Tuesday, June 28, 2016

ಗೋಮೂತ್ರದಲ್ಲಿ ಚಿನ್ನ, 300ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ

ಗೋಮೂತ್ರದಲ್ಲಿ ಚಿನ್ನ, 300ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ
ಸಾಬೀತಾದ ವೇದ, ಪ್ರಾಚೀನ ಗ್ರಂಥಗಳ ಉಲ್ಲೇಖ
ಜುನಾಗಢ: ಗೋವು ಪವಿತ್ರವಾದ ಪ್ರಾಣಿ, ಕಾಮಧೇನು ಎಂದೆಲ್ಲಾ ಪೂಜಿಸುವ ಪರಿಪಾಠ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಗೋಮೂತ್ರದಲ್ಲಿ ಚಿನ್ನದ ಅಂಶವಿದೆ ಎಂದು ವೇದಗಳಲ್ಲಿ ಆಯುರ್ವೇದದಲ್ಲಿ ಉಲ್ಲೇಖಗೊಂಡಿದೆ. ಜುನಾಗಢದಲ್ಲಿ ನಡೆದಿರುವ ಸಂಶೋಧನೆ ಈಗ ಇದನ್ನು ಋಜುವಾತು ಪಡಿಸಿದೆ.

ಸತತ 4 ವರ್ಷಗಳ ನಿರಂತರ ಸಂಶೋಧನೆಯ ಫಲಿತಾಂಶವನ್ನು ಜುನಾಗಢ ಕೃಷಿ ವಿವಿ ವಿಜ್ಞಾನಿಗಳು ಮಂಗಳವಾರ 28 ಜೂನ್ 2016ರಂದು  ಬಹಿರಂಗ ಪಡಿಸಿದರು. 

ಗಿರ್
ತಳಿಯ 400 ಗೋವುಗಳ ಮೂತ್ರವನ್ನು ಸಂಗ್ರಹಿಸಿ ವಿವಿಯ ಆಹಾರ ಪರೀಕ್ಷಾ ಲ್ಯಾಬ್ನಲ್ಲಿ ವಿಜ್ಞನಿಗಳು  ಪ್ರಯೋಗಕ್ಕೆ ಒಳಪಡಿಸಿದ್ದರು. 1ಲೀಟರ್ ಗೋಮೂತ್ರದಲ್ಲಿ 3 ರಿಂದ 10 ಗ್ರಾಂ ಚಿನ್ನ ಪತ್ತೆಯಾಗಿದೆ. ನೀರಿನಲ್ಲಿ ಕರಗಬಲ್ಲ ಅಯಾನ್ಗಳ ರೂಪದಲ್ಲಿ ಪತ್ತೆಯಾಗಿರುವ ಚಿನ್ನವನ್ನು ರಾಸಾಯನಿಕ ವಿಧಾನದಿಂದ ಘನ ರೂಪಕ್ಕೂ ತರಬಹುದು ಎಂದು ಸಂಶೋಧನಾ ತಂಡದ ಮುಖ್ಯಸ್ಥ, ಬಯೋ ಟೆಕ್ನಾಲಜಿ ವಿಭಾಗ ಅಧ್ಯಕ್ಷ ಡಾ. ಬಿ..ಗೋಲಾಕಿಯಾ ಹೇಳಿದರು.

338ಕ್ಕೂ ಹೆಚ್ಚು ಪ್ರತಿಜೀವಕ ಪತ್ತೆ: ಗ್ಯಾಸ್ ಕ್ರೋಮೆಟೋಗ್ರಾಫಿ-ಮಾಸ್ ಸ್ಪೆಕ್ಟೋಮೆಟ್ರಿ ವಿಧಾನ ಬಳಸಿ ಪ್ರಯೋಗ ಮಾಡಿದ್ದು ಯಶ ನೀಡಿದೆ . 5100 ಸಂಯುಕ್ತಗಳೂ ಗೋಮೂತ್ರದಲ್ಲಿ ಕಂಡುಬಂದಿದೆ. ಇವುಗಳಲ್ಲಿ 338ಕ್ಕೂ ಹೆಚ್ಚು ಪ್ರತಿಜೀವಕ (ಆಂಟಿ ಬಯಾಟಿಕ್)ಗಳಾಗಿದ್ದು, ಜೌಷಧೀಯ ಬಳಕೆಗೆ ಬರುತ್ತದೆ. ಎಮ್ಮೆ, ಕುದುರೆ, ಒಂಟೆ, ಮೇಕೆ ಗಳ ಮೂತ್ರವನ್ನೂ ಪ್ರಯೋಗಕ್ಕೆ ಒಲಪಡಿಸಿದ್ದೆವು. ಗೋಮೂತ್ರದಲ್ಲಿ ಕಂಡುಬಂದ ಯಾವುದೇ ಆಂಟಿ ಬಯಾಟಿಕ್ಗಳು ಅವುಗಳಲ್ಲಿ ಪತ್ತೆಯಾಗಿಲ್ಲ ಎಂದು ವಿಜ್ಞಾನಿಗಳು ವಿವರಿಸಿದರು. 

Wednesday, June 22, 2016

ಪರ್ವತಾರೋಹಿ ಬಾಲಕಿಯನ್ನು ರಕ್ಷಿಸಿದ ಯೋಧರು

ಪರ್ವತಾರೋಹಿ ಬಾಲಕಿಯನ್ನು

ರಕ್ಷಿಸಿದ ಯೋಧರು
ಉತ್ತರಕಾಶಿ: ಉತ್ತರ ಕಾಶಿಯ ಡೊಕ್ರಿಯಾನಿ ಬಾಮಕ್ ನೀರ್ಗಲ್ಲ ಪ್ರದೇಶದಲ್ಲಿ 30 ಅಡಿ ಆಳದ ಕಂದಕ್ಕೆ ಬಿದ್ದ ಪರ್ವತಾರೋಹಿ ಬಾಲಕಿಯೊಬ್ಬರನ್ನು ಭಾರತೀಯ ಸೇನೆಯ ಯೋಧರು 22 ಜೂನ್ 2016ರ ಬುಧವಾರ ರಕ್ಷಿಸಿದರು.

ಸೈನಿಕರ ಕಾರ್ಯಾಚರಣೆಯ ವಿಡಿಯೊ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ:

Friday, June 17, 2016

ಕೆಲಸ ಬೇಜಾರು ಆಗ್ತಿದೆಯಾ?, ಮಂಗಳಗ್ರಹಕ್ಕೆ ಹೊರಡಿ!

ಕೆಲಸ ಬೇಜಾರು ಆಗ್ತಿದೆಯಾ?,

ಮಂಗಳಗ್ರಹಕ್ಕೆ ಹೊರಡಿ!


ಅಟ್ಲಾಂಟಾ: ಮಾಡ್ತಿರೋ ಕೆಲ್ಸ ಬೇಜಾರು ಆಗ್ತಿದೆಯಾ? ಚಿಂತೆ ಬಿಟ್ಟು ಬಿಡಿ. ಮಂಗಳಗ್ರಹದಲ್ಲಿ ವೈವಿಧ್ಯಮಯ ಕೆಲಸಗಳಿಗೆ ಜನ ಬೇಕಾಗಿದ್ದಾರೆ,

ಹೌದು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೀಗೊಂದು ಜಾಹೀರಾತನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

ನಾಸಾ ವೆಬ್ ಸೈಟ್ ಜಾಹೀರಾತಿನ  ಪ್ರಕಾರ ಮಂಗಳ ಗ್ರಹದಲ್ಲಿ ಕೆಲಸಮಾಡಲು ಶಿಕ್ಷಕರು,  ತಂತ್ರಜ್ಞರು, ಸರ್ವೇಯರುಗಳು, ಕೃಷಿಕರು, ರಾತ್ರಿ ಪಾಳಿ ಕೆಲಸಗಾರರು,  ಸಂಶೋಧಕರು, ವೆಲ್ಡರುಗಳು- ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹವರು ಬೇಕಾಗಿದ್ದು, ಹೆಸರು ನೋಂದಾಯಿಸಬಹುದು  ಎಂದು ವೆಬ್ ಸೈಟು  ವರ್ಣರಂಜಿತ ಪೋಸ್ಟರುಗಳಲ್ಲಿ ತಿಳಿಸಿದೆ.

ಈ ವ್ಯಕ್ತಿಗಳೆಲ್ಲ ನಿಜವಾಗಿಯೂ ಬೇಕಾ ಏನೋ ಗೊತ್ತಿಲ್ಲ.  ಆದರೆ ಮಂಗಳ ಗ್ರಹದಲ್ಲಿ ಕಾಲೋನಿ ಮಾಡಲು ನಾಸಾ 2015ರಲ್ಲೇ  ಮೂರು ಹಂತದ ಯೋಜನೆ ರೂಪಿಸಿದೆ.

2030ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವರು ಕೆಲಸ ಮಾಡುತ್ತಿರಬೇಕು ಎಂಬ ಯೋಜನೆಯಂತೆ,
  ಬಾಹ್ಯಾಕಾಶ ಪ್ರವಾಸೋದ್ಯ ಅಭಿವೃದ್ಧಿಯ ನೀಲ ನಕಾಶೆಯನ್ನು ಕೂಡಾ ನಾಸಾ ಈಗಾಗಲೇ ಪ್ರಕಟಿಸಿದೆ.

Thursday, June 16, 2016

ಈ ಅರೆ ಉಪಗ್ರಹ ಭೂಮಿಯ ನಿರಂತರ ಗೆಳೆಯ !

ಅರೆ ಉಪಗ್ರಹ ಭೂಮಿಯ

ನಿರಂತರ ಗೆಳೆಯ !
ನಾಸಾ:  ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಜೊತೆ ಜೊತೆಗೇ ಸಾಗುವ ಇನ್ನೊಂದು ಕಾಯ ಇರುವುದು ಗೊತ್ತೇ?


ಹೌದು. ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಕ್ಷುದ್ರ ಗ್ರಹವೊಂದು ಭೂಮಿಯ ಜೊತೆ ಜೊತೆಗೇ ಸಾಗುತ್ತಿರುವುದು ಬೆಳಕಿಗೆ ಬಂದಿದೆ.ಇದು ಚಂದ್ರನಂತೆ ಇರುವ ಉಪಗ್ರಹ  ಅಲ್ಲ.  ಅತ್ಯಂತ ಪುಟ್ಟಗಾತ್ರದ ಕ್ಷುದ್ರಗ್ರಹ. ಇದು 120 ಅಡಿಗಳಿಗಿಂತ ವಿಶಾಲ ಆದರೆ 300 ಅಡಿಗಳಿಗಿಂತ ಕಡಿಮೆ ಗಾತ್ರ ಇರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.ಅನಾದಿ ಕಾಲದಿಂದ ಭೂಮಿಯ ಜೊತೆಗೇ ಹೆಜ್ಜೆ ಹಾಕುತ್ತಿರುವ ಅರೆ ಉಪಗ್ರಹ ಮುಂದಿನ ಶತಮಾನಗಳ ಕಾಲವೂ ಭೂಮಿಯೊಂದಿಗೆ ಹೀಗೆಯೇ ಹೆಜ್ಜೆ ಹಾಕಲಿದೆ ಎಂದಿದ್ದಾರೆ ವಿಜ್ಞಾನಿಗಳುಇದಕ್ಕೆ ಅವರು  ‘2016 ಎಚ್ಓ 3’ ಎಂಬುದಾಗಿ ಹೆಸರು ಕೊಟ್ಟಿದ್ದಾರೆ.

ಭೂಮಿ ತನ್ನಪಥದಲ್ಲಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಅರೆ ಉಪಗ್ರಹಭೂಮಿಯ ಜೊತೆ  ಜೊತೆಗೇ ಸೂರ್ಯನಿಗೆ ಸುತ್ತು ಹಾಕುತ್ತದೆ. ವಿಶೇಷವೆಂದರೆ ಕೆಲವೊಮ್ಮೆ ಭೂಮಿಯ ಹಿಂದಿನಿಂದ ಸಾಗಿದರೆ, ಕೆಲವೊಮ್ಮೆ ಭೂಮಿಯಿಂದ ಮುಂದಕ್ಕೆ ಓಡುತ್ತದೆ. ಅದರ ಚಲನೆಯಯನ್ನು ಗಮನಿಸಿದರೆ ಮಕ್ಕಳು ಆಡುವಹೊಳೆ ದಡಆಟ ನೆನಪಾಗಬಹುದು.

      ಅರೆ ಉಪಗ್ರಹಕ್ಕೆ ಸಂಬಂಧಿಸಿ ವಿಡಿಯೋ ಒಂದು ಇಲ್ಲಿದೆ. ಕೆಳಗಿನ ಚಿತ್ರ ಕ್ಲಿಕ್ಕಿಸಿ:

Wednesday, June 15, 2016

ದಿಲ್ಲಿಯಲ್ಲಿ ‘ಏಕತೆಯ ಸಂದೇಶ’ ಸಾರಿದ ಕನ್ನಡದ ಕಥಕ್ ಜೋಡಿ

ದಿಲ್ಲಿಯಲ್ಲಿ ಏಕತೆಯ ಸಂದೇಶ ಸಾರಿದ ಕನ್ನಡದ ಕಥಕ್ ಜೋಡಿ
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ರಸಾಭಿನಂದನೆ ಮೋಡಿ

ಬೆಂಗಳೂರು: ದೇಶದ ರಾಜಧಾನಿಯ ಏರ್‌ಪೋರ್ಟ್‌ಗೆ ದಶಮಾನೋತ್ಸವದ ಸಂಭ್ರಮ... ಜತೆಗೆ ಸತತ ಎರಡು ವರ್ಷಗಳಿಂದ ವಿಶ್ವದ ನಂ. ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆ.. ಹೆಗ್ಗಳಿಕೆಗೆ ಕಾರಣರಾದ ಎಲ್ಲರಿಗೂ ನೃತ್ಯದ ಮೂಲಕ ನಮನ ಸಲ್ಲಿಸಿದ ಭಾರತ.. ಭಾರತದಿಂದ ಪರವಾಗಿ ನೃತ್ಯದ ರಾಯಭಾರಿಗಳಾಗಿ ರಸಾಭಿನಂದನೆ ಸಲ್ಲಿಸಿದ್ದು ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ.



ಇಂಥಹ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ದಶಮಾನೋತ್ಸವ ಕಾರ್ಯಕ್ರಮ



ದಶಮಾನೋತ್ಸವದ ಶುಭ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಗೇರಿಸಲು ಸಹಕರಿಸಿದ ಎಲ್ಲ ಸಂಸ್ಥೆಗಳಿಗೆ, ಗಣ್ಯರಿಗೆ ಅಭಿನಂದನೆ ಸಲ್ಲಿಸಲೆಂದೇ ಜಿಎಂಆರ್ ಗ್ರೂಪ್ ಇಂಥದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿತ್ತು.



ದಶಮಾನೋತ್ಸವ ಸಂಭ್ರಮದಲ್ಲಿ ರಸಾಭಿನಂದನ ಎಂಬ ನೃತ್ಯದ ಮೂಲಕ ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಇಡೀ ವಿಶ್ವಕ್ಕೆ ಏಕತೆಯ ಸಂದೇಶ ಸಾರಿದರು. ಹೊಂದಾಣಿಕೆ ಮಹತ್ವವನ್ನು ನೃತ್ಯದ ಮೂಲಕ ನಿರೂಪಿಸಿದ್ದು, ಅಭಿನಂದಿಸಿದ್ದು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು.

ಇಡೀ ಪ್ರಪಂಚದಲ್ಲೇ, ಸೃಷ್ಟಿಯಲ್ಲೇ ಹೊಂದಾಣಿಕೆಯ ಪಾಠವಿದೆ. ಮೋಡದಿಂದ ಮಳೆ ಬರುವಂತೆ; ಸೂರ್ಯನಿಂದ ಕಮಲ ಅರಳುವಂತೆ ಪರಸ್ಪರ ಸಹಕಾರ, ಹೊಂದಾಣಿಕೆ ಇದ್ದಾಗ ಅಲ್ಲೊಂದು ಶಕ್ತಿ ಸೃಷ್ಟಿಯಾಗುತ್ತದೆ. ಹೀಗೆ ದೇಶ ದೇಶಗಳ ಹೊಂದಾಣಿಕೆ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶ ನೀಡುವ ಮೂಲಕ ಕಥಕ್ ಜೋಡಿ ಎಲ್ಲರ ಮೆಚ್ಚುಗೆ ಪಾತ್ರರಾದರು.

ನೃತ್ಯದ ಮೂಲಕವೇ ನಮನ ಸಲ್ಲಿಸಿದ ನಾಟ್ಯ ಜೋಡಿ, ಪ್ರಸ್ತುತಪಡಿಸಿದ ಮತ್ತೊಂದು ನೃತ್ಯರೂಪಕ ಸಾಥ್ ಸಾಥ್ ವಿಶ್ವದ ಗಣ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಂಗತ್ಛದ್ವಂ ಸಂವದದ್ವಂ ಸಂವೋ ಮನಾಂಸಿ ಜಾನತಾಂ |
ದೇವಾ ಭಾಗಂ-ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||

ಒಂದಾಗಿ ನಡೆಯುವ.. ಒಂದಾಗಿ ನುಡಿಯುವ.. ಬುದ್ಧಿ-ಮನಸ್ಸಿನಲ್ಲಿ ಕಲ್ಮಶವಿಲ್ಲದೆ ಜಗತ್ತಿನ ಜನರೆಲ್ಲಾ ಒಂದೇ ಎಂಬ ಭಾವನೆ ನಮ್ಮದಾಗಲಿ.. ಎಂಬ ವೇದಮಂತ್ರದ ಸಂದೇಶವನ್ನು ನೃತ್ಯದಲ್ಲಿ ಅದ್ಭುತವಾಗಿ ಮೂಡಿಸಿದ್ದು ನಿರುಪಮಾ ರಾಜೇಂದ್ರ ಅವರ ಹೆಗ್ಗಳಿಕೆ. ಹವಾಯಿ, ಚೀನಾ, ಆಫ್ರಿಕಾ ಸೇರಿದಂತೆ ವಿಶ್ವದ ಹಲವು ಸಂಸ್ಕೃತಿಗಳ ಪ್ರತಿಬಿಂಬವಾಗಿ ಸಾಥ್ ಸಾಥ್ ನೃತ್ಯರೂಪಕ ಅನಾವರಣಗೊಂಡಿತು. ಇನ್ಮುಂದೆಯೂ ದೇಶದ ಅಭಿವೃದ್ಧಿಯಲ್ಲಿ ವಿಶ್ವದ ಇತರ ರಾಷ್ಟ್ರಗಳ ಸಹಕಾರ ಹೀಗೆ ಮುಂದುವರಿಯಲಿ ಎಂಬ ಸಂದೇಶ ನೃತ್ಯದಲ್ಲಿ ಮೂಡಿಬಂದಿದ್ದು ವಿಶೇಷವಾಗಿತ್ತು. ನೃತ್ಯ ಸಂಭ್ರಮದಲ್ಲಿ ೨೦ ಮಂದಿ ಅಭಿನವ ಡ್ಯಾನ್ಸ್ ಕಂಪನಿಯ ಕಲಾವಿದರು ನಿರುಪಮಾ ರಾಜೇಂದ್ರ ಅವರಿಗೆ ಸಾಥ್ ನೀಡಿದರು.
 
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ಅವರ ಅಭಿವ್ಯಕ್ತಿಯ ರಸಾಭಿನಂದನೆ ಮೋಡಿಗೆ ಕೇಂದ್ರದ ಸಚಿವರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಕಥಕ್ ಜೋಡಿಯನ್ನು ಅಭಿನಂದಿಸಿದರು. ಜಿಎಂಆರ್ ಗ್ರೂಪ್‌ನ ಅಧ್ಯಕ್ಷ ಜಿ. ಮಲ್ಲಿಕಾರ್ಜುನ್ ರಾವ್ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿರುಪಮಾ ಅವರ ನೃತ್ಯವೈಭವಕ್ಕೆ ಸಾಹಿತ್ಯದ ಸಾಥ್ ನೀಡಿದ್ದು ಶತಾವಧಾನಿ ಡಾ. ಆರ್.ಗಣೇಶ್. ಪ್ರವೀಣ್ ಡಿ.ರಾವ್ ಅವರ ಸಂಗೀತದ ಜತೆ ವಿನೋದ್‌ಗೌಡ ಹಾಗೂ ಸಂತೋಷ್‌ಕುಮಾರ್ ಅವರ ದೃಶ್ಯ-ಬೆಳಕಿನಾಟ ಮೇಳೈಸಿತ್ತು.