Showing posts with label Asian Games 2018. Show all posts
Showing posts with label Asian Games 2018. Show all posts

Sunday, December 2, 2018

ನೂತನ ಸಿಇಸಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ನೂತನ ಸಿಇಸಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ನವದೆಹಲಿ:  ಸುನೀಲ್ ಅರೋರಾ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ೨೦೧೮ ರ ಡಿಸೆಂಬರ್ ೨ ರ ಭಾನುವಾರ ಅಧಿಕಾರ ವಹಿಸಿಕೊಂಡರು. ಹಾಲಿ ಸಿಇಸಿ, ಓಂ ಪ್ರಕಾಶ್ ರಾವತ್ ಅವರು ೨೦೧೮ ರ ಡಿಸೆಂಬರ್ ೧ ರ ಶನಿವಾರ  ನಿವೃತ್ತರಾಗಿದ್ದರು.
೨೦೧೯ ರ ಸಾರ್ವತ್ರಿಕ ಚುನಾವಣೆಯನ್ನು ಚುನಾವಣಾ ಆಯೋಗವು  ಅರೋರಾ ನೇತೃತ್ವದಲ್ಲಿ ನಿರ್ವಹಿಸಲಿದೆ. ಅಲ್ಲದೆ  ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭೆ ಚುನಾವಣೆಗಳು ಮುಂದಿನ ವರ್ಷ ನಡೆಯಲಿದೆ.

ಸಿಇಸಿ ಅಥವಾ ಇಸಿ ಅವರ ಅಧಿಕಾರಾವಧಿ 6 ವರ್ಷ  ಅಥವಾ ಅವರಿಗೆ ೬೫ ವರ್ಷ ವಯಸ್ಸು ಆಗುವವರೆಗೆ ಇರುತ್ತದೆ. ಹಿರಿಯ ಚುನಾವಣಾ ಆಯುಕ್ತರನ್ನು  ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗುತ್ತದೆ.
ನಿವೃತ್ತ ಅಧಿಕಾರಿ ಅರೋರಾ ಅವರನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು. ಅದಕ್ಕೆ ಮುನ್ನ ಅವರು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ, ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು.

ರಾಜಸ್ಥಾನ್ ಕೇಡರಿನ ೧೯೮೦ ರ ತಂಡದ ಐಎಎಸ್ ಅಧಿಕಾರಿಯಾದ ಅರೋರಾ ಹಣಕಾಸು, ಜವಳಿ ಮತ್ತು ಯೋಜನಾ ಆಯೋಗದಂತಹ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು.

ಅವರು ೧೯೯೯-೨೦೦೨ ರಿಂದ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಶನ್) ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮತ್ತು ಐದು ವರ್ಷಗಳ ಕಾಲ ಭಾರತೀಯ  ಏರ್ ಲೈನ್ಸನಿನ  ಮುಖ್ಯ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜಸ್ಥಾನದಲ್ಲಿ, ಧೋಲ್ಪುರ್,  ಆಳ್ವಾರ್, ನಗೌರ್ ಮತ್ತು ಜೋಧ್ ಪುರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಅವರು ೧೯೯೩-೧೯೯೮ರ ಅವಧಿಯಲ್ಲಿ ಮುಖ್ಯಮಂತ್ರಿಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯಮಂತ್ರಿಗಳ  ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (ಐಪಿಆರ್), ಕೈಗಾರಿಕೆಗಳು ಮತ್ತು ಹೂಡಿಕೆ ಇಲಾಖೆಗಳನ್ನೂ ನಿರ್ವಹಿಸಿದ್ದರು.

Thursday, August 23, 2018

ಭಾರತಕ್ಕೆ 5 ನೇ ಚಿನ್ನ;ಇತಿಹಾಸ ಸೃಷ್ಟಿಸಿದ ರೋಯಿಂಗ್‌ ತಂಡ


ಭಾರತಕ್ಕೆ 5 ನೇ ಚಿನ್ನ; ಇತಿಹಾಸ  ಸೃಷ್ಟಿಸಿದ ರೋಯಿಂಗ್‌ ತಂಡ 

ಜಕಾರ್ತ: ಏಷ್ಯನ್ ಕ್ರೀಡಾಕೂಟದಲ್ಲಿ ರೋಯಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ತಂಡ 24 ಆಗಸ್ಟ್ 2018ರ ಶುಕ್ರವಾರ ಇತಿಹಾಸ ಸೃಷ್ಟಿಸಿತು. ಈದಿನ ನಡೆದ ಫೈನಲ್‌ನಲ್ಲಿ ರೋಯಿಂಗ್‌ ತಂಡ ಇದೇ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿತು.

ಸಾವರ್ನ್ ಸಿಂಗ್‌,ದತ್ತು ಬಾಬನ್‌ ಭೋಕನಾಲ್‌, ಓಂ ಪ್ರಕಾಶ್‌  ಮತ್ತು ಸುಖ್‌ಮೀತ್‌ ಸಿಂಗ್‌ ಅವರ ರೋಯಿಂಗ್‌ ತಂಡ 6:17:13 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

2010 ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಜರಂಗ್‌ ಲಾಲ್‌ ಥಕ್ಕರ್‌ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.


ಭಾರತ ಈವರೆಗೆ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ 21 ಪದಕಗಳನ್ನು ತನ್ನದಾಗಿಸಿಕೊಂಡಿದೆ. 

Monday, August 20, 2018

ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನ: ಇತಿಹಾಸ ಸೃಷ್ಟಿಸಿದ ವಿನೇಶ್ ಪೊಗತ್


ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನ:
 ಇತಿಹಾಸ
ಸೃಷ್ಟಿಸಿದ ವಿನೇಶ್ ಪೊಗತ್

ಜಕಾರ್ತ: ಜಕಾರ್ತದಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ೫೦ ಕಿ.ಗ್ರಾ. ವರ್ಗದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿನೇಶ್ ಪೊಗತ್ ಅವರು 20 ಆಗಸ್ಟ್ 2018ರ ಸೋಮವಾರ ಇತಿಹಾಸ ನಿರ್ಮಿಸಿದರು.

ವಿನೇಶ್ ಪೊಗತ್ ಅವರು ಕಠಿಣ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜಪಾನಿನ ಯೂಕಿ ಇರೀ ಅವರನ್ನು ಫೈನಲ್ ನಲ್ಲಿ ೬-೨ ಅಂತರದಲ್ಲಿ ಪರಾಭವಗೊಳಿಸಿದರು.

೨೩ರ ಹರೆಯದ ಹರಿಯಾಣದ ಫೈರ್ ಬ್ರ್ಯಾಡ್ ಕುಸ್ತಿಪಟು ವಿನೇಶ್ ಪೊಗತ್ ಅವರ ಪಾಲಿಗೆ ಇದು ಬಹುದೊಡ್ಡ ಸಾಧನೆ. ಪೊಗತ್ ಅವರು ಹರಿಯಾಣದ ಖ್ಯಾತ ಡಂಗಲ್ ಖ್ಯಾತಿಯ ಪೊಗತ್ ಕುಟುಂಬಕ್ಕೆ ಸೇರಿದವರು.

ಎರಡು ವರ್ಷಗಳ ಹಿಂದೆ ಒಲಿಂಪಿಕ್ಸ್ ನಲ್ಲಿ ಸೋತಾದ ಅತ್ತಿದ್ದ ವಿನೇಶ್ ಪೊಗತ್ ಅವರು ಈದಿನ ಮೊದಲು ಚೀನಾದ  ಯನಾನ್ ಸುನ್ ಅವರನ್ನು ಸೋಲಿಸುವ ಮೂಲಕ ರಿಯೋದಲ್ಲಿ ತಾವು ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡರು.