ನಾನು ಮೆಚ್ಚಿದ ವಾಟ್ಸಪ್

Saturday, November 24, 2018

‘ರೆಬೆಲ್ ಸ್ಟಾರ್’ ಅಂಬರೀಶ್ ಇನ್ನಿಲ್ಲ

ರೆಬೆಲ್ ಸ್ಟಾರ್ಅಂಬರೀಶ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಲಚಿತ್ರದ ಹಿರಿಯ ನಟ, ಮಾಜಿ ಸಚಿವರೆಬೆಲ್ ಸ್ಟಾರ್  ಎಂದೇ ಖ್ಯಾತರಾಗಿದ್ದ ಅಂಬರೀಶ್ (66) ಅನಾರೋಗ್ಯದಿಂದ ನಗರದ ವಿಕ್ರಮ್  ಆಸ್ಪತ್ರೆ ಯಲ್ಲಿ 2018 ನವೆಂಬರ್ 24 ಶನಿವಾರ ರಾತ್ರಿ ನಿಧನರಾದರುಕಿಡ್ನಿ, ಶ್ವಾಸಕೋಶದ ಸಮಸ್ಯೆಯಿಂದ  ಅವರು ಬಳಲುತ್ತಿದ್ದರು ಎನ್ನಲಾಗಿದೆ. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಂಬರೀಶ್ ಅಗಲಿದರು.

ಮಾಜಿ ಲೋಕಸಭಾ ಸದಸ್ಯರಾದ ಅಂಬರೀಶ್  ವರ ಮೊದಲ ಹೆಸರು ಮಳವಳ್ಳಿ ಹುಚ್ಚೆ ಗೌಡ ಅಮರನಾಥ್. ಹುಚ್ಚೇಗೌಡ- ಪದ್ಮಮ್ಮ ದಂಪತಿಗೆ 6ನೇ ಮಗನಾಗಿ 1952 ಮೇ 29ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸನ ಕೆರೆಗ್ರಾಮದಲ್ಲಿ ಜನಿಸಿದ ಅಂಬರೀಶ್ , ಖ್ಯಾತ ಪೀಟಿಲು ವಾದಕ ವಿದ್ವಾನ್ ಟಿ.ಚೌಡಯ್ಯರವರ ಮೊಮ್ಮಗ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರ ಹಾವು" ಚಿತ್ರದಲ್ಲಿ (ಜಲೀಲ ಪಾತ್ರದ) ನಟಿಸುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ರೆಬೆಲ್ ಸ್ಟಾರ್ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು.
ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಸೇರಿದಂತೆ ಒಟ್ಟು 205 ಚಿತ್ರಗಳಲ್ಲಿ ಅಂಬರೀಶ್  ನಟಿಸಿದ್ದರು.

ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದರೆ, . ಹೃದಯ ಹಾಡಿತು ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಅಂಬಿ ನಿಂಗೆ ವಯಸ್ಸಾಯ್ತೋ ಅಂಬರೀಶ್ ಅವರ ಕೊನೆಯ ಚಿತ್ರ.

 ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅವರು, ಆಗಿನ ಮುಖ್ಯಮಂತ್ರಿ  ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

 ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ. ಅಂಬರೀಶ್ ಅವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ಅನಂತರ ಕಾಂಗ್ರೆಸ್ ಪಕ್ಷ ಸೇರಿದರು. ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಅಂಬರೀಶ್ ತಮ್ಮ ಉದಾರ ಸ್ವಭಾವದಿಂದಾಗಿ ದಾನಶೂರ ಕರ್ಣ ಎಂದೇ ಹೆಸರಾಗಿದ್ದರು. ಸಮಾಜದ ದುರ್ಬಲ ವರ್ಗದವರ ಬಗ್ಗೆ ಇವರಿಗೆ ವಿಶೇಷ ಕಳಕಳಿಯಿತ್ತು.

ಮುಖ್ಯಮಂತ್ರಿ ಕುಮಾರ ಸ್ವಾಮಿ ಡಿ.ಕೆ.ಶಿವಕುಮಾರಕೆ.ಜೆ.ಜಾರ್ಜ್ಹ್ಯಾರೀಸ್ನಟರಾದ ಪುನೀತ್ ರಾಜ್ಕುಮಾರ್ಯಶ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದರು.

ಚಿತ್ರನಟ ರಜನೀಕಾಂತ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಅನೇಕ ಗಣ್ಯರು  ಅಂಬರೀಶ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

ರಾಜ್ಯದ ಜನತೆಗೆ ವಿಶೇಷವಾಗಿ ಮಂಡ್ಯದ ಜನತೆಗೆ ಅಂಬರೀಶ್ ನಿಧನ ದಿನದ ಎರಡನೇ ಆಘಾತ. ಇದಕ್ಕೆ ಮುನ್ನ ಇದೇ ದಿನ ಮಂಡ್ಯದಲ್ಲಿ ಖಾಸಗಿ ಬಸ್ಸೊಂದು ನಾಲೆಗೆ ಬಿದ್ದು ಹಲವಾರು ಮಕ್ಕಳು ಮಹಿಳೆಯರು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದರು.

No comments:

Post a Comment