ನಾನು ಮೆಚ್ಚಿದ ವಾಟ್ಸಪ್

Saturday, November 3, 2018

ಮತ್ತೊಂದು ಎಂಜಿನಿಯರಿಂಗ್ ವಿಸ್ಮಯ ’ದೆಹಲಿಯ ಸಿಗ್ನೇಚರ್ ಬ್ರಿಜ್’

ಮತ್ತೊಂದು ಎಂಜಿನಿಯರಿಂಗ್ ವಿಸ್ಮಯ ’ದೆಹಲಿಯ ಸಿಗ್ನೇಚರ್ ಬ್ರಿಜ್

೨೦೧೮ ನವೆಂಬರ್ ರಂದು ಉದ್ಘಾಟನೆ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಯಮುನಾ ಮೇಲೆ ನಿರ್ಮಿಸಲಾಗಿರುವ  ದೇಶದ ಇನ್ನೊಂದು ಎಂಜಿನಿಯರಿಂಗ್ ವಿಸ್ಮಯ  ಸಿಗ್ನೇಚರ್ ಬ್ರಿಡ್ಜ್ ೨೦೧೮ ನವೆಂಬರ್ ರಂದು ಭಾನುವಾರ ಉದ್ಘಾಟನೆಯಾಗಲಿದೆ.
ಸಿವಿಲ್  ಎಂಜಿನಿಯರಿಂಗ್  ಕ್ಷೇತ್ರದ  ಇನ್ನೊಂದು ವಿಸ್ಮಯ ಸಾಧನೆಯನ್ನು ವೀಕ್ಷಿಸಲು ಆಗಮಿಸುವಂತೆ ದೆಹಲಿ ಸರ್ಕಾರ್ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು 2018 ನವೆಂಬರ್ 3 ಶನಿವಾರ  ಸಾರ್ವಜನಿಕರಿಗೆ ಮನವಿ ಮಾಡಿದರು.

ನಿರ್ಮಾಣಕ್ಕೆ ಬರೋಬ್ಬರಿ 14 ವರ್ಷಗಳನ್ನು ತೆಗೆದುಕೊಂಡಿರುವ  ಸೇತುವೆಯ ಮೇಲಿನಿಂದ, ಪ್ಯಾರಸ್ಸಿನ ಐಫೆಲ್ ಗೋಪುರದಿಂದ ಇಡೀ ಪ್ಯಾರಿಸ್ಸಿನ ವೀಕ್ಷಣೆ ಹೇಗೆ ಸಾಧ್ಯವೋ ಹಾಗೆಯೇ ರಾಜಧಾನಿಯ ವಿಹಂಗಮ ನೋಟವನ್ನು ಆಸ್ವಾದಿಸಲು ಸಾಧ್ಯವಿದೆ ಎಂದು ಸಿಸೋಡಿಯಾ ವಿವರಿಸಿದರು.

ಒಟ್ಟು ೫೦ ಜನರನ್ನು ಒಯ್ಯುವ ಸಾಮರ್ಥ್ಯವಿರುವ ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಕರೆದೊಯ್ಯುತ್ತವೆ ಎಂದು ಸಿಸೋಡಿಯಾ ನುಡಿದರು.

ಸೇತುವೆಯ ವಿಶೇಷತೆಗಳೇನು?
* ಸೇತುವೆಯು ೧೫೪ ಮೀಟರ್ ಎತ್ತರದ ಗಾಜಿನ ವೀಕ್ಷಣಾ ಪೆಟ್ಟಿಗೆಯನ್ನು ಹೊಂದಿರುತ್ತದೆ, ಎತ್ತರವು ಕುತುಬ್ ಮಿನಾರಿನ ಎರಡು ಪಟ್ಟು ಎತ್ತರವಾಗಿದೆ.

* ಒಟ್ಟು 50 ಜನರನ್ನು ಮೇಲಕ್ಕೆ ಎತ್ತುವ ಸಾಮರ್ಥ್ಯವಿರುವ  ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಒಯ್ಯುತ್ತವೆ.
* ೫೭೫-ಮೀಟರ್ ಸೇತುವೆಯು ತಮ್ಮ ವಿಶೇಷ ಕ್ಷಣಗಳ ಸೆರೆಹಿಡಿಯಲು ಪ್ರವಾಸಿಗರಿಗೆ ಸೆಲ್ಫಿ ತಾಣಗಳನ್ನು ಸಹ ಹೊಂದಿದೆ.
* ಸೇತುವೆಯು ಭಾರತದ ಮೊತ್ತ ಮೊದಲ ಅಸಮಪಾರ್ಶ್ವದ (ಅಸಿಮೆಟ್ರಿಕಲ್) ಕೇಬಲ್-ಇರುವ ಸೇತುವೆ ಎಂದು ಪರಿಗಣಿತವಾಗಿದೆ.

* ಸೇತುವೆಯು ಉತ್ತರ ಮತ್ತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಅಭಿವೃದ್ಧಿಯ ಎರಡನೇ ಹಂತದಲ್ಲಿ ಸೇತುವೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ.

* ೨೦೦೪ ರಲ್ಲಿ ಸೇತುವೆ ನಿರ್ಮಾಣದ  ಘೋಫಣೆಯಾದಾಗ ಇದಕ್ಕೆ ೪೯೪ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಂತರ, ನಿರ್ಮಾಣ ವೆಚ್ಚ ಏರುತ್ತಾ ಹೋಗಿ, ದೆಹಲಿಯಲ್ಲಿ ನಡೆದ ೨೦೧೦ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ರೂ. ,೧೩೧ ಕೋಟಿ ಮೌಲ್ಯದ ಅಂದಾಜಿನಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಬಳಿಕವೂ ಪ್ರಕಟಿಸಲಾದ ಗಡುವುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಈಗ ಪೂರ್ಣಗೊಳ್ಳುವ ವೇಳೆಗೆ ಇದರ ವೆಚ್ಚ 1594 ಕೋಟಿ ರೂಪಾಯಿಗಳಿಗೆ ಏರಿದೆ.

* ಸೇತುವೆಯ ವಜೀರಿಬಾಗ್ ಸೇತುವೆ ಮೇಲಿನ ಸಂಚಾರ ಭಾರವನ್ನು ಗಣನೀಯವಾಗಿ ಇಳಿಸಲಿದೆ.

No comments:

Post a Comment