ನಾನು ಮೆಚ್ಚಿದ ವಾಟ್ಸಪ್

Friday, November 23, 2018

ಇಂದಿನ ಇತಿಹಾಸ History Today ನವೆಂಬರ್ 23

ಇಂದಿನ ಇತಿಹಾಸ History Today ನವೆಂಬರ್ 23
2018: ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ ಬೆಹರಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಜೊತೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಕಾಶ್ಮೀರದರೈಸಿಂಗ್ ಕಾಶ್ಮೀರ್ ಪತ್ರಿಕಾ ಸಂಪಾದಕ ಶುಜಾತ್ ಬುಖಾರಿ ಕೊಲೆಗಡುಕ ಸೇರಿದಂತೆ ಲಷ್ಕರ್- -ತೊಯ್ಬಾ ಮತ್ತು ಹಿಜ್ಬಲ್ ಮುಜಾಹಿದೀನ್ ಸಂಘಟನೆಗಳಿಗೆ ಸೇರಿದ ಮಂದಿ ಉಗ್ರಗಾಮಿಗಳು ಹತರಾದರು.  ‘ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಮುಖ್ಯ ಸಂಪಾದಕ ಬುಖಾರಿ ಅವರ ಹತ್ಯೆ ಪ್ರಕರಣದಲ್ಲಿ ಆಜಾದ್ ಮಲಿಕ್ ಎಂಬ ಭಯೋತ್ಪಾದಕ ಮುಖ್ಯ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದರು. ೫೦ರ ಹರೆಯದ ಸಂಪಾದಕನ ಮೇಲೆ ಶ್ರೀನಗರದಲ್ಲಿ ಮೋಟಾರ್ ಸೈಕಲ್ನಲ್ಲಿ ಬಂದಿದ್ದ ಸಶಸ್ತ್ರಧಾರಿ ವ್ಯಕ್ತಿಗಳು ಜೂನ್ ೧೪ರಂದು, ಈದ-ಉಲ್-ಫಿತರ್ ಮುನ್ನಾದಿನ ತಮ್ಮ ಕಾರು ಏರುವ ವೇಳೆಯಲ್ಲಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಬುಖಾರಿ ಅವರ ಇಬ್ಬರು ಅಂಗರಕ್ಷಕರೂ ಸಾವನ್ನಪ್ಪಿದ್ದರು.ಬೆಜ್ ಬೆಹರಾ ಗುಂಡಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ಇತರ ಉಗ್ರಗಾಮಿಗಳನ್ನು ಉನೈಸ್ ಶಫಿ, ಶಾಹಿದ್ ಬಶೀರ್, ಬಸಿತ್ ಇಸ್ತಿಯಾಕ್, ಅಖಿಬ್ ನಜರ್ ಮತ್ತು ಫಿರ್ದುವಸ್ ನಜರ್ ಎಂಬುದಾಗಿ ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಎಲ್ಲ ಆರು ಮಂದಿ ಕೂಡಾ ವಿವಿಧ ಭಯೋತ್ಪಾದಕ ಅಪರಾಧಗಳಿಗೆ ಸಂಬಂಧಿಸಿದಂತೆ ಬೇಕಾದ ವ್ಯಕ್ತಿಗಳಾಗಿದ್ದರು ಎಂದು ಪೊಲೀಸರು ಹೇಳಿದರು. ಭಾರತೀಯ ಸೇನೆ ಮತ್ತು ರಾಜ್ಯ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಉಗ್ರಗಾಮಿಗಳು ಭದ್ರತಾ ಪಡೆಗಳ ಜೊತೆ ಗುಂಡಿನ ಘರ್ಷಣೆ ಆರಂಭಿಸಿದ್ದರು"ಗುಂಡಿನ ಘರ್ಷಣೆ ಸಂಭವಿಸಿದ ಸ್ಥಳದಲ್ಲಿ ಯುದ್ಧಕಾಲದಲ್ಲಿ ಬಳಸುವಂತಹ ಬಳಸುವಂತಹ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮದ್ದುಗುಂಡನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರ ರಾಜೇಶ್ ಕಾಲಿಯಾ ಹೇಳಿದರುಆರು ಅಥವಾ ಏಳು ಉಗ್ರಗಾಮಿಗಳು  ಸೀಕ್ಪೋರಾ  ಹಳ್ಳಿಯಲ್ಲಿ ಅಡಗಿಕೊಂಡಿದ್ದಾರೆ ಎಂಬ ವಿಶ್ವಸನೀಯ ಮಾಹಿತಿಯ ಮೇರೆಗೆ ಸ್ಥಳಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದರು.ಇದಕ್ಕೆ ಮುನ್ನ ಇನ್ನೊಂದು ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ  ಕುಲಗಂನ ಖುದ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಘರ್ಷಣೆ  ಸಂಭವಿಸಿ, ಒಬ್ಬ ನಾಗರಿಕ ಮೃತನಾಗಿದ್ದು, ಹಲವರು ಗಾಯಗೊಂಡಿದ್ದರು. ಶೋಧ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದವು.ಇಂತಹುದೇ ಇನ್ನೊಂದು ಕಾರ್ಯಾಚರಣೆಯಲ್ಲಿ ನೆರೆಯ ಶೋಪಿಯಾನ್ ಜಿಲ್ಲೆಯಲ್ಲಿ ನಾಲ್ವರು ಉಗ್ರಗಾಮಿಗಳನ್ನು ಕೊಲ್ಲಲಾಗಿತ್ತು.ನವೆಂಬರ್ ೧೮ ರಂದು ಶೋಪಿಯಾನ್ ಜಿಲ್ಲೆಯ ಜೈನಪೊರಾ ಗ್ರಾಮದ ರೆಬ್ಬಾನ್  ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಉಗ್ರಗಾಮಿಗಳು ೧೯ ವರ್ಷದ ಹದಿಹರೆಯದ ಯುವಕನನ್ನು ಅಪಹರಿಸಿ ಕೊಂದ ಘಟನೆಯ ಬಳಿಕ  ಗುಂಡಿನ ಘರ್ಷಣೆ ಸಂಭವಿಸಿತ್ತು.ಭಯೋತ್ಪಾದಕರು ಪ್ರದೇಶದಲ್ಲಿ ಅವಿತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಲಭಿಸಿದ್ದನ್ನು ಅನುಸರಿಸಿ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು."ಶೋಧ ಕಾರ್ಯಾಚರಣೆಯು ನಡೆಯುತ್ತಿದ್ದಾಗ ಅಡಗಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು. ಭದ್ರತಾ ಸಿಬ್ಬಂದಿಯೂ  ಗುಂಡಿನ ಉತ್ತರ ನೀಡಿದರು. ಬಳಿಕ ನಡೆದ ಗುಂಡಿ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು ಎಂದು ಪೊಲೀಸರು ಹೇಳಿದರು.

2018: ನವದೆಹಲಿ: ಹಿಂದುತ್ವದ ಬಗ್ಗೆ ಮಾತನಾಡಲು ಬ್ರಾಹ್ಮಣರು ಮಾತ್ರ ಅರ್ಹರು. ಧರ್ಮದ ಬಗ್ಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರಿಗೆ ಏನು ಅಧಿಕಾರವಿದೆ ಎಂಬುದಾಗಿ ಪಕ್ಷದ ನಾಯಕ ಸಿ.ಪಿ. ಜೋಶಿ ಪ್ರಶ್ನಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಪಕ್ಷ ನಾಯಕನನ್ನು ಝಾಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೋಶಿ ಅವರು ಕ್ಷಮೆಯಾಚಿಸುವಂತೆ ಮಾಡಿದ ಘಟನೆ ಘಟಿಸಿತು. ಜೋಶಿ ಹೇಳಿಕೆಗೆ ತಮ್ಮ ಸ್ಪಷ್ಟ ಅಸಮಾಧಾನವನ್ನು ವ್ಯಕ್ತ ಪಡಿಸಿದ ರಾಹುಲ್ ಗಾಂಧಿ ಹೇಳಿಕೆಯು ಕಾಂಗ್ರೆಸ್ ಪಕ್ಷದ ತತ್ವಾದರ್ಶಗಳಿಗೆ ತದ್ದಿರುದ್ಧವಾಗಿದೆ ಎಂದು ಹರಿಹಾಯ್ದರು.ಪಕ್ಷ ನಾಯಕರು ಸಮಾಜದ ಯಾವುದೇ ವರ್ಗಕ್ಕೆ ನೋವಾಗುವಂತಹ ಹೇಳಿಕೆಗಳನ್ನು ನೀಡಬಾರದು. ಕಾಂಗ್ರೆಸ್ ತತ್ವಗಳು ಮತ್ತು ಕಾರ್ಯಕರ್ತರ ಸ್ಫೂರ್ತಿಯನ್ನು ಗೌರವಿಸುವಲ್ಲಿ ಜೋಶಿಜಿ ಅವರು ತಾವು ಮಾಡಿದ ತಪ್ಪನ್ನು ಖಂಡಿತವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರುವೆ. ತಮ್ಮ ಹೇಳಿಕೆಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರುರಾಹುಲ್ ಟ್ವೀಟ್ ಪ್ರಕಟಗೊಂಡ ಬೆನ್ನಲ್ಲೇ ಜೋಶಿ ಅವರು ತಮ್ಮ ಹೇಳಿಕೆಗಾಗಿ ವಿಷಾದ ವ್ಯಕ್ತ ಪಡಿಸಿದರು. ’ಕಾಂಗ್ರೆಸ್ ತತ್ವಗಳು ಮತ್ತು ಪಕ್ಷ ಕಾರ್ಯಕರ್ತರ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾನು ನನ್ನ ಹೇಳಿಕೆಯಿಂದ ಸಮಾಜದ ಯಾವುದಾದರೂ ವರ್ಗಕ್ಕೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಜೋಶಿ ಟ್ವೀಟ್ ಮಾಡಿದರುರಾಜಸ್ಥಾನದಲ್ಲಿ ಚುನಾವಣೆ ನಡೆಯುವುದಕ್ಕೆ ಕೆಲವು ದಿನ ಮುಂಚಿತವಾಗಿ ಜೋಶಿ ಅವರಿಂದ ಹೇಳಿಕೆ ಬಂದಿದ್ದು, ಬಿಜೆಪಿಯ ವಸುಂಧರಾ ರಾಜೆ ಅವರನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್ ಗಮನವಿಟ್ಟಿರುವ ವೇಳೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ಜಾತಿವಾದಿ ಪಕ್ಷ ಎಂಬುದಾಗಿ ಚಿತ್ರಿಸಲು ಬಿಜೆಪಿಗೆ ಶಸ್ತ್ರವೊಂದನ್ನು ಕೊಟ್ಟಂತಾಗಿತ್ತು. ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಜೋಶಿ ಅವರುಇತರ ಜಾತಿಗಳಿಗೆ ಸೇರಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉಮಾಭಾರತಿ ಮತ್ತಿತರ ನಾಯಕರು ಹಿಂದುತ್ವದ ಬಗ್ಗೆ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದ್ದರು. ‘ಧರ್ಮದ ಬಗ್ಗೆ ಮಾತನಾಡುವ ಅರ್ಹತೆ ಇದ್ದರೆ ಅದು ಪಂಡಿತರು, ಬುದ್ಧಿ ಜೀವಿಗಳು ಮತ್ತು ಬ್ರಾಹ್ಮಣರಿಗೆ ಮಾತ್ರ. ವಿವಿಧ ಜಾತಿಗಳ ಜನರು ಹಿಂದುತ್ವದ ಬಗ್ಗೆ ಮಾತನಾಡುವ ವಿಲಕ್ಷಣ ಪ್ರವೃತ್ತಿ ರಾಷ್ಟ್ರದಲ್ಲಿದೆ ಎಂದು ಅವರು ಹೇಳಿದ್ದನ್ನು  ತೋರಿಸುವ ವಿಡಿಯೋ ದೃಶ್ಯಾವಳಿಯನ್ನು ಬಿಜೆಪಿಯ ಹರ್ಷ ಸಂಘ್ವಿ ಅವರು ಟ್ವೀಟ್ ಮಾಡಿದ್ದರುಲೋಧಿ ಸಮಾಜಕ್ಕೆ ಸೇರಿದ ಉಮಾ ಭಾರತಿ ಹಿಂದು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆಬೇರೆ ಧರ್ಮಕ್ಕೆ ಸೇರಿದ ಸಾಧ್ವೀಜಿ ಹಿಂದು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನರೇಂದ್ರ ಮೋದಿ ಅವರೂ ಬೇರೆ ಧರ್ಮಕ್ಕೆ ಸೇರಿದವರಾಗಿದ್ದು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಕಳೆದ ೫೦ ವರ್ಷಗಳಲ್ಲಿ ಬ್ರಾಹ್ಮಣರು ತಮ್ಮ ಮನಸ್ಸನ್ನೇ ಕಳೆದುಕೊಂಡಿದ್ದಾರೆ ಎಂದು ಜೋಶಿ ಹೇಳಿದ್ದರು. ಪ್ರಧಾನಿ ಮೋದಿ ಅವರನ್ನು ಪ್ರಸ್ತಾಪಿಸುವಾಗ ಕಾಂಗ್ರೆಸ್ ನಾಯಕಧರ್ಮ ಪದವನ್ನು ಬಳಸಿದ್ದರು. ಏನಿದ್ದರೂ ವಾಕ್ಯವನ್ನು ಪ್ರಾರಂಭಿಸುವಾಗ ಅವರು ನಾಯಕರಜಾತಿಯನ್ನು ಉಲ್ಲೇಖಿಸುತ್ತಾ ಮಾತು ಆರಂಭಿಸಿದ್ದರಿಂದ ಅವರ ಉದ್ದೇಶ ಜಾತಿ ಎಂಬುದಾಗಿ ಹೇಳುವುದಾಗಿತ್ತು ಎಂದು ಅರ್ಥೈಸಲಾಗಿದೆ. ’ಧರ್ಮ ಪದ ಬಳಸುವುದಕ್ಕೆ ಮುನ್ನ ಉಮಾ ಭಾರತಿ ಅವರ ಜಾತಿಯನ್ನು ಉಲ್ಲೇಖಿಸಿದ್ದರುಕೇವಲ ಒಂದು ದಿನ ಮೊದಲು, ಸಿಪಿ ಜೋಶಿ ಅವರುಕೇವಲ ಕಾಂಗ್ರೆಸ್ ಪ್ರಧಾನಿ ಮಾತ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಇಚ್ಛೆ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದ್ದರು.ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಾ ಜೋಶಿ ಅವರು ಕಾಂಗ್ರೆಸ್ಸಿನ ಹಿಂದಿನ ವಿವಾದಾತ್ಮಕ ಅಧ್ಯಾಯ ಒಂದನ್ನೂ ಪ್ರಸ್ತಾಪಿಸಿದ್ದರು. ’ಬಾಬರಿ ಮಸೀದಿ ಆವರಣದ ಬೀಗ ತೆರೆದವರು ಮತ್ತು ವಿವಾದಾತ್ಮಕ ಕಟ್ಟಡದ ಒಳಗೆ ಧಾರ್ಮಿಕ ವಿಧಿಗಳಿಗೆ ಅವಕಾಶ ಕಲ್ಪಿಸಿದವರು ರಾಜೀವ್ ಗಾಂಧಿ. ಕಾಂಗ್ರೆಸ್ ಪ್ರಧಾನಿ ಮಾತ್ರವೇ ದೇವಾಲಯವನ್ನು ನಿರ್ಮಿಸಬಲ್ಲರು ಎಂದು ಅವರು ಹೇಳಿದ್ದರು. ನಾಥದ್ವಾರದಿಂದ ವಿಧಾನಸಭಾ ಚುನಾವಣೆಗಾಗಿ ಸ್ಪರ್ಧಿಸಿರುವ ಜೋಶಿ ಕಾಂಗ್ರೆಸ್ ಪಕ್ಷದಲ್ಲಿನ ಬ್ರಾಹ್ಮಣ ಮುಖ ಎಂದೇ ಖ್ಯಾತರಾಗಿದ್ದು, ಚುನಾವಣಾ ಲಾಭಕ್ಕಾಗಿ ಮಾತ್ರ ಚುನಾವಣೆ ಬಂದಾಗ ಬಿಜೆಪಿಯು ವಿಷಯವನ್ನು  ಎತ್ತಿಕೊಳ್ಳುತ್ತದೆ ಎಂದು ಹೇಳಿದ್ದರು.

2018: ಕರಾಚಿ: ಸಶಸ್ತ್ರ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಕರಾಚಿಯಲ್ಲಿನ ಚೀನೀ ದೂತಾವಾಸದ (ಕಾನ್ಸುಲೇಟ್) ಮೇಲೆ ದಾಳಿ ನಡೆಸಿದರು. ಸುಮಾರು ಒಂದು ಗಂಟೆಯ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಮೂವರು ದಾಳಿಕೋರರು ಸಾವನ್ನಪ್ಪಿದರು. ನೈಋತ್ಯ ಪ್ರಾಂತವಾದ ಬಲೂಚಿಸ್ಥಾನದ ಉಗ್ರಗಾಮಿ ಗುಂಪು ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದು, ಪಾಕಿಸ್ತಾನದ ಮುಖ್ಯ ಮಿತ್ರ ರಾಷ್ಟ್ರವಾದ ಚೀನಾದ ವಿರುದ್ಧದ ತನ್ನ ಪ್ರತಿರೋಧವನ್ನು ಪಾಕಿಸ್ತಾನದ ಹೃದಯ ಭಾಗದಲ್ಲೇ ಮೂಲಕ ವ್ಯಕ್ತ ಪಡಿಸಿತು.  ಬಲೂಚಿಸ್ಥಾನ ಸೇರಿದಂತೆ ಪಾಕಿಸ್ತಾನದಲ್ಲಿ ರಸ್ತೆ ಮತ್ತು ಸಾರಿಗೆ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ಚೀನಾಕ್ಕೆ ಬಲೂಚಿಸ್ಥಾನದಲ್ಲಿ ಪ್ರಬಲ ವಿರೋಧ ಇರುವ ಹಿನ್ನೆಲೆಯಲ್ಲಿ ದಾಳಿ ನಡೆಯಿತು. ಚೀನೀ ದೂತಾವಾಸದಲ್ಲಿ ಚೀನಾದ ಎಲ್ಲ ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದು, ದಾಳಿ ಅಥವಾ ಗುಂಡಿನ ಘರ್ಷಣೆ ವೇಳೆಯಲ್ಲಿ ತೊಂದರೆಗೆ ಒಳಗಾಗಿಲ್ಲ ಹಿರಿಯ ಪೊಲೀಸ್ ಅಧಿಕಾರಿ ಅಮೀರ್ ಅಹ್ಮದ್ ಶೇಖ್ ಹೇಳಿದರು. ಪ್ರಧಾನಿ ಇಮ್ರಾನ್ ಖಾನ್ ಅವರು ದಾಳಿಯನ್ನು ಖಂಡಿಸಿ ಇದು ಪಾಕಿಸ್ತಾನ ಮತ್ತು ಚೀನಾದ ಆರ್ಥಿಕ ಮತ್ತು ಆಯಕಟ್ಟಿನ ಸಹಕಾರದ ವಿರುದ್ಧದ ಷಡ್ಯಂತ್ರ ಎಂದು ಹೇಳಿದರು. ದೂತಾವಾಸವನ್ನು ರಕ್ಷಿಸುವಲ್ಲಿ ಅಪ್ರತಿಮ ಶೌರ್ಯ ತೋರಿದ್ದಕ್ಕಾಗಿ ಕರಾಚಿ ಪೊಲೀಸ್ ಮತ್ತು ಅರೆಸೇನಾ ಪಡೆ ಯೋಧರನ್ನು ಪ್ರಧಾನಿ ಇಮ್ರಾನ್ ಖಾನ್ ಅಭಿನಂದಿಸಿದರು. ಹುತಾತ್ಮ ಯೋಧರಿಗೆ ಇಡೀ ರಾಷ್ಟ್ರವೇ ನಮಿಸುತ್ತದೆ ಎಂದು ಅವರು ಹೇಳಿದರು.
ದಾಳಿ ಘಟನೆಯ ಬಗ್ಗೆ ತನಿಖೆಗೆ ಆಜ್ಞಾಪಿಸಿದ ಖಾನ್ಇಂತಹ ದಾಳಿಗಳು ಚೀನಾ ಜೊತೆಗಿನ ಬಾಂಧವ್ಯವನ್ನು ಹದಗೆಡಿಸಲು ಸಾಧ್ಯವಿಲ್ಲ. ಚೀನಾ ಜೊತೆಗಿನ ನಮ್ಮ ಬಾಂಧವ್ಯ ಹಿಮಾಲಯಕ್ಕಿಂತ ಎತ್ತರ ಮತ್ತು ಅರಬ್ಬಿ ಸಮುದ್ರಕ್ಕಿಂತ ಆಳವಾದದ್ದು ಎಂದು ಅವರು ನುಡಿದರು. ‘ಬೆಳಗೆ ಗಂಟೆ ಸುಮಾರಿಗೆ ದಾಳಿಕೋರರು ಒಮ್ಮೊಂದೊಮ್ಮೆಗೇ ದೂತಾವಾಸದ ಮೇಲೆ ಎರಗಿದರುಅವರು ಮೊದಲು ದೂತಾವಾಸದ ಕಾವಲುಗಾರರ ಮೇಲೆ ಗುಂಡು ಹಾರಿಸಿ, ಗ್ರೆನೇಡ್ಗಳನ್ನು ಎಸೆದರು. ಬಳಿಕ ಮುಖ್ಯದ್ವಾರದ ಮೂಲಕ ಕಟ್ಟಡವನ್ನು ಪ್ರವೇಶಿಸಿದರು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಶ್ಫಾಖ್ ತಿಳಿಸಿದರು.ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಪಾಕಿಸ್ತಾನಿ ಭದ್ರತಾ ಪಡೆಗಳು ಅತ್ಯಂತ ಕ್ಷಿಪ್ರವಾಗಿ ಪ್ರದೇಶವನ್ನು ಸುತ್ತುವರಿದವು. ಕಟ್ಟಡದಿಂದ ಹೊಗೆ ಬರುತ್ತಿದ್ದುದನ್ನು ಸ್ಥಳೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿದವು. ಕಟ್ಟಡದಲ್ಲಿ ಚೀನೀ ರಾಜತಾಂತ್ರಿಕರ  ಮತ್ತು ಇತರ ಸಿಬ್ಬಂದಿಯ ಮನೆಗಳೂ ಇದ್ದವು. ಬಳಿಕ ಹಲವಾರು ಸ್ಫೋಟಗಳು ಸಂಭವಿಸಿದ ಸದ್ದುಗಳೂ ಕೇಳಿ ಬಂದವು. ಸುಮಾರು ಒಂದು ಗಂಟೆ ಕಾಲ ಗುಂಡಿನ ಚಕಮಕಿ ನಡೆಯಿತು. ‘ಗಾರ್ಡ್ಗಳು ಮತ್ತು ಪೊಲೀಸರ ತುರ್ತು ಸ್ಪಂದನೆಯ ಕಾರಣ ಭಯೋತ್ಪಾದಕರಿಗೆ ರಾಜತಾಂತ್ರಿಕರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಶೇಖ್ ಅವರು ಒಂದು ಗಂಟೆಯ ಕದನ ಕೊನೆಗೊಂಡ ಬಳಿಕ ತಿಳಿಸಿದರು. ‘ನಾವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದೇವೆ. ಶೋಧ ಇನ್ನೂ ನಡೆಯುತ್ತಿದೆ. ಎಲ್ಲ ಶಂಕಿತರನ್ನೂ ಹುಡುಕುವ ಮತ್ತು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.ದಾಳಿಕೋರರಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯಾ ಉಡುಪು ಧರಿಸಿದ್ದ. ಬೆರಳಚ್ಚುಗಳ ಮೂಲಕ ದಾಳಿಕೋರರ ಗುರುತು ಪತ್ತೆಗೆ ಅಧಿಕಾರಿಗಳು ಯತ್ನಿಸುವರು ಎಂದು ಅವರು ನುಡಿದರು. ‘ಇಬ್ಬರು ಪೊಲೀಸ್ ಅಧಿಕಾರಿಗಳ ಶವಗಳನ್ನು ಆಸ್ಪತ್ರೆಗೆ ತರಲಾಗಿದ್ದು, ದೂತಾವಾಸದ ಕಾವಲುಗಾರರ ಪೈಕಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿನ್ನಾ ಆಸ್ಪತ್ರೆಯ ವಕ್ತಾರ ಡಾ. ಸೀಮಿ ಜಮಾಲಿ ನುಡಿದರು. ಬಲೂಚಿಸ್ಥಾನದ ಮೂಲಕ ರಸ್ತೆ ನಿರ್ಮಾಣ ಹಾಗೂ ಮೂಲಸವಲತ್ತು ಯೋಜನೆಗಳಿಗೆ ಚೀನಾ ದೊಡ್ಡ ಪ್ರಮಾಣದಲ್ಲಿ ಹಣ ಹೂಡುವುದನ್ನು ವಿರೋಧಿಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು ಈವರೆಗೆ ತಾನು ಇಂತಹ ೧೨ ದಾಳಿಗಳನ್ನು  ’ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮತ್ತು ಮೂಲಸವಲತ್ತು ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕಾಯುತ್ತಿರುವ ಭದ್ರತಾ ಸಿಬ್ಬಂದಿ ವಿರುದ್ಧ ಎಸಗಿರುವುದಾಗಿ ಪ್ರತಿಪಾದಿಸಿತು.

2018: ಹೈದರಾಬಾದ್: ರೆಡ್ಡಿ ಸಹೋದರರ ಕೈಯಿಂದ ೧೪ ವರ್ಷಗಳ ಬಳಿಕ ಪ್ರತಿಷ್ಠಿತ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಮರುವಶ ಮಾಡಿಕೊಟ್ಟ ಪಕ್ಷದಟ್ರಬಲ್ ಶೂಟರ್ ಹಾಗೂ ಪ್ರಬಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಚುನಾವಣೆಗೆ ಮುಂಚಿತವಾಗಿಯೇ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಿರುದ್ಧಮಹಾಕೂಟಮಿಗೆ (ಮಹಾಮೈತ್ರಿ) ಬಲತುಂಬುವ ಸಲುವಾಗಿ ವರಿಷ್ಠ ಮಂಡಳಿಯು ತೆಲಂಗಾಣಕ್ಕೆ ಕಳುಹಿಸಿಕೊಟ್ಟಿತು.  ೫೬ರ ಹರೆಯದ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆಶಿ, ಕಳೆದ - ದಿನಗಳಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಚಾರ ಮತ್ತು ಚುನಾವಣಾ ವ್ಯೂಹದ ಮೇಲೆ ನಿಗಾ ಇರಿಸಿದರು.  ರಾಜಕೀಯ ವ್ಯೂಹ ಚತುರ ಎಂದೇ ಪರಿಗಣಿತರಾಗಿರುವ ಶಿವಕುಮಾರ್ ಅವರು ಕಳೆದ ೩೦ ವರ್ಷಗಳ ತಮ್ಮ ಚುನಾವಣಾ ರಾಜಕೀಯದಲ್ಲಿ ಕಠಿಣ ಚುನಾವಣೆಗಳನ್ನು ಪಕ್ಷಕ್ಕೆ ಗೆಲ್ಲಿಸಿಕೊಟ್ಟಇತಿಹಾಸ ಹೊಂದಿದ್ದಾರೆ. ಟಿಕೆಟ್ ವಿತರಣೆಯ ಬಳಿಕ, ಕಾಂಗ್ರೆಸ್ಸಿನ ಕೆಲವು ಟಿಕೆಟ್ ಆಕಾಂಕ್ಷಿಗಳು ಪಕ್ಷದಲ್ಲಿ ಅತೃಪ್ತರಾಗಿದ್ದು, ಅವರನ್ನು ಸಮಾಧಾನಪಡಿಸಿ, ’ಮಾಡು ಇಲ್ಲವೇ ಮಡಿ ಸಮರದಲ್ಲಿ ಐಕ್ಯ ಹೋರಾಟ ನೀಡುವಂತೆ ಮನವೊಲಿಸುವ ಕೆಲಸವನ್ನು ವರಿಷ್ಠ ಮಂಡಳಿ ಶಿವಕುಮಾರ್ ಅವರಿಗೆ ವಹಿಸಿತು. ಶಿವಕುಮಾರ್ ಅವರು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತು ಅವರ ಸಂಪುಟ ಸದಸ್ಯ ಯಾನಂನ ಮಲ್ಲಾಡಿ ಕೃಷ್ಣ ರಾವ್ ಜೊತೆಗೆ ಹೈದರಾಬಾದಿನಲ್ಲಿ ಪ್ರಚಾರದ ಉಸ್ತುವಾರಿ ನೋಡಿಕೊಂಡರು.   ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಮೂಲಕ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಚುನಾವಣೆಯ ಬಳಿಕ ಜೆಡಿ(ಎಸ್) -ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಕೂಟ ಬಿಜೆಪಿಯನ್ನು ಮಣಿಸಿತ್ತು. ಇದಕ್ಕೆ ಮುನ್ನ ಗುಜರಾತಿನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆಲುವಿನಲ್ಲಿ ಶಿವಕುಮಾರ್ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತುಅವರು ಪಕ್ಷದ ಶಾಸಕರಿಗೆ ಬೆಂಗಳೂರಿನ ರೆಸಾರ್ಟ್ನಲ್ಲಿ ಆಶ್ರಯ ಒದಗಿಸಿಕೊಡುವ ಮೂಲಕ ಅಹ್ಮದ್ ಪಟೇಲ್ ಗೆಲುವನ್ನು ನಿರಾಯಾಸ ಗೊಳಿಸಿದ್ದರು೨೦೦೨ರಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ನೇತೃತ್ವದ ಕಾಂಗ್ರೆಸ್- ಎನ್ ಸಿಪಿ ಸರ್ಕಾರವನ್ನು ಪಕ್ಷದ ಶಾಸಕರಿಗೆ ಕರ್ನಾಟಕದಲ್ಲಿ ಆಶ್ರಯ ಕಲ್ಪಿಸುವ ಮೂಲಕ ರಕ್ಷಿಸಿದ್ದರು. ೨೦೧೪ರಲ್ಲಿ ಅವರು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಮರುವಶಪಡಿಸಿಕೊಟ್ಟಿದ್ದರು೨೭ರ ಹರೆಯದಲ್ಲಿ ಕರ್ನಾಟಕ ವಿಧಾನಸಭೆಯನ್ನು ಪ್ರವೇಶಿಸಿದ್ದ ಶಿವಕುಮಾರ್, ೩೦ರ ಹರೆಯಕ್ಕೆ ಕಾಲಿಡುವುದಕ್ಕೂ ಮುನ್ನವೇ ದಿವಂಗತ ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿದ್ದರು. ಬಳಿಕ ಅವರು ನಗರಾಭಿವೃದ್ಧಿ ಮತ್ತು ಇಂಧನ ಸೇರಿದಂತೆ ಹಲವಾರು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದಾರೆ. ಅವರು ರಾಜ್ಯದ ಕಾಂಗ್ರೆಸ್ ಕಾರ್ಯಾಧ್ಷಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಶಿವಕುಮಾರ್ ಅವರು ಈವರೆಗೆ ವಿಧಾನಸಭಾ ಚುನಾವಣೆಯಲ್ಲಿ ಎಂದೂ ಸೋತಿಲ್ಲ೨೦೦೨ರಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಎದುರಿನಲ್ಲಿ ಸೋತದ್ದು ಮಾತ್ರವೇ ಅವರ ಏಕೈಕ ಸೋಲು.

2018: ಭೋಪಾಲ್: ನವೆಂಬರ್ ೨೮ರಂದು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಮಧ್ಯಪ್ರದೇಶದಲ್ಲಿ ನೂರಾರು ಸಂತರು  ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ್ದು, ಕಾಂಗ್ರೆಸ್ಸಿಗೆ ದಿಢೀರ್ ಸಂತ ಬಲ ಲಭಿಸಿತು. ಆದರೆ ಬಿಜೆಪಿ ಸಂತರನ್ನುಸಂತ ಸಮಾಜದ ಪ್ರತಿನಿಧಿಗಳಲ್ಲ ಎಂದು ಹೇಳಿತು. ನರ್ಮದಾ ನದಿ ದಂಡೆಯಲ್ಲಿ ನೂರಾರು ಸಂತರುನರ್ಮದೆ ಸಂಸದ್ ನಡೆಸಿ, ಸಮಾವೇಶದಲ್ಲಿ ಕಾಂಗ್ರೆಸ್ಸಿಗೆ ಐದು ವರ್ಷಗಳ ಅವಧಿಯನ್ನು ನೀಡುವುದಾಗಿ ಘೋಷಿಸುವುದರ ಜೊತೆಗೆ ತಮ್ಮ ಭರವಸೆಗಳಿಂದ ಹಿಂದೆ ಸರಿದದ್ದಕ್ಕಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟೀಕಿಸಿದರು. ರಾಜ್ಯ ಸಚಿವ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದಕಂಪ್ಯೂಟರ್ ಬಾಬಾ, ಸಂತ ಸಮುದಾಯವು ಕಾಂಗ್ರೆಸ್ ಜೊತೆ ನಿಲ್ಲಲು ತೀರ್ಮಾನಿಸಿದೆ ಎಂದು ಪ್ರತಿಪಾದಿಸಿದರು. ಅವರ ಮಾತುಗಳನ್ನು ಪ್ರತಿಧ್ವನಿಸಿದ ಮಹಾಮಂಡಲೇಶ್ವರ ವೈರಾಗ್ಯಾನಂದ ಗಿರಿಸಂತರು ಹಲವಾರು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಬಾರಿ ನಾವು ಕಾಂಗ್ರೆಸ್ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದರು. ‘ಕಂಪ್ಯೂಟರ್ ಬಾಬಾ ಅವರು ಬಿಜೆಪಿ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತ ಪಡಿಸಲು ಜಬಲ್ಪುರದಲ್ಲಿಕಲಶ ಯಾತ್ರೆ ಸಂಘಟಿಸಿದ್ದಲ್ಲದೆ, ನೂರಾರು ಸಂತರ ಜೊತೆಗೆಪರಿವರ್ತನಾ ಯಜ್ಞವನ್ನೂ ನಡೆಸಿದ್ದರು. ‘ರಾಜಕಾರಣಿಗಳಿಗೆ ಸಂತ ಸಮುದಾಯವು ರಾಜಕೀಯ ಪ್ರವೇಶಿಸುವ ಭಯವಿದೆ. ಧರ್ಮ ವಿರೋಧಿ ಸರ್ಕಾರವನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸರಸ್ವತಿಯಾನಂದ ನುಡಿದರು. ಗೋಶಾಲೆಗಳನ್ನು ನಿರ್ಮಿಸುವುದಾಗಿ ನೀಡಿದ ಭರವಸೆಯನ್ನು ಶಿವರಾಜ್ ಚೌಹಾಣ್ ಸರ್ಕಾರ ಈಡೇರಿಸಿಲ್ಲ ಎಂಬುದಾಗಿ ಆಪಾದಿಸಿದ ಸಂತರು, ಸರ್ಕಾರವು ಸಮಾಜದಲ್ಲಿ ಒಡಕು ಮೂಡಿಸಲು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ಕಾಯ್ದೆಯನ್ನು ಬಳಸಿದೆ  ಎಂದು ಆಪಾದಿಸಿದರು. ‘ನಾವು ಜಾಗತಿಕ ಗ್ರಾಮದ ಕಲ್ಪನೆಯನ್ನು ಬೋಧಿಸುತ್ತಿದ್ದರೆ ಸರ್ಕಾರವು ನಮ್ಮನ್ನು ಜಾತಿ ನೆಲೆಯಲ್ಲಿ ವಿಭಜಿಸುತ್ತಿದೆ ಎಂದು ಅವರು ಆಪಾದಿಸಿದರು.ಏನಿದ್ದರೂ ಕೇಸರಿ ಪಕ್ಷವು ಪ್ರತಿಭಟನೆಗಳನ್ನು ಗೌಣಗೊಳಿಸಿದೆ. ’ಕಂಪ್ಯೂಟರ್ ಬಾಬಾ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಸಂತನಾಗಿದ್ದು ನೀತಿ ಸಂಹಿತೆ ಉಲ್ಲಂಘನೆಗಾಗಿ ಅಖಾರಾ ಪರಿಷತ್ ನಿಂದ ಹಿಂದೆ ಉಚ್ಚಾಟನೆಗೊಂಡಿದ್ದರು ಎಂದು ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಪ್ರತಿಪಾದಿಸಿದರು. ಮಾಜಿ ಸಚಿವ ಮತ್ತು ಅವರ ಸಹಚರರು ಸಂತ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ನುಡಿದರು. ಕಾಂಗ್ರೆಸ್ ವಕ್ತಾರ ರವಿ ಸಕ್ಸೇನಾ ಸಂತರನ್ನು ಬೆಂಬಲಿಸಿ, ’ಶಿವರಾಜ್ ಚೌಹಾಣ್ ಆಡಳಿತದಲ್ಲಿ ಭೂಮಾಫಿಯಾ ಮಂದಿ ಮಠ -ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಅವರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.



2014: ಭುವನೇಶ್ವರಪ್ರತಿಷ್ಠಿತ ಅಂತಾರಾಷ್ಟ್ರೀಯ 'ಗೂಸಿ ಶಾಂತಿ ಪ್ರಶಸ್ತಿ'ಗೆ
ಒಡಿಶಾ ಮೂಲದ ಸಮಾಜ ಸೇವಕ ಹಾಗೂ ಶಿಕ್ಷಣ ತಜ್ಞ
ಡಾಅಚ್ಯುತ ಸಾಮಂತ ಪಾತ್ರರಾದರುಫಿಲಿಪ್ಪೀನ್ಸ್ ಮೂಲದ
ಗೂಸಿ
 ಸಂಸ್ಥೆ ನೀಡುವ  ಪ್ರಶಸ್ತಿಯನ್ನು ಏಷ್ಯಾದ ನೊಬೆಲ್
ಶಾಂತಿ
 ಪ್ರಶಸ್ತಿ ಎಂದೇ ಹೇಳಲಾಗುತ್ತದೆಪ್ರಸಕ್ತ ಸಾಲಿನಲ್ಲಿ
ಪ್ರಶಸ್ತಿಗೆ ಆಯ್ಕೆಯಾದ 15 ಗಣ್ಯರಲ್ಲಿ ಏಕೈಕ ಭಾರತೀಯ ಹಾಗೂ
ಇದುವರೆಗೆ
  ಪ್ರಶಸ್ತಿ ಪಡೆದ 3ನೇ ಭಾರತೀಯ ಸಾಮಂತಕೆಐಎಸ್
ಎಸ್ ಹಾಗೂ ಕೆಐಐಟಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಇವರು,
ಶಿಕ್ಷಣ ಹಾಗೂ ಮಾನವೀಯ ಕಾರ್ಯಗಳ ಮೂಲಕ ಬಡತನ
ನಿಮೂಲನೆಗೆ ಶ್ರಮಿಸಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ
ಮಾಡಿರುವುದಾಗಿ ಗೂಸಿ ಪ್ರಶಸ್ತಿ ಸಮಿತಿ ತಿಳಿಸಿತು
.


2014:ನವದೆಹಲಿ: ಇಥಿಯೋಪಿಯಾದ ಗುಯೆ ಅಡೋಲ
ಪುರುಷರ
 ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದಲ್ಲಿ
ಕೀನ್ಯಾದ ಫ್ಲಾರೆನ್ಸ್ ಕಿಪ್ಲಗತ್  ದೆಹಲಿಯಲ್ಲಿ ನಡೆದ ಹಾಫ್
ಮ್ಯಾರಥಾನ್ನಲ್ಲಿ ಪ್ರಶಸ್ತಿ ಜಯಿಸಿದರುಅಡೋಲ ಹಾಫ್
ಮ್ಯಾರಥಾನಿನಲ್ಲಿ  59.06 ನಿಮಿಷಗಳಲ್ಲಿ ಒಟ ಮುಗಿಸುವ
ಮೂಲಕ ತಮ್ಮದೇ ದೇಶದ ಅತ್ಸೆಡು ಸೆಗೆ (59.12) ನಿರ್ವಿುಸಿದ್ದ ದಾಖಲೆಯನ್ನು ಮುರಿದರುಎರಡನೇ ಸ್ಥಾನ ಗಳಿಸಿದ
ಕೀನ್ಯಾದ
 ಜಫ್ರಿ ಕ್ಯಾಮ್ರೊರರ್ 59.07 ನಿಮಿಷ ಮತ್ತು ಮೂರನೇ
ಸ್ಥಾನ ಪಡೆದ ಕೀನ್ಯಾದ ಮೊಸಿನೆಟ್ ಜೆರ್ಮ್ವ್  59.11 ನಿಮಿಷದಲ್ಲಿ ಓಟ ಮುಗಿಸುವ ಮೂಲಕ ದಾಖಲೆ
ಮುರಿದರು
ಭಾರತೀಯ ಪುರುಷರ ವಿಭಾಗದಲ್ಲಿ ಮೊದಲ
ಸ್ಥಾನ ಸುರೇಶ್ ಕುಮಾರ್ (01.04.38),  2ನೇ ಸ್ಥಾನ ನಿತಿಂದರ್ ಸಿಂಗ್ ರಾವತ್ (01.04.54) ಮತ್ತು 3ನೇ ಸ್ಥಾನವನ್ನು
ಖೇತ್
 ರಾಮ್(01.04.56) ಪಡೆದರುಮಹಿಳೆಯರ ವಿಭಾಗದಲ್ಲಿ ಕೀನ್ಯಾದ
ಫ್ಲಾರೆನ್ಸ್
 ಕಿಪ್ಲಗತ್ (01.10.04), ದ್ವಿತೀಯ ಸ್ಥಾನವನ್ನು ಕೀನ್ಯಾದ ಗ್ಲಾಡೆಸ್
ಚಿರೋನೊ (01.10.05) ಮತ್ತು 3ನೇ ಸ್ಥಾನವನ್ನು ಇಥಿಯೋಪಿಯಾದ ವರ್ಕ್ನೆಷ್ ಡೆಗೆಫ (01.10.07) ಪಡೆದರುಭಾರತೀಯ ಮಹಿಳೆಯರ ವಿಭಾಗದಲ್ಲಿ
ಪ್ರೀಜಾ ಶ್ರೀಧರನ್ (01.19.03),  2ನೇ  ಸ್ಥಾನ ಮೊನಿಕಾ ಆತ್ರೆ  (01.19.12) ಮತ್ತು 3ನೇ ಸ್ಥಾನವನ್ನು
ಸುಧಾ ಸಿಂಗ್ (01.19.21) ಪಡೆದರು.



2014: ವಾಷಿಂಗ್ಟನ್ಉಪವಾಸ ಮಾಡುವುದರಿಂದ ಮೆದುಳು ಚುರುಕಾಗುತ್ತದೆ ಎಂದು
ನೂತನ ಸಂಶೋಧನಾ ವರದಿಯೊಂದು ತಿಳಿಸಿತುಹೌದು ಆಗಾಗ ಉಪವಾಸ
ಮಾಡುವುದರಿಂದ ಮತ್ತು ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡುವುದರಿಂದ
ಮೆದುಳಿನಲ್ಲಿರುವ ನರಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಮತ್ತು ಮೆದುಳಿನ
ಶಕ್ತಿ ವೃದ್ಧಿಯಾಗುತ್ತದೆ ಎಂದು ಬಾಲ್ಟಿಮೋರ್ ನ್ಯಾಷಿನಲ್ ಇನ್ಸ್ಟಿಟ್ಯೂಟ್ ಆನ್
 ಏಜಿಂಗಿನ ಸಂಶೋಧಕರು ತಿಳಿಸಿದರುಮೆದುಳನ್ನು  ಚುರುಕಾಗಿಸಲು ಏನೇನೋ ತಿನ್ನುವುದು ಬೇಕಾಗಿಲ್ಲಏನೂ ತಿನ್ನದೆ ಉಪವಾಸ ಮಾಡಿದರೆ ಸಾಕು ಅನ್ನುವುದು ಅವರ ಅಭಿಪ್ರಾಯವ್ಯಾಯಾಮ ಮತ್ತು ಆಗಾಗ ಉಪವಾಸ ಮಾಡುವುದರಿಂದ ನ್ಯೂರಾನುಗಳಲ್ಲಿ ಮೈಟೋಕಾಂಡ್ರಿಯಾ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ನರ ವಿಜ್ಞಾನಿ ಮಾರ್ಕ್ ಮ್ಯಾಟಸನ್ ತಿಳಿಸಿದರುಉಪವಾಸವಿದ್ದಾಗ ಮೆದುಳಿನಲ್ಲಿ
ಬ್ರೆಯಿನ್ ಡಿರೈವಿಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್ (ಬಿಡಿಎನ್ಎಫ್ಎಂಬ ಪ್ರೋಟೀನ್ ಉತ್ಪಾದನೆಯಾಗುತ್ತದೆ ಪ್ರೋಟೀನ್ ನ್ಯೂರಾನ್ನಲ್ಲಿ ಮೈಟೋಕಾಂಡ್ರಿಯಾ ಸಂಖ್ಯೆ ಹೆಚ್ಚಲು ಸಹಕರಿಸುತ್ತದೆಬಿಡಿಎನ್ಎಫ್ ಮೆದುಳಿನಲ್ಲಿ ನೆನಪಿನ ಶಕ್ತಿ ಮತ್ತು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ
ಎಂದು ಅವರು ತಿಳಿಸಿದರು.

2014: ಟೋಕಿಯೋ: ಕೇಂದ್ರ ಜಪಾನಿನ ಪರ್ವತ ಪ್ರದೇಶ, ಉತ್ತರ ಭಾಗ ಮತ್ತು ಹಫಿಂಗ್ಟನ್ ಪೋಸ್ಟ್ ನಗರ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪನದಲ್ಲಿ ಕನಿಷ್ಠ 37 ಮನೆಗಳು ಕುಸಿದು, 39 ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಬಹುತೇಕರ ಎಲುಬುಗಳು ಮುರಿದಿವೆ ಎಂದು ವರದಿಗಳು ತಿಳಿಸಿದವು. ರಿಚ್​ಟರ್ ಮಾಪಕದಲ್ಲಿ 6.8ರ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದೆ, ಆದರೆ ಸುನಾಮಿ ಭೀತಿ ಇಲ್ಲ ಎಂದು ರಾಯಿಟರ್ಸ್ ಹೇಳಿತು. ರಾತ್ರಿ 10 ಗಂಟೆಯ ಬಳಿಕ ಭೂಕಂಪನ ಸಂಭವಿಸಿದೆ. ನಗಾನೋ ನಗರದ ಪಶ್ಚಿಮಕ್ಕೆ 10 ಕಿ.ಮೀ. (6 ಮೈಲು) ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿತು. ಭೂಕಂಪನ ಭೂ ಪ್ರದೇಶದಲ್ಲಿ ಸಂಭವಿಸಿರುವುದರಿಂದ ಸುನಾಮಿ ಸಾಧ್ಯತೆ ಇಲ್ಲ ಎಂದು ಸಂಸ್ಥೆ ಹೇಳಿತು. ನಗಾನೋ ನಗರದ ಪಶ್ಚಿಮಕ್ಕಿರುವ ಹಕೂಬಾ ಗ್ರಾಮದ ರೆಸ್ಟೋರೆಂಟ್ ಒಂದರ ಮಾಲೀಕ ರ್ಯೋ ನಿಶಿನೊ ಜಪಾನೀ ವಾಹಿನಿಯೊಂದಕ್ಕೆ ತಿಳಿಸಿದ ಪ್ರಕಾರ ಇಷ್ಟೊಂದು ಪ್ರಬಲವಾಗಿ ಕಂಪಿಸಿದ ಭೂಕಂಪನವನ್ನು ಅವರು ನೋಡಿಯೇ ಇಲ್ಲ. 'ಭೂಕಂಪನ ಸಂಭವಿಸಿದಾಗ ರೆಸ್ಟೋರೆಂಟಿನ ವೈನ್ ಸೆಲ್ಲರ್​ನಲ್ಲಿದ್ದೆ, ಆದರೆ ಅಲ್ಲಿ ಯಾವುದೂ ಒಡೆಯಲಿಲ್ಲ' ಎಂದು ನಿಶಿನೊ ಹೇಳಿದರು. ಭೂಕಂಪನ ಪ್ರದೇಶದಲ್ಲಿದ್ದ ಮೂರು ಪರಮಾಣು ಸ್ಥಾವರಗಳಲ್ಲಿ ಯಾವುದೇ ತೊಂದರೆಗಳಾಗಿರುವ ಬಗ್ಗೆ ವರದಿಗಳು ಬಂದಿಲ್ಲ ಎಂದು ಜಪಾನಿನ ಪರಮಾಣು ನಿಯಂತ್ರಣ ಸಂಸ್ಥೆ ತಿಳಿಸಿತು.


2014: ಬೀಜಿಂಗ್: ಚೀನಾದಲ್ಲಿ ರಿಚ್​ಟರ್ ಮಾಪಕದಲ್ಲಿ 6.3 ಪ್ರಮಾಣದ ಭೂಕಂಪನ ಸಂಭವಿಸಿ, ಕನಿಷ್ಠ 4 ಜನ ಮೃತರಾಗಿ ಸುಮಾರು 54 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಷಿನ್​ಹುವಾ ಮಾಧ್ಯಮ ವರದಿ ಮಾಡಿತು. ನೈಋತ್ಯ ಚೀನಾದ ಸಿಚುವಾನ್ ಪ್ರಾಂತದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಕ್ಷಿನ್​ಹುವಾ ಹೇಳಿತು. ಹಿಂದಿನ ದಿನ ಸಂಜೆ 4.55ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ತಾಗೊಂಗ್ ಪಟ್ಟಣದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಚೀನಾ ಭೂಕಂಪನ ಜಾಲಗಳ ಕೇಂದ್ರ ತಿಳಿಸಿತು. ಗಾಯಾಳುಗಳ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇತರ ಐವರಿಗೆ ತೀವ್ರ ಗಾಯಗಳಾಗಿವೆ. ಉಳಿದ 43 ಮಂದಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಸರ್ಕಾರ ತಿಳಿಸಿತು. ಅಲ್ಪ ಸ್ವಲ್ಪ ಗಾಯಗೊಂಡ 43 ಮಂದಿಯ ಪೈಕಿ 19 ಜನ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಗಳು ಎಂದೂ ವರದಿ ಹೇಳಿತು.
2008: ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು  ಲಂಡನ್‌ನ 'ಅಂತಾರಾಷ್ಟ್ರೀಯ ಸಿಖ್ ವೇದಿಕೆ' ನೀಡುವ ಪ್ರತಿಷ್ಠಿತ 'ವರ್ಷದ ಸಿಖ್ ವ್ಯಕ್ತಿ' ಪುರಸ್ಕಾರಕ್ಕೆ ಪಾತ್ರರಾದರು. ಇಲ್ಲಿನ ಲಿಂಕನ್ಸ್ ಇನ್‌ನ ಝಗಮಗಿಸುವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ  ಪ್ರದಾನ ಮಾಡಲಾಯಿತು. ಭಾರತದ ಆಧುನಿಕ ಆರ್ಥಿಕತೆಗೆ ಮೊಂಟೆಕ್ ನೀಡಿದ ಗಣನೀಯ ಕೊಡುಗೆ  ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ ಎಂದು ವೇದಿಕೆ ವಿವರಿಸಿತು.

2008: ಮಲೇಷ್ಯಾದಲ್ಲಿ ಯೋಗ ನಿಷೇಧಿಸಿ  ರಾಷ್ಟ್ರೀಯ ಫತ್ವಾ ಮಂಡಳಿ ಹೊರಡಿಸಿದ ಆದೇಶಕ್ಕೆ  ಅನೇಕ ಮುಸ್ಲಿಮ್ ಯೋಗ ತರಬೇತುದಾರರು ಅಸಮಾಧಾನ ವ್ಯಕ್ತಪಡಿಸಿದರು. ಮಲೇಷ್ಯಾದಲ್ಲಿನ ಯೋಗ ತರಬೇತಿಯಲ್ಲಿ ಯಾವುದೇ  ಧಾರ್ಮಿಕ ಕಾರಣಗಳಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಇಸ್ಲಾಮಿನಲ್ಲಿ ಯೋಗ ನಿಷಿದ್ಧ ಮತ್ತು ಮುಸ್ಲಿಮರು ಯೋಗಾಭ್ಯಾಸ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರೀಯ ಫತ್ವಾ ಮಂಡಳಿ ಪ್ರಕಟಿಸಿತ್ತು. ಯೋಗದಿಂದ ಇಸ್ಲಾಮಿನಲ್ಲಿ ಇರುವ ನಮ್ಮ ನಂಬಿಕೆಗೆ ಯಾವುದೇ ಹಾನಿ ಇಲ್ಲ ಎಂದು ಯೋಗ ಶಿಕ್ಷಕಿ ನಿನೈ ಅಹ್ಮದ್ ಹೇಳಿದರು.

2008:  ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ರಾಜಕೀಯ ಸ್ಥಿತಿಗತಿ ಅರಿತಕೊಳ್ಳಲು ಅನುವಾಗುವಂತೆ ತನ್ನ ಪ್ರೌಢಶಾಲೆಗಳಲ್ಲಿ  ಭಾರತದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದಾಗಿ ಸಿಂಗಪುರ ಪ್ರಕಟಿಸಿತು. ವಿಕ್ಟೋರಿಯ ಜೂನಿಯರ್ ಕಾಲೇಜು ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ  ಭಾರತದ ಅಧ್ಯಯನದ ಪಠ್ಯ ಪರಿಚಯಿಸುತ್ತಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದರು.

2008: ಆಫ್ಘಾನಿಸ್ಥಾನ ವಲಯದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಕಿತ್ತೊಗೆಯುವುದಕ್ಕೆ ತಾವು ಮೊದಲ ಆದ್ಯತೆ ನೀಡುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಸ್ಪಷ್ಟಪಡಿಸಿದರು.

2008: ಸಶಸ್ತ್ರ ಪಡೆಯಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ  ದೆಹಲಿ ಹೈಕೋರ್ಟ್,  ಮಹಿಳಾ ಅಧಿಕಾರಿಗಳ ಕುಂದುಕೊರತೆ ಆಲಿಸಲು ತ್ವರಿತವಾಗಿ ಶಾಶ್ವತ ಆಯೋಗ ರಚಿಸುವಂತೆ  ಕೇಂದ್ರಕ್ಕೆ ನಿರ್ದೇಶನ ನೀಡಿತು. ಇನ್ನು ಮುಂದೆ ನೇಮಕಮಾಡಿಕೊಳ್ಳುವ ಮಹಿಳಾ ಅಧಿಕಾರಿಗಳ ಅಹವಾಲು ಆಲಿಸಲು ಶಾಶ್ವತ ಆಯೋಗ ರಚಿಸಲು ನಿರ್ಧರಿಸುವುದಾಗಿ ಸರ್ಕಾರ ಹೇಳಿಕೆ ನೀಡಿದ ಬೆನ್ನಲ್ಲಿಯೇ ದೆಹಲಿ ಹೈಕೋರ್ಟ್ ಈ ಸೂಚನೆ ನೀಡಿತು.

2008: ತಬಲಾ ಬಾರಿಸುವುದರ ಜೊತೆಗೆ ಸತತ 12 ಗಂಟೆಗಳ ಕಾಲ ತಾವೇ ಸ್ವತಃ ಹಾಡುಗಳನ್ನು ಹಾಡುವ ಮೂಲಕ ಜಾನಪದ ಗಾಯಕ ಬಿ. ವಿಜಯಕುಮಾರ್ 'ಲಿಮ್ಕಾ' ದಾಖಲೆ ಸ್ಥಾಪಿಸುವ ಪ್ರಯತ್ನ ಮಾಡಿದರು. ಮಡಿಕೇರಿಯ ರಾಜಾಸೀಟು ಉದ್ಯಾನದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಸತತವಾಗಿ ತಬಲಾ ಬಾರಿಸುವುದರ ಜೊತೆಗೆ, ಸುಮಾರು 200ಕ್ಕೂ ಅಧಿಕ ಜಾನಪದ, ಭಾವಗೀತೆ ಹಾಗೂ ರಂಗ ಗೀತೆಗಳನ್ನು ಹಾಡಿದರು. 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' ಕಂಪೆನಿಯ ಸೂಚನೆ ಮೇರೆಗೆ ಈ ಕಾರ್ಯಕ್ರಮ ನಡೆಸಿಕೊಟ್ಟದ್ದಾಗಿ ವಿಜಯಕುಮಾರ್ ತಿಳಿಸಿದರು. ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಬಳಿಯ ಚಾಮರಾಯನಕೋಟೆಯ ನಿವಾಸಿಯಾದ ವಿಜಯಕುಮಾರ್, ಪ್ರಸ್ತುತ ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ನೆಲೆಸಿದ್ದು ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ ಹಿಂದಿ ಶಿಕ್ಷಕ. ಈಗಾಗಲೇ ಸತತ 48 ಗಂಟೆಗಳ ಕಾಲ ತಬಲಾ ಬಾರಿಸಿರುವುದು ಲಿಮ್ಕಾ ದಾಖಲೆಯಲ್ಲಿದೆ. ಆದರೆ, ಸತತ 12 ಗಂಟೆಗಳ ಕಾಲ ತಬಲಾ ಬಾರಿಸುವುದರ ಜೊತೆಗೆ, ಹಾಡುಗಳನ್ನು ಹಾಡಿರುವುದು ಇದೇ ಮೊದಲು ಎನ್ನಲಾಗಿದೆ. 'ನನ್ನ ಹೆಸರು ಲಿಮ್ಕಾ ದಾಖಲೆ ಸೇರಿದ ನಂತರ ಮುಂದಿನ ವರ್ಷ  48 ಗಂಟೆಗಳ ಕಾಲ ಕಾರ್ಯಕ್ರಮ ನಡೆಸುವ ಗುರಿ ಹೊಂದಿದ್ದೇನೆ' ಎಂದು ವಿಜಯಕುಮಾರ್ ಹೇಳಿದರು.

2007: ಸರಣಿ ಭಯೋತ್ಪಾದನಾ ಕೃತ್ಯಗಳಿಂದ ಉತ್ತರ ಪ್ರದೇಶ ತತ್ತರಿಸಿತು. ವಾರಣಾಸಿ, ಫೈಜಾಬಾದ್ ಮತ್ತು ಲಖನೌ ಸಿವಿಲ್ ನ್ಯಾಯಾಲಯಗಳ ಆವರಣಗಳಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕೆಲವು ವಕೀಲರು ಸೇರಿ 14 ಜನ ಮೃತರಾಗಿ, ಇತರ 65ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ತಮ್ಮ ಪರವಾಗಿ ವಾದಿಸಲು ನಿರಾಕರಿಸಿದ ವಕೀಲ ಸಮುದಾಯದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದರು. 2006ರ ಬಳಿಕ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು: 3ನೇ ಮಾರ್ಚ್ 2006: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೂರು ಬಾಂಬ್ ಸ್ಫೋಟ-  28 ಜನರ ಸಾವು. 14ನೇ ಏಪ್ರಿಲ್ 2006: ಹಳೆ ದೆಹಲಿಯ ಮಸೀದಿಯೊಂದರಲ್ಲಿ ಶಕ್ತಿಶಾಲಿಯಲ್ಲದ ಬಾಂಬ್ ಸ್ಫೋಟ. 11ನೇ ಜುಲೈ 2006: ಮುಂಬೈ ಸ್ಥಳೀಯ ರೈಲು ಜಾಲದ ನಿಲ್ದಾಣ, ಮಾರ್ಗಗಳಲ್ಲಿ 11 ನಿಮಿಷಗಳಲ್ಲಿ 7 ಬಾಂಬ್ಗಳ ಸ್ಫೋಟ- 209 ಜನರ ಸಾವು. 8ನೇ ಸೆಪ್ಟೆಂಬರ್ 2006: ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದ ಮೂರು ಕಡೆ ಏಕಕಾಲದಲ್ಲಿ ಬಾಂಬ್ ಸ್ಫೋಟ - 38 ಜನರ ಸಾವು. 19ನೇ ಫೆಬ್ರುವರಿ 2007: ದೆಹಲಿ ಮತ್ತು ಲಾಹೋರ್ ನಡುವೆ ಓಡಾಡುವ ಸಮ್ ಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, ಪರಿಣಾಮವಾಗಿ ಅಗ್ನಿದುರಂತ-  68 ಜನರ ಸಾವು. 18 ಮೇ 2007:  ಹೈದರಾಬಾದಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ- 9 ಸಾವು, ಪೊಲೀಸ್ ಗೋಲಿಬಾರಿಗೆ 5 ಜನರ ಬಲಿ. 26 ಆಗಸ್ಟ್ 2007:  ಹೈದರಾಬಾದಿನ ಜನಪ್ರಿಯ ಚಾಟ್ ಸೆಂಟರ್ ಹಾಗೂ ವಿಹಾರ ತಾಣ ಲುಂಬಿಣಿ ಉದ್ಯಾನದಲ್ಲಿ ಸರಣಿ ಸ್ಫೋಟ-  42 ಜನರ ಸಾವು

2007: ಹತ್ತು ಮಂದಿ ಮಹನೀಯರಿಗೆ `ಆಳ್ವಾಸ್ ನುಡಿಸಿರಿ ಪ್ರಶಸ್ತಿ' ಯನ್ನು ಪ್ರಕಟಿಸಲಾಯಿತು. ಪ್ರಶಸ್ತಿಗೆ ಪಾತ್ರರಾದವರು: ಡಾ. ಮತ್ತೂರು ಕೃಷ್ಣಮೂರ್ತಿ, (ಕನ್ನಡ ಸಂಸ್ಕೃತಿ ಪ್ರಸರಣ), ಪ್ರೊ. ಅ.ರಾ.ಮಿತ್ರ (ಸಾಹಿತ್ಯ), ಕೆ.ಎಸ್.ಅಶ್ವತ್ಥ್ (ಚಲನಚಿತ್ರ), ಎಂ.ಬಿ.ಸಿಂಗ್ (ಪತ್ರಿಕೋದ್ಯಮ). ಬಿ.ಎಂ.ಇದಿನಬ್ಬ (ಕನ್ನಡ ಚಳವಳಿ), ಡಾ. ಪಿ.ಎಸ್. ಶಂಕರ್ (ವೈದ್ಯಕೀಯ ಸಾಹಿತ್ಯ), ಆನಂದ ಗಾಣಿಗ (ರಂಗಭೂಮಿ, ಸಂಘಟನೆ), ಪ್ರೊ. ಸುನೀತಾ ಶೆಟ್ಟಿ (ಹೊರನಾಡು, ಕನ್ನಡ ಸಾಹಿತ್ಯ), ಕರ್ನೂರು ಕೊರಗಪ್ಪ ರೈ (ಯಕ್ಷಗಾನ) ಮತ್ತು ಪ್ರೇಮಾ ಭಟ್ (ಸಾಹಿತ್ಯ).

2007: ಮಾಂಡೊವಿ ನದಿಗೆ ತಾಗಿಕೊಂಡಂತಿರುವ ಪಣಜಿಯ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಈದಿನ ಸಂಜೆ ಜರುಗಿದ ಸರಳ, ಸುಂದರ ಸಮಾರಂಭದಲ್ಲಿ ಯುವ ಪೀಳಿಗೆಯ ಮೆಚ್ಚಿನ ನಟ ಶಾರುಖ್ ಖಾನ್, 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

2007: ಕೋಲ್ಕತ್ತ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರನ್ನು ಜೈಪುರದಿಂದ ದೆಹಲಿಗೆ ಕರೆದೊಯ್ಯಲಾಯಿತು.

2007: 59 ಮಂದಿಯನ್ನು ಬಲಿ ತೆಗೆದುಕೊಂಡಿದ್ದ 1997ರ ಉಪಾಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರ ಮಂದಿರದ ಮಾಲೀಕರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಾಗೂ ಚಿತ್ರಮಂದಿರಕ್ಕೆ ಲೈಸೆನ್ಸ್ ನೀಡಿದ್ದ ಡಿಸಿಪಿ ವಿರುದ್ಧ ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಯಿತು.

2007: ರಾಷ್ಟ್ರದಲ್ಲಿ ತುರುಸ್ಥಿತಿ ಹೇರಿದ ಪಾಕಿಸ್ಥಾನವನ್ನು ಕಾಮನ್ವೆಲ್ತ್ ರಾಷ್ಟ್ರಗಳ ಸಚಿವರ ಸಮಾವೇಶವು ತನ್ನ 53 ರಾಷ್ಟ್ರಗಳ ಒಕ್ಕೂಟದಿಂದ ಅಮಾನತುಗೊಳಿಸಿತು.

2006: ದೆಹಲಿಯ ಸುಮಾರು 18,000 ಮಂದಿ ವರ್ತಕರು ಮತ್ತು ವೃತ್ತಿ ನಿರತರಿಗೆ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಕಟ್ಟಡಗಳ ಬೀಗಮುದ್ರೆ ಕಾರ್ಯಾಚರಣೆಯಿಂದ ತಾತ್ಕಾಲಿಕ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ವಸತಿ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂಬುದಾಗಿ ಬರೆದು ಕೊಟ್ಟಿರುವ ತಮ್ಮ ವಚನವನ್ನು ಇವರು ಪಾಲಿಸಿದ್ದಾರೆ ಎಂಬುದಾಗಿ ನ್ಯಾಯಾಲಯದ ಪರಿಶೀಲನಾ ಸಮಿತಿ ನೀಡಿರುವ ವರದಿಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಇರಾಕ್ ರಾಜಧಾನಿ ಬಾಗ್ದಾದಿನ ದಕ್ಷಿಣದಲ್ಲಿನ ಶಿಯಾ ಪ್ರಾಬಲ್ಯದ ಸದರ್ ನಗರದಲ್ಲಿ ಸರಣಿ ಆತ್ಮಾಹುತಿ ಕಾರುಬಾಂಬ್ ದಾಳಿಗಳಲ್ಲಿ 154 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2005: ಐದು ದಿನಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹರಣಗೊಂಡ ಭಾರತೀಯ ಚಾಲಕ ಮಣಿಯಪ್ಪನ್ ಕುಟ್ಟಿ (36) ಅವರ ಶವ ದಕ್ಷಿಣ ಆಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ದೇಲರಾಂ ಜ್ಲಿಲೆಯಲ್ಲಿ ಪತ್ತೆಯಾಯಿತು. ಬಾರ್ಡರ್ ರೋಡ್ಸ್ ಸಂಸ್ಥೆಯಲ್ಲಿ ಚಾಲಕರಾಗಿದ್ದ ಕುಟ್ಟಿ ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದದ್ದು ಇದರೊಂದಿಗೆ ಬೆಳಕಿಗೆ ಬಂತು.
1991: ಧುಲೆಯಲ್ಲಿ ಭಾಸ್ಕರಾಚಾರ್ಯ ಸಂಶೋಧನಾ ಕೇಂದ್ರದ ಸ್ಥಾಪನೆ.

1983: ಭಾರತದ ನವದೆಹಲಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಮನ್ವೆಲ್ತ್ ಮುಖ್ಯಸ್ಥರ ಸಭೆ (ಸಿ ಎಚ್ ಓ ಜಿ ಎಂ) ನಡೆಯಿತು.

1979: ಸಾಹಿತಿ ಮಂಜುಶ್ರೀ ಹೊಸಮನಿ ಜನನ.

1956: ದಕ್ಷಿಣ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತವೊಂದು ಟ್ಯುಟಿಕಾರನ್- ಮದ್ರಾಸ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಈದಿನ ಬೆಳಗಿನ ಜಾವ ಸಂಭವಿಸಿತು. 104 ಜನ ಮೃತರಾದರು. ತಿರುಚಿನಾಪಳ್ಳಿಗೆ ಸಮೀಪದ ಅರಿಯಲೂರು ಮತ್ತು ಕಳಗಂ ನಿಲ್ದಾಣಗಳ ಮಧ್ಯೆ ಈ ಅಪಘಾತ ಸಂಭವಿಸಿತು.

1939: ಅಂಕಣಗಾರ್ತಿ, ಸಂಪಾದಕಿ, ಅಧ್ಯಾಪಕಿಯಾಗಿ ಖ್ಯಾತರಾದ ಸಾಹಿತಿ ಉಷಾ ನವರತ್ನರಾಂ (23-11-1989ರಿಂದ 1-10-2000) ಅವರು ಎಂ.ವಿ. ಸುಬ್ಬರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1937: ಭಾರತದ ಸಸ್ಯವಿಜ್ಞಾನಿ ಹಾಗೂ ಭೌತವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ (1858-1937) ಅವರು ತಮ್ಮ 79ನೇ ಹುಟ್ಟು ಹಬ್ಬಕ್ಕೆ ಒಂದು ವಾರ ಮೊದಲು ನಿಧನರಾದರು.

1936: `ಲೈಫ್' ಮ್ಯಾಗಜಿನ್ ನ ಮೊದಲ ಸಂಚಿಕೆ ಪ್ರಕಟಗೊಂಡಿತು. ಇದು ಹೆನ್ರಿ ಆರ್. ಲ್ಯೂಸ್ ಅವರ ಸೃಷ್ಟಿ.

1915: ಸಾಹಿತಿ ಎಸ್. ಆರ್. ಚಂದ್ರ ಜನನ.

1925: ಭಾರತೀಯ ಆಧ್ಯಾತ್ಮಿಕ ಧುರೀಣ ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಹುಟ್ಟಿದ ದಿನ.

1899: ಸಾಹಿತಿ ಬೆಂಗೇರಿ ಮಾಸ್ತರ ಜನನ.

1897: ಭಾರತೀಯ ವಿದ್ವಾಂಸ, ಬರಹಗಾರ ನೀರದ್ ಸಿ. ಚೌಧುರಿ (1897-1999) ಹುಟ್ಟಿದ ದಿನ.

1889: ನಾಣ್ಯ ಹಾಕಿದರೆ ಸಂಗೀತ ಹಾಡುವ ಸಂಗೀತ ಪೆಟ್ಟಿಗೆ `ಜ್ಯೂಕ್ ಬಾಕ್ಸ್' ಮೊತ್ತ ಮೊದಲ ಬಾರಿಗೆ ಸ್ಥಾಪನೆಗೊಂಡಿತು. ಲೂಯಿ ಗ್ಲಾಸ್ ಎಂಬ ಉದ್ಯಮಿ ಹಾಗೂ ಅವರ ಸಹೋದ್ಯೋಗಿ ವಿಲಿಯಂ ಎಸ್ ಅರ್ನಾಲ್ಡ್ ಅವರು ನಾಣ್ಯ ಹಾಕಿದರೆ ಹಾಡುವಂತಹ `ಎಡಿಸನ್ ಸಿಲಿಂಡರ್ ಫೊನೋಗ್ರಾಫ್' ನ್ನು ಸ್ಯಾನ್ ಫ್ರಾನ್ಸಿಸ್ಕೊದ ಪಲಾಯಿಸ್ ರಾಯಲ್ ಸಲೂನಿನಲ್ಲಿ ಸ್ಥಾಪಿಸಿದರು. ಈ ಯಂತ್ರ ಅದ್ಭುತ ಯಶಸ್ಸು ಗಳಿಸಿತು. ಕೇವಲ ಆರು ತಿಂಗಳಲ್ಲಿ 1000 ಡಾಲರ್ ಆದಾಯವನ್ನು ಇದು ತಂದು ಕೊಟ್ಟಿತು.

1885: ಸಾಹಿತಿ ಕಂದಗಲ್ ಹನುಮಂತರಾಯ ಜನನ.

1882: ಭಾರತೀಯ ಕೈಗಾರಿಕೋದ್ಯಮಿ ವಾಲ್ ಚಂದ್ ಹೀರಾಚಂದ್ ದೋಶಿ (1882-1953) ಹುಟ್ಟಿದ ದಿನ. ಇವರು ಭಾರತದ ಮೊತ್ತ ಮೊದಲ ಹಡಗುಕಟ್ಟೆ (ಶಿಪ್ ಯಾರ್ಡ್), ಮೊದಲ ವಿಮಾನ ಕಾರ್ಖಾನೆ ಹಾಗೂ ಮೊದಲ ಕಾರು ಕಾರ್ಖಾನೆ ಸ್ಥಾಪಿಸಿದವರು. ಮುಂಬೈ-ಪುಣೆ ನಡುವಣ ಭೋರ್- ಘಾಟ್ ಟನೆಲ್ಸ್ ನಿರ್ಮಿಸಿದ್ದೂ ಇವರ ನಿರ್ಮಾಣ ಸಂಸ್ಥೆಯೇ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment