Sunday, August 19, 2018

2019 ರಿಂದ ಎಟಿಎಂಗಳಿಗೆ ರಾತ್ರಿ 9 ಗಂಟೆ ಬಳಿಕ ನಗದು ಮರುಭರ್ತಿ ಇಲ್ಲ


2019 ರಿಂದ ಎಟಿಎಂಗಳಿಗೆ ರಾತ್ರಿ 9 ಗಂಟೆ ಬಳಿಕ
 ನಗದು ಮರುಭರ್ತಿ ಇಲ್ಲ

ನವದೆಹಲಿ: ಮುಂದಿನ ವರ್ಷದಿಂದ ಯಾವುದೇ ಎಟಿಎಂಗಳಿಗೆ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆ ಬಳಿಕ ನಗದು ಹಣ ಮರುಭರ್ತಿ ಮಾಡಲಾಗುವುದಿಲ್ಲ. ಹಾಗೆಯೇ ನೋಟು ಸಾಗಿಸುವಾಗ  ಇಬ್ಬರು ಸಶಸ್ತ್ರ ಗಾರ್ಡುಗಳು ಇರತಕ್ಕದ್ದು ಎಂದು ಗೃಹ ಸಚಿವಾಲಯದ ಹೊಸ ನಿರ್ದೇಶನ ತಿಳಿಸಿದೆ.

ಮಾವೋವಾದಿ ನಕ್ಸಲೀಯರ ಹಾವಳಿ ಇರುವ ಕಡೆಗಳಲ್ಲಿ ಎಟಿಎಂಗಳಿಗೆ ಹಣ ಮರುಭರ್ತಿ ಗಡುವು ಸಂಜೆ 4 ಗಂಟೆಯಾಗಿದ್ದು, ನಗದು ಹಣದ ಜೊತೆ ವ್ಯವಹರಿಸುವ ಖಾಸಗಿ ಸಂಸ್ಥೆಗಳು ಬ್ಯಾಂಕುಗಳಿಂದ ಮಧ್ಯಾಹ್ನಕ್ಕೆ ಮೊದಲೇ  ನಗದು ಹಣ ಸಂಗ್ರಹಿಸಿಕೊಳ್ಳಬೇಕು ಎಂದು ನಿರ್ದೇಶನ ಹೇಳಿದೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್  ಮಾಡಿರಿ.




No comments:

Post a Comment