ನಾನು ಮೆಚ್ಚಿದ ವಾಟ್ಸಪ್

Thursday, November 8, 2018

ಬಂತು ಮಡಚುವ ಸ್ಮಾರ್ಟ್ ಫೋನ್ ..!

ಬಂತು ಮಡಚುವ ಸ್ಮಾರ್ಟ್ ಫೋನ್ ..!

ಸ್ಯಾನ್ ಫ್ರಾನ್ಸಿಸ್ಕೋ: ಹೌದು. ಇದೀಗ ಮಡಚುವ ಸ್ಮಾರ್ಟ್ ಫೋನ್!  ತನ್ನ ಮಡಚುವ (ಫೋಲ್ಡೇಬಲ್) ಸ್ಮಾರ್ಟ್ ಫೋನನ್ನು ಸ್ಯಾಮ್ಸಂಗ್ ನೇ ನವೆಂಬರ್ ೨೦೧೮  ಗುರುವಾರ  ಇದೇ ಮೊತ್ತ ಮೊದಲ ಬಾರಿಗೆ ಅನಾವರಣಗೊಳಿಸಿತು.
ತನ್ನಮಡಚುವ ಫೋನ್ತಂತ್ರಜ್ಞಾನವನ್ನು ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಎಂಬುದಾಗಿ ಸ್ಯಾಮ್ಸಂಗ್ ಬಣ್ಣಿಸಿದೆ.  ಟ್ಯಾಬ್ಲೆಟ್- ಗಾತ್ರದ ಪರದೆಯನ್ನು ಹೊಂದಿರುವ ಸ್ಮಾರ್ಟ್ ಫೋನನ್ನು ನೀವು ಆರಾಮವಾಗಿ ಮಡಚಿ ಪುಟ್ಟ ಸ್ಮಾರ್ಟ್ ಫೋನ್ ನಂತೆಯೇ ನಿಮ್ಮ ಕಿಸೆಯೊಳಕ್ಕೆ ಸೇರಿಸಿಕೊಳ್ಳಬಹುದು.

ತನ್ನ ಅಭಿವೃದ್ಧಿ ಸಮ್ಮೇಳದಲ್ಲಿ  ಹೊಸ ತಂತ್ರಜ್ಞಾನದ ಫೋನನ್ನು ಅನಾವರಣಗೊಳಿಸಿದ ಸ್ಯಾಮ್ಸಂಗ್ ವಿನ್ಯಾಸದ ಅಂಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ  "ಮರೆಮಾಚುವ" ಸಾಧನವನ್ನು ಪ್ರದರ್ಶಿಸಿ, ದೀಪಗಳನ್ನು ಮಬ್ಬಾಗಿಸಿತು.

"
ಇಲ್ಲಿ ಒಂದು ಸಾಧನವಿದೆ ಮತ್ತು ಇದು ನಿಮ್ಮನ್ನು ಬೆರಗುಗೊಳಿಸುತ್ತದೆ" ಎಂದು ಮೊಬೈಲ್ ಉತ್ಪನ್ನ ಮಾರಾಟದ ಎಸ್ವಿಪಿ ಜಸ್ಟಿನ್ ಡೆನಿಸನ್ ಸಮ್ಮೇಳನದಲ್ಲಿ ಪ್ರಕಟಿಸಿದರು.

ನಂತರ ಡೆನಿಸನ್ ಮಡಿಚಿದಾಗ ಕ್ಯಾಂಡಿಬಾರ್ ತರಹ ಕಾಣಿಸುವ ಸಾಧನವನ್ನು ತೋರಿಸಿದರು. ಸಾಧನವು ಕವಚ (ಕವರ್) ಹೊಂದಿದ್ದು , ಇದು ಫೋನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಖ್ಯವಾದ .-ಇಂಚಿನ ಡಿಸ್ ಪ್ಲೇ ಪರದೆಯನ್ನು ಒಳಗೊಂಡಿದೆ. ಸಾಧನವನ್ನು ಸಹಸ್ರಾರು ಬಾರಿ ಮಡಿಚಬಹುದು, ಯಾವುದೇ ಸಮಸ್ಯೆ ಇಲ್ಲ ಎಂದು ಅವರು ವಿವರಿಸಿದರು.

ಈ ಸ್ಯಾಮ್ಸಂಗ್ ಫೋನ್ ಏಕ ಕಾಲಕ್ಕೆ ಮೂರು ಆಪ್ ಗಳನ್ನು ತೋರಿಸುತ್ತದೆ.  ಸ್ಯಾಮ್ಸಂಗ್ ಡೆನಿಸನ್ ಪ್ರಕಾರ "ತಿಂಗಳಲ್ಲೇ ಮಾರುಕಟ್ಟೆಗೆ ಬರಲಿರುವ  ಇನ್ಫಿನಿಟಿ ಫ್ಲೆಕ್ಸ್’ ಇಷ್ಟರಲ್ಲೇ ಸಾಧನಗಳನ್ನು ಸಾಮೂಹಿಕವಾಗಿ ಉತ್ಪಾದಿಸಲಿದೆ.

ಸ್ಯಾಮ್ಸಂಗ್ ಅಷ್ಟೇ ಅಲ್ಲ,  ಇತರ ಕಂಪೆನಿಗಳೂ ಇದೀಗ ಈ ನಿಟ್ಟಿನಲ್ಲಿ ಕಾರ್ಯ ಆರಂಭ ಮಾಡಿವೆ.
ಆಂಡ್ರಾಯ್ಡ್ ಸಹಯೋಗದೊಂದಿಗೆ ಹೊಸ ಮಡಚುವ ಸಾಧನಗಳ ತಯಾರಿಗೆ ಗೂಗಲ್ ಅಧಿಕೃತವಾಗಿ ಬೆಂಬಲ ನೀಡಿದೆ. ಮುಂದಿನ ವರ್ಷ ಫೋನ್ ಪ್ರಾರಂಭಿಸಲು ಸ್ಯಾಮ್ಸಂಗ್ ಜೊತೆಗೆ  ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಮಧ್ಯೆ, ಹುವಾವೇ ಮುಂದಿನ ವರ್ಷ ಒಂದು ಮಡಿಚುವ ಸಾಧನ ಬಿಡುಗಡೆ ಮಾಡಲು ಯೋಜಿಸಿದೆ. ಲೆನೊವೊ ಮತ್ತು ಕ್ಸಿಯಾಮಿಯೊ ತಮ್ಮ ಸ್ವಂತ ಮೂಲ ಮಾದರಿಗಳನ್ನು ಮಾಡಲಾರಂಭಿಸಿವೆ.
ಮೈಕ್ರೋಸಾಫ್ಟ್ ಕೂಡಾ ಒಂದು ಮಲ್ಟಿಸ್ಕ್ರೀನ್ ಸಾಧನ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮೈಕ್ರೋಸಾಫ್ಟ್ ಸರ್ಫೇಸ್ ಮುಖ್ಯಸ್ಥ ಪನೋಸ್ ಪನಾಯೆ  ಅವರು  ಪಾಕೆಟೇಬಲ್ ಸರ್ಫೇಸ್ ಸಾಧನವು "ಸಂಪೂರ್ಣವಾಗಿ ನನ್ನ ಕೂಸು" ಎಂದು ಪ್ರತಿಪಾದಿಸಿದ್ದಾರೆ.

ನೀವು ಬಹುಶಃ ಎಂದಿಗೂ ಹೆಸರನ್ನೇ ಕೇಳಿರದ ಫೋನ್ ತಯಾರಕರು ಕೂಡ ಇಂತಹ ಸಾಧನಗಳ ತಯಾರಿಗೆ ಪ್ರಯೋಗ ನಡೆಸುತ್ತಿದ್ದು, ಬಹುತೇಕ ೨೦೧೯ ರಲ್ಲಿ ಇಂತಹ ಹಲವಾರು ಸಾಧನಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


No comments:

Post a Comment