Showing posts with label ಸುಪ್ರೀಂಕೋರ್ಟ್. Show all posts
Showing posts with label ಸುಪ್ರೀಂಕೋರ್ಟ್. Show all posts

Wednesday, July 27, 2022

PARYAYA: ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್‌/ ಪಿಎಂಎಲ್‌ ಎ)  ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ 2022 ಜುಲೈ 27 ಬುಧವಾರ ಎತ್ತಿ ಹಿಡಿಯಿತು.

ಕಾಂಗ್ರೆಸ್ ಸಂಸತ್‌ ಸದಸ್ಯ ಕಾರ್ತಿ ಚಿದಂಬರಂ ಅವರು ಸೇರಿದಂತೆ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ಹಲವಾರು ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿತು.

ಸಂವಿಧಾನವು 20 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಿರುವ ಸ್ವಾತಂತ್ರ್ಯದ ಹಕ್ಕು ಮತ್ತು ಸ್ವಯಂ-ಅಪರಾಧದ ವಿರುದ್ಧದ ಹಕ್ಕುಗಳನ್ನು ಖಾತರಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆಯು ಉಲ್ಲಂಘಿಸಿತ್ತದೆ ಎಂದು ಕಾರ್ತಿ ಚಿದಂಬರಂ ಮತ್ತು ಇತರರ ಅರ್ಜಿಗಳು ಆಪಾದಿಸಿದ್ದವು.

ಯಾವುದೇ ಅಪರಾಧವನ್ನು ಹಣ ವರ್ಗಾವಣೆ ಅಪರಾಧವನ್ನಾಗಿ ಪರಿವರ್ತಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೀಡಲಾದ ಅನಿಯಂತ್ರಿತ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದರು.


PARYAYA: ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು:   ಹಣ ವರ್ಗಾವಣೆ ತಡೆ ಕಾನೂ ನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ...

Tuesday, December 14, 2021

PARYAYA: ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳನ್ನು ಸಂಪರ್ಕಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯಡಿ ರಸ್ತೆಗಳ ವಿಸ್ತರಣೆಗೆ 2021 ಡಿಸೆಂಬರ್ 14ರ ಮಂಗಳವಾರ ಸುಪ್ರೀಂ ಕೋರ್ಟ್  ಒಪ್ಪಿಗೆ ನೀಡಿತು.

ನ್ಯಾಯಾಲಯವು ಸೇನೆಯ ಅವಶ್ಯಕತೆಗಳ ಬಗ್ಗೆ ಮರುಊಹೆ ಮಾಡಲು ಎಂದು  ನ್ಯಾಯಮೂರ್ತಿ ಗಳಾದ ಡಿವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹೇಳಿತು.

ಯೋಜನಾ ಪ್ರದೇಶದಲ್ಲಿ ವಿಶಾಲವಾದ ರಸ್ತೆಗಳು  ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬ ಕೇಂದ್ರದ ವಾದಗಳನ್ನು ಪೀಠವು ಒಪ್ಪಿತು..

'ಚಾರ್ ಧಾಮ್' ಹೆದ್ದಾರಿ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಸ್ಥಳಗಳನ್ನು 900-ಕಿಮೀ ಸರ್ವಋತು ರಸ್ತೆಗಳ ಮೂಲಕ ಸಂಪರ್ಕಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಂತಗಳಲ್ಲಿ ಮುಖಾಮುಖಿಯಾಗುತ್ತಿರುವ ಭಾರತ-ಚೀನಾ ಗಡಿಯಲ್ಲಿ ಸಶಸ್ತ್ರ ಪಡೆಗಳ ಕ್ಷಿಪ್ರ ನಿಯೋಜನೆ/ಚಲನೆಗೆ ಇದು ಅನುಕೂಲವಾಗಲಿದೆ ಎಂದು ಕೇಂದ್ರವು ಪ್ರತಿಪಾದಿಸಿದೆ.

 ಅಂದಾಜು 12,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿಯಲ್ಲಿ ಉತ್ತರಖಂಡದಲ್ಲಿ ನಿರ್ಮಿಸಲಾಗುವ 1384 ಕೋಟಿ ರೂಪಾಯಿಗಳ ಸುಸಜ್ಜಿತ ಸುರಂಗ ಮಾರ್ಗವೂ ಬರುತ್ತದೆ.  ಈ ಸುರಂಗವು ಧರಸು ಮತ್ತು ಯಮುನೋತ್ರಿ ನಡುವಣ ಪಯಣವನ್ನು ಸುಮಾರು 20 ಕಿಮೀಗಳಷ್ಟು ಇಳಿಸುತ್ತದೆ ಮತ್ತು ಪಯಣದ ಅವಧಿಯನ್ನು ಸುಮಾರು 1 ಗಂಟೆಯಷ್ಟು ಕಡಿತಗೊಳಿಸುತ್ತದೆ.

ಗಡಿ ಭದ್ರತಾ ಕಾಳಜಿಗಳನ್ನು ಪೂರೈಸುವ ಅಗತ್ಯವಿದೆ ಮತ್ತು ಇತ್ತೀಚಿನ ದಿನಗಳಲ್ಲಿ "ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲುಗಳು” ಎದುರಾಗುತ್ತಿದ್ದು, ಸೈನ್ಯ ಮತ್ತು ಸಲಕರಣೆಗಳ ಚಲನೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್  ಹೇಳಿತು.

ರಕ್ಷಣಾ ಸಚಿವಾಲಯವು ವಿಶೇಷ ಸಂಸ್ಥೆಯಾಗಿದ್ದು, ಅದರ ಕಾರ್ಯಾಚರಣೆಯ ಅಗತ್ಯತೆಗಳನ್ನು ನಿರ್ಧರಿಸಬಹುದು ಎಂದು ಪೀಠ ಹೇಳಿತು.

ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಬೇಕು ಮತ್ತು ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿರುವ ಹೆದ್ದಾರಿಗಳನ್ನು ಇತರ ಗುಡ್ಡಗಾಡು ಪ್ರದೇಶಗಳಲ್ಲಿರುವಂತೆ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು.

ಆದಾಗ್ಯೂ, ನ್ಯಾಯಾಲಯವು ಅರ್ಜಿದಾರರ ಪರಿಸರ ಕಾಳಜಿಯನ್ನು ಒಪ್ಪಿಕೊಂಡಿತು ಮತ್ತು ಉನ್ನತ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸುತ್ತಿದೆ ಎಂದು ತಿಳಿಸಿತು..

ಒಟ್ಟು  12,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 27 ಡಿಸೆಂಬರ್ 2016 ರಂದು ಡೆಹ್ರಾಡೂನ್ ಪರೇಡ್ ಮೈದಾನದಲ್ಲಿ ನೆರವೇರಿಸಿದ್ದರು.

ಸುದ್ದಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್  ಮಾಡಿರಿ:


PARYAYA: ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು:   ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳನ್ನು ಸಂಪರ್ಕಿಸುವ ಕೇಂದ್ರ ಸರ್ಕಾರದ ಮಹತ...

Friday, October 18, 2019

ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ: ಸಿಜೆಐ ಗೊಗೋಯಿ ಶಿಫಾರಸು

ಭಾರತದ  ಮುಂದಿನ ಮುಖ್ಯ ನ್ಯಾಯಮೂರ್ತಿ  ಶರದ್  ಅರವಿಂದ ಬೋಬ್ಡೆ: ಸಿಜೆಐ ಗೊಗೋಯಿ ಶಿಫಾರಸು
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಶರದ್ ಅರವಿಂದಬೋಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

2018 ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ
ಅಧಿಕಾರ ವಹಿಸಿಕೊಂಡಿದ್ದ ನ್ಯಾಯಮೂರ್ತಿ  ರಂಜನ್ ಗೊಗೋಯಿ ನವೆಂಬರ್17ರಂದು ನಿವೃತ್ತಿ ಹೊಂದಲಿದ್ದಾರೆ. ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 18ರ ಶುಕ್ರವಾರ ತಿಳಿಸಿವೆ.

ಸುಪ್ರೀಂಕೋರ್ಟ್ ನಿಂದ ನಿವೃತ್ತಿಯಾಗಲಿರುವ  ಪ್ರತಿಯೊಬ್ಬ ಸಿಜೆಐ ಕೂಡಾ ಇದೇ  ಸಂಪ್ರದಾಯವನ್ನು  ಅನುಸರಿಸುತ್ತಾರೆ. ತಮ್ಮ ನಂತರ ಮುಂದಿನ ಸಿಜೆಐ ಯಾರಾಗಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ರೂಢಿ.
ಸಿಜೆಐ ರಂಜನ್ ಗೋಗೊಯಿ ನಂತರ ಸುಪ್ರೀಂಕೋರ್ಟ್ ನಲ್ಲಿ ಎರಡನೇ ಹಿರಿಯ  ನ್ಯಾಯಮೂರ್ತಿ ಆಗಿದ್ದಾರೆ ನ್ಯಾಯಮೂರ್ತಿ ಎಸ್..ಬೋಬ್ಡೆ.  ಅವರ ಹಿರಿತನದ ಆಧಾರದ ಮೇಲೆ ಮುಂದಿನ ನೂತನ ಸಿಜೆಐ ಆಗಿ ನೇಮಕ ಮಾಡುವಂತೆ ಗೋಗೋಯಿ ಅವರು ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ.

ಹಾಲಿ ಸಿಜೆಐ ಶಿಫಾರಸು ಮಾಡಿದವರನ್ನೇ ಸಾಮಾನ್ಯವಾಗಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪರಿಗಣಿಸುವ ಸಾಧ್ಯತೆ  ಇದೆ.
ಬೋಬ್ಡೆ ಯಾರು?
1956 ಏಪ್ರಿಲ್ 24ರಂದು ಎಸ್ ಬೋಬ್ಡೆ ಅವರು ಮಹಾರಾಷ್ಟ್ರದ  ನಾಗ್ ಪುರದಲ್ಲಿ ಜನಿಸಿದ್ದರು. ನಾಗಪುರ ವಿಶ್ವಿವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಬಳಿಕ 2000ನೇ ಇಸವಿಯಲ್ಲಿ ಬಾಂಬೆ ಹೈ ಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ  ನೇಮಕಗೊಂಡಿದ್ದರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿಯಾಗಿ  ನೇಮಕಗೊಂಡಿದ್ದರು.

ನವೆಂಬರ್ 17ರಂದು ನಿವೃತ್ತಿ ಹೊಂದುವ ಮುನ್ನ ಸಿಜೆಐ ರಂಜನ್ ಗೊಗೋಯಿ ಅವರು ರಾಮಜನ್ಮಭೂಮಿ- ಬಾಬರಿ ಮಸೀದಿ  ವಿವಾದ ಪ್ರಕರಣದಲ್ಲಿ ತೀರ್ಪು ನೀಡಲಿದ್ದಾರೆ. ನಿನ್ನೆ ಪ್ರಕರಣದ  ವಾದ ಪ್ರತಿವಾದ ವಿಚಾರಣೆಗಳು ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.

Monday, April 15, 2019

‘ಚೌಕಿದಾರ ಚೋರ್ ಹೈ’: ರಾಹುಲ್ ಗಾಂಧಿಗೆ ಸುಪ್ರೀಂ ನೋಟಿಸ್

ಚೌಕಿದಾರ ಚೋರ್ ಹೈ’: ರಾಹುಲ್ ಗಾಂಧಿಗೆ ಸುಪ್ರೀಂ ನೋಟಿಸ್
ನವದೆಹಲಿ:  ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ್  2019 ಏಪ್ರಿಲ್ 15 ಸೋಮವಾರ ನೋಟಿಸ್ ಜಾರಿ ಮಾಡಿದೆ.

ಏಪ್ರಿಲ್ 22ಕ್ಕೆ ಮುನ್ನ ನೋಟಿಸಿಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ರಾಹುಲ್ ಗಾಂಧಿ ಅವರಿಗೆ ನಿರ್ದೇಶನ ನೀಡಿದೆ. ‘ರಾಹುಲ್ ಗಾಂಧಿಯವರು ನಾವು ಹೇಳಿದ್ದೇವೆ ಎಂಬುದಾಗಿ ಏನನ್ನು ಹೇಳಿದ್ದಾರೋ ಅದನ್ನು ನಾವು ಎಂದೂ ಹೇಳಿಲ್ಲ,’ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವುರಾಹುಲ್ ವಿರುದ್ಧ ಸಲ್ಲಿಸಲಾದ ಕ್ರಿಮಿನಲ್ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಕಾರಣ ವಿವರಿಸುವಂತೆ ಕೇಳಿ ನೋಟಿಸ್ ಜಾರಿ ಮಾಡಿತು.

ಬಿಜೆಪಿ ಸಂಸತ್ ಸದಸ್ಯೆ ಮೀನಾಕ್ಷಿ ಲೇಖಿ ಅವರು ಸುಪ್ರೀಂಕೋರ್ಟಿನಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿ, ಸುಪ್ರೀಂಕೋರ್ಟ್ ಇತ್ತೀಚೆಗೆ ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ತಮ್ಮ ಮಾತುಗಳನ್ನು ಸುಪ್ರೀಂಕೋರ್ಟ್ ಹೇಳಿರುವುದಾಗಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಅರ್ಜಿಯನ್ನು ಆಲಿಸಿತು. ನವದೆಹಲಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲೇಖಿ ಅವರು ತಮ್ಮ ವೈಯಕ್ತಿಕ ಹೇಳಿಕೆಯನ್ನು ರಾಹುಲ್ ಗಾಂಧಿಯವರು ಸುಪ್ರೀಂಕೋರ್ಟ್ ಹೇಳಿದೆಯೆಂದು ಹೇಳುವ ಮೂಲಕ ಪೂರ್ವಾಗ್ರಹ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆಪಾದಿಸಿದ್ದರು.

ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ಚೌಕಿದಾರ್ ಚೋರ್ ಹೈಎಂಬುದಾಗಿ ಹೇಳಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿರುವುದಾಗಿ ವರದಿಯಾಗಿದೆ ಎಂದು ಲೇಖಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಪೀಠಕ್ಕೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಳವು ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷರು ಏಪ್ರಿಲ್ 10ರಂದು ಪ್ರತಿಪಾದಿಸಿದ್ದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:

Friday, March 8, 2019

ಅಯೋಧ್ಯಾ: ‘ಸಂಧಾನ’ ತಂಡ ರಚಿಸಿದ ಸುಪ್ರೀಂಕೋರ್ಟ್

ಅಯೋಧ್ಯಾ: ‘ಸಂಧಾನತಂಡ ರಚಿಸಿದ ಸುಪ್ರೀಂಕೋರ್ಟ್
ನವದೆಹಲಿ:  ಆರು ದಶಕಗಳಿಂದ ನೆನೆಗುದಿಯಲ್ಲಿರುವ  ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ  ಇತ್ಯರ್ಥಕ್ಕಾಗಿ ಸಂಧಾನಮಾರ್ಗದಲ್ಲಿ ಸಾಗಲು ಸುಪ್ರೀಂಕೋರ್ಟ್ 2019 ಮಾರ್ಚ್ 8 ಶುಕ್ರವಾರ ಸುಪ್ರೀಂಕೋರ್ಟ್ ಆದೇಶ ನೀಡಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ನಿಟ್ಟಿನಲ್ಲಿ ತನ್ನ ಆದೇಶವನ್ನು ನೀಡಿ ಸಂಧಾನಕ್ಕಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ ಅಧ್ಯಕ್ಷತೆಯಲ್ಲಿ ತ್ರಿಸದಸ್ಯಸಂಧಾನ ತಂಡವನ್ನು ರಚಿಸಿತು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಹಾಗೂ  ತರಬೇತಿ ಪಡೆದ ಸಂಧಾನಕಾರ ಪಂಚು ಅವರನ್ನು ಸಂಧಾನ ತಂಡದ ಇತರ ಸದಸ್ಯರಾಗಿ ಪೀಠವು ನೇಮಕ ಮಾಡಿತು.

ಫೈಜಾಬಾದಿನಲ್ಲಿ ಒಂದು ವಾರದ ಒಳಗಾಗಿ ಸಂಧಾನ ಆರಂಭವಾಗಬೇಕು ಮತ್ತು ಉತ್ತರ ಪ್ರದೇಶ ರಾಜ್ಯವು ಸಂಧಾನಕ್ಕೆ ಬೇಕಾದ ಅಗತ್ಯಗಳನ್ನು ಒದಗಿಸಬೇಕು. ಸಂಧಾನ ತಂಡವು 8 ವಾರಗಳಲ್ಲಿ ತನ್ನ ವರದಿಯನ್ನು ಕೊಡಬೇಕು ಎಂದು ಪೀಠವು ಆಜ್ಞಾಪಿಸಿತು.

ಸಂಧಾನ ಪ್ರಕ್ರಿಯೆ ವಿಚಾರದಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುವಂತೆ ಪೀಠವು ಉಭಯ ಪಕ್ಷಗಳಿಗೂ ತಾಕೀತು ಮಾಡಿತು. ಸಂಧಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುವುದು. ಸಂಧಾನ ಪ್ರಕ್ರಿಯೆಯ ಯಾವುದೇ ಅಂಶವೂ  ಮುದ್ರಣ ಮಾಧ್ಯಮದಲ್ಲಾಗಲೀ, ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾಧ್ಯಮದಲ್ಲಾಗಲೀ ವರದಿಯಾಗಬಾರದು ಎಂದೂ ಪೀಠ ನಿರ್ದೇಶಿಸಿತು.

ತ್ರಿಸದಸ್ಯ ಸಂಧಾನ ತಂಡಕ್ಕೆ ಇನ್ನಷ್ಟು ಸಂಧಾನಕಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮತ್ತು ಶಾಸಕಾಂಗ ನೆರವು ಕೋರುವ ಸ್ವಾತಂತ್ರ್ಯ ಇದೆ ಎಂದು ಸುಪ್ರೀಂಕೋರ್ಟ್ ಆದೇಶ ತಿಳಿಸಿತು.

ಸಂಧಾನ ಪ್ರಕ್ರಿಯೆಯಲ್ಲಿ ಏನಾದರೂ ಅಡೆತಡೆಗಳು ಎದುರಾದರೆ, ತಂಡವು ಸುಪ್ರೀಂಕೋರ್ಟ್ ರಿಜಿಸ್ಟ್ರಿಯನ್ನು ಸಂಪರ್ಕಿಸಬಹುದು ಎಂದೂ ಪಂಚ ಸದಸ್ಯ ಪೀಠ ತಿಳಿಸಿತು.

ನ್ಯಾಯಮೂರ್ತಿಗಳಾದ ಎಸ್.. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್.. ನಜೀರ್ ಅವರು ಪಂಚ ಸದಸ್ಯ ಪೀಠದ ಇತರ  ಸದಸ್ಯರಾಗಿದ್ದರು.

ಸಂಧಾನ ಪ್ರಕ್ರಿಯೆಗೆ ಅವಕಾಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಪೀಠವು ಮಾರ್ಚ್ 6 ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: