Tuesday, August 28, 2018

800 ಮೀ ಸ್ವರ್ಣ ಗೆದ್ದ ಮನಜಿತ್ ಸಿಂಗ್, 36 ವರ್ಷ ಹಿಂದಿನ ದಾಖಲೆ ಪುನಃಸ್ಥಾಪನೆ


800 ಮೀ ಸ್ವರ್ಣ ಗೆದ್ದ ಮನಜಿತ್ ಸಿಂಗ್
36 ವರ್ಷ ಹಿಂದಿನ ದಾಖಲೆ ಪುನಃಸ್ಥಾಪನೆ

ಜಕಾರ್ತ: ಇಂಡೋನೇಷ್ಯದಲ್ಲಿ ನಡೆಯುತ್ತಿರುವ ೨೦೧೮ರ ಏಷ್ಯನ್ ಕ್ರೀಡಾಕೂಟದ ೮೦೦ ಮೀಟರ್ ಫೈನಲ್‌ನಲ್ಲಿ ಭಾರತದ ಅಥ್ಲೆಟಿಕ್ ಮನಜಿತ್ ಸಿಂಗ್ ಅವರು ತಮ್ಮ ಸಹ ಕ್ರೀಡಾಪಟು ಜಿನ್ಸನ್ ಜಾನ್ಸನ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿ ಇನ್ನೊಂದು ಸ್ವರ್ಣ ಪದಕವನ್ನು 2018 ಆಗಸ್ಟ್ 28ರ ಮಂಗಳವಾರ ದೇಶಕ್ಕೆ ತಂದು ಕೊಟ್ಟರು.

ಈ ಸಾಹಸ ಪ್ರದರ್ಶಿಸುವಲ್ಲಿ ಮನಜಿತ್ ಸಿಂಗ್ ಅವರು 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಾರ್ಲ್ಸ್ ಬೊರೋಮಿಯೊ ಅವರು ಸ್ವರ್ಣ ಪದಕ ಗೆಲ್ಲುವ ಮೂಲಕ ಸಾಧಿಸಿದ ದಾಖಲೆಯನ್ನು ಪುನಃಸ್ಥಾಪಿಸಿದರು., ಇದೇ ಸ್ಪರ್ಧೆಯಲ್ಲಿ ಜಿನ್ಸನ್ ಜಾನ್ಸನ್ ದೇಶಕ್ಕೆ ಬೆಳ್ಳಿ ಪದಕವನ್ನು ತಂದು ಕೊಟ್ಟರು.

ಇದಕ್ಕೆ ಮುನ್ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ರಜತ ಪದಕ ಗೆಲ್ಲುವ ಮೂಲಕ ಪಿ.ವಿ. ಸಿಂಧು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು.

ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೇಜರ್ ಫೈನಲ್ ನಲ್ಲಿ ೨ನೇ ಅತ್ಯುತ್ತಮ ಸ್ಥಾನ ಪಡೆದರು ಮತ್ತು ವೈಯಕ್ತಿಕ ಬೆಳ್ಳಿ ಪದಕವನ್ನು ಬಗಲಿಗೆ ಹಾಕಿಕೊಂಡರು. ಚೀನೀ ತೈಪೇಯಿಯ ಥಾಯ್- ಟ್ಜು - ಇಂಗ್ ಅವರಿಂದ ೩೪ ನಿಮಿಷಗಳ ಅಂತರದಲ್ಲಿ ೧೩-೨೧ ಮತ್ತು ೧೬-೨೧ ಅಂತರದಲ್ಲಿ ಸಿಂಧು ಪರಾಭವಗೊಂಡರು. ಆದರೆ ಫೈನಲ್ ವರೆಗೆ ಬರುವ ಮೂಲಕ ಸಿಂಧು ಅವರು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಈವರೆಗೆ ಭಾರತೀಯರು ಯಾರೂ ಫೈನಲ್ ವರೆಗೆ ಬಂದಿರಲಿಲ್ಲ.

ಇದಕ್ಕೆ ಮುನ್ನ ಭಾರತವು ಕೇಂದ್ರೀಯ ಏಷ್ಯಾದ ದೇಶೀ ಕುಸ್ತಿಯ (ರೆಸ್ಲಿಂಗ್) ಕುರಾಶ್ ನಲ್ಲಿ ಎರಡು ಪದಕಗಳನ್ನು ಗೆದ್ದಿತು. ಪಿಂಕಿ ಬಲ್ಹಾರ ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ್ ಅವರು ಮಹಿಳಾ ೫೨ ಕೆಜಿ ಕೆಟಗರಿಯ ಕುರಾಶ್ ನಲಿ  ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡರು. ೧೯ರ ಹರೆಯದ ಪಿಂಕಿ ಉಜ್ಬೆಕಿಸ್ಥಾನದ ಗುಲ್ನೋರ್ ಸುಲೇಮನೋವ ಅವರಿಂದ ಪರಾಭವಗೊಂಡು ರಜತ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಗುಲ್ನೋರ್ ಸ್ವರ್ಣ ಪದಕ ಗೆದ್ದರು.

ಕ್ರೀಡಾಕೂಟದ ೯ನೇಯ ದಿನ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ನೀರಜ್ ಚೋಪ್ರಾ ಅವರು ಭಾರತಕ್ಕೆ ಸ್ವರ್ಣ ಪದಕ ತಂದು ಕೊಟ್ಟಿದ್ದರು.

No comments:

Post a Comment