ಮೋದಿ ಸಹಿತ ಯಾರೇ ವಿದೇಶೀ ನಾಯಕರಿಗೂ
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ತಾವು ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ ವಿದೇಶೀ ನಾಯಕರನ್ನೂ ಆಹ್ವಾನಿಸದೇ ಇರಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.
ತಮ್ಮ ಪದಗ್ರಹಣ ಸಮಾರಂಭವನ್ನು ಅತ್ಯಂತ ಸರಳ ಸಮಾರಂಭವನ್ನಾಗಿ ಇರಿಸಲು ಇಮ್ರಾನ್ ಖಾನ್ ಬಯಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಜುಲೈ 25ರ ಚುನಾವಣೆಯಲ್ಲಿ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದೆ.
ಇಮ್ರಾನ್ ಖಾನ್ ಅವರ ಪಕ್ಷವು ಈ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ನಾಯಕರನ್ನು, ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್, ಭಾರತೀಯ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ನವಜೋತ್ ಸಿಂಗ್ ಸಿಧು ಅವರನ್ನು ಸಮಾರಂಭಕ್ಕೆ ಆಮಂತ್ರಿಸಲು ಯೋಜಿಸಿತ್ತು.
ಆದರೆ ಗುರುವಾರ ತಮ್ಮ ಮನಸ್ಸು ಬದಲಾಯಿಸಿದ ಇಮ್ರಾನ್ ಖಾನ್ ಸಮಾರಂಭವನ್ನು ಅದ್ದೂರಿಯಾಗಿಸದೇ ಸರಳ ಸಮಾರಂಭವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಪತ್ರಿಕಾ ವರದಿ ಹೇಳಿದೆ.
No comments:
Post a Comment