Friday, August 24, 2018

ಇಂದಿನ ಇತಿಹಾಸ History Today ಆಗಸ್ಟ್ 24

ಇಂದಿನ ಇತಿಹಾಸ ಆಗಸ್ಟ್ 24

2018: ಜಕಾರ್ತ: ಏಷ್ಯನ್ ಕ್ರೀಡಾಕೂಟದಲ್ಲಿ ರೋಯಿಂಗ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ತಂಡ 24 ಆಗಸ್ಟ್ 2018ರ ಇತಿಹಾಸ ಸೃಷ್ಟಿಸಿತು. ಈದಿನ ನಡೆದ ಫೈನಲ್ನಲ್ಲಿ ರೋಯಿಂಗ್ತಂಡ ಇದೇ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿತು. ಸಾವರ್ನ್ ಸಿಂಗ್‌,ದತ್ತು ಬಾಬನ್ಭೋಕನಾಲ್‌, ಓಂ ಪ್ರಕಾಶ್‌  ಮತ್ತು ಸುಖ್ಮೀತ್ಸಿಂಗ್ಅವರ ರೋಯಿಂಗ್ತಂಡ 6:17:13 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. 2010 ಏಷ್ಯನ್ಕ್ರೀಡಾಕೂಟದಲ್ಲಿ ಭಜರಂಗ್ಲಾಲ್ಥಕ್ಕರ್ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರುಭಾರತ ಈವರೆಗೆ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ 21 ಪದಕಗಳನ್ನು ತನ್ನದಾಗಿಸಿಕೊಂಡಿದೆ.


2018: ಪಾಲೆಂಬಾಗ್: ಜಕಾರ್ತದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಟೆನ್ನಿಸ್ ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಬಂಗಾರದ ಪದಕದ ಪಡೆದರು.  ಈದಿನ ನಡೆದ ಪೈನಲ್ ಹಣಾಹಣಿಯಲ್ಲಿ ಬೋಪಣ್ಣ- ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ಮತ್ತು ಡೆನ್ನಿಸ್ ಜೋಡಿಯ ವಿರುದ್ದ6-3, 6-4 ಸೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸೆಮಿ ಫೈನಲ್ನಲ್ಲಿ ಜಪಾನಿನ ಶೊ ಶಿಮಬುಕುರೊಕೈಟೊ ವಿರುದ್ದ3 ಸೆಟ್ಗಳ ಹೋರಾಟ ನಡೆಸಿ ಜಯ ಗಳಿಸಿದ್ದ ಭಾರತೀಯ ಜೋಡಿ, ಫೈನಲ್ನಲ್ಲಿ ಸುಲಭದ ಗೆಲುವನ್ನೆ ಕಂಡರು.  10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹಿನಾ ಸಿಂಧು ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದೇ ವೇಳೆ ಭಾರತದ ಭರವಸೆಯ ಶೂಟರ್ ಮನು ಬಾಕರ್ 5 ನೇ ಸ್ಥಾನಕ್ಕೆ ತೃಪ್ತಿಪಟ್ಟರುಒಟ್ಟಾರೆ ಭಾರತ ಕೀಡಾಕೂಟದಲ್ಲಿ6 ಬಂಗಾರ, 4 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿ ಒಟ್ಟು 23 ಪದಕಗಳೊಂದಿಗೆ 7 ನೇ ಸ್ಥಾನದಲ್ಲಿದೆ.


2018: ನವದೆಹಲಿ: ಜಲಪ್ರಳಯದಿಂದ ಕಂಗೆಟ್ಟಿರುವ ಕೇರಳಕ್ಕೆ ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸು ನೆರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇನ್ನೂ ಅಂತಿಮಗೊಳಿಸಿಯೇ ಇಲ್ಲ, ರಾಜ್ಯಕ್ಕೆ ನೀಡಲಾಗುವ ದೇಣಿಗೆ ಬಗ್ಗೆ ಯಾವುದೇ ಪ್ರಕಟಣೆಯನ್ನು ಮಾಡಿಲ್ಲ ಎಂದು ನವದೆಹಲಿಯಲ್ಲಿನ ಯುಎಇ ರಾಯಭಾರ ಕಚೇರಿ ಸ್ಪಷ್ಟ ಪಡಿಸಿತು. ಪ್ರವಾಹ ಪರಿಹಾರಕ್ಕೆ ಯಾವುದೇ ವಿದೇಶೀ ನೆರವು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಮಧ್ಯೆ, ಯುಎಇ ರಾಯಭಾರ ಕಚೇರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಯುಎಇ ರಾಯಭಾರಿ ಅಹ್ಮದ್ ಅಲ್ಬನ್ನಮ್ ಅವರು ಹಣಕಾಸು ನೆರವಿನ ವಿಷಯವನ್ನು ಪ್ರಸ್ತಾಪಿಸದೆಯೇ, ತಮ್ಮ ಸರ್ಕಾರವು ಪ್ರವಾಹದಿಂದ ಕಂಗೆಟ್ಟಿರುವ ಕೇರಳದ ಜನತೆಗೆ ಪರಿಹಾರ ನೆರವು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತುರ್ತು ಸಮಿತಿಯೊಂದನ್ನು ಮಾತ್ರವೇ ರಚಿಸಿದೆ ಎಂದು ಹೇಳಿದರು.  ‘ಯುಎಇ ಕೇರಳ ಪ್ರವಾಹ ಪರಿಹಾರಕ್ಕಾಗಿ ಯಾವುದೇ ಹಣಕಾಸು ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ನಾವು ಯಾವುದೇ ನೆರವಿನ ಬಗ್ಗೆ ಭಾರತಕ್ಕೆ ಏನನ್ನೂ ತಿಳಿಸಿಲ್ಲ ಎಂದು ಯುಎಇ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ನುಡಿದರು. ಮುಂದಿನ ಕೆಲವು ದಿನಗಳಲ್ಲಿ ಪ್ರವಾಹ ಸಂತ್ರಸ್ಥರಿಗೆ ನೆರವು ನೀಡುವ ಬಗ್ಗೆ ತನ್ನ ಯೋಜನೆಯನ್ನು ಯುಎಇ ಪ್ರಕಟಿಸಬಹುದು ಎಂದು ಅವರು ಹೇಳಿದರು. ಕೇರಳದ ಜನರ ಜೊತೆಗೆ ಕೊಲ್ಲಿ ರಾಷ್ಟ್ರವು ಹೊಂದಿರುವ ವಿಶೇಷ ಬಾಂಧವ್ಯವನ್ನು ಪರಿಗಣಿಸಿ ರಾಜ್ಯದ ಜನತೆಗೆ ೭೦೦ ಕೋಟಿ ರೂಪಾಯಿಗಳ ನೆರವು ನೀಡಲು ಯುಎಇ ನಿರ್ಧರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಾರಾರಂಭದಲ್ಲಿ ಪ್ರಕಟಿಸಿದ್ದರುಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ, ಯುಎಇಯಲ್ಲಿ ಸುಮಾರು ೩೦ ಲಕ್ಷ ಭಾರತೀಯರು ವಾಸವಾಗಿದ್ದು ಅವರ ಪೈಕಿ ಶೇಕಡಾ ೮೦ರಷ್ಟು ಮಂದಿ ಕೇರಳದವರು. ಆಗಸ್ಟ್ ೧೮ರಂದು ದುಬೈಯ ಪ್ರಧಾನಿ ಹಾಗೂ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ರಾಷ್ಟ್ರವು ಪ್ರವಾಹ ಪೀಡಿತ ಜನರಿಗೆ ನೆರವು ನೀಡುವ ಸಲುವಾಗಿ ಸಮಿತಿಯೊಂದನ್ನು ರಚಿಸಿದೆ ಎಂದು ಟ್ವೀಟ್ ಮಾಡಿದ್ದರು.  ‘ಪ್ರವಾಹ ಸಂತ್ರಸ್ಥರಿಗೆ ನೆರವು ನೀಡುವಲಲ್ಲಿ ಯುಎಇ ಮತ್ತು ಭಾರತೀಯ ಸಮುದಾಯದ ಮಂದಿ ಒಗ್ಗಟ್ಟಾಗುವರು. ನಿಟ್ಟಿನಲ್ಲಿ ತತ್ ಕ್ಷಣವೇ ಕೆಲಸ ಆರಂಭಿಸಲು ನಾವು ಸಮಿತಿಯೊಂದನ್ನು ರಚಿಸಿದ್ದೇವೆ. ಉಪಕ್ರಮಕ್ಕಾಗಿ ಉದಾರವಾಗಿ ದೇಣಿಗೆ ನೀಡುವಂತೆ ನಾವು ಪ್ರತಿಯೊಬ್ಬರನ್ನೂ ಒತ್ತಾಯಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದರುಮನಮೋಹನ್ ಸಿಂಗ್ ಸರ್ಕಾರದ ನೀತಿ: ಯುಎಇ ೭೦೦ ಕೋಟಿ ರೂಪಾಯಿಗಳ ನೆರವಿನ ಕೊಡುಗೆ ನೀಡಿದೆ ಎಂಬುದಾಗಿ ವಿಜಯನ್ ಅವರು ಪ್ರಕಟಿಸಿದ ಕೆಲವು ದಿನಗಳ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಹಾಲಿಗೆ ನೀತಿಗೆ ಅನುಗುಣವಾಗಿ ಕೇರಳಕ್ಕೆ ಯಾವುದೇ ವಿದೇಶೀ ಸರ್ಕಾರದ ಹಣಕಾಸು ನೆರವನ್ನು ಅಂಗೀಕರಿಸಲು ಕೇಂದ್ರವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತುಏನಿದ್ದರೂ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅನಿವಾಸಿ ಭಾರತೀಯರು (ಎನ್ ಆರ್ ) ಅಥವಾ ಭಾರತೀಯ ಮೂಲದ ವ್ಯಕ್ತಿಗಳು (ಪಿಐಒ) ಮತ್ತು ಫೌಂಡೇಶನ್ಗಳಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡುವ ದೇಣಿಗೆಗಳ ಸ್ವಾಗತಾರ್ಹ ಎಂದೂ ಸಚಿವಾಲಯ ತಿಳಿಸಿತ್ತು. ೨೦೦೪ರಲ್ಲಿ ಸುನಾಮಿ ಹಾವಳಿಯ ಬಳಿಕ ವಿದೇಶೀ ನೆರವನ್ನು ಸ್ವೀಕರಿಸದೇ ಇರುವ ನಿರ್ಧಾರವನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಕೈಗೊಂಡಿದ್ದುದು ಹಾಗೂ ಅದನ್ನೇ ಈವರೆಗೂ ಅನುಸರಿಸುತ್ತಾ ಬರುತ್ತಿದ್ದುದನ್ನು ಉಲ್ಲೇಖಿಸಿ, ಸಚಿವಾಲಯ ಹೇಳಿಕೆ ನೀಡಿತ್ತು.

2018: ನವದೆಹಲಿ: ಕೇರಳದಲ್ಲಿ ಸಂಭವಿಸಿದ ಅಭೂತಪೂರ್ವ ಪ್ರವಾಹದ ಹಿನ್ನೆಲೆಯಲ್ಲಿ ಆಗಸ್ಟ್ ೩೧ರವರೆಗೆ ತಾನು ಅನುಮತಿ ನೀಡಿದ್ದ ನೀರಿನ ಮಟ್ಟಕ್ಕಿಂತ ಅಡಿಗಳಷ್ಟು ಕೆಳಮಟ್ಟದಲ್ಲಿ ಅಂದರೆ ೧೩೯ ಅಡಿಗಳ ಮಟ್ಟದಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೆಶನ ನೀಡಿತು. ಮುಲ್ಲಪೆರಿಯಾರ್ ಅಣೆಕಟ್ಟಿಗೆ ಸಂಬಂಧಿಸಿದ ಉಪ ಸಮಿತಿಯು ಆಗಸ್ಟ್ ೨೩ರಂದು ಸಭೆ ೧೩೯ ಅಡಿಗಳ ಮಟ್ಟದಲ್ಲಿ ನೀರು ನಿಲ್ಲಿಸುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂಬುದಾಗಿ ಕೇಂದ್ರ ಸಲ್ಲಿಸಿದ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಪರಿಗಣನೆಗೆ ತೆಗೆದುಕೊಂಡಿತುಮುಲ್ಲಪೆರಿಯಾರ್ ಅಣೆಕಟ್ಟು ಸಮಿತಿಯ ನಿರ್ದೇಶನಗಳನ್ನು ಅನುಸರಿಸುವಂತೆ ಹಾಗೂ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್ ಉಭಯ ರಾಜ್ಯಗಳಿಗೂ ಸೂಚಿಸಿತು. ತಾನು ವಿಪತ್ತು ನಿರ್ವಹಣೆ ಅಂಶಕ್ಕೆ ಮಾತ್ರವೇ ತನ್ನನ್ನು ತಾನು ಸೀಮಿತಿಗೊಳಿಸಿಕೊಳ್ಳುತ್ತಿರುವುದಾಗಿ ಸ್ಪಷ್ಟ ಪಡಿಸಿದ ಪೀಠ, ಅಣೆಕಟ್ಟಿನಲ್ಲಿ ಕೆಳಮಟ್ಟದಲ್ಲಿ ನೀರು ನಿಲ್ಲಿಸುವ ಕುರಿತ ನಿರ್ಧಾರವನ್ನು ಕೇರಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹವನ್ನು ಗಮನದಲ್ಲಿ ಇರಿಸಿಕೊಂಡು ಕೈಗೊಳ್ಳಲಾಗಿದೆ ಎಂದು ಹೇಳಿತು.  ‘ಪಶ್ಚಿಮ ಘಟ್ಟದಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಾಡಿ ಸಮೀಪ ಪೆರಿಯಾರ್ ನದಿಗೆ ಕಟ್ಟಲಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನ ಮಿತಿ ನಿಗದಿ ಪಡಿಸುವ ಸುಪ್ರೀಂಕೋರ್ಟಿನ ನಿರ್ಧಾರದಿಂದ ತಪ್ಪಿಸಿಕೊಳ್ಳುವ ವಾಮ ಮಾರ್ಗದ ಉದ್ದೇಶದ ಭಾಗ ಇದಾಗಿರುವ ಸಾಧ್ಯತೆ ಇದೆ ಎಂದು ತಮಿಳುನಾಡು ಆಪಾದಿಸಿದ ಬಳಿಕ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿತುಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಬಿಡುಗಡೆ ಮಾಡಲಾದ ಹೆಚ್ಚುವರಿ ನೀರಿನಿಂದಾಗಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂಬ ಕೇರಳದ ಪ್ರತಿಪಾದನೆ ತಪ್ಪು ಹಾಗೂ ಬುಡರಹಿತವಾದದ್ದು ಎಂದು ತಮಿಳುನಾಡು ಮುಖ್ಯಮಂತ್ರಿ ಇಕೆ. ಪಳನಿಸ್ವಾಮಿ ಇದಕ್ಕೆ ಮುನ್ನ ಶುಕ್ರವಾರ ಹೇಳಿದ್ದರು.  ತಮಿಳುನಾಡು ಸರ್ಕಾರವು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ದಿಢೀರನೆ ನೀರು ಬಿಡುಗಡೆ ಮಾಡಿದ್ದು ಕೇರಳದಲ್ಲಿ ೩೫೦ ಜನರನ್ನು ಬಲಿತೆಗೆದುಕೊಂಡು ಸಹಸ್ರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿ ಹಾನಿಗೆ ಕಾರಣವಾದ ಪ್ರವಾಹಕ್ಕೆ ಕಾರಣಗಳಲ್ಲಿ ಒಂದು ಎಂಬುದಾಗಿ ಕೇರಳ ಸರ್ಕಾರವು ಗುರುವಾರ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಕೇರಳದ ಒಟ್ಟು ಜನಸಂಖ್ಯೆಯಾದ .೪೮ ಕೋಟಿಯ ಪೈಕಿ ಆರನೇ ಒಂದು ಭಾಗದಷ್ಟು ಅಂದರೆ ೫೪ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಪ್ರವಾಹದಿಂದ ನೇರ ಹಾನಿಗೆ ಒಳಗಾಗಿದ್ದಾರೆ ಎಂದು ಕೇರಳ ಸರ್ಕಾರ ಹೇಳಿತ್ತುಕೇರಳದಲ್ಲಿ ಪ್ರವಾಹವು ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿರುವುದರಿಂದ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ಸೂಕ್ತವಾಗಿ ನಿರ್ವಹಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೇರಳದ ನಿವಾಸಿ ರಸ್ಸೆಲ್ ರಾಯ್ ಅವರೂ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಇತರ ಹಲವಾರು ಬೇಡಿಕೆಗಳನ್ನೂ ಅವರು ಮುಂದಿಟ್ಟಿದ್ದಾರೆಇದಕ್ಕೂ ಮುನ್ನ ನೀರಿನ ಮಟ್ಟವನ್ನು ಇಳಿಸುವ ಬಗ್ಗೆ ತುರ್ತಾಗಿ ನಿರ್ಧರಿಸುವಂತೆ ಮುಲ್ಲಪೆರಿಯಾರ್ ಅಣೆಕಟ್ಟಿನ ವಿಪತ್ತು ನಿರ್ವಹಣಾ ಸಮಿತಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ತಮ್ಮ ರಾಜ್ಯದ ಸುರಕ್ಷತೆ ಸಲುವಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು ಇಳಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದದ್ದನ್ನು ಅನುಸರಿಸಿ, ನೀರಿನ ಮಟ್ಟವನ್ನು ೧೪೨ ಅಡಿಗಳಿಂದ ೧೩೯ ಅಡಿಗಳಿಗೆ ಇಳಿಸುವ ಬಗ್ಗೆ ಪರಿಗಣಿಸುವ ನಿರ್ದೇಶನವನ್ನು ಸುಪ್ರೀಂಕೋರ್ಟ್ ನೀಡಿತು. ಅಣೆಕಟ್ಟಿಗೆ ಬರುತ್ತಿರುವ ನೀರಿನ ಪ್ರಸ್ತುತ ಒಳಹರಿವು ೨೦,೦೦೦ ಕ್ಯುಸೆಕ್ಸ್ಗಳಾಗಿದ್ದು, ಮಳೆಯ ಕಾರಣ ನೀರಿನ ಮಟ್ಟವನ್ನು ತತ್ ಕ್ಷಣಕ್ಕೆ ಇಳಿಸಲು ಸಾಧ್ಯವಾಗದಿರಬಹುದು ಎಂದು ಹೇಳುವ ಮೂಲಕ ತಮಿಳುನಾಡು ಸರ್ಕಾರವು ಕೇರಳ ಸರ್ಕಾರದ ಮನವಿಯನ್ನು ವಿರೋಧಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೬ಕ್ಕೆ ನಿಗದಿ ಪಡಿಸಿದ ಸುಪ್ರೀಂಕೋರ್ಟ್, ಮಧ್ಯೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇರಳ, ಪುದುಚೆರಿ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಸೂಚಿಸಿತು

2018: ವಾಷಿಂಗ್ಟನ್: ’ವೃತ್ತಿ ನಿರತರಿಗೆ ನೀಡಲಾಗುವ ಎಚ್೧-ಬಿ ವೀಸಾ ಸೇರಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಸ್ಥಿರ ವಲಸೆ ನೀತಿಗಳು ಅಮೆರಿಕದ ಸಂಸ್ಥೆಗಳ ಕಾರ್ ನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಅವುಗಳ ಸ್ಪರ್ಧಾತ್ಮಕತೆಯೇ ಭಾರೀ ಧಕ್ಕೆ ಉಂಟು ಮಾಡಬಹುದು ಎಂದು ಅಮೆರಿಕ ಉನ್ನತ ಕಂಪೆನಿಗಳ ಸಿಇಒ ಗಳು ಎಚ್ಚರಿಕೆ ನೀಡಿದರು. ಅಮೆರಿಕದ ತಾಯ್ನಾಡು ಭದ್ರತಾ ಕಾರ್ಯದರ್ಶಿ ಕಿರ್ಸ್ಟಜೆನ್ ನೀಲ್ಸೆನ್ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ಬಿಸಿನೆಸ್ ರೌಂಡ್ ಟೇಬಲ್ ಸದಸ್ಯರು ಎಚ್ಚರಿಕೆ ನೀಡಿದರು. ಆಪಲ್ ಸಿಇಒ ಟಿಮ್ ಕುಕ್, ಪೆಪ್ಸಿಕೊ ಅಧ್ಯಕ್ಷೆ ಹಾಗೂ ಸಿಇಒ ಇಂದ್ರಾನೂಯಿ, ಮಾಸ್ಟರ್ ಕಾರ್ಡ್ ಅಧ್ಯಕ್ಷ ಹಾಗೂ ಸಿಇಒ ಅಜಯ್ ಬಂಗಾ, ಸಿಸ್ಕೊ ಸಿಸ್ಟಮ್ಸ್ ಅಧ್ಯಕ್ಷ ಹಾಗೂ ಸಿಇಲ ಚುಕ್ ರಾಬಿನ್ಸ ಅವರು ಬರೆದಿರುವ ಜಂಟಿ ಪತ್ರವುಅಮೆರಿಕದ ವಲಸೆ ನೀತಿಯ ಗೊಂದಲವು ಕಾನೂನು ಅನುಸರಿಸುವ ನೌಕರರಲ್ಲಿ ಉದ್ವಿಗ್ನತೆ ಹುಟ್ಟುಹಾಕುತ್ತದೆ ಎಂದು ಹೇಳಿತು. ಬಿಸಿನೆಟ್ ರೌಂಡ್ ಟೇಬಲ್ ಅಮೆರಿಕದ ಮುಂಚೂಣಿ ಕಂಪೆನಿಗಳ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿಗಳ ಸಂಘಟನೆ ಯಾಗಿದೆ. ’ಸರ್ಕಾರದ ಅಸ್ಥಿರ ಕ್ರಮಗಳು ಮತ್ತು ಅನಿಶ್ಚಿತತೆಗಳು ಆರ್ಥಿಕ ಬೆಳವಣಿಗೆಗೆ ಹಾಗೂ ಅಮೆರಿಕದ ಸ್ಪರ್ಧಾತ್ಮಕತೆಗೂ ಧಕ್ಕೆ ಉಂಟು ಮಾಡುತ್ತದೆ ಎಂದು ಪತ್ರ ಹೇಳಿದೆಕೆಲಸಗಾರರಿಗೆ ಗ್ರೀನ್ ಕಾರ್ಡ್ಗಳ ಕೊರತೆಯಿಂದಾಗಿ ಹಲವಾರು ನೌಕರರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ವಲಸೆ ಪ್ರಕ್ರಿಯೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾರೆ ಎಂದು ಪತ್ರ ತಿಳಿಸಿತು. ಅಮೆರಿಕದ ವಹಿವಾಟಿನ ಮೇಲಿನ ಅನಗತ್ಯ ವೆಚ್ಚ ಮತ್ತು ಸಂಕೀರ್ಣತೆಗಳನ್ನು ನಿವಾರಿಸಲು ಅಮೆರಿಕ ಸರ್ಕಾರವು ಪ್ರಕ್ರಿಯೆಯ ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸಬಾರದು ಎಂದು ಸಿಇಒಗಳ ಸಂಘಟನೆ ಹೇಳಿದೆ. ಅಮೆರಿಕವು ಕಳೆದ ಒಂದು ವರ್ಷದಲ್ಲಿ ಹೊರಡಿಸಿ ನೀತಿ ಸಂಬಂಧಿತ ಆಜ್ಞೆಗಳನ್ನು ಅಮೆರಿಕದ ಅಸ್ಥಿರ ನೀತಿಗೆ ಉದಾಹರಣೆಯಾಗಿ ಅದು ಉಲ್ಲೇಖಿಸಿತು.

2018: ನವದೆಹಲಿ: ಆರೆಸ್ಸೆಸ್ ಇಂಗ್ಲೆಂಡಿನ ಬಲಪಂಥೀಯ ಗುಂಪುಮುಸ್ಲಿಮ್ ಬ್ರದರ್ ಹುಡ್ಗೆ ಸಮ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ವಿದೇಶೀ ಪ್ರವಾಸದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ವಿರುದ್ಧ ಇನ್ನೊಂದು ಪ್ರಚೋದನಕಾರೀ ದಾಳಿ ನಡೆಸಿದರು. ಇದೇ ವೇಳೆಗೆ ಡೊಕ್ಲಾಮ್ ನಲ್ಲಿ ಇನ್ನೂ ಚೀನೀ ಪಡೆಗಳು ಇವೆ ಎಂದೂ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದರು. ಲಂಡನ್ನಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ, ’ಆರೆಸ್ಸೆಸ್ ಭಾರತದ ಸ್ವರೂಪವನ್ನೇ ಬದಲಿಸಲು ಯತ್ನಿಸುತ್ತಿದೆ. ಇತರ ಪಕ್ಷಗಳು ಭಾರತದ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿಲ್ಲ. ಆರೆಸ್ಸೆಸ್ಸಿನ ಕಲ್ಪನೆಯು ಅರಬ್ ಜಗತ್ತಿನ ಮುಸ್ಲಿಮ್ ಬ್ರದರ್ ಹುಡ್ (ಮುಸ್ಲಿಮ್ ಭ್ರಾತೃತ್ವ) ಕಲ್ಪನೆಗೆ ಸಮಾನವಾದುದು ಎಂದು ಹೇಳಿದರು. ಮುಸ್ಲಿಮ್ ಬ್ರದರ್ ಹುಡ್ ಈಜಿಪ್ಟಿನಲ್ಲಿ ಸ್ಥಾಪನೆಗೊಂಡಿರುವ ಸುನ್ನಿ ಇಸ್ಲಾಮೀ ಸಂಘಟನೆಯಾಗಿದ್ದು, ರಷ್ಯ ಮತ್ತು ಇತರ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಭಯೋತ್ಪಾದಕ ಸಂಘಟನೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆತಮ್ಮ ಪಕ್ಷವು ಭಾರತದ ಜನರನ್ನು ಒಗ್ಗೂಡಿಸುತ್ತದೆ, ಬಿಜೆಪಿ-ಆರೆಸ್ಸೆಸ್ ಅವರನ್ನು ವಿಭಜಿಸುತ್ತವೆ ಮತ್ತು ದ್ವೇಷವನ್ನು ಹರಡುತ್ತವೆ ಎಂದು ಕಾಂಗ್ರೆಸ್ ಅಧ್ಯಕ್ಷ ನುಡಿದರು. ‘ಬಿಜೆಪಿ-ಆರೆಸ್ಸೆಸ್ ಜನರು ನಮ್ಮದೇ ಜನರನ್ನು ಒಡೆಯುತ್ತಿದ್ದಾರೆ. ಅವರು ನಮ್ಮ ರಾಷ್ಟ್ರದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆಜನರನ್ನು ಒಗ್ಗೂಡಿಸುವುದು ಮತ್ತು ರಾಷ್ಟ್ರವನ್ನು ಮುಂದಕ್ಕೆ ಒಯ್ಯುವ ಕೆಲಸವನ್ನು ನಾವು ಮಾಡುತ್ತೇವೆ ಮತ್ತು ಅದನ್ನು ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಆರೆಸ್ಸೆಸ್ ಮಂದಿ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಬೇರು ಬಿಟ್ಟಿದ್ದಾರೆ ಎಂದು ನುಡಿದ ಕಾಂಗ್ರೆಸ್ ನಾಯಕ  ’ನೋಟು ಅಮಾನ್ಯೀಕರಣಕ್ಕೂ ಆರೆಸ್ಸೆಸ್ ಸಂಘಟನೆಯೇ ಕಾರಣ ಎಂದು ದೂರಿದರು. ನೋಟು ಅಮಾನ್ಯೀಕರಣದ ಕಲ್ಪನೆಯು ನೇರವಾಗಿ ಆರೆಸ್ಸೆಸ್ ನಿಂದಲೇ ಬಂದಿದ್ದು ಅದು ಹಣಕಾಸು ಸಚಿವರು ಮತ್ತು ಭಾರತೀಯ ರಿಸರ್ವ್ ಬ್ಯಾಂಕನ್ನೂ  (ಆರ್ ಬಿಐ) ಬದಿಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಲೆಯಲ್ಲೂ ಆರೆಸ್ಸೆಸ್ ಬಿತ್ತನೆ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.  ಆರೆಸ್ಸೆಸ್ ನ್ನು ಐಸಿಸ್ ಸಂಘಟನೆಗೆ ಹೋಲಿಸಿ, ಬಿಜೆಪಿಯ ಕೆಂಗಣ್ಣಿಗೆ ಗುರಿಯಾದ ಕೇವಲ ಒಂದು ದಿನದ ಬಳಿಕ ರಾಹುಲ್ ಅವರಿಂದ ಆರೆಸ್ಸೆಸ್ ನ್ನು ಮುಸ್ಲಿಮ್ ಬ್ರದರ್ ಹುಡ್ ಗೆ ಹೋಲಿಸಿದ ಮಾತುಗಳು ಬಂದಿವೆ. ದೊಡ್ಡ ಸಂಖ್ಯೆಯ ಜನರನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗೆ ಇಡುವುದು ಜಗತ್ತಿನ ಯಾವುದೇ ಕಡೆಯಲ್ಲಿ ಬಂಡಾಯ ಗುಂಪುಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪನ್ನು (ಐಸಿಸ್) ಉದಾಹರಣೆಯಾಗಿ ರಾಹುಲ್ ಉಲ್ಲೇಖಿಸಿದ್ದರು. ಭಾರತದಲ್ಲಿ ಗುಂಪು ಹತ್ಯೆಗಳು ಸಂಭವಿಸುತ್ತಿರುವುದಕ್ಕೆ ಉದ್ಯೋಗ  ಲಭಿಸದೇ ಇರುವುದು ಮತ್ತು  ನೋಟು ಅಮಾನ್ಯೀಕರಣದ ಬಳಿಕ ಸಮಾನ ಅವಕಾಶಗಳು ಲಭಿಸದ ಪರಿಣಾಮವಾಗಿ ಬಡವರು ಅವಕಾಶ ವಂಚಿತರಾಗಿರುವುದು ಕಾರಣ ಎಂದು ರಾಹುಲ್ ಹೇಳಿದ್ದರು. ರಾಹುಲ್ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿಯು, ಕಾಂಗ್ರೆಸ್ ನಾಯಕ ಭಯೋತ್ಪಾದಕ ಸಂಘಟನೆಯನ್ನು ಸಮರ್ಥಿಸಿಕೊಂಡಿರುವುದಷ್ಟೇ ಅಲ್ಲ, ಅಲ್ಪಸಂಖ್ಯಾತ ಸಮುದಾಯದ ಹೆಸರು ಕೆಡಿಸಿದ್ದಾರೆ ಎಂದು ಆಪಾದಿಸಿತ್ತು. ಲಂಡನ್ನಿನ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ ನಲ್ಲಿ ನಡೆದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ತಮ್ಮ ಪ್ರಹಾರವನ್ನು ಮುಂದುವರೆಸುತ್ತಾ, ಡೊಕ್ಲಾಮ್ ನಲ್ಲಿ ಈಗಲೂ ಚೀನೀ ಪಡೆಗಳು ಇವೆ ಎಂದು ಆಪಾದಿಸಿದರು. ಎರಡೂವರೆ ತಿಂಗಳಿಗೂ ಹೆಚ್ಚು ಕಾಲದ ಬಿಕ್ಕಟ್ಟನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡಿಬಿಡಿಯಾಗಿ ನೋಡುತ್ತಿದ್ದಾರೆ ಎಂದೂ ಅವರು ನುಡಿದರು. ಸತ್ಯ ಏನೆಂದರೆ ಡೊಕ್ಲಾಮ್ ನಲ್ಲಿ ಈಗಲೂ ಚೀನೀ ಪಡೆಗಳು ಇವೆ. ಡೊಕ್ಲಾಮ್ ಪ್ರತ್ಯೇಕ ವಿಷಯವಲ್ಲ. ಇದು ವಿದ್ಯಮಾನಗಳ ಸರಣಿಯ ಒಂದು ಭಾಗ ಮಾತ್ರ. ಇದೊಂದು ಪ್ರಕ್ರಿಯೆ. ಪ್ರಧಾನಿ ಇದನ್ನು ಬಿಡಿ ಬಿಡಿಯಾಗಿ ನೋಡುತ್ತಾರೆ. ಅವರು ಡೊಕ್ಲಾಮ್ ಬಿಕ್ಕಟ್ಟನ್ನು ಪ್ರತ್ಯೇಕ ಘಟನೆಗಳಾಗಿ ಪರಿಗಣಿಸುತ್ತಾರೆ. ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸಿದ್ದರೆ ಅವರು ಅದನ್ನು ಸ್ಥಗಿತಗೊಳಿಸುತ್ತಿದ್ದರು ಎಂದು ರಾಹುಲ್ ಹೇಳಿದರು.

2017: ನವದೆಹಲಿ: ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ರ್ಟ್ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಸಮ್ಮತ ತೀರ್ಪು ನೀಡಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ತೀವ್ರ ಹಿನ್ನಡೆ ಉಂಟಾದಂತಾಯಿತು. ಖಾಸಗಿತನದ ಹಕ್ಕು ಎತ್ತಿಹಿಡಿದ ಸುಪ್ರೀಂಕೋರ್ಟ್, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದನ್ನು ನಿರಾಕರಿಸಬಹುದು ಎಂದು ಹೇಳಿತು. ಸಂವಿಧಾನದ ಅಡಿ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಣಿಗಣಿಸಬೇಕೇ ಎಂಬ ಬಹುಚರ್ಚಿತ ವಿಷಯದ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಈದಿನ ಹೊರಬಿದ್ದಿತು. ಈ ಚರ್ಚೆಯ ಸಂಬಂಧ ಹಲವಾರು ಪರವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಕಾರಣ, ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ 9 ಸದಸ್ಯರ ಪೀಠ .2ರಂದೇ ನೀಡಬೇಕಿದ್ದ ತೀರ್ಪನ್ನು  ಕಾಯ್ದಿರಿಸಿತ್ತು. ಸರ್ಕಾರದ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸರ್ಕಾರ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿರುವುದರಿಂದ ಜನರ ಖಾಸಗಿ ಮಾಹಿತಿಗಳು ಬಹಿರಂಗವಾಗುತ್ತಿವೆ ಎಂದು ಕರ್ನಾಟಕ ಸೇರಿದಂತೆ 5 ರಾಜ್ಯಗಳು ಅರ್ಜಿ ಸಲ್ಲಿಸಿದ್ದವು. ಖಾಸಗಿತನ ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಆದರೆ ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು,  ಸಂವಿಧಾನದ 21ನೇ ವಿಧಿಯಡಿ ಖಾಸಗಿತನ ಒಂದು ಭಾಗ ಎಂದು ಹೇಳಿತು.
2017: ನವದೆಹಲಿ: 2018 ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಕರ್ನಾಟಕದ ಬಿಜೆಪಿ ಚುನಾವಣಾ ಉಸ್ತುವಾರಿಯನ್ನು ವಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿತು. ಏತನ್ಮಧ್ಯೆ ಮತ್ತೊಬ್ಬ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಗೆ ಕರ್ನಾಟಕ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಯಿತು. ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುರಳಿಧರ್ ರಾವ್ ಅವರು ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿತು. ಅದೇ ರೀತಿ ವರ್ಷದ ಅಂತ್ಯದಲ್ಲಿ ಗುಜರಾತ್ ಚುನಾವಣೆ ನಡೆಯುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಗುಜರಾತ್ ಚುನಾವಣೆ ಉಸ್ತುವಾರಿಯನ್ನಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ನೇಮಕ ಮಾಡಿದರು. ಗುಜರಾತ್ ವಿಧಾನಸಭೆಯ ಅವಧಿ 2018 ಜನವರಿ 22ರಂದು ಮುಕ್ತಾಯಗೊಳ್ಳಲಿದೆ. ಕರ್ನಾಟಕ ವಿಧಾನಸಭೆ ಅವಧಿ 2018 ಮೇ 28ರಂದು ಮುಕ್ತಾಯಗೊಳ್ಳಲಿದೆ.
2017:  ನವದೆಹಲಿ: ಸಹ ಸ್ಥಾಪಕ ಮತ್ತು ಮಾಜಿ ಸಿಇಒ ನಂದನ್ ನಿಲೇಕಣಿ ಅವರನ್ನು ಇನ್ಫೊಸಿಸ್
ಇನ್ಫೋಸಿಸ್ ನಿರ್ದೇಶಶಕ ಮಂಡಳಿಗೆ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಉನ್ನತ ಮೂಲಗಳು, ಸದ್ಯ ಅಧ್ಯಕ್ಷರಾಗಿದ್ದ ಆರ್. ಶೇಷಸಾಯಿ, ಉಪಾಧ್ಯಕ್ಷರಾಗಿದ್ದ ರವಿ ವೆಂಕಟೇಶನ್ ಮತ್ತು ಸಿಇಒ ವಿಶಾಲ್ ಸಿಕ್ಕಾ ಸೇರಿ ಹಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಂಸ್ಥೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿತು. ಸಂಸ್ಥೆಯ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ಅವರು ಆಡಳಿತ ಮಂಡಳಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ವಾರ ರಾಜೀನಾಮೆ ನೀಡಿದ್ದರು.
2008: ಕಿರ್ಗಿಸ್ಥಾನ್ ರಾಜಧಾನಿ ಬಿಶ್ಕೇಕಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ 87 ಜನ ಮೃತರಾದರು. ಇರಾನಿಗೆ ತೆರಳುತ್ತಿದ್ದ ಈ ವಿಮಾನ ಬಿಶ್ಕೇಕಿನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲ ಕ್ಷಣಗಳಲ್ಲೇ ಅಪಘಾತಕ್ಕೆ ತುತ್ತಾಯಿತು. ವಿಮಾನದಲ್ಲಿ 123 ಪ್ರಯಾಣಿಕರಿದ್ದರು.

2007: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ತಮ್ಮ ವಿರುದ್ಧ ಜೈಪುರ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಜೋಧ್ ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಲ್ಮಾನ್ ವಿರುದ್ಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಕೆ. ಜೈನ್ ಅವರು 2006ರ ಏಪ್ರಿಲ್ 10ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲ್ ರಾಜ್ ಸಿಂಘ್ವಿ ಅವರು, ನಟನ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದರು. ಆದರೆ ಇನ್ನೊಬ್ಬ ಆರೋಪಿ ಗೋವರ್ಧನ್ ಸಿಂಗ್ ನನ್ನು ಖುಲಾಸೆ ಮಾಡಿದರು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ಸೂರಜ್ ಅವರ ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

2007: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಗೆ ಕರ್ನಾಟಕದ ಕುಟುಂಬ ಕಲ್ಯಾಣ ಇಲಾಖೆಯು `ಮಡಿಲು' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿತು. ಸುರಕ್ಷಿತ ಹೆರಿಗೆ, ತಾಯಿ- ಮಗುವಿನ ಆರೋಗ್ಯ ರಕ್ಷಣೆಗಾಗಿ ವರಮಹಾಲಕ್ಷ್ಮಿ ಹಬ್ಬದಂದೇ ಈ ಯೋಜನೆಯನ್ನು ಜಾರಿಗೊಳಿಸಲಾಯಿತು ಎಂದು ಆರೋಗ್ಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ಯೋಜನೆಗಾಗಿ 18.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಯೋಜನೆಯು ಆಗಸ್ಟ್ 15ರಿಂದ ಪೂರ್ವಾನ್ವಯವಾಗಿ ಜಾರಿಯಾಗುವುದು.

2007: 30 ವರ್ಷಗಳ ಹಿಂದೆ ಮಂಗಳಯಾನ ಕೈಗೊಂಡಿದ್ದ ವೈಕಿಂಗ್ ಲ್ಯಾಂಡರಿನ ವರದಿಯನ್ನು ಈಗ ಜರ್ಮನಿಯ ಜಿಯೆಸ್ಸೆನ್ ವಿಶ್ವವಿದ್ಯಾನಿಲಯದ ಜೂಪ್ ಹೌಟ್ಕೂಪರ್ ಹೊಸದಾಗಿ ವಿಶ್ಲೇಷಿದ್ದು, ಮಂಗಳ ಗ್ರಹದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇರಬಹುದು, ಮಂಗಳನ ಮಣ್ಣಿನಲ್ಲಿ ಶೇಕಡಾ 0.1ರಷ್ಟು ಭಾಗದಲ್ಲಿ ಜೈವಿಕ ಅಂಶಗಳು ಇರಬಹುದು ಎಂದು ಹೇಳಿದರು. ಅಂಟಾರ್ಟಿಕಾದ ಅತಿಶೀತಲ ಪ್ರದೇಶದಲ್ಲಿ ಇರುವಷ್ಟೇ ಪ್ರಮಾಣದ ಜೀವ ಪಸೆ ಮಂಗಳನ ಮಣ್ಣಿನಲ್ಲೂ ಇದೆ. ಅಂಟಾರ್ಟಿಕಾದಲ್ಲಿ ಕೆಲ ವಿಶಿಷ್ಟ ಬ್ಯಾಕ್ಟೀರಿಯಾ ಹಾಗೂ ಶಿಲಾವಲ್ಕಗಳು ಜೀವಿಸುತ್ತಿವೆ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಿಂದ ಮಂಗಳಕ್ಕೆ ಅಥವಾ ಅಲ್ಲಿಂದ ಭೂಮಿಗೆ ಜೀವಾಣುಗಳು ಹಾರಿ ಬಂದಿರಬಹುದಾದ ಸಾಧ್ಯತೆಯಿದೆ ಎಂದು ಹೌಟ್ ಕೂಪರ್ ಅಭಿಪ್ರಾಯ ಪಟ್ಟರು. ದಶಕಗಳ ಹಿಂದೆ ಅಂಟಾರ್ಟಿಕಾದಲ್ಲಿ ಸಿಕ್ಕಿದ್ದ ಉಲ್ಕಾಶಿಲೆಯೊಂದು, ಮಂಗಳನಲ್ಲಿ ಜೀವ ಸೆಲೆ ಇದ್ದುದರ ಕುರುಹು ನೀಡಿತ್ತು.

2007: ನಕ್ಷತ್ರಗಂಗೆಗಳು, ನಕ್ಷತ್ರಗಳು ಹಾಗೂ ಕಪ್ಪು ದ್ರವ್ಯವೂ ಇಲ್ಲದ ದೈತ್ಯ ರಂಧ್ರವೊಂದು ಬ್ರಹ್ಮಾಂಡದಲ್ಲಿ ಪತ್ತೆಯಾಗಿದೆ ಎಂದು ಮಿನ್ನೆಸೊಟಾ ವಿಶ್ವವಿದ್ಯಾನಿಲಯದ ಖಗೋಳವಿಜ್ಞಾನಿಗಳ ತಂಡ ಈದಿನ ಪ್ರಕಟಿಸಿತು. ಈ ರಂಧ್ರ 100 ಕೋಟಿ ಜ್ಯೋತಿರ್ವರ್ಷಗಳಷ್ಟು ಅಗಲವಿದೆ. ಇಂತಹ ಬೃಹತ್ ರಂಧ್ರವನ್ನು ಈ ಹಿಂದೆ ಯಾರೂ ಪತ್ತೆ ಹಚ್ಚಿರಲಿಲ್ಲ. ನಾವು ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕಾಶದ ಆ ಭಾಗದಲ್ಲಿ ವಿಶಿಷ್ಟವಾದುದು ಏನೋ ಇರಬಹುದು ಎಂದು ಅಂದುಕೊಂಡಿದ್ದೆವು ಎಂದು ಖಗೋಳಶಾಸ್ತ್ರ ಪ್ರಾಧ್ಯಾಪಕ ಲಾರೆನ್ಸ್ ರುಡ್ನಿಕ್ ಹೇಳಿದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ ಮರಳಲು ಪಾಕ್ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಆ ದೇಶದಲ್ಲಿ ಕೋಲಾಹಲ ಹುಟ್ಟುಹಾಕಿತು. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರ ಸಚಿವ ಶೇರ್ ಆಫ್ಘಾನ್ ನಿಯಾಜಿ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಟಿವಿ ವಾಹಿನಿಯೊಂದರಲ್ಲಿ ಕೋರ್ಟ್ ತೀರ್ಪನ್ನು ಟೀಕಿಸಿದ್ದ ಸಚಿವ ನಿಯಾಜಿ, ನ್ಯಾಯಾಂಗವೂ ಈಗ ರಾಜಕೀಯ ಪಕ್ಷದಂತೆ ವರ್ತಿಸುತ್ತಿದೆ. ತಾವು ಈ ತೀರ್ಪನ್ನು ಒಪ್ಪುವುದಿಲ್ಲ. ನ್ಯಾಯಾಂಗ ಸಂಘರ್ಷದ ಹಾದಿ ಹಿಡಿದಿದೆ ಎಂದು ಹೇಳಿದ್ದರು.

2007: ಕರ್ನಾಟಕ ರಾಜ್ಯ ಸರ್ಕಾರ ನೀಡುವ 2006-07ನೇ ಸಾಲಿನ ಬಸವ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರೊ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಪ್ರಕಟಿಸಿದರು.

2007: ರಾಗ ಸಂಯೋಜನೆ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಅಧ್ಯಕ್ಷ ಸುನೀಲ್ ಮಿತ್ತಲ್ ಅವರು ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತು. ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ. ಮೋಹನ್ ರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಪಿ. ಶಹಾ ಹಾಗೂ ನ್ಯಾಯಮೂರ್ತಿ ಪಿ. ಜೋತಿಮಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ರೆಹಮಾನ್ ಅವರು ರಾಷ್ಟ್ರಗೀತೆಯನ್ನು `ಮೊಟಕುಗೊಳಿಸಿ ಹಾಗೂ ವಿರೂಪಗೊಳಿಸಿ' ರಾಗಸಂಯೋಜನೆ ಮಾಡಿದ ಹಾಡನ್ನು ಪ್ರಸಾರ ಮಾಡುವುದು ಹಾಗೂ ಈ ಹಾಡಿನ ಕ್ಯಾಸೆಟ್ ಮಾರಾಟ ಮಾಡುವುದನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಆಗ್ರಹಿಸಿ ಮೋಹನ್ ರಾಜ್ ಅರ್ಜಿ ಸಲ್ಲಿಸಿದ್ದರು. ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ಟೆಲ್ ಪ್ರಾಯೋಜಿಸಿದ ಈ ಕಾರ್ಯಕ್ರಮ ಹಲವು ಟಿ.ವಿ ಚಾನೆಲ್ಲುಗಳಲ್ಲಿ ಪ್ರಸಾರಗೊಂಡಿತ್ತು.

2006: ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು. ವಿಜ್ಞಾನಿಗಳ ತೀರ್ಮಾನದ ಪ್ರಕಾರ ಇನ್ನು ಮುಂದೆ ಸೌರಮಂಡಲದಲ್ಲಿ ಇರುವ ಗ್ರಹಗಳು ಎಂಟು ಮಾತ್ರ. ಅವುಗಳು ಯಾವುವು ಎಂದರೆ ಮಂಗಳ, ಬುಧ, ಭೂಮಿ, ಗುರು, ಶುಕ್ರ, ಶನಿ, ಯುರೇನಸ್ ಮತ್ತು ನೆಪ್ಚೂನ್.

2006: ಯುರೋಪಿನ ಅತ್ಯಂತ ದೊಡ್ಡ ಹಿಂದೂ ದೇವಾಲಯ ಎನ್ನಲಾದ `ವೆಂಕಟೇಶ್ವರ ದೇವಾಲಯ'ವನ್ನು ಬರ್ಮಿಂಗ್ ಹ್ಯಾಮ್ ಬಳಿ ಉದ್ಘಾಟಿಸಲಾಯಿತು. 57.3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು ತಿರುಪತಿಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. 6.6 ಮೀಟರ್ ಎತ್ತರದ ಕೃಷ್ಣನ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ.

2006: `ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ಮಂಗೋಲಿಯಾ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪೋಲ್ ಸ್ಟಾರ್' ಪ್ರದಾನ ಮಾಡಲಾಯಿತು. ಭಾರತ- ಮಂಗೋಲಿಯಾ ನಡುವಣ ಸ್ನೇಹವರ್ಧನೆಗೆೆ ನೀಡಿದ ಮೌಲಿಕ ಕಾಣಿಕೆಗಾಗಿ ಮಂಗೋಲಿಯಾದ ಉಲನ್ ಬತರಿನಲ್ಲಿ ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ಈ ಪ್ರಶಸ್ತಿಯನ್ನು ಗುರೂಜಿ ಅವರಿಗೆ ನೀಡಲಾಯಿತು.

2006: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಬಿ.ಆರ್. ವಾಡಪ್ಪಿ (92) ಧಾರವಾಡದಲ್ಲಿ ನಿಧನರಾದರು. ಸರ್ವೋದಯ ಸಾಹಿತ್ಯ ಆರಂಭದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ವಾಡಪ್ಪಿ ಅವರು ವಿಮರ್ಶೆ, ನಾಟಕ, ಭಾಷಣ, ಹರಟೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಹೊರತಂದವರು. 1991ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

2006: ಸಂಗೀತಗಾರ ವಲ್ಲಾನ್ ಚಕ್ರವರ್ತಿಲು ಕೃಷ್ಣಮಾಚಾರುಲು (84) ವಿಜಯವಾಡದ ಸ್ವಗೃಹದಲ್ಲಿ ನಿಧನರಾದರು. 1923ರಲ್ಲಿ ಕೃಷ್ಣಾ ಜಿಲ್ಲೆ ಜಗ್ಗಯ್ಯ ಪೇಟೆಯಲ್ಲಿ ಜನಿಸಿದ ಅವರು ಆಕಾಶವಾಣಯಲ್ಲಿ ಮೂರೂವರೆ ದಶಕ ಕಾಲ ಅತ್ಯುನ್ನತ ಶ್ರೇಣಿಯ ಸಂಗೀತ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ತೆಲುಗು ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಅವರನ್ನು ಆಂಧ್ರಪ್ರದೇಶ ಸಂಗೀತ ನಾಟಕ ಅಕಾಡೆಮಿಯು `ಗಾನಕಲಾ ಪ್ರಪೂರ್ಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

1995: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 95' ಅನ್ನು ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು.

1974: ಫಕ್ರುದ್ದೀನ್ ಆಲಿ ಅಹಮದ್ ಅವರು ಭಾರತದ ಐದನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1971: ಅಜಿತ್ ವಾಡೇಕರ್ ನೇತೃತ್ವದಲ್ಲಿ ಭಾರತವು ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ತನ್ನ ಮೊತ್ತ ಮೊದಲ ಜಯವನ್ನು (1-0) ಗಳಿಸಿತು. ಲೆಗ್ ಸ್ಪಿನ್ನರ್ ಚಂದ್ರಶೇಖರ್ ಅವರು ಈ ಜಯದ `ಹೀರೋ' ಆಗ್ದಿದರು.

1969: ವರಾಹಗಿರಿ ವೆಂಕಟಗಿರಿ ಅವರು ಭಾರತದ ನಾಲ್ಕನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1968: ಖ್ಯಾತ ಭೂಗರ್ಭ ಶಾಸ್ತ್ರಜ್ಞ ರಾಧಾ ಕಮಲ್ ಮುಖರ್ಜಿ ನಿಧನರಾದರು.

1955: ಡಾ. ರಾಮಮನೋಹರ ಲೋಹಿಯಾ ಅವರು ಭಾರತೀಯ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1952: ಸೋಷಿಯಲಿಸ್ಟ್ ಪಾರ್ಟಿ ಮತ್ತು ಕೃಷಿಕ್ ಮಜ್ದೂರ್ ಪಾರ್ಟಿ ವಿಲೀನ.

1932: ಅಮೇಲಿಯಾ ಈಯರ್ ಹಾರ್ಟ್ ಅವರು ಅಮೆರಿಕದ ಮೇಲಿನಿಂದ ನಿಲುಗಡೆ ರಹಿತವಾಗಿ ವಿಮಾನಯಾನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಲಾಸ್ ಏಂಜೆಲಿಸ್ ನಿಂದ ನ್ಯೂಜೆರ್ಸಿಯನೆವಾರ್ಕಿಗೆ 19 ಗಂಟೆಗಳ ಕಾಲ ಪ್ರಯಾಣಿಸಿದರು.

1924: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1911: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ವೀಣಾದಾಸ್ ಜನನ.

1903: ಕನ್ನಡ ಸಾಹಿತ್ಯಾರಾಧಕ, ಏಕೀಕರಣ ಹೋರಾಟಗಾರ , ಕರ್ನಾಟಕ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ (1903-2004) ಅವರು ನಿಟ್ಟೂರು ಶಾಮಣ್ಣ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ 1963ರಲ್ಲಿ ನಿವೃತ್ತರಾದ ಬಳಿಕ ಅದೇ ವರ್ಷ ಹಂಗಾಮೀ ರಾಜ್ಯಪಾಲರಾಗಿ, ನಂತರ ಭಾರತ ಸರ್ಕಾರದ ಪ್ರಥಮ ವಿಜಿಲೆನ್ಸ್ ಕಮೀಷನರ್ ಆಗಿ ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚನೆಗೆ ಕಾರಣರಾಗಿ 1968ರಲ್ಲಿ ನಿವೃತ್ತರಾದರು. ಸತ್ಯಶೋಧನಾ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದ ಅವರು ಶಿವರಾಮ ಕಾರಂತರ `ಬಾಲ ಪ್ರಪಂಚ'ಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ, ಆ ದಿನಗಳಲ್ಲೇ ಅದರ ಮುದ್ರಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಅವರು 2004ರ ಆಗಸ್ಟ್ 12ರಂದು ನಿಧನರಾದರು.

1891: ಚಲನಚಿತ್ರ ಕ್ಯಾಮೆರಾ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಗೆ ಇದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ನೀಡಲಾಯಿತು.

1690: ಜಾಬ್ ಚಾರ್ನಾಕ್ ಅವರು 1690ರಲ್ಲಿ ಈದಿನ ಕೋಲ್ಕತಾ (ಅಂದಿನ ಕಲ್ಕತ್ತಾ) ನಗರವನ್ನು ಸ್ಥಾಪಿಸಿದರು. ಹಾಗಾಗಿ ಈ ದಿನವನ್ನು ಕೋಲ್ಕತಾ ದಿನ ಎಂದು ಘೋಷಿಸಲಾಯಿತು. 2000ದಲ್ಲಿ ಇದೇ ದಿನ ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ 310ನೇ ಕೋಲ್ಕತಾ ಜನ್ಮದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಕೋಲ್ಕತಾ ನಗರ ಕುರಿತ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.

1608: ಮೊದಲ ಇಂಗ್ಲಿಷ್ ರಾಯಭಾರಿ ಸೂರತ್ ಗೆೆ ಆಗಮಿಸಿದ.

1600: ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಹಡಗು `ಹೆಕ್ಟರ್' ಸೂರತ್ ಬಂದರಿಗೆ ಆಗಮಿಸಿತು.

ಕ್ರಿ.ಶ.79: ವೆಸೂವಿಯಸ್ ಜ್ವಾಲಾಮುಖಿ ಬಾಯ್ದೆರೆದು ಪಾಂಪೆ ಮತ್ತು ಸ್ಟಾಬೀ ಪಟ್ಟಣಗಳನ್ನು ಬೂದಿಯ ಅಡಿಯಲ್ಲಿ ಮುಳುಗಿಸಿದರೆ, ಹರ್ಕ್ಯುಲೇನಿಯಮ್ ನಗರವನ್ನು ಲಾವಾರಸದ ಕೆಸರಿನಲ್ಲಿ ಮುಳುಗಿಸಿತು. 1631ರ ಡಿಸೆಂಬರ್ 16ರಂದು ಜ್ವಾಲಾಮುಖಿ ಮತ್ತೊಮ್ಮೆ ಭಾರೀ ಪ್ರಮಾಣದಲಿ ಬಾಯ್ದೆರೆದು 3000 ಜನರನ್ನು ಬಲಿ ತೆಗೆದುಕೊಂಡಿತು.

No comments:

Post a Comment