ನಾನು ಮೆಚ್ಚಿದ ವಾಟ್ಸಪ್

Monday, November 26, 2018

ಪುಷ್ಕರ ದೇಗುಲದಲ್ಲಿ ರಾಹುಲ್ ‘ಗೋತ್ರ’ ಬಹಿರಂಗ

ಪುಷ್ಕರ ದೇಗುಲದಲ್ಲಿ ರಾಹುಲ್  ‘ಗೋತ್ರ’  ಬಹಿರಂಗ

ನವದೆಹಲಿ: ಗುಜರಾತಿನಲ್ಲಿ ದೇವಾಲಯ ಭೇಟಿಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವುಜನಿವಾರ ಧರಿಸುವ ಬ್ರಾಹ್ಮಣ ಎಂಬುದಾಗಿ ಹೇಳಿದ್ದು, ಮಾನಸ ಸರೋವರ ಯಾತ್ರೆಯ ಬಳಿಕ ತಾವು ಶಿವನ ಅನುಯಾಯಿ ಎಂದು ಹೇಳಿದ್ದರು. ಈಗ ರಾಜಸ್ಥಾನದಲ್ಲಿ  ಬ್ರಹ್ಮ ದೇವಾಲಯದ ಮುಖ್ಯ ಅರ್ಚಕರ ಬಳಿ ರಾಹುಲ್ ಗಾಂಧಿ ತಮ್ಮಗೋತ್ರವನ್ನು ಬಹಿರಂಗ ಪಡಿಸಿದ್ದಾರೆ.

ಪುಷ್ಕರ ದೇವಾಲಯದ ಮುಖ್ಯ ಅರ್ಚಕರ ಬಳಿ ರಾಹುಲ್ ಗಾಂಧಿ ಅವರು ತಾವು ಕೌಲ್ ಬ್ರಾಹ್ಮಣರಾಗಿದ್ದು ‘ದತ್ತಾತ್ರೇಯ ಗೋತ್ರ’ದವರು ಎಂಬುದಾಗಿ ಹೇಳಿದ್ದಾರೆ. ಪುಷ್ಕರದಲ್ಲಿ ರಾಹುಲ್ ಗಾಂಧಿ ಅವರು ಪೂಜಾ ವಿಧಿ ನೆರವೇರಿಸಿದ ಬಳಿಕ ಮುಖ್ಯ ಅರ್ಚಕರು ರಾಹುಲ್ ಗಾಂಧಿ ಅವರ ಗೋತ್ರವನ್ನು ಬಹಿರಂಗಕ್ಕೆ ತಂದಿದ್ದಾರೆ.

ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮ್ಮ ಗೋತ್ರವನ್ನು ಮಾಧ್ಯಮಗಳಿಗೆ ತಿಳಿಸಿಲ್ಲ. ಬದಲಿಗೆ ಮುಖ್ಯ ಅರ್ಚಕ ರಾಜನಾಥ್ ಕೌಲ್ ಅವರು ಪುಷ್ಕರದಲ್ಲಿ ವಿಚಾರವನ್ನು ಸಾಕ್ಷ್ಯ ಸಹಿತವಾಗಿ ಬಹಿರಂಗ ಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಹಿರಿಯರ ದಾಖಲೆಗಳನ್ನು ತಾವು ನೋಡಿದ್ದು ಮೋತಿಲಾಲ್ ನೆಹರೂ ಅವರಿಂದ ಇಂದಿರಾಗಾಂಧಿ ಅವರವರೆಗೆ ಮತ್ತು ರಾಹುಲ್ ತಂದೆ ರಾಜೀವ ಗಾಂಧಿ ಅವರೂ ಕೌಲ್ ಬ್ರಾಹ್ಮಣರಾಗಿದ್ದು  ದತ್ತಾತ್ರೇಯ  ಗೋತ್ರಕ್ಕೆ ಸೇರಿದ್ದಾರೆ ಎಂದು ಅರ್ಚಕ ನುಡಿದರು. ರಾಹುಲ್ ಅವರು ಸ್ವತಃ ತಮ್ಮ ಗೋತ್ರವನ್ನು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ವಿವರಗಳು ಭಾರೀ ಮಹತ್ವ ಪಡೆದಿವೆ. ಕಾಂಗ್ರೆಸ್ ನಾಯಕ ಸಿಪಿ ಜೋಶಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸಂಸದೆ ಉಮಾಭಾರತಿ, ಹಿಂದೂ ಕಾರ್ಯಕರ್ತೆ ಸಾಧ್ವಿ ಋತಂಭರಾ ಅವರುಕೆಳ ಜಾತಿಯವರಾಗಿದ್ದು ಅವರಿಗೆ ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ. ಬ್ರಾಹ್ಮಣರು ಮಾತ್ರವೇ ಹಿಂದುತ್ವದ ಬಗ್ಗೆ ಮಾತನಾಡಬಹುದು ಎಂದಿದ್ದರು. ರಾಹುಲ್ ಗಾಂಧಿಯವರು ತತ್ ಕ್ಷಣವೇ ಜೋಶಿ ಹೇಳಿಕೆಯನ್ನು ಖಂಡಿಸಿ, ಪ್ರಧಾನಿಯ ಕ್ಷಮೆಯಾಚನೆ ಮಾಡುವಂತೆ ಸೂಚಿಸಿದ್ದರು.

ಇದೀಗ ಬಿಜೆಪಿ ಹಿಂದೂ ಪರ ನಿಲುವಿನ ಹಿನ್ನೆಲೆಯಲ್ಲೇ ರಾಜಸ್ಥಾನದ ಅರ್ಚಕರು ರಾಹುಲ್ ಗಾಂಧಿ ಅವರ ಗೋತ್ರವನ್ನು ಬಹಿರಂಗ ಪಡಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತಿದೆ.

ಹಿಂದೂ ಮತಗಳನ್ನು ಸೆಳೆಯುವುದಕ್ಕಾಗಿ ಮಾತ್ರವೇ ರಾಹುಲ್ ಗಾಂಧಿ ಅವರು ಜನಿವಾರ ಧರಿಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿತ್ತು.

ರಾಹುಲ್ ಗಾಂಧಿ ಜನಿವಾರ ಧರಿಸುತ್ತಿದ್ದರೆ ಅವರು ಎಂತಹ ಜನಿವಾರ ಧರಿಸುತ್ತಿದ್ದಾರೆ, ಅವರ ಗೋತ್ರ ಯಾವುದು?’ ಎಂದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಇಂದೋರ್ ಚುನಾವಣಾ ಸಭೆಯಲ್ಲಿ  ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ ಅವರ ಅಜ್ಜ ಫಿರೋಜ್ ಗಾಂಧಿ ಪಾರ್ಸಿ ಸಮುದಾಯದವರಾಗಿದ್ದು, ಪಾರ್ಸಿ ಸಮುದಾಯದವರಿಗೆ ಯಾವುದೇ ಗೋತ್ರ ಇರುವುದಿಲ್ಲ ಎಂದು ಹಲವಾರು ಅರ್ಚಕರು ಹೇಳುತ್ತಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಇಂದಿರಾಗಾಂಧಿ ಅವರಿಂದ ತಮ್ಮ ಗೋತ್ರವನ್ನು ಪಡೆದಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಕುಟುಂಬವು ತನ್ನ ಗೋತ್ರವನ್ನ ಹೇಳಿಕೊಂಡಿರುವುದು ಇದೇ ಪ್ರಪ್ರಥಮವಾಗಿದೆ.

ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ  ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ವಾಟ್ಸಪ್ ಗಳಲ್ಲಿ ರಾಹುಲ್ ಗಾಂಧಿ ಅವರ  ದಿವಂಗತ ಅಜ್ಜನ (ದಿವಂಗತ ಇಂದಿರಾಗಾಂಧಿ ಅವರ ಪತಿಸಮಾಧಿಯ ಕೆಳಗಿನ ಚಿತ್ರ ವೈರಲ್ ಆಯಿತು!



No comments:

Post a Comment