Tuesday, August 14, 2018

ಎಚ್ಚರದಿಂದಿರಿ,ಸ್ಮಾರ್ಟ್ ಫೋನ್ ನಿಮ್ಮನ್ನು ಕುರುಡಾಗಿಸಬಹುದು!


ಎಚ್ಚರದಿಂದಿರಿ,ಸ್ಮಾರ್ಟ್ ಫೋನ್ ನಿಮ್ಮನ್ನು ಕುರುಡಾಗಿಸಬಹುದು!

ನವದೆಹಲಿ: ಸ್ಟಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್ ಟ್ಯಾಪ್ಗಳ ಬಳಕೆಯನ್ನು ಕಡಿಮೆಗೊಳಿಸುವ ಸಮಯ ಬಹುಶಃ ಬಂದಿದೆ.

ಏಕೆಂದರೆ ಹೊಸ ಅಧ್ಯಯನ ಒಂದರ ಪ್ರಕಾರ ಎಲೆಕ್ಟ್ರಾನಿಕ್ ಸಾಧನಗಳ ಪರದೆಗಳ ಮೂಲಕ ಹೊರಸೂಸುವ ನೀಲ ಬೆಳಕು ನಾವು ಯೋಚಿಸುವುದಕ್ಕಿಂತಲೂ ಅಪಾಯಕಾರಿ ಎಂದು ವೈಜ್ಞಾನಿಕ ವರದಿಗಳು ಹೇಳುತ್ತಿವೆ. ನೀಲ ಬೆಳಕು ಕ್ರಮೇಣ, ಖಚಿತವಾಗಿ ನಮ್ಮನ್ನು ಕುರುಡರನ್ನಾಗಿ ಮಾಡುವತ್ತ ಸಾಗುತ್ತಿದೆ.

ಸರಣಿ ಸೆಲ್ ಕಲ್ಚರ್ ಮತ್ತು ಇಮೇಜಿಂಗ್ ಪರೀಕ್ಷೆಗಳ ಬಳಿಕ ಟೊಲೆಡೊ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಡಿಸ್ ಪ್ಲೇಯಾಗುವ ಮತ್ತು ಅವುಗಳ ಪರದೆಯ ಮೂಲಕ ಹೊರಸೂಸುವ ನೀಲ ಬೆಳಕು ನಮ್ಮ ಕಣ್ಣುಗಳಲ್ಲಿನ ಸಣ್ಣ ಕಣಗಳು ನಂಜು ಅಥವಾ ವಿಷಯುಕ್ತವಾಗುವಂತೆ ಮಾಡಿ, ಕಣ್ಣಪೊರೆ ಅಥವಾ ಅಕ್ಷಿಪಟದಲ್ಲಿನ (ರೆಟಿನಾ) ಫೊಟೋ ರಿಸೆಪ್ಟರ್ ಕೋಶಗಳನ್ನು  ಕೊಲ್ಲುತ್ತದೆ ಎಂಬುದನ್ನು ಪತ್ತೆ ಹಚ್ಚಿದೆ.

ಫೊಟೋ ರಿಸೆಪ್ಟರ್ ಕೋಶಗಳು ಮಾನವ ದೇಹದಲ್ಲಿ ಹುಟ್ಟುವುದಿಲ್ಲ. ಒಮ್ಮೆ ಹೋದವು ಎಂದಾದರೆ ಅವು ಶಾಶ್ವತವಾಗಿ ಹೋದವು ಎಂದೇ ಅರ್ಥ.

ಹೆಚ್ಚಿನ ವಿವರಕ್ಕೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ


No comments:

Post a Comment