Saturday, August 4, 2018

‘ಕೇಸರಿ’ ಆದ ಕಾಂಗ್ರೆಸ್ ಕಚೇರಿ, ಚೇಷ್ಟೆಯ ಬಳಿಕ ಆಯ್ತು ಬಿಳಿ!


ಕೇಸರಿ’  ಆದ ಕಾಂಗ್ರೆಸ್ ಕಚೇರಿ, ಚೇಷ್ಟೆಯ ಬಳಿಕ ಆಯ್ತು ಬಿಳಿ!

ಲಕ್ನೋ: ಸರ್ಕಾರಿ ಕಚೇರಿಗಳನ್ನು ವಸ್ತುಶಃಕೇಸರೀಮಯವನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಿರಂತರ ಆಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಈದಿನ ಇಲ್ಲಿ ಸ್ವತಃ ತನ್ನ ಕಚೇರಿ ಗೋಡೆಯೇ ಕೇಸರಿಮಯವಾದಾಗ ಪೆಚ್ಚಾದ ಘಟನೆ ಘಟಿಸಿತು.

ಲಕ್ನೋದಲ್ಲಿನ ಕಾಂಗ್ರೆಸ್ ಪಕ್ಷದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದ ಪತ್ರಕರ್ತರು ಮತ್ತು ಇತರರು ಕೇಂದ್ರದ ಗೋಡೆಗಳು ಕೇಸರಿಮಯವಾಗಿದ್ದುದನ್ನು ಕಂಡು ಅಚ್ಚರಿಗೊಂಡರು.

ಮಾಲ್ ಅವೆನ್ಯೂದಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪತ್ರಕರ್ತರು ಮತ್ತು ಇತರರು ಮಾಧ್ಯಮ ಕೇಂದ್ರದಲ್ಲಿ ಪಕ್ಷದ ವಕ್ತಾರರು ಕುಳಿತುಕೊಳ್ಳುವ ವೇದಿಕೆಯ ಹಿಂಭಾಗದ ಗೋಡೆ ಕೇಸರಿ ಬಣ್ಣದಲ್ಲಿ ವಿಜೃಂಭಿಸುತ್ತಿದ್ದುದನ್ನು ಕಂಡು ಪರಸ್ಪರ ಮುಖ ನೋಡಿದರು.

ಚೇಷ್ಟೆಗಳ ಮಧ್ಯೆ ಕೆಲವರು ಗೋಡೆಯ ಚಿತ್ರಗಳನ್ನು ತಮ್ಮ ಸೆಲ್ ಫೋನ್ ಗಳಲ್ಲೇ ತೆಗೆದುಕೊಂಡರು. ಕೆಲವೇ ಗಂಟೆಗಳಲ್ಲಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.

ಕೆಂಪು ಕೆಂಪಾದ ಕಾಂಗ್ರೆಸ್ ವಕ್ತಾರರು ತ್ರಿವರ್ಣ ಧ್ವಜದ ಬಣ್ಣವನ್ನು ಪ್ರಾತಿನಿಧಿಕವಾಗಿ ಬಳಿಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ಕಡೆಗೂ  ಕೇಸರಿಬಣ್ಣದ ಮೇಲೆ ಬಿಳಿ ಬಣ್ಣವನ್ನು ಬಳಿದರು.

ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ (ಯುಪಿಸಿಸಿ) ಹಿರಿಯ ಪದಾಧಿಕಾರಿಯೊಬ್ಬರು ಬಣ್ಣ ಬಳಿಯುತ್ತಿದ್ದ ಪೇಂಟರ್ ಮೇಲೆ ಗೂಬೆ ಕೂರಿಸಿದರು. ‘ಗೋಡೆಗೆ ಹಳದಿ ಬಣ್ಣಕೊಡಬೇಕಾಗಿತ್ತು, ಆದರೆ ಪೇಂಟರ್ ತಪ್ಪು ಶೇಡ್ ಬಳಸಿದ್ದಾನೆಎಂದು ಅವರು ಪ್ರತಿಪಾದಿಸಿದರು.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಚಿವಾಲಯದ ಗೋಡೆಗಳಿಗೆ ಕೇಸರಿ ಬಣ್ಣಬಳಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.

ಸಚಿವಾಲಯವಲ್ಲದೆ ಶಾಸ್ತ್ರಿಭವನ್, ಲಕ್ನೋ ಹಜ್ ಭವನ ಇತ್ಯಾದಿ ಸರ್ಕಾರಿ ಕಟ್ಟಡಗಳು ಕೂಡಾ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕಬಣ್ಣ ಬದಲಾಯಿಸಿದ್ದುವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.

No comments:

Post a Comment