Showing posts with label Ayodhya. Show all posts
Showing posts with label Ayodhya. Show all posts

Tuesday, November 25, 2025

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.

ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.

ಈ ಕ್ಷಣವು ಕೋಟ್ಯಂತರ ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.

ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.

ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆಶ್ರೀ ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.

ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು ಗಣ್ಯರು ಸಾಕ್ಷಿಯಾದರು.

(ವೀಡಿಯೊ ಕೃಪೆ: Instagram ನಲ್ಲಿ MyGovindia)

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ! ಪ್ರ ಧಾ ನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನ...

Monday, October 27, 2025

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

 ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

ಒಂದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, 2019ರ ಅಯೋಧ್ಯೆ ತೀರ್ಪನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದ ವಕೀಲ ಮೆಹಮೂದ್ ಪ್ರಾಚಾ ಅವರಿಗೆ ದೆಹಲಿ ನ್ಯಾಯಾಲಯವು ಬರೋಬ್ಬರಿ ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಅರ್ಜಿಯನ್ನು 'ಫಲಹೀನ ಮತ್ತು ಐಷಾರಾಮಿ ವ್ಯಾಜ್ಯ' (frivolous and luxurious litigation) ಎಂದು ಕರೆದ ಪಟಿಯಾಲಾ ಹೌಸ್ ಕೋರ್ಟಿನ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರುಕೆಳ ನ್ಯಾಯಾಲಯವು ಪ್ರಾಚಾ ಅವರಿಗೆವಿಧಿಸಿದ್ದ ಲಕ್ಷ ರೂಪಾಯಿ ದಂಡವನ್ನು ಎತ್ತಿಹಿಡಿದುಹೆಚ್ಚುವರಿಯಾಗಿ ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ವಿಧಿಸಿದ್ದು ಏಕೆ?

ಆರು ಲಕ್ಷ ರೂಪಾಯಿ ದಂಡವನ್ನು 30 ದಿನಗಳೊಳಗೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ಜಮಾ ಮಾಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು, "ಕಿರಿಯ ನ್ಯಾಯಾಲಯವು ವಿಧಿಸಿದ್ದ ದಂಡವು ನಿರೋಧಕ ಪರಿಣಾಮವನ್ನು (deterrent effectಸಾಧಿಸುವ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿದೆ. ಆದ್ದರಿಂದಫಲಹೀನ ಮತ್ತು ಐಷಾರಾಮಿ ವ್ಯಾಜ್ಯದ ಪಿಡುಗನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ದಂಡದ ಮೊತ್ತವನ್ನು ಸೂಕ್ತವಾಗಿ ಹೆಚ್ಚಿಸಬೇಕೆಂಬುದನ್ನು ನಾನು ಪರಿಗಣಿಸಿದ್ದೇನೆ," ಎಂದು ಹೇಳಿದ್ದಾರೆ.

ಪ್ರಾಚಾ ಅವರ ವಾದವೇನು?

ಪ್ರಾಚಾ ಅವರು ಅಯೋಧ್ಯೆ ತೀರ್ಪನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ಮತ್ತು ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಸಿವಿಲ್ ಮೇಲ್ಮನವಿಗಳನ್ನು ಹೊಸದಾಗಿ ವಿಚಾರಣೆ ಮಾಡಲು ಕೋರಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಏಪ್ರಿಲಿನಲ್ಲಿ ವಿಚಾರಣಾ ನ್ಯಾಯಾಲಯವು ಲಕ್ಷ  ರೂಪಾಯಿ ದಂಡದೊಂದಿಗೆ ವಜಾಗೊಳಿಸಿತ್ತು.

ಪ್ರಾಚಾ ಅವರು ತೀರ್ಪಿನ ಅರ್ಹತೆಯನ್ನು (meritsಪ್ರಶ್ನಿಸದೆನ್ಯಾಯಾಧೀಶರಾದ ಚಂದ್ರಚೂಡ್ ಅವರು ತೀರ್ಪು ಬರೆದವರಲ್ಲಿ ಲ್ಲಿ ಒಬ್ಬರಾಗಿದ್ದುಅವರೇ ತಮ್ಮ ಭಾಷಣವೊಂದರಲ್ಲಿ "ತಮ್ಮ ಮುಂದೆ ವಾದ ಮಂಡಿಸಿದ ಕಕ್ಷಿದಾರರೇ (litigant) ತಮಗೆ ಮಾರ್ಗ ತೋರಿಸಿದರು" ಎಂದು ಒಪ್ಪಿಕೊಂಡಿರುವುದರಿಂದ ತೀರ್ಪು ವಂಚನೆಯ ಆಧಾರದ (on the ground of fraud) ಮೇಲೆ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಮಾಜಿ ಸಿಜೆಐ ಚಂದ್ರಚೂಡ್ ಅವರು ಅಯೋಧ್ಯೆ ಪ್ರಕರಣವನ್ನು ಪರಿಹರಿಸಲು ತಾವು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದ ಉಲ್ಲೇಖವೇ ಈ ವಾದಕ್ಕೆ ಕಾರಣವಾಗಿತ್ತು. ಇಂತಹ ಪರಿಸ್ಥಿತಿಯು **'ಕಾನೂನುಬಾಹಿರ ಹಸ್ತಕ್ಷೇಪ'**ಕ್ಕೆ ಸಮನಾಗಿದೆ. ಆದ್ದರಿಂದ ತೀರ್ಪು ವಂಚನೆಯ ಆಧಾರದ ಮೇಲೆ ದೋಷಪೂರಿತವಾಗಿದೆ ಎಂದು ಪ್ರಾಚಾ ಪ್ರತಿಪಾದಿಸಿದ್ದರು.

ಕೋರ್ಟ್‌ನ ತೀಕ್ಷ್ಣ ಪ್ರತಿಕ್ರಿಯೆ

ಪ್ರಾಚಾ ಅವರ ಮನವಿಯನ್ನು ವಜಾಗೊಳಿಸಿದ ನ್ಯಾಯಾಧೀಶ ರಾಣಾ ಅವರುಜಸ್ಟಿಸ್ ಚಂದ್ರಚೂಡ್ ಅವರ ಭಾಷಣವನ್ನು ಉಲ್ಲೇಖಿಸಿʼಅವರು ಸರ್ವೋಚ್ಚ ಶಕ್ತಿಯಲ್ಲಿ (Supreme Being) ಮಾರ್ಗ ತೋರಿಸುವಂತೆ ಪ್ರಾರ್ಥಿಸಿದ್ದರು. ಆದರೆ ಅಯೋಧ್ಯೆ ಪ್ರಕರಣದಲ್ಲಿ ಅವರ ಮುಂದೆ ವಾದ ಮಂಡಿಸಿದ ಕಕ್ಷಿದಾರರು ಆ ಸರ್ವೋಚ್ಚ ಶಕ್ತಿಯಿಂದ ಭಿನ್ನವಾದ 'ಕಾನೂನು ವ್ಯಕ್ತಿತ್ವ' (Juristic Personality) ಹೊಂದಿದ್ದಾರೆʼ ಎಂದು ಹೇಳಿದರು.

"ಮೇಲ್ಮನವಿದಾರರು 'ಸರ್ವೋಚ್ಚ ದೇವರುಮತ್ತು ನ್ಯಾಯಾಲಯದ ಮುಂದೆ ವ್ಯಾಜ್ಯ ಹೂಡಿದ 'ಕಾನೂನು ವ್ಯಕ್ತಿತ್ವದನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಬಹುಶಃ ಕಾನೂನು ಮತ್ತು ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಮೇಲ್ಮನವಿದಾರರು ಅಯೋಧ್ಯೆ ಪ್ರಕರಣದ ತೀರ್ಪನ್ನು ಓದುವ ಗೋಜಿಗೆ ಹೋಗಿಲ್ಲವೆಂದು ತೋರುತ್ತಿದೆಇಲ್ಲದಿದ್ದರೆ ಇಂತಹ ಗೊಂದಲ ಅವರಿಗೆ ಉಂಟಾಗುತ್ತಿರಲಿಲ್ಲ," ಎಂದು ನ್ಯಾಯಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

"ಸರ್ವಶಕ್ತನಿಂದ ಮಾರ್ಗದರ್ಶನ ಪಡೆಯುವುದನ್ನು ಕಾನೂನಿನಲ್ಲಿ ಅಥವಾ ಯಾವುದೇ ಧರ್ಮದಲ್ಲಿ ಅನ್ಯಾಯದ ಲಾಭ ಪಡೆಯಲು ಮಾಡಿದ ವಂಚಕ ಕೃತ್ಯ ಎಂದು ನಿಂದಿಸಲಾಗದು. ಆದ್ದರಿಂದಮೇಲ್ಮನವಿದಾರರ ಹೇಳಿಕೆಗಳನ್ನು ನಂಬಿದರೂ ಸಹಮನವಿಯು ಯಾವುದೇ ಕಾನೂನುಬದ್ಧ ಕಾರಣವನ್ನು (cause of action) ಹೊಂದಿದೆ ಎಂದು ವಾದಿಸಲು ಅವಕಾಶವಿಲ್ಲ. ಹೀಗಾಗಿಅವರ ಮೊಕದ್ದಮೆಯನ್ನು ವಜಾಗೊಳಿಸಿದ ಕೆಳ ನ್ಯಾಯಾಲಯದ ವಿಧಾನದಲ್ಲಿ ಯಾವುದೇ ದೋಷವಿಲ್ಲ" ಎಂದು ನ್ಯಾಯಾಲಯ ಹೇಳಿತು.

"ಪರಿಹಾರವಾಗಲಿಲ್ಲ, ಸಮಸ್ಯೆಯಾದರು"

ಪ್ರಾಚಾ ಅವರು ಮಾಜಿ ಸಿಜೆಐ ಚಂದ್ರಚೂಡ್ ಅವರನ್ನು ವೈಯಕ್ತಿಕವಾಗಿ ವಿಚಾರಣೆಗೆ ಕರೆಯಬೇಕು ಮತ್ತು ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಮಾಜಿ ಸಿಜೆಐ ಅವರನ್ನು ಕಕ್ಷಿದಾರರನ್ನಾಗಿ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಪ್ರಾಚಾ ಅವರು 'ದುರುದ್ದೇಶಪೂರಿತ ಉದ್ದೇಶದಿಂದ' (oblique intent) ಪ್ರೇರಿತರಾಗಿದ್ದಾರೆ ಎಂದು ಕೋರ್ಟ್ ಹೇಳಿತು.

"ಸಾರ್ವಜನಿಕ ಸೇವಕರು ನಿವೃತ್ತರಾದ ನಂತರ ಅವರನ್ನು ಗುರಿಯಾಗಿಸುವ ಒಂದು ನಕಾರಾತ್ಮಕ ಪ್ರವೃತ್ತಿ ಇತ್ತೀಚೆಗೆ ಕಂಡುಬರುತ್ತಿದೆ. ಮಾಜಿ ಸಾರ್ವಜನಿಕ ಸೇವಕರು ತಮ್ಮ ಕಚೇರಿಯಿಂದ ನಿರ್ಗಮಿಸಿದ ನಂತರ ದುರ್ಬಲರಾಗುತ್ತಾರೆ ಮತ್ತು ಎಲ್ಲಾ ರೀತಿಯ ದುರುದ್ದೇಶಪೂರಿತ ದಾಳಿಗೆ ಗುರಿಯಾಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಕೆಲವು ನಿರ್ಲಜ್ಜ ವ್ಯಾಜ್ಯದಾರರು ಪೋಷಿಸುತ್ತಾರೆ," ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

"ಸಂರಕ್ಷಕನೇ ಪರಭಕ್ಷಕನಾದಾಗ (predator) ಪರಿಸ್ಥಿತಿ ತೀವ್ರ ತಳಮಳಕ್ಕೆ ಕಾರಣವಾಗುತ್ತದೆ. ಈ ಪ್ರಕರಣದಲ್ಲಿಮೇಲ್ಮನವಿದಾರರು ಸಾಕಷ್ಟು ಹಿರಿಯ ವಕೀಲರಾಗಿದ್ದರೂ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಪರಿಹಾರದಲ್ಲಿ ಭಾಗಿಯಾಗುವ ಬದಲುಸಮಸ್ಯೆಯನ್ನು ಹೆಚ್ಚಿಸಲು ಆರಿಸಿಕೊಂಡಿದ್ದಾರೆ. ಮೇಲ್ಮನವಿದಾರರು ಸುಳ್ಳು ಮತ್ತು ಫಲಹೀನ ಮೊಕದ್ದಮೆಯನ್ನು ಹೂಡಿದ್ದಲ್ಲದೆಸಂಪೂರ್ಣವಾಗಿ ಐಷಾರಾಮಿ ಮತ್ತು ಫಲಹೀನವಾದ ಮೇಲ್ಮನವಿಯನ್ನು ಸಹ ಸಲ್ಲಿಸಿದ್ದಾರೆ," ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ಮೂಲ: (ಲೈವ್‌ ಲಾ ವರದಿ)

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ:   ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲ ರಿಗೆ ₹6 ಲಕ್ಷ ದಂಡ ಒಂ ದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ( CJI) ನ್ಯಾಯಮೂರ್ತಿ ಡಿ.ವೈ. ಚಂದ್...

Monday, January 22, 2024

PARYAYA: ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

 ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

ವದೆಹಲಿ: "ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇದು ನನ್ನ ಮೊದಲ ನಿರ್ಧಾರ" ಎಂಬುದಾಗಿ ಹೇಳಿದ ಪ್ರಧಾನಿ  ನರೇಂದ್ರ ಮೋದಿ ಅವರು ಹೊಸ ʼಪ್ರಧಾನಮಂತ್ರಿ ಸೂರ್ಯೋದಯ ಯೋಜನೆʼಯನ್ನು 2024 ಜನವರಿ 22ರ ಸೋಮವಾರ ಸಂಜೆ ಪ್ರಕಟಿಸಿದರು.

"ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವುದಲ್ಲದೆಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಹಿಂದಿರುಗಿದ ನಂತರಜನರು ತಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಸಹಾಯ ಮಾಡುವ ಹೊಸ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವು "ಜಗತ್ತಿನ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತಾರೆ" ಎಂಬ ಅರಿವಿನಿಂದ ಪ್ರೇರಿತವಾಗಿದೆ ಎಂದು ಅವರು ನುಡಿದರು.

"ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯನ್ನು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಅಳವಡಿಸುವ ಗುರಿಯೊಂದಿಗೆ ಪ್ರಾರಂಭಿಸುವುದುʼ ಎಂದು ಪ್ರಧಾನಿ ಮೋದಿ ಟ್ವಿಟರಿನಲ್ಲಿ ಪೋಸ್ಟ್ ಮಾಡಿದರು.

"ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ" ಎಂದು ಅವರು ಬರೆದರು.

ಅಯೋಧ್ಯೆಯಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿನಂತರ ತಮ್ಮ ಭಾಷಣದಲ್ಲಿ ಭಗವಾನ್ ರಾಮನು "ಶಕ್ತಿ" ಮತ್ತು ಇಂದು "ಹೊಸ ಯುಗದ ಉದಯ" ಎಂದು ಹೇಳಿದರು.

"ರಾಮನು ಬೆಂಕಿಯಲ್ಲಅವನು ಶಕ್ತಿ. ರಾಮನು ವಿವಾದವಲ್ಲಅವನು ಪರಿಹಾರ. ರಾಮನು ನಮ್ಮವನಲ್ಲಅವನು ಪ್ರತಿಯೊಬ್ಬರಿಗೂ ಸೇರಿದವನು" ಎಂದು ಪ್ರಧಾನಿ ಹೇಳಿದರು.

"ಇಂದುನಾವು ಕೇವಲ ರಾ ಲಲ್ಲಾ ಅವರ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನೋಡಿದ್ದಲ್ಲ, ಭಾರತದ ಮುರಿಯಲಾಗದ ಏಕತೆಯ ಪ್ರಾಣ ಪ್ರತಿಷ್ಠೆಯನ್ನು ಸಹ ನೋಡಿದ್ದೇವೆ" ಎಂದು ದೆಹಲಿಯ ಮನೆಯಲ್ಲಿ ಹಣತೆ ಬೆಳಗಿ ದೀಪಾವಳಿ ಆಚರಿಸುತ್ತಾ ಸಂಜೆ ಮೋದಿ ಹೇಳಿದರು.

ರಾಮ ಜನ್ಮಭೂಮಿ ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ರೂಪುಗೊಂಡಿದೆ, 392 ಸ್ತಂಭಗಳೂ ಮತ್ತು 44 ಬಾಗಿಲುಗಳನ್ನು ಹೊಂದಿದೆ. ಸ್ತಂಭಗಳು ಮತ್ತು ಗೋಡೆಗಳು ಹಿಂದೂ ದೇವತೆಗಳ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸಿವೆ.

ಭಕ್ತರಿಗೆ ರಾಮಲಲ್ಲಾ ದರ್ಶನ

ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 23ರ ಮಂಗಳವಾರದಿಂದ ಭಕ್ತರಿಗೆ ಬಾಲರಾಮನ ದರ್ಶನ ಲಭಿಸಲಿದ್ದು ಬೆಳಗ್ಗೆ 7ರಿಂದ 10.30 ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದರ್ಶನ ಅವಕಾಶ ಒದಗಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ನಡೆಯಲಿದ್ದು ಭಕ್ತರು ಒಂದು ದಿನ ಮೊದಲೇ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಬೇಕು ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಬಾಲ ರಾಮನಿಗೆ ಆರತಿ ನಡೆಯಲಿದ್ದು, ಆರತಿ ದರ್ಶನಕ್ಕೆ ಬರುವ ಭಕ್ತರು ಮುಂಚಿತವಾಗಿ ಟ್ರಸ್ಟ್‌ ಕಚೇರಿಯಿಂದ ಪಾಸ್‌ ಪಡೆದಿರಬೇಕು ಎಂದು ಹೇಳಿದರು.

ಬಾನಿನಿಂದ ರಾಮ ಮಂದಿರದ ವಿಡಿಯೋ

ಈ ಮಧ್ಯೆ ಹೆಲಿಕಾಪ್ಟರ್‌ ಮೂಲಕ ಇಂದು ಚಿತ್ರಿಸಲಾದ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಂದರ್ಭದ ವಿಡಿಯೋ ಒಂದು ವೈರಲ್‌ ಆಗಿದ್ದು ಅದನ್ನು ನೋಡಲು ಕೆಳಗೆ ಕ್ಲಿಕ್‌ ಮಾಡಬಹುದು.


ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

PARYAYA: ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ:   ʼ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ʼ ಪ್ರಕಟಿಸಿದ ಪ್ರಧಾನಿ ನ ವದೆಹಲಿ: " ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇದು ನನ್ನ ಮೊದಲ ನಿರ್ಧಾರ" ಎಂಬುದಾಗಿ ಹೇಳಿ...

PARYAYA: ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

 ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೂತನವಾಗಿ ನಿರ್ಮಿಸಿದ ಸುಂದರ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ 2024 ಜನವರಿ 22ರ ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕದ ಶುಭ ಮುಹೂರ್ತದಲ್ಲಿ ಸಡಗರೋತ್ಸಾಹದೊಂದಿಗೆ ನೆರವೇರಿತು.

ಇದರೊಂದಿಗೆ ಸುಮಾರು 500 ವರ್ಷಗಳ ಬಳಿಕ ಶ್ರೀ ರಾಮ ಚಂದ್ರನು ಮೂಲಸ್ಥಾನದಲ್ಲಿ ಬಾಲರಾಮನ (ರಾಮಲಲ್ಲಾ) ರೂಪದಲ್ಲಿ ಪುನರ್‌ ಪ್ರತಿಷ್ಠೆಗೊಂಡಿದ್ದಾನೆ. ಇದಕ್ಕೆ ಮುನ್ನ ವಿವಾದಿತ ಕಟ್ಟಡದಲ್ಲಿ ಪೂಜೆಗೊಳ್ಳುತ್ತಿದ್ದ ರಾಮ ಲಲ್ಲಾ ವಿಗ್ರಹಗಳನ್ನೂ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗ್ವತ್‌, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಮುಖರ ಸಮ್ಮುಖದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೂರ್ತಿಗೆ ಕಮಲದ ಹೂ, ಅಕ್ಷತೆ, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿದರು. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂಗಳಾರತಿಯನ್ನೂ ಬೆಳಗಿದರು.

ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿಯವರು ಅರ್ಚಕರಿಗೆ ವಸ್ತ್ರದಾನ ಮಾಡಿದರು.

ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಗರ್ಭಗುಡಿಯೊಳಗೆ ಪ್ರಧಾನಿ ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಪ್ರವೇಶವಿತ್ತು. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂರಾರು ಮಂದಿ ಸಂತರು, ದೇಶ ವಿದೇಶಗಳಿಂದ ಆಗಮಿಸಿದ್ದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಹೊರಭಾಗದಲ್ಲಿ ಸಹಸ್ರಾರು ಮಂದಿ ಭಕ್ತರು ನೆರೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಬಳಿಕ ದೇವಾಲಯದ ಹೊರಭಾಗದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿಯವರು ದೇವಾಲಯ ನಿರ್ಮಾಣಕ್ಕಾಗಿ ದುಡಿದ ಕಾರ್ಯಕ್ರಮರಿಗೆ ಗೌರವ ಸಲ್ಲಿಸಿದರು.

ಪ್ರಾಣಪ್ರತಿಷ್ಠೆಯ ಈ ಸಂಭ್ರಮದ ಕ್ಷಣ ವಿಶ್ವಾದ್ಯಂತ ಬೃಹತ್‌ ಪರದೆಗಳಲ್ಲಿ ಪ್ರಸಾರಗೊಂಡಿತು. ಕೋಟ್ಯಂತರ ಭಕ್ತರು ದೇವಾಲಯಗಳಲ್ಲಿ ನೆರೆದು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಗೊಂಡದ್ದಲ್ಲದೆ, ಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ಬಾಲರಾಮನ ಪ್ರತಿಷ್ಠಾ ಸಮಾರಂಭದ ಕ್ಷಣಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್ಕಿಸಿ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ


PARYAYA: ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ:   ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ ಅ ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ...

Sunday, January 21, 2024

PARYAYA: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ...

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ


ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು,
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ,

ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ,
ಜಸವು  ಜನ ಜೀವನಕೆ ಮಂಕು ತಿಂಮ್ಮ!

ಕನ್ನಡದ ಖ್ಯಾತ ಕವಿ ಡಿವಿಜಿ ಅವರ ಈ ಕವನವನ್ನು ಕ್ಷಣ ಕ್ಷಣಕ್ಕೂ ನೆನಪಿಸುವಂತೆ ಮೂಡಿ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮ ಮಂದಿರ. ಭಾರತೀಯ ಚಿಂತನೆ, ವಾಸ್ತು, ಕಲೆ ಮತ್ತು ವಿಜ್ಞಾನ ಇವೆಲ್ಲವೂ ಇಲ್ಲಿ ಮೇಳೈಸಿವೆ.

ಭಾರತದ ಪ್ರಾಚೀನ ಚಿಂತನೆ, ವಾಸ್ತುಶಿಲ್ಪ ಮತ್ತು ಆಧುನಿಕ ವಿಜ್ಞಾನ ಮಿಳಿತವಾದ ಸುಂದರ ಮಂದಿರವನ್ನು ಭಾರತದ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಎತ್ತರ ಕುತುಬ್‌ ಮಿನಾರ್‌ ಕಟ್ಟಡದ ಶೇಕಡಾ 70ರಷ್ಟು ಇದೆ.

ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಬಿ ಸೋಂಪುರ ಅವರು ತಮ್ಮ ಮಗ ಆಶಿಶ್ ಸಹಾಯದಿಂದ ವಿನ್ಯಾಸಗೊಳಿಸಿರುವ ರಾಮ ಮಂದಿರದ ಕಲ್ಪನೆಯನ್ನು 30 ವರ್ಷಗಳಷ್ಟು ಹಿಂದೆಯೇ ವಿವರಿಸಿದ್ದರು.

2024 ಜನವರಿ 22ರ  ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಯ ರಾಮಮಂದಿರವು ಇದೀಗ ಅಲಂಕೃತವಾಗಿ ನಿಂತಿದೆ.

ದೇವಾಲಯಗಳ ಪಟ್ಟಣ ಎಂಬುದಾಗಿಯೇ ಹೆಸರು ಪಡೆದಿರುವ ಅಯೋಧ್ಯೆಯಲ್ಲಿ 2.7 ಎಕರೆ ಭೂಮಿಯಲ್ಲಿ ಮೈತಳೆದು ನಿಂತಿರುವ ಈ ದೇವಾಲಯ 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಎಲ್ಲ ವೈದಿಕ ಆಚರಣೆಗಳನ್ನು ಅನುಸರಿಸಿ, ಪ್ರಾಚೀನ  ಭಾರತದ ಎರಡು ವಿಶಿಷ್ಟವಾದ ಕಟ್ಟಡ ಶೈಲಿಗಳಲ್ಲಿ ಒಂದಾದ ನಾಗರಾ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿಗಳು. ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ಎತ್ತರಿಸಿದ ಪಾಯದ ಮೇಲೆ ಗರ್ಭಗುಡಿ ನಿರ್ಮಾಣಗೊಂಡಿದೆ. ಮೂರು ಅಂತಸ್ತುಗಳನ್ನು ಹೊಂದಿರುವ ದೇವಾಲಯದ ಗರ್ಭಗುಡಿಯ ಮೇಲೆ ಅತ್ಯಂತ ಎತ್ತರದ ಶಿಖರವಿದೆ. ದೇವಾಲಯ ಹೊಂದಿರುವ ಐದು ಮಂಟಪಗಳು ಒಟ್ಟು ಐದು ಶಿಖರಗಳನ್ನು ಹೊಂದಿವೆ. ಮಂಟಪಗಳು 300 ಸ್ತಂಭಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿವೆ.

ಭಗವಾನ್ ರಾಮನ ಹೆಸರನ್ನು ವಿವಿಧ ಭಾಷೆಗಳಲ್ಲಿ ಕೆತ್ತಿದ ಮತ್ತು 30 ವರ್ಷಗಳಿಂದ ಸಂಗ್ರಹಿಸಲಾದ ಸುಮಾರು ಎರಡು ಲಕ್ಷ ಇಟ್ಟಿಗೆಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ತಾಜ್‌ ಮಹಲ್‌ ನಿರ್ಮಿಸಲು ಬಳಸಲಾಗಿದ್ದ ಅಮೃತಶಿಲೆಗಳನ್ನೇ ಬಳಸಿ ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ. ಉಕ್ಕು ಮತ್ತು ಕಬ್ಬಿಣವನ್ನು ಒಂದಿಷ್ಟೂ ಬಳಸಿಲ್ಲ ಎಂಬುದು ಇದರ ವಿಶೇಷ. ಹಾಗೆಯೇ ಈ ಮಂದಿರ ನಿರ್ಮಾಣಕ್ಕೆ ಒಂದಿಷ್ಟೂ ಸಿಮೆಂಟ್‌ ಅಥವಾ ಗಾರೆ ಕೂಡಾ ಬಳಸಿಲ್ಲ.

ನಾಗರ ಶೈಲಿಯ ಕಟ್ಟಡಗಳ ನಿರ್ಮಾಣ ಆರಂಭವಾದದ್ದು ಭಾರತವು ಸುವರ್ಣ ಯುಗವನ್ನು ಕಂಡಿದ್ದ ಗುಪ್ತರ ಕಾಲದಲ್ಲಿ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷ ಮಾತ್ರ. ಹೀಗಾಗಿ ದೇವಾಲಯವನ್ನು ಕನಿಷ್ಠ ಒಂದು ಸಾವಿರ ವರ್ಷ ಕಾಲ ದೃಢವಾಗಿ ನಿಲ್ಲುವಂತೆ ಗ್ರಾನೈಟ್‌, ಮರಳುಗಲ್ಲು, ಅಮೃತಶಿಲೆ ಬಳಸಿ ಲಾಕ್‌ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಈ ಪ್ರದೇಶವನ್ನು 15 ಮೀಟರ್‌ ಆಳಕ್ಕೆ ಅಗೆದು, 47 ಪದರಗಳಲ್ಲಿ ಮಣ್ಣನ್ನು ಗಟ್ಟಿಯಾಗಿ ತುಂಬಿ ಪಾಯವನ್ನು ನಿರ್ಮಿಸಲಾಗಿತ್ತು. ಅದಕ್ಕೆ 1.5 ಮೀಟರ್‌ ದಪ್ಪದ ಎಂ-35 ದರ್ಜೆಯ ಕಾಂಕ್ರೀಟ್‌ ಹಾಕಲಾಯಿತು. ಗಟ್ಟಿಮಟ್ಟು ಆಗಲು 6.3 ಮೀಟರ್‌ ದಪ್ಪದ ಘನ ಗ್ರಾನೈಟ್‌ ಕಲ್ಲನ್ನು ಹೊದಿಸಲಾಯಿತು.

ವಿಜ್ಞಾನದ ಕೊಡುಗೆ

ರಾಮಮಂದಿರವನ್ನು ನಿರ್ಮಿಸಲು ಕೆಲವು ಉನ್ನತ ಭಾರತೀಯ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ನಿರ್ಮಾಣದಲ್ಲಿ ಇಸ್ರೋ ತಂತ್ರಜ್ಞಾನವನ್ನೂ ಬಳಸಲಾಗಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ನಿರ್ದೇಶಕ ಪ್ರದೀಪ್ ಕುಮಾರ್ ರಾಮಂಚರ್ಲಾ ಅವರು ಯೋಜನೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವಿಶೇಷ ‘ಸೂರ್ಯ ತಿಲಕ್’ ಕನ್ನಡಿ ಎಂಬ ಮಸೂರ ಆಧಾರಿತ ಉಪಕರಣವನ್ನು ಸಿಬಿಆರ್‌ ಐ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ/ IIA) ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ. ಇದರ ಮೂಲಕ ಪ್ರತಿವರ್ಷ ರಾಮನವಮಿಯ ದಿನದಂದು ಮಧ್ಯಾಹ್ನದ ಸಮಯದಲ್ಲಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕಿನ ಅಭಿಷೇಕವಾಗುತ್ತದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



ಇವುಗಳನ್ನೂ ಓದಿ:

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ


PARYAYA: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ...: ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ, ಋಷಿವಾಕ್...

Saturday, January 20, 2024

PARYAYA: ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

 ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

ಯೋಧ್ಯೆ: ಮುಖ ಸಂಪೂರ್ಣವಾಗಿ ಕಾಣುತ್ತಿದ್ದ ಬಾಲ ರಾಮನ ಚಿತ್ರ ಅಯೋಧ್ಯೆಯ ನೂತನ ರಾಮಲಲ್ಲಾ ವಿಗ್ರಹದ ನೈಜ ಚಿತ್ರವಲ್ಲ ಎಂದು ಅಯೋಧ್ಯಾ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ೨೦೨೪ ಜನವರಿ ೨೦ರ ಶನಿವಾರ ಸ್ಪಷ್ಟ ಪಡಿಸಿದ್ದಾರೆ.

ಈ ಚಿತ್ರವನ್ನು ಪ್ರಚುರ ಪಡಿಸಿದ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಪ್ರಾಣಪ್ರತಿಷ್ಠಾಪನೆಗೆ ಮುನ್ನ ವಿಗ್ರಹದ ಕಣ್ಣುಗಳನ್ನು ತೋರಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಬಾಲರಾಮನಿಗೆ ಸಂಬಂಧಿಸಿದಂತೆ ಮೊದಲಿಗೆ ಬಿಡುಗಡೆ ಮಾಡಲಾದ ಚಿತ್ರದಲ್ಲಿ ಬಾಲರಾಮನ ಮುಖವನ್ನು ಸಂಪೂರ್ಣವಾಗಿ ಹಳದಿ ಬಣ್ಣದಿಂದ ಮುಚ್ಚಲಾಗಿತ್ತು. ಆ ಬಳಿಕ ಮಾಧ್ಯಮಗಳಲ್ಲಿ ಪ್ರಕಟವಾದ ಚಿತ್ರಗಳಲ್ಲಿ ಒಂದರಲ್ಲಿ ವಿಗ್ರಹದ ಕಣ್ಣಿಗೆ ಮಾತ್ರ ಬಟ್ಟೆ ಕಟ್ಟಲಾಗಿತ್ತು. ಮತ್ತೊಂದು ಚಿತ್ರದಲ್ಲಿ ಮುಖವನ್ನು ಯಾವುದೇ ಬಟ್ಟೆಯಿಂದ ಮುಚ್ಚಿರಲಿಲ್ಲ. ಜೊತೆಗೆ ಕೈಗಳಲ್ಲಿ ಚಿನ್ನದ ಬಿಲ್ಲು, ಬಾಣಗಳನ್ನೂ ತೋರಿಸಲಾಗಿತ್ತು.

ಬಾಲರಾಮನ ಪ್ರಾಣಪ್ರತಿಷ್ಠಾಪನೆ ಜನವರಿ ೨೨ರಂದು ಮಧ್ಯಾಹ್ನ ನೆರವೇರಲಿದ್ದು, ವಿಶ್ವಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ಅಲಂಕಾರದೊಂದಿಗೆ ಸಜ್ಜುಗೊಂಡಿದೆ. ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇವುಗಳನ್ನೂ ಓದಿ:

ಚಿನ್ನದ ಬಿಲ್ಲು ಬಾಣ, ಬಾಲರಾಮ ನಿನಗಿದೋ ಪ್ರಣಾಮ.


PARYAYA: ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ:   ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ ಅ ಯೋಧ್ಯೆ : ಮುಖ ಸಂಪೂರ್ಣವಾಗಿ ಕಾಣುತ್ತಿದ್ದ ಬಾಲ ರಾಮನ ಚಿತ್ರ ಅಯೋಧ್ಯೆಯ ನೂತನ ರಾಮಲಲ್ಲಾ ವಿಗ್ರಹದ ನೈಜ ...