ನಾನು ಮೆಚ್ಚಿದ ವಾಟ್ಸಪ್

Sunday, August 19, 2018

ಇಂದಿನ ಇತಿಹಾಸ History Today ಆಗಸ್ಟ್ 19

ಇಂದಿನ ಇತಿಹಾಸ History Today ಆಗಸ್ಟ್ 19

2018: ನವದೆಹಲಿ: ಮುಂದಿನ ವರ್ಷದಿಂದ ಯಾವುದೇ ಎಟಿಎಂಗಳಿಗೆ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆ ಬಳಿಕ ನಗದು ಹಣ ಮರುಭರ್ತಿ ಮಾಡಲಾಗುವುದಿಲ್ಲ. ಹಾಗೆಯೇ ನೋಟು ಸಾಗಿಸುವಾಗ  ಇಬ್ಬರು ಸಶಸ್ತ್ರ ಗಾರ್ಡುಗಳು ಇರತಕ್ಕದ್ದು ಎಂದು ಗೃಹ ಸಚಿವಾಲಯದ ಹೊಸ ನಿರ್ದೇಶನ ತಿಳಿಸಿತು. ಮಾವೋವಾದಿ ನಕ್ಸಲೀಯರ ಹಾವಳಿ ಇರುವ ಕಡೆಗಳಲ್ಲಿ ಎಟಿಎಂಗಳಿಗೆ ಹಣ ಮರುಭರ್ತಿ ಗಡುವು ಸಂಜೆ 4 ಗಂಟೆಯಾಗಿದ್ದು, ನಗದು ಹಣದ ಜೊತೆ ವ್ಯವಹರಿಸುವ ಖಾಸಗಿ ಸಂಸ್ಥೆಗಳು ಬ್ಯಾಂಕುಗಳಿಂದ ಮಧ್ಯಾಹ್ನಕ್ಕೆ ಮೊದಲೇ  ನಗದು ಹಣ ಸಂಗ್ರಹಿಸಿಕೊಳ್ಳಬೇಕು ಎಂದು ನಿರ್ದೇಶನ ಹೇಳಿತು.

2018: ಹರಿದ್ವಾರ: ಹರೀಶ್ವರದ ಹರಿ ಕಿ ಪೈರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಅವರ ಕುಟುಂಬ ಸದಸ್ಯರು ಮತ್ತು ಬಿಜೆಪಿ ನಾಯಕರು ಗಂಗಾನದಿಯಲ್ಲಿ ವಿಸರ್ಜಿಸಿದರು. ತಮ್ಮ ನಾಯಕನಿಗೆ ಅಂತಿಮ ವಿದಾಯ ಹೇಳಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸಂದರ್ಭದಲ್ಲಿ ಇಲ್ಲಿ ನೆರೆದಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಇತರ ಕುಟುಂಬ ಸದಸ್ಯರು ಸಂದರ್ಭದಲ್ಲಿ ಹಾಜರಿದ್ದರು. ವೇದಘೋಷದ ಮಧ್ಯೆ ಭಸ್ಮ ಕರಂಡದಲ್ಲಿದ್ದ ವಾಜಪೇಯಿ ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಲೀನಗೊಳಿಸಲಾಯಿತು. ಚಿತಾಭಸ್ಮ ವಿಸರ್ಜನೆ ನಡೆಯುವ ಸ್ಥಳದಲ್ಲಿ ನದಿಗೆ ಇಳಿಯಲು ಇರುವ ಮೆಟ್ಟಿಲುಗಳ ಕೆಳಗಿನ ಬ್ರಹ್ಮಕುಂಡದಲ್ಲಿ ಚಿತಾಭಸ್ಮ ವಿಸರ್ಜನೆ ಸಲುವಾಗಿವಿಶೇಷ ವೇದಿಕೆಯನ್ನು ನಿರ್ಮಿಸಲಾಗಿತ್ತು. ಅದಕ್ಕೆ ಮುನ್ನ ವಾಜಪೇಯಿ ಅವರ ಚಿತಾಭಸ್ಮವಿದ್ದ ಭಸ್ಮಕರಂಡವನ್ನು ಪುಷ್ಪಾಲಂಕೃತ ವಾಹನದಲ್ಲಿ ಸುಮಾರು ಕಿಮಿ ದೂರದಿಂದ ಮೆರವಣಿಗೆಯಲ್ಲಿ ತರಲಾಯಿತು. ಭಾರಿ ಸಂಖ್ಯೆಯ ಅಭಿಮಾನಿಗಳ ಸಾಗರವೇ ವಾಹನವನ್ನು ಅನುಸರಿಸಿತು. ಭಲ್ಲಾ ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆ ಹರಿ ಕಿ ಪೈರಿಗೆ ಸಾಗಿತು. ಅಲ್ಲಿ ಪಕ್ಷ ನಾಯಕರು ಮತ್ತು ಕುಟುಂಬ ಸದಸ್ಯರು ಕಾದಿದ್ದರು. ಕಿಕ್ಕಿರಿದ ಜನಸಾಗರದ ಮಧ್ಯೆ ಅಟಲ್ ಚಿತಾಭಸ್ಮ ಯಾತ್ರೆಯನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದರು. ಮನೆಗಳ ಬಾಲ್ಕನಿಗಳು ಮತ್ತು ಛಾವಣಿಗಳಲ್ಲೂ ಜನ ನಿಂತು ಅಟಲ್ ಚಿತಾಭಸ್ಮ ಯಾತ್ರೆಯನ್ನು  ವೀಕ್ಷಿಸಿದರು. ವಾಜಪೇಯಿ ಅವರ ಅಳಿಯ ರಂಜನ್ ಭಟ್ಟಾಚಾರ್ಯ ಅವರು ಚಿತಾಭಸ್ಮವಿದ್ದ ಕರಂಡವನ್ನು ಮುಂದಕ್ಕೆ ನುಗ್ಗಿ ಬರುತ್ತಿದ್ದ ಜನ ಸಮೂಹದ ಮಧ್ಯೆ  ಬ್ರಹಕುಂಡಕ್ಕೆ (ಹರಿ ಕಿ ಪೈರಿ) ಒಯ್ದರು. ಅಲ್ಲಿ ತೀರ್ಥಪುರೋಹಿತರಿಂದ ವಿಸ್ತೃತ ಧಾರ್ಮಿಕ ವಿಧಿ ವಿಧಾನಗಳ ಬಳಿಕಅಟಲ್ ಜಿ ಅಮರ್ ರಹೇ ಘೋಷಣೆಗಳ ಮಧ್ಯೆ ಚಿತಾಭಸ್ಮವನ್ನು ಗಂಗೆಯಲ್ಲಿ ವಿಲೀನಗೊಳಿಸಲಾಯಿತು. ಸುಮಾರು ೨೦ ನಿಮಿಷಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನ ಪ್ರಕ್ರಿಯೆಯನ್ನು ಅಭಿಮಾನಿಗಳ ಸಮೂಹ ನದಿಯ ಉಭಯ ದಂಡೆಗಳಲ್ಲೂ ಕುಳಿತು ಶ್ರದ್ಧಾಪೂರ್ವಕವಾಗಿ ವೀಕ್ಷಿಸಿತು.

2018: ತಿರುವನಂತಪುರಂ: ಸುಮಾರು ಒಂದು ವಾರದ ಜಡಿ ಮಳೆ, ಪ್ರವಾಹ, ಭೂಕುಸಿತಗಳಿಂದ ನಲುಗಿದ ಕೇರಳದ ಪರಿಸ್ಥಿತಿ ಚೇತರಿಸಲಾರಂಭಿಸಿತು. ರಾಜ್ಯದಲ್ಲಿ ಘೋಷಿಸಲಾಗಿದ್ದ ಕಟ್ಟೆಚ್ಚರವನ್ನು (ರೆಡ್ ಅಲರ್ಟ್) ಈದಿನ ತೆರವುಗೊಳಿಸಲಾಯಿತು. ಆದರೆ ಪಟ್ಟಣಂತಿಟ್ಟ, ಎರ್ನಾಕುಲಂ ಮತ್ತು ಅಲಪ್ಪುಳದಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರೆಯಿತು. ಇನ್ನೂ ಸುರಿಯುತ್ತಿರುವ ಮಳೆಯ ಮಧ್ಯೆ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆದವು. ಪಟ್ಟಣಂತಿಟ್ಟ ಮತ್ತು ತ್ರಿಶ್ಯೂರು ಜಿಲ್ಲೆಗಳಲ್ಲಿ ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆ ಮುಂದುವರೆಯಿತು. ನದಿ ನೀರಿನ ಪ್ರಬಲ ಪ್ರವಾಹ ಮತ್ತು ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ರಕ್ಷಣಾ ತಂಡಗಳು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುವ ಕಾರ್ಯಾಚರಣೆ ನಡೆಸಿದರು. ಇದೇ ವೇಳೆಗೆ ಕುಟ್ಟನ್ನಾಡು ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಸಹಸ್ರಾರು ಮನೆಗಳು ಮುಳುಗಿ, ಅಲ್ಲಿ ಇರುವ ನಿವಾಸಿಗಳನ್ನು ಸಾಮೂಹಿಕವಾಗಿ ತೆರವುಗೊಳಿಸಬೇಕಾಗಿ ಬಂದಿತು. ಸಶಸ್ತ್ರ ಪಡೆಗಳು ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ಚಂಗನ್ನೂರು ಮತ್ತು ಚಲಕುಡಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದ ಬಗ್ಗೆ ಗಮನ ಹರಿಸಿದವು.  ಜಲಾವೃತಗೊಂಡಿರುವ ನೂರಾರು ಮಂದಿಯಿಂದ ಭಯಭೀತ ಕರೆಗಳು ಬರುತ್ತಿದ್ದು, ಸೇನೆಯು ದೊಡ್ಡ ದೋಣಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಿತು. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗೆ ಸೇರಿದ ಸುಮಾರು ೨೨ ಹೆಲಿಕಾಪ್ಟರುಗಳು ಮತ್ತು ೧೧೯ ದೋಣಿಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ಮಗ್ನವಾದವು. ವಾಡಿಕೆಗಿಂತ ಶೇ.೪೨ ಹೆಚ್ಚು ಮಳೆ: ಕೇರಳದಲ್ಲಿ ೨೦೧೮ರ ನೈಋತ್ಯ ಮುಂಗಾರು ಅವಧಿಯಲ್ಲಿ (ಜೂನ್ ೧ರಿಂದ ಆಗಸ್ಟ್ ೧೯, ೨೦೧೮) ಸುರಿದ ನೈಋತ್ಯ ಮುಂಗಾರು ಮಳೆ ಅತ್ಯಂತ ಹೆಚ್ಚಿನದಾಗಿದ್ದು, ಕೇರಳದಲ್ಲ ೨೩೪೬. ಮಿ.ಮೀ. ಮಳೆ ಸುರಿದಿದೆ. ಇದು ಮಾಮೂಲಿಯಾಗಿ ಸುರಿಯುವ ೧೬೪೯. ಮಿ.ಮಿ. ಮಳೆಗಿಂತ ಶೇಕಡಾ ೪೨ರಷ್ಟು ಹೆಚ್ಚು. ಇಡುಕ್ಕಿ  ಜಿಲ್ಲೆಯಲ್ಲಿ (ವಾಡಿಕೆಗಿಂತ ಶೇಕಡಾ ೯೨ ಹೆಚ್ಚು) ಮತ್ತು ಪಾಲಕ್ಕಾಡಿನಲ್ಲಿ (ವಾಡಿಕೆಗಿಂತ ಶೇಕಡಾ ೭೨ರಷ್ಟು ಹೆಚ್ಚು) ಅತಿ ಹೆಚ್ಚಿನ ಮಳೆ ದಾಖಲಾಗಿದೆ.
ಕೇರಳದಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ೧೯ರವರೆಗೆ ಕ್ರಮವಾಗಿ ಶೇಕಡಾ ೧೫, ಶೇಕಡಾ ೧೮ ಮತ್ತು ಶೇಕಡಾ ೧೬೪ ರಷ್ಟು ಅಂದರೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಜೂನ್ ೧೪ರ ಸಮಯದಲ್ಲಿ ಮತ್ತು ಜುಲೈ ೨೦ರ ಸಮಯದಲ್ಲಿ ವಾಡಿಕೆಗಿಂತ ಹೆಚ್ಚಿನ ನಿರಂತರ ಮಳೆ ಸುರಿದಿದೆ. ನೆರವಿನ ಮಹಾಪೂರ: ಕಣ್ಣೂರು ಜಿಲ್ಲೆಯ ಜನರಿಂದ ಪ್ರವಾಹ ಸಂತ್ರಸ್ಥರಿಗೆ ನೆರವಿನ ಮಹಾಪೂರ ಹರಿದು ಬಂದಿದ್ದು ಕಣ್ಣೂರು ಜಿಲ್ಲಾ ಕಲೆಕ್ಟರ್ ಕಚೇರಿ ಆಹಾರ, ಬಟ್ಟೆ, ಬ್ಲಾಂಕೆಟ್ ಮತ್ತು ಬಕೆಟ್ ಇತ್ಯಾದಿ ಅಗತ್ಯ ವಸ್ತುಗಳನ್ನು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸುವ ತರಾತುರಿಯಲ್ಲಿ ಮಗ್ನವಾಗಿದೆ. ಕೇರಳ ವಿದ್ಯುತ್ ಮಂಡಳಿ ಕಾರ್ಯಾಚರಣೆ: ಕೇರಳ ರಾಜ್ಯ ವಿದ್ಯುತ್ ಮಂಡಳಿಯು ಚೇತರಿಕೆ ಕಾಣಲು ಆರಂಭಿಸಿರುವ ರಾಜ್ಯದಲ್ಲಿ ವಿದ್ಯುತ್ ಸರಬರಾಜಿಗೆ ಅನುಕೂಲವಾಗುವಂತೆ ತನ್ನ ವಿತರಣಾ ಮೂಲಸವತ್ತುಗಳನ್ನು ಮತ್ತೆ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುತ್ತಿದೆಪರಿಹಾರ ಶಿಬಿರಗಳು, ಆಸ್ಪತ್ರೆಗಳು, ಕೇರಳ ಜಲಮಂಡಳಿಯ ವಾಟರ್ ಟ್ರೀಟ್ ಮೆಂಟ್ ಘಟಕಗಳಿಗೆ ವಿದ್ಯುತ್ ಸರಬರಾಜಿಗೆ ಆದ್ಯತೆ ನೀಡಲಾಯಿತು. ೧೧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸರಬರಾಜು ಬೃಹತ್ ಸಮಸ್ಯೆಯಾಗಿದ್ದು ಸಮರೋಪಾದಿಯಲ್ಲಿ ಟ್ರೀಟ್ ಮೆಂಟ್ ಘಟಕಗಳನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಹ ಸಂತ್ರಸ್ಥ ಜಿಲ್ಲೆಗಳಲ್ಲಿ ವಿದ್ಯುತ್ ಬಿಲ್ ಪಾವತಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪಾವತಿ ಮಾಡದ ಕಾರಣಕ್ಕಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಲಾಗುವುದಿಲ್ಲ ಎಂದು ಮೂಲಗಳು ಹೇಳಿವೆತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಪರಿಹಾರ ಶಿಬಿರಗಳಲ್ಲಿ ಇರುವವರಿಗೆ ಅಗತ್ಯ ಔಷಧ ಒದಗಿಸುವ ಕಾರ್ ನಿರ್ವಹಿಸುತ್ತಿದೆ. ಅಗತ್ಯ ಔಷಧಗಳಿಗಾಗಿ ಪರಿಹಾರ ಶಿಬಿರಗಳ ಸಮನ್ವಯಕಾರರಿಗೆ ತಮ್ಮನ್ನು ಸಂಪರ್ಕಸುವಂತೆ ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಕೋರಿದರು. ಪರವೂರು ಮತ್ತು ಅಲುವದಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ಔಷಧದ ಅಗತ್ಯ ಹೆಚ್ಚಿದೆ ಎಂದು ಡಾ. ಬಿ. ಜಯಕೃಷ್ಣನ್ ಹೇಳಿದರು. ತ್ರಿಶ್ಯೂರು ಜಿಲ್ಲೆಯ ನೈಋತ್ಯ ಭಾಗಗಳು ಶುಕ್ರವಾರ ರಾತ್ರಿ ಆರಂಭವಾದ ದಿಢೀರ್ ಪ್ರವಾಹದಿಂದ ನಲುಗಿದ್ದು, ಜಿಲ್ಲೆಯ ಇತರ ಭಾಗಗಳು ಚೇತರಿಸಲು ಆರಂಭಿಸಿದವು. ಕ್ರಿವನ್ನೂರು ನದಿಯು ತನ್ನ ದಿಕ್ಕನ್ನು ಅರಾಟ್ಟುಪುಳ ದೇವಾಲಯ ಮತ್ತು ಎಟ್ಟುಮುನ ಪ್ರದೇಶದಲ್ಲಿ ಬದಲಿಸಿ ಹರಿದ ಪರಿಣಾಮವಾಗಿ ಕ್ಯಾನೋಲಿ ಕಾಲುವೆ ಮತ್ತು  ಹರ್ಬಟ್ ಕಾಲುವೆಯ ದಂಡೆಯಲ್ಲಿರುವ ಕೋಲೆ ಫೀಲ್ಡ್ ೪೨ ಗ್ರಾಮಗಳು ಜಲಾವೃತಗೊಂಡಿವೆ. ಹದಿಹರೆಯದ ಹುಡುಗನ ಆತ್ಮಹತ್ಯೆ: ಕೋಯಿಕ್ಕೋಡ್ ಜಿಲ್ಲೆಯ ಕರಂತೂರು ಸಮೀಪದ ತನ್ನ ಮನೆಯಲ್ಲಿ ೧೯ರ ಹರೆಯದ ಕೈಲಾಸ್ ರಮೇಶ್ ಎಂಬ ಯುವಕನೊಬ್ಬ ತನ್ನ ಶಾಲಾ ಸರ್ಟಿಫಿಕೇಟ್ ಗಳು ನೆರೆಯಲ್ಲಿ ಕೊಚ್ಚಿಹೋದದ್ದು ಕಂಡು ಭ್ರಮನಿರಸನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಶವ ಮನೆಯ ಕೋಯಿಕ್ಕೋಡು ಜಿಲ್ಲೆಯ ಕರಂತೂರು ಸಮೀಪ ಪತ್ತೆಯಾಯಿತು. ಕೈಲಾಸ್ ರಮೇಶ್ ಸಮೀಪದ ಪರಿಹಾರ ಶಿಬಿರದಿಂದ ತನ್ನ ಮನೆಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನ ಪಾಲಕರು ಮತ್ತು ಸಹೋದರರು ಘಟನೆ ಘಟಿಸಿದಾಗ ಪರಿಹಾರ ಶಿಬಿರದಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದರು. ಕುಟ್ಟನ್ನಾಡ್ ಮೇಲ್ಭಾಗದಲ್ಲಿ ಜಲಾವೃತಗೊಂಡಿರುವ ವ್ಯಕ್ತಿಗಳನ್ನು ಈದಿನ ಸಂಜೆಯೊಳಗೆ ರಕ್ಷಿಸಲು ಸಾಧ್ಯವಾಗಬಹುದು ಎಂದು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ. ನೂಹ್ ತಿಳಿಸಿದರು. ಜಲಾವೃತಗೊಂಡಿರುವವರ ರಕ್ಷಣೆಗಾಗಿ ನೌಕಾಪಡೆಯ ೧೫ ದೋಣಿಗಳನ್ನು ಸೇವೆಯಲ್ಲಿ ಬಳಸಿಕೊಳ್ಳಲಾಯಿತು.

2018: ಪಣಜಿ: ಪರಿಸರ ರಕ್ಷಣೆಗಾಗಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಪ್ರಸ್ತುತ ಕೇರಳ ರಾಜ್ಯವು ಭಾರೀ ಮಳೆ- ಪ್ರವಾಹದಿಂದ ಎದುರಿಸುತ್ತಿರುವ ಪರಿಸ್ಥಿತಿಯನ್ನು ಗೋವಾ ರಾಜ್ಯವೂ ಎದುರಿಸಬೇಕಾಗಿ ಬರುತ್ತದೆ ಎಂದು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಎಚ್ಚರಿಸಿದರು. ಪರಿಸರ ರಕ್ಷಣೆಗೆ ಮುಂಜಾಗರೂಕತಾ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೇರಳ ಗಂಡಾಂತರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಗಾಡ್ಗೀಳ್ ಅವರು ೨೦೧೧ರಲ್ಲೇ ಭವಿಷ್ಯ ನುಡಿದಿದ್ದರು. ಬಗ್ಗೆ ವ್ಯಾಪಕ ಚರ್ಚೆಯೂ ನಡೆದಿತ್ತುಇತರ ಹಲವು ರಾಜ್ಯಗಳಂತೆ ಗೋವಾ ಕೂಡಾ ಮಿತಿಯಿಲ್ಲದ ಲಾಭದಾಸೆಗಾಗಿ ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಕೆಲವು ವರ್ಷಗಳ ಹಿಂದೆ ಪಶ್ಚಿಮ ಘಟ್ಟಗಳ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದ್ದ ಸಮಿತಿಯ ಮುಖ್ಯಸ್ಥರಾಗಿದ್ದ ಗಾಡ್ಗೀಳ್ ಹೇಳಿದರು. ಖಂಡಿತವಾಗಿ ಪಶ್ಚಿಮಘಟ್ಟಗಳ ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳು ಹೊರಬರಲು ಆರಂಭವಾಗಿದೆ. ಕೇರಳದಂತೆ ಗೋವಾ ರಾಜ್ಯವು ಪಶ್ಚಿಮ ಘಟ್ಟವನ್ನು ಹೊಂದಿಲ್ಲ ಎಂಬುದು ನಿಜ, ಆದರೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳದೇ ಇದ್ದಲ್ಲಿ ಅದು ಕೂಡಾ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದು ನನಗೆ ಖಚಿತವಿದೆ ಎಂದು ದಕ್ಷಿಣದ ರಾಜ್ಯ ಕೇರಳ ಎದುರಿಸುತ್ತಿರುವ ಅತಿ ಭೀಕರ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸುತ್ತಾ ಗಾಡ್ಗೀಳ್ ನುಡಿದರು. ‘ಯಾವುದೇ ಪರಿಸರ ಸಂರಕ್ಷಣಾ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದಕ್ಕೆ (ಸಾಮಾನ್ಯ) ಕಾರಣ ಅಪರಿಮಿತ ಲಾಭದ ಅತಿಯಾಸೆ ಎಂಬುದು ಸ್ಪಷ್ಟ. ’ನೀವು ಅದನ್ನು ಗೋವಾದಲ್ಲಿಯೂ ನೋಡಬಹುದು. ಕೇಂದ್ರ ಸರ್ಕಾರವು ರಚಿಸಿದ್ದ ನ್ಯಾಯಮೂರ್ತಿ ಎಂಬಿ ಶಾ ಆಯೋಗವು ಸುಮಾರು ೩೫,೦೦೦ ಕೋಟಿ ರೂಪಾಯಿಗಳ ಅಕ್ರಮ ಲಾಭ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿದೆ ಎಂದು ಅಂದಾಜು ಮಾಡಿದೆ ಎಂದು ಗಾಡ್ಗೀಳ್ ಹೇಳಿದರು. ‘ಕಲ್ಲು ಕ್ವಾರಿ (ಕಲ್ಲು ಕಡಿಯುವ) ವ್ಯವಹಾರದಲ್ಲಿಯೂ ಅಪಾರ ಲಾಭವಿದೆ. ಇದಕ್ಕೆ ಬೇಕಾದ ಹೂಡಿಕೆಯೂ ಕಡಿಮೆ ಎಂದು ಪಶ್ಚಿಮ ಘಟ್ಟದ ಬೆಟ್ಟಗಳ ಬಗ್ಗೆ ಮಾತನಾಡುತ್ತಾ ಅವರು ನುಡಿದರು. ‘ಅಪರಿಮಿತ ಲಾಭದ ಅತಿಯಾಸೆಯು ಯಾವುದೇ ಕಡಿವಾಣವಿಲ್ಲದೆ ಮುಂದುವರೆಯುತ್ತಿದೆ. ಇದು ಸಮಾಜದಲ್ಲಿನ ಆರ್ಥಿಕ ಅಸಮಾನತೆಯನ್ನೂ ಹೆಚ್ಚಿಸಿದೆ. ಆದ್ದರಿಂದ ಈಗ ಮಾರ್ಗಗಳ ಮೂಲಕ ಹಣ ಮಾಡಿಕೊಳ್ಳುತ್ತಿರುವವರು ಇಂತಹ ಅಕ್ರಮ ವರ್ತನೆಗಳಿಗೆ ಸರ್ಕಾರದ ಅನುಮತಿ ದಕ್ಕಿಸಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದಾರೆ ಎಂದು ಗಾಡ್ಗೀಳ್ ಹೇಳಿದರು. ಪರಿಸರ ನಿಯಮಾವಳಿಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ಅನಾದರ ಹೊಂದಿವೆ. ರಾಷ್ಟ್ರೀಯ ಹಸಿರು ಪೀಠವು ಸಮರ್ಪಕವಾಗಿ ಕಾರ್ ನಿರ್ವಹಿಸದಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ವಾಸ್ತವವಾಗಿ ಹಿಂದಕ್ಕೆ ಬಾಗುತ್ತಿದೆ ಎಂದು ಅವರು ನುಡಿದರು. ಕಬ್ಬಿಣದ ಅದಿರು ಮತ್ತು ಗಣಿಗಾರಿಕೆ ಕಂಪೆನಿಗಳು ೨೦೧೧ರಲ್ಲಿ ಸಲ್ಲಿಸಿದ  ತಮ್ಮ ಪರಿಸರ ಪರಿಣಾಮದ ಅಂದಾಜು (ಇಐಎ) ವರದಿಗಳಲ್ಲಿ ನೀಡಲಾದ ಗೋವಾದ ಪರಿಸರಕ್ಕೆ ಸಂಬಂಧಿಸಿದ ಮಾಹಿತಿ ಬಗ್ಗೆ ಗಾಡ್ಗೀಳ್ ಅವರು ವಿಸ್ತೃತ ಅಧ್ಯಯನ ನಡೆಸಿದ್ದರು. ಗಣಿಗಾರಿಕಾ ಕಂಪೆನಿಗಳು ತಮ್ಮ ಇಐಎ ವರದಿಗಳಲ್ಲಿ ತಪ್ಪು ಮಾಹಿತಿ ನೀಡಿವೆ ಎಂದು ಗಾಡ್ಗೀಳ್ ಅವರು ಆಗ ಹೇಳಿದ್ದರು. ‘ಗೋವಾದಲ್ಲಿ ಅವರು ನನಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗುವ ಪರಿಣಾಮ ಬಗ್ಗೆ ಪರಿಶೀಲಿಸಲು ಹೇಳಿದ್ದರು. ಪ್ರತಿಯೊಂದು ಇಐಎ ವರದಿ ಕೂಡಾ ಗಣಿಗಾರಿಕೆಯಿಂದ ಆಗುವ ಹೈಡ್ರೋಲಾಜಿಕಲ್ ಪರಿಣಾಮದ ಬಗೆಗಿನ ವಾಸ್ತವಾಂಶವನ್ನು ಮುಚ್ಚಿಹಾಕಿದ್ದವು ಎಂದು ೭೩ರ ಹರೆಯದ ಪರಿಸರ ತಜ್ಞ  ನುಡಿದರುಗೋವಾದ  ಬಯಲು ಪ್ರದೇಶದಲ್ಲಿ (’ಸದಸ್) ಹುಟ್ಟಿ ಹರಿಯುವ ಸಾಕಷ್ಟು ತೊರೆಗಳಿವೆ. ಆದರೆ ಕಂಪೆನಿಗಳು ತಮ್ಮ ಇಐಎ ವರದಿಗಳಲ್ಲಿ ತೊರೆಗಳ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಒಂದು ರೀತಿಯ ತಪ್ಪು ಹೇಳಿಕೆಗಳನ್ನು ವರದಿಗಳಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ರಚಿಸಿದ್ದ ಪಶ್ಚಿಮ ಘಟ್ಟ ಪರಿಸರ ತಜ್ಞ ಸಮಿತಿಯ (ಡಬ್ಲ್ಯೂಜಿ ಇಇಪಿ) ನೇತ್ವತ್ವವನ್ನು ಗಾಡ್ಗೀಳ್ ಅವರು ವಹಿಸಿದ್ದರು. ಡಬ್ಲ್ಯೂಜಿ ಇಇಪಿಯು ತನ್ನ ೨೦೧೧ರ ವರದಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಬರುವ ಕೇರಳದ ಹಲವಾರು ಪ್ರದೇಶಗಳನ್ನು ಪರಿಸರ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶಗಳು ಎಂದು ವರ್ಗೀಕರಿಸಿತ್ತು.ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸುವುದು ಮತ್ತು ಗಣಿಗಾರಿಕೆ ಹಾಗೂ ಕ್ವಾರಿಯಿಂಗ್  ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ತಜ್ಞರ ಸಮಿತಿಯು ಶಿಫಾರಸು ಮಾಡಿತ್ತು.

2018: ಬೆಗುಸರಾಯ್ (ಬಿಹಾರ): ಬಿಹಾರದ ಮಾಜಿ ಸಚಿವೆ ಮಂಜು ವರ್ಮ ಅವರ ಮಾವನ ಮನೆಯಲ್ಲಿ ಸಿಬಿಐ ದಾಳಿ ಕಾಲದಲ್ಲಿ ೫೦ ಕಾಡತೂಸುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಿಬಿಐ ಮಂಜು ವರ್ಮ ಮತ್ತು ಅವರ ಪತಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಯಿತು. ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪಾಟ್ನಾದಲ್ಲಿನ ವರ್ಮ ಅವರ ನಿವಾಸ ಮತ್ತು ಬೆಗುಸರಾಯ್ ಮಾವನ ಮನೆ ಸೇರಿದಂತೆ ಬಿಹಾರದ ಜಿಲ್ಲೆಗಳ ೧೨ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು ಎಂದು ಪೊಲೀಸರು ತಿಳಿಸಿದರು. ವರ್ಮ ಮತ್ತು ಅವರ ಪತಿ ಚಂದ್ರಶೇಖರ್ ವಿರುದ್ಧ, ಅರ್ಜುನ್ ತೊಲ ಗ್ರಾಮದ ವರ್ಮಾ ಅವರ ಮಾವನ ಮನೆಯಲ್ಲಿ ೫೦ ಸಜೀವ ಕಾಡತೂಸುಗಳು ಪತ್ತೆಯಾದುದನ್ನು ಅನುಸರಿಸಿ ಪ್ರಕರಣ ದಾಖಲಿಸಲಾಯಿತು ಎಂದು ಚೆರಿಯಾ ಬರಿಯಾರ್ ಪುರ ಪೊಲೀಸ್ ಠಾಣೆಯ ಎಸ್ ಎಚ್ ರಣಜಿತ್ ಕುಮಾರ್ ರಜಕ್ ಹೇಳಿದರು. ಸಿಬಿಐ ಅಧಿಕಾರಿಯೊಬ್ಬರು ದಂಪತಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದ ನುಡಿದ ರಜಕ್, ಅಧಿಕಾರಿಯ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದರುವರ್ಮ ಅವರ ಪತಿ ಮುಜಾಫ್ಫರಪುರ ಲೈಂಗಿಕ ಹಗರಣದ ಮುಖ್ಯ ಆರೋಪಿ ಬೃಜೇಶ್ ಥಾಕೂರ್ ಜೊತೆ ವರ್ಷ ಜನವರಿ ಮತ್ತು ಜೂನ್ ನಡುವಣ ಅವಧಿಯಲ್ಲಿ ೧೭ ಬಾರಿ ಮಾತುಕತೆ ನಡೆಸಿದ್ದು ಬಹಿರಂಗಕ್ಕೆ ಬಂದ ಹಿನ್ನೆಲೆಯಲ್ಲಿ ಮಂಜು ವರ್ಮ ಅವರು ಕಳೆದ ವಾರ ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಂಬೈ ಮೂಲದ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್) ಸಂಸ್ಥೆಯು ಸಲ್ಲಿಸಿದ ಸೋಶಿಯಲ್ಲ ಆಡಿಟ್ ವರದಿಯನ್ನು ಅನುಸರಿಸಿ ಸಮಾಜ ಕಲ್ಯಾಣ ಇಲಾಖೆಯು ಎಫ್ಐಆರ್ ದಾಖಲಿಸಿದಾಗ ಹಗರಣ ಬೆಳಕಿಗೆ ಬಂದಿತ್ತು. ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮದ ಬಾಲಕಿಯರ ಮೇಲೆ ನಿರಂತರ ಲೈಂಗಿಕ ಹಲ್ಲೆ ನಡೆಯುತ್ತಿದ್ದ ಬಗ್ಗೆ ಟಿಐಎಸ್ ಎಸ್ ವರದಿ ಪ್ರಸ್ತಾಪಿಸಿತ್ತು.

2016: ರಿಯೊ ಡಿ ಜನೈರೊ, ನವದೆಹಲಿ:  ಬ್ಯಾಡ್ಮಿಂಟನ್ ಫೈನಲ್ನಲ್ಲಿ ನಿರಾಸೆ ಕಂಡರೂ ಐತಿಹಾಸಿಕ ಸಾಧನೆಗೈದ ಭಾರತದ ಪಿ.ವಿ. ಸಿಂಧು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ ಸಂಭ್ರಮಿಸಿದರು. ಸಿಂಧು ಅಲ್ಲಿ ಗೆಲುವು ಪಡೆಯುತ್ತಿದ್ದಂತೆ ಇತ್ತ ಬ್ಯಾಡ್ಮಿಂಟನ್ಅಸೋಸಿಯೇಷನ್ಆಫ್ಇಂಡಿಯಾ(ಬಿಎಐ) ಹಾಗೂ ಮಧ್ಯಪ್ರದೇಶ ಸರ್ಕಾರ ಸಿಂಧುಗೆ ತಲಾ ₹ 50 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದವು.  ಸಿಂದು ಅವರು ಈ ಸಾಧನೆಯೊಂದಿಗೆ ಭಾರತ ಸ್ಪರ್ಧಿಯೊಬ್ಬರು ಬ್ಯಾಡ್ಮಿಂಟನ್ನಲ್ಲಿ ಫೈನಲ್ಪ್ರವೇಶಿಸಿದ ಹಿರಿಮೆಗೂ ಪಾತ್ರರಾದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಸ್ಪೇನ್ ಕ್ಯಾರೊಲಿನ್ಮರಿನ್ಪೈಪೋಟಿ ಒಡ್ಡಿದರೂ ಛಲ ಬಿಡದೆ ಚುರುಕಿನ ಪ್ರತಿಸ್ಪರ್ಧೆ ಒಡ್ಡಿದ ಸಿಂಧು ನಿರಾಸೆ ಕಂಡರಾದರೂ ಐತಿಹಾಸಿಕ ಕ್ಷಣಕ್ಕೆ ಕಾರಣರಾದರು. ಈದಿನ ನಡೆದ ಫೈನಲ್ನಲ್ಲಿ ಮರಿನ್‌ 19–21, 21–12, 21–15ರಲ್ಲಿ ಸಿಂಧು ಎದುರು ಜಯ ಪಡೆದರುಇದರೊಂದಿಗೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು. 2012 ಲಂಡನ್ಒಲಿಂಪಿಕ್ಸ್ನಲ್ಲಿ  ಸೈನಾ ನೆಹ್ವಾಲ್ಅವರು ಸೆಮಿಫೈನಲ್ಹಂತದ ವರೆಗೆ ಬಂದಿದ್ದರು. ನಂತರ ಕಂಚು ಜಯಿಸಿದ್ದು  ಒಲಿಂಪಿಕ್ಸ್ ದಾಖಲೆಯಾಗಿತ್ತುಸಿಂಧು ಅವರು ಹಿಂದಿನ ದಿನ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21–19, 21–10ರಲ್ಲಿ ಜಪಾನ್ ನೊಜುಮಿ ಒಕುಹರಾಎದುರು ಜಯ ಪಡೆದು ಫೈನಲ್ತಲುಪಿದ್ದರು. ಅನನ್ಯ ಸಾಧನೆ ಸಿಂಧು, ವಿಶ್ವ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಮತ್ತು ಎರಡು ಸಲ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.  ಬದ್ಧತೆಗೆ ಒಲಿದ ಯಶಸ್ಸು: ಎಂಟು ವರ್ಷದವಳಾಗಿದ್ದಾಗಿನಿಂದಲೇ ಸಿಂಧು ಬ್ಯಾಡ್ಮಿಂಟನ್ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದರು. ಇವರ ತಂದೆ ರಮಣ್ಮತ್ತು ತಾಯಿ ಪಿ. ವಿಜಯಾ ಅವರು ರಾಷ್ಟ್ರೀಯ ಮಟ್ಟದ ವಾಲಿಬಾಲ್ಆಟಗಾರರಾಗಿದ್ದರು. ಪ್ರತಿನಿತ್ಯ ಬೆಳಗಿನ ಜಾವ ನಾಲ್ಕು ಗಂಟೆಗೆ ಅಭ್ಯಾಸ ಮಾಡಲು ಹೈದರಾಬಾದ್ನಲ್ಲಿರುವ ಗೋಪಿಚಂದ್ ಅಕಾಡೆಮಿಗೆ ತೆರಳುತ್ತಿದ್ದರು. ಸಂಜೆಯೂ ಅಭ್ಯಾಸದಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಆಟದ ಬಗ್ಗೆ ಹೊಂದಿದ್ದ ಬದ್ಧತೆಯೇ ಸಿಂಧು ಅವರನ್ನು ಎತ್ತರಕ್ಕೆ ತಂದು ನಿಲ್ಲಿಸಿತು. 21 ವರ್ಷದ ಸಿಂಧು ಇದೇ ವರ್ಷ ಗುವಾಹಟಿಯಲ್ಲಿ ನಡೆದ ಸೌತ್‌ ಏಷ್ಯನ್ಕ್ರೀಡಾಕೂಟದ ಸಿಂಗಲ್ಸ್ ಮತ್ತು ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಬಹುಮಾನ: ಐತಿಹಾಸಿಕ ಸಾಧನೆ ತೋರಿದ ಪಿ.ವಿ. ಸಿಂಧುಗೆ ₹ 50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬ್ಯಾಡ್ಮಿಂಟನ್ಅಸೋಸಿಯೇಷನ್ಆಫ್ಇಂಡಿಯಾ(ಬಿಎಐ) ಅಧ್ಯಕ್ಷ ಡಾ.ಅಖಿಲೇಶ್ದಾಸ್ಗುಪ್ತಾ ಪ್ರಕಟಿಸಿದರು. ಜತೆಗೆ, ಸಿಂಧು ಅವರ ಕೋಚ್‌ (ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್‌) ದ್ರೋಣಾಚಾರ್ಯ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರಿಗೆ ₹ 10 ಬಹುಮಾನ ಪ್ರಕಟಿಸಿತು. ₹ 50 ಲಕ್ಷ: ಸಾಧನೆ ತೋರಿದ ಸಿಂಧುಗೆ ₹ 50 ಲಕ್ಷ ಬಹುಮಾನ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ಚೌಹಾಣ್ಘೋಷಿಸಿದರು.
2016: ರಿಯೋ ಡಿ ಜನೈರೋಜಮೈಕಾ ಕಿಂಗ್ ಉಸೇನ್ ಬೋಲ್ಟ್ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್ 200 ಮೀಟರ್ ಓಟದಲ್ಲಿ ಸ್ವರ್ಣ ಸಂಪಾದಿಸುವುದರೊಂದಿಗೆ ಹೊಸ ಇತಿಹಾಸ ನಿರ್ಮಿಸಿದರು.  ನಿರಂತರವಾಗಿ 3 ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆಲ್ಲುವ ಮೂಲಕ ಸಾಧನೆ ಮಾಡಿರುವ ಉಸೇನ್ ಬೋಲ್ಟ್ ರಿಯೋದಲ್ಲಿ ನಡೆದ ಸ್ಪರ್ಧೆಯಲ್ಲಿ 19.78 ಸೆಕೆಂಡ್ಗಳ ಅವಧಿಯಲ್ಲಿ ಗುರಿ ತಲುಪಿ ವೃತ್ತಿ ಜೀವನದ 8ನೇ ಒಲಿಂಪಿಕ್ಸ್ ಸ್ವರ್ಣ ಸಂಪಾದಿಸಿಕೊಂಡರು. ಆರಂಭದಿಂದಲೇ ಉಸೇನ್ ಬೋಲ್ಟ್ಗೆ ತೀವ್ರ ಪೈಪೋಟಿ ನೀಡಿದ ಕೆನಡದ ಆಂಡ್ರೆ ಡೆ ಗ್ರಾಸ್ಸೆ 20.02 ಸೆಕೆಂಡ್ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಫ್ರಾನ್ಸ್ ಕ್ರಿಸ್ಟೋಫೆ ಲೆಮೈಟ್ರೆ 20.12 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡರು. ತೀವ್ರ ಪೈಪೋಟಿ ನೀಡುತ್ತಾರೆ ಎಂದುಕೊಳ್ಳಲಾಗಿದ್ದ ಅಮೆರಿಕದ ಲೆಶಾವ್ನ್ ಮೆರಿಟ್ 20.19 ಸೆಕೆಂಡ್ಗಳಲ್ಲಿ ಗುರಿ ತಲುಪಿ 6ನೇ ಸ್ಥಾನಕ್ಕೆ ತ್ರಪ್ತಿಪಟ್ಟರು.

2016: ಶ್ರೀನಗರಉಗ್ರಗಾಮಿಗಳು ಕುಪ್ವಾರದ ಕರ್ನಾಹ್ ಪ್ರದೇಶದ ನಚಿನ್ ಎಂಬ ಗ್ರಾಮದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಯೋಧರು ಗಾಯಗೊಂಡರು. ಗಾಯಾಳು ಯೋಧರನ್ನು ಕೂಡಲೇ ಶ್ರೀನಗರದಲ್ಲಿರುವ ಸೈನ್ಯಾ ನೆಲೆಯ ಆಸ್ಪತ್ರೆಗೆ ಸೇರಿಸಲಾಯಿತು. ಗುಂಡಿನ ಘರ್ಷಣೆ ಮುಂದುವರೆಯಿತು.

2016: ಜೈಸಲ್ಮೇರ್ (ರಾಜಸ್ಥಾನ): ನಂದಲಾಲ್ ಮಹಾರಾಜ್ ಎಂಬ ಪಾಕಿಸ್ತಾನಿ ಗೂಡಚಾರನನ್ನು ರಾಜಸ್ಥಾನದ ಜೈಸಲ್ಮೇರ್ ಹೋಟೆಲ್ ಒಂದರಲ್ಲಿ ಬಂಧಿಸಲಾಗಿದ್ದು, ಅತನಿಂದ ಗಡಿ ಪ್ರದೇಶದ ಫೊಟೋಗಳು, ನಕ್ಷೆಗಳನ್ನು ವಶ ಪಡಿಸಿಕೊಳ್ಳಲಾಯಿತು. ಜೈಸಲ್ಮೇರ್ನಲ್ಲಿ ಆತನನ್ನು ವಿಚಾರಣೆಗೆ ಗುರಿ ಪಡಿಸಲಾಯಿತು. ಆಗಸ್ಟ್ 17ರಂದು ಬಂಧಿತನಾದ ಈತ ಭಾರಿ ಗೂಡಚರ್ಯೆ ಜಾಲದ ಸಂಚಿನಲ್ಲಿ ಷಾಮೀಲಾಗಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ಹೇಳಿದರು. ಭಾರತಕ್ಕೆ ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳನ್ನು ಕಳ್ಳಸಾಗಣೆ ಮಾಡಲು ಈತ ನೆರವಾಗುತ್ತಿದ್ದಿರಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿದವು. ಗೂಡಚಾರ ಕ್ರಮಬದ್ಧವಾದ ಪಾಸ್ ಪೋರ್ಟ್ ಮತ್ತು ವೀಸಾ ಇಟ್ಟುಕೊಂಡೇ ಭಾರತಕ್ಕೆ ಬಂದು ಮುನಾಬೊದಲ್ಲಿನ ಪಾಕ್ ಗಡಿಯ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಬಂದಿರಬಹುದು ಎಂದು ನಂಬಲಾಯಿತು.

2016: ನವದೆಹಲಿ: ಉತ್ತರಾಖಂಡ, ಬಿಹಾರ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮವಾಗಿ ಹಂದಿಗಳು, ನೀಲಿ ಜಿಂಕೆಗಳು ಮತ್ತು ಕೋತಿಗಳನ್ನು ವಧಿಸಲು ಹೊರಡಿಸಲಾದ ಸರ್ಕಾರಿ ಪ್ರಕಟಣೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳನ್ನು ದೆಹಲಿ ಹೈಕೋರ್ಟ್ ವಜಾ ಮಾಡಿತು. ಪ್ರಾಣಿ ಪ್ರಭೇದಗಳು ಮಾನವರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಲು ಆರಂಭಿಸಿವೆ, ಆದ್ದರಿಂದ ಸೀಮಿತ ಅವಧಿಗೆ ಅವುಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿತ್ತು. ನಿರ್ದಿಷ್ಟ ಪ್ರಾಣಿಗಳನ್ನು ಕೊಲ್ಲುವುದಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಕಳೆದ ತಿಂಗಳು ನಿರಾಕರಿಸಿತ್ತು. ಕಾಡಿನಿಂದ ಹೊರಗೆ ಮನುಷ್ಯರಿಗೆ ಕಾಟ ಕೊಡುವ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುವುದು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನೀಡಿದ ಹೇಳಿಕೆಯನ್ನು ಸುಪ್ರೀಂಕೋರ್ಟ್ ದಾಖಲಿಸಿತ್ತು. ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಬರುವ ಪಶು ಕಲ್ಯಾಣ ಇಲಾಖೆಯು ಅರ್ಜಿದಾರರನ್ನು ಬೆಂಬಲಿಸಿತ್ತು.

2016: ನವದೆಹಲಿ: ಒಂದು ಸಲ ಪಡೆಯುವ ರಕ್ತದ ಮಾದರಿಯಿಂದ 50 ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವಂತಹ ಹೊಸ ಉಪಕರಣವೊಂದನ್ನು ಭಾರತದಲ್ಲಿ ಕಂಡು ಹಿಡಿಯಲಾಗಿದೆ. ರಕ್ತದಲ್ಲಿ ಸಕ್ಕರೆ ಮಟ್ಟದಿಂದ ಹಿಡಿದು ಕೊಬ್ಬುವರೆಗಿನ (ಕೊಲೆಸ್ಟರಾಲ್) ಅಂದಾಜು 50 ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬಲ್ಲಂತಹ ಯಂತ್ರ ಎರಡೇ ನಿಮಿಷಗಳಲ್ಲಿ ಫಲಿತಾಂಶವನ್ನೂ ನೀಡುತ್ತದೆ. ಬಯೋ ಮೆಡಿಕಲ್ ಎಂಜಿನಿಯರ್ ಕಣವ್ ಕಹೋಲ್ ಅವರು ಅಭಿವೃದ್ಧಿ ಪಡಿಸಿರುವಸ್ವಾಸ್ಥ್ಯ ಸ್ಲೇಟ್ಹೆಸರಿನ ಪುಟ್ಟ ಉಪಕರಣವನ್ನು ಬಳಸಿ ಮಧು ಮೇಹ (ಡಯಾಬಿಟೀಸ್), ಡೆಂಗೆ, ಹೆಪಟೈಟಿಸ್, ಟೈಫಾಯಿಡ್ ಮತ್ತಿತರ ಹಲವಾರು ರೋಗಗಳನ್ನು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚ ಬಹುದಾಗಿದ್ದು, ತುರ್ತು ಚಿಕಿತ್ಸೆ ಒದಗಿಸಲು ಅನುಕೂಲವಾಗಲಿದೆ. ಒಂದೇ ಬಾರಿ ಪಡೆದ ರಕ್ತದ ಮಾದರಿಯನ್ನು ಬಳಸಿ ಸುಮಾರು 50 ಪರೀಕ್ಷೆಗಳನ್ನು ನಡೆಸಬಹುದಾದ ಉಪಕರಣ ರಕ್ತ ಪರೀಕ್ಷೆಗಾಗಿ ಡಯಾಗ್ನಾಸ್ಟಿಕ್ ಕೇಂದ್ರಗಳ ಮುಂದೆ ರೋಗಿಗಳು ಗಂಟೆ ಗಟ್ಟಲೆ ಕಾಯುವ ಪ್ರಮೇಯವನ್ನು ನಿವಾರಿಸುತ್ತದೆ.
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರವು ಆರೋಗ್ಯ ರಕ್ಷಣೆಗೆ ಒದಗಿಸಿರುವ ಯೋಜನೆಯಡಿಯಲ್ಲಿ ಸುಮಾರು 100 ಕ್ಲಿನಿಕ್ಗಳಲ್ಲಿ ಇದೀಗ ಉಪಕರಣವನ್ನು ಬಳಸಲಾಗುತ್ತಿದ್ದು, ವ್ಯಾಪಕ ಪ್ರಮಾಣದಲ್ಲಿ ರಾಷ್ಟ್ರ ಮಾತ್ರವಷ್ಟೇ ಅಲ್ಲ ವಿಶ್ವಾದ್ಯಂತ ಬಳಸಲು ಸಾಧ್ಯವಿದೆ ಎಂದು ಕಣವ್ ಕಹೋಲ್ ಹೇಳುತ್ತಾರೆ. ಉಪಕರಣ ಬಳಸಿ ನಡೆಸುವ ರಕ್ತ ಪರೀಕ್ಷೆಯ ಫಲಿತಾಂಶವನ್ನು ಕಂಪ್ಯೂಟರ್ಗೆ ವರ್ಗಾಯಿಸಿ, ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಮೂಲಕ ರೋಗಿಗಳ ಭಾವಚಿತ್ರ ಸೆರೆ ಹಿಡಿದು ಅದರ ಜೊತೆಗೆ ದಾಖಲಿಸುವ ಮೂಲಕ ಎಲ್ಲಿ ಬೇಕಿದ್ದರೂ ಅದನ್ನು ಬಳಸಲು ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಅವರು ನುಡಿದರು.  ಉಪಕರಣದ ವೆಚ್ಚ 1000 ಡಾಲರ್ (66,950 ರೂಪಾಯಿ) ಆಗುತ್ತದೆ ಎಂದು ಅವರು ಹೇಳಿದರು.
2016: ರಿಯೋ ಡಿ ಜನೈರೋಉದ್ದೀಪನ ಮದ್ದು ಸೇವನೆ ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ರಿಯೋ ಒಲಿಂಪಿಕ್ ಕ್ರೀಡಾಕೂಟದಿಂದ ಹೊರದಬ್ಬಲ್ಪಟ್ಟರು.. ಇಡೀ ಪ್ರಹಸನದ ಅಂತ್ಯ ಎನ್ನುವಂತೆ ವಿಚಾರಣೆ ನಡೆಸಿದ ಕ್ರೀಡಾ ವ್ಯಾಜ್ಯಗಳ ನ್ಯಾಯಾಲಯ (ಸಿಎಎಸ್) ನರಸಿಂಗ್ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಿ, ರಿಯೋ ಒಲಿಂಪಿಕ್ಸ್ನಿಂದ ವಜಾಗೊಳಿಸಿ ತೀರ್ಪು ನೀಡಿತು. ಇದರಿಂದಾಗಿ ರಿಯೋ ಒಲಿಂಪಿಕ್ಸ್ 75ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನರಸಿಂಗ್ ಕಳೆದುಕೊಂಡರು. ಭಾರತೀಯ ಉದ್ದೀಪನ ನಿಗ್ರಹ ದಳ (ನಾಡಾ) ಕ್ಲೀನ್ಚಿಟ್ ನೀಡಿದ್ದರ ನಡುವೆಯೂ ಮತ್ತೆ ವಿಚಾರಣೆಗೆ ಆಹ್ವಾನಿಸಿದ ವಿಶ್ವ ಉದ್ದೀಪನ ನಿಗ್ರಹ ದಳ (ವಾಡಾ) ಉದ್ದೀಪನ ಮದ್ದು ಸೇವನೆ ಮಾಡಿಲ್ಲ ಎನ್ನುವ ನರಸಿಂಗ್ ಯಾದವ್ ವಾದವನ್ನು ಒಪ್ಪಿಕೊಳ್ಳಲಿಲ್ಲ. ನಿಷೇಧಿತ ಮದ್ದು ಸೇವನೆ ಮಾಡಿಲ್ಲ ಎನ್ನುವ ಬಗ್ಗೆ ನರಸಿಂಗ್ ಅವರ ಬಳಿ ಯಾವುದೇ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ವಾಡಾ ಅವರ ಯಾವುದೇ ವಾದವನ್ನು ಒಪ್ಪಿಕೊಳ್ಳಲಿಲ್ಲ. ಹಿನ್ನೆಲೆಯಲ್ಲಿ ನರಸಿಂಗ್ ಅವರನ್ನು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸುವಂತೆ ಸಿಎಎಸ್ಗೆ ಶಿಫಾರಸ್ಸು ಮಾಡಿತು. ವಿಚಾರಣೆ ನಡೆಸಿದ ಸಿಎಎಸ್ ನಾಲ್ಕು ವರ್ಷ ನಿಷೇಧ ಹೇರುವುದರ ಜತೆಗೆ ರಿಯೋ ಒಲಿಂಪಿಕ್ಸ್ನಿಂದ ವಜಾಗೊಳಿಸಿತು. ಈ ತೀರ್ಪಿನಿಂದಾಗಿ ನರಸಿಂಗ್ ಮುಂದಿನ ನಾಲ್ಕು ವರ್ಷಗಳ ಕಾಲ ಒಲಿಂಪಿಕ್ ಸಂಸ್ಥೆ ಆಯೋಜಿಸುವ  ಯಾವುದೇ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. 27 ವರ್ಷದ ನರಸಿಂಗ್ಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕುಸ್ತಿಪಟು ಸುಶೀಲ್ ಕುಮಾರ್ ಮೊದಲು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಬಳಿಕ ಕೋರ್ಟ್ ನರಸಿಂಗ್ ಆಯ್ಕೆ ಸರಿಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಬಿಕ್ಕಳಿಸಿ ಅತ್ತ ನರಸಿಂಗ್:  ಸಿಎಎಸ್ ತೀರ್ಪಿನಿಂದ ತೀವ್ರ ಆಘಾತಕ್ಕೆ ಒಳಗಾದ ನರಸಿಂಗ್ ಮಾತನಾಡುವ ಸ್ಥಿತಿಯಲ್ಲಿಲ್ಲ. ತೀರ್ಪಿನಿಂದ ತೀವ್ರವಾದ ಆಘಾತಕ್ಕೆ ಒಳಗಾಗಿರುವ ಅವರು ಅಳು ನಿಲ್ಲಿಸುತ್ತಲೇ ಇಲ್ಲ. ಸದ್ಯಕ್ಕಂತೂ ಯಾರೊಂದಿಗೂ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಭಾರತೀಯ ಕುಸ್ತಿ ಸಂಸ್ಥೆಯ ಅಧಿಕಾರಿ ಬಿಬಿ ಶರಣ್ ಸಿಂಗ್ ಹೇಳಿದರು.

2016: ರಿಯೋ ಡಿ ಜನೈರೋ: ನಾನು ನಿರಪರಾಧಿ ಎನ್ನುವುದನ್ನು ಸಾಬೀತುಪಡಿಸುತ್ತೇನೆ ಎಂದು ಉದ್ದೀಪನ ಮದ್ದು ಸೇವನೆ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ನಿಷೇಧಕ್ಕೊಳಗಾದ ನರಸಿಂಗ್ ಯಾದವ್ ಹೇಳಿದರು. ಸ್ಪರ್ಧೆಗೆ ಕೆಲವೇ ಗಂಟೆಗಳು ಇರುವಾಗ ಸಿಎಎಸ್ನಿಂದ ನಿಷೇಧಕ್ಕೊಳಗಾದ ನರಸಿಂಗ್ ತೀವ್ರ ಒತ್ತಡದ ನಡುವೆ ಪ್ರತಿಕ್ರಿಯಿಸಿದರು. ದೇಶಕ್ಕಾಗಿ ಪದಕ ಗೆಲ್ಲುವ ನನ್ನ ಕನಸನ್ನು ದಾರುಣವಾಗಿ ಸಾಯಿಸಲಾಗಿದೆ. ಕಳೆದ ಎರಡು ತಿಂಗಳಿಂದ ಇಂಥ ಪ್ರಯತ್ನದ ವಿರುದ್ಧ ಹೋರಾಡಿ ಕಡೆಗೂ ನನ್ನನ್ನು ಇಂಥ ಕೆಟ್ಟ ಕ್ಷಣಕ್ಕೆ ಸಿಲುಕಿಸಲಾಗಿದೆ. ಸಿಎಎಸ್ ತೀರ್ಪು ಖಂಡಿತಾ ಒಪ್ಪಿಕೊಳ್ಳುವಂತಿಲ್ಲ. ಅಂತಹ ತಪ್ಪನ್ನೇನು ನಾನು ಮಾಡಿಲ್ಲ. ಸ್ಪರ್ಧಿಸುವ ಕನಸು ಹೊತ್ತು ಇಲ್ಲಿಯ ತನಕ ಬಂದು ಅಂತಿಮ 12 ಗಂಟೆಗಳು ಬಾಕಿ ಇರುವಾಗ ಪದಕ ಗೆದ್ದುಬರುವ ನನ್ನ ಕನಸನ್ನೇ ನುಚ್ಚುನೂರು ಮಾಡಲಾಗಿದೆ. ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲೇಬೇಕೆಂದು ಕನಸು ಕಂಡ ನನಗೆ ಹೀನಾಯವಾಗಿ ಅನ್ಯಾಯವೆಸಗಲಾಗಿದೆಎಂದು ನರಸಿಂಗ್ ಯಾದವ್ ನುಡಿದರು. ಅಲ್ಲದೆ, ನಾನು ನಿರಪರಾಧಿ ಎನ್ನುವುದನ್ನು ಸಾಬೀತು ಮಾಡಿ ತೋರಿಸುತ್ತೇನೆ. ಎಲ್ಲವನ್ನೂ ಮೆಟ್ಟಿನಿಂತು ಹೋರಾಡುತ್ತೇನೆ ಎಂದರು.  ಬೆಂಬಲಿಗರಿಂದಾದ ಸೋಲು, ಐಒಎ ಹೇಳಿಕೆ: ನರಸಿಂಗ್ಗೆ ನಿಷೇಧ ಹೇರಿದ ಬಳಿಕ ಮಾತನಾಡಿದ ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಕಾರ್ಯದರ್ಶಿ ರಾಜೀವ್ ಮೆಹ್ತಾ ನರಸಿಂಗ್ ತನ್ನ ಬೆಂಬಲಿಗರಿಂದಲೇ ಇಂದು ಸೋಲನುಭವಿಸಿದ್ದಾನೆ. ಬೇರಿನ್ನಾವ ಎದುರಾಳಿಯಿಂದಲ್ಲ ಎಂದರು. ಇದು ಕೇವಲ ಸೋಲಲ್ಲ. ನಿಷೇಧಕ್ಕೂ ಒಳಗಾಗಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆಯೂ ಹೌದು. ನಾಲ್ಕು ವರ್ಷ ಒಲಿಂಪಿಕ್ಸ್ ಸಂಸ್ಥೆಗಳು ಮಾನ್ಯಮಾಡುವ ಯಾವುದೇ ಸ್ಪರ್ಧೆಯಲ್ಲಿಯೂ ಪಾಲ್ಗೊಳ್ಳಲಾಗದ ಕಪ್ಪು ಚುಕ್ಕೆ ಎಂದರು.


2016: ನವದೆಹಲಿ: 12 ಹರೆಯದ ಬಾಲಕಿಯೊಬ್ಬಳು ನರ ರೂಪಿ ರಕ್ಕಸರ ಕೈಯಲ್ಲಿ ಸಿಲುಕಿ ಹತ್ತು ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರ, ಒತ್ತೆಸೆರೆ, ಮಾರಾಟ, ಸಿಗರೇಟಿನಿಂದ ಸುಡಿಸಿಕೊಳ್ಳುವ ಶಿಕ್ಷೆಗಳನ್ನು ಅನುಭವಿಸಿ, ಕಡೆಗೂ ಮಹಿಳೆಯೊಬ್ಬರ ನೆರವಿನಿಂದ ಪಾರಾದ ಘಟನೆ ಬೆಳಕಿಗೆ ಬಂದಿತು. ಈಗ 22 ಹರೆಯದ ಯುವತಿಯಾಗಿರುವ ಈಕೆ ಮತ್ತು ಈಕೆಯ ತಾಯಿ ನೀಡಿದ ದೂರಿನ ಮೇರೆಗೆ ನಾಲ್ಕು ರಾಜ್ಯಗಳಲ್ಲಿ ಅಪರಾಧಿಗಳಿಗಾಗಿ ಜಾಲಾಡಿದ ಪೊಲೀಸರು 400 ಮಂದಿಯನ್ನು ಪ್ರಶ್ನಿಸಿದ ಬಳಿಕ 61 ಮತ್ತು 71 ಹರೆಯದ ಇಬ್ಬರು ಹಿರಿಯ ವ್ಯಕ್ತಿಗಳು ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದರು. ಯುವತಿ ನೀಡಿದ ದೂರಿನ ಪ್ರಕಾರ ಈಶಾನ್ಯ ದೆಹಲಿಯಲ್ಲಿ 10 ವರ್ಷಗಳ ಹಿಂದೆ 2006 ಸೆಪ್ಟೆಂಬರ್ 9ರಂದು ತನ್ನ ಅಕ್ಕನ ಮನೆಗೆ ಹೋಗುವಾಗ ರಂಜು ಮತ್ತು ಶ್ಯಾಮ್ ಸುಂದರ್ ದಂಪತಿ ಈಕೆಯನ್ನು ಮನೆಯ ಸಮೀಪದಿಂದಲೇ ಸ್ಮೃತಿ ತಪ್ಪಿಸಿ ಅಂಬಾಲಕ್ಕೆ ಒಯ್ದು ಬಬ್ಲಿ ಎಂಬ ವ್ಯಕ್ತಿಗೆ 12,000 ರೂಪಾಯಿಗೆ ಮಾರಾಟ ಮಾಡಿದ್ದರು. ಸ್ವಲ್ಪ ಕಾಲ ತಾನು ಬಳಸಿಕೊಂಡ ಬಳಿಕ ವ್ಯಕ್ತಿ ಈಕೆಯನ್ನು ಪಂಜಾಬಿನ ಸರೂಪ್ ಚಾಂದ್ (61) ಎಂಬ ವ್ಯಕ್ತಿಗೆ 12,000 ರೂಪಾಯಿಗೆ ಮಾರಿದ. ವ್ಯಕ್ತಿ ಪ್ರತಾಪ್ ಸಿಂಗ್ (70) ಎಂಬ ಗಿರಾಕಿಗೆ 20,000 ರೂ.ಗಳಿಗೆ ಈಕೆಯನ್ನು ಮಾರಿದ. ಪ್ರತಾಪ್ ಸಿಂಗ್ ಈಕೆಯನ್ನು ತನ್ನ ಮಗನ ಜೊತೆಗೆ ಮದುವೆ ಮಾಡಿಸಿ, ಹೊಲ ಗದ್ದೆಗಳಲ್ಲಿ ದುಡಿಸಿಕೊಂಡು ರೋಡಾ ಸಿಂಗ್ ಎಂಬಾತನಿಗೆ ಮಾರಿದ. ಅಲ್ಲಿಂದಾಚೆಗೆ ಈಕೆ ಮಕ್ಕನ್ ಸಿಂಗ್, ಬೀರೇಂದರ್ ಸಿಂಗ್ ಮತ್ತಿತರ ಕೈಯಲ್ಲಿ ಹಲವಾರು ಬಾರಿ ಮಾರಾಟವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದಳು. ಕನಿಷ್ಠ 8 ಬಾರಿ ಮಾರಾಟವಾದ ಈಕೆ ಅತ್ಯಾಚಾರಿಗಳಿಂದ ಸಿಗರೇಟಿನಿಂದ ಸುಡಿಸಿಕೊಳ್ಳುವ ಚಿತ್ರಹಿಂಸೆಗೂ ಗುರಿಯಾದಳು. ಕಳೆದ ತಿಂಗಳು ಸಿಲಿಗುರಿಯ ಡ್ಯಾನ್ಸ್ ಬಾರ್ ಒಂದರಲ್ಲಿ ಬಲವಂತವಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಈಕೆಯ ಕರುಣಾಜನಕ ಕಥೆ ಕೇಳಿದ ಮಹಿಳೆಯೊಬ್ಬರು ಈಕೆಗೆ ನರಕದ ಕೂಪದಿಂದ ತಪ್ಪಿಸಿಕೊಳ್ಳಲು ನೆರವಾದರು ಎಂದು ಪೊಲೀಸರು ತಿಳಿಸಿದರು.

2008: ಬಡ ರೋಗಿಗಳಿಗೆ ಹೃದಯ ಚಿಕಿತ್ಸೆಗಾಗಿ `ಎಸ್ ಬಿ ಐ ಹೃದಯ ಸುರಕ್ಷಾ ಯೋಜನೆ' ಹೆಸರಿನ ಹೊಸ ಬಗೆಯ ಸಾಲ ಯೋಜನೆಯನ್ನು ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನಾರಾಯಣ ಹೃದಯಾಲಯದ ಜಂಟಿ ಯೋಜನೆ ಇದು. ನಾರಾಯಣ ಹೃದಯಾಲಯದಲ್ಲಿ ತುರ್ತು ಹೃದಯ ಚಿಕಿತ್ಸೆ ಅಗತ್ಯ ಇರುವ ಬಡ ರೋಗಿಗಳಿಗೆ ಶೇ.8.5ರ ಬಡ್ಡಿ ದರದಲ್ಲಿ ರೂ 50,000 ದಷ್ಟು ಸಾಲವನ್ನು ಯೋಜನೆಯನ್ವಯ ಎಸ್ ಬಿ ಐ ನೀಡುವುದು.

2007: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ರಾಜಗೋಪಾಲ ಎನ್. ಗಿರಿಮಾಜಿ (88) ಅವರು ಶಿವಮೊಗ್ಗ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ 1919 ಅಕ್ಟೋಬರ್ 17ರಂದು ಲಕ್ಷ್ಮೀಬಾಯಿ ಮತ್ತು ನರಸಿಂಹಮೂರ್ತಿ ಗಿರಿಮಾಜಿ ದಂಪತಿ ಮಗನಾಗಿ ಜನಿಸಿದ ರಾಜಗೋಪಾಲ 1938ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1939ರಲ್ಲಿ ಒಂದು ವರ್ಷ, 1942ರ `ಕ್ವಿಟ್ ಇಂಡಿಯಾ ಚಳವಳಿ' ಕಾಲದಲ್ಲಿ 14ತಿಂಗಳು ಮತ್ತು 1947ರಲ್ಲಿ ಒಂದು ತಿಂಗಳು ಜೈಲು ವಾಸ ಅನುಭವಿಸಿದ್ದರು. ಇವರು ಸೆರೆಮನೆಯಲ್ಲಿ ಇದ್ದಾಗಲೇ ಕೆ.ಟಿ. ಭಾಷ್ಯಂ, ವೀರಕೇಸರಿ ಸೀತಾರಾಮಶಾಸ್ತ್ರಿಗಳು, ಎ.ಜಿ. ರಾಮಚಂದ್ರಾರಾಯರು, ಎನ್. ಡಿ. ಶಂಕರ್, ಭೂಪಾಳಂ ಚಂದ್ರಶೇಖರಯ್ಯ, ಎಚ್. ಕೆ. ವೀರಣ್ಣಗೌಡರಂಥ ದೇಶ ಭಕ್ತರ ನಿಕಟ ಸಂಪರ್ಕ ಬೆಳೆಯಿತು.

2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಅನುಷ್ಠಾನಕ್ಕೆ ಅಗತ್ಯವಿರುವ ಕ್ರಮಗಳನ್ನು ಸ್ಥಗಿತಗೊಳಿಸುವುದು ಸಾಧ್ಯವಿಲ್ಲ ಎಂದು ಸರ್ಕಾರ ಎಡಪಕ್ಷಗಳಿಗೆ ಸ್ಪಷ್ಟವಾಗಿ ತಿಳಿಸಿತು.

2006: ಕನ್ನಡದ ಖ್ಯಾತ ಕವಿ ನಿಸಾರ್ ಅಹಮದ್ ಅವರನ್ನು ರಾಜ್ಯ ಸರ್ಕಾರವು `ದೇವರಾಜ ಅರಸು ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮುಂಬೈ ಸಮುದ್ರ ತೀರದ ಮಾಹಿಮ್ ಕೊಲ್ಲಿ ಪ್ರದೇಶದಲ್ಲಿ ಉಪ್ಪು ನೀರು ಸಿಹಿ ನೀರಾಗಿ ಪರಿವರ್ತನೆಗೊಂಡ ಘಟನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನ ನೀರು ಕುಡಿಯುವುದರ ಜೊತೆಗೆ ಬಾಟಲಿಗಳಲ್ಲಿ ಸಂಗ್ರಹಿಸಿಕೊಂಡೂ ಹೋದರು. ಮುಂಬೈಯಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲ ನದಿಗಳೂ ಉಕ್ಕಿ ಹರಿದು ಸಮುದ್ರ ಸೇರಿದ್ದರಿಂದ ಹೀಗಾಗಿರಬಹುದು ಎಂದು ತಜ್ಞರು ಶಂಕಿಸಿದರು. ಗುಜರಾತ್ ಕರಾವಳಿಯಲ್ಲೂ ವಿವಿಧೆಡೆ ಅರಬ್ಬಿ ಸಮುದ್ರದ ನೀರು ಇದೇ ರೀತಿ ಸಿಹಿ ನೀರಾಗಿ ಪರಿವರ್ತನೆಯಾದ ಘಟನೆ ನಡೆಯಿತು.

2006: ಇಸ್ರೇಲ್ ಸೇನೆ ನಸುಕಿನಲ್ಲಿ ಪಶ್ಚಿಮ ದಂಡೆಯ ರಮಲ್ಲಾದಲ್ಲಿ ದಾಳಿ ನಡೆಸಿ ಪ್ಯಾಲೆಸ್ಟೀನ್ ಉಪ ಪ್ರಧಾನಿ ನಾಸಿರ್ ಷಾಯಿರ್ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

1992: ಭಾರತದ 9ನೇ ಉಪರಾಷ್ಟ್ರಪತಿಯಾಗಿ ನಾರಾಯಣನ್ ಅವರನ್ನು ಆಯ್ಕೆ ಮಾಡಲಾಯಿತು.

1988: ಇರಾನ್ ಮತ್ತು ಇರಾಕ್ ನಡುವಿನ 8 ವರ್ಷದ ಯುದ್ಧಕ್ಕೆ `ಕದನ ವಿರಾಮ' ಆರಂಭ.

1977: ಹಾಸ್ಯನಟ ಜ್ಯೂಲಿಯಸ್ ಹೆನ್ರಿ `ಗ್ರೌಚೊ' ಮಾರ್ಕ್ಸ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಗರದಲ್ಲಿ ಮೃತರಾದರು.

1950: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಲೇಖಕಿ ಸುಧಾಮೂರ್ತಿ ಜನನ.

1949: ಭುವನೇಶ್ವರವು ಒರಿಸ್ಸಾ ರಾಜ್ಯದ ರಾಜಧಾನಿಯಾಯಿತು. ಅದಕ್ಕೂ ಮುಂಚೆ ರಾಜಧಾನಿ ಕಟಕ್ ಆಗಿತ್ತು.

1947: ಖ್ಯಾತ ಮರಾಠಿ ನಟ ನಿರ್ದೇಶಕ, ನಿರ್ಮಾಪಕ ದಾಮೋದರ ಕರ್ನಾಟಕಿ (ಮಾಸ್ಟರ್ ವಿನಾಯಕ್) ನಿಧನ.

1936: ಸ್ಪಾನಿಷ್ ಕವಿ ಫೆಡರಿಕೊ ಗಾರ್ಸಿಯಾ ಲೊರ್ಕಾ ಅವರನ್ನು ಜನರಲ್ ಫ್ರಾಂಕೋನ ಅನುಯಾಯಿಗಳು ಗುಂಡಿಟ್ಟು ಕೊಂದರು. ಕೊಲ್ಲುವ ಮೊದಲು ಅವರ ಮೇಲೆ ಒತ್ತಡ ಹೇರಿ ಅವರಿಂದಲೇ ಸ್ವ ಸಮಾಧಿಗೆ ಕುಳಿ ತೋಡಿಸಿದರು.

1929: ರಷ್ಯದ ಬ್ಯಾಲೆಗೆ ಮರುಜೀವ ನೀಡಿದ ಕಲಾವಿದ ಸೆರ್ಗೆ ಡಯಾಘಿಲೆವ್ ಅವರು ವೆನಿಸ್ಸಿನಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು. `ಬ್ಯಾಲೆ ರೂಸಸ್' ಸ್ಥಾಪಿಸಿದ ಅವರು ಐಗೊರ್ ಸ್ಟ್ರಾವಿನ್ ಸ್ಕಿ ಅವರ `ದಿ ಫೈರ್ ಬ್ರ್ಯಾಂಡ್', `ಪೆಟ್ರುಶ್ಕಾ' ಮತ್ತು `ರೈಟ್ ಆಫ್ ಸ್ಪ್ರಿಂಗ್' ಕೃತಿಗಳನ್ನು ಬ್ಯಾಲೆಗಳನ್ನಾಗಿ ನಿರ್ಮಿಸಿ ಅಪಾರ ಖ್ಯಾತಿ ಪಡೆದರು.

1916: ಭಾರತದ ಮಾಜಿ ರಾಷ್ಟ್ರಪತಿ ಶಂಕರ ದಯಾಳ ಶರ್ಮಾ ಜನನ.

1892: ಖ್ಯಾತ ಪ್ರಾಕ್ತನ ತಜ್ಞ ಮೈಸೂರು ಕೃಷ್ಣಯ್ಯಂಗಾರರು (19-8-1892ರಿಂದ 23-12-1947) ರಂಗ ಅಯ್ಯಂಗಾರ್- ಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಉತ್ಖನನ ಬಗ್ಗೆ ವಿಶೇಷ ಅನುಭವ ಹೊಂದಿದ್ದ ಅವರು ಪ್ರಾಕ್ತನ ವಿಚಾರಗಳಿಗೆ ಸಂಬಂಧಿಸಿದಂತೆ 25ಕ್ಕೂ ಕೃತಿಗಳು, ಸಂಶೋಧನಾ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

1888: ಬೆಲ್ಜಿಯಂನಲ್ಲಿ ಮೊದಲ ಸೌಂದರ್ಯ ಸ್ಪರ್ಧೆ ನಡೆಯಿತು.

1883: ಫ್ರಾನ್ಸಿನ ಖ್ಯಾತ ಉಡುಪು ವಿನ್ಯಾಸಕಿ ಗೇಬ್ರಿಯಲ್ `ಕೊಕೊ' ಚಾನೆಲ್ (1883-1971) ಜನ್ಮದಿನ. ಬೆಲ್ ಬಾಟಮ್ ಟ್ರೌಜರ್ ಗಳು, ಬಾಬ್ ತಲೆಗೂದಲು, ಟರ್ಟಲ್ ನೆಕ್ ಸ್ವೆಟರುಗಳು ಇತ್ಯಾದಿಗಳೆಲ್ಲ ಉಡುಪಿನ ಲೋಕಕ್ಕೆ ಈಕೆ ನೀಡಿದ ಕೊಡುಗೆಗಳು.

1757: ಈಸ್ಟ್ ಇಂಡಿಯಾ ಕಂಪೆನಿಯ ಮೊತ್ತ ಮೊದಲ ರೂಪಾಯಿ ನಾಣ್ಯವನ್ನು ಕಲ್ಕತ್ತದಲ್ಲಿ ಠಂಕಿಸಲಾಯಿತು.

1662: ಮೊತ್ತ ಮೊದಲ ಕ್ಯಾಲ್ ಕ್ಯುಲೇಟರನ್ನು ಸಂಶೋಧಿಸಿ ಸಾಧ್ಯತೆಗಳ ಆಧುನಿಕ ಸಿದ್ಧಾಂತಕ್ಕೆ ಅಡಿಪಾಯ ಹಾಕಿದ ಫ್ರೆಂಚ್ ತತ್ವಜ್ಞಾನಿ ಮತ್ತು ಗಣಿತ ತಜ್ಞ ಬ್ಲೈಸ್ ಪಾಸ್ಕಲ್ ತನ್ನ 39ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತನಾದ. ಈತನ ಗೌರವಾರ್ಥ ಒಂದು ಕಂಪ್ಯೂಟರ್ ಭಾಷೆಗೆ `ಪಾಸ್ಕಲ್' ಎಂದು ಹೆಸರಿಡಲಾಗಿದೆ.

No comments:

Post a Comment