ಸುಕ್ಮಾಗುಂಡಿನ ಘರ್ಷಣೆ: 2 ಪೊಲೀಸ್, 9 ಮಾವೋವಾದಿಗಳ
ಸಾವು
ರಾಯ್ ಪುರ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ರಾಜ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾದರೆ, 9 ಮಂದಿ ಮಾವೋವಾದಿ ನಕ್ಸಲೀಯರು ಹತರಾಗಿದ್ದಾರೆ.
ರಾಯ್ ಪುರ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ರಾಜ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾದರೆ, 9 ಮಂದಿ ಮಾವೋವಾದಿ ನಕ್ಸಲೀಯರು ಹತರಾಗಿದ್ದಾರೆ.
ಕಿಸ್ತಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಸಕ್ಲರ್ ಗ್ರಾಮದ
ಸಮೀಪ ಈ ಗುಂಡಿನ ಘರ್ಷಣೆ ಸಂಭವಿಸಿತು.
ಈವರೆಗೆ ಒಟ್ಟು 9 ಮಾವೋವಾದಿಗಳ ಶವ ನಮಗೆ ಲಭಿಸಿದೆ. ಈ
ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ (ನಕ್ಸಲ್ ನಿಗ್ರಹ
ಕಾರ್ಯಾಚರಣೆ) ಡಿ.ಎಂ. ಅವಸ್ತಿ ಹೇಳಿದರು.
ಜಿಲ್ಲಾ ಮೀಸಲು ಗಾರ್ಡ್ (ಡಿಆರ್ ಜಿ), ಸಿಆರ್ ಪಿ ಎಫ್
ಮತ್ತು ವಿಶೇಷ ಕಾರ್ಯಪಡೆಗಳ (ಎಸ್ ಟಿಎಫ್) ಜಂಟಿ ತಂಡ ಪ್ರದೇಶಕ್ಕೆ ಮುತ್ತಿಗೆ ಹಾಕಿದ್ದು ಘರ್ಷಣೆ
ಮುಂದುವರೆದಿದೆ ಎಂದು ಅವರು ನುಡಿದರು.
ಮಾವೊವಾದಿಗಳ ಜೊತೆಗಿನ ಘರ್ಷಣೆಯಲ್ಲಿ ಇಬ್ಬರು ಡಿಆರ್ ಜಿ
ಸಿಬ್ಬಂದಿ ಹುತಾತ್ಮರಾದರು ಎಂದು ಅವರು ಹೇಳಿದರು.
No comments:
Post a Comment