ಮಹಿಳಾ ಕುಸ್ತಿಯಲ್ಲಿ
ಭಾರತಕ್ಕೆ ಮೊದಲ ಚಿನ್ನ:
ಇತಿಹಾಸ ಸೃಷ್ಟಿಸಿದ ವಿನೇಶ್ ಪೊಗತ್
ಇತಿಹಾಸ ಸೃಷ್ಟಿಸಿದ ವಿನೇಶ್ ಪೊಗತ್
ಜಕಾರ್ತ:
ಜಕಾರ್ತದಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ೫೦ ಕಿ.ಗ್ರಾ.
ವರ್ಗದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿನೇಶ್ ಪೊಗತ್ ಅವರು 20 ಆಗಸ್ಟ್ 2018ರ ಸೋಮವಾರ ಇತಿಹಾಸ ನಿರ್ಮಿಸಿದರು.
ವಿನೇಶ್
ಪೊಗತ್ ಅವರು ಕಠಿಣ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜಪಾನಿನ ಯೂಕಿ ಇರೀ ಅವರನ್ನು ಫೈನಲ್ ನಲ್ಲಿ ೬-೨ ಅಂತರದಲ್ಲಿ
ಪರಾಭವಗೊಳಿಸಿದರು.
೨೩ರ
ಹರೆಯದ ಹರಿಯಾಣದ ಫೈರ್ ಬ್ರ್ಯಾಡ್ ಕುಸ್ತಿಪಟು ವಿನೇಶ್ ಪೊಗತ್ ಅವರ ಪಾಲಿಗೆ ಇದು ಬಹುದೊಡ್ಡ ಸಾಧನೆ. ಪೊಗತ್ ಅವರು ಹರಿಯಾಣದ ಖ್ಯಾತ ಡಂಗಲ್ ಖ್ಯಾತಿಯ ಪೊಗತ್ ಕುಟುಂಬಕ್ಕೆ ಸೇರಿದವರು.
ಎರಡು
ವರ್ಷಗಳ ಹಿಂದೆ ಒಲಿಂಪಿಕ್ಸ್ ನಲ್ಲಿ ಸೋತಾದ ಅತ್ತಿದ್ದ ವಿನೇಶ್ ಪೊಗತ್ ಅವರು ಈದಿನ ಮೊದಲು ಚೀನಾದ ಯನಾನ್
ಸುನ್ ಅವರನ್ನು ಸೋಲಿಸುವ ಮೂಲಕ ರಿಯೋದಲ್ಲಿ ತಾವು ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡರು.
No comments:
Post a Comment