ನೀವ್ಯಾರೂ
ವಿಚಾರಣೆಗೆ
ಲಾಯಕ್ಕಲ್ಲ:ಸುಪ್ರೀಂಕೋರ್ಟ್
ನವದೆಹಲಿ: ತಮ್ಮ
ಮೇಲಿನ
ಭ್ರಷ್ಟಾಚಾರ ಆರೋಪಗಳ ಕುರಿತ
ಕೇಂದ್ರೀಯ
ಜಾಗೃತಾ
ಆಯೋಗದ
(ಸಿವಿಸಿ)
ವರದಿ
ಬಗ್ಗೆ
ಸುಪ್ರೀಂಕೋರ್ಟಿಗೆ
ಸಲ್ಲಿಸಿದ
ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ
ಅವರ ಗೌಪ್ಯ ಪ್ರತಿಕ್ರಿಯೆಯು
‘ಸೋರಿಕೆ’
ಆದುದಕ್ಕೆ
ಮಂಗಳವಾರ
ಸಿಟ್ಟಿಗೆದ್ದ
ಸುಪ್ರೀಂ ಕೋರ್ಟ್ ‘ನೀವ್ಯಾರೂ
ವಿಚಾರಣೆಗೆ
ಲಾಯಕ್ಕಲ್ಲ’
ಎಂದು
ಝಾಡಿಸಿ,
ಪ್ರಕರಣವನ್ನು
ನವೆಂಬರ್ 29ಕ್ಕೆ ಮುಂದೂಡಿತು.
ಅಲೋಕ್
ವರ್ಮ
ಅವರು
ತಮ್ಮ
ಪ್ರತಿಕ್ರಿಯೆಯನ್ನು ಸೋಮವಾರ
ಮೊಹರಾದ
ಲಕೋಟೆಯಲ್ಲಿ
ಸುಪ್ರೀಂಕೋರ್ಟಿನ
ಪ್ರಧಾನ
ಕಾರ್ಯದರ್ಶಿಯವರಿಗೆ
ಸಲ್ಲಿಸಿದ್ದರು.
ಭಾರತದಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್ ಮತ್ತು ಕೆ.ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ಸಿಬಿಐ ನಿರ್ದೇಶಕರ ಪ್ರತಿಕ್ರಿಯೆಯನ್ನು ಪ್ರಕಟಿಸಿರುವ ಸುದ್ದಿ ಪೋರ್ಟಲ್ ನ ವರದಿಯ ನಕಲನ್ನು ವರ್ಮ ಪರ ವಕೀಲ ಫಾಲಿ ಎಸ್. ನಾರಿಮನ್ ಅವರಿಗೆ ಹಸ್ತಾಂತರಿಸಿತು.
ಮಾಧ್ಯಮದಲ್ಲಿ
ಸೋರಿಕೆಯಾದ
ವರದಿಯನ್ನು
ಪರಿಶೀಲಿಸಿದ ನಾರಿಮನ್ ಅವರು
ತಾವು
‘ದಿಗ್ಭ್ರಮೆ;
ಹಾಗೂ
‘ಆಘಾತ’
ಗೊಂಡಿರುವುದಾಗಿ
ಪೀಠಕ್ಕೆ
ತಿಳಿಸಿದರು.
ಮಾಧ್ಯಮಗಳು
ಮುಕ್ತ
ಹಾಗೂ
ಜವಾಬ್ದಾರಿಯುತವಾಗಿರಬೇಕು.
ಆದ್ದರಿಂದ
ಮಾಧಮವನ್ನು
ಮತ್ತು
ಅದರ
ಪತ್ರಕರ್ತರನ್ನು
ನ್ಯಾಯಾಲಯಕ್ಕೆ
ಕರೆಸಬೇಕು
ಎಂದು ಹಿರಿಯ ವಕೀಲರು ಪೀಠಕ್ಕೆ
ಮನವಿ
ಮಾಡಿದರು.
.
"ನಿಮ್ಮಲ್ಲಿ ಯಾರೂ ವಿಚಾರಣೆಗೆ ಅರ್ಹರಾಗಿದ್ದಾರೆಂದು ನಾವು ಭಾವಿಸುವುದಿಲ್ಲ" ಎಂದು ಹೇಳಿದ
ಪೀಠ,
ಪ್ರಕರಣವನ್ನು
ನವೆಂಬರ್
29ಕ್ಕೆ
ಮುಂದೂಡಿತು.
ತಮ್ಮ
ವಿರುದ್ಧ
ಭ್ರಷ್ಟಾಚಾರ
ಆರೋಪ
ಮಾಡಿದ
ವಿಶೇಷ
ಸಿಬಿಐ
ನಿರ್ದೇಶಕ
ರಾಕೇಶ್
ಅಸ್ತಾನ
ಜೊತೆಗೆ
ಸಿಬಿಐ
ನಿರ್ದೇಶಕ
ಅಲೋಕ ವರ್ಮ ಘರ್ಷಣೆಗೆ ಇಳಿದ ಬಳಿಕ ಕೇಂದ್ರ ಸರ್ಕಾರವು ಉಭಯ ಅಧಿಕಾರಿಗಳನ್ನು ಕರ್ತವ್ಯ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ಕೇಂದ್ರ ಸರ್ಕಾರವು ತಮ್ಮನ್ನು ಕಡ್ಡಾಯವಾಗಿ ರಜೆಯಲ್ಲಿ ಕಳುಹಿಸಿದ್ದನ್ನು ಪ್ರಶ್ನಿಸಿ ವರ್ಮ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯೆ 2018ರ ನವೆಂಬರ್ 19ರಂದು ಸಿಬಿಐ ಹಿರಿಯ ಅಧಿಕಾರಿ ಎಂ.ಕೆ. ಸಿನ್ಹ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪಾರ್ಟಿ ಭಾಯಿ ಚೌಧರಿ ಮತ್ತು ಸಿವಿಸಿಯ ಕೆ.ವಿ. ಚೌಧರಿ ಅವರು ಅಸ್ತಾನ ವಿರುದ್ಧದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿ, ಪ್ರಕರಣವನ್ನು ಇನ್ನಷ್ಟು ಗೋಜಲುಗೊಳಿಸಿದ್ದರು.
ಕೇಂದ್ರ ಸಚಿವರು ಆರೋಪಗಳನ್ನು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದರೆ,
ಇತರ
ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
No comments:
Post a Comment