದ ಬಂದವನು ಎಂಬುದು ಅವರ ಕೋಪಕ್ಕೆ ಕಾರಣ. ಬಡವನೊಬ್ಬ ಪ್ರಧಾನಿ ಹುದ್ದೆಗೆ ಏರಿದ್ದನ್ನು ಅರಗಿಸಿಕೊಳ್ಳಲು ಅವರಿಂದ ಆಗುತ್ತಿಲ್ಲ. ರಾಷ್ಟ್ರೀಯ  ಪಕ್ಷವೊಂದು ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತದೆಯೇ ಎಂದು ಅಚ್ಚರಿಯಾಗುತ್ತದೆ ಎಂದು ಮೋದಿ ಹೇಳಿದರು.

2017: ಲಂಡನ್: ಬ್ರಿಟನ್ ಪ್ರಿನ್ಸ್ ಹ್ಯಾರಿ ಮತ್ತು  ಅಮೆರಿಕ ನಟಿ ಮೇಘನ್ ಮಾರ್ಕೆಲ್ ಅವರ ಮದುವೆ ನಡುವೆ ೨೦೧೮ರ ಅಂತ್ಯದೊಳಗೆ ನಡೆಯಲಿದೆ ಎಂದು  ಪ್ರಿನ್ಸ್ ಹ್ಯಾರಿ ತಂದೆ ಚಾರ್ಲ್ಸ್ ಅಧಿಕೃತವಾಗಿ ಪ್ರಕಟಿಸಿದರು. ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಲಂಡನ್ನಿನಲ್ಲಿ ಹಲವು ದಿನಗಳಿಂದ ಪ್ರಚಾರದಲ್ಲಿತ್ತು. ಅಮೆರಿಕದ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾಗಿರುವ ಸೂಟ್ಸ್ ನಲ್ಲಿ ಖ್ಯಾತರಾಗಿರುವ  ನಟಿ ಮೇಘನ್ ಮಾರ್ಕೆಲ್ ಹಾಗೂ ಬ್ರಿಟನ್ನಿನ ರಾಜಕುಮಾರ  ಹ್ಯಾರಿ ಇಬ್ಬರಿಗೂ ನವೆಂಬರ್ ಮೊದಲ ವಾರದಲ್ಲೇ ನಿಶ್ಚಿತಾರ್ಥ ಮಾಡಲಾಗಿತ್ತು ಎಂದು ಕ್ಲಾರೆನ್ಸ್ ಹೌಸ್ ಅಧಿಕೃತ ಹೇಳಿಕೆ ತಿಳಿಸಿತು. ಕಳೆದ ವರ್ಷ ಇಬ್ಬರೂ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು, ಇದಾದ ಬಳಿಕ ಹಲವಾರು ಸಂದರ್ಭದಲ್ಲಿ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದರು. ಇದು ಮಾಧ್ಯಮ ಕ್ಷೇತ್ರದಲ್ಲೀ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಆದರೆ ಇದ್ಯಾವುದಕ್ಕೂ ಹ್ಯಾರಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದ ಸೆಪ್ಟೆಂಬರಿನಲ್ಲಿ ಕ್ರೀಡಾ ಕಾರ್ಯಕ್ರಮವೊಂದಕ್ಕೆ ಜತೆಯಲ್ಲೇ ಇಬ್ಬರೂ ಬಂದಿದ್ದರು. ವೇಳೆ ಮಾಧ್ಯಮಗಳು ನೇರವಾಗಿ ಇಬ್ಬರನ್ನೂ ಪ್ರಶ್ನಿಸಿದ್ದರೂ ಹ್ಯಾರಿ ಯಾವುದಕ್ಕೂ ಉತ್ತರ ನೀಡಿರಲಿಲ್ಲ.  ಇದೀಗ ಇಂಗ್ಲೆಂಡ್ ರಾಜ ಚಾರ್ಲ್ಸ್ ಅಧಿಕೃತವಾಗಿ ಮಗ ಹ್ಯಾರಿ ಮತ್ತು ಮೇಘನ್ ಮದುವೆ ಬಗ್ಗೆ ಹೇಳಿದರು.

2017: ನವದೆಹಲಿ: ಭಾರತೀಯ ವೈದ್ಯರ ತಂಡವೊಂದು ತಾಂಜಾನಿಯಾದ ರಾಜಧಾನಿ ದಾರ್ ಎಸ್ ಸಲಾಂನ ಆಸ್ಪತ್ರೆಯೊಂದರ ಸಹಯೋಗದೊಂದಿಗೆ ಆಫ್ರಿಕಾದ ರಾಷ್ಟ್ರವೊಂದರಲ್ಲಿ ಮೊತ್ತ ಮೊದಲ ಬಾರಿಗೆ ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವದಾಗಿ ಪ್ರಕಟಿಸಿತು. ದೆಹಲಿ ಮೂಲದ ಬಿಎಲ್ ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಹೇಳಿಕೆಯೊಂದರಲ್ಲಿ ವಿಚಾರವನ್ನು ತಿಳಿಸಿತು. ತಾಂಜಾನಿಯಾದ ಮುಹಿಂಬಿಲಿ ನ್ಯಾಷನಲ್ ಹಾಸ್ಪಿಟಲ್ನಲ್ಲಿ ೩೦ ವರ್ಷದ ತಾಂಜಾನಿಯಾ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಕೆ ತೀವ್ರ ಸ್ವರೂಪದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದ್ದಳು  ಎಂದು  ಆಸ್ಪತ್ರೆಯ ಪ್ರಕಟಣೆ ಹೇಳಿತು. ‘ಭಾರತೀಯ ವೈದ್ಯರ ತಂಡದಿಂದ ತಾಂಜಾನಿಯಾದಲ್ಲಿ ಪ್ರಪ್ರಥಮ ಬಾರಿಗೆ ಮೂತ್ರಪಿಂಡ ಕಸಿ ನಡೆಸಲಾಯಿತು ಎಂಬುದು ಅತ್ಯಂತ ಗೌರವ ತರುವಂತಹ ವಿಷಯ ಎಂದು ಬಿಎಲ್ ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ನರೇಶ ಕಪೂರ್ ಹೇಳಿದರು. ಹಲವಾರು ಆರೋಗ್ಯ ಸಹಯೋಗ ಕಾರ್ಯಕ್ರಮಗಳ ಮೂಲಕ ಆಫ್ರಿಕಾದ ರಾಷ್ಟ್ರಗಳ ಜೊತೆಗೆ ನಾವು ವಿಶ್ವಾಸಾರ್ಹ ಸಂಪರ್ಕ ಸಾಧಿಸಿದ್ದೇವೆ.  ತಾಂಜಾನಿಯಾದಂತಹ ರಾಷ್ಟ್ರಗಳಲ್ಲಿ ಸ್ಥಳೀಯವಾಗಿಯೇ ಆರೋಗ್ಯ ರಕ್ಷಣಾ ಸವಲತ್ತುಗಳನ್ನು ಒದಗಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶ ಎಂದು ಅವರು ನುಡಿದರು. ಶಸ್ತ್ರಚಿಕಿತ್ಸೆಯು ನಿಶ್ಚಿತವಾಗಿ ಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ- ತಾಂಜಾನಿಯಾ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ಕೊಡಲಿದೆ ಎಂದು ಅವರು ಹೇಳಿದರು. ಸರ್ಜರಿ ಮಾಡಿಸಿಕೊಂಡ ಮಹಿಳೆ ಕಳೆದ ಒಂದು ವರ್ಷದಿಂದ ಹೇಮೋಡಿಯಾಲಿಸಿಸ್ ಕಾಯಿಲೆಯಿಂದ ನರಳುತ್ತಿದ್ದಳು. ೨೭ರ ಹರೆಯದ ಆಕೆಯ ಸಹೋದರನೇ ಆಕೆಯ ಪ್ರಾಣ ಉಳಿಸಲು ಮೂತ್ರಪಿಂಡ ದಾನ ಮಾಡಿದ್ದಾನೆ ಎಂದು ಆಸ್ಪತ್ರೆಯ ವೈದ್ಯ ಡಾ. ಎಚ್.ಎಸ್. ಭತ್ಯಾಲ್  ನುಡಿದರು. ಮಹಿಳೆ ಮತ್ತು ಮೂತ್ರಪಿಂಡ ದಾನ ಮಾಡಿದ ಸಹೋದರ ಇಬ್ಬರೂ ಚೇತರಿಸಿದ್ದು ಶೀಘ್ರದಲ್ಲೇ ತಮ್ಮ ದೈನಂದಿನ ಚಟುವಟಿಕೆ ನಡೆಸಲು ಅರ್ಹರಾಗಿದ್ದಾರೆ ಎಂದೂ ಆಸ್ಪತ್ರೆ ತಿಳಿಸಿತು. ಈ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಕ್ಕಾಗಿ ತಾಂಜಾನಿಯಾದ ಆರೋಗ್ಯ ಸಚಿವರು ಭಾರತದ ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸೂಚಿಸಿದರು.

2017: ನವದೆಹಲಿ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪುತ್ರಿ ತಾನು ಎಂದು ಪ್ರತಿಪಾದಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು. ನ್ಯಾಯಮೂರ್ತಿಗಳಾದ ಎಂ ಬಿ ಲೋಕುರ್ ಮತ್ತು ದೀಪಕ್ ಗುಪ್ತ ಅವನ್ನು ಒಳಗೊಂಡ ಪೀಠವು  ತಾನು  ಜಯಲಲಿತಾ ಪುತ್ರಿ ಎಂಬುದನ್ನು ಸಾಬೀತು ಪಡಿಸಲು  ಡಿಎನ್ ಪರೀಕ್ಷೆ ನಡೆಸುವಂತೆ ಕೋರಿದ ಮಹಿಳೆಯ ಅರ್ಜಿಯನ್ನು ಅಂಗೀಕರಿಸಲು ನಿರಾಕರಿಸಿತು. ಮಹಿಳೆಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಜಯಲಲಿತಾ ಅವರು ಅಯ್ಯಂಗಾರ್ ಬ್ರಾಹ್ಮಣರಾದ ಕಾರಣ ಅವರ ಅಂತ್ಯಕ್ರಿಯೆಯನ್ನು ಹಿಂದು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನಡೆಸಬೇಕು ಎಂದೂ ಕೋರಿದರು. ಬೆಂಗಳೂರು ಮೂಲದ ಅಮೃತಾ ಎಂಬಾಕೆ ಅರ್ಜಿ ಸಲ್ಲಿಸಿದ್ದರು. ಏನಿದ್ದರೂ, ಅರ್ಜಿದಾರರಿಗೆ  ಹೈಕೋರ್ಟ್ನ್ನು ಸಂಪರ್ಕಿಸಲು ಅವಕಾಶ ಇದೆ ಎಂದು ಕೋರ್ಟ್ ಹೇಳಿತು.
2016: ಪಟಿಯಾಲ: ಶಸ್ತ್ರಧಾರಿಗಳಾಗಿದ್ದ 10 ಮಂದಿ ಅಪರಿಚಿತರು ಪಂಜಾಬಿನ ಪಟಿಯಾಲ ಜಿಲ್ಲೆಯ ನಭಾ ಸೆರೆಮನೆಗೆ ನುಗ್ಗಿ ಖಲಿಸ್ತಾನ ಲಿಬರೇಶನ್ ಫೋರ್ಸ್(ಕೆಎಲ್ಎಫ್) ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಮತ್ತು ಇತರ ನಾಲ್ವರನ್ನು ಬಿಡಿಸಿಕೊಂಡು ಪರಾರಿಯಾದ ರು. ಘಟನೆಯ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರವು ಪೊಲೀಸ್ ಮಹಾನಿರ್ದೇಶಕ (ಸೆರೆಮನೆ), ಮತ್ತು ಇತರ ಇಬ್ಬರು ಹಿರಿಯ ಸೆರೆಮನೆ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಪಂಜಾಬಿನಾದ್ಯಂತ ಕಟ್ಟೆಚ್ಚರ ಜಾರಿಗೊಳಿಸಲಾಯಿತು. ಕೇಂದ್ರ ಸರ್ಕಾರವು ಘಟನೆ ಬಗ್ಗೆ ರಾಜ್ಯ ಸರ್ಕಾರದಿಂದ ವರದಿ ಕೇಳಿತು. ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಆಪಾದಿಸಿದವು.  ಪರಾರಿಯಾದವರ ಬಗ್ಗೆ ಸುಳಿವು ಕೊಟ್ಟವರಿಗೆ ಪಂಜಾಬ್ ಸರ್ಕಾರ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿತು. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸಂಜೆಯ ವೇಳೆಗೆ ತಿಳಿಸಿದರು. ಬೆಳಗ್ಗೆ  ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಶಸ್ತ್ರಸಜ್ಜಿತರಾಗಿ ಬಂದಿದ್ದ ಆಗಂತುಕರು 100 ಸುತ್ತು ಗುಂಡು ಹಾರಿಸಿ, ಸೆರೆಮನೆಗೆ ನುಗ್ಗಿ ಹರ್ಮಿಂದರ್ ಸಿಂಗ್ ಮತ್ತು ಇತರರನ್ನು ಬಿಡಿಸಿಕೊಂಡು ಪರಾರಿಯಾದರು ಎಂದು ವರದಿಗಳು ತಿಳಿಸಿದವು. ಸುದ್ದಿ ತಿಳಿದ ತತ್ ಕ್ಷಣವೇ ಸೇನೆ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು.  ಹರ್ಮಿಂದರ್ ಸಿಂಗ್ ಮಿಂಟೂ ಜೊತೆಗೆ ಪರಾರಿಯಾಗಿರುವ ಇತರ ನಾಲ್ವರು: ಗುರುಪ್ರೀತ್ ಸಿಂಗ್, ವಿಕಿ ಗೊಂಡ್ರ, ನಿತಿನ್ ದೇವಲ್,  ವಿಕ್ರಮ್ ಜಿತ್ ಸಿಂಗ್ ವಿಕಿ. ದೇಶ, ವಿದೇಶಗಳ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಕಲ್ಪಿಸಿ ಅವರ ನೆರವಿನೊಂದಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ಎಂದು ಆಪಾದಿಸಲಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂನನ್ನು 2014 ನವೆಂಬರ್ 7ರಂದು ಪಂಜಾಬ್ ಪೊಲೀಸರು ಮಿಂಟೂ ಮುಖ್ಯ ಸಹಾಯಕ ಗುರುಪ್ರೀತ್ ಸಿಂಗ್ ಯಾನೆ ಗೋಪಿ ಜೊತೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. 2013ರಲ್ಲಿ ಹಲವಾರು ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ಹೂಡಿದ್ದ ಮಿಂಟೂ, ಪಾಕಿಸ್ತಾನದಲ್ಲಿ ಇದ್ದುಕೊಂಡು ಕೆಎಲ್ಎಫ್ನ್ನು ಸಬಲಗೊಳಿಸುವಲ್ಲಿ ಸಕ್ರಿಯನಾಗಿದ್ದ. ಬಳಿಕ ಯುರೋಪಿನ ವಿವಿಧ ದೇಶಗಳಲ್ಲಿ ಸಂರ್ಪಸಿ ಬೇರೆ ಬೇರೆ ಭಯೋತ್ಪಾದಕ ಸಂಘಟನೆಗಳನ್ನು ಸಂರ್ಪಸಿ ಬೆಂಬಲ ಕ್ರೋಢೀಕರಿಸುವ ಯತ್ನ ನಡೆಸಿದ್ದ. ಈತನ ಬಂಧನವನ್ನು ಭಾರಿ ಯಶಸ್ಸು ಎಂದು ಪರಿಗಣಿಸಲಾಗಿತ್ತು.
2016: ಪಟಿಯಾಲ: ಅತ್ಯಂತ ಬಿಗಿ ಭದ್ರತೆ ಇದ್ದ ಪಟಿಯಾಲ ಜಿಲ್ಲೆಯ ನಭಾ ಸೆರೆಮನೆಯಿಂದ ಸಿಖ್ ಭಯೋತ್ಪಾದಕ ಸಂಘಟನೆ ಖಲಿಸ್ತಾನ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಮತ್ತು ಇತರ ಐವರನ್ನು ಬಿಡಿಸಿಕೊಂಡು ಹೋದ ಘಟನೆ  ಈದಿನ ಕೇವಲ 10 ನಿಮಿಷಗಳಲ್ಲಿ ಘಟಿಸಿದ್ದು, ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆಯಾಗಿದ್ದುದು ಸ್ಪಷ್ಟವಾಯಿತು. ಬೆಳಗ್ಗೆ 8.45 ವೇಳೆಗೆ ಎಲ್ಲ ಕೈದಿಗಳನ್ನೂ ಬೆಳಗಿನ ಉಪಾಹಾರಕ್ಕಾಗಿ ಸೆಲ್ಗಳಿಂದ ಹೊರಗೆ ಬಿಡುವ ವೇಳೆಯನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರತ್ಯಕ್ಷದರ್ಶಿಗಳ ವಿವರಣೆ ಪ್ರಕಾರ ಒಬ್ಬ ಎಎಸ್ಐ ಮತ್ತು ಒಬ್ಬ ಪೊಲೀಸ್ ಪೇದೆ ಉಡುಪಿನಲ್ಲಿ ಬಂದ ಇಬ್ಬರು ಕೈದಿಯಂತೆ ಕೈಗೆ ಕೋಳ ತೊಡಿಸಲಾಗಿದ್ದ ವ್ಯಕ್ತಿಯೊಂದಿಗೆ ಬಂದು, ಕೈದಿಯನ್ನು ಸೆರೆಮನೆಯೊಳಕ್ಕೆ ಬಿಡಬೇಕಾಗಿದೆ ಎಂದು ಸೆರೆಮನೆ ಗಾರ್ಡ್ಗಳ ಜೊತೆಗೆ ಹೇಳಿದರು. ಗಾರ್ಡುಗಳು ಕೈದಿಯನ್ನು ಸೆರೆಮನೆಯ ಒಳಕ್ಕೆ ಒಯ್ಯಲು ಅವಕಾಶ ನೀಡಿದರು. ಒಳಬರುತ್ತಲೇ ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸರ ಬಳಿ ಸೆಲ್ಲಿನ  ಒಳಗೆ ಹಾಕುತ್ತೇವೆ ಕೀ ಕೊಡಿ ಎಂದು ಕೇಳಿದರು. ಸಂಶಯಪಟ್ಟ ಪೊಲೀಸರು ನಾವೇ ಒಳಗೆ ಒಯ್ಯುತ್ತೇವೆ. ನೀವು ಹೊರಡಿ ಎಂದರು. ತತ್ ಕ್ಷಣವೇ ಆಗಂತುಕರಲ್ಲಿ ಒಬ್ಬ ಬಾಕು ಒಂದನ್ನು ಹೊರತೆಗೆದು ಒಬ್ಬ ಪೊಲೀಸ್ ಪೇದೆಯ ಬಾಯೊಳಕ್ಕೆ ತುರುಕಿದರೆ, ಇನ್ನೊಬ್ಬ ವ್ಯಕ್ತಿ ಮತ್ತೊಬ್ಬ ಪೊಲೀಸ್ ಪೇದೆಯ ಹಣೆಗೆ ಗನ್ ಹಿಡಿದು ಹೊರಗೆ ಕಾಯುತ್ತಿದ್ದವರಿಗೆ ಒಳಬರುವಂತೆ ಕೂಗು ಹಾಕಿದರು. ಹೊರಗೆ ಕಾಯುತ್ತಿದ್ದ ಇತರ 7 ಮಂದಿ ಗುಂಡುಹಾರಿಸುತ್ತಾ ಒಳಕ್ಕೆ ನುಗ್ಗಿ ಬಂದರು. ಹರ್ಮಿಂದರ್ ಸಿಂಗ್ ಸಹಿತ ಬಂಧಿತರ ಹೆಸರು ಹೇಳಿ ಹೊರಕ್ಕೆ ಬರುವಂತೆ ಕೂಗಿದ ಆಗಂತುಕರು ಅವರೆಲ್ಲರೂ ಹೊರಬರುತ್ತಿದ್ದಂತೆಯೆ ಎಲ್ಲರನ್ನು ಟಯೋಟಾ ಪಾರ್ಚೂನರ್ ಮತ್ತು ಇನ್ನೊಂದು ವಾಹನದಲ್ಲಿ ಕೂರಿಸಿಕೊಂಡು ನೋಡ ನೋಡುತ್ತಿದ್ದಂತೆಯೇ ಪರಾರಿಯಾದರು. ಪರಾರಿಯಾದ ಕೈದಿಗಳಿಗೆ ಯೋಜನೆಯ ಅರಿವಿತ್ತು ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ವರದಿಗಳು ಹೇಳಿದವು.  ದಾಳಿಕೋರರು ಜಲಂಧರಿನಲ್ಲಿ  6 ತಿಂಗಳ ಹಿಂದೆ ಲೂಟಿ ಮಾಡಲಾಗಿತ್ತೆನ್ನಲಾದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿದ್ದರು ಎಂದೂ ವರದಿಗಳು ಹೇಳಿದವು.

2016: ನವದೆಹಲಿ: ನೋಟು ರದ್ಧತಿ ಕ್ರಮದ ಬಳಿಕ ಪರಿಸ್ಥಿತಿ ಬಗ್ಗೆ  ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರಂತರ ನಿಗಾ ಇರಿಸಿದ್ದು,  ನಾಗರಿಕರ ಸಂಕಷ್ಟ  ನಿವಾರಿಸಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರು ಇಲ್ಲಿ ಹೇಳಿದರು. ಸರ್ಕಾರವು 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದು ಕ್ರಮವನ್ನು ಪ್ರಕಟಿಸಿದ ಸುಮಾರು ಎರಡು ವಾರಗಳ ಬಳಿಕ  ಮೌನ ಮುರಿದು ನೀಡಿದ ತಮ್ಮ ಮೊತ್ತ ಮೊದಲ ಹೇಳಿಕೆಯಲ್ಲಿ ಪಟೇಲ್ ಅವರು ವಿಚಾರವನ್ನು ತಿಳಿಸಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲಿಕ್ವಿಡಿಟಿಯನ್ನು ಹೆಚ್ಚಿಸಲಾಗಿದೆ. ಪರಿಸ್ಥಿತಿಯನ್ನು ಸಾಧ್ಯವಿದ್ದಷ್ಟೂ ಬೇಗ ಸಹಜಗೊಳಿಸುವುದು ಇದರ ಉದ್ದೇಶ. ಬೇಡಿಕೆಗೆ ಅನುಗುಣವಾಗಿ ಹೊಸ ನೋಟುಗಳು ಲಭಿಸುವಂತೆ ಮಾಡಲು ಆರ್ ಬಿ ಐ ಮತ್ತು ಸರ್ಕಾರ ಮುದ್ರಣಾಲಯಗಳಲ್ಲಿ ಪೂರ್ಣ ಸಾಮರ್ಥ್ಯ ಬಳಸಿ ನೋಟುಗಳನ್ನು ಮುದ್ರಿಸುತ್ತಿವೆ ಎಂದು ಪಟೇಲ್ ಅವರು ಪತ್ರಿಕಾ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಚರಿದಾಯಕವಾಗಿ ನೋಟು ರದ್ದು ಕ್ರಮ ಪ್ರಕಟಿಸಿದ ಬಳಿಕ ದೇಶದಲ್ಲಿ ಉದ್ಭವಿಸಿರುವ ಅನುದಿನದ ಪರಿಸ್ಥಿತಿಯ ಮೇಲೆ ಆರ್ ಬಿ ಐ ನಿಗಾ ಇರಿಸಿದೆ. ಬ್ಯಾಂಕುಗಳಲ್ಲಿ ನೋಟುಗಳು ಲಭಿಸುತ್ತಿದ್ದು, ಸಿಬ್ಬಂದಿ ಸಾಮರ್ಥ್ಯ ಮೀರಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ನುಡಿದರು.

2016: ನವದೆಹಲಿ: ನಗದು ರಹಿತ ಸಮಾಜ (ಕ್ಯಾಷ್ ಲೆಸ್ ಸೊಸೈಟಿ) ನಮ್ಮ ಕನಸು. ಕಡಿಮೆ ನಗದು ಸಮಾಜ (ಲೆಸ್ ಕ್ಯಾಷ್ ಸೊಸೈಟಿ) ರಚನೆಯೊಂದಿಗೆ ಇದನ್ನು ಆರಂಭಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದ 26ನೇ ಆವೃತ್ತಿಯಲ್ಲಿ ಕರೆ ನೀಡಿದರು. ನೋಟು ನಿಷೇಧದ ಬಳಿಕ ಮೊದಲ ಬಾರಿಗೆ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಡಿಜಿಟಲ್ ಜಗತ್ತಿಗೆ ಕಾಲಿರಿಸಲು ಇದು ಸಕಾಲ. ಪುರುಷರು, ಮಹಿಳೆಯರು, ಸಣ್ಣ ವರ್ತಕರು ಕ್ಯಾಷ್ ಲೆಸ್ ಆರ್ಥಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ರೂಪೇ ಬಳಕೆಯಲ್ಲಿ ಶೇಕಡಾ 300 ರಷ್ಟು ಹೆಚ್ಚಳವಾಗಿದೆ. ಏಕೆಂದರೆ ಬಡವರು ಇದನ್ನು ಈಗ ಬಳಸುತ್ತಿದ್ದಾರೆ. ಇದು ಆಪ್ ಬಳಕೆಯಷ್ಟೇ ಸುಲಭ ಎಂದು ಮೋದಿ ಹೇಳಿದರು. ಕಾಳಸಂತೆ, ಭ್ರಷ್ಟಾಚಾರ ಮತ್ತು ನಕಲಿ ಹಣವನ್ನು ನಿಗ್ರಹಿಸಲು 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಕ್ರಮವನ್ನು ಇಡೀ ವಿಶ್ವವೇ ಮೆಚ್ಚಿದೆ. ಕಷ್ಟಗಳನ್ನು ಅನುಭವಿಸುತ್ತಿದ್ದರೂ, ಜನತೆ, ಬ್ಯಾಂಕ್ ಸಿಬ್ಬಂದಿ, ಅಂಚೆ ಕಚೇರಿ ಸಿಬ್ಬಂದಿ ನೋಟು ನಿಷೇಧ ಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳು, ವಿಚಾರದಲ್ಲಿ ಭಾರತ ಯಶಸ್ಸು ಗಳಿಸುವುದು ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು. ಕಪ್ಪು ಹಣವನ್ನು ಬಿಳಿ ಮಾಡಲು ಕಾಳಧನಿಕರು ಹಲವಾರು ರೀತಿಯ ಪ್ರಯತ್ನಗಳನ್ನು ಇನ್ನೂ ಮಾಡುತ್ತಲೇ ಇದ್ದಾರೆ. ಏನಾದರೂ ಮಾಡಿ ಆದರೆ ಬಡವರ ಹೆಸರು, ಖಾತೆಗಳನ್ನು ಕಪ್ಪು ಹಣ ಬಿಳಿ ಮಾಡಲು ಬಳಸಬೇಡಿ ಎಂದು ಮನವಿ ಮಾಡಿದ ಪ್ರಧಾನಿ, ದೇಶದಲ್ಲಿ 70 ವರ್ಷಗಳಿಂದ ಬೆಳೆದು ನಿಂತಿರುವ ಕಪ್ಪು ಹಣದ ಹಾವಳಿಯನ್ನು ನಿಗ್ರಹಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಆದರೆ ಕಾಳಧನ ನಿಗ್ರಹದಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು. ನೋಟು ರದ್ದು ಕ್ರಮದಿಂದ ಆಗುವ ಲಾಭಗಳನ್ನೂ ಅವರು ವಿವರಿಸಿದರು.

2016: ನವದೆಹಲಿ: ಓದಲು ಅಥವಾ ಬರೆಯಲು ಬಾರದ ಲಕ್ಷಾಂತರ ಮಂದಿ ರೈತರು ಮತ್ತು
ಕಾರ್ಮಿಕರನ್ನು -ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮಾಡುವಂತೆ ಹೇಗೆ ಒತ್ತಾಯಿಸುವಿರಿ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.  ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ ಅತ್ಯುತ್ತಮ. ಆದರೆ ಓದಲು ಮತ್ತು ಬರೆಯಲು ಬಾರದ ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ವ್ಯಾಪಾರಿಗಳನ್ನು -ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮಾಡುವಂತೆ ನೀವು ಹೇಗೆ ಒತ್ತಾಯಿಸುವಿರಿ? ಎಂದು ಟ್ವಿಟ್ಟರ್ ಸಂದೇಶ ಒಂದರಲ್ಲಿ ಪ್ರಧಾನಿಯನ್ನು ಪ್ರಶ್ನಿಸಿದ ಸಿಸೋಡಿಯಾ, ನಿಮ್ಮ ಸಂಸತ್  ಸದಸ್ಯರು, ಕಾರ್ಯದರ್ಶಿಗಳಲ್ಲಿ ಎಷ್ಟು ಜನ ನಿತ್ಯ -ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದಾರೆ ಕೇಳಿ ನೋಡಿ ಎಂದು ಸೂಚಿಸಿದರು.  ಮೋದಿಜಿ! ಪ್ರತಿದಿನದ ಬದುಕಿನಲ್ಲಿ ನಿಮ್ಮ ಸರ್ಕಾರದ ಕನಿಷ್ಠ 100 ಕಾರ್ಯದರ್ಶಿಗಳು -ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದಾರೆಯೇ? ಇಲ್ಲವಾದಲ್ಲಿ ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ವರ್ತಕರನ್ನು -ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುವಂತೆ ಹೇಗೆ ಒತ್ತಾಯಿಸುವಿರಿ? ಎಂದು ಸಿಸೋಡಿಯಾ ಟ್ವೀಟ್ ಮೂಲಕ ಪ್ರಶ್ನಿಸಿದರು. ನಗದು ರಹಿತ ವಹಿವಾಟಿಗಾಗಿ -ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವಂತೆ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆಗ್ರಹಿಸಿದ್ದಕ್ಕೆ  ಸಿಸೋಡಿಯಾ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು..

2016: ಕುಶಿನಗರ (ಉತ್ತರ ಪ್ರದೇಶ): ‘ನಾವು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಬಂದ್
ಮಾಡುವ ಮಾತುಗಳನ್ನು ಆಡುತ್ತಿದ್ದರೆ, ಅವರು (ವಿರೋಧ ಪಕ್ಷಗಳು) ಭಾರತ ಬಂದ್ ಮಾತುಗಳನ್ನು ಆಡುತ್ತಿದ್ದಾರೆ. ಭ್ರಷ್ಟಾಚಾರ, ಕಪ್ಪು ಹಣ ಬಂದ್ ಆಗಬೇಕೋ? ಅಥವಾ ಭಾರತ ಬಂದ್ ಆಗಬೇಕೋ? ನೀವೇ ಹೇಳಿಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಜನರನ್ನೇ ಕೇಳಿದರು. ಉತ್ತರ ಪ್ರದೇಶದ ಕುಶಿನಗರದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನಿಮ್ಮ ಹಣ ನಿಮ್ಮದೇ. ನೋಟು ಇಲ್ಲದೇ ಇದ್ದರೂ ನೀವು ಇದನ್ನು ಖರ್ಚು ಮಾಡಬಹುದು. ಕಪ್ಪು ಹಣ ಹೊಂದಿದವರು ಅದನ್ನು ಬಿಳಿ ಮಾಡಲು ಯತ್ನಿಸುತ್ತಿದ್ದಾರೆ. ಅವರ ಯತ್ನವನ್ನು ಸೋಲಿಸಬೇಕಾಗಿದೆ ಎಂದು ನುಡಿದರು. ವ್ಯವಸ್ಥೆ ಸರಿಪಡಿಸಲು ರಾಷ್ಟ್ರದ ಜನರ ಬಳಿ 50 ದಿನಗಳ ಕಾಲಾವಕಾಶ ಕೋರಿದ್ದೇವೆ. ದೊಡ್ಡ ದೊಡ್ಡ ಜನರಿಗೆ ದೊಡ್ಡ ದೊಡ್ಡ ತೊಂದರೆಗಳಾಗಬಹುದು, ಸಣ್ಣವರಿಗೆ ಚಿಕ್ಕ ಪುಟ್ಟ ತೊಂದರೆಗಳಾಗಬಹುದು ಎಂದು ಮೋದಿ ಹೇಳಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಕಾಂಗ್ರೆಸ್, ಬಿಎಸ್ಪಿ, ಎಸ್, ಮಮತಾ, ಕೇಜ್ರಿವಾಲ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಕಪ್ಪು ಹಣದ ಬಗ್ಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದವು. ಈಗ ಏಕೆ ಮಾಡಿದಿರಿ? ಎಂದು ಕೇಳುತ್ತಿವೆ ಎಂದು ಛೇಡಿಸಿದರು

2016: ಕೊಯಮತ್ತೂರು: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಚಪ್ಪಲಿ ದುರಸ್ತಿಗಾಗಿ 10
ರೂಪಾಯಿ ಕೇಳಿದ ಚಮ್ಮಾರನೊಬ್ಬನಿಗೆ 100 ರೂಪಾಯಿ ನೀಡಿದ್ದು ಹಾಗೂ ಖುಷಿಯಾದ ಚಮ್ಮಾರ ನಾಲ್ಕು ಹೊಲಿಗೆ ಹೆಚ್ಚೇ ಹಾಕಿದ್ದನ್ನು ತೋರಿಸುವ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಯಿತು. ಕೊಯಮತ್ತೂರಿನ ಈಶ ಫೌಂಡೇಷನ್ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಯಮತ್ತೂರಿಗೆ ವಿಮಾನದಲ್ಲಿ ಆಗಮಿಸಿದ ಸಚಿವೆಯ ಚಪ್ಪಲಿ ವಿಮಾನದಿಂದ ಇಳಿಯುವ ವೇಳೆಗೆ ಕಿತ್ತು ಹೋಗಿದ್ದವು. ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವನತಿ ಶ್ರೀನಿವಾಸನ್ ಜೊತೆಗೆ ಕಾರಿನಲ್ಲಿ ಹೊರಟಿದ್ದ ಸ್ಮೃತಿ ಇರಾನಿ ದಾರಿಯುದ್ದಕ್ಕೂ ಚಮ್ಮಾರನಿಗಾಗಿ ಹುಡುಕಾಡುತ್ತಾ ಸಾಗಿದ್ದರು. ವಿಮಾನ ನಿಲ್ದಾಣದಿಂದ 16 ಕಿ.ಮೀ. ಸಾಗಿದಾಗ ಪೇರೂರು ಬಳಿ ಚಮ್ಮಾರನೊಬ್ಬ ಕಾಣಿಸಿದ. ಕಾರಿನಿಂದ ಕೆಳಗಿಳಿದ ಸಚಿವೆ ನೇರ ಚಮ್ಮಾರನ ಬಳಿಗೆ ಹೋಗಿ ಚಪ್ಪಲಿಯನ್ನು ಆತನ ಕೈಗೆ ಕೊಟ್ಟು ಅಲ್ಲಿದ್ದ ಸ್ಟೂಲ್ ಒಂದರಲ್ಲಿ ಕುಳಿತುಕೊಂಡರು. 10 ರೂಪಾಯಿ ಆಗುತ್ತದೆ ಎಂದು ಚಮ್ಮಾರ ಹೇಳುತ್ತಿದ್ದಂತೆಯೇ 100 ರೂಪಾಯಿ ನೋಟನ್ನು ಆತನ ನಗದು ಪೆಟ್ಟಿಗೆ ಬಳಿ ಇಟ್ಟ ಸ್ಮೃತಿ ಚೇಂಜ್ ವೇಂಡ (ಚಿಲ್ಲರೆ ಬೇಡ) ಎಂದು ಹೇಳಿದರು. ಘಟನೆಯಿಂದ ಖುಷಿಯಾದ ಚಮ್ಮಾರ ಚಪ್ಪಲಿಗೆ ನಾಲ್ಕು ಹೊಲಿಗೆ ಹೆಚ್ಚೇ ಹಾಕಿ ಚಪ್ಪಲಿಯನ್ನು ವಾಪಸ್ ಕೊಟ್ಟ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟಿಜನ್ನರು ಸ್ಮೃತಿ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
 2016: ಕೌಲೂನ್ (ಹಾಂಕಾಂಗ್): ಹಾಂಕಾಂಗ್ ಸೂಪರ್ ಸೀರೀಸ್ ಟೂರ್ನಿಯ ಫೈನಲಿನಲ್ಲಿ  ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಚೈನೀಸ್ ತೈಪೆಯ ತಾಯ್ ಝು ಯಿಂಗ್ ಅವರ ವಿರುದ್ದ 15-21, 17-21 ನೇರ ಗೇಮ್ ಗಳ ಅಂತರದಿಂದ ಸೋಲು ಅನುಭವಿಸಿದರು. 41 ನಿಮಿಷ ನಡೆದ ಆಟದಲ್ಲಿ ಸಿಂಧು ಸೋಲುವ ಮೂಲಕ ವೃತ್ತಿ ಜೀವನದ ಮೊದಲ ಸೂಪರ್ ಸಿರೀಸ್ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾದರು.

2014: ಸಿಡ್ನಿ: ಬೌನ್ಸರ್ನಿಂದ ತಲೆಗೆ ಚೆಂಡಿನ ಪೆಟ್ಟು ಬಿದ್ದು ಅಸ್ವಸ್ಥರಾಗಿದ್ದ ಆಸ್ಟ್ರೇಲಿಯಾದ ಯುವ ಟೆಸ್ಟ್ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಅವರು ಗಾಯಗೊಂಡ ಎರಡು ದಿನಗಳ ಬಳಿಕ ಈದಿನ ನಿಧನರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು. 'ಫಿಲ್ ಹ್ಯೂಸ್ ಅವರಿಗೆ ಪ್ರಜ್ಞೆ ಮರಳಿ ಮರಲೇ ಇಲ್ಲ . ಅವರು ಸಿಡ್ನಿ ಆಸ್ಪತ್ರೆಯಲ್ಲಿಯೇ ಅಸು ನೀಗಿದ್ದಾರೆ' ಎಂದು ಆಸ್ಟ್ರೇಲಿಯಾ ತಂಡದ ವೈದ್ಯ ಪೀಟರ್ ಬ್ರೂಕ್ನರ್ ಹೇಳಿದರು. ನವೆಂಬರ್ 25)ರಂದು ಹೆಲ್ಮೆಟ್ ಬದಲಿಗೆ ತಲೆಗೆ ಚೆಂಡು ಬಡಿದ ಬಳಿಕ ಫಿಲ್ ಹ್ಯೂಸ್ ಅವರನ್ನು ಸಿಡ್ನಿ ಕ್ರಿಕೆಟ್ ಮೈದಾನದಿಂದ ಆಸ್ಪತ್ರೆಗೆ ಸ್ಟ್ರೆಚರ್ನಲ್ಲಿಯೇ ಒಯ್ಯಲಾಗಿತ್ತು. ಆಸ್ಪತ್ರೆಗೆ ಒಯ್ಯುವ ಮೊದಲು ಅವರಿಗೆ ಬಾಯಿಯ ಮೂಲಕ ಉಸಿರಾಟದ ಯತ್ನ ನಡೆಸಲಾಗಿತ್ತು. ಆದರೆ ಅವರಾಗಲೇ ಪ್ರಜ್ಞೆ ಕಳೆದುಕೊಂಡಿದ್ದರು. 'ಸ್ವಲ್ಪ ಹೊತ್ತಿಗೆ ಮುಂಚೆ ಈದಿನ ಫಿಲ್ ಹ್ಯೂಸ್ ಅವರು ನಿಧನರಾದರು ಎಂಬುದಾಗಿ ತಿಳಿಸುವ ಬೇಸರದ ಕರ್ತವ್ಯ ನನ್ನದಾಗಿದೆ.  ಗಾಯಗೊಂಡ ಬಳಿಕ ಅವರಿಗೆ ಮತ್ತೆ ಪ್ರಜ್ಞೆ ಮರಳಿ ಬರಲೇ ಇಲ್ಲ' ಎಂದು ಪೀಟರ್ ಬ್ರೂಕ್ನರ್ ಹೇಳಿಕೆಯಲ್ಲಿ ತಿಳಿಸಿದರು. ನಿಧನರಾದಾಗ ಅವರು ನೋವಿನಲ್ಲಿ ಇರಲಲ್ಲ. ಕುಟುಂಬ ಸದಸ್ಯರು ಮತ್ತು ನಿಕಟ ಗೆಳೆಯರು ಅವರ ಜೊತೆಗಿದ್ದರು. ಕ್ರಿಕೆಟ್ ಸಮುದಾಯದ ಸದಸ್ಯರಾಗಿ ನಾವು ಅವರ ನಿಧನಕ್ಕಾಗಿ ಶೋಕ ವ್ಯಕ್ತ ಪಡಿಸುತ್ತಿದ್ದೇವೆ. ಅವರ ಕುಟುಂಬ ಸದಸ್ಯರು, ಗೆಳೆಯರಿಗೆ ನಮ್ಮ ತೀವ್ರವಾದ ಅನುಕಂಪ ವ್ಯಕ್ತಪಡಿಸುತ್ತಿದ್ದೇವೆ; ಎಂದು ಅವರು ನುಡಿದರು. ನ್ಯೂ ಸೌತ್ ವೇಲ್ಸ್ ವಿರುದ್ಧ ಶೆಫೀಲ್ಡ್ ಷೀಲ್ಡ್ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ಮಾಡುತ್ತಿದ್ದ ಹ್ಯೂಸ್ ಅವರು ಬೌನ್ಸರ್ ಸಿಯಾನ್ ಅಬ್ಬೋಟ್ ಅವರ ಚೆಂಡು ಹೆಲ್ಮೆಟ್ ಬದಲು ತಲೆಗೆ ಬಡಿದ ಪರಿಣಾಮವಾಗಿ ಕ್ರಿಕೆಟ್ ಮೈದಾನದಲ್ಲಿ ಮುಂಭಾಗಕ್ಕೆ ಕುಸಿದು ಬಿದ್ದಿದ್ದರು. ಸೈಂಟ್ ವಿನ್ಸೆಂಟ್ ಆಸ್ಪತ್ರೆಗೆ ಒಯ್ಯುವ ಮೊದಲು ಮೈದಾನದಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ 90 ನಿಮಿಷ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹ್ಯೂಸ್ ಅವರ ಗಾಯದ ವಿವರಗಳನ್ನು ವೈದ್ಯರು ನೀಡಲಿಲ್ಲ. ಆದರೆ ಆಸ್ಟ್ರೇಲಿಯನ್ಬ್ರಾಡ್ಕಾಸ್ಟಿಂಗ್ ಕಾಪೋರೇಷನ್ ಅವರ ತಲೆಬುರಡೆ ಶಿಥಿಲಗೊಂಡಿದೆ ಎಂದು ವರದಿ ಮಾಡಿತ್ತು. ಅವರಿಗೆ ಮೆದುಳಿನಲ್ಲಿ ವಿಪರೀತ ರಕ್ತಸ್ರಾವವಾಗಿತ್ತು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು. ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಸೇರಿದಂತೆ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ, ದುಃಖಿತ ತಾಯಿ, ಸಹೋದರಿಗೆ ಸಾಂತ್ವನ ಹೇಳಿದ್ದರು. 2009ರಲ್ಲಿ 20ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣ ಮಾಡಿದ್ದ ಹ್ಯೂಸ್ ಈವರೆಗೆ 26 ಟೆಸ್ಟ್ಗಳಲ್ಲಿ ಆಡಿದ್ದರು. ತನ್ನ ಎರಡನೇ ಪಂದ್ಯದಲ್ಲಿಯೇ ಒಂದೇ ಟೆಸ್ಟ್ನಲ್ಲಿ ದ್ವಿಶತಕ ಭಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹ್ಯಾಂಪ್ಶೈರ್, ಮಿಡ್ಲ್ಸೆಕ್ಸ್ ಮತ್ತು ವೋರಸೆಸ್ಟರ್ಶೈರ್ ಗಾಗಿ ಆಡಿದ್ದ ಅವರು 2013ರಲ್ಲಿ ಇಂಗ್ಲೆಂಡ್ ವಿರುದ್ಧ ಆಷಸ್ ಸರಣಿಯಲ್ಲಿ ಆಸ್ತೋನ್ ಅಗರ್ ಜೊತೆಗೆ 163ರನ್ ಗಳಿಸಿದ್ದರು.

2014: ಸಿಡ್ನಿ: ಫಿಲ್ ಹ್ಯೂಸ್ ಗಾಯ-ಸಾವಿನ ಪ್ರಕರಣದಿಂದಾಗಿ ನ್ಯೂ ಸೌತ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯ ಹಾಗೂ ಇತರ ದೇಶಿ ಪಂದ್ಯಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ರದ್ದುಗೊಳಿಸಿತು.  'ನಾವು ದೇಶಿ ಆಟಗಾರರೊಂದಿಗೆ ಹಾಗೂ ಸ್ಥಳೀಯ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಹಾಗಾಗಿ ಸದ್ಯ ನಮ್ಮ ಆಟಗಾರರು ಕ್ರಿಕೆಟ್ ಆಡುವ ಸ್ಥಿತಿಯಲ್ಲಿಲ್ಲ.' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಟೀಮ್ಫರ್ಫಾಮೆರ್ನ್ಸ್ ಮುಖ್ಯ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರು ಫಿಲ್ ಹ್ಯೂಸ್ ಸಾವಿನ ಸುದ್ದಿ ಬರುವುದಕ್ಕೂ ಮುಂಚೆಯೇ ತಿಳಿಸಿದ್ದರು.

2014: ಸಿಡ್ನಿ: ಆಸ್ಟ್ರೇಲಿಯಾದ ಟೆಸ್ಟ್ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಅವರು ಹೆಲ್ಮೆಟ್ ಧರಿಸಿದ್ದರೂ ಬೌನ್ಸರ್ನಿಂದ ಗಂಭೀರ ಏಟು ತಿಂದು ಸಾವನ್ನಪ್ಪಿದ ಪ್ರಕರಣ ಎಲ್ಲರ ಹುಬ್ಬೇರಿಸಿತು. ಆದರೆ, ಹ್ಯೂಸ್ ಹಳೆಯ ಮತ್ತು ಹಗುರವಾದ ಹೆಲ್ಮೆಟ್ ಧರಿಸಿದ್ದೇ ಆಪತ್ತಿಗೆ ಸಿಲುಕಿಕೊಳ್ಳಲು ಕಾರಣ ಎಂದು ಆ ಹೆಲ್ಮೆಟ್ನ ತಯಾರಕ ಕಂಪನಿ 'ಮಸುರಿ' ಸ್ಪಷ್ಟನೆ ನೀಡಿತು. ಹ್ಯೂಸ್ ಇತ್ತೀಚೆಗಿನ ತನ್ನ ಹೊಸ ಮಾಡೆಲ್ ಹೆಲ್ಮೆಟ್ ಬಳಸುತ್ತಿರಲಿಲ್ಲ. ಹಿಂದಿನ ಹೆಲ್ಮೆಟ್ನಲ್ಲಿ ತಲೆ ಮತ್ತು ಕುತ್ತಿಗೆಗೆ ಪೂರ್ಣ ರಕ್ಷಕವಚ ಇರಲಲ್ಲ ಎಂದು ಯುಕೆ ಮೂಲದ ಕಂಪನಿ ಹೇಳಿತು.. ಅದರ ಹೊಸ ಮಾಡೆಲ್ ಹೆಲ್ಮೆಟ್ ಕಳೆದ ವರ್ಷ ಆಗಸ್ಟ್ನಲ್ಲಿ ಬಿಡುಗಡೆಗೊಂಡಿತ್ತು. ಆದರೆ ಹೊಸ ಮಾಡೆಲ್ನಲ್ಲಿ ಹ್ಯೂಸ್ಗೆ ರಕ್ಷಣೆ ಸಿಗುತ್ತಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಲು ಕಂಪನಿಯ ವಕ್ತಾರರು ನಿರಾಕರಿಸಿ, ಘಟನೆ ಸಂದರ್ಭ ಚೆಂಡು ಬಡಿದ ಕ್ಷಣದ ವೀಡಿಯೋ ಚಿತ್ರಣವನ್ನು ಅಧ್ಯಾಯನಕ್ಕೊಳಪಡಿಸುವುದಾಗಿ ತಿಳಿಸಿತು.. ಬೌನ್ಸರ್ ಎಸೆದ ವೇಗಿಗೆ ಕೌನ್ಸೆಲಿಂಗ್! ಹ್ಯೂಸ್ ಚೆಂಡು ಬಡಿದ ಬೆನ್ನಲ್ಲೇ ನೆಲಕ್ಕುಳಿದಾಗ ಮೊದಲು ಅವರ ಸಹಾಯಕ್ಕೆ ಆಗಮಿಸಿದವರೇ, ಬೌನ್ಸರ್ ಎಸೆದ ಯುವ ವೇಗಿ ಸೀನ್ ಅಬೋಟ್. ಆದರೆ, ಹ್ಯೂಸ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ 22 ವರ್ಷದ ಅಬೋಟ್ ಆಘಾತದಿಂದ ಪರಿತಪಿಸಿದರು. ಇದಕ್ಕಾಗಿ ಅವರಿಗೆ ಕೌನ್ಸೆಲಿಂಗ್ ಮಾಡಲಾಯಿತು. ಈ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ, ಘಟನೆಗೆ ಅಬೋಟ್​ರನ್ನು ದೂರುವುದಿಲ್ಲ ಎಂದು ಹೇಳಿದೆ. ಜತೆಗೆ ಮಾಜಿ ವೇಗಿಗಳಾದ ಗ್ಲೆನ್ ಮೆಕ್​ಗ್ರಾಥ್, ಬ್ರೆಟ್ ಲೀ, ಇಂಗ್ಲೆಂಡ್​ನ ಸ್ಟುವರ್ಟ್ ಬ್ರಾಡ್ ಕೂಡ 'ಅಬೋಟ್​ರದ್ದು ಯಾವುದೇ ತಪ್ಪಿಲ್ಲ' ಎಂದು ಹೇಳಿದರು.. *ಕ್ರಿಕೆಟ್​ನಲ್ಲಿ ಗಾಯ, ಅಪಾಯ ಕ್ರಿಕೆಟ್ ಎಂದ ಮೇಲೆ ಗಾಯಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಕ್ರಿಕೆಟಿಗರ ದುರದೃಷ್ಟ ಹೆಚ್ಚಿದಾಗ ಗಂಭೀರ ಗಾಯಗಳಾಗುತ್ತವೆ. ಕಳೆದ ಮಂಗಳವಾರ ಫಿಲಿಪ್ ಹ್ಯೂಸ್​ಗೆ ಅಂಥದ್ದೇ ದಿನವಾಗಿತ್ತು. ಬೌನ್ಸರ್ ಆಗಿ ಬಂದ ಚೆಂಡನ್ನು ಸರಿಯಾಗಿ ಅಂದಾಜಿಸದ ಅವರು ತಲೆಗೆ ಪೆಟ್ಟು ತಿಂದು ಪ್ರಜ್ಞೆ ಮರಳಿ ಬಾರದೆ  ನಿಧನರಾದರು.
 ಈ ಹಿಂದೆ ಇಂಥದ್ದೇ ಅಪಾಯಕ್ಕೆ ಸಿಲುಕಿದ ಕೆಲ ಕ್ರಿಕೆಟಿಗರ ವಿವರ ಇಲ್ಲಿದೆ... *ರಮಣ್ ಲಾಂಬಾ: ಭಾರತದ ಈ ಮಾಜಿ ಆಟಗಾರ 1998ರಲ್ಲಿ ಬಾಂಗ್ಲಾದೇಶದಲ್ಲಿ ಕ್ಲಬ್ ಪಂದ್ಯವೊಂದರಲ್ಲಿ ಫಾರ್ವರ್ಡ್ ಶಾರ್ಟ್ ಲೆಗ್​ನಲ್ಲಿ ಹೆಲ್ಮೆಟ್ ಧರಿಸದೆ ಫೀಲ್ಡಿಂಗ್ ನಡೆಸುತ್ತಿದ್ದಾಗ ಬ್ಯಾಟ್ಸ್​ಮನ್ ಹೊಡೆದ ಚೆಂಡಿನಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದರು. ಇದು ಕ್ರಿಕೆಟ್ ಮೈದಾನದಲ್ಲಿನ ಅತ್ಯಂತ ಗಂಭೀರ ಸ್ವರೂಪದ ಗಾಯವಾಗಿತ್ತಲ್ಲದೆ 38ನೇ ವಯಸ್ಸಿನಲ್ಲೇ ಅವರ ಪ್ರಾಣ ತೆಗೆದಿತ್ತು. ದೆಹಲಿ ಆಟಗಾರ ರಮಣ್ ಭಾರತ ಪರ 4 ಟೆಸ್ಟ್, 32 ಏಕದಿನ ಪಂದ್ಯ ಆಡಿದ್ದರು. *ನಾರಿ ಕಂಟ್ರಾಕ್ಟರ್: 1961-62ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬಾರ್ಬಡೋಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್​ಮನ್ ನಾರಿ ಕಂಟ್ರಾಕ್ಟರ್, ಆತಿಥೇಯ ತಂಡದ ವೇಗಿ ಚಾರ್ಲಿ ಗ್ರೀಫಿತ್ ಎಸೆತದಲ್ಲಿ ತಲೆಗೆ ಗಂಭೀರ ಪೆಟ್ಟು ತಿಂದಿದ್ದರು. ಚೆಂಡು ಬಡಿದ ವೇಗಕ್ಕೆ ಅವರ ಮೂಗು, ಕಿವಿಯಿಂದಲೂ ರಕ್ತ ಬಂದಿತ್ತು. ನಂತರ 2 ತುರ್ತ ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತ ತೆಗೆಯಲಾಗಿತ್ತು. 6 ದಿನಗಳ ಕಾಲ ಪ್ರಜ್ಞೆ ಕಳೆದುಕೊಂಡಿದ್ದ ಅವರ ನೆರವಿಗಾಗಿ ಹಲವು ಆಟಗಾರರು ರಕ್ತ ನೀಡಿದ್ದರು. ಬಳಿಕ ಕಂಟ್ರಾಕ್ಟರ್ ಚೇತರಿಸಿಕೊಂಡರೂ ಮತ್ತೆಂದು ಟೆಸ್ಟ್ ಕ್ರಿಕೆಟ್ ಆಡಲಿಲ್ಲ. *ಅಬ್ದುಲ್ ಅಜೀಜ್: ಪಾಕಿಸ್ತಾನದ ಕರಾಚಿ ತಂಡದ ಈ ವಿಕೆಟ್ ಕೀಪರ್ 1958-59ರಲ್ಲಿ ಖೈದ್ ಇ ಅಜಮ್​ಟೂರ್ನಿಯ ಫೈನಲ್​ನಲ್ಲಿ ವೇಗಿ ದಿಲ್ದಾವರ್ ಎಸೆತದಲ್ಲಿ ಎದೆಗೆ ಪೆಟ್ಟುತಿಂದು ನೆಲಕ್ಕುರುಳಿದರು. ಮೊದಲೇ ಎದೆ ನೋವು ಹೊಂದಿದ್ದ ಅವರು ಆಸ್ಪತ್ರೆಯ ಹಾದಿಯಲ್ಲಿ ಕೊನೆಯುಸಿರೆಳೆದರು. 2ನೇ ಇನಿಂಗ್ಸ್​ನ ಸ್ಕೋರ್ ಬೋರ್ಡ್​ನಲ್ಲಿ ಅವರ ಹೆಸರಿನ ಮುಂದೆ 'ಆಬ್ಸೆಂಟ್ ಡೆಡ್' ಎಂದು ನಮೂದಿಸಲಾಗಿತ್ತು. *ಜಸ್ಟಿನ್ ಲ್ಯಾಂಗರ್: 2005-06ರ ಸೆಂಚೂರಿಯನ್ ಟೆಸ್ಟ್ ಆಸೀಸ್ ಆರಂಭಿಕ ಜಸ್ಟಿನ್ ಲ್ಯಾಂಗರ್​ಗೆ 100ನೇ ಟೆಸ್ಟ್ ಆಗಿತ್ತು. ಆದರೆ ಪಂದ್ಯದ 2ನೇ ದಿನ ಆಸೀಸ್ ಇನಿಂಗ್ಸ್​ನ ಮೊದಲ ಎಸೆತದಲ್ಲೇ ದಕ್ಷಿಣ ಆಫ್ರಿಕಾ ವೇಗಿ ಮಖಾಯ ಎನ್​ಟಿನಿ ಎಸೆತದಲ್ಲಿ ತಲೆಗೆ ಗಂಭೀರ ಪೆಟ್ಟುತಿಂದರು. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಲ್ಲದೆ, 2 ಹೊಲಿಗೆ ಹಾಕಲಾಯಿತು. ಪಂದ್ಯದ ಉಳಿದ ಭಾಗದಲ್ಲಿ ಅವರು ಆಡಲಿಲ್ಲ. *ಮಾರ್ಕ್ ಬೌಷರ್: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ 2012ರಲ್ಲಿ ಸಾಮರ್​ಸೆಟ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಇಮ್ರಾನ್ ತಾಹಿರ್​ರ ಗೂಗ್ಲಿ ಎಸೆತದಲ್ಲಿ ವಿಕೆಟ್ ಉರುಳಿದಾಗ ಬೇಲ್ಸ್ ಅವರ ಎಡಗಣ್ಣಿಗೆ ಬಡಿದಿತ್ತು. ನಂತರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಬೆನ್ನಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೊಷಿಸಿ ತೆರೆಮರೆಗೆ ಸರಿಯಬೇಕಾಯಿತು. 150 ಟೆಸ್ಟ್ ಆಡುವ ಹಂಬಲದಲ್ಲಿದ್ದ ಅವರು 147ನೇ ಟೆಸ್ಟ್​ಗೆ ನಿವೃತ್ತರಾದರು. *ಸಾಬಾ ಕರೀಂ: 2000ದಲ್ಲಿ ಢಾಕಾದಲ್ಲಿ ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಸಾಬಾ ಕರೀಂ ಸ್ಪಿನ್ನರ್ ಅನಿಲ್ ಕುಂಬ್ಳೆ ಎಸೆತದಲ್ಲಿ ಬಲಗಣ್ಣಿಗೆ ಏಟು ತಿಂದರು. 
ಇದರ ಬೆನ್ನಲ್ಲೇ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಭಾರತಕ್ಕೆ ಮರಳಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅವರಿಗೆ ಪೂರ್ಣ ದೃಷ್ಟಿ ಮರಳಲಿಲ್ಲ.



2014: ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.. ಕೋರ್ಟ್ ಶ್ರೀನಿವಾಸನ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಮತ್ತು ಇಂಡಿಯಾ ಸಿಮೆಂಟ್ಸ್ನ ಶೇರುದಾರರು ಮತ್ತು ಆಡಳಿತ ಮಂಡಳಿ ಸದಸ್ಯರ ಮಾಹಿತಿ ಒದಗಿಸಲು ಸೂಚಿಸಿತು. ಬಿಸಿಸಿಐ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಬಹುದು ಆದರೆ ಮುದ್ಗಲ್ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಹೆಸರಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಬಿಸಿಸಿಎಂ ಎಂದು ಕೋರ್ಟ್ ತಿಳಿಸಿತು.. ಡಿ.17ರಂದು ಬಿಸಿಸಿಐ ಅಧ್ಯಕ್ಷ ಗಾದಿಗೆ ನಡೆಯಲಿರುವ ಚುನಾವಣೆಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗಮೋಹನ್ ದಾಲ್ಮಿಯ ನಾಮಪತ್ರ ಸಲ್ಲಿಸಲಿದ್ದಾರೆ. 3ನೇ ಬಾರಿಗೆ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ದಾಲ್ಮಿಯ ಪೂರ್ವ ವಲಯದ ಕ್ರಿಕೆಟ್ ಅಕಾಡೆಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದವು.

2014:  ಕ್ವಾಲಾಲಂಪುರ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2 ಸ್ಥಾನ ಮೇಲೆರಿ 8 ಸ್ಥಾನ ಪಡೆದುಕೊಂಡರು. 21 ವರ್ಷದ ಶ್ರೀಕಾಂತ್ ಇತ್ತೀಚೆಗೆ ಹಾಂಗ್ಕಾಂಗ್ ಒಪನ್ ಚಾಂಪಿಯನ್ಷಿಪ್ನಲ್ಲಿ ಸಮೀಫೈನಲ್ ತಲುಪಿದ್ದರು. ಭಾರತದ ಮತ್ತೊಬ್ಬರ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್ 16 ನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಒಲಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 4ನೇ ಸ್ಥಾನದಲ್ಲಿ ಮುಂದುವರೆದರು. 2 ಸಲ ವಿಶ್ವಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು 11ನೇ ಸ್ಥಾನಕ್ಕೆ ಕುಸಿದರು. ಮಹಿಳೆಯ ಡಬಲ್ಸ್ ವಿಭಾಗದಲ್ಲಿ 2011ರ ವಿಶ್ವ ಚಾಂಪಿಯನ್ಷಿಪ್ ಕಂಚು ಪದಕ ವಿಜೇತ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 20ನೇ ಸ್ಥಾನಕ್ಕೆ ಕುಸಿದರು.

2014:  ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ಸಂಭವಿಸಿದ ಭೀಕರ ಗುಂಡಿನ ಕಾಳಗದಲ್ಲಿ ಒಬ್ಬ ಸೈನಿಕ ಸೇರಿ ಒಟ್ಟು 8 ಜನ ಮೃತರಾದರು. ಗುಂಡಿನ ಕಾಳಗ ಈದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಗಿತಗೊಂಡಿತು.. ಮೃತರಲ್ಲಿ ಒಬ್ಬ ಸೈನಿಕ, 3 ಜನ ನಾಗರಿಕರು ಮತ್ತು ನಾಲ್ವರು ಉಗ್ರಗಾಮಿಗಳು ಸೇರಿದ್ದಾರೆ  ನಾಲ್ವರು ಸೈನಿಕರು ಗಾಯಗೊಂಡರು.  ರಾಜೌರಿ ಜಿಲ್ಲೆಯ ಅರ್ನಿಯಾ ಗಡಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಉಗ್ರಗಾಮಿಗಳು ಗಡಿ ನಿಯಂತ್ರಣ ರೇಖೆಯಿಂದ ಒಳ ನುಸುಳಿದಾಗ ಈ ಘಟನೆ ಘಟಿಸಿತು. 7-8 ಜನರಿದ್ದ ಉಗ್ರಗಾಮಿಗಳ ಗುಂಪು ನಾಗರಿಕ ವಾಹನಗಳ ಮೇಲೆ ದಾಳಿ ನಡೆಸಿದರು. ನಂತರ ಪಿಂಡ್ ಕೋಟೆ ಹಳ್ಳಿಯಲ್ಲಿ ಸೇನೆ ನಿರ್ವಿುಸಿದ್ದ ಹಳೆಯ ಬಂಕರ್ನಲ್ಲಿ ಅವಿತಿದ್ದರು. ಸೇನೆ ಮತ್ತು ಬಿಎಸ್ಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 4 ಉಗ್ರಗಾಮಿಗಳು ಹತರಾದರು. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಜಮ್ಮು ಪ್ರದೇಶಕ್ಕೆ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬರಲಿದ್ದು, ಅದಕ್ಕೆ ಮುನ್ನ ಉಗ್ರಗಾಮಿಗಳಿಂದ ಈ ರಕ್ತಪಾತ ನಡೆದಿದೆ ಎಂದು ವರದಿ ತಿಳಿಸಿತು. ಮೂರರಿಂದ ನಾಲ್ಕು ಮಂದಿ ಉಗ್ರಗಾಮಿಗಳು ಇಲ್ಲಿ ಭಾರತದೊಳಕ್ಕೆ ನುಸುಳುವ ಯತ್ನ ಮಾಡಿದ್ದರು ಎಂದು ಸೇನಾ ಮೂಲಗಳು ಹೇಳಿದವು. ಪಾಕಿಸ್ತಾನ್ ರೇಂಜರ್ಗಳು ಉಗ್ರಗಾಮಿಗಳ ನುಸುಳಿವಿಕೆ ಯತ್ನಕ್ಕೆ ಬೆಂಬಲ ನೀಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

2008: ಭಯೋತ್ಪಾದಕರ ದಾಳಿಯಿಂದ ತತ್ತರಿಸಿದ ಮುಂಬೈಯಲ್ಲಿ ಈದಿನ ಇಡೀ ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆಯಿತು. ಆದರೆ ಎರಡು ಪಂಚತಾರಾ ಹೊಟೇಲುಗಳಾದ ತಾಜ್ ಮತ್ತು ಒಬೆರಾಯ್ ಟ್ರೈಡಂಟ್‌ಗಳನ್ನು ಉಗ್ರರಿಂದ ಮುಕ್ತಗೊಳಿಸುವುದು ಅಸಾಧ್ಯವಾಯಿತು. ಉಗ್ರರ ಅಟ್ಟಹಾಸಕ್ಕೆ 14 ಮಂದಿ ಪೊಲೀಸರ ಸಹಿತ 127 ಮಂದಿ ಮೃತರಾಗಿ 327ಕ್ಕೂ ಅಧಿಕ ಮಂದಿ ಗಾಯಗೊಂಡರು. 13 ಮಂದಿ ಉಗ್ರರನ್ನೂ ಕೊಲ್ಲಲಾಯಿತು. ಆದರೆ, 22 ಗಂಟೆಗಳ ಕಾರ್ಯಾಚರಣೆ ಬಳಿಕವೂ 15ರಿಂದ 20ರಷ್ಟು ಸಂಖ್ಯೆಯಲ್ಲಿದ್ದ ಭಯೋತ್ಪಾದಕರು ಟ್ರೈಡೆಂಟ್ ಹೊಟೇಲ್‌ನಲ್ಲಿ  ಸುಮಾರು 200 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು. ಅವರನ್ನು ಸುರಕ್ಷಿತವಾಗಿ ಹೊರಗೆ ತರುವ ಕಾರ್ಯದಲ್ಲಿ ಸೇನೆ, ಎನ್‌ಎಸ್‌ಜಿ ಕಮಾಂಡೊಗಳ ಸಹಿತ ಭದ್ರತಾ ಪಡೆಗಳು ಸಂಘಟಿತ ಯತ್ನ ನಡೆಸಿದವು. ಈದಿನ ರಾತ್ರಿ 9ರ ಹೊತ್ತಿಗೆ ಗುಜರಾತಿನ ಒಖಾ ಬಳಿ ಉಗ್ರರು ಬಳಸಿದ ಎರಡೂ ಹಡಗುಗಳು (ಅಲ್ಫಾ- ಕಬೀರ್) ಪತ್ತೆಯಾದವು. ರಾತ್ರಿ 10.30 ರ ಹೊತ್ತಿಗೆ ನಾರಿಮನ್ ಹೌಸಿನಿಂದ ಕೆಲವರು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲಾಯಿತು.

2008: ಮಂಡಲ್ 'ರಾಜ' ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ (77) ಈದಿನ ಮಧ್ಯಾಹ್ನ 2.45ಕ್ಕೆ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.  ಅನೇಕ ಏಳು ಬೀಳುಗಳ ನಡುವೆ ಅಲಹಾಬಾದಿನ ಸ್ಥಳೀಯ ರಾಜಕಾರಣದಿಂದ ಪ್ರಧಾನಿ ಪಟ್ಟಕ್ಕೆ ನಿಷ್ಠುರ  ವರ್ಚಸ್ವಿ ನಾಯಕರೆನಿಸಿದ್ದ ವಿ. ಪಿ. ಸಿಂಗ್ 17 ವರ್ಷಗಳಿಂದ ರಕ್ತ ಕ್ಯಾನ್ಸರಿನಿಂದ ಬಳಲಿದ್ದರು. ಕಳೆದ ಆರು ತಿಂಗಳಿಂದ ತೀವ್ರ ಅಸ್ವಸ್ಥರಾಗಿದ್ದ ಸಿಂಗ್ ಅಪೊಲೊ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಲಪಂಥೀಯ ಸಿದ್ಧಾಂತದ ವಿರೋಧಿಯಾಗಿದ್ದರೂ ಬಿಜೆಪಿ ಬೆಂಬಲ ಪಡೆದು ಕಾಂಗ್ರೆಸ್ಸೇತರ ಮೊದಲ ಮೈತ್ರಿ ಸರ್ಕಾರ ರಚಿಸಿದ  ಪ್ರಧಾನಿ ಎಂಬ ಹೆಗ್ಗಳಿಕೆ ಅವರದಾಗಿತ್ತು. ದೇಶದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ವಿರೋಧಿ ಹೋರಾಟದ ಹೊಸ ಅಧ್ಯಾಯ ಆರಂಭಿಸಿದ ಕೀರ್ತಿಯೂ ಅವರದೇ. ರಾಷ್ಟ್ರದ ರಾಜಕಾರಣವನ್ನು ನೆಹರು ಅವರು ಆವರಿಸಿದ್ದಾಗಲೇ, ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತರಾಗಿ ಸಕ್ರಿಯ ರಾಜಕಾರಣಕ್ಕೆ ಸಿಂಗ್ ಕಾಲಿಟ್ಟಿದ್ದರು. ಆರಂಭದಲ್ಲಿ ಅಲಹಾಬಾದ್ ಸ್ಥಳೀಯ ಸಂಸ್ಥೆಯಿಂದ ಚುನಾವಣೆ ಎದುರಿಸಿದ ಅವರು ಬಹುಬೇಗನೇ ಕಾಂಗ್ರೆಸ್ಸಿನ ನಾಯಕರಾಗಿ ಹೊರಹೊಮ್ಮಿದರು. ಉತ್ತರ ಪ್ರದೇಶದಲ್ಲಿ 1980ರ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಸೋಲುಂಡು, ಕಾಂಗ್ರೆಸ್ ಬಹುಮತಕ್ಕೆ ಬಂದಾಗ ಅಂದಿನ ಕಾಂಗ್ರೆಸ್ಸಿನ ಅಧಿ ನಾಯಕಿ ಇಂದಿರಾಗಾಂಧಿ, ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. 1984ರ ಮಹಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ನೇತೃತ್ವವನ್ನು ರಾಜೀವ್ ಗಾಂಧಿ ವಹಿಸಿದ ಮೇಲೆ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕೇಂದ್ರ ಸಂಪುಟ ಸೇರಿದರು.  ಚಿನ್ನದ ಮೇಲಿನ ತೆರಿಗೆ ಕಡಿಮೆ ಮಾಡಿ ಕಳ್ಳಸಾಗಣೆಗೆ ಕಡಿವಾಣ ಹಾಕಿದರು. ನಂತರ ಅವರಿಗೆ ರಕ್ಷಣಾ ಖಾತೆ ವಹಿಸಲಾಯಿತು. ಇದೇ ಸಂದರ್ಭದಲ್ಲಿ ರಕ್ಷಣಾ ಸಲಕರಣೆ ಖರೀದಿ ವೇಳೆ ನಡೆದ ಬೊಫೋರ್ಸ್ ಫಿರಂಗಿ ಹಗರಣದ ತನಿಖೆಗೆ ಮುಂದಾದ ಹಿನ್ನೆಲೆಯಲ್ಲಿ ರಾಜೀವ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸಂಪುಟದಿಂದ ಹೊರಬರಬೇಕಾಯಿತು. ಇದರಿಂದ ಅಸಮಾಧಾನಗೊಂಡ ಸಿಂಗ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಲಹಾಬಾದ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಜನ್ಮ ದಿನಾಚರಣೆ ಅಂಗವಾಗಿ 1988ರಲ್ಲಿ ಜನಮೋರ್ಚಾ, ಜನತಾ ಪಕ್ಷ, ಲೋಕದಳ, ಕಾಂಗ್ರೆಸ್ (ಎಸ್) ಮೊದಲಾದ ಪಕ್ಷಗಳನ್ನು ಒಂದಾಗಿಸಿ ಜನತಾದಳವನ್ನು ವಿ.ಪಿ. ಹುಟ್ಟುಹಾಕಿದರು. ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ಸಿಂಗ್ 1989ರ ಚುನಾವಣೆಯಲ್ಲಿ ಬಿಜೆಪಿಯ ಬಾಹ್ಯ ಬೆಂಬಲ ಪಡೆದು ಪ್ರಧಾನಿ ಸ್ಥಾನಕ್ಕೆ ಏರಿದರು. ಆದರೆ, ಬಲಪಂಥೀಯ ಚಿಂತನೆಯ ಮೂಲಭೂತವಾದಿ ಹಿಂದೂ ಸಂಘಟನೆಗಳ ಅಯೋಧ್ಯೆ ರಾಮಜನ್ಮ ಭೂಮಿ ವಿವಾದದಲ್ಲಿ ರಾಜಿಯಿಲ್ಲದ ಹೋರಾಟ ನಡೆಸಿದರು. ರಾಮಜನ್ಮ ಭೂಮಿ ರಥಯಾತ್ರೆ ನಡೆಸಿದ್ದ ಎಲ್.ಕೆ. ಅಡ್ವಾಣಿ ಸೇರಿದಂತೆ ಪ್ರಮುಖರ ಬಂಧನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬೆಂಬಲ ಹಿಂದಕ್ಕೆ ಪಡೆದದ್ದರಿಂದ ವರ್ಷದೊಳಗೆ ಸಿಂಗ್ ನೇತೃತ್ವದ ಸರ್ಕಾರ ಕೆಳಗಿಳಿಯಿತು. ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ ಮಂಡಲ್ ವರದಿಯನ್ನು ಮೊತ್ತ ಮೊದಲ ಬಾರಿಗೆ ಅಂಗೀಕರಿಸಿದ ಸಿಂಗ್ ಹಿಂದುಳಿದವರ ಕಲ್ಯಾಣಕ್ಕೆ ಮೀಸಲು ಅನಿವಾರ್ಯ ಎಂಬುದನ್ನು ಪ್ರತಿಪಾದಿಸಿದರು. ಆದರೆ, ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. 2-12-1989 ರಿಂದ  10-11-1990 ರವರೆಗೆ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ರಕ್ಷಣಾ ಸಚಿವ ಮುಫ್ತಿ ಮೊಹಮ್ಮದ್ ಸಹೀದ್ ಅವರ ಮಗಳನ್ನು ಉಗ್ರರು ಅಪಹರಿಸಿದ್ದ ಪ್ರಕರಣದಲ್ಲಿ, ಬಂಧಿತ ಉಗ್ರರನ್ನು ಬಿಡುಗಡೆಗೊಳಿಸಿ ಆಕೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ವಿವಾದಿತ ನಿವೃತ್ತ ಅಧಿಕಾರಿ ಜಗ್‌ಮೋಹನ್ ಅವರನ್ನು ಜಮ್ಮು ಕಾಶ್ಮೀರದ ರಾಜ್ಯಪಾಲರನ್ನಾಗಿ ನೇಮಿಸಿದ ಸಂದರ್ಭದಲ್ಲಿಯೂ ವಿ.ಪಿ. ಸಿಂಗ್ ಸಾಕಷ್ಟು ವಿರೋಧ ಎದುರಿಸಿದ್ದರು.

2008: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿರಾಜಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು ನಸುಕಿನ 3.30ರ ಸುಮಾರಿಗೆ ದೊಡ್ಡಮಳೂರಿನ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 9 ಜನ ಮೃತರಾದರು.

2008: ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಒಂದು ವಾರದಿಂದ ಬಲಗೊಂಡ 'ನಿಶಾ' ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಬಲಿಯಾದವರ ಸಂಖ್ಯೆ 51ಕ್ಕೆ ಏರಿತು.

2007: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸುವುದು ಗಂಭೀರ ಅಪರಾಧ ಎಂದು ಅಭಿಪ್ರಾಯಪಟ್ಟ ದೆಹಲಿ ಹೈಕೋರ್ಟ್, ಈ ಹಗರಣದಲ್ಲಿ ಆರೋಪ ಎದುರಿಸುತ್ತಿರುವ 11 ಸಂಸದರ ಪಾತ್ರ ಅರಿಯಲು ತನಿಖೆ ಆರಂಭಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತು. ಪ್ರಶ್ನೆ ಕೇಳಲು ಲಂಚ ಪಡೆಯುವ ಮೂಲಕ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವವರು ಮತ್ತು ದಲ್ಲಾಳಿಗಳ  ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಮೂರ್ತಿ ಎಸ್.ಎನ್.ಧಿಂಗ್ರಾ ಆದೇಶಿಸಿದರು. ಮಧ್ಯವರ್ತಿಗಳ ಮೂಲಕ ಮೂಲಕ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ವಿಚಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿ ಯೆರವಾಡ  ಜೈಲಿನಲ್ಲಿದ್ದ ಬಾಲಿವುಡ್ ನಟ ಸಂಜಯ ದತ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ವಿಶೇಷ ಟಾಡಾ ನ್ಯಾಯಾಲಯವು ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯಡಿ ದತ್ ಅವರಿಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ದತ್ ಅವರಲ್ಲದೆ ಇತರ 17 ಮಂದಿಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.

2007: ಉಗ್ರವಾದಿಗಳ ವಶದಲ್ಲಿದ್ದ ಪಾಕಿಸ್ಥಾನದ ವಾಯವ್ಯ ಭಾಗದ ಸ್ವಾತ್ ಕಣಿವೆ ಪ್ರದೇಶದಲ್ಲಿ ಅಕ್ರಮವಾಗಿ ಪ್ರಸರಣ ಮಾಡುತ್ತಿದ್ದ ಎಫ್ ಎಂ ವಾಹಿನಿ ಮುಲ್ಲಾ ರೇಡಿಯೋ ಕೇಂದ್ರವನ್ನು ಪಾಕಿಸ್ಥಾನಿ ಸೇನಾಪಡೆ ವಶಪಡಿಸಿಕೊಂಡಿತು. ತಾಲಿಬಾನ್ ಪರವಾದ ಸಾಹಿತ್ಯವನ್ನು ಪ್ರಸಾರ ಮಾಡುತ್ತಿದ್ದ ಈ ವಾಹಿನಿಯನ್ನು ಮೌಲಾನ ಫಾಜ್ಲುಲ್ಲ ನಡೆಸುತ್ತಿದ್ದ. ಈತ ಈ ವಾಹಿನಿಯಲ್ಲಿ ಜೆಹಾದ್ ಪರವಾದ ನಿಲುವನ್ನು ಪ್ರಸಾರ ಮಾಡುತ್ತಿದ್ದ. ಈದಿನ ಕೂಡಾ ಅದರಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸುವ ಬಗ್ಗೆ  ರೇಡಿಯೋ ಪ್ರಸಾರ ಮಾಡಿತ್ತು.

2007: 1992ರಲ್ಲಿ ಅಧಿಕಾರ ಪಡೆಯಲು ಸಂವಿಧಾನವನ್ನು ಮೂಲೆ ಗುಂಪು ಮಾಡಿ ಫ್ಯೂಜಿಮೊ ಅವರಿಗೆ ನೆರವಾದ ಹತ್ತು ಮಂದಿ ಸಚಿವರಿಗೆ ಪೆರುವಿನ ಉಚ್ಚನ್ಯಾಯಾಲಯ ಶಿಕ್ಷೆ ವಿಧಿಸಿತು. ಆಂತರಿಕ ವ್ಯವಹಾರಗಳ ಮಾಜಿ ಸಚಿವ ಜಾನ್ ಬ್ರಿಯೊನ್ಸ್ ಡಾವಿಲ್ಲಾ ಅವರಿಗೆ 10 ವರ್ಷಗಳ ಸೆರೆವಾಸ, ಉಳಿದ ಒಂಬತ್ತು ಮಂದಿ ಸಚಿವರಿಗೆ ತಲಾ 4 ವರ್ಷಗಳ ಸೆರೆವಾಸದ ವಾಸದ ಶಿಕ್ಷೆಯನ್ನು ಉಚ್ಚ ನ್ಯಾಯಾಲಯ ವಿಧಿಸಿತು.

2007: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಈದಿನ ರಾತ್ರಿ ದೆಹಲಿಯಿಂದ  ಬಿಗಿ ಭದ್ರತೆಯ ನಡುವೆ ಅಜ್ಞಾತ ಸ್ಥಳಕ್ಕೆ ತೆರಳಿದರು. ಕೇಂದ್ರ ಸಚಿವ ಸಂಪುಟ ಸಭೆಯ ತರುವಾಯ ಕೆಲವೇ ಕ್ಷಣಗಳಲ್ಲಿ ನಸ್ರೀನ್ ಅವರಿಗೆ ಬಿಗಿ ಭದ್ರತೆ ಒದಗಿಸುವ ತೀರ್ಮಾನ ಸರ್ಕಾರದಿಂದ ಹೊರಬಿತ್ತು. ನಸ್ರೀನ್ ಮೂರು ವರ್ಷಗಳಿಂದ ಕೋಲ್ಕತ್ತದಲ್ಲಿ ನೆಲೆಸಿದ್ದರು. ಆದರೆ ಮುಸ್ಲಿಂ ಸಮುದಾಯದ ವಿರೋಧದ ಕಾರಣ ಅಲ್ಲಿನ ಸರ್ಕಾರ ನಸ್ರೀನ್ ಅವರನ್ನು ಜೈಪುರಕ್ಕೆ ಕಳುಹಿಸಿತ್ತು. ಅಲ್ಲಿಯೂ ಅವರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದಾಗ ಅವರ ವಾಸ್ತವ್ಯ ಅಲ್ಲಿಂದ ದೆಹಲಿಗೆ ವರ್ಗಾವಣೆಗೊಂಡಿತ್ತು.

2007: ಗೃಹೋಪಯೋಗಿ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಯಲ್ಲಿ ಇರುವ ವಿಡಿಯೊಕಾನ್,  `ಜಾಗತಿಕ ಸ್ಯಾಪ್ ಏಸ್-2007' ಪ್ರಶಸ್ತಿಗೆ ಭಾಜನವಾಯಿತು. ವಿಡಿಯೊಕಾನ್ ಅನೇಕ ಗ್ರಾಹಕ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಂಡಿರುವ ದೇಶದ ಪ್ರಥಮ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿದ್ದ ಒಟ್ಟು 120 ದೇಶಗಳ 34,600 ಸಂಸ್ಥೆಗಳ ತೀವ್ರ ಸ್ಪರ್ಧೆಯಲ್ಲಿ ಈ  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

2007: ಜಾಗತಿಕ ವಾಣಿಜ್ಯ ಪತ್ರಿಕೆ  `ಫಾರ್ಚೂನ್' ಪಟ್ಟಿ ಮಾಡಿದ ವಿಶ್ವದ ಅತಿ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ಟಾಟಾ ಸಮೂಹದ ಉದ್ದಿಮೆಗಳ ಮುಖ್ಯಸ್ಥರಾದ ರತನ್ ಟಾಟಾ, ಭಾರತೀಯ ಮೂಲದ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್, ಪೆಪ್ಸಿ ಕಂಪೆನಿ ಸಿಇಒ ಇಂದ್ರಾ ನೂಯಿ ಸಹ ಜಾಗ ಗಿಟ್ಟಿಸಿದರು. ಮತ್ತೊಂದು ಜಾಗತಿಕ ವಾಣಿಜ್ಯ ಪತ್ರಿಕೆ `ಫೋರ್ಬ್ಸ್' ಈ ತಿಂಗಳ ಆರಂಭದಲ್ಲಿ ಭಾರತೀಯ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ `ಫಾರ್ಚೂನ್' ಹೊಸ ಪಟ್ಟಿ ಬಿಡುಗಡೆ ಮಾಡಿತು.

2006: ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ-2' ಕ್ಷಿಪಣಿಯನ್ನು ಒರಿಸ್ಸಾ ಕಡಲ ತೀರದ ಎರಡು ಪ್ರತ್ಯೇಕ ಉಡಾವಣಾ ವಲಯದಿಂದ ಯಶಸ್ವಿಯಾಗಿ ಪ್ರಯೋಗಿಸುವಲ್ಲಿ ವಿಜ್ಞಾನಿಗಳು ಸಫಲರಾದರು. ಪ್ರಥಮ ಗುರಿ ನಿರ್ದೇಶಿತ ಚಂಡಿಪುರದ ಉಡಾವಣಾ ಪ್ರದೇಶದಿಂದ ಬೆಳಗ್ಗೆ 10.15ಕ್ಕೆ ಪ್ರಯೋಗಿಸಿದರೆ, ಈ ಕ್ಷಿಪಣಿಯನ್ನು ಆಕಾಶಮಾರ್ಗದಲ್ಲಿಯೇ ತಡೆದು ನಾಶಗೊಳಿಸುವ ಉದ್ಧೇಶದ ಇನ್ನೊಂದು ಕ್ಷಿಪಣಿಯನ್ನು 60 ಕ್ಷಣಗಳ ಬಳಿಕ ಬಂಗಾಳಕೊಲ್ಲಿ ಸಮುದ್ರದಲ್ಲಿನ ಉಡಾವಣಾ ಕೇಂದ್ರದಿಂದ ಹಾರಿಸಲಾಯಿತು. ಆಕಾಶ ಮಾರ್ಗದಲ್ಲಿಯೇ ದಾಳಿ ಉದ್ದೇಶದ ಕ್ಷಿಪಣಿಯನ್ನು ಈ ಕ್ಷಿಪಣಿಯು ನಿಖರವಾಗಿ ಗುರುತಿಸಿ ನಾಶಪಡಿಸಿತು. ಇದರೊಂದಿಗೆ ಮಾರ್ಗ ಮಧ್ಯದಲ್ಲಿಯೇ ಕ್ಷಿಪಣಿ ನಡೆಯ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಧಿಸಿತು.

 2006: ಬಾಲಿವುಡ್ಡಿನ  ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯ ರೈ ಮದುವೆ ಆಗಿದ್ದಾರೆಂಬ ಗಾಳಿ ಸುದ್ದಿಗಳ ಮಧ್ಯೆ ಇವರಿಬ್ಬರೂ ಈದಿನ `ಬ್ರಾಹ್ಮೀ ಮುಹೂರ್ತ'ದಲ್ಲಿ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನಿಗೆ ಜೊತೆಯಾಗಿ ಪೂಜೆ ಸಲ್ಲಿಸಿದರು. ಕುಟುಂಬ ಸದಸ್ಯರ ಜೊತೆಗೆ ಸಂಕಟಮೋಚನ ದೇವಾಲಯ ಹಾಗೂ ಹನುಮಾನ್ ದೇವಾಲಯದಲ್ಲೂ ಅವರು ಪೂಜೆ ಸಲ್ಲಿಸಿದರು. ಈ ಜೋಡಿಯ ವಿವಾಹ ಬಂಧನಕ್ಕೆ ಐಶ್ವರ್ಯ ರೈ ಜಾತಕದ `ಕುಜ ದೋಷ'ದಿಂದ ಇದೆಯೆನ್ನಲಾದ ವಿಘ್ನ ನಿವಾರಣೆಗೆ ಈ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಲಾಯಿತು.

2006: ಬೆಂಗಳೂರು ರೈಲು ನಿಲ್ದಾಣದಲ್ಲಿ 50 ಪೈಸೆ, ಒಂದು ಹಾಗೂ ಎರಡು ರೂಪಾಯಿ ಮತ್ತು 5 ರೂಪಾಯಿ ನಾಣ್ಯಗಳನ್ನು ಹಾಕಿ ಪ್ಲಾಟ್ ಫಾರಂ ಟಿಕೆಟ್ ಪಡೆಯುವ ವಿಶೇಷ ಯಂತ್ರಗಳನ್ನು ಅಳವಡಿಸಲಾಯಿತು. ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಮಹೇಶ ಮಂಗಲ್ ಈ ಯಂತ್ರಗಳನ್ನು ಉದ್ಘಾಟಿಸಿದರು.

2006: ಮಹದಾಯಿ ಜಲವಿವಾದ ಇತ್ಯರ್ಥಕ್ಕೆ ನ್ಯಾಯ ಮಂಡಳಿ ರಚಿಸಲು ಕೇಂದ್ರ ಜಲ ಸಂಪನ್ಮೂಲಕ ಇಲಾಖೆ ನಿರ್ಧರಿಸಿದೆ ಎಂದು  ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ. ವೋಹ್ರಾ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದರು. ಇದರಿಂದ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಹೊರಟ ಕರ್ನಾಟಕದ ಪ್ರಯತ್ನಕ್ಕೆ ಹಿನ್ನಡೆಯಾಯಿತು.

2006: ಟೆಹರಾನಿನ ಮೆಹರಾಬಾದ್ ವಿಮಾನ ನಿಲ್ದಾಣದಲ್ಲಿ ಗಗನಕ್ಕೆ ಏರಿದ ಇರಾನ್ ಸೇನಾ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 38 ಮಂದಿ ಮೃತರಾದರು.

2005: ಫ್ರಾನ್ಸ್ ದೇಶದ ಪ್ಯಾರಿಸ್ಸಿನ ಎಮೈನ್ಸ್ ವಿಶ್ವವಿದ್ಯಾಲಯದಲ್ಲಿ ವಿಶ್ವದ ಮೊತ್ತ ಮೊದಲ ಮುಖಕಸಿ ನಡೆಯಿತು. 1998ರಲ್ಲಿ ವಿಶ್ವದ ಮೊತ್ತ ಮೊದಲ ಕೈ ಕಸಿ ಮಾಡಿದ್ದ ಜೀನ್ ಮೈಕಲ್ ಡುಬರ್ನಾರ್ಡ್ ಹಾಗೂ ಮುಖ ಶಸ್ತ್ರಚಿಕಿತ್ಸಕ ಬರ್ನಾರ್ಡ್ ದೆವಾವುಚೆಲ್ಲೆ ಮಹಿಳೆಯೊಬ್ಬಳಿಗೆ ಮುಖಕಸಿ ಶಸ್ತ್ರಚಿಕಿತ್ಸೆ ನಡೆಸಿದರು. ನಾಯಿ ಕಚ್ಚಿದ್ದರಿಂದ ಮೂಗು, ತುಟಿ ಹರಿದು ಹೋಗಿದ್ದ ಮಹಿಳೆಗೆ ವೈದ್ಯರ ತಂಡ ಆಗಷ್ಟೇ ಮೃತನಾಗಿದ್ದ ವ್ಯಕ್ತಿಯೊಬ್ಬನ ಮುಖದ ಭಾಗವನ್ನು ತೆಗೆದು ಕಸಿ ಮಾಡಿತು.

2005: ಎರಡನೇ ಜಾಗತಿಕ ಯುದ್ಧದ ಕಾಲದಲ್ಲಿ ಸ್ಫೋಟಗೊಳ್ಳದೇ ಉಳಿದಿದ್ದ ಭಾರಿ ಬಾಂಬ್ ಜಪಾನಿನ ಟೋಕಿಯೋದ ಜನವಸತಿ ಪ್ರದೇಶ ಕಾತ್ಸುಶಿಕಾದಲ್ಲಿ ಪತ್ತೆಯಾಯಿತು. ಯುದ್ಧಕಾಲದಲ್ಲಿ ಅಮೆರಿಕ ಎಸೆದಿತ್ತು ಎನ್ನಲಾಗಿರುವ ಈ ಬಾಂಬ್ 250 ಕಿಲೋ ಗ್ರಾಂ ಭಾರ, 36 ಸೆಂ.ಮೀ ವ್ಯಾಸ ಹಾಗೂ 120 ಸೆಂ.ಮೀ ಉದ್ದವಿತ್ತು. ಈ ಬಾಂಬ್ ತೆರವುಗೊಳಿಸುವ ಸಲುವಾಗಿ 4000 ಜನರನ್ನು ಸ್ಥಳಾಂತರಿಸಲಾಯಿತು.

2005: ಚೀನಾದ ಹರ್ಬಿನ್ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟದಲ್ಲಿ 88 ಜನ ಮೃತರಾಗಿ 36ಕ್ಕೂ ಹೆಚ್ಚು ಜನ ಗಾಯಗೊಂಡರು.

2000: ಜಗತ್ತಿನ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವು ನಾರ್ವೆಯ ರಾಜಧಾನಿ ಓಸ್ಲೋದಿಂದ ವಾಯವ್ಯಕ್ಕೆ 300 ಕಿಮೀ ದೂರದ ಲಾಯೆರ್ಡಾಲಿನಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಇದರ ಉದ್ದ 24.5 ಕಿ.ಮೀ.ಗಳು. 16.9 ಕಿ.ಮೀ. ಉದ್ದದ ಸ್ವಿಸ್ ಆಲ್ಪ್ಸ್ ನ ಸೇಂಟ್ ಗೊಥಾರ್ಡ್ ಸುರಂಗವನ್ನು ಇದು ಮೀರಿಸಿತು.

1981: ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರವು ಅಂಗೀಕರಿಸಿತು. ವರದಿಯ ಶಿಫಾರಸು ಪ್ರಕಾರ ರಾಜ್ಯದಲ್ಲಿ ಪ್ರೌಢಶಾಲೆಗಳಲ್ಲಿ ಕನ್ನಡವು ಪ್ರಥಮ ಕಡ್ಡಾಯ ಕಲಿಕೆ ಭಾಷೆ ಆಗಲಿದೆ.

1979: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊತ್ತ ಮೊದಲ ಅಧಿಕೃತ ಏಕದಿನ ಅಂತಾರಾಷ್ಟ್ರೀಯ ಪಂದ್ಯವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ವಿಶ್ವ ಕ್ರಿಕೆಟ್ ಸರಣಿ ವಿಭಜನೆಗೊಂಡ ಬಳಿಕ ಮತ್ತೆ ಒಗ್ಗೂಡಿದ ಆಸ್ಟ್ರೇಲಿಯಾ ಪಾಲಿನ ಮೊತ್ತ ಮೊದಲಿನ ಪಂದ್ಯ ಇದು.

1958: ಸಾಹಿತಿ ಪ್ರೇಮಮಯಿ ಜನನ.

1954: ಸಾಹಿತಿ ಕೊಂಡಜ್ಜಿ ವೆಂಕಟೇಶ ಜನನ.

1953: ಅಮೆರಿಕನ್ ನಾಟಕಕಾರ ಯುಗೇನ್ ಒ'ನೀಲ್ ಅವರು ಬೋಸ್ಟನ್ನಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ನ್ಯೂಯಾರ್ಕ್ ನಗರದ ಬ್ರಾಡ್ವೇಯ ಹೊಟೇಲ್ ಒಂದರ ಕೊಠಡಿಯಲ್ಲಿ ಹುಟ್ಟಿದ ನೀಲ್ ಸತ್ತದ್ದು ಕೂಡಾ ಬೋಸ್ಟನ್ನಿನ ಹೊಟೇಲಿನಲ್ಲಿಯೇ!

1940: ಮಾರ್ಷಲ್ ಆರ್ಟ್ಸ್ ನಿಪುಣ ಹಾಗೂ ನಟ ಬ್ರೂಸ್ ಲೀ (1940-1973) ಹುಟ್ಟಿದ ದಿನ. `ಎಂಟರ್ ದಿ ಡ್ರ್ಯಾಗನ್' ಚಿತ್ರ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1932: ಫಿಲಿಪ್ಪೈನ್ಸಿನ ಬಿ.ಎಸ್. ಅಕ್ವಿನೊ ಜ್ಯೂನಿಯರ್ (1932-1983) ಹುಟ್ಟಿದ ದಿನ. ಅಧ್ಯಕ್ಷ ಫರ್ಡಿನಾಂಡ್ ಇ. ಮಾರ್ಕೋಸ್ ನೇತೃತ್ವದಲ್ಲಿ ಫಿಲಿಪ್ಪೈನ್ಸಿನಲ್ಲಿ ಮಾರ್ಷಲ್ ಲಾ ಆಡಳಿತ ಇದ್ದಾಗ ಇವರು ಮುಖ್ಯ ವಿರೋಧಿ ನಾಯಕರಾಗಿದ್ದರು. 1983ರಲ್ಲಿ ಇವರ ಹತ್ಯೆ ನಡೆಯಿತು.

1915: ಜೈನ ಸಾಹಿತ್ಯ ಭೂಷಣ, ಸಿದ್ಧಾಂತ ಶಿರೋಮಣಿ ಪದ್ಮನಾಭ ಶರ್ಮ ಅವರು ದೇವಚಂದ್ರ ಜೋಯಿಸರು- ಚಂದ್ರಮತಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿಯಲ್ಲಿ ಜನಿಸಿದರು.

1871: ಇಟಲಿಯ ಭೌತತಜ್ಞ ಗಿಯೋವನ್ನಿ ಗಿಯೋರ್ಗಿ (1871-1950) ಹುಟ್ಟಿದ ದಿನ. ಇವರು `ಗಿಯೋರ್ಗಿ ಇಂಟರ್ ನ್ಯಾಷನಲ್ ಸಿಸ್ಟಮ್ ಆಫ್ ಮೆಷರ್ ಮೆಂಟ್ (ಇದಕ್ಕೆ ಮೆಕ್ಸ ಸಿಸ್ಟಮ್ ಎಂಬ ಹೆಸರೂ ಇದೆ) ಮೂಲಕ ಖ್ಯಾತರಾಗಿದ್ದಾರೆ. ಮೀಟರ್, ಕಿಲೋಗ್ರಾಂ, ಸೆಕಂಡ್ ಮತ್ತು ಜೂಲ್ಸ್ ಇವುಗಳನ್ನು ಒಳಗೊಂಡ ವೈಜ್ಞಾನಿಕ ಮಾಪಕ ಯುನಿಟ್ಟುಗಳೆಂದು ಪರಿಗಣಿಸಲಾದ ಈ ಸಿಸ್ಟಮನ್ನು 1960ರಲ್ಲಿ ತೂಕ ಮತ್ತು ಅಳತೆಯ ಸಾಮಾನ್ಯ ಸಮ್ಮೇಳನ ಅನುಮೋದಿಸಿತು.

1701: ಖಗೋಳ ತಜ್ಞ ಆಂಡರ್ಸ್ ಸೆಲ್ಸಿಯಸ್ (1701-1744) ಹುಟ್ಟಿದ ದಿನ. ಈತ ಸೆಲ್ಸಿಯಸ್ ಥರ್ಮಾಮೀಟರ್ ಸ್ಕೇಲ್ ಸಂಶೋಧಿಸಿದ ವ್ಯಕ್ತಿ. ಈ ಮಾಪಕವನ್ನು `ಸೆಂಟಿಗ್ರೇಡ್ ಸ್ಕೇಲ್' ಎಂಬುದಾಗಿಯೂ ಕರೆಯಲಾಗುತ್ತದೆ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment