Thursday, August 23, 2018

ಭಾರತಕ್ಕೆ 5 ನೇ ಚಿನ್ನ;ಇತಿಹಾಸ ಸೃಷ್ಟಿಸಿದ ರೋಯಿಂಗ್‌ ತಂಡ


ಭಾರತಕ್ಕೆ 5 ನೇ ಚಿನ್ನ; ಇತಿಹಾಸ  ಸೃಷ್ಟಿಸಿದ ರೋಯಿಂಗ್‌ ತಂಡ 

ಜಕಾರ್ತ: ಏಷ್ಯನ್ ಕ್ರೀಡಾಕೂಟದಲ್ಲಿ ರೋಯಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ತಂಡ 24 ಆಗಸ್ಟ್ 2018ರ ಶುಕ್ರವಾರ ಇತಿಹಾಸ ಸೃಷ್ಟಿಸಿತು. ಈದಿನ ನಡೆದ ಫೈನಲ್‌ನಲ್ಲಿ ರೋಯಿಂಗ್‌ ತಂಡ ಇದೇ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿತು.

ಸಾವರ್ನ್ ಸಿಂಗ್‌,ದತ್ತು ಬಾಬನ್‌ ಭೋಕನಾಲ್‌, ಓಂ ಪ್ರಕಾಶ್‌  ಮತ್ತು ಸುಖ್‌ಮೀತ್‌ ಸಿಂಗ್‌ ಅವರ ರೋಯಿಂಗ್‌ ತಂಡ 6:17:13 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

2010 ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಜರಂಗ್‌ ಲಾಲ್‌ ಥಕ್ಕರ್‌ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.


ಭಾರತ ಈವರೆಗೆ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ 21 ಪದಕಗಳನ್ನು ತನ್ನದಾಗಿಸಿಕೊಂಡಿದೆ. 

No comments:

Post a Comment