ನಾನು ಮೆಚ್ಚಿದ ವಾಟ್ಸಪ್

Thursday, January 26, 2017

ಕಿಂಕಿಣಿ ನೃತ್ಯೋತ್ಸವ: ನಿರುಪಮಾ ರಾಜೇಂದ್ರ ‘ಯುಗಳ್’

ಕಿಂಕಿಣಿ ನೃತ್ಯೋತ್ಸವ:  ನಿರುಪಮಾ ರಾಜೇಂದ್ರ ‘ಯುಗಳ್

ಕಥಕ್ ಧಾರೆಯಾಗಿ ಹರಿಯಲಿದೆ ‘ಅಭಂಗ್ ಎಂಬ ಕಾವ್ಯಧಾರೆ
ಬೆಂಗಳೂರು:  ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ... ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.

ಜನವರಿ ೨೭ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ೩೩ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ ವಿಶೇಷ ‘ಯುಗಳ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್‌ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.

ನಿರುಪಮಾ ರಾಜೇಂದ್ರ ಪ್ರಸ್ತುತಪಡಿಸುವ ‘ತಾಲ್ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.

ರಾಮ ಮತ್ತು ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.

  ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್‌ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ ತರಾನಾ ನೃತ್ಯ.

ನಿರುಪಮಾ ರಾಜೇಂದ್ರ ಅವರ ಕಥಕ್‌ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್‌ರೋಜ್ ಖಾನ್; ಕೊಳಲು- ಶಿವಲಿಂಗ.


ಸ್ಥಳ: ಜೆಎಸ್ ಎಸ್ ಅಡಿಟೋರಿಯಂ, ಜಯನಗರ, 

ದಿನಾಂಕ: 27 ಜನವರಿ 2017, ಸಂಜೆ 7.30

Tuesday, January 24, 2017

ಕಲಾ ಸೇವೆಗೊಂದು ರಸೀದಿ

ಕಲಾ ಸೇವೆಗೊಂದು ರಸೀದಿ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಬಹುಷಃ ಈ ಸಾಲುಗಳಿಗೆ ಅನ್ವರ್ಥಕವಾಗಿ ಬದುಕುವವರು ಇಂದಿನ ದಿನಮಾನದಲ್ಲಿ ಬಹು ಕಡಿಮೆ. ಆದರೆ ನಮ್ಮ ನಡುವಣ ಕಲಾವಿದನೊಬ್ಬ ಸಂಪೂರ್ಣವಾಗಿ ತನ್ನ ಜೀವನವನ್ನ ಕಲೆ ಮತ್ತು ಮುಖ್ಯವಾಗಿ ಕಲಾವಿದರ ಸೇವೆಗಾಗಿಯೆ ಮುಡುಪಾಗಿಟ್ಟಿರುವುದು ಬಲು ಅಪರೂಪದ ಸಂಗತಿ. ತಬಲಾ ಕಲಾವಿದ ಶ್ರೀ.ಚಂದ್ರಶೇಖರ್ ಬಡಿಗೇರ್ ಪಂ.ರಘುನಾಥ್ ನಾಕೋಡ್ ಅವರ ಶಿಷ್ಯ ಮತ್ತು ಗದುಗಿನ ಸಂತ ಪಂ.ಪುಟ್ಟರಾಜ ಗವಾಯಿಗಳ ಆಶ್ರಮದ ಅನುಯಾಯಿ.

ಕೇವಲ ಇಷ್ಟು ವಿಶೇಷಣಗಳನ್ನು ಮಾತ್ರ ಹೊಂದಿದ್ದಲ್ಲಿ ಚಂದ್ರಶೇಖರ್ ಮತ್ತೊಬ್ಬ ಸಾಮಾನ್ಯ ಕಲಾವಿದರಾಗುತ್ತಿದ್ದರೇನೊ.. ಆದರೆ ಆ ವ್ಯಕ್ತಿ ಕಲಾಪ್ರಪಂಚಕ್ಕೆ ಮತ್ತು ಕಲಾವಿದರಿಗೆ ಸಲ್ಲಿಸಿದ ಸೇವೆ ಅಪೂರ್ವ. ಸರ್ವೆಸಾಮಾನ್ಯವಾಗಿ ಆರ್ಥಿಕ ಸಹಾಯ ನೀಡುವುದೊಂದೆ ಸಹಾಯ ಮಾಡುವ ರೀತಿ ಅಂತ ಭಾವಿಸುವುದು ಲೋಕರೂಢಿ. ಆದರೆ ಕಲಾವಿದರಿಗೆ ಅವರ ದೈಹಿಕ ಅಸ್ವಸ್ಥತೆಗಳ ಮಧ್ಯೆ, ಅವರ ಜೊತೆಗಿದ್ದು ಅವರ ನಿತ್ಯಕರ್ಮಗಳಿಗೆ ಸಹಕರಿಸುತ್ತಾ, ಊರುಗೋಲಾಗಿ ನಿಂತಂತಹ ವ್ಯಕ್ತಿ ಚಂದ್ರಶೇಖರ್ ಬಡಿಗೇರ್. ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಇಂದಿಗೂ ಹಲವಾರು ಕಲಾವಿದರು ಹನಿಗಣ್ಣಾಗುವುದನ್ನು ಹಲವರು ಕಂಡಿದ್ದಾರೆ.

ಅಲ್ಲದೆ ಗದುಗಿನ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿ, ಬೆಂಗಳೂರು ಮಹಾನಗರದಲ್ಲಿ ನೆಲೆ ಕಂಡುಕೊಳ್ಳಲು ಬರುವ ಹಲವಾರು ಯುವಕರಿಗೆ, ತನ್ನ ಪುಟ್ಟ ಗೂಡಿನಲ್ಲಿಯೆ ಅವರು ಇರಬಯಸಿದಷ್ಟು ದಿನ ಆಶ್ರಯ ನೀಡಿದ ವ್ಯಕ್ತಿ ಚಂದ್ರು. ಆ ಯುವಕಲಾವಿದ ಬೆಂಗಳೂರು ಮಹಾನಗರದಲ್ಲಿ ನೆಲೆನಿಲ್ಲುವವರೆಗೂ ತನ್ನ ಮನೆಯಲ್ಲಿಯೆ ಉಳಿಸಿಕೊಂಡು ಅವರ ಊಟೋಪಚಾರಗಳ ವ್ಯವಸ್ಥೆಯನ್ನು ಸರಿದೂಗಿಸಿ ಹಲವರಿಗೆ ಬಾಳು ಕಟ್ಟಿಕೊಳ್ಳಲು ಸಹಕಾರ ನೀಡಿದ್ದಾರೆ.

ನಿರಂತರವಾಗಿ ಈ ಕಾಯಕದಲ್ಲಿ ನಿರತರಾಗಿದ್ದ ಚಂದ್ರು ಅವರಿಗೆ ಇದೀಗ ಅತಿಯಾದ ಅನಾರೋಗ್ಯ ಕಾಡುತ್ತಿದ್ದು, ಕಲಾವಿದರು ಅವರ ಋಣಸಂದಾಯ ಮಾಡಲು ಒಂದಾಗಿದ್ದಾರೆ. ಇದಕ್ಕಾಗಿ ಅನನ್ಯ ಸಂಸ್ಥೆಯ ರಾಘವೇಂದ್ರ ಅವರ "ಅನನ್ಯ ಆರೋಗ್ಯಧಾರಾ ನಿಧಿ"ಯ ಮೂಲಕ ಸಹಾಯ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪದ್ಮಶ್ರೀ.ಪಂ.ಎಮ್.ವೆಂಕಟೇಶ್ ಕುಮಾರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಚಂದ್ರು ಅವರ ಗುರುಗಳಾದ ಪಂ.ರಘುನಾಥ್ ನಾಕೋಡ್ ತಬಲಾ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ಹಾರ್ಮೋನಿಯಂನಲ್ಲಿ ಶ್ರೀ.ಮಧುಸೂದನ್ ಭಟ್ ಮತ್ತು ಸಾರಂಗಿಯಲ್ಲಿ ಶ್ರೀ.ಸರ್ಫರಾಜ್ ಖಾನ್ ಸಾಥ್ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂಗೀತ ರಸಿಕರು ಉದಾರವಾಗಿ ಈ ನಿಧಿಗೆ ದಾನ ನೀಡಿ ಕಲಾವಿದನೊಬ್ಬನ ಶ್ರೇಯೋಭಿವೃದ್ಧಿಗೆ ಜೊತೆಯಾಗಬೇಕೆಂದು ಅನನ್ಯ ಸಂಘಟನೆಕೋರಿದೆ.

ದಿನಾಂಕ 26 ಜನವರಿ, , ಗುರುವಾರ
ಸ್ಥಳ ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ಸಮಯ ಸಂಜೆ 6 ಗಂಟೆ.


Friday, January 20, 2017

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಯುಗಾರಂಭ

ಅಮೆರಿಕದಲ್ಲಿ ಡೊನಾಲ್ಡ್
ಟ್ರಂಪ್ ಯುಗಾರಂಭ

ವಾಷಿಂಗ್ಟನ್: ವಾಷಿಂಗ್ಟನ್ನಿನ ಸಂಸತ್ ಭವನದ ವೆಸ್ಟ್ ಫ್ರಂಟಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಮೆರಿಕದ 45ನೇ ಅಧ್ಯಕ್ಷರಾಗಿ 70 ವರ್ಷದ ಡೊನಾಲ್ಡ್ ಟ್ರಂಪ್ ಶುಕ್ರವಾರ, 20ನೇ ಜನವರಿ 2017ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೂಲಕ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಯುಗ ಆರಂಭವಾಯಿತು.


 ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಜಾನ್ ರಾಬರ್ಟ್ ಅವರು ಡೊನಾಲ್ಡ್ ಟ್ರಂಪ್ಅವರಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಅಮೆರಿಕದ ಉಪಾಧ್ಯಕ್ಷರಾಗಿ ಮೈಕೆಲ್ ಪೆನ್ಸ್ ಸಹ ಪ್ರಮಾಣ ವಚನ ಸ್ವೀಕರಿಸಿದರು.  ಪೆನ್ಸ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪೆನ್ಸಿಲ್ವೇನಿಯಾ ಅವೆನ್ಯೂನಿಂದ ಶ್ವೇತಭವನಕ್ಕೆ ಪರೇಡ್ನಲ್ಲಿ ತೆರಳಿದರು.

Sunday, January 15, 2017

ವಿಟ್ಲಾಯನ 2017: ಕಿರುರಥ, ಪಲ್ಲಕ್ಕಿ ಉತ್ಸವ

ವಿಟ್ಲಾಯನ 2017:  ಕಿರುರಥ, ಪಲ್ಲಕ್ಕಿ ಉತ್ಸವ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಂಚಲಿಂಗೇಶ್ವರ ದೇವಾಲಯದಲ್ಲಿ ಜನವರಿ 14ರಂದು ಆರಂಭವಾದ ವರ್ಷಾವಧಿ ಜಾತ್ರೆಯ ಚಿತ್ರಗಳು. ಕಿರು ರಥೋತ್ಸವ, ಪಲ್ಲಕ್ಕಿ ಉತ್ಸವದ ದೃಶ್ಯಗಳು.


Saturday, January 14, 2017

ವಿಟ್ಲಾಯನ 2017

ವಿಟ್ಲಾಯನ  2017 ಲಕ್ಷದೀಪ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ , ಪಂಚಲಿಂಗೇಶ್ವರ
 ದೇವಾಲಯದ ವರ್ಷಾವಧಿ ಜಾತ್ರೆ ಶನಿವಾರ ಪ್ರಾರಂಭವಾಗಿದ್ದು,
ಜಾತ್ರೆಯ ಕೆಲವು ದೃಶ್ಯಗಳು ಇಲ್ಲಿವೆ.


ಫೊಟೋ: ಶ್ಯಾಮ ಸುಂದರ ನೆತ್ರಕೆರೆ