ಕ್ರೀಡಾಪಟುಗಳತ್ತ ಕ್ರೀಡಾಕಿಟ್ ಎಸೆದ ಸಚಿವ ದೇಶಪಾಂಡೆ
ಬೆಂಗಳೂರು: ಕರ್ನಾಟಕದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಹಳಿಯಾಳದಲ್ಲಿ ನಡೆದ ಸಮಾರಂಭ ಒಂದರಲ್ಲಿ ಪಲಾನುಭವಿಗಳತ್ತ ಕ್ರೀಡಾ ಕಿಟ್ ಎಸೆದ ವಿಡಿಯೋ 2018ರ ನವೆಂಬರ್ 1ರ ಗುರುವಾರ ವೈರಲ್ ಆದ ಹಿನ್ನೆಲೆಯಲ್ಲಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಸಚಿವರ ಕ್ಷೇತ್ರವಾದ ಹಳಿಯಾಳದಲ್ಲಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ 2018ರ ಅಕ್ಟೋಬರ್ 31ರ ಬುಧವಾರ ನಡೆದ ಸಮಾರಂಭದಲ್ಲಿ ಈ ಘಟನೆ ಘಟಿಸಿತ್ತು. ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ಧ ಸ್ಥಳೀಯ ಕ್ರೀಡಾಪಟುಗಳನ್ನು ಗೌರವಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತುಕೊಂಡಿದ್ದ ಸಚಿವರು ಫಲಾನುಭವಿಗಳತ್ತ ಕ್ರೀಡಾ ಕಿಟ್ ಗಳನ್ನು ಎಸೆಯುತ್ತಿದ್ದ ದೃಶ್ಯ ವಿಡಿಯೋದಲ್ಲಿ ದಾಖಲಾಗಿತ್ತು. ಗುರುವಾರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ಪಡೆಯಲು ಸಚಿವರನ್ನು ಸಂಪರ್ಕಿಸುವ ಯತ್ನ ಫಲಿಸಲಿಲ್ಲ ಎಂದು ವರದಿ ತಿಳಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಇಂತಹುದೇ ಘಟನೆಯೊಂದರಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಕೊಡಗಿನಲ್ಲಿ ಪ್ರವಾಹ ಸಂತ್ರಸ್ಥರ ಶಿಬಿರದಲ್ಲಿ ಆಹಾರದ ಪೊಟ್ಟಣಗಳನ್ನು ಎಸೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಚಿವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು.
ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ.
No comments:
Post a Comment