Monday, November 19, 2018

ಇಂದಿನ ಇತಿಹಾಸ History Today ನವೆಂಬರ್ 19

ಇಂದಿನ ಇತಿಹಾಸ History Today ನವೆಂಬರ್ 19
 2018: ನವದೆಹಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಜಾಗೃತಾ ಆಯೋಗದ (ಸಿವಿಸಿ) ಪ್ರಾಥಮಿಕ ತನಿಖಾ ವರದಿಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರು ಸುಪ್ರೀಂಕೋರ್ಟಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದರು. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ಈದಿನವೇಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತನ್ನ ಪ್ರತಿಕ್ರಿಯೆ ದಾಖಲಿಸುವಂತೆ ಸುಪ್ರೀಂಕೋರ್ಟ್ ಅಲೋಕ್ ವರ್ಮ ಅವರಿಗೆ ನಿರ್ದೇಶಿಸಿತ್ತು ಮತ್ತು ವರ್ಮ ಅವರ ವಕೀಲರು ಕಾಲಾವಕಾಶ ಕೋರಿದಾಗ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತುನ್ಯಾಯಾಲಯದಿಂದ  ನಾವು ಸ್ವಲ್ಪ ಕಾಲಾವಕಾಶ ಕೋರಿದರೂ, ಮಧ್ಯಾಹ್ನ ಗಂಟೆ ವೇಳೆಗೆ ವರ್ಮ ಅವರ ಉತ್ತರವನ್ನು ಮೊಹರಾದ ಲಕೋಟೆಯಲ್ಲಿ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ ಎಂದು ವರ್ಮ ಪರ ವಕೀಲ ಗೋಪಾಲ ಶಂಕರನಾರಾಯಣನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು. ಸಿಬಿಐ ನಿರ್ದೇಶಕರ ವಿರುದ್ಧದ ಭ್ರಷ್ಟಾಚಾರ ಆರೋಪ ಬಗ್ಗೆ ಕೇಂದ್ರೀಯ ಜಾಗೃತಾ ಆಯೋಗದ ಪ್ರಾಥಮಿಕ ತನಿಖಾ ವರದಿಗೆ ಸೋಮವಾರ ಮಧ್ಯಾಹ್ನ ಗಂಟೆಗೆ ಮುಂಚಿತವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ  ನವೆಂಬರ್ ೧೬ರಂದು ಸುಪ್ರೀಂಕೋರ್ಟ್ ವರ್ಮ ಅವರಿಗೆ ನಿರ್ದೇಶಿಸಿತ್ತುಪ್ರಕರಣದ ವಿಚಾರಣೆಗೆ ನಿಗದಿ ಪಡಿಸಲಾದ ಸಮಯವನ್ನು ಬದಲಾಯಿಸಲಾಗುವುದಿಲ್ಲ. ನಿಮ್ಮ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಸಾಧ್ಯವಾಗುವಂತೆ ಸಂಜೆ ಗಂಟೆಯ ಒಳಗಾಗಿ ಆದಷ್ಟು ಬೇಗ ಸಲ್ಲಿಸಿ ಎಂದು ಪೀಠ ಸೋಮವಾರ ಬೆಳಗ್ಗೆ ನಿರ್ದೇಶಿಸಿತ್ತು. ಇದಕ್ಕೂ ಮುನ್ನ ಸಿವಿಸಿಯು ವರ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ತನಿಖಾ ವರದಿಯಲ್ಲಿ ಸಾಮರಸ್ಯವಿಲ್ಲದ ಅಂಶಗಳನ್ನು ಪ್ರಸ್ತಾಪಿಸಿದೆ ಮತ್ತು ಕೆಲವು ಆರೋಪಗಳ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಬಯಸಿದೆ. ಅದರ ಕೆಲವು ನಿರ್ಣಯಗಳು ಅತ್ಯಂತ ಪ್ರಶಂಸಾಯೋಗ್ಯವಾಗಿವೆ ಎಂದು ಸುಪ್ರೀಂಕೋರ್ಟ್ ಹೇಳಿತ್ತುಅತ್ಯಂತ ವಿಸ್ತೃತವಾದ ಪೂರಕ ದಾಖಲೆಗಳ ಸಹಿತವಾದ ಸಿವಿಸಿಯ ರಹಸ್ಯ ವರದಿಯ ಪ್ರತಿಯನ್ನು ಮೊಹರಾದ ಲಕೋಟೆಯಲ್ಲಿ ವರ್ಮ ಅವರಿಗೆ ನೀಡಲು ಸುಪ್ರೀಂಕೋರ್ಟ್ ಆಜ್ಞಾಪಿಸಿತ್ತು.  ಸಿಬಿಐ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಜೊತೆಗಿನ ಘರ್ಷಣೆಯ ಹಿನ್ನೆಲೆಯಲ್ಲಿ ತಮ್ಮನ್ನು ಕರ್ತವ್ಯ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ವರ್ಮ ಅವರು ಸುಪ್ರೀಂಕೋರ್ಟಿಗೆ ಸರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರವು ಅಸ್ತಾನ ಅವರನ್ನು ಕೂಡಾ ಕರ್ತವ್ಯ  ಮುಕ್ತಗೊಳಿಸಿ ರಜೆಯಲ್ಲಿ ಕಳುಹಿಸಿತ್ತು. ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ವರ್ಮ ವಿರುದ್ಧದ ತನಿಖೆಯನ್ನು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ .ಕೆ. ಪಟ್ನಾಯಕ್ ಮೇಲುಸ್ತುವಾರಿಯಲ್ಲಿ ನಡೆಸಿದ ಸಿವಿಸಿ, ತನ್ನ ವರದಿಯನ್ನು ನವೆಂಬರ್ ೧೨ರಂದು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು.  ವರ್ಮ ಅವರಲ್ಲದೆ ಕಾಮನ್ ಕಾಸ್ ಸರ್ಕಾರೇತರ ಸಂಘಟನೆ ಕೂಡಾ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಿಬಿಐ ಅಧಿಕಾರಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಕೋರಿತ್ತು. ನೂತನವಾಗಿ ನೇಮಕಗೊಂಡ ಹಂಗಾಮಿ ನಿರ್ದೇಶಕ ಜಿ. ನಾಗೇಶ್ವರ ರಾವ್ ಅವರನ್ನು ಯಾವುದೇ ನೀತಿ ನಿರ್ಧಾರ ಕೈಗೊಳ್ಳದಂತೆಯೂ ನಿರ್ಬಂಧಿಸಿದ ಸುಪ್ರೀಂಕೋರ್ಟ್ ಸಿಬಿಐ ಕಾರ್ಯನಿರ್ವಹಣೆಗೆ ಅಗತ್ಯವಾದ ದೈನಂದಿನ ಕೆಲಸಗಳನ್ನಷ್ಟೇ ಮಾಡುವ ಸ್ವಾತಂತ್ರ್ಯವನ್ನು ಅವರಿಗೆ ನೀಡಿತ್ತು. ನವೆಂಬರ್ ೪ರಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಸುಪ್ರೀಂಕೋರ್ಟಗೆ ಅರ್ಜಿ ಸಲ್ಲಿಸಿ ವರ್ಮ ಅವರನ್ನು ಸ್ಥಾಯೀ ಅಧಿಕಾರಗಳಿಂದ ಮುಕ್ತಗೊಳಿಸಿದ್ದು ಸಂಪೂರ್ಣವಾಗಿ ಅಕ್ರಮ ಮತ್ತು ನಿರಂಕುಶ ಕ್ರಮ ಎಂದು ವಾದಿಸಿದ್ದರು.

2018: ಚೆನ್ನೈ: ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ (ಟಿಎನ್ಎಯು) ಮೂವರು ವಿದ್ಯಾರ್ಥಿನಿಯರ ಸಾವಿಗೆ ಕಾರಣವಾಗಿದ್ದ  ಧರ್ಮಪುರಿ ಬಸ್ ದಹನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೀವಾವಧಿ ಸಜೆ ಅನುಭವಿಸುತ್ತಿದ್ದ ಮೂವರು ಎಐಎಡಿಎಂಕೆ ಕಾರ್ಯಕರ್ತರನ್ನು ವೆಲ್ಲೂರು ಕೇಂದ್ರೀಯ ಸೆರೆಮನೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ನೆಡುಂಚೆಳಿಯನ್, ರವೀಂದ್ರನ್ ಮತ್ತು ಮುನಿಯಪ್ಪನ್ ಅವರು ೨೦೦೦ನೇ ಇಸವಿಯ ಫೆಬ್ರುವರಿ ೨ರಂದು ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದನ್ನು ಪ್ರತಿಭಟಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಧರ್ಮಪುರಿಯಲ್ಲಿ ತಮಿಳುನಾಡು ಕೃಷಿ ವಿಶ್ವ ವಿದ್ಯಾಲಯದ ಬಸ್ಸನ್ನು ಸುಟ್ಟು ಹಾಕಿದ್ದರು. ಬಸ್ಸಿನಲ್ಲಿದ ಮೂವರು ವಿದ್ಯಾರ್ಥಿನಿಯರು ಘಟನೆಯಲ್ಲಿ ಸಜೀವ ದಹನಗೊಂಡಿದ್ದರು. ಅವಧಿಗೆ ಮುಂಚಿತವಾಗಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಎಐಎಡಿಎಂಕೆ ಸರ್ಕಾರ ಮಾಡಿದ್ದ ಶಿಫಾರಸಿಗೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಅನುಮತಿ ನೀಡಿದ್ದರು. ಮೊದಲಿಗೆ ರಾಜ್ಯಪಾಲರು ಸರ್ಕಾರದ ಶಿಫಾರಸನ್ನು ಹಿಂದಕ್ಕೆ ಕಳುಹಿಸಿ ಮರುಪರಿಶೀಲನೆ ಮಾಡುವಂತೆ ಸೂಚಿಸಿದ್ದರು. ಏನಿದ್ದರೂ ರಾಜ್ಯ ಸರ್ಕಾರವು ತನ್ನ ನಿಲುವಿಗೇ ಅಂಟಿಕೊಂಡು ಶಿಫಾರಸನ್ನು ಪುನಃ ರಾಜ್ಯಪಾಲರಿಗೆ ಕಳುಹಿಸಿತ್ತು. ಬಳಿಕ ಪುರೋಹಿತ್ ಅವರು ಬಿಡುಗಡೆಯ ಶಿಫಾರಸಿಗೆ ಅನುಮೋದನೆ ಕೊಟ್ಟಿದ್ದರುಬಂಧಿತರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿತ್ತು. ಅದನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ ಪುನರ್ ಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ಬಳಿಕ ಎರಡು ವರ್ಷಗಳ ಹಿಂದೆ ಅವರ ಶಿಕ್ಷೆಯನ್ನು ಜೀವಾವಧಿ ಸಜೆಗೆ ಇಳಿಸಲಾಗಿತ್ತು.  ಪ್ರಕರಣದಲ್ಲಿ ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ  ಕೋಕಿಲವಾಣಿ, ಗಾಯತ್ರಿ ಮತ್ತು ಹೇಮಲತಾ ಬಸ್ಸಿನಲ್ಲಿ ಸಜೀವ ದಹನಗೊಂಡು ಪ್ರಾಣ ಕಳೆದುಕೊಂಡಿದ್ದರು. ೪೪ ಮಂದಿ ಇತರ ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಪ್ರಯಾಣ ಮಾಡುತ್ತಿದ್ದ ಬಸ್ಸಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದರು. ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕೇಂದ್ರೀಯ ಸೆರೆಮನೆಯಲ್ಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಮೂವರು ಧರ್ಮಪುರಿ ಬಸ್ಸು ದಹನ ಅಪರಾಧಿಗಳು ಸೇರಿದಂತೆ ,೮೦೦ ಜೀವಾವಧಿ ಸಜೆ ಅನುಭವಿಸುತ್ತಿದ್ದ ಕೈದಿಗಳನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಈರೀತಿ ಬಿಡುಗಡೆಗೆ ಕೈದಿಗಳು ೧೦ ವರ್ಷಗಳ ಸೆರೆವಾಸ ಪೂರ್ಣಗೊಳಿಸಿರಬೇಕು ಅಥವಾ ೬೦ ವರ್ಷ ಹಾಗೂ ಅದನ್ನು ಮೀರಿದವರಾಗಿದ್ದರೆ ೨೦೧೮ರ ಫೆಬ್ರುವರಿ ೨೫ರ ವೇಳೆಗೆ ವರ್ಷಗಳ ಸೆರೆವಾಸವನ್ನು ಪೂರ್ಣಗೊಳಿಸಿರಬೇಕು ಎಂದು ತೀರ್ಮಾನಿಸಲಾಗಿತ್ತು.

2018: ನವದೆಹಲಿ/ ಹೈದರಾಬಾದ್: ಬಿಜೆಪಿ ವಿರುದ್ಧಮಹಾಘಟ ಬಂಧನ್ ರಚಿಸುವ ವಿರೋಧ ಪಕ್ಷಗಳ ಯತ್ನಕ್ಕೆ ಮತ್ತೆ ಹಿನ್ನಡೆಯಾಗಿದ್ದು, ನವೆಂಬರ್ ೨೨ರಂದು ನಡೆಸಲು ಉದ್ದೇಶಿಸಲಾಗಿದ್ದ ವಿಪಕ್ಷಗಳ ಸಭೆಯನ್ನು ಎನ್. ಚಂದ್ರಬಾಬು ನಾಯ್ಡು ಮುಂದೂಡಿದರು. ಇದೇ ವೇಳೆಗೆ ತೆಲಂಗಾಣದಲ್ಲಿ ವಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆ ಒಪ್ಪಂದ ಉಲ್ಲಂಘಿಸಿದ ಆರೋಪ ಕೇಳಿ ಬಂದಿತು. ಪ್ರಸ್ತಾಪಿತ ಬಿಜೆಪಿ ವಿರೋಧಿ ಮೈತ್ರಿಯ ನಾಯಕನಾಗಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬಿಂಬಿಸಿದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಪಕ್ಷಗಳು ಪ್ರಸ್ತಾಪವನ್ನು ವಿರೋಧಿಸಿದವು. ‘ಪ್ರತಿಯೊಬ್ಬರೂ ಮಹಾಘಟ ಬಂಧನ್ ನಾಯಕರೇ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಕೋಲ್ಕತದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ ರಾಷ್ಟ್ರದ ರಕ್ಷಣೆಗಾಗಿ ನಾವೆಲ್ಲರೂ ಹೋರಾಡುತ್ತೇವೆ ಮತ್ತು ಯತ್ನವನ್ನು ಮುಂದಕ್ಕೆ ಒಯ್ಯಲು ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ಹೇಳಿದರು೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ರಚಿಸಲು ಯತ್ನಿಸುತ್ತಿರುವ ನಾಯ್ಡು ಅವರು, ಕಳೆದ ಕೆಲವು ವಾರಗಳಿಂದ ಹಲವಾರು ಪ್ರಾದೇಶಿಕ ನಾಯಕರನ್ನು ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅಮರಾವತಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದಶಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಬಳಿಕ ಕಳೆದ ವಾರ ಬಿಜೆಪಿ ವಿರೋಧಿ ಪಕ್ಷಗಳ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ನಾಯ್ಡು ಹಿಂದೆ ಪ್ರಕಟಿಸಿದ್ದರು. ಆದರೆ ಯತ್ನ ಸುಲಲಿತವಾಗಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಳೆದ ವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರೆ, ಮಮತಾ ಬ್ಯಾನರ್ಜಿ ಅವರು ಸಭೆಯ ಸಮಯದ ಬಗ್ಗೆ ಪ್ರಶ್ನೆ ಎತ್ತಿದ್ದರು. ಎಲ್ಲ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ ಅದು ಸಂಯುಕ್ತ ರಂಗವಾಗುವುದಿಲ್ಲ ಮತ್ತು ಸಮಗ್ರತೆಯನ್ನು ತೋರಿಸುವುದಿಲ್ಲ ಎಂದು ಮಮತಾ ಹೇಳಿದರು.  ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಪಕ್ಷವು ಛತ್ತೀಸ್ ಗಢದಲ್ಲಿ ತಮ್ಮ ಪಕ್ಷದ ಗೆಲುವಿನ ಅವಕಾಶಗಳನ್ನು ಹಾಳುಗೆಡವಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ. ಮಾಯಾವತಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂಹಾವುಗಳು ಎಂದು ಬಣ್ಣಿಸಿ, ತಾವು ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿರೋಧ ಪಕ್ಷವಾಗಿಯೇ ಉಳಿಯಬಯಸುವುದಾಗಿ ಮಾಯಾವತಿ ಹೇಳಿದರು.  ಪ್ರದರ್ಶನದಲ್ಲಿ ಅಖಿಲೇಶ್ ಮತ್ತು ಮಾಯಾವತಿ ಇಬ್ಬರೂ ಇರಬೇಕು ಎಂದು ಮಮತಾ ಬ್ಯಾನರ್ಜಿ ವಾದಿಸಿದರೆ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಸಭೆಗೆ ಮುನ್ನವೇ ಕಾಂಗ್ರೆಸ್ ಆಡುತ್ತಿರುವ ಆಟದ ಬಗ್ಗೆ ಪ್ರಶ್ನಿಸಿದ್ದಾರೆಕಾಂಗ್ರೆಸ್ ಪಕ್ಷವು ಸಂಪೂರ್ಣ ಪರಿಸ್ಥಿತಿಯನ್ನು ಹೈಜಾಕ್ ಮಾಡಿ ವಿಷಯದ ಮೇಲೆ ತನ್ನ ನಿಯಂತ್ರಣ ಸಾಧಿಸಲು ಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ಪವಾರ್ ಮತ್ತು ಬ್ಯಾನರ್ಜಿ ಹೇಳಿರುವುದಾಗಿ ಮೂಲಗಳು ತಿಳಿಸಿವೆಸಭೆಯ ಸಮನ್ವಯಕ್ಕಾಗಿ ನಾಯ್ಡು ಅವರು ಸೆಳೆದುಕೊಂಡಿರುವ ಅಶೋಕ್ ಗೆಹ್ಲೋಟ್ ಬಗ್ಗೆ ಆತಂಕಗಳು ವ್ಯಕ್ತವಾಗಿವೆ ಎಂದು ಮೂಲಗಳು ಹೇಳಿದವು. ಸಂಸತ್ತಿನ ಚಳಿಗಾಲದ ಅಧಿವೇಶನ ಕಾಲದಲ್ಲಿ ರಾಜಧಾನಿಯಲ್ಲಿ ಸಭೆ ನಡೆಯಬಹುದು ಎಂಬುದು ಪಕ್ಷದ ಸಲಹೆ ಎಂದು ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಹೇಳಿದರು. ಆದರೆ ವಿಧಾನಸಭಾ ಚುನಾವಣೆ ಕಾಲದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಏಕತೆಗೆ ಅನುಕೂಲವಾಗುವುದು ಎಂದು ತೆಲುಗುದೇಶಂ ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಪಾದಿಸಿದ್ದಾರೆ.
ವಿಭಿನ್ನ ದೃಷ್ಟಿಕೋನಗಳ ವಿವಿಧ ಪ್ರಾದೇಶಿಕ ಪಕ್ಷಗಳ ಮೈತ್ರಿ ರಚಿಸುವುದು ಸುಲಭವಲ್ಲ ಎಂದು ಅವರು ಹೇಳಿದರು. ತೆಲಂಗಾಣದ ಬಿಕ್ಕಟ್ಟು: ಮಧ್ಯೆ, ಡಿಸೆಂಬರ್ ೭ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ನಾಲ್ಕು ಪಕ್ಷಗಳಮಹಾಕೂಟಮಿ ಆಥವಾ ಮಹಾ ಮೈತ್ರಿಯಲ್ಲಿ ಗೊಂದಲ ಮನೆ ಮಾಡಿದ್ದು ಪಕ್ಷಗಳು ಸೀಟು ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿವೆ ಎಂಬ ಆರೋಪಗಳು ಕೇಳಿ ಬಂದವು.

2018: ನವದೆಹಲಿ/ ತಿರುವನಂತಪುರಂ/ ಶಬರಿಮಲೈ: ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋಟ್ ಸಂವಿಧಾನ ಪೀಠವು ನೀಡಿದ ಸೆಪ್ಟೆಂಬರ್ ೨೮ರ ತೀರ್ಪಿನ ಅನುಷ್ಠಾನಕ್ಕೆ ಕಾಲಾವಕಾಶ ನೀಡುವಂತೆ ಕೋರಿ ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿತು. ಇದೇ ವೇಳೆಗೆ ದೇವಸ್ಥಾನದಲ್ಲಿ ೧೫,೦೦೦ ಮಂದಿ ಪೊಲೀಸರನ್ನು ನಿಯೋಜಿಸಿದ್ದು ಏಕೆ ಎಂದು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ದೇವಾಲಯದ ಆಡಳಿತವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯು ತೀರ್ಪು ಅನುಷ್ಠಾನಕ್ಕೆ ಕಾಲಾವಕಾಶ ಕೋರಿಕೆಗೆ ಮೂಲಭೂತ ಸವಲತ್ತುಗಳ ಕೊರತೆ ಸೇರಿದಂತೆ ಹಲವಾರು ಕಾರಣಗಳನ್ನು ತನ್ನ ಅರ್ಜಿಯಲ್ಲಿ ನಮೂದಿಸಿತು. ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯಗಳು ಇಲ್ಲದ ಪರಿಣಾಮವಾಗಿ ಭಕ್ತರಿಗೆ ವಿಶೇಷವಾಗಿ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಯಾತ್ರಾರ್ಥಿಗಳು ಹೇಳಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭಾರೀ ಪ್ರವಾಹದ ಪರಿಣಾಮವಾಗಿ ಮೂಲಭೂತ ಸವಲತ್ತುಗಳು ನಾಶಗೊಂಡಿವೆ ಎಂದು ಮಂಡಳಿಯು ತನ್ನ ಅರ್ಜಿಯಲ್ಲಿ ವಿವರಿಸಿತು. ಸೆಪ್ಟೆಂಬರ್ ೨೮ರ ತನ್ನ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಸುಮಾರು ೪೯ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಪ್ಪಿದ್ದ ಸುಪ್ರೀಂಕೋರ್ಟ್ ಋತುಮತಿ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲೆ ಇದ್ದ ನಿಷೇಧವನ್ನು ತೆರವುಗೊಳಿಸಿದ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಹೈಕೋರ್ಟ್ ತರಾಟೆ: ಮಧ್ಯೆ ರಾಜ್ಯದ ಪಟ್ಟಣಂತಿಟ್ಟ ಜಿಲ್ಲೆಯ ಶಬರಿಮಲೈ ದೇವಾಲಯದಲ್ಲಿ ಭಕ್ತರ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ಕ್ರಮವನ್ನು ಪ್ರಶ್ನಿಸಿದ ಕೇರಳ ಹೈಕೋರ್ಟ್ ರಾಜ್ಯದ ಉನ್ನತ ಕಾನೂನು ಅಧಿಕಾರಿಗೆ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿತು.ಸುಪ್ರೀಂಕೋರ್ಟ್ ತೀರ್ಪಿನ ಹೆಸರಿನಲ್ಲಿ ಪೊಲೀಸರು ಇಂತಹ ಸೊಕ್ಕನ್ನು ಪ್ರದರ್ಶಿಸಲು ಹೇಗೆ ಸಾಧ್ಯ? ಎಂದು ಪೊಲೀಸರು ಕಳೆದ ತಿಂಗಳು ಭಕ್ತರ ಮೇಲೆ ಬೆತ್ರ ಪ್ರಹಾರ ಮಾಡಿದ ಮತ್ತು ಬಂಧನ ಮತ್ತಿತರ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಾ ಕೋರ್ಟ್ ಪ್ರಶ್ನಿಸಿತು.  ‘ಶಬರಿಮಲೈಯಲ್ಲಿ ನಿಮಗೆ ೧೫,೦೦೦ ಪೊಲೀಸರ ಆವಶ್ಯಕತೆ ಏನಿತ್ತು?’ ಎಂದು ಸರ್ಕಾರವನ್ನು ಪ್ರಶ್ನಿಸಿದ ಕೋರ್ಟ್, ಸರ್ಕಾರದ ಕ್ರಮದ ಬಗ್ಗೆ ಖುದ್ದು ಹಾಜರಾಗಿ  ನ್ಯಾಯಾಲಯಕ್ಕೆ ವಿವರಿಸಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತುಬೆಟ್ಟದ ಮೇಲಿನ ದೇವಾಲಯದಲ್ಲಿ ಭಕ್ತರಿಗೆ ಮೂಲಭೂತ ಸವಲತ್ತುಗಳ ಕೊರತೆಯಾಗಿರುವ ಬಗೆಗೂ ಹೈಕೋರ್ಟ್ ಪ್ರಶ್ನಿಸಿತು. ‘ಶಬರಿಮಲೈಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಕಾರ್ ಸೂಚಿಗಳು ಇದ್ದಂತೆ ಕಾಣುತ್ತಿದೆ ಎಂದೂ ಕೋರ್ಟ್ ಹೇಳಿತು. ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳಾ ಪ್ರವೇಶಕ್ಕೆ ವಿರೋಧಿಸಿ ರಾಜ್ಯಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸಂಬಂಧದಲ್ಲಿ  ಪೊಲೀಸರು ,೫೦೫ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದು ೫೨೯ ಪ್ರಕರಣಗಳನ್ನು ದಾಖಲಿಸಿದರು. ಋತುಮತಿ ವಯಸ್ಸಿನ ಮಹಿಳೆಯರ ದೇಗುಲ ಪ್ರವೇಶ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ೬೪ ದಿನಗಳ ವಾರ್ಷಿಕ ಯಾತ್ರಾ ಅವಧಿಗಾಗಿ ಮೂರನೇ ಬಾರಿಗೆ  ದೇವಾಲಯದ ಬಾಗಿಲು ತೆರೆಯಲಾಗಿತ್ತು. ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ಪೊಲೀಸರು ನಡೆಸಿದ ದಮನ ಮತ್ತು ೬೮ ಜನರ ಬಂಧನವನ್ನು ಪ್ರತಿಭಟಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕತರು ಸೋಮವಾರ ಕೇರಳದಾದ್ಯಂತ ಪ್ರತಿಭಟನೆಗಳನ್ನು ನಡೆಸಿದರುಯಾತ್ರಾ ಅವಧಿಯ ಎರಡನೇ ದಿನ ಪೊಲೀಸರು ಪ್ರತಿಭಟನಕಾರರನ್ನು ಚದರುವಂತೆ ಸೂಚಿಸಿದ್ದರು. ಪ್ರತಿಭಟನಕಾರರು ನಿರಾಕರಿಸಿದಾಗ, ಭದ್ರತಾ ಪಡೆಗಳು ೭೦ ಮಂದಿಯನ್ನು ಸೋಮವಾರ ನಸುಕಿನ ವೇಳೆಯಲ್ಲಿ ಬಂಧಿಸಿದವು. ಶಬರಿಮಲೈಯಲ್ಲಿ ಇಂತಹ ಘಟನೆ ನಡೆದದ್ದು ಇದೇ ಮೊದಲು. ದೇಗುಲ ತಲುಪಿದ ಶಶಿಕಲಾ: ನಡುವೆ, ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಶುಕ್ರವಾರ ಬಂಧಿಸಲ್ಪಟ್ಟಿದ್ದ ಹಿಂದು ಐಕ್ಯ ವೇದಿ ನಾಯಕಿ ಕೆ.ಪಿ. ಶಶಿಕಲಾ ಅವರು ಸೋಮವಾರ ದೇವಾಲಯವನ್ನು ಪ್ರವೇಶಿಸಿದರು. ದರ್ಶನದ ಬಳಿಕ ವಾಪಸಾಗುವುದಾಗಿ ಆಕೆ ಭರವಸೆ ಕೊಟ್ಟದ್ದನ್ನು ಅನುಸರಿಸಿ ದೇವಾಲಯಕ್ಕೆ ಭೇಟಿ ನೀಡಲು ಆಕೆಗೆ ಅನುಮತಿ ನೀಡಲಾಯಿತು. ಸಿಎಂ ಮನೆ ಮುಂದೆ ಪ್ರತಿಭಟನೆ: ಈದಿನ ನಸುಕಿನಲ್ಲಿ ಶಬರಿಮಲೈಯಲಿ ೭೦ಕ್ಕೂ ಹೆಚ್ಚು ಮಂದಿಯ ಬಂಧನವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೋಮವಾರ ತಿರುವನಂತಪುರಂನ ನಂತನಕೋಡಿನಲ್ಲಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತ ನಿವಾಸ ಕ್ಲಿಫ್ ಹೌಸ್ ಬಳಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಕರಿಪತಾಕೆ ತೋರಿಸಿದರುಭಕ್ತರು ಉಗ್ರಗಾಮಿಗಳಲ್ಲ- ಕೇಂದ್ರ ಸಚಿವ ಅಲ್ಫೋನ್ಸ್: ಕೇಂದ್ರ ಸಚಿವ ಕೆ.ಜೆ. ಅಲ್ಫೋನ್ಸ್ ಅವರು ಸೋಮವಾರ ಶಬರಿಮಲೈ ದೇವಾಲಯಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯಕ್ಕೆ ತಲುಪಿದ ಬಳಿಕ ಪತ್ರಕರ್ತರ ಬಳಿ ಮಾತನಾಡಿದ ಅಲ್ಫೋನ್ಸ್ ಅವರುಶಬರಿಮಲೈಯಲ್ಲಿ ೧೫,೦೦೦ ಪೊಲೀಸರು ಏಕೆ ಬೇಕು? ಭಕ್ತರು ಉಗ್ರಗಾಮಿಗಳಲ್ಲ. ಇದು ಪ್ರಜಾಪ್ರಭುತ್ವವಲ್ಲ. ಇದನ್ನು ಕಂಡು ಸ್ಟಾಲಿನ್ಗೂ ನಾಚಿಕೆಯಾದೀತು. ಸರ್ಕಾರವು ಭಕ್ತರನ್ನು ವೈರಿಗಳು ಎಂದು ಪರಿಗಣಿಸಿ ಅಸಹಾಯಕ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಮುಕ್ತ ಅವಕಾಶ ಕೊಟ್ಟಿದೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ನಾಯಕ ಮತ್ತ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ ಚೆನ್ನತ್ತಲ ಅವರುಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು. ರಾಜ್ಯವು ಎಂದೂ ಇಂತಹ ಸಂವೇದನಾರಹಿತ ಮುಖ್ಯಮಂತ್ರಿಯ ಆಳ್ವಿಕೆಗೆ ಒಳಗಾಗಿರಲಿಲ್ಲ ಎಂದು ಹೇಳಿದರುಈದಿನ ನಸುಕಿನ ಘಟನೆಯು ಸಂಘ ಪರಿವಾರದ ಸಂಘಟನೆಗಳ ವ್ಯವಸ್ಥಿತ ಕೃತ್ಯ. ಇಂತಹ ಚಳವಳಿಗಳಿಗೆ ಸರ್ಕಾರ ಬಾಗುವುದಿಲ್ಲ ಎಂದು ನುಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರುಆರೆಸ್ಸೆಸ್ ಶಬರಿಮಲೈಯ ಪರಿಸರವನ್ನು ಹಾಳುಗೆಡವಲು ಯತ್ನಿಸುತ್ತಿದೆ ಎಂದು ಆಪಾದಿಸಿದರು. ಕಾನೂನು ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿರುವಾಗ ಕೇಂದ್ರ ಸಚಿವ ಅಲ್ಫೋನ್ಸ್ ಅವರು ಶಬರಿಮಲೈಗೆ ಭೇಟಿ ನೀಡಬಾರದಾಗಿತ್ತು. ಅವರ ಭೇಟಿಯು ಗಲಭೆ ಸೃಷ್ಟಿಕರ್ತರಿಗೆ ಶಕ್ತಿಕೊಡುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದರು.

2018: ಟೋಕಿಯೋ: ಜಪಾನಿನ ಪ್ರಖ್ಯಾತ ಕಂಪೆನಿ ನಿಸ್ಸಾನ್ ಮೋಟಾರ್ ಕಂಪೆನಿ ಲಿಮಿಟೆಡ್ ಅಧ್ಯಕ್ಷ ಕಾರ್ಲೋಸ್ ಘೋಸ್ನ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಯೋಮಿಯುರಿ ದಿನ ಪತ್ರಿಕೆಯು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿತು. ಕಾರ್ಲೋಸ್ ಘೋಸ್ನ್ ಅವರು ಕಂಪೆನಿಯ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು ಎಂದು ಜಪಾನಿನ ಆಟೋಮೇಕರ್ ಹೇಳಿತು.  ಘೋಸ್ನ್ ಮತ್ತು ಪ್ರಾತಿನಿಧಿಕ ನಿರ್ದೇಶಕರಾದ (ರೆಪ್ರಸೆಂಟೇಟಿವ್ ಡೈರೆಕ್ಟರ್) ಗ್ರೆಗ್ ಕೆಲ್ಲಿ ಅವರು ಕಳೆದ ಹಲವಾರು ತಿಂಗಳುಗಳಿಂದ ನಡೆಸಿರಬಹುದಾದ ಅಕ್ರಮಗಳ ಬಗ್ಗೆ ತಾನು ತನಿಖೆ ನಡೆಉಸುತ್ತಿರುವುದಾಗಿ ಕಂಪೆನಿಯು ಹೇಳಿತು. ಘೋಸ್ನ್ ಅವರು ಅಪರೂಪದ ವಿದೇಶೀ ಉನ್ನತ ಎಕ್ಸಿಕ್ಯೂಟಿವ್ ಆಗಿದ್ದು ನಿಸ್ಸಾನ್ ಕಂಪೆನಿಯನ್ನು ದಿವಾಳಿಯ ಅಂಚಿನಿಂದ ಮೇಲಕ್ಕೆ ತಂದವರಾಗಿದ್ದು ಅತ್ಯುತ್ತಮ ಹೆಸರನ್ನು ಹೊಂದಿದ್ದರು. ಅವರು ಭ್ರಷ್ಟಾಚಾರದಲ್ಲಿ ನಿರತರಾದ ಸುದ್ದಿಯಿಂದ ಜಪಾನ್ ದೇಶಕ್ಕೆ ಆಘಾತವಾಗಿದೆ. ಘೋಸ್ನ್ ಅವರು ಫ್ರಾನ್ಸಿನ ರೆನಾಲ್ಟ್ ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ  ಎಕ್ಸಿಕ್ಯೂಟಿವ್ ಕೂಡಾ ಆಗಿದ್ದರು. ವಿಸಲ್ ಬ್ಲೋಯರ್ ವರದಿಯೊಂದನ್ನು ಆಧರಿಸಿ ಘೋಸ್ನ್ ಮತ್ತು ಗ್ರೆಗ್ ಕೆಲ್ಲಿ ಅವರು ಕಳೆದ ಹಲವಾರು ತಿಂಗಳುಗಳಿಂದ ನಡೆಸುತ್ತಿದ್ದಿರಬಹುದಾದ ಅಕ್ರಮಗಳ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಜಪಾನಿನ ಆಟೋಮೇಕರ್ ಕಂಪೆನಿ ನಿಸ್ಸಾನ್ ಮೋಟಾರ್ ಕಂಪೆನಿ ಲಿಮಿಟೆಡ್ ತಿಳಿಸಿದ್ದು, ತನಿಖೆಗಾರರಿಗೆ ಪೂರ್ಣ ಸಹಕಾರ ನೀಡುತ್ತಿರುವುದಾಗಿಯೂ ಹೇಳಿತು.

2008: ದಾಳಿಂಬೆ ಬೆಳೆ ಬಾಧಿಸುತ್ತಿರುವ ದುಂಡಾಣು ಅಂಗಮಾರಿ ರೋಗ ನಿಯಂತ್ರಣಕ್ಕೆ ಗೋಮೂತ್ರ ರಾಮಬಾಣವಾಗಿದೆ ಎಂದು ರಾಜ್ಯ ದಾಳಿಂಬೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಜಿ.ರುದ್ರಗೌಡ ಕುಷ್ಟಗಿಯಲ್ಲಿ ಹೇಳಿದರು. ಸಿಂಡಿಕೇಟ್ ಬ್ಯಾಂಕ್ ಸ್ಥಳೀಯ ಶಾಖೆಯಲ್ಲಿ `ಗ್ರಾಹಕರ ಸಮಾವೇಶ'ದಲ್ಲಿ ಮುಖ್ಯ ಅತಿಥಿಯಾಗಿ  ಅವರು ಮಾತನಾಡುತ್ತಿದ್ದರು. ದುಂಡಾಣು ಅಂಗಮಾರಿ ರೋಗದಿಂದಾಗಿ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ. ದುಬಾರಿ ಔಷಧಗಳನ್ನು ಸಿಂಪಡಿಸುವ ಮೂಲಕ ಎಷ್ಟೇ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ಹತೋಟಿಗೆ ಬಾರದ ಕಾರಣ ರೈತರು ಹತಾಶರಾಗಿದ್ದಾರೆ. ಆದರೆ ಗೋಮೂತ್ರವನ್ನು ಸಿಂಪಡಿಸಿದ ಅನೇಕ ರೈತರು ಅದರಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳಿದ್ದು ಅಂಥ ಅನುಭವಿ ರೈತರಿಂದ ಮಾಹಿತಿ ಪಡೆಯಬೇಕು ಎಂದು ದಾಳಿಂಬೆ ಬೆಳೆಗಾರರಿಗೆ ಸಲಹೆ ನೀಡಿದರು. ಸದರಿ ರೋಗ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಸಂಶೋಧನೆಗಳನ್ನು ನಡೆಸಲಿ ಎಂಬ ಕಾರಣಕ್ಕೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸರ್ಕಾರ ರೂ 1 ಕೋಟಿ ಧನ ಸಹಾಯ ನೀಡಿದೆ. ಆದರೆ ಈವರೆಗೂ ವಿಜ್ಞಾನಿಗಳು ಸೂಕ್ತ ಪರಿಹಾರ ಸೂಚಿಸಿಲ್ಲ ಎಂದು ಅವರು ವಿಷಾದಿಸಿದರು.

2008: ಪ್ರಸಕ್ತ ವರ್ಷದ `ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಹಾಗೂ ಅಭಿವೃದ್ಧಿ' ಪ್ರಶಸ್ತಿಗೆ ವಿಯೆನ್ನಾದಲ್ಲಿರುವ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)ಯ ಮಹಾನಿರ್ದೇಶಕ ಮೊಹಮ್ಮದ್ ಎಲ್ ಬರಾಡಿ ಆಯ್ಕೆಯಾದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಅಂತಾರಾಷ್ಟ್ರೀಯ ನ್ಯಾಯಮಂಡಳಿಯು, ಸೇನಾ ಉದ್ದೇಶಗಳಿಗೆ ಅಣುಶಕ್ತಿ ಬಳಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅದರ ಶಾಂತಿಯುತ ಬಳಕೆಗೆ ಸ್ಥಿರ ಬೆಂಬಲ ನೀಡಿರುವ ಸೇವೆಯನ್ನು ಪರಿಗಣಿಸಿ ಎಲ್ ಬರಾಡಿ ಅವರಿಗೆ ಪ್ರಶಸ್ತಿಗೆ ನೀಡಲು ನಿರ್ಧರಿಸಿತು.

2008: ಅಂತಾರಾಷ್ಟ್ರೀಯ ನೌಕಾ ಪಡೆಗಳ ಕಣ್ಗಾವಲಿನ ನಡುವೆಯೂ ಸೋಮಾಲಿಯಾ ಕಡಲ್ಗಳ್ಳರು ಮತ್ತೊಂದು ಹಡಗನ್ನು ವಶಕ್ಕೆ ತೆಗೆದುಕೊಂಡರು. ಕೆಲವು ಮಂದಿ ಭಾರತೀಯರ ಸಹಿತ 25 ಮಂದಿ ಒತ್ತೆಯಾಳುಗಳಾದರು. ವಿಶ್ವದ ಅತ್ಯಂತ ದೊಡ್ಡ ತೈಲ ಸಾಗಾಟದ ಹಡಗು ಸೌದಿ ಅರೇಬಿಯಾದ `ಸಿರಿಯಸ್ ಸ್ಟಾರ'ನ್ನು ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆಯಿತು.

2008: ಹಿರಿಯ ತಮಿಳು ಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಎಂ.ಎನ್. ನಂಬಿಯಾರ್ (92) ಚೆನ್ನೈಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಮೃತರಾದರು. ಖಳನಾಯಕನ ಪಾತ್ರದಲ್ಲಿ ಚಿತ್ರಪ್ರೇಮಿಗಳ ಮನ ಗೆದ್ದಿದ್ದ ಅವರು, ವೃದ್ಧಾಪ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ, ಮಗಳು ಹಾಗೂ ಮಗ ಬಿಜೆಪಿಯ ನಾಯಕ ಸುಕುಮಾರನ್ ನಂಬಿಯಾರ್ ಅವರನ್ನು ಅಗಲಿದರು. ನಂಬಿಯಾರ್ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

2008: ಪ್ರಧಾನಿ ಆಗಬೇಕೆಂದು ಬಾಲ್ಯದಿಂದಲೇ ಕನಸು ಕಾಣುತ್ತಿದ್ದ ಕೋಟ್ಯಧಿಪತಿ ಜಾನ್ ಕೀ ನ್ಯೂಜಿಲೆಂಡಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

2008: ಮಲೆನಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವಿನ ಕಾದಾಟ ಒಂದೂವರೆ ವರ್ಷದ ವಿರಾಮದ ನಂತರ ಮತ್ತೆ ಮುಂದುವರೆಯಿತು. ಹಸಿರು ವನರಾಶಿಯ ಮಧ್ಯೆ ರಕ್ತದ ಓಕುಳಿ ಮತ್ತೆ ಹರಿಯಿತು. ಹೊರನಾಡು ಸಮೀಪದ ಮಾವಿನಹೊಲ ಬಳಿಯ ಮುತ್ತಿನಕಡಿವೆ ಪ್ರದೇಶದಲ್ಲಿ ಹಿಂದಿನ ದಿನ ಮಧ್ಯರಾತ್ರಿಯಿಂದ ಈದಿನ ಬೆಳಗಿನ ಜಾವದವರೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಮತ್ತು ಒಬ್ಬ  ಕೆ ಎಸ್ ಆರ್ ಪಿ ಪೊಲೀಸ್ ಪೇದೆ ಗುರುಪ್ರಸಾದ್ ಹತರಾದರು.

2008: ಗ್ರಾಮಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸುವ `ಸುವರ್ಣ ಗ್ರಾಮ' ಯೋಜನೆಯಡಿ ಹೊಸದಾಗಿ ಇನ್ನೂ 1000 ಗ್ರಾಮಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ಸಭೆ ನಿರ್ಧರಿಸಿತು. ಹಿಂದಿನ ಸಮ್ಮಿಶ್ರ ಸರ್ಕಾರ `1000 ಗ್ರಾಮ: 1000 ಕೋಟಿ' ಯೋಜನೆಯಡಿ ಸುವರ್ಣ ಗ್ರಾಮ ಕಾರ್ಯಕ್ರಮವನ್ನು ರೂಪಿಸಿತ್ತು. ಅದನ್ನೇ ಈಗಲೂ ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

2008: ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಕಾರ್ಯಕರ್ತರ `ಕಾಯಕಲ್ಪ ಪ್ರತಿಜ್ಞಾ ಸಮಾವೇಶ'ದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅವರು ಜನತಾದಳ (ಎಸ್) ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದರು. ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಬಂದ ಪರಿಣಾಮವಾಗಿ ಇಡೀ ನಗರದಲ್ಲಿ ವಾಹನ ದಟ್ಟಣೆಯುಂಟಾಗಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು.

2007: ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಜನತಾದಳ (ಎಸ್) ಕೈಕೊಟ್ಟ ಪರಿಣಾಮವಾಗಿ ಒಂದೇ ವಾರದಲ್ಲಿ ಪತನಗೊಂಡಿತು. ಏಳು ದಿನಗಳ ಹಿಂದೆ ನವೆಂಬರ್ 12ರಂದು ಅಸ್ತಿತ್ವಕ್ಕೆ ಬಂದಿದ್ದ ಸರ್ಕಾರ ಈದಿನ ಕುಸಿದು ಬೀಳುವುದರೊಂದಿಗೆ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಸರ್ಕಾರ ಎಂಬ ದಾಖಲೆಗೂ ಕಾರಣವಾಯಿತು. ಉಭಯ ಪಕ್ಷಗಳ ಮರು ಮೈತ್ರಿಯೂ ಮುರಿದು ಬಿತ್ತು. ಸರ್ಕಾರ ರಚನೆಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರ ಮುಂದೆ ಬಿಜೆಪಿಗೆ ತನ್ನ ಬೆಂಬಲ ಇದೆ ಎಂದು ಹೇಳಿದ್ದ ಜೆಡಿಎಸ್, ಅವಿಶ್ವಾಸದ ಪರ ಮತ ಚಲಾಯಿಸುವ ಸ್ಪಷ್ಟ ನಿರ್ಧಾರವನ್ನು ಬೆಳಿಗ್ಗೆಯೇ ಕೈಗೊಂಡಿತ್ತು. ಇದರಿಂದ ತಮ್ಮ ಸೋಲು ಖಚಿತ ಪಡಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆಯ ನಿರ್ಣಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿರುವಾಗಲೇ ಸದನದಿಂದ ಹೊರ ನಡೆದು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ನಂತರ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.

2007: ಪಾಕಿಸ್ಥಾನದ ಅಧ್ಯಕ್ಷರಾಗಿ ಪರ್ವೇಜ್ ಮುಷರಫ್ ಅವರ ಪುನರಾಯ್ಕೆಯನ್ನು ಪ್ರಶ್ನಿಸಿದ್ದ ಆರು ಅರ್ಜಿಗಳ ಪೈಕಿ ಐದನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಒಂದು ಅರ್ಜಿಯ ವಿಚಾರಣೆಗೆ ಮಾತ್ರ ದಿನ ನಿಗದಿ ಪಡಿಸಿತು. ಈ ಮೊದಲು 11 ಸದಸ್ಯರಿದ್ದ ಪೀಠ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ನ. 3 ರಂದು ತುರ್ತು ಪರಿಸ್ಥಿತಿ ಹೇರಿದ ಮುಷರಫ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಪೀಠದಲ್ಲಿದ್ದ ಬಹುತೇಕ ನ್ಯಾಯಮೂರ್ತಿಗಳನ್ನು ವಜಾ ಮಾಡಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ಡೋಗರ್ ನೇತೃತ್ವದ 10 ಸದಸ್ಯರ ಪೂರ್ಣಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಜಾಗೊಂಡ 5 ಅರ್ಜಿಗಳಲ್ಲಿ ನಿವೃತ್ತ ನ್ಯಾಯಮೂರ್ತಿ ವಾಜಿಹ್ದುದೀನ್ ಅಹ್ಮದ್ ಹಾಗೂ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ನಾಯಕ ಮಕ್ದೂಮ್ ಅಮಿನ್ ಫಹಿನ್ ಅವರು ಸಲ್ಲಿಸಿದ್ದ ಅರ್ಜಿಗಳೂ ಸೇರಿದ್ದವು.

2007: 65 ವರ್ಷ ವಯಸ್ಸಿಗೂ ಹೆಚ್ಚು ವಯೋಮಾನದ ಹಿರಿಯ ನಾಗರಿಕರ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ಇದರಿಂದ ಸುಮಾರು 16 ದಶಲಕ್ಷ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಬೊಕ್ಕಸಕ್ಕೆ ವಾರ್ಷಿಕ 3,772 ಕೋಟಿ ರೂಪಾಯಿಗಳಷ್ಟು ಹೊರೆಯಾಗಲಿದೆ. `ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧರ ಪಿಂಚಣಿ' ಯೋಜನೆಯ ಪ್ರಕಾರ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 200 ರೂಪಾಯಿಗಳನ್ನು ನೀಡುತ್ತದೆ. ರಾಜ್ಯ ಸರ್ಕಾರಗಳು ಈ ಮೊತ್ತಕ್ಕೆ 200 ರೂಪಾಯಿಗಳನ್ನು ಸೇರಿಸಿ ಒಟ್ಟು ರೂ 400 ಕೊಡಬೇಕಾಗುತ್ತದೆ. ಈ ಪಿಂಚಣಿ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಉದ್ಘಾಟಿಸಿದರು.

2007: ಅಂಪೈರ್ ತೀರ್ಪಿಗೆ ಗೌರವ ನೀಡದ ಭಾರತ ತಂಡದ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ರೋಷನ್ ಮಹಾನಾಮಾ ಅವರು ಪಂದ್ಯ ಶುಲ್ಕದ ಶೇಕಡಾ ಇಪ್ಪತ್ತರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದರು. ಉಮರ್ ಗುಲ್ ಬೌಲಿಂಗಿನಲ್ಲಿ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಚೆಂಡನ್ನು ಹಿಡಿತಕ್ಕೆ ಪಡೆದಾಗ ಅಂಪೈರ್ ಸುರೇಶ್ ಶಾಸ್ತ್ರಿ ಅವರು ಯುವರಾಜ್ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಆಗ ಯುವರಾಜ್ ಆಕ್ಷೇಪಿಸಿದ್ದರು.

2006: ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗೆ ನೀಡಲಾಗುವ 2005ನೇ ಸಾಲಿನ `ಇಂದಿರಾಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ  ಅವರಿಗೆ ಪ್ರದಾನ ಮಾಡಿದರು.

2006: ಮುಂಬೈ ಕನ್ನಡಿಗರಲ್ಲಿ ಮನೆ ಮಾತಾಗಿರುವ ರಂಗ ನಿರ್ದೇಶಕ ಭರತ್ ಕುಮಾರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು `ಕೆ. ಮಾಸ್ಟರ್ ಹಿರಣ್ಣಯ್ಯ ಶತಮಾನೋತ್ಸವ ದತ್ತಿ ನಿಧಿ' ಪ್ರಶಸ್ತಿ ನೀಡಿ ಗೌರವಿಸಿತು.

2006: ತಲಕಾಡಿನಲ್ಲಿ ಸಹಸ್ರಮಾನದ ಮೊತ್ತ ಮೊದಲ ಪಂಚಲಿಂಗ ದರ್ಶನದ ಪೂಜಾ ವಿಧಿ ವಿಧಾನಗಳು ಮಧ್ಯರಾತ್ರಿ ಬಳಿಕ ಸಡಗರದೊಂದಿಗೆ ಆರಂಭವಾಯಿತು. ಒಂದು ಲಕ್ಷಕ್ಕೂ  ಹೆಚ್ಚು ಮಂದಿ ಭಕ್ತರು ಪಂಚಲಿಂಗ ದರ್ಶನಾಕಾಂಕ್ಷಿಗಳಾಗಿ ತಲಕಾಡಿಗೆ ಬಂದಿದ್ದರು.

2006: ತಾತ್ಕಾಲಿಕ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಾಗ ಭಾವನೆಗಳು ಮತ್ತು ಅನುಕಂಪ ಮಾನದಂಡ ಆಗಬಾರದು ಎಂದು ಸುಪ್ರೀಂ ಕೋರ್ಟ್ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿತು. ತಾತ್ಕಾಲಿಕ ನೌಕರರಿಗೆ ಖಾಯಂ ಹುದ್ದೆಗಳ ಮೇಲೆ ಹಕ್ಕಿಲ್ಲ. ತಾತ್ಕಾಲಿಕ ನೌಕರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಾನೂನು ಮಿತಿಯಲ್ಲೇ ಇತ್ಯರ್ಥಪಡಿಸಬೇಕು ಎಂದೂ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಮತ್ತು ಮಾರ್ಕಾಂಡೇಯ ಕಟ್ಜು ಅವರ ಪೀಠ ಹೇಳಿತು. ತಾತ್ಕಾಲಿಕ ಮತ್ತು ಕಾಯಂ ನೌಕರರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಕಾಯಂ ನೌಕರರಿಗೆ ಹುದ್ದೆಯ ಮೇಲೆ ಹಕ್ಕಿದೆ; ತಾತ್ಕಾಲಿಕ ನೌಕರರಿಗೆ ಇಲ್ಲ. ತನ್ನ ಸೇವಾವಧಿ ಇರುವವರೆಗೆ (ವಜಾ ಆಗದ್ದಿದರೆ) ನೌಕರಿಯಲ್ಲಿ ಮುಂದುವರಿವ ಹಕ್ಕು ಕಾಯಂ ನೌಕರರಿಗೆ ಮಾತ್ರವೇ ಇದೆ ಎಂದು ಪೀಠವು ಸ್ಪಷ್ಟಪಡಿಸಿತು. ಸರ್ಕಾರಿ ಅಧೀನದ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಕೆಲ ತಾತ್ಕಾಲಿಕ ನೌಕರರು ಸೇವಾ ಅವಧಿಯವರೆಗೂ ನೌಕರಿಯಲ್ಲಿ ಮುಂದುವರಿಯಬಹುದು ಎಂಬುದಾಗಿ ಉತ್ತರಾಂಚಲ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಮಾನವನ್ನು ಪ್ರಕಟಿಸಿತು. ಕಾಯಂ ನೌಕರರಿಗೆ ನೀಡುವ ವೇತನ ಸೌಲಭ್ಯವನ್ನೇ ತಾತ್ಕಾಲಿಕ ನೌಕರರಿಗೂ ನೀಡಬೇಕು ಎಂದು ಉತ್ತರಾಂಚಲ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪೀಠವು ತಳ್ಳಿಹಾಕಿ, `ಈ ಆದೇಶ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ. ತಾತ್ಕಾಲಿಕ ನೌಕರರನ್ನೂ ಸೇವೆಯಲ್ಲಿಮುಂದುವರಿಸಲು ಕೋರ್ಟುಗಳು ನಿರ್ದೇಶಿಸಲಾಗದು' ಎಂದು ಹೇಳಿತು.

2006: ನೆಲದಿಂದ ನೆಲಕ್ಕೆ ಚಿಮ್ಮುವ ಭಾರತದ ಅತ್ಯಾಧುನಿಕ ಮಧ್ಯಂತರಗಾಮೀ ಕ್ಷಿಪಣಿ `ಪೃಥ್ವಿ'ಯ ಪರೀಕ್ಷಾರ್ಥ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿಗೆ 15 ಕಿ.ಮೀ. ದೂರದಲ್ಲಿರುವ ಚಂಡೀಪುರ ಸಮೀಪದ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಂಚಾರಿ ಉಡಾವಣಾ ವಾಹನದಲ್ಲಿ ಇರಿಸಲಾಗಿದ್ದ ದೇಶೀ ನಿರ್ಮಿತ ಏಕಹಂತದ ಕ್ಷಿಪಣಿಯನ್ನು ಬೆಳಗ್ಗೆ 9.55ರ ವೇಳೆಗೆ ಚಂಡೀಪುರದ ಸಮೀಪ ಸಮುದ್ರದಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ ಹಾರಿಸಲಾಯಿತು. ಈ ಕ್ಷಿಪಣಿಯು 150ರಿಂದ 250 ಕಿ.ಮೀ. ದೂರಕ್ಕೆ ನೆಗೆಯುವ ಸಾಮರ್ಥ್ಯ ಹೊಂದಿದೆ. ಸ್ಫೋಟಕ ವಸ್ತುವಿನ ಸಿಡಿತಲೆ ತೂಕ ಕಡಿಮೆಗೊಳಿಸುವ ಮೂಲಕ ಇದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ. 8.65 ಮೀಟರ್ ಎತ್ತರ ಹಾಗೂ 1 ಮೀಟರ್ ದಪ್ಪ ಇರುವ ಕ್ಷಿಪಣಿಯನ್ನು ಈಗಾಗಲೇ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಒಂದು ಟನ್ ತೂಕದ ಸ್ಫೋಟಕ ಸಿಡಿತಲೆಯೂ ಸೇರಿದಂತೆ 4.6 ಟನ್ ತೂಕದ `ಪೃಥ್ವಿ' ಕ್ಷಿಪಣಿಯು ಘನ ಹಾಗೂ ದ್ರವ ರೂಪದ `ಪ್ರೊಪಲ್ಲೆಂಟ್' ಬಳಸಬಲ್ಲುದು. 150 ಕಿ.ಮೀ. ದೂರದಾಚೆಯ ನಿರ್ದಿಷ್ಟ ಗುರಿಯನ್ನು ಕ್ಷಿಪಣಿಯು 300 ಸೆಕೆಂಡುಗಳಲ್ಲಿ ತಲುಪಬಲ್ಲುದು. ಸಮರ ಕಾಲದ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನಿರ್ಮಿಸಲಾದ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಭಿವೃದ್ಧಿ ಪಡಿಸಿದೆ. 700 ಕಿ.ಗ್ರಾಂ. ತೂಕದ ಸಿಡಿತಲೆಯೊಂದಿಗೆ 250 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಈ ಕ್ಷಿಪಣಿಗೆ ಇದೆ. ಸಿಡಿತಲೆ ತೂಕವನ್ನು 1000 ಕಿ.ಗ್ರಾಂ,ಗೆ ಹೆಚ್ಚಿಸಬಹುದು.

2005: ದಿವಂಗತ ಇಂದಿರಾಗಾಂಧಿ ಅವರ ಸ್ಮರಣಾರ್ಥ ನೀಡಲಾಗುವ 2004ರ ಸಾಲಿನ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಥಾಯ್ಲೆಂಡಿನ ರಾಜಕುಮಾರಿ ಮಹಾ ಚಕ್ರಿ ಸಿರಿಂಧೋರ್ನ್ ಅವರಿಗೆ ನವದೆಹಲಿಯಲ್ಲಿ ಪ್ರದಾನ ಮಾಡಿದರು.

1997: ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಲ್ಪನಾ ಚಾವ್ಲಾ ಪಾತ್ರರಾದರು. ಚಾವ್ಲಾ ಮತ್ತು ಇತರ ಐವರು ಇದ್ದ ಶಟಲ್ ನೌಕೆ 16 ದಿನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರಿತು.

1994: ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ ಬರ್ಗಿನ ಸನ್ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯ ರೈ ಅವರು `ವಿಶ್ವ ಸುಂದರಿ' ಕಿರೀಟ ಧರಿಸಿದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.

1992: ಕರ್ನಾಟಕದ ಮುಖ್ಯಮಂತ್ರಿಯಾಗಿ ಎಂ. ವೀರಪ್ಪ ಮೊಯಿಲಿ ಅಧಿಕಾರ ಸ್ವೀಕರಿಸಿದರು.

1975: ಸುಶ್ಮಿತಾ ಸೇನ್ ಹುಟ್ಟಿದ ದಿನ. 1994ರಲ್ಲಿ ನಡೆದ `ಭುವನಸುಂದರಿ' ಸ್ಪರ್ಧೆಯಲ್ಲಿ ಇವರು `ಮಿಸ್ ಯುನಿವರ್ಸ್' ಕಿರೀಟ ಧರಿಸುವ ಮೂಲಕ `ಭುವನ ಸುಂದರಿ' ಎನಿಸಿದ ಭಾರತದ ಮೊದಲ ಮಹಿಳೆಯಾದರು.

1951: ಚಿತ್ರನಟಿ ಝೀನತ್ ಅಮಾನ್ ಹುಟ್ಟಿದ ದಿನ.

1947: ಸಾಹಿತಿ ತಿಲಕನಾಥ ಮಂಜೇಶ್ವರ ಜನನ.

1946: ಸಾಹಿತಿ, ಪ್ರಾಧ್ಯಾಪಕ ಸಿದ್ಧರಾಮಯ್ಯ ಅವರು ಗುರುಭಕ್ತಯ್ಯ- ರೇವಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಜನಿಸಿದರು.

1945: ಸಾಹಿತಿ ಲೋಕನಾಥ ದೀಕ್ಷಿತ್ ಜನನ.

1928: ರಕ್ಷಾಪುಟದಲ್ಲಿ ಜಪಾನಿನ ಚಕ್ರವರ್ತಿ ಹಿರೊಹಿತೊ ಅವರ ಚಿತ್ರವನ್ನು ಹಾಕುವ ಮೂಲಕ `ಟೈಮ್' ಪತ್ರಿಕೆ ಮೊತ್ತ ಮೊದಲ ಬಾರಿಗೆ ವ್ಯಕ್ತಿಯೊಬ್ಬರ ಭಾವಚಿತ್ರವನ್ನು  ಮುಖಪುಟದಲ್ಲಿ ಪ್ರಕಟಿಸಿತು.

1917: ಇಂದಿರಾ ಗಾಂಧಿ (1917-1984) ಹುಟ್ಟಿದ ದಿನ. ಭಾರತದ ಪ್ರಧಾನಿಯಾಗಿದ್ದ ಇವರು 1984ರ ಅಕ್ಟೋಬರ್ 31ರಂದು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತರಾದರು.

1910: ಖ್ಯಾತ ಚಿತ್ರನಟಿ ಗೋಹರ್ ಜನನ.

1893: ನಾಲ್ಕು ಪುಟಗಳ ಮೊತ್ತ ಮೊದಲ ವರ್ಣರಂಜಿತ ಪುರವಣಿ `ನ್ಯೂಯಾರ್ಕ್ ವರ್ಲ್ಡ್' ನಲ್ಲಿ ಪ್ರಕಟಗೊಂಡಿತು.

1877: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ಬ್ಯಾನರ್ಜಿ ಜನನ.

1863: ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟ್ಟೀಸ್ಬರ್ಗ್ ಸಮರಭೂಮಿಯಲ್ಲಿ ರಾಷ್ಟ್ರೀಯ ಸಮಾಧಿಯನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಕೆಲವೇ ತಿಂಗಳುಗಳ ಹಿಂದೆ ಇದೇ ಸ್ಥಳದಲ್ಲಿ 7000 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.

1852: ಕೆನರಾಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದರು.

1838: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದರ್ ಸೇನ್ (1838-1884) ಹುಟ್ಟಿದ ದಿನ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment