ನಾನು ಮೆಚ್ಚಿದ ವಾಟ್ಸಪ್

Monday, August 27, 2018

ಡಿಸೆಂಬರ್ 1ರಿಂದ ಡ್ರೋಣ್ ವಾಣಿಜ್ಯ ಹಾರಾಟ: ಸರ್ಕಾರದ ಒಪ್ಪಿಗೆ


ಡಿಸೆಂಬರ್ 1ರಿಂದ ಡ್ರೋಣ್ ವಾಣಿಜ್ಯ
ಹಾರಾಟ: ಸರ್ಕಾರದ ಒಪ್ಪಿಗೆ

ನವದೆಹಲಿ: ಕೃಷಿ, ಆರೋಗ್ಯ ಮತ್ತು ವಿಪತ್ತು ಪರಿಹಾರದಂತಹ ರಂಗಗಳಲ್ಲಿ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ ಡ್ರೋಣ್ ಗಳ ವಾಣಿಜ್ಯ ಬಳಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ಡಿಸೆಂಬರ್ 1ರಿಂದ ಈ ನಿಯಮಾವಳಿಗಳು ಜಾರಿಗೆ ಬರಲಿದ್ದು ಅಂದಿನಿಂದ ಸೂಚಿತ ರಂಗಗಳಲ್ಲಿ ಡ್ರೋಣ್ ವಾಣಿಜ್ಯ ಬಳಕೆ ಕಾನೂನುಬದ್ಧವಾಗಲಿದೆ.

ಆಹಾರ ವಸ್ತುಗಳು ಸೇರಿದಂತೆ ತೂಕದ ವಸ್ತುಗಳ (ಪೇಲೋಡ್) ವಿತರಣೆಗೆ ಈಗಿನಂತೆಯೇ ಅವಕಾಶ ನೀಡಲಾಗುವುದಿಲ್ಲ  ಎಂದು ಸರ್ಕಾರ  27 ಆಗಸ್ಟ್ 2018ರ ಸೋಮವಾರ ತಿಳಿಸಿದೆ.

ಎಲ್ಲ ನಾಗರಿಕ ಡ್ರೋಣ್ ಕಾರ್ಯಾಚರಣೆಗಳನ್ನು ಹಗಲಿನ ಹೊತ್ತಿಗೆ ಮಾತ್ರ ಮಿತಿಗೊಳಿಸಲಾಗಿದೆ ಮತ್ತು ಕಣ್ಣಿಗೆ ಕಾಣಸುವಷ್ಟು ಎತ್ತರದಲ್ಲಿ ಅಂದರೆ ಸಾಮಾನ್ಯವಾಗಿ 450 ಮೀಟರ್ ಎತ್ತರದಲ್ಲಿ ಮಾತ್ರ ಡ್ರೋಣ್ ಹಾರಿಸಬಹುದು ಎಂದು ನಿಯಮಾವಳಿಗಳು ಹೇಳುತ್ತವೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.


No comments:

Post a Comment