Monday, November 30, 2020

ಇಂದಿನ ಇತಿಹಾಸ History Today ನವೆಂಬರ್ 30

 ಇಂದಿನ ಇತಿಹಾಸ  History Today ನವೆಂಬರ್  30 

2020: ಬರ್ಲಿನ್: ಕೊರೋವೈರಸ್ ಸಾಂಕ್ರಾಮಿಕವು ಮೂಗಿನ ಮೂಲಕ ಜನರ ಮೆದುಳಿಗೆ ಪ್ರವೇಶಿಸಬಹುದು, ಎಂದು 2020 ನವೆಂಬರ್ 30ರ ಸೋಮವಾರ ಪ್ರಕಟವಾದ ಅಧ್ಯಯನವೊಂದು ಹೇಳಿದ್ದು, ಅಧ್ಯಯನವು ಕೋವಿಡ್ -೧೯ ರೋಗಿಗಳಲ್ಲಿ ಕಂಡುಬರುವ ಕೆಲವು ನರವೈಜ್ಞಾನಿಕ ಲಕ್ಷಣಗಳನ್ನು ವಿವರಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರ್ಣಯ ಮತ್ತು ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು ತಿಳಿಸಿದೆ. ನೇಚರ್ ನ್ಯೂರೋಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಾರ್ಸ್-ಕೊವ್- ಉಸಿರಾಟದ ಪ್ರದೇಶದ ಮೇಲೆ ಪರಿಣಾಮ ಬೀರುವುದಲ್ಲದೆ ಕೇಂದ್ರ ನರಮಂಡಲದ (ಸಿಎನ್ಎಸ್) ಮೇಲೆ ಪರಿಣಾಮ ಬೀರುತ್ತದೆ, ಇದರ ಪರಿಣಾಮವಾಗಿ ವಾಸನೆ, ರುಚಿ, ತಲೆನೋವು, ಆಯಾಸ, ವಾಕರಿಕೆಯಂತಹ ನರವೈಜ್ಞಾನಿಕ ಲಕ್ಷಣಗಳು ಕಂಡುಬರುತ್ತವೆ.  ಇತ್ತೀಚಿನ ಸಂಶೋಧನೆಗಳು ಮೆದುಳು ಮತ್ತು ಸೆರೆಬ್ರೊಸ್ಪೈನಲ್ ದ್ರವದಲ್ಲಿ ವೈರಲ್ ಆರ್ಎನ್ ಇರುವಿಕೆಯನ್ನು ವಿವರಿಸಿದ್ದರೂ, ವೈರಸ್ ಎಲ್ಲಿ ಪ್ರವೇಶಿಸುತ್ತದೆ ಮತ್ತು ಮೆದುಳಿನೊಳಗೆ ಅದು ಹೇಗೆ ವಿತರಿಸಲ್ಪಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಜರ್ಮನಿಯ ಚಾರೈಟ್-ಯೂನಿವರ್ಸಿಟಾಟ್ಸ್ಮೆಡಿಜಿನ್ ಬರ್ಲಿನ್ ಸಂಶೋಧಕರು ನಾಸೊಫಾರ್ನಿಕ್ಸ್ ಅನ್ನು ಪರೀಕ್ಷಿಸಿದರು - ಮೂಗಿನ ಕುಹರದೊಂದಿಗೆ ಸಂಪರ್ಕಿಸುವ ಗಂಟಲಿನ ಮೇಲ್ಭಾಗ - ವೈರಲ್ ಸೋಂಕು ಮತ್ತು ಪುನರಾವರ್ತನೆಯ ಮೊದಲ ತಾಣ ಎಂಬುದನ್ನು ಗಮನಿಸಿದರು. ಕೋವಿಡ್ನಿಂದಾಗಿ ನಿಧನರಾದ  ೩೩ ರೋಗಿಗಳ ಮಿದುಳುಗಳನ್ನು (೨೨ ಪುರುಷರು ಮತ್ತು ೧೧ ಮಹಿಳೆಯರು) ಪರೀಕ್ಷಿಸಿದಾಗ ಇದು ಅಧ್ಯಯನಕಾರರಿಗೆ ಮನದಟ್ಟಾಯಿತು.
ಸಾವಿನ ಸಮಯದಲ್ಲಿ ಸರಾಸರಿ ವಯಸ್ಸು ೭೧. ವರ್ಷಗಳು,  ಕೋವಿಡ್ -೧೯ ರೋಗಲಕ್ಷಣಗಳು ಪ್ರಾರಂಭವಾದಾಗಿನಿಂದ ಸಾವಿನವರೆಗೆ ದಿನಗಳವರೆಗಿನ ಅಂತರ ಸರಾಸರಿ ೩೧ ದಿನಗಳಾಗಿದ್ದವು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಲೋಕಸಭೆ ಮತ್ತು ರಾಜ್ಯಸಭೆಯ sಸದನ ನಾಯಕರ ನಿರ್ಣಾಯಕ ಸರ್ವಪಕ್ಷ ವರ್ಚುವಲ್ ಸಭೆಯನ್ನು 2020 ಡಿಸೆಂಬರ್ ೪ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದಾರೆ. ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ ವರ್ಧನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ ಮುರಳೀಧgನ್ ಸೇರಿದಂತೆ ಸರ್ಕಾರದ ಉನ್ನತ ಸಚಿವರು, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಇತರ ಅಧಿಕಾರಿಗಳು ಹಾಜರಿರುತ್ತಾರೆ. ವರ್ಚುವಲ್ ಸಭೆ ಬೆಳಿಗ್ಗೆ ೧೦.೩೦ ಕ್ಕೆ ಪ್ರಾರಂಭವಾಗಲಿದೆ ಮತ್ತು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಒದಗಿಸುವಂತೆ ವಿವಿಧ ಪಕ್ಷಗಳ ಸದನ ನಾಯಕರನ್ನು ಆಹ್ವಾನಿಸಲಾಗುವುದು, ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರ ನೀಡಲಿದ್ದಾರೆ. ಸಭೆಗೆ ಹಾಜರಾಗುವಂತೆ ಎಲ್ಲ ಪಕ್ಷಗಳ ಸದನ ನಾಯಕರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಹಿಂದಿನ ಸಮಯಕ್ಕಿಂತ ಭಿನ್ನವಾಗಿ, ಬಾರಿ ಐದು ಸಂಸದರಿಗಿಂತ ಕಡಿಮೆ ಇರುವವರನ್ನೂ ಒಳಗೊಂಡಂತೆ ಎಲ್ಲ ಪಕ್ಷಗಳ ಸದನ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ, ಆದರೆ ಅವರೆಲ್ಲರಿಗೂ ಮಾತನಾಡಲು ಅವಕಾಶ ಸಿಗದಿರಬಹುದು ಎಂದು ಮೂಲಗಳು ತಿಳಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದ್ದು, ಇದೇ ವೇಳೆಯಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಯುತ್ತಿದೆ. ಚಳಿಗಾಲದ ಅಧಿವೇಶನದೊಂದಿಗೆ ಬಜೆಟ್ ಅಧಿವೇಶನವನ್ನು ವಿಲೀನಗೊಳಿಸುವ ಸಾಧ್ಯತೆಯಿದ್ದು, ಸಂಸತ್ತಿನ ಮುಂದಿನ ಅಧಿವೇಶನವು ಜನವರಿ ಅಂತ್ಯzಲ್ಲಿ ನಡೆಯುವ ಸಾಧ್ಯತೆಯಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೂರ್ವ ಲಡಾಖ್ ವಲಯದಲ್ಲಿ ಯಥಾಸ್ಥಿತಿ ಪುನಃಸ್ಥಾಪಿಸಲು ಭಾರತ ಮತ್ತು ಚೀನಾ ನೇ ಸುತ್ತಿನ ಸೇನಾ ಸಂವಾದಕ್ಕೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೇನೆ ವಾಪಸಾತಿ ಮತ್ತು ಉದ್ವಿಗ್ನತೆ ನಿವಾರಣೆಗೆ ಸಂಬಂಧಿಸಿದಂತೆ ಚೀನಾದಿಂದ ಕೆಲವು ಸ್ಪಷ್ಟನೆUಳಿಗಾಗಿ ಭಾರತ ಕಾಯುತ್ತಿದೆ ಎಂದು ಸುದ್ದಿ ಮೂಲಗಳು  2020 ನವೆಂಬರ್ 30ರ ಸೋಮವಾರ ತಿಳಿಸಿದವು. ದೆಹಲಿ ಮತ್ತು ಬೀಜಿಂಗ್ ಮೂಲದ ಮಿಲಿಟರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳ ಪ್ರಕಾರ, ೫೯೭ ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಘರ್ಷಣೆಯ ಬಿಂದುಗಳಿಂದ ಸೇನೆ ವಾಪಸಾತಿ ಮತ್ತು ಉದ್ವಿಗ್ನತೆ ನಿವಾರಣೆಯ ಅವಕಾಶದ ಕಿಟಕಿಯು ಡಿಸೆಂಬರಿನಲ್ಲಿ ಭಾರೀ ಹಿಮಪಾತ ಮತ್ತು, ಧ್ರುವೀಯ ತಾಪಮಾನ ಆರಂಭವಾಗುವುದರ ಜೊತೆಗೆ ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಲಡಾಖ್ ಎತ್ತರಕ್ಕೆ ಬೀಸುವ ಹೆಚ್ಚಿನ ವೇಗದ ಗಾಳಿ ಆರಂಭವಾಗುತ್ತಿದ್ದಂತೆಯೇ ಮುಚ್ಚಿಹೋಗುತ್ತದೆ. ಇಂತಹ ಪ್ರತಿಕೂಲ ವಾತಾವರಣದಲ್ಲಿ ಸೇನೆಗೆ ಯಾವುದೇ ಮಹತ್ವದ ಚಲನ ಸಾಧ್ಯವಾಗುವುದಿಲ್ಲ. ಜೊತೆಗೆ ಫಿರಂಗಿ ಮತ್ತಿತರ ರಕ್ಷಣಾ ಉಪಕರಣಗಳ ರಕ್ಷಾ ಕವಚ ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಉಭಯ  ಕಡೆಯವರು ಕ್ಷಿಪಣಿ, ಫಿರಂಗಿ ಮತ್ತು ಇತರ ರಕ್ಷಾಕವಚಗಳ ಬೆಂಬಲದೊಂದಿಗೆ ಪ್ರತಿ ಬದಿಯಲ್ಲಿ ಮೂರು ವಿಭಾಗಗಳಿಗಿಂತ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದಾರೆ. "ಮೇಜಿನ ಮೇಲೆ ಮಾರ್ಗಸೂಚಿ ಇದೆ ಆದರೆ ಭಾರತೀಯ ಸೇನೆ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ ಎರಡೂ ಹಂತ ಹಂತವಾಗಿ ನಿಷ್ಕ್ರಿಯಗೊಳಿಸುವುದರ ಕುರಿತು ಭಾರತವು ಚೀನಾದಿಂದ ನಿರ್ದಿಷ್ಟ ಸ್ಪಷ್ಟೀಕರಣಗಳನ್ನು ಕೇಳಿದೆ. ಸ್ಪಷ್ಟೀಕರಣಗಳು ಒಪ್ಪಂದಕ್ಕೆ ದಾರಿ ಮಾಡಕೊಡಬಹುದು. ಆದರೆ ಉತ್ತರಗಳಿಗಾಗಿ ಚೀನಾವನ್ನು ಕಾಯಲಾಗುತ್ತಿದೆ. ಉಭಯ ದೇಶಗಳ ತೃಪ್ತಿಗಾಗಿ ಸ್ಪಷ್ಟೀಕರಣಗಳು ಬಂದಲ್ಲಿ ಹಂತ ಹಂತವಾಗಿ ಸೇನಾ ವಾಪಸಾತಿ ಮತ್ತು ಉದ್ವಿಗ್ನತೆ ನಿವಾರಣೆ ಕ್ರಮಗಳನ್ನು ಮತ್ತು ಉಲ್ಬಣಗೊಳ್ಳುವ ಕ್ರಮಗಳನ್ನು ಲಿಖಿತ ಒಪ್ಪಂದದಲ್ಲಿ ವಿವರಿಸಲಾಗುವುದು ಎಂದು ಬೆಳವಣಿಗೆಗಳ ಬಗ್ಗೆ ಅರಿವು ಇರುವ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಲಕ್ನೋ: ಹೊಸ ಕೃಷಿ ಕಾನೂನುಗಳ ವಿರುದ್ದದ ಪ್ರತಿಭಟನೆಯಾಗಿ ರಾಷ್ಟ್ರ ರಾಜಧಾನಿಗೆ ಹೋಗುವ ರಸ್ತೆಗಳನ್ನು ಕಡಿತಗೊಳಿಸುವುದಾಗಿ ರೈತ ಸಂಘಟನೆಗಳು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರೈತರ ಜೊತೆ ಚರ್ಚಿಸಲು ಕೃಷಿ ಸಚಿವರು ಮುಂದಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ 30ರ ಸೋಮವಾರ ಕೃಷಿ ಕಾನೂನುಗಳನ್ನು ಪ್ರಬಲವಾಗಿ ಪ್ರತಿಪಾದಿಸಿದರು. ದೆಹಲಿ ಗಡಿಯಲ್ಲಿ ಶಿಬಿರ ಹೂಡಿರುವ ರೈತರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಷರತ್ತು ಬದ್ಧ ಮಾತುಕತೆ ಆರಂಭದ ಪ್ರಸ್ತಾಪ ನೀಡಿದ್ದಕ್ಕೆ ಸಿಟ್ಟಿಗೆದ್ದು ರಾಜಧಾನಿ ಘೇರಾವ್ ಬಗ್ಗೆ ಮಾತುಗಳನ್ನಾಡಿದ್ದಾರೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ, ಅಮಿತ್ ಶಾ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಕಾರ್ಪೊರೇಟ್ಗಳ ಅನುಕೂಲಕ್ಕಾಗಿ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸುತ್ತಿದೆ ಎಂಬುದಾಗಿ  ಆರೋಪಿಸಿರುವ ರೈತರನ್ನು ತಲುಪುವ ಯತ್ನ ನಡೆಸಿದ ಪ್ರಧಾನಿ  ಮೋದಿ, "ದಶಕಗಳ ಸುಳ್ಳಿನಿಂದಾಗಿ ಕೃಷಿಕರ ಮನಸ್ಸಿನಲ್ಲಿ ಆತಂಕ ಉಂಟಾಗುತ್ತದೆ  ಎಂಬುದು ನನಗೆ ತಿಳಿದಿದೆ. ನಾವು ಮೋಸಗೊಳಿಸುವ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ. ನಮ್ಮ ಉದ್ದೇಶಗಳು ಗಂಗಾನದಿಯ ನೀರಿನಂತೆಯೇ ಪವಿತ್ರವಾಗಿವೆ ಎಂಬುದಾಗಿ ಗಂಗಾಮಾತೆಯ ದಡದಲ್ಲಿ ನಿಂತು ಹೇಳಲು ನಾನು ಇಚ್ಛಿಸುತ್ತೇನೆ ಎಂದು ಹೇಳಿದರು. "ಹಿಂದಿನ ವ್ಯವಸ್ಥೆಯು ಉತ್ತಮವಾಗಿದೆ ಎಂದು ಯಾರಾದರೂ ಭಾವಿಸಿದರೆ, ಕಾನೂನು ಯಾರನ್ನಾದರೂ ಹೇಗೆ ತಡೆಯುತ್ತದೆ, ಭಾಯ್? ಎಂದು ಪ್ರಶ್ನಿಸಿದ ಪ್ರಧಾನಿ  ಹೊಸ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಸಾಂಪ್ರದಾಯಿಕ ಮಂಡಿಗಳು ಮತ್ತು ಸರ್ಕಾರವು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯ ಅಂತ್ಯ ಎಂದು ಅರ್ಥವಲ್ಲ ಎಂದು ಹೇಳುವ ಮೂಲಕ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ವಿರುದ್ಧ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಅವರು ರೈತರ ವಿರುದ್ಧ ತಂತ್ರಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಬಂಗಾಳಕೊಲ್ಲಿಯಲ್ಲಿ 2020 ನವೆಂಬರ 30ರ ಸೋಮವಾರ ವಾಯುಭಾರ ಕುಸಿತ ಉಂಟಾಗಿದ್ದು, ತೀವ್ರವಾದ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ ಇದೆ ಮತ್ತು ಪರಿಣಾಮವಾಗಿ ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಲ್ಲಿ ಡಿಸೆಂಬರ್ ಮತ್ತು ೩ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತು.  ಚಂಡಮಾರುತವು ಡಿಸೆಂಬರ್ ಸಂಜೆ ಅಥವಾ ರಾತ್ರಿ ಶ್ರೀಲಂಕಾ ಕರಾವಳಿಯನ್ನು ದಾಟಿ ನಂತರ ತಮಿಳುನಾಡಿನ ಕನ್ಯಾಕುಮಾರಿಯ ಸುತ್ತ ಮರುದಿನ ಬೆಳಗ್ಗ್ಗೆ ಕೊಮೋರಿನ್ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಐಎಂಡಿ ತಿಳಿಸಿದೆ. ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಕೇರಳ, ಪುದುಚೇರಿ, ಕಾರೈಕಲ್, ಮಹೇ, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಡಿಸೆಂಬರ್ ರಿಂದ ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತನ್ನ ಇತ್ತೀಚಿನ ಬುಲೆಟಿನ್ನಲ್ಲಿ ತಿಳಿಸಿದೆ. ಡಿಸೆಂಬರ್ 1ರ ಸೋಮವಾರ, ಪ್ರದೇಶಗಳಲ್ಲಿ ಕೆಲವಡೆ ಮತ್ತು ಇತರ ಸ್ಥಳಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಲ್ಲಿ, ಡಿಸೆಂಬರ್ ರಂದು ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಮತ್ತು ಬೇರೆ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಬಹುದು. ಹಿಂದಿನ ಮತ್ತು ಮರುದಿನ ಕನ್ಯಾಕುಮಾರಿ ಮತ್ತು ತಿರುವನಂತಪುರಂ ಸೇರಿದಂತೆ ಎರಡೂ ರಾಜ್ಯಗಳ ದಕ್ಷಿಣ ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ನಿರೀಕ್ಷಿಸಬಹುದು ಎಂದು ಐಎಂಡಿ ಹೇಳಿದೆ. "ಸೋಮವಾರ ಮುಂಜಾನೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿಗೆ ಸಾಗಿ ಶ್ರೀಲಂಕೆಯ ತ್ರಿಕೋನಮಲೀಯ ಪೂರ್ವ-ಆಗ್ನೇಯಕ್ಕೆ ಸಾಗಲಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸೆಪ್ಟೆಂಬರಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಹರಿಯಾಣ ಮತ್ತು ಪಂಜಾಬಿನ ರೈತ ಚಳವಳಿಯ ಧುರೀಣರು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬುರಾರಿಯಲ್ಲಿನ ರೈತರನ್ನು ಮುಕ್ತರನ್ನಾಗಿ ಮಾಡುವಂತೆ 2020 ನವೆಂಬರ 30ರ ಸೋಮವಾರ ಷರತ್ತು ವಿಧಿಸಿದರು. ಈ ಮಧ್ಯೆ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಎನ್ಡಿಎಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಎನ್ಡಿಎ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ) ಎಚ್ಚರಿಕೆ ನೀಡಿತು. ಆರ್ಎಲ್ಪಿ ನಾಯಕ ಹನುಮಾನ್ ಬೇಣಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಕೆ ನೀಡಿದರು. ರೈತರ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಪ್ರಾರಂಭದಲ್ಲಿ ರಾಷ್ಟ್ರ ರಾಜಧಾನಿಗೆ ಪ್ರವೇಶ ನಿರಾಕರಿಸಿದ್ದರಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಆಕ್ರೋಶಗೊಂಡ ರೈತರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿವೆ, ದೆಹಲಿ ಪೊಲೀಸರು ಶಾಂತಿಯುತ ಪ್ರದರ್ಶನಗಳನ್ನು ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅನುಮತಿ ನೀಡಿದ ನಂತರ, ರೈತರು ಕಳೆದ ಮೂರು ದಿನಗಳಿಂದ ಸಿಂಗು (ದೆಹಲಿ-ಹರಿಯಾಣ) ಗಡಿ ಮತ್ತು ಟಿಕ್ರಿ ಗಡಿಯಲ್ಲಿ ಕ್ಯಾಂಪಿಂಗ್ ಮಾಡಿದ್ದಾರೆ. ರೈತರಿಗೆ ತಮ್ಮ ಆಂದೋಲನವನ್ನು ಮುಂದುವರೆಸಲು ಪೊಲೀಸರು ಸಂತ ನಿರಂಕಾರಿ ಮೈದಾನವನ್ನೂ ನೀಡಿದ್ದರು. ಸಿಂಗು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷಿ ಒಕ್ಕೂಟದ ಮುಖಂಡರು ಮಾತುಕತೆ ನಡೆಸಲು ಕೇಂದ್ರ ಸರ್ಕಾರದಿಂದ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದರು. "ಬುರಾರಿ ಮೈದಾನದಲ್ಲಿ ಕುಳಿತ ನಮ್ಮ ರೈತರನ್ನು ಅವರು ಮುಕ್ತಗೊಳಿಸಿದ ನಂತರ ನಾವು ಸರ್ಕಾರದೊಂದಿಗೆ ಮಾತುಕತೆಗೆ ಹಾಜರಾಗುತ್ತೇವೆ. ಬುಟ್ಟಾ ಸಿಂಗ್ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರಿಂದ ದೂರವಾಣಿ ಕರೆ ಬಂದಿದೆ ಎಂದು ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್  30  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ