ಯಕ್ಷಮಕ್ಕಳ ಬಣ್ಣದಾಟ ಸಡಗರ
ಬೆಂಗಳೂರಿನ ಯಕ್ಷ ಕಲಾ ಕೌಸ್ತುಭದ ಮಕ್ಕಳು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹೋಳಿ ಆಚರಿಸಿ ಸಂಭ್ರಮಿಸಿದರು.
ಮಕ್ಕಳ ಜೊತೆಗೆ ಅವರ ತಾಯಂದಿರು, ಯಕ್ಷ ಕಲಾ ಕೌಸ್ತುಭದ ಯಕ್ಷ ಗುರು ಉಮೇಶ ರಾಜ್ ಮಂದಾರ್ತಿ ಅವರೂ ಬಣ್ಣದಾಟದಲ್ಲಿ ಪಾಲ್ಗೊಂಡು ಮಕ್ಕಳ ಖುಷಿಯನ್ನು ಹೆಚ್ಚಿಸಿದರು.
ಈ ಸಂದರ್ಭದ ವಿಡಿಯೋ ತುಣುಕುಗಳನ್ನು ಜೋಡಿಸಿ ಅದಕ್ಕೆ ಹಿನ್ನೆಲೆ ಸಂಗೀತವನ್ನು ಜೋಡಿಸಿದವರು ಈ ತಂಡದಲ್ಲಿ ತಮ್ಮ ಮಕ್ಕಳ ಜೊತೆಗೆ ಸ್ವತಃ ಹೆಜ್ಜೆ ಹಾಕುತ್ತಿರುವ ಎನ್. ಉಮಾದೇವಿ ನೆಟ್ಟಾರು ಅವರು.
ವಿಡಿಯೋಗಳನ್ನು ಕೆಳಗೆ 👇 ನೋಡಿ ಆನಂದಿಸಿ. ವಿವರಗಳಿಗೆ ಪರ್ಯಾಯ.ಕಾಮ್ ವೆಬ್ ಸೈಟಿನ ಯಕ್ಷಗಾನ/ ತಾಳಮದ್ದಳೆ ಪುಟ ವೀಕ್ಷಿಸಿ

No comments:
Post a Comment