Showing posts with label ಏಷ್ಯನ್ ಕ್ರೀಡಾಕೂಟ. Show all posts
Showing posts with label ಏಷ್ಯನ್ ಕ್ರೀಡಾಕೂಟ. Show all posts

Tuesday, August 28, 2018

800 ಮೀ ಸ್ವರ್ಣ ಗೆದ್ದ ಮನಜಿತ್ ಸಿಂಗ್, 36 ವರ್ಷ ಹಿಂದಿನ ದಾಖಲೆ ಪುನಃಸ್ಥಾಪನೆ


800 ಮೀ ಸ್ವರ್ಣ ಗೆದ್ದ ಮನಜಿತ್ ಸಿಂಗ್
36 ವರ್ಷ ಹಿಂದಿನ ದಾಖಲೆ ಪುನಃಸ್ಥಾಪನೆ

ಜಕಾರ್ತ: ಇಂಡೋನೇಷ್ಯದಲ್ಲಿ ನಡೆಯುತ್ತಿರುವ ೨೦೧೮ರ ಏಷ್ಯನ್ ಕ್ರೀಡಾಕೂಟದ ೮೦೦ ಮೀಟರ್ ಫೈನಲ್‌ನಲ್ಲಿ ಭಾರತದ ಅಥ್ಲೆಟಿಕ್ ಮನಜಿತ್ ಸಿಂಗ್ ಅವರು ತಮ್ಮ ಸಹ ಕ್ರೀಡಾಪಟು ಜಿನ್ಸನ್ ಜಾನ್ಸನ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿ ಇನ್ನೊಂದು ಸ್ವರ್ಣ ಪದಕವನ್ನು 2018 ಆಗಸ್ಟ್ 28ರ ಮಂಗಳವಾರ ದೇಶಕ್ಕೆ ತಂದು ಕೊಟ್ಟರು.

ಈ ಸಾಹಸ ಪ್ರದರ್ಶಿಸುವಲ್ಲಿ ಮನಜಿತ್ ಸಿಂಗ್ ಅವರು 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಾರ್ಲ್ಸ್ ಬೊರೋಮಿಯೊ ಅವರು ಸ್ವರ್ಣ ಪದಕ ಗೆಲ್ಲುವ ಮೂಲಕ ಸಾಧಿಸಿದ ದಾಖಲೆಯನ್ನು ಪುನಃಸ್ಥಾಪಿಸಿದರು., ಇದೇ ಸ್ಪರ್ಧೆಯಲ್ಲಿ ಜಿನ್ಸನ್ ಜಾನ್ಸನ್ ದೇಶಕ್ಕೆ ಬೆಳ್ಳಿ ಪದಕವನ್ನು ತಂದು ಕೊಟ್ಟರು.

ಇದಕ್ಕೆ ಮುನ್ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ರಜತ ಪದಕ ಗೆಲ್ಲುವ ಮೂಲಕ ಪಿ.ವಿ. ಸಿಂಧು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು.

ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೇಜರ್ ಫೈನಲ್ ನಲ್ಲಿ ೨ನೇ ಅತ್ಯುತ್ತಮ ಸ್ಥಾನ ಪಡೆದರು ಮತ್ತು ವೈಯಕ್ತಿಕ ಬೆಳ್ಳಿ ಪದಕವನ್ನು ಬಗಲಿಗೆ ಹಾಕಿಕೊಂಡರು. ಚೀನೀ ತೈಪೇಯಿಯ ಥಾಯ್- ಟ್ಜು - ಇಂಗ್ ಅವರಿಂದ ೩೪ ನಿಮಿಷಗಳ ಅಂತರದಲ್ಲಿ ೧೩-೨೧ ಮತ್ತು ೧೬-೨೧ ಅಂತರದಲ್ಲಿ ಸಿಂಧು ಪರಾಭವಗೊಂಡರು. ಆದರೆ ಫೈನಲ್ ವರೆಗೆ ಬರುವ ಮೂಲಕ ಸಿಂಧು ಅವರು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಈವರೆಗೆ ಭಾರತೀಯರು ಯಾರೂ ಫೈನಲ್ ವರೆಗೆ ಬಂದಿರಲಿಲ್ಲ.

ಇದಕ್ಕೆ ಮುನ್ನ ಭಾರತವು ಕೇಂದ್ರೀಯ ಏಷ್ಯಾದ ದೇಶೀ ಕುಸ್ತಿಯ (ರೆಸ್ಲಿಂಗ್) ಕುರಾಶ್ ನಲ್ಲಿ ಎರಡು ಪದಕಗಳನ್ನು ಗೆದ್ದಿತು. ಪಿಂಕಿ ಬಲ್ಹಾರ ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ್ ಅವರು ಮಹಿಳಾ ೫೨ ಕೆಜಿ ಕೆಟಗರಿಯ ಕುರಾಶ್ ನಲಿ  ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡರು. ೧೯ರ ಹರೆಯದ ಪಿಂಕಿ ಉಜ್ಬೆಕಿಸ್ಥಾನದ ಗುಲ್ನೋರ್ ಸುಲೇಮನೋವ ಅವರಿಂದ ಪರಾಭವಗೊಂಡು ರಜತ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಗುಲ್ನೋರ್ ಸ್ವರ್ಣ ಪದಕ ಗೆದ್ದರು.

ಕ್ರೀಡಾಕೂಟದ ೯ನೇಯ ದಿನ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ನೀರಜ್ ಚೋಪ್ರಾ ಅವರು ಭಾರತಕ್ಕೆ ಸ್ವರ್ಣ ಪದಕ ತಂದು ಕೊಟ್ಟಿದ್ದರು.

Thursday, August 23, 2018

ಭಾರತಕ್ಕೆ 5 ನೇ ಚಿನ್ನ;ಇತಿಹಾಸ ಸೃಷ್ಟಿಸಿದ ರೋಯಿಂಗ್‌ ತಂಡ


ಭಾರತಕ್ಕೆ 5 ನೇ ಚಿನ್ನಇತಿಹಾಸ  ಸೃಷ್ಟಿಸಿದ ರೋಯಿಂಗ್ತಂಡ 

ಜಕಾರ್ತ: ಏಷ್ಯನ್ ಕ್ರೀಡಾಕೂಟದಲ್ಲಿ ರೋಯಿಂಗ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ತಂಡ 24 ಆಗಸ್ಟ್ 2018ರ ಶುಕ್ರವಾರ ಇತಿಹಾಸ ಸೃಷ್ಟಿಸಿತು. ಈದಿನ ನಡೆದ ಫೈನಲ್ನಲ್ಲಿ ರೋಯಿಂಗ್ತಂಡ ಇದೇ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿತು.

ಸಾವರ್ನ್ ಸಿಂಗ್‌,ದತ್ತು ಬಾಬನ್ಭೋಕನಾಲ್‌, ಓಂ ಪ್ರಕಾಶ್‌  ಮತ್ತು ಸುಖ್ಮೀತ್ಸಿಂಗ್ಅವರ ರೋಯಿಂಗ್ತಂಡ 6:17:13 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

2010 ಏಷ್ಯನ್ಕ್ರೀಡಾಕೂಟದಲ್ಲಿ ಭಜರಂಗ್ಲಾಲ್ಥಕ್ಕರ್ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.


ಭಾರತ ಈವರೆಗೆ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ 21 ಪದಕಗಳನ್ನು ತನ್ನದಾಗಿಸಿಕೊಂಡಿದೆ

Monday, August 20, 2018

ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನ: ಇತಿಹಾಸ ಸೃಷ್ಟಿಸಿದ ವಿನೇಶ್ ಪೊಗತ್


ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನ:
 ಇತಿಹಾಸ
ಸೃಷ್ಟಿಸಿದ ವಿನೇಶ್ ಪೊಗತ್

ಜಕಾರ್ತ: ಜಕಾರ್ತದಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ೫೦ ಕಿ.ಗ್ರಾ. ವರ್ಗದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿನೇಶ್ ಪೊಗತ್ ಅವರು 20 ಆಗಸ್ಟ್ 2018ರ ಸೋಮವಾರ ಇತಿಹಾಸ ನಿರ್ಮಿಸಿದರು.

ವಿನೇಶ್ ಪೊಗತ್ ಅವರು ಕಠಿಣ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜಪಾನಿನ ಯೂಕಿ ಇರೀ ಅವರನ್ನು ಫೈನಲ್ ನಲ್ಲಿ - ಅಂತರದಲ್ಲಿ ಪರಾಭವಗೊಳಿಸಿದರು.

೨೩ರ ಹರೆಯದ ಹರಿಯಾಣದ ಫೈರ್ ಬ್ರ್ಯಾಡ್ ಕುಸ್ತಿಪಟು ವಿನೇಶ್ ಪೊಗತ್ ಅವರ ಪಾಲಿಗೆ ಇದು ಬಹುದೊಡ್ಡ ಸಾಧನೆ. ಪೊಗತ್ ಅವರು ಹರಿಯಾಣದ ಖ್ಯಾತ ಡಂಗಲ್ ಖ್ಯಾತಿಯ ಪೊಗತ್ ಕುಟುಂಬಕ್ಕೆ ಸೇರಿದವರು.

ಎರಡು ವರ್ಷಗಳ ಹಿಂದೆ ಒಲಿಂಪಿಕ್ಸ್ ನಲ್ಲಿ ಸೋತಾದ ಅತ್ತಿದ್ದ ವಿನೇಶ್ ಪೊಗತ್ ಅವರು ಈದಿನ ಮೊದಲು ಚೀನಾದ  ಯನಾನ್ ಸುನ್ ಅವರನ್ನು ಸೋಲಿಸುವ ಮೂಲಕ ರಿಯೋದಲ್ಲಿ ತಾವು ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡರು.