Wednesday, May 3, 2017

ಚಂದ್ರ, ಮಂಗಳಗ್ರಹದಲ್ಲಿ ಆಹಾರ ಬೆಳೆಯಬಹುದು!

ಚಂದ್ರ, ಮಂಗಳಗ್ರಹದಲ್ಲಿ 
ಆಹಾರ ಬೆಳೆಯಬಹುದು!

ಇದಕ್ಕಾಗಿಯೇ ವಿಶಿಷ್ಟ ಗ್ರೀನ್ ಹೌಸ್ ಮಾದರಿ ರೂಪಿಸಿದ ನಾಸಾ
ವಾಷಿಂಗ್ಟನ್: ಚಂದ್ರ ಇಲ್ಲವೇ ಮಂಗಳದಂತಹ ಗ್ರಹಗಳಲ್ಲಿ ಗಗನಯಾತ್ರಿಗಳು ಸ್ವತಃ ತಾಜಾ ಆಹಾರ ಬೆಳೆಯುವಂತಹ ದಿನಗಳು ಬರಲಿವೆ.

ನಾಸಾದ ವಿಜ್ಞಾನಿಗಳ ತಂಡವೊಂದು ಗಿಡ ಹಾಗೂ ಬೆಳೆಗಳನ್ನು ಬೆಳೆಯಬಹುದಾದಂತಹ ಗ್ರೀನ್ ಹೌಸ್ (ಹಸಿರುಮನೆ) ಮಾದರಿಯನ್ನು ವಿನ್ಯಾಸಗೊಳಿಸಿದೆ.
ಈ ಹಸಿರುಮನೆಯಲ್ಲಿ ಪುಟ್ಟ ಗಿಡ, ತರಕಾರಿಗಳನ್ನು ಬೆಳೆಯಲು ಸಾಧ್ಯವಾಗಲಿದ್ದು ಆಮ್ಲಜನಕದ ಉತ್ಪಾದನೆಯೂ ಸಾಧ್ಯವಾಗಲಿದೆ.
(ಹೆಚ್ಚಿನ ವಿವರಕ್ಕೆ: www.paryaya.com)

Monday, May 1, 2017

ಸೇಡು ತೀರಿಸಿದ ಭಾರತ,
7 ಪಾಕ್ ಸೈನಿಕರ ಹತ್ಯೆ

ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಸೋಮವಾರ, 01 ಮೇ 2017ರ ಬೆಳಗ್ಗೆ ಕೊಂದು ಛಿದ್ರಗೊಳಿಸಿದ ಪಾಕಿಸ್ತಾನದ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ರಾತ್ರಿ ಪಾಕಿಸ್ತಾನದ ಎರಡು ಬಂಕರುಗಳನ್ನು ಪುಡಿಗಟ್ಟಿ, 7 ಪಾಕ್ ಸೈನಿಕರನ್ನು ಕೊಲ್ಲುವ ಮೂಲಕ ಭಾರತ ಸೇಡು ತೀರಿಸಿಕೊಂಡಿತು.
ಪ್ರಾಥಮಿಕ ವರ್ತಮಾನದ ಪ್ರಕಾರ ಜಮ್ಮುವಿನ ಮೆಂಧರಿನ ಕೃಷ್ಣ ಘಾಟಿಗೆ ಎದುರಿನಲ್ಲಿರುವ ಕಿರ್ಪಾಣ್ ಮತ್ತು ಪಿಂಪ್ಲ್ ಹೊರಠಾಣೆಗಳನ್ನು ಭಾರತ ಸೇನೆ ಧ್ವಂಸಗೊಳಿಸಿದೆ.
Read more in www.paryaya.com