Saturday, August 25, 2018

ಇಂದಿನ ಇತಿಹಾಸ History Today ಆಗಸ್ಟ್ 25

ಇಂದಿನ ಇತಿಹಾಸ  History Today  ಆಗಸ್ಟ್ 25 

2018: ನವದೆಹಲಿ: ದಾಳಿ ಯೋಜನೆಗಳು, ಸಂಶೋಧನೆ, ರಕ್ಷಣೆ ಮತ್ತು ಕಣ್ಗಾವಲು ಕಾರ್ಯಾಚರಣೆಗಳಲ್ಲಿ  ಬಳಸಬಹುದಾದ ೧೧೧ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ೨೧,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನೌಕಾಪಡೆಗಾಗಿ ದಾಸ್ತಾನು ಮಾಡಲು ಒಪ್ಪಿಗೆ ನೀಡುವ ಮಹತ್ವದ ನಿರ್ಧಾರವನ್ನು ರಕ್ಷಣಾ ಸಚಿವಾಲಯವು  ಕೈಗೊಂಡಿತು. ಹೆಲಿಕಾಪ್ಟರ್ ಗಳ ಸಂಗ್ರಹ ಸೇರಿದಂತೆ ಒಟ್ಟು ೪೬,೦೦೦ ಕೋಟಿ ರೂಪಾಯಿ ಮೌಲ್ಯದ ಉಪಕರಣಗಳ ದಾಸ್ತಾನು ಪ್ರಸ್ತಾವಗಳಿಗೆ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಯುದ್ದೋಪಕರಣಗಳ ದಾಸ್ತಾನಿಗೆ ಸಂಬಂಧಿಸಿದಂತೆ ಸಚಿವಾಲಯದ ಉನ್ನತ ನಿರ್ಧಾರ ಸಮಿತಿಯಾಗಿರುವ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.  ‘ಡಿಎಸಿಯು ೨೧,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ನೌಕಾಪಡೆಗಾಗಿ ೧೧೧ ಯುಟಿಲಿಟಿ ಹೆಲಿಕಾಪ್ಟರ್ ಗಳ ಸಂಗ್ರಹಕ್ಕೆ ಒಪ್ಪಿಗೆ ನೀಡಿದೆ ಎಂದು ಹಿರಿಯ ಅಧಿಕಾರಿ ನುಡಿದರು. ಮಂಡಳಿಯು ಸುಮಾರು ೨೪,೮೭೯ ಕೋಟಿ ರೂಪಾಯಿ ಮೊತ್ತದ ಇತರ ದಾಸ್ತಾನು ಪ್ರಸ್ತಾವಗಳಿಗೂ ಮಂಜೂರಾತಿ ನೀಡಿದೆ. ಇವುಗಳಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ಅಭಿವೃದ್ಧಿ ಪಡಿಸಲಾಗಿರುವ ಎತ್ತಿಕೊಂಡು ಒಯ್ಯಬಹುದಾದ ಅತ್ಯಾಧುನಿಕ ೧೫೫ ಎಂಎಂನ ೧೫೦ ಫಿರಂಗಿಗಳನ್ನು ಸೇನೆಗಾಗಿ ಅಂದಾಜು ,೩೬೪ ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗ್ರಹಿಸುವ ಪ್ರಸ್ತಾಪವೂ ಸೇರಿದೆ ಎಂದು ಅಧಿಕಾರಿ ಹೇಳಿದರು ಫಿರಂಗಿಗಳ ವಿನ್ಯಾಸವನ್ನು ದೇಶೀಯವಾಗಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ರೂಪಿಸಿದ್ದು, ಉತ್ಪಾದನಾ ಸಂಸ್ಥೆಗಳು ಇವುಗಳನ್ನು ನಿರ್ಮಾಣ ಮಾಡುವುವುನೌಕಾ ಬಳಕೆಯ ಹೆಲಿಕಾಪ್ಟರ್ ಗಳ ದಾಸ್ತಾನು, ಮಹತ್ವಾಕಾಂಕ್ಷೆಯ ವ್ಯೂಹಾತ್ಮಕ ಪಾಲುದಾರಿಕೆಯ ಮಾದರಿಯಲ್ಲಿನ ಮೊದಲ ಯೋಜನೆಯಾಗಿದ್ದು, ಆಯ್ದ ಸೇನಾ ವೇದಿಕೆಗಳನ್ನು ಭಾರತದಲ್ಲಿ ಪಾಲುದಾರಿಕೆ ನೆಲೆಯಲ್ಲಿ ನಿರ್ಮಿಸುವ ನಿಟ್ಟಿನಲ್ಲಿ  ಖಾಸಗಿ ಕಂಪೆನಿಗಳನ್ನು ಸೆಳೆಯಲೂ ಅವಕಾಶ ಕಲ್ಪಿಸಿದೆ. ವಿದೇಶೀ ರಕ್ಷಣಾ ತಯಾರಕರಿಗೂ ಪಾಲುದಾರಿಕೆ ಅವಕಾಶವನ್ನು ಇದು ನೀಡಲಿದೆ. ನೌಕಾ ಬಳಕೆಯ ಹೆಲಿಕಾಪ್ಟರ್ ಗಳನ್ನು ದಾಳಿ ಯೋಜನೆಗಳು, ಸಂಶೋಧನೆ, ರಕ್ಷಣೆ ಮತ್ತು ಕಣ್ಗಾವಲು ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಮಂಡಳಿಯು ೨೪ ನೌಕಾ ಬಹುಪಾತ್ರದ ಹೆಲಿಕಾಪ್ಟರ್ ಗಳ (ಎನ್ ಎಂ ಆರ್ ಎಚ್) ಸಂಗ್ರಹಕ್ಕೂ ಒಪ್ಪಿಗೆ ನೀಡಿದೆ. ಹೆಲಿಕಾಪ್ಟರುಗಳು ಜಲಾಂತರ್ಗಾಮಿ ನಿರೋಧಿ ಸಮರ ಸಾಮರ್ಥ್ಯವನ್ನು ಹೊಂದಿವೆ. ಮುಂಚೂಣಿಯ ವಿಮಾನವಾಹಕಗಳು, ನಾಶಕಗಳು ಯುದ್ಧನಾವೆ ಮತ್ತು ಕಾರ್ವೆಟ್ಗಳಲ್ಲಿ ನೌಕಾ ಬಹುಪಾತ್ರ ಹೆಲಿಕಾಪ್ಟರುಗಳು ಅವಿಭಾಜ್ಯ ಅಂಗಗಳಾಗಿರುತ್ತವೆ.

2018: ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ೧೯೮೪ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗ, ಆಗಿನ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ಸಂಭವಿಸಿದ, ೩೦೦೦ ಮಂದಿಯ ಸಾವಿಗೆ ಕಾರಣವಾದ ಸಿಖ್ ವಿರೋಧಿ ದಂಗೆಗಳಲ್ಲಿ ಕಾಂಗ್ರೆಸ್ ಪಕ್ಷವು ಶಾಮೀಲಾಗಿಲ್ಲ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂಗ್ಲೆಂಡಿನಲ್ಲಿ ಹೇಳಿಕೆ ನೀಡಿದ್ದು ವಿವಾದದ ಸುಳಿಗೆ ಸಿಲುಕಿದರು. ತತ್ ಕ್ಷಣವೇ ಕಾಂಗ್ರೆಸ್ ಪಕ್ಷದ ಪ್ರಮುಖರು ಪಕ್ಷಾಧ್ಯಕ್ಷರ ಬೆಂಬಲಕ್ಕೆ ಬಂದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ರಾಹುಲ್ ರಕ್ಷಣೆಗೆ ದಾವಿಸಿ, ’೧೯೮೪ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಅತ್ಯಂತ ಭೀಕರ ಘಟನೆ ಸಂಭವಿಸಿತು ಅದಕ್ಕಾಗಿ ಡಾ. ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ್ದಾರೆ. ಅದಕ್ಕೆ ನೀವು ರಾಹುಲ್ ಗಾಂಧಿ ಅವರನ್ನು ಹೊಣೆ ಮಾಡುವಂತಿಲ್ಲ. ಅವರು ಆಗ ಕೇವಲ ೧೩ ಅಥವಾ ೧೪ರ ಹರೆಯದ ಹುಡುಗ. ಅವರು ಯಾರನ್ನೂ ದೋಷಮುಕ್ತರನ್ನಾಗಿ ಮಾಡಿಲ್ಲ ಎಂದು ಪ್ರತಿಪಾದಿಸಿದರುಪಕ್ಷದ ಅಧ್ಯಕ್ಷರಿಗೆ ಕೇಳಲಾದ ಪ್ರಶ್ನೆಯೋಜಿತವಾದದ್ದು.   ’ಶತ್ರುತ್ವ ಮತ್ತುಯೋಜಿತ ಉದ್ದೇಶದಿಂದ ಕೇಳಲಾದ, ೧೯೮೪ರ ದಂಗೆಗಳಲ್ಲಿ ಕಾಂಗ್ರೆಸ್ ಪಕ್ಷವು ಶಾಮೀಲಾಗಿತ್ತೆ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಅವರುಅದು ತಪ್ಪು ಹೇಳಿಕೆ. ಕಾಂಗ್ರೆಸ್ ದಂಗೆಗಳಲ್ಲಿ ಶಾಮೀಲಾಗಿಲ್ಲ. ಏನು ಘಟಿಸಿತ್ತೋ ಅದು ಅತ್ಯಂತ ಬೇಸರದ ಘಟನೆ. ಅದು ಅತ್ಯಂತ ದುರದೃಷ್ಟಕರ ಎಂದು ಉತ್ತರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದರು. ‘ಕಾಂಗ್ರೆಸ್ ಪಕ್ಷವು ಘಟನೆಯನ್ನು ಖಂಡಿಸಿದೆ ಮತ್ತು ಏನು ಘಟಿಸಿತ್ತೋ ಅದನ್ನು ನಮ್ಮ ನಾಯಕರು ಖಂಡಿಸಿದ್ದಾರೆ ಮತ್ತು ನಾವು ದಂಗೆಯಲ್ಲಿ ತೊಂದರೆಗೆ ಒಳಗಾದವರ ಪರ ನಿಂತಿದ್ದೇವೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ನಾವು ನಂಬುತ್ತೇವೆ ಎಂದು ಪಕ್ಷದ ಹೇಳಿಕೆ ತಿಳಿಸಿತು. ಪತ್ರಿಕಾ ಸಂಸ್ಥೆಯೊಂದರ ಪ್ರಶ್ನೆಗೆ ಉತ್ತರವಾಗಿ  ’ನನ್ನ ಮನಸ್ಸಿನಲ್ಲಿ ಬಗ್ಗೆ (೧೯೮೪ರ ದಂಗೆಗಳು) ಯಾವುದೇ ಗೊಂದಲಗಳಿಲ್ಲ. ಅದೊಂದು ದುರಂತ, ಅದೊಂದು ನೋವಿನ ಅನುಭವ. ಕಾಂಗ್ರೆಸ್ ಪಕ್ಷವು ಅದರಲ್ಲಿ ಶಾಮೀಲಾಗಿದೆ ಎಂದು ನೀವು ಹೇಳುತ್ತೀರಿ. ನಾನು ಅದನ್ನು ಒಪ್ಪುವುದಿಲ್ಲ. ಖಂಡಿತವಾಗಿ ಹಿಂಸೆ ಸಂಭವಿಸಿತ್ತು. ಖಂಡಿತವಾಗಿ ದುರಂತ ಸಂಭವಿಸಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದರು. ಬಿಜೆಪಿ ಮತ್ತು ಅಕಾಲಿದಳ ಹೇಳಿಕೆಗಾಗಿ ಕಾಂಗ್ರೆಸ್ ಮುಖ್ಯಸ್ಥರ ವಿರುದ್ಧ ವಾಕ್ ಪ್ರಹಾರ ನಡೆಸಿದ್ದವು. ’ಪಕ್ಷವು ಶಾಮೀಲಾಗಿಲ್ಲ ಎಂದಾದರೆ ಮನಮೋಹನ್ ಸಿಂಗ್ ಅವರು ಕ್ಷಮೆ ಯಾಚಿಸಿದ್ದು ಏಕೆ ಎಂದು ಉಭಯ ಪಕ್ಷಗಳೂ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದವು.  ವರದಿಗಾರರ ಜೊತೆ ಮಾತನಾಡಿದ ಅಕಾಲಿದಳ ನಾಯಕ ಮತ್ತು ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರುದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಜಗದೀಶ್ ಟೈಟ್ಲರ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದೇಕೆ? ಎಂದು ಪ್ರಶ್ನಿಸಿದ್ದರು.. ’ಸಂದರ್ಶನ ಒಂದರಲ್ಲಿ ಟೈಟ್ಲರ್ ಅವರು ತಾವು ಮತ್ತು ರಾಜೀವ್ (ಗಾಂಧಿ) ಅವರು ಕೇಂದ್ರ ದೆಹಲಿಗೆ ತೆರಳಿದೆವು... ತಾನು ೧೦೦ಕ್ಕೂ ಹೆಚ್ಚು ಸಿಕ್ಖರನ್ನು ಕೊಂದು ಹಾಕಿದ್ದು, ನೀವು (ರಾಹುಲ್ ಗಾಂಧಿ) ಎಸ್ ಐಟಿ ರಚಿಸಲಾಗಿದೆ ಎಂದು ನೀವು ಹೆದರುತ್ತಿದ್ದೀರಾ? ಎಂದು ಕೇಳಿದ್ದರು ಎಂದು ಬಾದಲ್ ನೆನಪಿಸಿದರು. ಬಾದಲ್ ಅವರ ಪಕ್ಷ ಸಹೋದ್ಯೋಗಿ ಬಿಕ್ರಮ್ ಸಿಂಗ್ ಮಜೀಥಿಯಾ ಅವರು, ರಾಹುಲ್ ಗಾಂಧಿಯವರು ಆಗದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ ಎಂದು ಹೇಳಿದ್ದರೆಂದು ನೆನಪು ಮಾಡಿದ್ದಾರೆ. ದೆಹಲಿಯ ವಿವಿಧ ಭಾಗಗಳಲ್ಲಿ ಹತ್ಯಾಕಾಂಡ ಎಷ್ಟು ಯಶಸ್ವಿಯಾಗಿತ್ತು ಎಂದು ಪರಿಶೀಲಿಸಲು ತಾವು ನಡೆಸಿದ ಓಡಾಟಗಳಲ್ಲಿ ರಾಜೀವ್ ಗಾಂಧಿ ತನ್ನ ಜೊತೆಗಿದ್ದರು ಎಂಬುದಾಗಿಯೂ ಜಗದೀಶ್ ಟೈಟ್ಲರ್ ಹೇಳಿದ್ದರು ಎಂದು ಮಜೀಥಿಯಾ ತಿಳಿಸಿದ್ದರು.  ‘ರಾಹುಲ್ ಗಾಂಧಿ ಅವರು ತಮಗಿದ್ದಿರಬಹುದಾದ ಯಾವುದಾದರೂ ನಾಯಕತ್ವ ಗುಣವನ್ನೂ ಈಗ ಕಳೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದರು. ವಾಜಪೇಯಿ ಸರ್ಕಾರ ರಚಿಸಿದ್ದ ನಾನಾವತಿ ಆಯೋಗವು ೨೦೦೫ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು ಹಲವಾರು ಸ್ಥಳೀಯ ಕಾಂಗ್ರೆಸ್ ನಾಯಕರ ಮೇಲೆ ದೋಷಾರೋಪಣೆ ಮಾಡಿತ್ತು. ಆದರೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರ ನೇರ ಶಾಮೀಲನ್ನು ತಳ್ಳಿಹಾಕಿತ್ತು೧೯೮೪ರ ದಂಗೆಯ ೧೮೬ ಪ್ರಕರಣಗಳ ತನಿಖೆ ನಡೆಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಹೊಸದಾಗಿ ರಚಿಸಲಾದ ಎಸ್ ಐಟಿ ಮುಖ್ಯಸ್ಥರಾಗಿ ನ್ಯಾಯಮೂರ್ತಿ ಧೀಂಗ್ರ (ನಿವೃತ್ತ) ಅವರನ್ನು ನೇಮಿಸಲಾಗಿತ್ತು. ಲಂಡನ್ನಿನಲ್ಲಿ ಪತ್ರಿಕಾ ಸಂಸ್ಥೆಯ ಸಂದರ್ಶನ ಬಳಿಕ ರಾಹುಲ್ ಗಾಂಧಿಯವರು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ  ನಡೆದ ಸಂವಹನ ಕಾಲದಲ್ಲಿ  ಸಿಖ್ ವಿರೋಧಿ ದಂಗೆಗಳು ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ’ಮನಮೋಹನ್ ಸಿಂಗ್ ಅವರು ಮಾತನಾಡಿದಾಗ ಅವರು ನಮ್ಮೆಲ್ಲರ ಪರವಾಗಿಯೇ ಮಾತನಾಡಿದ್ದಾರೆ. ನಾನು ಮೊದಲೇ ಹೇಳಿದಂತೆ, ನಾನು ಕೂಡಾ ಹಿಂಸೆಯ ಬಲಿಪಶು ಮತ್ತು ನನಗೆ ಭಾವನೆ ಅರ್ಥವಾಗುತ್ತದೆ ಎಂದು ರಾಹುಲ್ ಉತ್ತರಿಸಿದರು.  ‘ಆದ್ದರಿಂದ, ನಾನು ಭೂಮಿಯಲ್ಲಿ ಯಾರದೇ ವಿರುದ್ಧ, ನಡೆಯುವ ಯಾವುದೇ ರೀತಿಯ ಹಿಂಸೆಯ ವಿರೋಧಿ. ಯಾರಿಗಾದರೂ ನೋವಾಗುತ್ತಿರುವುದು ಕಂಡರೆ ನನಗೆ ತಳಮಳವಾಗುತ್ತದೆ. ನಾನು ಅದನ್ನು ಶೇಕಡಾ ೧೦೦ರಷ್ಟು ಖಂಡಿಸುತ್ತೇನೆ. ಮತ್ತು  ಇಂತಹ ಯಾವುದೇ ಹಿಂಸಾಚಾರಗಳಲ್ಲಿ ಶಾಮೀಲಾಗುವವರಿಗೆ ಶೇಕಡಾ ೧೦೦ರಷ್ಟು ಶಿಕ್ಷೆಯಾಗಬೇಕು. ಇದು ಸುಸ್ಪಷ್ಟ  ಎಂದು ರಾಹುಲ್ ಹೇಳಿದ್ದರು.  ಸ್ವತಃ ಹಿಂಸಾಚಾರಕ್ಕೆ ತುತ್ತಾದ ಅನುಭವ ಇಲ್ಲದ ಜನ ಹಿಂಸಾಚಾರ ಎಂದರೆ ಸಿನಿಮಾಗಳಲ್ಲಿ ಕಾಣುವಂತಹುದು ಎಂದು ಭಾವಿಸುತ್ತಾರೆ. ಆದರೆ ಇದು ಅದಲ್ಲ. ಅತ್ಯಂತ ಪ್ರೀತಿಪಾತ್ರರ ಕೊಲೆಯಾಗುವುದನ್ನು ನಾನು ಕಂಡಿದ್ದೇನೆ. ನನ್ನ ತಂದೆಯನ್ನು (ರಾಜೀವ್ ಗಾಂಧಿ) ಕೊಂದ ವ್ಯಕ್ತಿಯ (ಪ್ರಭಾಕರನ್) ಕೊಲೆಯಾಗುವುದನ್ನೂ ನಾನು ನೋಡಿದ್ದೇನೆ. ಜಾಫ್ನಾದ ಸಮುದ್ರದಂಡೆಯಲ್ಲಿ ಸತ್ತು ಮಲಗಿದ್ದ ಪ್ರಭಾಕರನ್ನನ್ನು ಅವನು ಇದ್ದ ರೀತಿಗಾಗಿ ಅವಮಾನಿಸುವುದನ್ನು ಕಂಡಾಗ ನನಗೆ ಅವರ ಬಗ್ಗೆ ಬೇಸರವಾಗಿದೆ, ಏಕೆಂದರೆ ಅವನ ಜಾಗದಲ್ಲಿ ನನ್ನ ತಂದೆ ಇದ್ದುದನ್ನು ಮತ್ತು ನನ್ನ ಜಾಗದಲ್ಲಿ ಅವನ ಮಕ್ಕಳು ಇದ್ದುದನ್ನು ನಾನು ಕಲ್ಪಿಸಿದ್ದೆ ಎಂದು ರಾಹುಲ್ ಹೇಳಿದ್ದರು. ‘ಆದ್ದರಿಂದ ನೀವು ಹಿಂಸೆಗೆ ಗುರಿಯಾದಾಗ, ನೀವು ಅದನ್ನು ಅರ್ಥ ಮಾಡಿಕೊಂಡಾಗ ಅದು ನಿಮ್ಮ ಮೇಲೆ ಬೇರೆಯೇ ರೀತಿಯ ಪ್ರಭಾವವನ್ನು ಬೀರುತ್ತದೆ. ಬಹಳಷ್ಟು ಮಂದಿ ನಿಜವಾಗಿ ಹಿಂಸಾಚಾರವನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಅದು ಅತ್ಯಂತ ಭೀಕರ ವಿಚಾರ ಎಂದು ಅವರು ಹೇಳಿದ್ದರುಸಜ್ಜನ್ ಕುಮಾರ್ ಸೇರಿದಂತೆ ಕೆಲವು ಕಾಂಗ್ರೆಸ್ ರಾಜಕಾರಣಿಗಳು ಹತ್ಯಾಕಾರ್ಯದಲ್ಲಿ ನಿರತವಾಗಿದ್ದ ಗುಂಪುಗಳ ನೇತೃತ್ವ ವಹಿಸಿದ್ದರು ಎಂದು ಆಪಾದಿಸಲಾಗಿತ್ತು. ಆದರೆ ಅವರು ಆಪಾದನೆಗಳನ್ನು ನಿರಾಕರಿಸಿದ್ದರು.

2018: ಇಸ್ಲಾಮಾಬಾದ್: ರಾಷ್ಟ್ರದ ಅಧ್ಯಕ್ಷರು, ಪ್ರಧಾನಿ ಸೇರಿದಂತೆ ನಾಯಕರು ಮತು ಸರ್ಕಾರಿ ಅಧಿಕಾರಿಗಳ ಮೊದಲ ದರ್ಜೆ ವಿಮಾನಯಾನಕ್ಕೆ ಸರ್ಕಾರಿ ನಿಧಿಯಿಂದ ವಿವೇಚನಾಧಿಕಾರ ಬಳಸಿ ವೆಚ್ಚ ಮಾಡುವುದರ ಮೇಲೆ ನೂತನ ಸರ್ಕಾರ ನಿಷೇಧ ವಿಧಿಸಿತು. ಮಿತವ್ಯಯ ಕ್ರಮಗಳ ಅನ್ವಯ ನಿರ್ಧಾರ ಕೈಗೊಳ್ಳಲಾಯಿತು. ಮಿತವ್ಯಯ ಸಂಬಂಧಿತ ನಿರ್ಧಾರಗಳನ್ನು ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ವಾರ್ತಾ ಸಚಿವ ಫವದ್ ಚೌಧರಿ ಅವರು ಈದಿನ ಇಲ್ಲಿ ತಿಳಿಸಿದರು. ಅಧ್ಯಕ್ಷರು, ಪ್ರಧಾನಿ, ಮುಖ್ಯ ನ್ಯಾಯಮೂರ್ತಿ, ಸೆನೆಟ್ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿಯ ಸಭಾಧ್ಯಕ್ಷ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಉನ್ನತ ಸರ್ಕಾರಿ ಅಧಿಕಾರಿಗಳು ಕ್ಲಬ್/ ಬಿಸಿನೆಸ್ ದರ್ಜೆಯಲ್ಲೇ ವಿಮಾನಯಾನ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಚೌಧರಿ ಮಾಧ್ಯಮಗಳಿಗೆ ತಿಳಿಸಿದರು. ಸೇನಾ ಮುಖ್ಯಸ್ಥರಿಗೆ ಪ್ರಥಮ ದರ್ಜೆಯಲ್ಲಿ ವಿಮಾನಯಾನ ಮಾಡಲು ಅವಕಾಶ ನೀಡಲಾಗುವುದಿಲ್ಲ. ಅವರು ಯಾವಾಗಲೂ ಬಿಸಿನೆಸ್ ದರ್ಜೆಯಲ್ಲೇ ಪ್ರಯಾಣ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಚೌಧರಿ ಉತ್ತರಿಸಿದರು. ಪ್ರಧಾನಿ ಮತ್ತು ಅಧ್ಯಕ್ಷರು ವಿವೇಚನಾ ಅಧಿಕಾರ ಬಳಸಿ ಸರ್ಕಾರಿ ನಿಧಿಯಿಂದ ಹಣ ಮಂಜೂರು ಮಾಡುವುದನ್ನೂ ಸಂಪುಟ ಸ್ಥಗಿತಗೊಳಿಸಿದೆ ಎಂದು ಅವರು ನುಡಿದರು. ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಒಂದು ವರ್ಷದಲ್ಲಿ ವಿವೇಚನಾ ಅಧಿಕಾರ ಬಳಸಿ ೫೧ ಕೋಟಿ (೫೧ ಬಿಲಿಯನ್) ರೂಪಾಯಿಗಳನ್ನು ವೆಚ್ಚ ಮಾಡಿದ್ದರು ಎಂದು ಚೌಧರಿ ಪ್ರತಿಪಾದಿಸಿದರು. ವಿದೇಶೀ ಭೇಟಿ ಅಥವಾ ಸ್ವದೇಶೀ ಪ್ರವಾಸಗಳಿಗೆ ವಿಶೇಷ ವಿಮಾನ ಬಳಕೆಯನ್ನು ನಿಲ್ಲಿಸಲೂ ಪ್ರಧಾನಿ ನಿರ್ಧರಿಸಿದ್ದಾರೆ. ಬದಲಿಗೆ ಬಿಸಿನೆಸ್ ದರ್ಜೆಯ ಪಯಣವನ್ನೇ ಅವರು ಮಾಡಬೇಕು. ಜುಲೈ ೨೫ರ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ, ಇಮ್ರಾನ್ ಖಾತ್ ಅವರು ಅರಮನೆ ಸದೃಶ ಪ್ರಧಾನಿ ನಿವಾಸವನ್ನು ಬಳಸದೇ ಇರಲು ನಿರ್ಧರಿಸಿದ್ದರು. ಬದಲಿಗೆ ಹಿಂದೆ ಸೇನಾ ಕಾರ್ಯದರ್ಶಿ ಬಳಸುತ್ತಿದ್ದ ಮನೆಯ ಪುಟ್ಟ ಭಾಗವೊಂದನ್ನು ಪ್ರಧಾನಿಗಾಗಿ ಬಳಸಲು ನಿರ್ಧರಿಸಿದ್ದರು. ಕೇವಲ ಎರಡು ವಾಹನಗಳನ್ನು ಬಳಸಲು ಮತ್ತು ಇಬ್ಬರೇ ಇಬ್ಬರು ಸೇವಕರನ್ನು ಇಟ್ಟುಕೊಳ್ಳಲು ಕೂಡಾ ಖಾನ್ ನಿರ್ಧರಿಸಿದ್ದಾರೆ. ವಿಸ್ತೃತ ಅಧಿಕೃತ ಶಿಷ್ಟಾಚಾರವನ್ನು  ಬಳಸಲೂ ಅವರು ನಿರಾಕರಿಸಿದರು. ವಾರದಲ್ಲಿ ಆರು ದಿನಗಳ ಕೆಲಸದ ಬದಲು ಐದು ದಿನಗಳ ಕೆಲಸದ ವಿಧಾನವನ್ನು ಮುಂದುವರೆಸಲು ಸಂಪುಟ ನಿರ್ಧರಿಸಿತು೨೦೧೧ರಲ್ಲಿ ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಸಲುವಾಗಿ ಐದು ದಿನಗಳ ವಾರದ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಐದು ದಿನಗಳ ಕೆಲಸದಿಂದ ಕಾರ್ಯ ನಿರ್ವಹಣೆ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ ಎಂದು ಸಚಿವ ಸಂಪುಟಕ್ಕೆ ಅಧಿಕಾರಿಗಳು ಮಾಹಿತಿ ನೀಡಿದರು. ವಾರದಲ್ಲಿ ಎರಡು ದಿನ ರಜಾ ಸಿಗಲಿದ್ದು, ಉಳಿದ ಕೆಲಸದ ದಿನಗಳ ಅವಧಿಯಲ್ಲಿ ಕೆಲಸದ ಅವಧಿಯನ್ನು ಬೆಳಗ್ಗೆ ರಿಂದ ಸಂಜೆ ಗಂಟೆಯ ಬದಲಿಗೆ ಬೆಳಗ್ಗೆ ಸಂಜೆ ಗಂಟೆಗೆ ಬದಲಾಯಿಸಲೂ ಸಂಪುಟ ತೀರ್ಮಾನಿಸಿತು. ಪಂಜಾಬ್ ಮತ್ತು ಖೈಬರ್ ಪಖ್ತೂನ್ ಕ್ವಾ ಪ್ರಾಂತ್ಯಗಳಲ್ಲಿ ಹಿಂದಿನ ಸರ್ಕಾರಗಳು ಕೈಗೊಂಡ ಮಹಾ ಸಾರಿಗೆ ಯೋಜನೆಗಳ ಸಂಪೂರ್ಣ ಪರಿಶೀಲನೆ ನಡೆಸಲೂ ಸಭೆ ನಿರ್ಧರಿಸಿತು.

2018:  ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ಅಧ್ಯಕ್ಷರಾಗಿ ಖ್ಯಾತ ವಿಜ್ಞಾನಿ ಡಾ. ಜಿ. ಸತೀಶ್ ರೆಡ್ಡಿ ಅವರನ್ನು ಸರ್ಕಾರವು ನೇಮಕ ಮಾಡಿತು. ಡಿಆರ್ ಡಿಒದ ಉನ್ನತ ಹುದ್ದೆಯು ಮೇ ತಿಂಗಳಿನಲ್ಲಿ ಆಗಿನ ಮುಖ್ಯಸ್ಥ ಡಾ. ಎಸ್. ಕ್ರಿಸ್ಟೋಫರ್ ಅವರು ಕೆಳಗಿಳಿದಂದಿನಿಂದ ಖಾಲಿ ಉಳಿದಿತ್ತು. ಸಚಿವ ಸಂಪುಟದ ನೇಮಕಾತಿಗಳ ಸಮಿತಿಯು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾದ ಡಾ. ಜಿ. ಸತೀಶ್ ರೆಡ್ಡಿ ಅವರನ್ನು ಡಿಆರ್ ಡಿಒದ ಅಧ್ಯಕ್ಷ ಸ್ಥಾನಕ್ಕೆ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲು ನಿರ್ಧರಿಸಿದೆ ಎಂದು ಸರ್ಕಾರಿ ಆದೇಶ ತಿಳಿಸಿತು. ಕ್ಷಿಪಣಿ ವಿಜ್ಞಾನಿಯಾಗಿರುವ ಡಾ. ರೆಡ್ಡಿ ಅವರು ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿ ಮತ್ತು ವ್ಯೂಹಾತ್ಮಕ ಕ್ಷಿಪಣಿಗಳ ವಿಭಾಗದ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಮ್ರಾತ್ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಕ್ಷಿಪಣಿಗಳಲ್ಲಿ ಅತ್ಯಂತ ಪ್ರಮುಖ ಭಾಗವಾದ, ಸೀಕರ್ ತಂತ್ರಜ್ಞಾನವನ್ನು ದೇಶೀಯ ವಾಗಿ ಅಭಿವೃದ್ಧಿ ಪಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

2018: ತಿರುವನಂತಪುರಂ: ಕೇರಳವನ್ನು ಕಂಗೆಡಿಸಿದ ಇತ್ತೀಚಿನ ಶತಮಾನದ ಭೀಕರ ಜಲಪ್ರಳಯ ಕಾಲದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದ ವಿವಿಧ ರಕ್ಷಣಾ ಪಡೆಗಳಿಗೆ ಕೃತಜ್ಞತೆ ವ್ಯಕ್ತ ಪಡಿಸಲು ಕೇರಳ ಸರ್ಕಾರವು ವಿದಾಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.  ‘ರಾಜ್ಯದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದ ವಿವಿಧ ರಕ್ಷಣಾ ಪಡೆಗಳಿಗೆ ತಮ್ಮ ಪ್ರೇಮ ಮತ್ತು ಕೃತಜ್ಞತೆಯನ್ನು ವ್ಯಕ್ತ ಪಡಿಸಿಲು ಆಗಸ್ಟ್ ೨೬ರಂದು ವಿದಾಯ ಕಾರ್ಯಕ್ರಮವನ್ನು ಸಂಘಟಿಸಲು ಸರ್ಕಾರವು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರುಗರ್ಭಿಣಿ ಮಹಿಳೆಯನ್ನು ಹೆಲಿಕಾಪ್ಟರ್ ಮೂಲಕ ಎತ್ತಿದ್ದು ಹಾಗೂ ಎರಡು ವರ್ಷದ ಮಗುವನ್ನು ರಕ್ಷಿಸಿದ್ದೇ ಮುಂತಾದ ರಕ್ಷಣಾ ಪಡೆಗಳ ರಕ್ಷಣಾ ಸಾಹಸ ಕಾರ್ಯಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದವು. ಅಗತ್ಯ ವಸ್ತುಗಳನ್ನು ದೋಣಿಗಳಲ್ಲಿ ಸಾಗಿಸಿದ್ದು, ನಿರ್ವಸಿತ ಜನರಿಗೆ ವೈದ್ಯಕೀಯ ನೆರವು ಕಲ್ಪಿಸಿದ್ದೇ ಇತ್ಯಾದಿ ಕೆಲಸಗಳ ಮೂಲಕವೂ ಪಡೆಗಳು ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ಭಾರತೀಯ ನೌಕಾಪಡೆಯು ತನ್ನ ೧೪ ದಿನಗಳಮದದ್ ಕಾರ್ಯಾಚರಣೆಯನ್ನು ಬುಧವಾರ ಮುಕ್ತಾಯಗೊಳಿಸಿತ್ತು. ಅವಧಿಯಲ್ಲಿ ಅದು ೧೬,೦೦೫ ಜನರನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಿತ್ತು. ನೌಕಾಪಡೆಯಲ್ಲದೆ, ಸೇನಾ ಸಿಬ್ಬಂದಿ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕೂಡಾ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಾಗರಿಕ ಆಡಳಿತ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ ಡಿಆರ್ ಎಫ್), ಮೀನುಗಾರರು ಸೇರಿದಂತೆ ಇತರ ಸ್ವಯಂ ಸೇವಕರ ಜೊತೆಗೆ ಪಾಲ್ಗೊಂಡಿದ್ದರು.  ಸೇನೆಯ ದಕ್ಷಿಣ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ.ಆರ್. ಸೋನಿ ಅವರು ಸೋಮವಾರ ತನ್ನ ಸಿಬ್ಬಂದಿ ಪ್ರವಾಹ ಪೀಡಿತ ರಾಜ್ಯದ ಪರಿಸ್ಥಿತಿ ಸ್ಥಿರಗೊಳ್ಳುವವರೆಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದು ಎಂದು ಪ್ರಕಟಿಸಿದ್ದರು. ೨೬ ಶಿಬಿರಗಳಲ್ಲಿನ ,೬೦೦ಕ್ಕೂ ಹೆಚ್ಚಿನ ಜನರಿಗೆ ವೈದ್ಯಕೀಯ ಸವಲತ್ತು ಒದಗಿಸುವ ಕಾರ್ಯದಲ್ಲಿ ತಾನು ಮಗ್ನವಾಗಿರುವುದಾಗಿ ಭಾರತೀಯ ವಾಯುಪಡೆ ತಿಳಿಸಿತ್ತು. ಅದು ೧೦ ಹಾಸಿಗೆಗಳ ಸಂಚಾರಿ ಆಸ್ಪತ್ರೆಯನ್ನು ಮತ್ತು ತುರ್ತು ಕಾರ್ ವೈದ್ಯಕೀಯ ತಂಡವನ್ನೂ ಪಟ್ಟಣಂತಿಟ್ಟದ ತಿರುವಲದ ಸಮೀಪದಲ್ಲಿನ ಚೆತಂಕೆರಿಯಯಲ್ಲಿ ಸ್ಥಾಪಿಸಿದೆ.

2018: ನವದೆಹಲಿ: ೨೦೧೯ರ ಮಹಾಚುನಾವಣೆಗಾಗಿ ಸಜ್ಜಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಂಬಿಕಸ್ತ ಬಂಟರಲ್ಲೇ ತಮ್ಮ ವಿಶ್ವಾಸವನ್ನು ಇರಿಸಿದ್ದು, ತಮ್ಮ ಇಬ್ಬರು ನಿಕಟವರ್ತಿಗಳ ಜೊತೆಗೆ .ಕೆ. ಆಂಟನಿ, ಗುಲಾಂ ನಬಿ ಆಜಾದ್ ಸೇರಿದಂತೆ ಸದಸ್ಯರ ಪ್ರಮುಖರ ಸಮಿತಿಯನ್ನು (ಕೋರ್ ಕಮಿಟಿ) ರಚಿಸಿಕೊಂಡರು. ಕಾಂಗ್ರೆಸ್ ವಕ್ತಾರರಾದ ರಣ್ ದೀಪ್ ಸುರ್ಜೆವಾಲ ಮತ್ತು ಕೇರಳದ ಸಂಸತ್ ಸದಸ್ಯ ಕೆಸಿ ವೇಣುಗೋಪಾಲ್ ಅವರನ್ನೂ ೨೦೧೯ರ ಲೋಕಸಭಾ ಚುನಾವಣೆಗಾಗಿ ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಯಿತು. ಒಂಬತ್ತು ಸದಸ್ಯರ ಕೋರ್ ಕಮಿಟಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಂಬಿಕಸ್ತ ಬಂಟರಾಗಿರುವ ಅಶೋಕ್ ಗೆಹ್ಲೋಟ್, .ಕೆ.ಆಂಟನಿ, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ಮತ್ತು ಜೈರಾಮ್ ರಮೇಶ್ ಅವರಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಗೆ ಇತರ ವಿರೋಧ ಪಕ್ಷಗಳ ಜೊತೆಗೆ ಮೈತ್ರಿಕೂಟಗಳನ್ನು ರಚಿಸುವ ಆಯ್ಕೆಯನ್ನು ಪಕ್ಷವು ಮುಕ್ತವಾಗಿ ಇರಿಸಿಕೊಂಡಿದ್ದುಮಮತಾ ಬ್ಯಾನರ್ಜಿ ಮತ್ತು ಶರದ್ ಪವಾರ್ ಅವರಂತಹ ಸೋನಿಯಾ ಗಾಂಧಿ ಜೊತೆಗೆ ಹೆಚ್ಚು ನಿಕಟವಾಗಿರುವ ನಾಯಕರ ಪ್ರಾದೇಶಿಕ ಪಕ್ಷಗಳ ಜೊತೆ ನಿರ್ಣಾಯಕ ಮೈತ್ರಿ ಕುದುರಿಸುವ ಹೊಣೆಗಾರಿಕೆಯನ್ನು ಪಕ್ಷದ ಹಿರಿಯರಿಗೆ ಒಪ್ಪಿಸಲಿದೆ೧೯ ಸದಸ್ಯರ ಪ್ರಣಾಳಿಕೆ ಸಮಿತಿ ಮತ್ತು ೧೩ ಸದಸ್ಯರ ಪ್ರಚಾರ ಸಮಿತಿ ಎರಡು ನಿರ್ಣಾಯಕ ಸಮಿತಿಗಳನ್ನೂ ಮಹಾ ಚುನಾವಣೆ ಸಲುವಾಗಿ ಕಾಂಗ್ರೆಸ್ ಪಕ್ಷವು ಪ್ರಕಟಿಸಿದೆ. ಇತರ ಉನ್ನತ ನಾಯಕರಿಗೆ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಸಮಿತಿಗಳ ಸಂಚಾಲಕರನ್ನು  ಮುಂದೆ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ರಮೇಶ್ ಜೈರಾಮ್ ಅವರ ಜೊತೆಗೆ ಕೋರ್ ಗ್ರೂಪ್ ಸಮಿತಿ ಮತ್ತು ಪ್ರಣಾಳಿಕೆ ಸಮಿತಿಯ ಸದಸ್ಯರಾಗಿದ್ದಾರೆ.  ೧೯ ಸದಸ್ಯರ ಪ್ರಣಾಳಿಕೆ ಸಮಿತಿಯು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಜೊತೆಗೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮಾಜಿ ಕೇಂದ್ರ ಸಚಿವರಾದ ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಶಶಿ ತರೂರ್, ಕುಮಾರಿ ಸೆಲ್ಜಾ ಮತ್ತು ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರನ್ನು ಒಳಗೊಂಡಿದೆಕಾಂಗ್ರೆಸ್ಸಿನ ಮುಖ್ಯ ವಕ್ತಾರರಾದ ರಣ್ ದೀಪ್ ಸುರ್ಜಿವಾಲ, ಪಂಜಾಬ್ ಹಣಕಾಸು ಸಚಿವ ಮನ್ ಪ್ರೀತ್ ಬಾದಲ್, ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥೆ ಸುಷ್ಮಿತಾ ದೇವ್, ಪಕ್ಷದ ರಾಜ್ಯಸಭಾ ಸಂಸತ್ ಸದಸ್ಯ ರಾಜೀವ್ ಗೌಡ ಮತ್ತು ಪಕ್ಷದ ಹಿಂದುಳಿದ ವರ್ಗಗಳ ಇಲಾಖೆಯ ಮುಖ್ಯಸ್ಥ ತಮರಧ್ವಜ್ ಸಾಹು ಅವರೂ ಸಮಿತಿಯಲ್ಲಿ ಪಾಲುದಾರರಾಗಿದ್ದಾರೆಬಿಂದು ಕೃಷ್ಣನ್, ರಘುವೀರ್ ಮೀನಾ, ಬಾಲಚಂದರ್ ಮುಂಗೇಕರ್, ಮೀನಾಕ್ಷಿ ನಟರಾಜನ್, ರಜನಿ ಪಾಟೀಲ್, ಸ್ಯಾಮ್ ಪಿತ್ರೋಡಾ, ಸಚಿನ್ ರಾವ್ ಮತ್ತು ಲಲಿತೇಶ್ ತ್ರಿಪಾಠಿ ಅವರು ಇತರ ಸದಸ್ಯರು. ಪ್ರಚಾರ ಸಮಿತಿಯಲ್ಲಿ ರಣ್ ದೀಪ್ ಸುರ್ಜಿವಾಲ, ಮಾಜಿ ಸಚಿವರಾದ ಆನಂದ ಶರ್ಮ, ಮನಿಶ್ ತಿವಾರಿ ಮತ್ತು ರಾಜೀವ ಶುಕ್ಲ ಅವರಿದ್ದಾರೆ. ಜೊತೆಗೆ ಭಕ್ತ ಚರಣ್ ದಾಸ್, ಪ್ರವೀಣ್ ಚರ್ಕವರ್ತಿ, ಮಿಲಿಂದ್ ದೇವ್ರಾ, ಕುಮಾರ್ ಕೇತ್ಕರ್, ಪವನ್ ಖೇರಾ, ವಿಡಿ ಸತೀಶನ್, ಜೈವೀರ್ ಶೆರ್ಗಿಲ್, ಪಕ್ಷದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ದಿವ್ಯ ಸ್ಪಂದನ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಅವರಿದ್ದಾರೆ.

2017: ಸಿರ್ಸಾ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು  ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು. ತೀರ್ಪನ್ನು ಪ್ರಕಟಿಸಿದ ನ್ಯಾಯಾಧೀಶರು, ರಾಮ್ ರಹೀಂ ಸಿಂಗ್ ನನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದರು, ಹಿನ್ನೆಲೆಯಲ್ಲಿ ರಾಮ್ ರಹೀಂ ಸಿಂಗ್ ನನ್ನು ಪೊಲೀಸರು ಅಂಬಾಲಾ ಜೈಲಿಗೆ ಕರೆದೊಯ್ಯಲಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.  ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಮಧ್ಯಾಹ್ನ 2.25ಕ್ಕೆ ಹಿಂಬಾಗಿಲ ಮೂಲಕ ವಿಶೇಷ ಸಿಬಿಐ ಕೋರ್ಟ್ ಅನ್ನು ಪ್ರವೇಶಿಸಿದ್ದ. 2.35ರಿಂದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ಜೈದೀಪ್ ಸಿಂಗ್ ಅವರು ತೀರ್ಪನ್ನು ಓದಲು ಆರಂಭಿಸಿದ್ದರು. 3.05 ನಿಮಿಷಕ್ಕೆ ಡೇರಾ ಬಾಬಾ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದರು. ಹರ್ಯಾಣ, ಪಂಜಾಬ್ ರಾಜ್ಯಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ರಾಮ್ ರಹೀಂ ವಿರುದ್ಧ ತೀರ್ಪು ಪ್ರಕಟವಾದಲ್ಲಿ ಭಾರೀ ಹಿಂಸಾಚಾರ ಆಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎರಡೂ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸೂಕ್ಷ್ಮಪ್ರದೇಶಗಳಲ್ಲಿ ಒಟ್ಟಾರೆ 118 ಸಾವಿರ ಅರೆ ಸೇನಾ ಪಡೆ ಯೋಧರನ್ನು ಹಾಗೂ 55 ಸಾವಿರ ಪೊಲೀಸ್ ಪಡೆಯನ್ನು ನಿಯೋಜಿಲಾಗಿತ್ತು. ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಆರೋಪದಡಿ ಸಿಬಿಐ ವಿಶೇಷ ನ್ಯಾಯಾಲಯ ಹಲವು ವರ್ಷಗಳ ಕಾಲ ರಾಮ್ ರಹೀಂ ವಿರುದ್ಧ ವಿಚಾಣೆ ನಡೆಸಿತ್ತು. ತೀರ್ಪಿಗೆ ದಿನ  ನಿಗದಿಯಾಗಿದ್ದುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪಂಚಕುಲಾಲ್ಲಿರು ಡೇರಾ ಸಚ್ಚಾ ಸೌದಾ ಆಶ್ರಮಕ್ಕೆ ಅನುಯಾಯಿಗಳು
ಜಮಾಯಿಸಿದ್ದರು.

2017: ಸಿರ್ಸಾ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ
ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು   ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದು 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿತು.  ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್, ದೆಹಲಿ, ರಾಜಸ್ಥಾನಗಳಲ್ಲೂ ಹೈ ಅಲರ್ಟ್ ಘೋಷಿಸಲಾಯಿತು.. ಆಗಸ್ಟ್ 28ರಂದು ರಾಮ್ ರಹೀಂ ಸಿಂಗ್ ಗೆ ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಮುನ್ನೆಚ್ಚರಿಕೆಯ ಅಂಗವಾಗಿ ವಿಶೇಷ ಸಿಬಿಐ ನ್ಯಾಯಾಲಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅರೆಸೇನಾಪಡೆ, ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿತ್ತು. ಆದರೆ ಕೋರ್ಟ್ ತೀರ್ಪು ಪ್ರಕಟಿಸಿದ ಕೂಡಲೇ ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದಿತು. ತದನಂತರ ಪಂಚಕುಲ, ಬಟಿಂಡಾ, ಫಿರೋಜ್ ಪುರ್ ಮತ್ತು ಮಾನ್ಸಾದಲ್ಲಿ ಕರ್ಫ್ಯೂ ಜಾರಿಗೊಳಿಸಲಾಯಿತು. ರೊಚ್ಚಿಗೆದ್ದ ಬೆಂಬಲಿಗರು ಬೆಂಕಿಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ ಕೃತ್ಯದಲ್ಲಿ ತೊಡಗಿದರು. ಸಿಂಗ್ ಅನುಯಾಯಿಗಳು ಪೊಲೀಸರ ನಡುವೆ ಘರ್ಷಣೆ ಮುಂದುವರೆಯಿತು. ಘಟನೆಯಲ್ಲಿ 70ಕ್ಕೂ ಅಧಿಕ ಮಂದಿ ಗಾಯಗೊಂಡರು. ಕಾರು ಮತ್ತು ಅಗ್ನಿಶಾಮಕ ವಾಹನಕ್ಕೆ ಬೆಂಕಿಹಚ್ಚಲಾಯಿತು. ಪೊಲೀಸರು ಜಲಫಿರಂಗಿ ಬಳಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು.

2017: ಸಿಯೋಲ್: ದಕ್ಷಿಣ ಕೊರಿಯಾದ ಅತೀ ಶ್ರೀಮಂತ ಉದ್ಯಮಿ, ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್
ಪರಿಕರಗಳ ಉತ್ಪನ್ನಗಳ ಸಂಸ್ಥೆ ಸ್ಯಾಮ್ ಸಂಗ್ ಅಧ್ಯಕ್ಷ, ಗ್ರೂಪ್ ಉಪಾಧ್ಯಕ್ಷ ಜೇ ವೈ ಲೀ (ಲೀ ಜೇ ಯಾಂಗ್) ಅವರಿಗೆ ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಇಲ್ಲಿನ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಲೀ ವಿರುದ್ಧ ಸ್ವತಂತ್ರ್ಯವಾಗಿ ತನಿಖೆ ನಡೆಸಲಾಗಿತ್ತು. ಇದರಲ್ಲಿ ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಲೀ ಬಂಧಿತರಾಗಿದ್ದರು. ದೇಶದ ಅತಿ ದೊಡ್ಡ ಕಂಪನಿಯ ಮುಖ್ಯಸ್ಥರನ್ನು ಬಂಧಿಸುವುದಕ್ಕೆ ಮುನ್ನ ಅದರ ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಗಳು ವಿಚಾರಣೆ ವೇಳೆ ತಿಳಿಸಿದ್ದರು. 49 ವರ್ಷದ ಸ್ಯಾಮ್ ಸಂಗ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಉಪಾಧ್ಯಕ್ಷನನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಸ್ಸಿನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ಕೋರ್ಟ್ ಗೆ ಕರೆತರಲಾಗಿತ್ತು. ಲೀ ಅವರನ್ನು ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಆದರೆ ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಲೀ ವಾದಿಸಿದ್ದರು. ಏತನ್ಮಧ್ಯೆ ಲೀ ಅವರು ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲಿದ್ದಾರೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೋಲ್ ತಿಳಿಸಿದರು.

2015: ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್​ಗಳಿಗೆ ಆಗಸ್ಟ್ 22ರಂದ ನಡೆದ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಬಿಜೆಪಿ ದೊಡ್ಡ ಪಕ್ಷವಾಗಿ ಮೂಡಿಬಂದು ಮತ್ತೆ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಿಜೆಪಿಗೆ ತೀವ್ರ ಹಣಾಹಣಿ ಒಡ್ಡಿದ ಕಾಂಗ್ರೆಸ್ 76 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಜನತಾದಳ (ಎಸ್) 14 ಕಡೆ ಮತ್ತು ಇತರರು 08 ಕಡೆ ಗೆಲುವು ಸಾಧಿಸಿದರು. ಇಬ್ಬರು ಪಕ್ಷೇತರರು ಬೆಂಬಲ ನೀಡಲು ಮುಂದೆ ಬಂದದ್ದರಿಂದ ಬಿಜೆಪಿಗೆ ಅಧಿಕಾರ ಖಚಿತವಾಯಿತು. ಬಹುತೇಕ ಚುನಾವಣಾ ಸಮೀಕ್ಷೆಗಳನ್ನು ಫಲಿತಾಂಶ ತಲೆಕೆಳಗು ಮಾಡಿತು. ಚುನಾವಣೆಯ ಮತಗಳ ಎಣಿಕೆ ಈದಿನ ಬೆಳಗ್ಗೆ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 27 ಮತ ಎಣಿಕೆ ಕೇಂದ್ರಗಳಲ್ಲಿ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಪಕ್ಷಾಧ್ಯಕ್ಷ ಅಮಿತ್ ಷಾ ಈ ವಿಜಯಕ್ಕಾಗಿ ಬಿಜೆಪಿ ಕರ್ನಾಟಕ ಘಟಕವನ್ನು ಅಭಿನಂದಿಸಿದರು..

2015: ನವದೆಹಲಿ: ಪಕ್ಷ ನಾಯಕತ್ವವನ್ನು ತಮ್ಮ ಹೇಳಿಕೆ ಮೂಲಕ ಮುಜುಗರಕ್ಕೆ ಈಡು ಮಾಡಿದ ಬಂಡಾಯ ಬಿಜೆಪಿ ಸಂಸತ್ ಸದಸ್ಯ ಶತ್ರುಘ್ನ ಸಿನ್ಹ ಅವರು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಯಕತ್ವಕ್ಕೆ ಸವಾಲು ಹಾಕಿದರು. ಬಿಹಾರ ಚುನಾವಣೆಗಳ ಬಳಿಕ ಪಕ್ಷ ನಾಯಕತ್ವವು ಪಕ್ಷ ವಿರೋಧಿ ಹೇಳಿಕೆಗಾಗಿ ಸಿನ್ಹ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿ ಬಿಹಾರಿನ ಪಟ್ನಾ ಸಾಹಿಬ್ ಕ್ಷೇತ್ರದ ಸಂಸದ ಸಿನ್ಹ ಅವರು ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್​ಗಳ ಮೂಲಕ ನಾಯಕತ್ವಕ್ಕೆ ಈ ಸವಾಲೆಸೆದರು. “ಸುದ್ದಿ ವಾಹಿನಿಯೊಂದರ ಅಧಿಕೃತವಲ್ಲದ ವರದಿಯ ಬಳಿಕ ಈ ಅನಧಿಕೃತ ವರದಿ ಬಗ್ಗೆ ಜನ ನನ್ನ ಪ್ರತಿಕ್ರಿಯೆ ಕೇಳುತ್ತಿದ್ದಾರೆ’ ಎಂದು ಸಿನ್ಹ ಹೇಳಿದರು. ‘ಸ್ಥಾಪಿತ ಹಿತಾಸಕ್ತಿಗಳು ಹರಡಿದ ಅನಧಿಕೃತ ವರದಿ ಬಗ್ಗೆ ನಾನು ಟೀಕಿಸುವುದಿಲ್ಲ. ಏನಿದ್ದರೂ ಪ್ರತಿಯೊಂದು ಕ್ರಿಯೆಗೂ ಸಮಬಲದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬುದಾಗಿ ನ್ಯೂಟನ್ ಹೇಳಿದ ಮೂರನೇ ನಿಯಮವನ್ನು ನಾವು ಮರೆಯಲಾಗದು’ ಎಂದು ಪಕ್ಷ ಮತ್ತು ಸರ್ಕಾರದಿಂದ ಬದಿಗೊತ್ತಲ್ಪಟ್ಟಿರುವ ಸಿನ್ಹ ಟ್ವೀಟ್ನಲ್ಲಿ ತಿಳಿಸಿದರು. ಸಿನ್ಹ ವಿರುದ್ಧ ಬಿಹಾರ ಚುನಾವಣೆಗಳ ಮತಗಳ ಎಣಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ನಾಯಕರೊಬ್ಬರು  ಹೇಳಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖಂಡತುಂಡವಾಗಿ ಟೀಕಿಸಿದ ಮರುದಿನ ಸಿನ್ಹ ಅವರು ನಿತೀಶ್ ಕುಮಾರ್ ಅವರನ್ನು ಹೊಗಳಿದ್ದರು.

2015: ಬೀಜಿಂಗ್: 1996ರಿಂದೀಚೆಗೆ ಅನುಭವಿಸುತ್ತಿರುವ ಅತ್ಯಂತ ದೊಡ್ಡ ಪ್ರಮಾಣದ ಷೇರು ಮಾರುಕಟ್ಟೆ ಕುಸಿತ ಮತ್ತು ತೀವ್ರಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಚೀನಾ ಸರ್ಕಾರವು ನವೆಂಬರ್ ಬಳಿಕ ಇದೀಗ 5ನೇ ಬಾರಿಗೆ ಬಡ್ಡಿ ದರಗಳನ್ನು ಇಳಿಸಿತು. ಜೊತೆಗೆ ತೆಗೆದಿಡಬೇಕಾದ ಬ್ಯಾಂಕ್​ಗಳ ನಗದು ಮೀಸಲು ಧನದ ಮೊತ್ತವನ್ನು ಕಡಿಮೆಗೊಳಿಸಿತು. ವಾರ್ಷಿಕ ಸಾಲದ ಬಡ್ಡಿದರವು 25 ಪಾಯಿಂಟ್​ನಷ್ಟು ಅಂದರೆ ಶೕಕಡಾ 4.6ಕ್ಕೆ ಇಳಿದಿದ್ದು ಆಗಸ್ಟ್ 26ರ ಬುಧವಾರದಿಂದಲೇ ಜಾರಿಯಾಗುವುದು ಎಂದು ಬೀಜಿಂಗ್​ನ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿತು. ಇದೇ ವೇಳೆಗೆ ಒಂದು ವರ್ಷದ ಠೇವಣಿ ದರವೂ 25 ಪಾಯಿಂಟ್ ಅಂದರೆ ಶೇಕಡಾ 1.75ರಷ್ಟಕ್ಕೆ ಇಳಿಯುವುದು. ಜೊತೆಗೆ ಎಲ್ಲಾ ಬ್ಯಾಂಕ್​ಗಳ ಮೀಸಲು ಧನದ ಅನುಪಾತವನ್ನೂ 50 ಮೂಲ ಪಾಯಿಂಟ್​ನಷ್ಟು ಇಳಿಸಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿತು.


2008: ಅಮರನಾಥ ದೇಗುಲಕ್ಕೆ ಭೂಮಿ ಹಸ್ತಾಂತರಿಸದಂತೆ ಆಗ್ರಹಿಸಿ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಉಲ್ಲಂಘಿಸಿ, ಕಲ್ಲು ತೂರಾಟದೊಂದಿಗೆ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾಪಡೆಗಳು ಗೋಲಿಬಾರ್ ನಡೆಸಿದಾಗ ಐವರು ಮೃತರಾಗಿ, ಇತರ 70 ಮಂದಿ ಗಾಯಗೊಂಡರು.

2008: ಕಂಧಮಲ್ ಜಿಲ್ಲೆಯ ಜಲಸ್ ಪೇಟಾ ಆಶ್ರಮದ ವಿಶ್ವಹಿಂದೂ ಪರಿಷತ್ತಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಆಗಸ್ಟ್ 23ರಂದು ಕೊಲೆ ಮಾಡಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ಬರ್ಘರ್ ಜಿಲ್ಲೆಯ ಕುಂತಿಪಲಿ ಗ್ರಾಮದಲ್ಲಿ ಗಲಭೆಕೋರರು ಅನಾಥಾಶ್ರಮಕ್ಕೆ ಬೆಂಕಿ ಹಚ್ಚಿದ್ದರಿಂದ ಕ್ರೈಸ್ತ ಸನ್ಯಾಸಿನಿಯೊಬ್ಬಳು ಸಜೀವ ದಹನಗೊಂಡ ಘಟನೆ ನಡೆಯಿತು. ಘಟನೆಯಲ್ಲಿ ಕ್ರೈಸ್ತ ಪಾದ್ರಿಯೊಬ್ಬರು ತೀವ್ರವಾಗಿ ಗಾಯಗೊಂಡರು. ಅನಾಥಾಶ್ರಮವನ್ನು ಸುತ್ತುವರಿದ ದುಷ್ಕರ್ಮಿಗಳು ಅದರಲ್ಲಿ 22 ವಿದ್ಯಾರ್ಥಿಗಳನ್ನು ಹೊರಕ್ಕೆ ಕರೆಯಿಸಿ ಬೆಂಕಿ ಹಚ್ಚಿದ್ದರಿಂದ ಒಳಗಿದ್ದ ಸನ್ಯಾಸಿನಿ ಸಜೀವ ದಹನಗೊಂಡರು. ಕ್ರೈಸ್ತ ಪಾದರ್ ಕಷ್ಟಪಟ್ಟು ಹೊರ ಬರುವಲ್ಲಿ ಯಶಸ್ವಿಯಾದರು.

2007: ಹೈದರಾಬಾದ್ ನಗರದ ಸಚಿವಾಲಯ ಸಮೀಪದ ಲುಂಬಿನಿ ಪಾರ್ಕ್ (ರಾತ್ರಿ 7.45) ಹಾಗೂ ಗೋಕುಲ್ ಚಾಟ್ ಶಾಪ್ ಬಳಿ ಈದಿನ (ರಾತ್ರಿ 7.50 ಗಂಟೆಗೆ) ಶಂಕಿತ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಸುಮಾರು 32 ಮಂದಿ ಮೃತರಾಗಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೊದಲ ಸ್ಫೋಟ ರಾತ್ರಿ 7.45ಕ್ಕೆ ಹುಸೇನ್ ಸಾಗರ್ ಎದುರಿಗೇ ಇರುವ ಲುಂಬಿನಿ ಪಾರ್ಕಿನಲ್ಲಿ ಸಂಭವಿಸಿ 6 ಮಂದಿ ಮೃತರಾದರು. ರಾತ್ರಿ 7.45ಕ್ಕೆ ಗೋಕುಲ್ ಚಾಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 26 ಮಂದಿ ಮೃತರಾಗಿ 25-30 ಜನ ಗಾಯಗೊಂಡರು.

2007: `ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ಜೋದಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಂತರ ಜೈಲಿಗೆ ಕಳುಹಿಸಿದರು. ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಸಲ್ಮಾನ್ ಖಾನ್ ಅವರು ತಮ್ಮ ಸಹೋದರ ಸೋಹೆಲ್ ಹಾಗೂ ವಕೀಲ ದೀಪೆಶ್ ಮೆಹ್ತಾ ಅವರೊಂದಿಗೆ ಮುಂಬೈನಿಂದ ವಿಮಾನದ ಮೂಲಕ ಬಂದಿಳಿದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಾಯ್ ಸಿಂಗ್ ಗೋಧರ್ ನೇತೃತ್ವದ ಪೊಲೀಸ್ ತಂಡ ಖಾನ್ ಅವರನ್ನು ಬಂಧಿಸಿತು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಆರ್. ಸಿಂಘ್ವಿ ಎತ್ತಿಹಿಡಿದರು. ಸಲ್ಮಾನ್ ಬಂಧನದಿಂದ ಸುಮಾರು 70 ಕೋಟಿ ವೆಚ್ಚದ ಸಿನಿಮಾ ಯೋಜನೆಗಳ ಮೇಲೆ ಕರಿಮೋಡ ಆವರಿಸಿತು. 35 ಕೋಟಿ ವೆಚ್ಚದ ಅಫ್ಜಲ್ ಖಾನ್ ಅವರ `ಗಾಡ್ ತುಸ್ಸಿ ಗ್ರೇಟ್ ಹೊ', ಬೋನಿ ಕಪೂರ್ ನಿರ್ಮಾಣದ 35-40 ಕೋಟಿ ವೆಚ್ಚದ ಮತ್ತೊಂದು ಹೊಸ ಚಿತ್ರ ಹಾಗೂ ಇತರ ಚಿತ್ರಗಳ ಚಿತ್ರೀಕರಣಕ್ಕೆ ಧಕ್ಕೆ ಉಂಟಾಯಿತು.

2007: ಕೊಲೆ ಆರೋಪದಿಂದ ಮುಕ್ತರಾದ ನಾಲ್ಕು ದಿನಗಳ ಬಳಿಕ ಜೆಎಂಎಂ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಜಾರ್ಖಂಡಿನ ಡುಮ್ಕಾ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಆರೋಪ ಸೊರೇನ್ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಂಬತ್ತು ತಿಂಗಳನ್ನು ಕಾರಾಗೃಹದಲ್ಲಿ ಕಳೆದ ಕೇಂದ್ರದ ಮಾಜಿ ಸಚಿವ ಸೊರೇನ್ ಅವರನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯ ಅಭಿಮಾನಿಗಳು ಜೈಲಿನ ಹೊರಗೆ ಸೇರಿದ್ದರು. 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಳಹಂತದ ನ್ಯಾಯಾಲಯವು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2006ರ ನವೆಂಬರ್ 28 ರಂದು ಅವರು ಜೈಲು ಶಿಕ್ಷೆಗೆ ಒಳಗಾಗಿದ್ದರು.

2007: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ (87) ಅವರು ಈದಿನ ಬೆಳಿಗ್ಗೆ ಮೌಂಟ್ ಅಬುವಿನಲ್ಲಿ ವಿಧಿವಶರಾದರು. ಪ್ರಕಾಶಮಣಿ ಈಗಿನ ಪಾಕಿಸ್ಥಾನದಲ್ಲಿರುವ ಸಿಂಧ್ ಪ್ರಾಂತದ ಹೈದರಾಬಾದಿನಲ್ಲಿ ಜನಿಸಿದವರು. ಇವರು 14ನೇ ವಯಸ್ಸಿನಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದ್ದರು. 1937ರಲ್ಲಿ ಈ ಸಂಸ್ಥೆ ರೂಪುಗೊಂಡಾಗ 8 ಜನರ ಟ್ರಸ್ಟಿನಲ್ಲಿ ಇವರನ್ನೂ ಸಹ ಒಬ್ಬರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಂಸ್ಥೆಯ ಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಅವರು 1969ರ ಜನವರಿಯಲ್ಲಿ ಇಹಲೋಕ ತ್ಯಜಿಸಿದ ಬಳಿಕ ಪ್ರಕಾಶಮಣಿ ಅವರು ಮುಖ್ಯ ಆಡಳಿತಾಧಿಕಾರಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ್ದರು. ಪ್ರಕಾಶಮಣಿ ಅವರ ಆಡಳಿತ ಅವಧಿಯಲ್ಲೇ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಯುನಿಸೆಫ್ ಸರಕಾರೇತರ ಸಂಸ್ಥೆ (ಎನ್.ಜಿ.ಓ) ಮಾನ್ಯತೆ ನೀಡಿದ್ದಲ್ಲದೆ ಇವರಿಗೆ ಏಳು ಶಾಂತಿ ಪಾರಿತೋಷಕಗಳನ್ನು ನೀಡಿ ಗೌರವಿಸಿತ್ತು. ಪ್ರಕಾಶಮಣಿ ಅವರು ಈ ಪಾರಿತೋಷಕ ಪಡೆದ ದೇಶದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2007: ಆಲ್ಕೋಹಾಲ್ ಸೇವನೆಯಿಂದ ಕಿಡ್ನಿ ಕ್ಯಾನ್ಸರ್ ಉಲ್ಬಣದ ಮಟ್ಟವನ್ನು ಕಡಿಮೆಗೊಳಿಸಬಹುದು ಎಂದು ಬ್ರಿಟಿಷ್ ಪತ್ರಿಕೆಯ ಅಧ್ಯಯನ ವರದಿಯೊಂದು ಬಹಿರಂಗಪಡಿಸಿತು. ಎಲ್ಲಾ ರೀತಿಯ ಆಲ್ಕೋಹಾಲ್ ಅಂಶ ಇರುವ ಮದ್ಯಪಾನಗಳನ್ನು ಮತ್ತು ಆಲ್ಕೋಹಾಲ್ ಸೇವಿಸಿರುವ ವ್ಯಕ್ತಿಗಳನ್ನು ಪರೀಕ್ಷಿಸಿದ ಸ್ವೀಡನ್ನಿನ ಸ್ಟಾಕ್ ಹೋಮಿನಲ್ಲಿರುವ ಕರೊಲಿಂಸ್ಕ ಸಂಸ್ಥೆಯ ಡಾ.ಅಲಿಕ್ಜಾ ವೊಲ್ಕ್ ಮತ್ತು ಅವರ ಸಹೋದ್ಯೋಗಿಗಳು ಈ ವಿಷಯವನ್ನು ಪ್ರಕಟಿಸಿದರು. ಕಿಡ್ನಿ ಕ್ಯಾನ್ಸರ್ ಅಭಿವೃದ್ಧಿಯಾಗುತ್ತಿರುವ ವ್ಯಕ್ತಿ ಪ್ರತಿ ತಿಂಗಳು ಶೇ 620 ಜಿ ಎಥೆನಾಲ್ ಸೇವಿಸಿದರೆ ಶೇ 40ರಷ್ಟು ಕ್ಯಾನ್ಸರ್ ಅಭಿವೃದ್ಧಿಯನ್ನು ತಡೆಗಟ್ಟಬಹುದು. ಪ್ರತಿ ವಾರ ಎರಡೂ ಲೋಟಕ್ಕಿಂತ ಹೆಚ್ಚು ರೆಡ್ ವೈನ್ ಸೇವಿಸುವ ವ್ಯಕ್ತಿಯಲ್ಲೂ ಶೇ 40ರಷ್ಟು ಕ್ಯಾನ್ಸರ್ ನಿಯಂತ್ರಣವಾಗುತ್ತದೆ. ವೈಟ್ ವೈನ್ ಮತ್ತು ಆಲ್ಕೋಹಾಲ್ ಅಂಶ ಹೆಚ್ಚು ಇರುವ ಬಿಯರ್ ಸೇವನೆಯಿಂದಲೂ ಇದೇ ರೀತಿಯ ಪರಿಣಾಮವಾಗುತ್ತದೆ. ಆದರೆ, ಕಿಡ್ನಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುವ ಬಿಯರ್, ಆಲ್ಕೋಹಾಲ್ ಮಧ್ಯಮ ಮಟ್ಟದ್ಲಲಿರುವ ಬಿಯರ್, ಆಲ್ಕೋಹಾಲ್ ಹೆಚ್ಚಿರುವ ವೈನ್ ಅಥವಾ ಇತರೆ ಮದ್ಯಪಾನಗಳು ಸಹಾಯ ಮಾಡುವುದಿಲ್ಲ ಎಂಬುದು ವರದಿಯ ಅಭಿಮತ.

2006: ಭಾರತೀಯ ಸಂಜಾತ ಜಲ ನಿರ್ಹಹಣಾ ತಜ್ಞ, ಕೆನಡಾ ಪ್ರಜೆ ಅಸಿತ್ ಕೆ. ಬಿಸ್ವಾಸ್ ಅವರಿಗೆ ಜಾಗತಿಕ ಜಲ ಸಂಪನ್ಮೂಲ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಿದ್ದಕ್ಕಾಗಿನೀಡಲಾಗುವ 1.50 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪ್ರತಿಷ್ಠಿತ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯನ್ನು ಸ್ವೀಡಿಷ್ ರಾಜಕುಮಾರಿ ವಿಕ್ಟೋರಿಯಾ ಅವರು ಸ್ಟಾಕ್ ಹೋಮಿನಲ್ಲಿ ಪ್ರದಾನ ಮಾಡಿದರು. ಸ್ವೀಡನ್ನಿನ ದೊರೆ 16ನೇ ಕಾಲ್ ಗುಸ್ತಾಫ್ ಜಲ ಪ್ರಶಸ್ತಿಯ ಪೋಷಕತ್ವದ `ಸ್ಟಾಕ್ ಹೋಮ್ ಜಲ ಪ್ರಶಸ್ತಿ'ಯು ಜಾಗತಿಕ ಪ್ರಶಸ್ತಿಯಾಗಿದ್ದು ಇದನ್ನು 1990ರಲ್ಲಿ ಸ್ಥಾಪಿಸಲಾಯಿತು. ಜಲ ಸಂಬಂಧಿ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವ್ಯಕ್ತಿ, ಸಂಘಟನೆ ಅಥವಾ ಜಲ ಸಂಬಂಧಿ ಚಟುವಟಿಕೆ ನಿರತರಾಗಿರುವ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಶಿಕ್ಷಣ, ಮಾನವೀಯ ಅಥವಾ ಅಂತಾರಾಷ್ಟ್ರೀಯ ಬಾಂಧವ್ಯ, ಜಲ ನಿರ್ವಹಣೆ, ಜಲ ಸಂಬಂಧಿ ನೆರವು ಇತ್ಯಾದಿ ಕ್ಷೇತ್ರಗಳು ಈ ವ್ಯಾಪ್ತಿಗೆ ಬರುತ್ತದೆ.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಲೋಕಸಭಯಲ್ಲಿ ಮಂಡಿಸಲಾಯಿತು. ಬೆಂಗಳೂರಿನ ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಮುಂಬೈಯ ಹೋಮಿ ಬಾಬಾ ರಾಷ್ಟ್ರೀಯ ಸಂಸ್ಥೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಸೇರಿ 8 ಸಂಸ್ಥೆಗಳಿಗೆ ಈ ಮೀಸಲಾತಿ ಅನ್ವಯಿಸುವುದಿಲ್ಲ. ಅಲ್ಪಸಂಖ್ಯಾತರ ಸಂಸ್ಥೆಗಳಿಗೂ ಮೀಸಲಾತಿಯಿಂದ ವಿನಾಯ್ತಿ. ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರು ಮಂಡಿಸಿದ ಈ ಮಸೂದೆಯನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಿದರು.

2006: ಲಾಭದಾಯಕ ಹುದ್ದೆ ಹೊಂದಿರುವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಇವರಿಬ್ಬರೂ ರಾಜೀವ್ಗಾಂಧಿ ಪ್ರತಿಷ್ಠಾನದ ಟ್ರಸ್ಟಿಗಳಾಗಿದ್ದಾರೆ.

2006: ಸುಮಾರು 3200 ವರ್ಷಗಳಷ್ಟು ಹಳೆಯದಾದ 125 ಟನ್ ತೂಕದ ಪರ್ಹೋ 2ನೇ ರಾಮ್ಸೇಸ ಮೂರ್ತಿಯನ್ನು ಈಜಿಪ್ಟಿನ ಕೈರೋದ ರಾಮ್ಸೇಸ ಚೌಕದಿಂದ ಕೈರೋ ಹೊರವಲಯದ ಗಿಝಾದಲ್ಲಿನ ಪಿರಮಿಡ್ಡಿಗೆ ಸಾಗಿಸಲಾಯಿತು.

2004: ಈದ್ಗಾ ಮೈದಾನ ರಾಷ್ಟ್ರ ಧ್ವಜಾರೋಹಣ ವಿವಾದ ಸಂಬಂಧ ಹೊರಡಿಸಲಾದ ವಾರಂಟ್ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾದರು.

2001: ಹೆಪಟೈಟಿಸ್, ಲಿವರ್ ಸಿರೋಸಿಸ್ ಮತ್ತು ಕ್ಯಾನ್ಸರಿಗೆ ಕಾರಣವಾಗುವ ಹೆಪಟೈಟಿಸ್ ಸಿ ವೈರಸ್ಸಿನ ಗುಣಾಣು ನಕ್ಷೆಯನ್ನು (ಜೆನೋಮ್) ಅನಿವಾಸಿ ಭಾರತೀಯ ವಿಜ್ಞಾನಿ ರಾಮರೆಡ್ಡಿ ಗುಂಟಕ ಅವರ ಸಹಯೋಗದೊಂದಿಗೆ ವಿಜ್ಞಾನಿಗಳು ಹೈದರಾಬಾದಿನ ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಸಿನಲ್ಲಿ ಗುರುತಿಸಿ ರೂಪಿಸಿದರು. ಸೂಕ್ಷ್ಮಜೀವಿಯೊಂದರ ಗುಣಾಣು ನಕ್ಷೆಯನ್ನು ಈ ರೀತಿ ಭಾರತದಲ್ಲಿ ಗುರುತಿಸಿದ್ದು ಇದೇ ಮೊದಲು.

2001: ಲಂಡನ್ನಿನ ಓವಲ್ಲಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 400ನೇ ಟೆಸ್ಟ್ ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಶೇನ್ ವಾರ್ನ್ ಪಾತ್ರರಾದರು.

1999: ಡೇವಿಸ್ ಕಪ್ ಮಾಜಿ ನಾಯಕ ನರೇಂದ್ರನಾಥ ನಿಧನ.

1996: ಸಮುದ್ರಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ವಿಶ್ವ ವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕ್ಕೆ ಹೊರಟಿದ್ದ 194 ಮಂದಿ ಯಾತ್ರಾರ್ಥಿಗಳು ಅಮರನಾಥ ಗುಹೆಗಳಲ್ಲಿ ಅತಿಯಾದ ಶೀತಕ್ಕೆ ಸಿಲುಕಿ ಮೃತರಾದರು.

1981: ಕರ್ನಾಟಕದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಶುಲ್ಕ ವಿಧಿಸುವುದನ್ನು ಹಂತ, ಹಂತವಾಗಿ ರದ್ದು ಪಡಿಸಲು ಸಚಿವ ಸಂಪುಟ ನಿರ್ಧರಿಸಿತು.

1948: `ಜನ ಗಣ ಮನ'ವನ್ನು ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಅಂಗೀಕರಿಸಲು ಭಾರತದ ಸಂವಿಧಾನ ಸಭೆ ಅಂತಿಮ ನಿರ್ಣಯ ಕೈಗೊಂಡಿತು.

1947: ಸಾಹಿತಿ ಶ್ರೀಧರ ರಾಯಸಂ ಜನನ.

1944: ನಾಲ್ಕು ವರ್ಷಗಳ ನಾಝಿ ಆಳ್ವಿಕೆಯಿಂದ ಪ್ಯಾರಿಸ್ಸನ್ನು ಮಿತ್ರ ಪಡೆಗಳು ವಿಮೋಚನೆಗೊಳಿಸಿದವು.

1919: ಬಿಹಾರದ ಮಾಜಿ ಮುಖ್ಯಮಂತ್ರಿ ಬಿಂದೇಶ್ವರಿ ಪ್ರಸಾದ್ ಮಂಡಲ್ ಜನನ.

1918: ಖ್ಯಾತ ಸಾಹಿತಿ ಹಾಗೂ ಸಮಾಜ ಸುಧಾರಕ ಮಿರ್ಜಿ ಅಣ್ಣಾರಾಯ (25-8-1919ರಿಂದ 23-12-1975) ಅವರು ಅಪ್ಪಣ್ಣ- ಚಂದ್ರವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ ಜನಿಸಿದರು. ಒಟ್ಟು 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅಣ್ಣಾರಾಯ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1890: ಸಾಹಿತಿ ಸುಬೋಧ ರಾಮರಾವ್ ಜನನ.

1888: ಭಾರತೀಯ ವಿದ್ವಾಂಸ ಹಾಗೂ ಆಡಳಿತಗಾರ ಅಲ್ಲಾಮಾ ಮಾಶ್ರಿಕಿ (1888-1963) ಜನ್ಮದಿನ. ಹೈದರಾಬಾದಿನಲ್ಲಿ ಖಕ್ಸಾರ್ ತೆಹ್ರಿಕಿ ಪಕ್ಷವನ್ನು ಹುಟ್ಟುಹಾಕಿದ ಇವರು ಕೋಮು ಆಧಾರದ ವಿಭಜನೆಯನ್ನು ಪ್ರತಿಪಾದಿಸಿದವರು.

1875: ಹಡಗೊಂದರ ಮಾಸ್ಟರ್ ಮ್ಯಾಥ್ಯೂ ವೆಬ್ ಅವರು 21 ಗಂಟೆ 45 ನಿಮಿಷಗಳ ಅವಧಿಯ್ಲಲಿ ಬ್ರೆಸ್ಟ್ ಸ್ಟ್ರೋಕ್ ವಿಧಾನದಲ್ಲಿ ಈಜುತ್ತಾ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

No comments:

Post a Comment