Showing posts with label Statue of Unity. Show all posts
Showing posts with label Statue of Unity. Show all posts

Sunday, November 25, 2018

ಏಕತಾ ಪ್ರತಿಮೆಗಿಂತ ಎತ್ತರದ ಶ್ರೀರಾಮ ಪ್ರತಿಮೆಗೆ ಅಸ್ತು

ಏಕತಾ ಪ್ರತಿಮೆಗಿಂತ ಎತ್ತರದ ಶ್ರೀರಾಮ ಪ್ರತಿಮೆಗೆ ಅಸ್ತು
ಲಕ್ನೋ:  ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆ ತಾರಕಕ್ಕೆ ಏರಿರುವುದರ ಮಧ್ಯೆಯೇ, ಅಯೋಧ್ಯೆಯಲ್ಲಿ  ೨೨೧ ಮೀಟರ್  ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ (ಮಾಹಿತಿ) ಅವನೀಶ್ ಅವಸ್ತಿ ೨೦೧೮ ನವೆಂಬರ್ ೨೫ ರ ಭಾನುವಾರ  ಪ್ರಕಟಿಸಿದರು.

ಪ್ರತಿಮೆಯ  ನೈಜ ಎತ್ತರವು ೧೫೧ ಮೀಟರ್ ಆಗಿದ್ದರೆ, ಪ್ರತಿಮೆಯ ತಲೆಯ ಮೇಲಿನ  ಛತ್ರಿ ೨೦ ಮೀಟರ್ ಮತ್ತು ಪೀಠ  ೫೦ ಮೀಟರ್  ಎತ್ತರ ಆಗುತ್ತದೆ ಎಂದು ಅವರು ಹೇಳಿದರು.

ಪೀಠದಲ್ಲಿ  ವಸ್ತುಸಂಗ್ರಹಾಲಯದ ವ್ಯವಸ್ಥೆ ಮಾಡಲಾಗುವುದು ಎಂದು ಅವಸ್ತಿ ನುಡಿದರು.
ಪ್ರತಿಮೆಯನ್ನು ನಿರ್ಮಿಸಲು  ಐದು ಕಂಪನಿಗಳನ್ನು  ಪಟ್ಟಿ ಮಾಡಲಾಗಿದ್ದು, ಶನಿವಾರ  ಸಂಜೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅ ಮುಂಚೆ  ಅವರ ವಿನ್ಯಾಸಗಳನ್ನು ಪ್ರಸ್ತುತ ಪಡಿಸಲಾಗಿದೆ  ಎಂದು ಅಧಿಕಾರಿ ಹೇಳಿದರು.

ಪ್ರತಿಮೆಯ ಸ್ಥಾಪನೆಗಾಗಿ  ಮಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ನುಡಿದರು.
ಅಕ್ಟೋಬರ್ ೩೧ ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊತ್ತ ಮೊದಲ ಗೃಹ ಸಚಿವ  ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೨ ಮೀಟರ್  ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಇದು ವಿಶ್ವದಲ್ಲೇ ಅತ್ಯಂತ  ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಯೋಧ್ಯಾ ವರದಿ:  ಈ ಮಧ್ಯೆ ಅಯೋಧ್ಯೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣದ  ಬೇಡಿಕೆಯನ್ನು ಪುನರುಚ್ಚರಿಸಿದರು. ೨೦೧೮ ನವೆಂಬರ್ ೨೫  ಭಾನುವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರಾಮ ಮಂದಿರವನ್ನು ನಿರ್ಮಿಸದಿದ್ದರೆ, ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಪಕ್ಷ ಅಧಿಕಾರದಲ್ಲಿದ್ದರೆ ಅಥವಾ ಇಲ್ಲದೇ ಇದ್ದರೂ ರಾಮ ಮಂದಿರವನ್ನು  ಖಂಡಿತವಾಗಿಯೂ ನಿರ್ಮಿಸಲಾಗುವುದು ಎಂದು ಉದ್ಧವ್ ಹೇಳಿದರು.


"ಮಂದಿರವನ್ನು  ನಿರ್ಮಿಸದಿದ್ದರೆ, ಸರ್ಕಾರವು ಉಳಿಯಲು ಸಾಧ್ಯವಿಲ್ಲ, ಆದರೆ ಸರ್ಕಾರ  ಉಳಿಯದೇ ಇದ್ದರೂ ಮಂದಿರವನ್ನು ನಿರ್ಮಿಸಲಾಗುವುದು" ಎಂದು ಅವರು ನುಡಿದರು.

ಭಾನುವಾರ ಬೆಳಗ್ಗೆ  ರಾಮಲಲ್ಲಾ ದರ್ಶನಕ್ಕೆ  ಹೋಗಿದ್ದಾಗ  ರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸಲು ಸಂತರ ಆಶೀರ್ವಾದ ಪಡೆದುದಾಗಿ ಠಾಕ್ರೆ ಹೇಳಿದರು.
"ನಿಮ್ಮ ಆಶೀರ್ವಾದ  ಇಲ್ಲದೆ ನಾವು ಕೈಗೊಳ್ಳಲು ಹೊರಟಿರುವ ಕಾರ್ಯವನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎಂದು ನಾನು  ನನ್ನನ್ನು ಆಶೀರ್ವದಿಸಿದ ಸಂತರಿಗೆ ಹೇಳಿದ್ದೇನೆ’ ಎಂದು ಅವರು ನುಡಿದರು.

ಅಯೋಧ್ಯೆಗೆ ಯಾವುದೇ ರಹಸ್ಯ ಕಾರ್ಯಸೂಚಿಯೊಂದಿಗೆ ಬಂದಿಲ್ಲ. ಪ್ರಪಂಚದಾದ್ಯಂತದ ಎಲ್ಲಾ ಭಾರತೀಯರ ಮತ್ತು ಹಿಂದೂಗಳ ಭಾವನೆಗಳನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ. ಅವರು ರಾಮ ಮಂದಿರವನ್ನು ಕಟ್ಟಲು ಕಾಯುತ್ತಿದ್ದಾರೆ "ಎಂದು ಠಾಕ್ರೆ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ  ಠಾಕ್ರೆ, "ಮಂಡಿರ್ ಥಾ, ಹೈ ಔರ್ ರಹೇಗಾ" (’ಅಲ್ಲಿ ಮಂದಿರವಿತ್ತು, ಅಲ್ಲಿ ಮಂದಿರವಿದೆ ಮತ್ತು ಮಂದಿರವು ಉಳಿಯುತ್ತದೆ.’) ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ನಾನು ಕೇಳಿದೆ. ಆದರೆ ಅದು ನಮ್ಮ ನಂಬಿಕೆ, ನಮ್ಮ ಬದ್ಧತೆ ಮತ್ತು ನಮ್ಮ ಭಾವನೆ. ಅಲ್ಲಿ ಮಂದಿರವನ್ನು ನಾವು ಕಾಣುತ್ತಿಲ್ಲ ಎಂಬುದು ನಮ್ಮ ನೋವು. ಈ ಮಂದಿರವನ್ನು ನಾವು ಕಾಣುವುದು ಯಾವಾಗ?’ ಎಂದು ಠಾಕ್ರೆ  ಪ್ರಶ್ನಿಸಿದರು.

Saturday, November 17, 2018

ಬಾನಿನಿಂದ ಕಾಣುತ್ತಿದೆ ‘ಏಕತಾ ಪ್ರತಿಮೆ’ ಹೀಗೆ…!

ಬಾನಿನಿಂದ ಕಾಣುತ್ತಿದೆ ‘ಏಕತಾ ಪ್ರತಿಮೆ’ ಹೀಗೆ…!

ನವದೆಹಲಿ:  ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ೧೮೨ ಮೀಟರ್ ಎತ್ತರದ ಉಕ್ಕು ಮತ್ತು ಕಂಚಿನಏಕತಾ ಪ್ರತಿಮೆ (ಸ್ಟ್ಯಾಚ್ಯು ಆಫ್ ಯುನಿಟಿ) ಬಾಹ್ಯಾಕಾಶದಿಂದ ತೆಗೆಯಲಾಗಿರುವ ಅತ್ಯದ್ಭುತ ಚಿತ್ರವೊಂದನ್ನು ಅಮೆರಿಕದ ಕಂಪೆನಿಯೊಂದು ಸಾಮಾಜಿಕ ಜಾಲತಾಣದಲ್ಲಿ  2018ರ ನವೆಂಬರ 17ರ ಶನಿವಾರ ಹಂಚಿಕೊಂಡಿತು.
ಪ್ರತಿದಿನ ಭೂಮಿಯ ಚಿತ್ರವನ್ನು ತೆಗೆಯುವ ಪ್ಲಾನೆಟ್ ಲ್ಯಾಬ್ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿತು.
ವಿಶ್ವದ ಅತ್ಯಂತ ಎತ್ತರದ ಪ್ರತಿಮೆ, ಅದರ ಪಕ್ಕದಲ್ಲೇ ಹರಿಯುತ್ತಿರುವ ನರ್ಮದಾ ನದಿ, ಸುತ್ತಮುತ್ತಣ ನಿಸರ್ಗದ ರಮಣೀಯ ದೃಶ್ಯ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊತ್ತ ಮೊದಲ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರ ೧೪೩ನೇ ಜನ್ಮದಿನಾಚರಣೆ ಸಂದರ್ಭದಲ್ಲಿ (೨೦೧೮ರ ಅಕ್ಟೋಬರ್ ೩೧) ಗುಜರಾತಿನ ನರ್ಮದಾ ಜಿಲ್ಲೆಯಲ್ಲಿನ ಕೇವಡಿಯಾದಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿರುವ ಪ್ರತಿಮೆಯನ್ನು ರಾಷ್ಟ್ರಾರ್ಪಣೆ ಮಾಡಿದ್ದರು.

,೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹಕ್ಕಿಂತಲೂ ಎತ್ತರವಾಗಿದೆ. ಅಮೆರಿಕದಸ್ಟ್ಯಾಚ್ಯು ಆಫ್ ಲಿಬರ್ಟಿ ಎರಡು ಪಟ್ಟು ದೊಡ್ಡದಾಗಿರುವ ಸ್ಪ್ರಿಂಗ್ ಟೆಂಪಲ್ ಬುದ್ಧ ವಿಗ್ರಹವು ಈವರೆಗೂ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂದು ಪರಿಗಣಿತವಾಗಿತ್ತು. ಅದನ್ನುಏಕತೆಯ ಪ್ರತಿಮೆ ಮೀರಿಸಿದೆ.

ಸಾಧು ಬೆಟ್ ಎಂಬುದಾಗಿ ಕರೆಯಲಾಗುವ ಏಕತಾ ಪ್ರತಿಮೆಯು ನರ್ಮದಾ ನದಿಯಿಂದ . ಕಿಮೀ ದೂರದಲ್ಲಿದೆ. ೨೫೦ ಮೀಟರ್ ಉದ್ದದ ಸೇತುವೆ ಮೂಲಕ ದ್ವೀಪವೊಂದಕ್ಕೆ ಇದನ್ನು ಜೋಡಿಸಲಾಗಿದೆ.
ಪ್ರತಿಮೆಯ
ಒಳಭಾಗದಲ್ಲಿ ೧೩೫ ಮೀಟರ್ ಎತ್ತರದಲ್ಲಿ ವೀಕ್ಷಕರ ಗ್ಯಾಲರಿಯನ್ನು ಹೊಂದಿರುವುದು ಪ್ರತಿಮೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಗ್ಯಾಲರಿಯಲ್ಲಿ ಏಕಕಾಲಕ್ಕೆ ೨೦೦ ಜನ ನಿಂತುಕೊಳ್ಳಬಹುದು. ಅತಿವೇಗದ ಲಿಫ್ಟ್ ಮೂಲಕ ವೀಕ್ಷಣಾ ಗ್ಯಾಲರಿವರೆಗೆ ಹೋಗಬಹುದು. ಲಿಫ್ಟ್ ಪ್ರತಿದಿನ ,೦೦೦ ಮಂದಿಯನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಸ್ವಾತಂತ್ರ್ಯ ಲಭಿಸುವ ವೇಳೆಗೆ ಹರಿದು ಹಂಚಿಹೋಗಿದ್ದ ವಿವಿಧ ಭಾಗಗಳಲ್ಲಿ ಭಾರತ ಸರ್ಕಾರದ ವ್ಯಾಪ್ತಿಗೆ ತಂದು ಒಗ್ಗೂಡಿಸಿದ ಮಹಾನ್ ಕಾರ್ಯವನ್ನು ಮಾಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಸ್ಮರಣೆಗಾಗಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

Wednesday, October 31, 2018

ವಿಶ್ವದಲ್ಲೇ ಎತ್ತರದ ‘ಏಕತೆಯ ಪ್ರತಿಮೆ’ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ವಿಶ್ವದಲ್ಲೇ ಎತ್ತರದ  ‘ಏಕತೆಯ ಪ್ರತಿಮೆ’

ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಅಹಮದಾಬಾದ್: ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ  182 ಮೀಟರ್ ಎತ್ತರದಉಕ್ಕಿನ ಮನುಷ್ಯ’ ಸರ್ದಾರ್ವಲ್ಲಭ ಭಾಯ್ ಪಟೇಲ್ ಅವರ 'ಏಕತೆಯ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 31 ಅಕ್ಟೋಬರ್ 2018 ಬುಧವಾರ  ಲೋಕಾರ್ಪಣೆ ಮಾಡಿದರು.
ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಇದಕ್ಕೆ ಮೊದಲು ಸಾಂಕೇತಿಕವಾಗಿ ಮಣ್ಣು ಹಾಗೂ ನರ್ಮದಾ ನದಿ ನೀರನ್ನು ಮೋದಿ ಅವರು ಕಲಶಕ್ಕೆ ಅರ್ಪಿಸಿದರು. ಬಳಿಕ ಲಿವರ್ಒತ್ತುವ ಮೂಲಕ ಪ್ರತಿಮೆಯ ಮೇಲೆ ಅಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಮೆಯ ಪೀಠದ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರತಿಮೆ ಅನಾವರಣ ವೇಳೆ ವಾಯುಪಡೆಯ ಎರಡು ವಿಮಾನಗಳು ಪ್ರತಿಮೆಯ ಮೇಲೆ ಹಾರಾಟ ನಡೆಸಿ ಬಣ್ಣಗಳ ಮೂಲಕ ಆಗಸದಲ್ಲಿ ತಿರಂಗಾದ ಚಿತ್ತಾರ ಮೂಡಿಸಿದವು. ಜತೆಗೆ ವಿಮಾನಗಳ ಮೂಲಕ ಪುಷ್ಪಾರ್ಚನೆಯೂ ನಡೆಯಿತು.

ಗುಜರಾತಿನ ಕೆವಾಡಿಯಾ ಗ್ರಾಮದ ಬಳಿ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿರುವ 182 ಮೀಟರ್ (597 ಅಡಿಗಳು) ಎತ್ತರದ ಸರ್ದಾರ್ ಪಟೇಲರ ಭವ್ಯವಾದ  ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಲೋಕಾರ್ಪಣೆಯ ಬಳಿಕ  ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಇತಿಹಾಸದಲ್ಲಿ ನೆನಪಿಡಬೇಕಾದ ದಿನ  ಇದು. ಈ ಹೊತ್ತಿನಲ್ಲಿ ಭಾರತದ ಇತಿಹಾಸವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವಾಗಿದೆ. ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಪಟೇಲ್’ ಎಂದು ಹೇಳಿದರು.


‘ಪಟೇಲ್ ಅವರ 143ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ  ಇಂದು  ಏಕತಾ ದಿವಸವನ್ನು ಆಚರಿಸಲಾಗುತ್ತಿದೆ. ಅಲ್ಲದೇ ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂಬುದಾಗಿ ಭಾವಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಸರ್ದಾರ್ ಪಟೇಲ್ ಅವರು ದಿಟ್ಟತನ, ಏಕತೆಯ ಸಂಕಲ್ಪ ತೋರಿಸದಿದ್ದರೆ ಇಂದು ನಾವು ಸೋಮನಾಥ ಹಾಗೂ ಹೈದರಾಬಾದಿನ ಚಾರ್ ಮಿನಾರ್ ನೋಡಲು ವೀಸಾ ಹೊಂದಿರಬೇಕಿತ್ತು. ಇಂಥ ಲೋಹಪುರುಷ ಪಟೇಲರಿಗೆ ನೊರೊಂದು ನಮನಗಳು ಎಂದು ಪ್ರಧಾನಿ ನುಡಿದರು.


‘ದೇಶದಲ್ಲಿ ಆಗಲೂ ಸಹ ನಿರಾಶಾವಾದಿಗಳು ಇದ್ದರು. ಇನ್ನು ನಾವು ಯಾರಿಗೂ ಗುಲಾಮರಾಗುವ ಅಗತ್ಯವಿಲ್ಲ ಎಂದು ಪಟೇಲರು 1947ರಲ್ಲಿ ಹೇಳಿದ್ದರು. ಇಂದಿಗೂ ಕೂಡಾ ನಾವು ಗುಲಾಮರಾಗಿ ಬದುಕಬೇಕಾಗಿಲ್ಲ. ದೇಶ ಇಂದು ತನ್ನದೇ ಇತಿಹಾಸ ನಿರ್ಮಿಸಿಕೊಂಡಿದೆ’ ಎಂದು ಮೋದಿ ಹೇಳಿದರು.


ಸರ್ದಾರ್ಪಟೇಲರ ದೂರದೃಷ್ಟಿಯ ಕೊಡುಗೆ ಇಲ್ಲದಿದ್ದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದರು.

ಏಕತೆಯ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು. ಹೀಗೆ ಒಂದು ಬೃಹತ್ ಆಂದೋಲನವೆ ನಡೆಯಿತು ಎಂದು ಪ್ರತಿಮೆ ಸ್ಥಾಪನೆಯ ಹಿನ್ನೆಲೆಯನ್ನು ಪ್ರಧಾನಿ ನೆನಪಿಸಿದರು.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಮೆಯ ಸ್ಥಾಪನೆಯ ಕನಸು ಕಂಡಿದ್ದೆ. ಅದು ಈಗ ಸಾಕಾರವಾಗಿದೆ’ ಎಂದು  ಪ್ರಧಾನಿ ಹೇಳಿದರು.