Showing posts with label CBI. Show all posts
Showing posts with label CBI. Show all posts

Friday, December 21, 2018

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್: ಎಲ್ಲ ೨೨ ಆರೋಪಿಗಳ ಖುಲಾಸೆ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್: ಎಲ್ಲ ೨೨ ಆರೋಪಿಗಳ ಖುಲಾಸೆ
ಮುಂಬೈ: ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್   ಪ್ರಕರಣದ ಎಲ್ಲ ೨೨ ಮಂದಿ ಆರೋಪಿಗಳನ್ನು ಕೊಲೆ ಕೃತ್ಯವನ್ನು  ಸಾಬೀತುಪಡಿಸಲು ಸಾಕಷ್ಟು ಪುರಾವೆ ಇಲ್ಲ ಎಂದು ಹೇಳಿ ೨೦೧೮ ಡಿಸೆಂಬರ್ ೨೧ ರ ಶುಕ್ರವಾರ ಖುಲಾಸೆ ಮಾಡಿತು.

ಭಯೋತ್ಪಾದಕರೊಂದಿಗೆ ಸಂಪರ್ಕ  ಇತ್ತೆನ್ನಲಾದ ಶೇಖ್ ಎಂಬ ದರೋಡೆಕೋರನನ್ನು 2005ರ ನವೆಂಬರ್ ತಿಂಗಳಲ್ಲಿ ನಡೆದ ನಕಲಿ ಗುಂಡಿನ ಘರ್ಷಣೆಯಲ್ಲಿ ಕೊಲೆಗೈದ ಕೃತ್ಯದಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಗುಜರಾತ್ ಮತ್ತು ರಾಜಸ್ಥಾನದ 22 ಮಂದಿ ಬಹುತೇಕ ಕಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ಎದುರಿಸುತ್ತಿದರು.

ಶೇಖ್ ಪತ್ನಿ ಕೌಸರ್ ಬಿ ಕೂಡ ಅದೇ ತಿಂಗಳು ಕೊಲ್ಲಲ್ಪಟ್ಟಿದ್ದರು. ಗುಜರಾತ್ ಮತ್ತು ರಾಜಸ್ಥಾನ್ ಪೊಲೀಸರು ಡಿಸೆಂಬರ್ ೨೦೦೬ ಡಿಸೆಂಬರಿನಲ್ಲಿ ನಡೆದ ಇನ್ನೊಂದು ಗುಂಡಿನ ಘರ್ಷಣೆಯಲ್ಲಿ ಶೇಖನ ಸಹಾಯಕ  ತುಳಸಿರಾಮ್ ಪ್ರಜಾಪತಿಯನ್ನು ಕೊಂದು ಹಾಕಿದ್ದರು.

ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಾಸೆಕ್ಯೂಷನ್ ೨೧೦ ಸಾಕ್ಷಿಗಳನ್ನು ಹಾಜರು ಪಡಿಸಿತ್ತು. ಅವರ ಪೈಕಿ  ೯೨ ಸಾಕ್ಷಿಗಳು ಪ್ರತಿಕೂಲರಾಗಿದ್ದರು.

ತಿಂಗಳ ಆರಂಭದಲ್ಲಿ ಅಂತಿಮ ವಾದ ಮುಕ್ತಾಯದ ಬಳಿಕ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್. ಜೆ. ಶರ್ಮಾ ಅವರು ಡಿಸೆಂಬರ್ ೨೧ ರಂದು ತೀರ್ಪು ಘೋಷಿಸುವುದಾಗಿ ಪ್ರಕಟಿಸಿದ್ದರು.
ಗುಜರಾತ್ ಗೃಹ ಸಚಿವ (ಈಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ) ಮತ್ತು ಗುಜರಾತ್ ಮತ್ತು ರಾಜಸ್ಥಾನದ ಹಿರಿಯ  ಪೊಲೀಸ್ ಅಧಿಕಾರಿಗಳು ಸೇರಿದಂತೆ ೩೮ ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ೨೦೧೦ ರಲ್ಲಿ ಪ್ರಕರಣ ದಾಖಲಿಸಿತ್ತು.

ಏನಿದ್ದರೂ ಸುಪ್ರೀಂಕೋರ್ಟ್ ಆದೇಶದಂತೆ 2013ರಲ್ಲಿ ಗುಜರಾತಿನಿಂದ ಮುಂಬೈ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಈ ಪ್ರಕರಣದಲ್ಲಿ ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯವು
 ಅಮಿತ್ ಶಾ ಮತ್ತು ಗುಜರಾತ್ ಪೊಲೀಸ್ ಮುಖ್ಯಸ್ಥ ಪಿ.ಸಿ. ಪಾಂಡೆ ಹಾಗೂ ಭಯೋತ್ಪಾದನಾ ನಿಗ್ರಹ  ತಂಡ ಮಹಾನಿರ್ದೇಶಕ ಡಿ.ಜಿ. ವಂಜಾರ  ಸೇರಿದಂತೆ ೧೬ ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿ ಮಾಡಿತ್ತು.

ಆ ಬಳಿಕ, ವಂಜಾರ ಮತ್ತು ಇತರ ನಾಲ್ವರು ಪೊಲೀಸ್ ಅಧಿಕಾರಿಗಳ ಖುಲಾಸೆ ವಿರುದ್ಧ ಶೇಖ್ ಸಹೋದರ ರುಬಾಬುದ್ದೀನ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

Tuesday, November 20, 2018

ನೀವ್ಯಾರೂ ವಿಚಾರಣೆಗೆ ಲಾಯಕ್ಕಲ್ಲ:ಸುಪ್ರೀಂಕೋರ್ಟ್


ನೀವ್ಯಾರೂ ವಿಚಾರಣೆಗೆ ಲಾಯಕ್ಕಲ್ಲ:ಸುಪ್ರೀಂಕೋರ್ಟ್

ನವದೆಹಲಿ: ತಮ್ಮ ಮೇಲಿನ  ಭ್ರಷ್ಟಾಚಾರ ಆರೋಪಗಳ ಕುರಿತ ಕೇಂದ್ರೀಯ ಜಾಗೃತಾ ಆಯೋಗದ (ಸಿವಿಸಿ) ವರದಿ ಬಗ್ಗೆ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರ ಗೌಪ್ಯ ಪ್ರತಿಕ್ರಿಯೆಯುಸೋರಿಕೆಆದುದಕ್ಕೆ ಮಂಗಳವಾರ ಸಿಟ್ಟಿಗೆದ್ದ ಸುಪ್ರೀಂ ಕೋರ್ಟ್ನೀವ್ಯಾರೂ ವಿಚಾರಣೆಗೆ ಲಾಯಕ್ಕಲ್ಲಎಂದು ಝಾಡಿಸಿ, ಪ್ರಕರಣವನ್ನು ನವೆಂಬರ್ 29ಕ್ಕೆ ಮುಂದೂಡಿತು.


ಅಲೋಕ್ ವರ್ಮ ಅವರು ತಮ್ಮ  ಪ್ರತಿಕ್ರಿಯೆಯನ್ನು ಸೋಮವಾರ ಮೊಹರಾದ ಲಕೋಟೆಯಲ್ಲಿ ಸುಪ್ರೀಂಕೋರ್ಟಿನ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದರು.

ಭಾರತದಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್ ಮತ್ತು ಕೆ.ಎಂ ಜೋಸೆಫ್  ಅವರನ್ನು ಒಳಗೊಂಡ ಪೀಠವು ಸಿಬಿಐ ನಿರ್ದೇಶಕರ ಪ್ರತಿಕ್ರಿಯೆಯನ್ನು ಪ್ರಕಟಿಸಿರುವ ಸುದ್ದಿ ಪೋರ್ಟಲ್  ವರದಿಯ ನಕಲನ್ನು ವರ್ಮ ಪರ ವಕೀಲ  ಫಾಲಿ ಎಸ್. ನಾರಿಮನ್ ಅವರಿಗೆ ಹಸ್ತಾಂತರಿಸಿತು.

ಮಾಧ್ಯಮದಲ್ಲಿ ಸೋರಿಕೆಯಾದ ವರದಿಯನ್ನು ಪರಿಶೀಲಿಸಿದ  ನಾರಿಮನ್ ಅವರು ತಾವುದಿಗ್ಭ್ರಮೆ; ಹಾಗೂಆಘಾತಗೊಂಡಿರುವುದಾಗಿ ಪೀಠಕ್ಕೆ ತಿಳಿಸಿದರು.

ಮಾಧ್ಯಮಗಳು ಮುಕ್ತ ಹಾಗೂ ಜವಾಬ್ದಾರಿಯುತವಾಗಿರಬೇಕು. ಆದ್ದರಿಂದ ಮಾಧಮವನ್ನು ಮತ್ತು ಅದರ ಪತ್ರಕರ್ತರನ್ನು ನ್ಯಾಯಾಲಯಕ್ಕೆ ಕರೆಸಬೇಕು ಎಂದು  ಹಿರಿಯ ವಕೀಲರು ಪೀಠಕ್ಕೆ ಮನವಿ ಮಾಡಿದರು.
.

"ನಿಮ್ಮಲ್ಲಿ ಯಾರೂ ವಿಚಾರಣೆಗೆ ಅರ್ಹರಾಗಿದ್ದಾರೆಂದು ನಾವು ಭಾವಿಸುವುದಿಲ್ಲ" ಎಂದು ಹೇಳಿದ ಪೀಠ, ಪ್ರಕರಣವನ್ನು ನವೆಂಬರ್ 29ಕ್ಕೆ ಮುಂದೂಡಿತು.

ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನ ಜೊತೆಗೆ ಸಿಬಿಐ ನಿರ್ದೇಶಕ ಅಲೋಕ ವರ್ಮ ಘರ್ಷಣೆಗೆ ಇಳಿದ ಬಳಿಕ ಕೇಂದ್ರ ಸರ್ಕಾರವು ಉಭಯ ಅಧಿಕಾರಿಗಳನ್ನು ಕರ್ತವ್ಯ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ಕೇಂದ್ರ ಸರ್ಕಾರವು ತಮ್ಮನ್ನು ಕಡ್ಡಾಯವಾಗಿ ರಜೆಯಲ್ಲಿ ಕಳುಹಿಸಿದ್ದನ್ನು ಪ್ರಶ್ನಿಸಿ ವರ್ಮ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

  ಮಧ್ಯೆ 2018  ನವೆಂಬರ್ 19ರಂದು ಸಿಬಿಐ ಹಿರಿಯ ಅಧಿಕಾರಿ ಎಂ.ಕೆ. ಸಿನ್ಹ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪಾರ್ಟಿ ಭಾಯಿ ಚೌಧರಿ ಮತ್ತು ಸಿವಿಸಿಯ ಕೆ.ವಿ. ಚೌಧರಿ ಅವರು ಅಸ್ತಾನ ವಿರುದ್ಧದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿ, ಪ್ರಕರಣವನ್ನು ಇನ್ನಷ್ಟು ಗೋಜಲುಗೊಳಿಸಿದ್ದರು.

ಕೇಂದ್ರ ಸಚಿವರು ಆರೋಪಗಳನ್ನು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದರೆ, ಇತರ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Friday, October 26, 2018

ಸಿಬಿಐ ಮುಖ್ಯಸ್ಥರ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ನಿಗಾ

ಸಿಬಿಐ ಮುಖ್ಯಸ್ಥರ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ನಿಗಾ 

ನವದೆಹಲಿ : ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಪಟ್ನಾಯಕ್  ಮೇಲುಸ್ತುವಾರಿಯಲ್ಲಿ  ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ  ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ತನಿಖೆಯ ನಡೆಯಲಿದೆ ಎಂದು  2018 ಅಕ್ಟೋಬರ್ 26 ಶುಕ್ರವಾರ ಪ್ರಕಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ  ನೇತೃತ್ವದ ಪೀಠವು ತನಿಖೆ ಪೂರ್ಣಗೊಳಿಸಲು ಸಿವಿಸಿಗೆ 2 ವಾರಗಳ ಗಡುವು ನೀಡಿತು.


ಪೀಠವು ಪ್ರಕರಣದ ಮುಂದಿನ ವಿಚಾರಣೆಗೆ ನವೆಂಬರ್ 12ನೇ ದಿನಾಂಕವನ್ನು ನಿಗದಿ ಪಡಿಸಿತು.
ಅಲೋಕ್ ವರ್ಮಾ ಬಳಿಕ ಇದೀಗ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಕೂಡ ತಮ್ಮನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.

ಸಿಬಿಐ ನಿರ್ದೇಶಕ ಲೋಕ್ ವರ್ಮಾ ಅವರು ಈಗಾಗಲೇ ಸರ್ಕಾರ  ತನ್ನ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ತನ್ನನ್ನು ಬಲವಂತದ ರಜೆಯ ಮೇಲೆ ಕಳುಹಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳ ತನಿಖೆಯ ಹೊಣೆ ಹೊತ್ತಿರುವ ಸಿಬಿಐ ಅನೇಕ ಅಧಿಕಾರಿಗಳನ್ನು  ಸರ್ಕಾರ  ವರ್ಗಾಯಿಸಿರುವುದು ಸಿಬಿಐ ಕಾರ್ಯಕ್ಷಮತೆಗೆ ಸವಾಲಾಗಿ ಪರಿಣಮಿಸಿದೆ ಎಂದು ವರ್ಮಾ ಆರೋಪಿಸಿದ್ದರು.

ವಿವರಗಳಿಗೆ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ