ನಾನು ಮೆಚ್ಚಿದ ವಾಟ್ಸಪ್

Sunday, August 26, 2018

ಇಂದಿನ ಇತಿಹಾಸ History Today ಆಗಸ್ಟ್ 26

ಇಂದಿನ ಇತಿಹಾಸ History Today ಆಗಸ್ಟ್ 26

2018: ಮುಂಬೈ: ತಲೆಮರೆಸಿಕೊಂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಸ್ಕರನ ಪುತ್ರ ಮೌಲಾನಾ ಆಗಿ ಬದಲಾದ ಒಂದು ವರ್ಷದ ಬಳಿಕ, ಈಗ ದಾವೂದನ ಬಲಗೈ ಬಂಟ ಛೋಟಾ ಶಕೀಲನ ಏಕೈಕ ಪುತ್ರನೂ ಪಾಕಿಸ್ತಾನದ ಕರಾಚಿಯಲ್ಲಿ ಅಪ್ಪನೊಂದಿಗೆ ವಾಸವಾಗಿರುವ ಮನೆಯಲ್ಲೇ ಪಾರಮಾರ್ಥಿಕ ಹಾದಿ ಹಿಡಿದಿದ್ದಾನೆ ಎಂದು ನಂಬಲರ್ಹ ಮೂಲಗಳು ತಿಳಿಸಿದವು. ಛೋಟಾ ಶಕೀಲನ ಮೂರನೇ ಹಾಗೂ ಕಿರಿಯ ಪುತ್ರನಾಗಿರುವ ೧೮ರ ಹರೆಯದ ಮುಬಾಶೀರ್ ಶೇಖ್ ಇತ್ತೀಚೆಗೆಹಫೀಜ್--ಖುರಾನ್ ಅಥವಾ ,೨೩೬ ಶ್ಲೋಕಗಳಿರುವ ಇಡೀ ಖುರಾನ್ ಕಂಠಪಾಠ ಮಾಡುವ ಮೂಲಕ ಛೋಟಾ ಶಕೀಲನ ಕ್ರಿಮಿನಲ್ ಸಾಮ್ಯಾಜ್ಯದಲ್ಲಿ ಸುಂಟರಗಾಳಿ ಎಬ್ಬಿಸಿದ್ದಾನೆ. ಇಡೀ ಖುರಾನ್ ಕಂಠಪಾಠ ಮಾಡುವುದೆಂದರೆ ಇಸ್ಲಾಮ್ ಅನುಯಾಯಿಗಳ ಪಾಲಿನ ಮೈಲಿಗಲ್ಲು ಎಂದೇ ಪರಿಗಣಿತವಾಗಿದೆ.  ‘ಮುಬಾಶೀರ್ ಅಂದರೆಒಳ್ಳೆಯ ಸುದ್ದಿಗಳ ಮುನ್ಸೂಚನೆ ನೀಡುವವ ಎಂದೇ ಅರ್ಥ. ಆದರೆ ಭೂಗತ ಕ್ರಿಮಿನಲ್ ಸಾಮ್ರಾಜ್ಯದ ಇನ್ನೊಬ್ಬ ಪ್ರಮುಖನ ಪುತ್ರ ಆಧ್ಯಾತ್ಮಿಕ ಪಥದತ್ತ ವಾಲಿದ್ದಾನೆ ಎಂಬ ಸುದ್ದಿ ಮುಂಬೈ ಭೂಗತ ಕ್ರಿಮಿನಲ್ ಜಗತ್ತಿಗೆ ಆಘಾತವನ್ನು ಉಂಟು ಮಾಡಿತು. ಯುವ ಮುಬಾಶೀರ್ ಈಗ ಕರಾಚಿಯ ಸಮೀಪ ಜನರಿಗೆ ವಯಸ್ಸಾದ ತನ್ನ ತಂದೆ  ಬಾಬುಮಿಯಾ ಶಕೀಲ್ ಅಹ್ಮದ್ ಶೇಖ್ (ಛೋಟಾ ಶಕೀಲ್) ಜೊತೆಗೇ ವಾಸವಾಗಿದ್ದುಕೊಂಡು ಖುರಾನ್ ಕಲಿಕೆ ಹಾಗೂ ಬೋಧನೆಯಲ್ಲಿ ನಿರತನಾಗಿದ್ದಾನೆ. ಛೋಟಾ ಶಕೀಲ್ ದಾವೂದ್ ಇಬ್ರಾಹಿಂನಡಿ ಕಂಪೆನಿಯನ್ನು ಸಾಕಾರಗೊಳಿಸಿದ್ದ ವ್ಯಕ್ತಿ.  ಈಗ ೬೦ರ ಹರೆಯದಲ್ಲಿರುವ ಛೋಟಾ ಶಕೀಲ್, ಒಂದಾನೊಂದು ಕಾಲದಲ್ಲಿ ದಕ್ಷಿಣ ಮುಂಬೈಯ ನಾಗ್ಪಾದದಲ್ಲಿ ಟ್ರಾವಲ್ ಏಜೆನ್ಸಿಯನ್ನು ನಡೆಸುತ್ತಿದ್ದ. ಆತನ ವ್ಯವಹಾರಗಳ ಬಗ್ಗೆ ಆಗಲೇ ಗುಮಾನಿಗಳಿದ್ದವು. ೧೯೮೦ರ ಆದಿಯಲ್ಲಿ ಆತ ಅದೇತಾನೇ ಬೆಳೆಯುತ್ತಿದ್ದ ಭೂಗತ ಪಾತಕಿ ದಾವೂದ್ ಜೊತೆಗೆ ಹೆಚ್ಚಿನ ಸಂಪರ್ಕ ಸಾಧಿಸಿದ್ದದಾವೂದ್ ವಹಿಸಿದ ಎಲ್ಲ ಕೆಲಸಗಳನ್ನೂ ಮಾಡುವ ಮೂಲಕ ಅತಿ ಶೀಘ್ರವಾಗಿ ದಾವೂದ್ ವಿಶ್ವಾಸ ಗಳಿಸಿದ್ದ ಛೋಟಾ ಶಕೀಲ್, ದಾವೂದನ ಸಂಪೂರ್ಣ ವಿಶ್ವಾಸಕ್ಕೆ ಪಾತ್ರರಾದ ಕೇವಲ ಹಿಡಿಯಷ್ಟು ಮಂದಿಯಲ್ಲಿ ಒಬ್ಬನಾಗಿದ್ದ ಎಂದು ಮೂಲಗಳು ಹೇಳುತ್ತವೆ.  ಏನಿದ್ದರೂ, ೧೯೮೮ರ ಡಿಸೆಂಬರಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಸೆರೆ ಸಿಕ್ಕುವುದರೊಂದಿಗೆ ಛೋಟಾ ಶಕೀಲ್ ಗಂಭೀರ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದ. ನಾಲ್ಕು ತಿಂಗಳುಗಳ ಸೆರೆವಾಸದ ಬಳಿಕ ಆತನಿಗೆ ಜಾಮೀನು ಲಭಿಸಿತು. ಆಗ ಸದ್ದಿಲ್ಲದೆ ದೇಶದಿಂದ ಪರಾರಿಯಾದ ಶಕೀಲ್. ದಾವೂದ್ ಬಳಿಕ ಸೇರಿಕೊಂಡು ದುಬೈಯಲ್ಲಿ ವಾಸಿಸಲು ಆರಂಭಿಸಿದಬಳಿಕ ಅವರಿಬ್ಬರೂ ಸೇರಿ ೧೯೯೩ರಲ್ಲಿ ಮುಂಬೈ ಮೇಲಿನ ಬೃಹತ್ ಭಯೋತ್ಪಾದಕ ದಾಳಿ ಸಂಚು ರೂಪಿಸಿ, ಸರಣಿ ಸ್ಫೋಟಗಳ ಮೂಲಕ ಅದನ್ನು ಜಾರಿಗೊಳಿಸಿದರು. ಬಳಿಕ ಭಾರತ ಮತ್ತು ಜಾಗತಿಕ ಒತ್ತಡಗಳ ಪರಿಣಾಮವಾಗಿ ಅವರಿಬ್ಬರೂ ತಮ್ಮ ನೆಲೆಯನ್ನು ಪಾಕಿಸ್ತಾನಕ್ಕೆ ಬದಲಾಯಿಸಿದರುದಾವೂದ್ ಮತ್ತು ಛೋಟಾ ಶಕೀಲ್ ಸೇರಿದಂತೆ ಆತನ ನಿಕಟವರ್ತಿಗಳು ಪಾಕಿಸ್ತಾನದಲ್ಲೆ ಚಲನವಲನ ನಡೆಸುತ್ತಿರುವ ಬಗ್ಗೆ ೧೧ ತಿಂಗಳ ಹಿಂದೆ ಥಾಣೆ ಸುಲಿಗೆ ನಿಗ್ರಹ ದಳದಿಂದ ಬಂಧಿಸಲ್ಪಟ್ಟ  ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ದೃಢಪಡಿಸಿದ್ದಾನೆ. ವಿವಿಧ ಆಪಾದನೆಗಳ ಅಡಿಯಲ್ಲಿ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಇನ್ನೂ ಬಂಧನದಲ್ಲಿದ್ದಾನೆ. ತನಿಖಾ ವೇಳೆಯಲ್ಲಿ ತನ್ನ ಸಹೋದರ (ದಾವೂದ್) ಏಕೈಕ ಪುತ್ರ ಮೊಯಿನ್ಮೌಲಾನಾ ಆಗಿ ಪರಿವರ್ತನೆಗೊಂಡ ಬಳಿಕ ದಾವೂದ್ ಇಬ್ರಾಹಿಂ ಖಿನ್ನತೆಯಿಂದ ನರಳುತ್ತಿದ್ದಾನೆ ಎಂಬ ವಿಷಯದ ಬಗ್ಗೆ ಬಾಯ್ಬಿಟ್ಟಿದ್ದಮೌಲಾನಾ ಮೊಯಿನ್ ನಿಂದ ಸ್ಫೂರ್ತಿ ಪಡೆದ ಛೋಟಾ ಶಕೀಲನ ಪುತ್ರ ಮುಬಾಶೀರ್ ತಾನೂ ಅದೇ ಹಾದಿ ಹಿಡಿಯಲು ಮತ್ತು ಜನರಿಗೆ ಖುರಾನ್ ಬೋಧನೆ ಮಾಡಲು ತೀರ್ಮಾನಿಸಿದ. ಮೊಯಿನ್ ನಂತೆಯೇ ಮುಬಾಶೀರ್ ಕೂಡಾ ತನ್ನ ಅಪ್ಪನ ಅಪರಾಧ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ವಿರೋಧಿಸಿದ್ದಾನೆ. ಆದರೆ ಈಗಲೂ ಆತನ ಜೊತೆಗೇ ವಾಸ್ತವ್ಯ ಮುಂದುವರೆಸಿದ್ದಾನೆಇದು ಈಗ ಸಹಜವಾಗಿಯೇ ಭೂಗತ ಪಾತಕಿ ದಾವೂದ್ ಮತ್ತು ಛೋಟಾ ಶಕೀಲ್ ನಂತಹ ಆತನ ಬಲಗೈ ಬಂಟರು ಸೃಷ್ಟಿಸಿದ ಐಷಾರಾಮೀ ಭೂಗತ ಕ್ರಿಮಿನಲ್ ಸಾಮ್ರಾಜ್ಯದ ಉತ್ತರಾಧಿಕಾರತ್ವವನ್ನು ಯಾರು ಹೊಂದುತ್ತಾರೆ ಎಂಬ ಪ್ರಶ್ನೆಗಳನ್ನು ಹೊಸದಾಗಿ ಹುಟ್ಟು ಹಾಕಿತು. ಮುಬಾಶೀರ್ ಹೊರತಾಗಿ ಛೋಟಾ ಶಕೀಲ್ ಇಬ್ಬರು ಪುತ್ರಿಯರನ್ನು - ಝೋಯಾ ಮತ್ತು ಅನಮ್ - ಹೊಂದಿದ್ದುಅವರಿಬ್ಬರೂ ಕರಾಚಿಯಲ್ಲಿನ ವೈದ್ಯರನ್ನು ಮದುವೆಯಾಗಿದ್ದಾರೆ.

2018: ಪುಣೆ: ಬೆಂಗಳೂರಿನಲ್ಲಿ ಕಳೆದ ವರ್ಷ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ೨೦೧೩ರಲ್ಲಿ ಪುಣೆಯಲ್ಲಿ ಹತ್ಯೆಯಾದ ವಿಚಾರವಾದಿ ನರೇಂದ್ರ ಧಾಬೋಲ್ಕರ್ ಅವರ ಹತ್ಯೆಗಳಿಗೆ ಪರಸ್ಪರ ಸಂಪರ್ಕ ಇದೆ ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ಪುಣೆಯ ನ್ಯಾಯಾಲಯ ಒಂದಕ್ಕೆ ತಿಳಿಸಿತು. ದಾಭೋಲ್ಕರ್ ಹತ್ಯೆ ಪ್ರಕರಣದ ಶೂಟರ್ ಆರೋಪಿಗಳಲ್ಲಿ ಒಬ್ಬ ಎನ್ನಲಾದ ಸಚಿನ್ ಅಂಡ್ಯುರೆಯ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದ ಸಿಬಿಐ, ಗೌರಿ ಲಂಕೇಶ್ ಕೊಲೆ ಪ್ರಕರಣದ ಒಬ್ಬ ಆರೋಪಿಯು ಪಿಸ್ತೂಲ್ ಮತ್ತು ಮೂರು ಬುಲೆಟ್ ಗಳನ್ನು ಮಾಗಜಿನ್ ಸಹಿತವಾಗಿ ಹಸ್ತಾಂತರ ಮಾಡಿದ್ದಾನೆ ಎಂದು ಕೋರ್ಟಿಗೆ ಹೇಳಿತು. ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಮೊದಲ ದರ್ಜೆ) ಎಚ್.ಆರ್. ಜಾಧವ್ ಅವರು ಅಂಡ್ಯುರೆಯ ಸಿಬಿಐ ಕಸ್ಟಡಿಯನ್ನು ಆಗಸ್ಟ್ ೩೦ರವರೆಗೆ ವಿಸ್ತರಿಸಿದರುಪುಣೆ ಮೂಲದ ಮೂಢನಂಬಿಕೆ ವಿರೋಧಿ ಸಾಮಾಜಿಕ ಕಾರ್ಯಕರ್ತ ದಾಭೋಲ್ಕರ್ ಅವರನ್ನು ೨೦೧೩ರ ಆಗಸ್ಟ್ ತಿಂಗಳಲ್ಲಿ ಅವರು ಬೆಳಗಿನ ವಾಕಿಂಗ್ ಮಾಡುತ್ತಿದ್ದಾಗ ಗುಂಡು ಹೊಡೆದು ಕೊಲ್ಲಲಾಗಿತ್ತು. ಗೌರಿ ಲಂಕೇಶ್ ಅವರನ್ನು ೨೦೧೭ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅವರ ಮನೆಯ ಮುಂಭಾಗದಲ್ಲಿ ಗುಂಡು ಹೊಡೆದು ಕೊಲ್ಲಲಾಗಿತ್ತುದಾಭೋಲ್ಕರ್ ಕೊಲೆ ಪ್ರಕರಣದ ಇನ್ನೊಬ್ಬ ಶೂಟರ್ ಎಂದು ಆಪಾದಿಸಲಾಗಿರುವ ಶರದ್ ಕಲಸ್ಕರ್ ಕಸ್ಟಡಿಗಾಗಿ ಕೋರಿಕೆ ಸಲ್ಲಿಸಲಾಗುವುದು ಎಂದೂ ಸಿಬಿಐ ಹೇಳಿತುಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹದ ದಳದಿಂದ (ಎಟಿಎಸ್) ಮಾಸದ ಆರಂಭದಲ್ಲಿ ಬಂಧಿಸಲ್ಪಟ್ಟ ಐವರು ವ್ಯಕ್ತಿಗಳಲ್ಲಿ ಕಲಸ್ಕರ್ ಒಬ್ಬನಾಗಿದ್ದಾನೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಚ್ಚಾ ಬಾಂಬ್ ಮತ್ತು ಬಂದೂಕುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿತ್ತು. ನಲಸೊಪೋರ ಸ್ಫೋಟಕ ಸಾಧನ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಸ್ಕರ್ ಪ್ರಸ್ತುತ ಎಟಿಎಸ್ ವಶದಲ್ಲಿದ್ದಾನೆ. ಕಲಸ್ಕರ್ ಮತ್ತು ಅಂಡ್ಯುರೆಯನ್ನು ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಿಗೆ ಪ್ರಶ್ನಿಸಬೇಕಾಗಿರುವುದರಿಂದ ಕಲಸ್ಕರನನ್ನು ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ವಿಜಯಕುಮಾರ್ ಧಕನೆ ಹೇಳಿದರು. ಕರ್ನಾಟಕ ಎಸ್ ಐಟಿಯು ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಇತರ ಕೆಲವರನ್ನು ಅವರು ದಾಭೋಲ್ಕರ್ ಪ್ರರಕಣಕ್ಕೂ ಸಂಬಂಧಪಟ್ಟಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ತನಿಖೆ ಸಲುವಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಲಿದೆ ಎಂದೂ ಅವರು ನುಡಿದರು.
.
2018: ಕೋಲ್ಕತ: ’ಬ್ಲೂವ್ಹೇಲ್ ಹಾವಳಿಯ ಬಳಿಕ ಪಶ್ಚಿಮ ಬಂಗಾಳದ ಉತ್ತರಭಾಗದಲ್ಲಿ ಈಗಮೊಮೊ ಚಾಲೆಂಜ್ ಎಂಬ ಹೊಸ ಆನ್ ಲೈನ್ ಆತ್ಮಹತ್ಯಾ ಆಟದ ಹಾವಳಿ ವ್ಯಾಪಕಗೊಂಡಿತು.  ’ಮೊಮೊ ಚಾಲೆಂಜ್ ಆನ್ ಲೈನ್ ಆಟದಲ್ಲಿ ಪಾಲ್ಗೊಳ್ಳುವಂತೆ ವಾಟ್ಸಪ್ ಆಹ್ವಾನ ಬಂದ ಬಳಿಕ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಅಡಳಿತವು ಹಾವಳಿ ತಡೆಗೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿತು. ಎಲ್ಲ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ನಿರ್ದೇಶನಗಳನ್ನು ಕಳುಹಿಸುವುದರ ಜೊತೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವರ್ತನೆ ಮೇಲೆ ಕಣ್ಣಿಡಲು ಶಿಕ್ಷಣಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ‘ಅದು (ಮೊಮೊ ಚಾಲೆಂಜ್) ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಬ್ಲೂವ್ಹೇಲ್ ಚಾಲೆಂಜ್ ಬಳಿಕ ಈಗ ನಾವು ಕೊಲೆಗಡುಕ (ಕಿಲ್ಲರ್) ’ಮೊಮೊ ಗೇಮ್ ಚಾಲೆಂಜ್ ಎದುರಿಸುತ್ತಿದ್ದೇವೆ. ಆಟ ಲಿಂಕ್ ಗಳನ್ನು ಬಹುತೇಕ ವಾಟ್ಸಪ್ ಗಳ ಮೂಲಕ ಹರಡಲಾಗುತ್ತಿದೆ. ಬಗ್ಗೆ ಕಣ್ಣಿಡುವಂತೆ ನಾವು ಜಿಲ್ಲೆಗಳಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಅವರು ನುಡಿದರು.
ಕಿಲ್ಲರ್ ಆಟದಲ್ಲಿ ಮುಖವನ್ನು ವಿಕೃತಗೊಳಿಸಲಾದ ಹುಡುಗಿಯ ಚಿತ್ರ ಕಾಣಿಸುತ್ತದೆ ಮತ್ತುಮದರ್ ಬರ್ಡ್ ಲಿಂಕ್ ಫ್ಯಾಕ್ಟರಿ ಹೆಸರಿನೊಂದಿಗೆ ಕಣ್ಣುಗಳು ಉಬ್ಬಿಕೊಂಡು ಕಾಣಿಸುತ್ತವೆ.  ಮೊಮೊ ಚಾಲೆಂಜ್ ಡಾರ್ಜಿಲಿಂಗ್ ಜಿಲ್ಲೆಯ ಕುರ್ಸೆಯೊಂಗ್ ನಲ್ಲಿ ಆಗಸ್ಟ್ ೨೦ರಂದು ಮನಿಶ್ ಸರ್ಕಿ (೧೮) ಮತ್ತು ಮರುದಿನ ಅದಿತಿ ಗೋಯೆಲ್ (೨೬) ಅವರನ್ನು ಬಲಿತೆಗೆದುಕೊಂಡಿದೆ ಎಂದು ಆಪಾದಿಸಲಾಯಿತು. ಇವರಿಬ್ಬರೂ ಆನ್ ಲೈನ್ ಕಿಲ್ಲರ್ ಆಟದ ಸಂಪರ್ಕಕ್ಕೆ ಬಂದಿದ್ದರೆನ್ನಲಾಗಿದ್ದು ಅಂತಿಮವಾಗಿ ಪ್ರಾಣಕಳೆದುಕೊಳ್ಳುವ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದರು.   ‘ಇದು ವ್ಯಾಪಿಸುತ್ತಿರುವ ಹಾವಳಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಜನರು, ಬಹುತೇಕ ಯುವಕರು ಆಟ ಆಡುವಂತೆ  ಆಹ್ವಾನವನ್ನು ವಾಟ್ಸಪ್ ಮೂಲಕ ಅಪರಿಚಿತ ನಂಬರುಗಳಿಂದ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ನುಡಿದರುಖಿನ್ನತೆಯ ಸೂಚನೆ ಕಂಡು ಬರುವ ಅಥವಾ ಆತ್ಮಹತ್ಯಾ ಪ್ರವೃತ್ತಿ ಇರುವ ಜನರನ್ನೇ ಆಟಕ್ಕೆ ಗುರಿಯಾಗಿಟ್ಟುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರುಆಗಸ್ಟ್ ೨೧ರಂದು ಜಲಪಾಯಿಗುರಿ ನಿವಾಸಿ ಕಬಿತಾ ರೈ ಅವರಿಗೆಸಾವಿನ ಆಟ ಆಡುವಂತೆ ಆಹ್ವಾನ ಬಂತು. ಆಕೆ ತತ್ ಕ್ಷಣವೇ ಪೊಲೀಸರಿಗೆ ದೂರು ನೀಡಿದರು. ದೂರಿಗೆ ಸಂಬಂಧಿಸಿದಂತೆ ಜಿಲ್ಲೆಯ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ನುಡಿದರು. ಇನ್ನೊಬ್ಬ ಐಐಟಿ ವೃತ್ತಿ ನಿರತ ಎಂಟರ ಹರೆಯದ ಮಗುವನ್ನು ಹೊಂದಿರುವ ಮಹಿಳೆಗೆ ರಾಜ್ಯದ ರಾಜಧಾನಿಯಲ್ಲಿ ಇಂತಹುದೇ ಆಹ್ವಾನ ಬಂತು. ಆಕೆ ತತ್ ಕ್ಷಣ ಕೋಲ್ಕತ ಪೊಲೀಸ್ ಸೈಬರ್ ಸೆಲ್ನ್ನು ಸಂಪರ್ಕಸಿದರು.  ‘ನನ್ನ ಗೆಳೆಯರಲ್ಲೊಬ್ಬರು ಮಾಡಿದ ಸಲಹೆಯಂತೆ ಆಹ್ವಾನಕ್ಕೆ ಉತ್ತರ ನೀಡದೇ ಇರಲು ನಾನು ತೀರ್ಮಾನಿಸಿದೆ. ಗುರುವಾರ ರಾತ್ರಿ ನನಗೆ ವಾಟ್ಸಪ್ ಮೂಲಕ ಆಹ್ವಾನ ಬಂದಿತ್ತು. ನನಗೆ ಆಟದ ಹಾವಳಿ ಬಗ್ಗೆ ಗೊತ್ತಿದೆ ಮತ್ತು ನನಗೆ ಒಂದು ಮಗುವೂ ಇದೆ. ಹೀಗಾಗಿ ನನಗೆ ಭಯವಾಯಿತು ಎಂದ ರಾಜಶ್ರೀ ಉಪಾಧ್ಯಾಯ ಹೇಳಿದರು.  ಈವರೆಗೆ ಬಹುತೇಕ ದೂರುಗಳು ಜಲಪಾಯಿಗುರಿ, ಕುರ್ಸೆಯೊಂಗ್, ಪಶ್ಚಿಮ ಮಿಡ್ನಾಪುರ ಜಿಲ್ಲೆಗಳಿಂದ ಬಂದಿವೆ. ಕಳೆದ ವಾರ ಮಾತ್ರವೇ ಕೋಲ್ಕತದಿಂದಲೂ ದೂರು ದಾಖಲಾಯಿತು ಎಂದು ಅಧಿಕಾರಿ ನುಡಿದರು. ಹಾವಳಿಯನ್ನು ನಿಭಾಯಿಸಲು ನಾವು ಸೈಬರ್ ತಜ್ಞರ ನೆರವು ಕೋರಿದ್ದೇವೆ. ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬ ಪಟ್ಟಿ ತಯಾರಿಸಿದ್ದೇವೆ. ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಲ್ಲ ಜಿಲ್ಲೆಗಳಿಗೂ ಅದನ್ನು ಕಳುಹಿಸುತ್ತಿದ್ದೇವೆ ಎಂದು ಅವರು ನುಡಿದರು.  

2018: ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ ಮತ್ತು ಭಾರತದ ರಾಜಕೀಯ ಸಂಸ್ಕೃತಿಯನ್ನು ಬದಲಿಸಿದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸೂಕ್ತವಾದ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಬಣ್ಣಿಸಿದರು. ತಮ್ಮ ಮಾಸಿಕಮನ್ ಕಿ ಬಾತ್ ರೇಡಿಯೋ ಭಾಷಣ ಮಾಡುತ್ತಿದ್ದ ಪ್ರಧಾನಿ, ’ಸರ್ಕಾರ ಮತ್ತು ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಿವೆ. ಇದು ನಮ್ಮ ಪ್ರಜಾಪ್ರಭುತ್ವದ ಪಾಲಿಗೆ ಒಳ್ಳೆಯ ಲಕ್ಷಣ. ಸದೃಢ ಪ್ರಜಾಪ್ರಭುತ್ವಕ್ಕಾಗಿ ಆರೋಗ್ಯಕರ ಸಂಪ್ರದಾಯಗಳನ್ನು ಆರಂಭಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ನಡೆಸುವುದು, ಮುಕ್ತ ಮನಸ್ಸಿನ ಚರ್ಚೆಗಳನ್ನು ಪ್ರೋತ್ಸಾಹಿಸುವುದು ಕೂಡಾ ಅಟಲ್ ಜಿ ಅವರಿಗೆ ಸಲ್ಲಿಸುವ ಸೂಕ್ತ ಶ್ರದ್ಧಾಂಜಲಿಯಾಗುತ್ತದೆ ಎಂದು ಹೇಳಿದರು.  ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಅಂಗ ಪಕ್ಷಗಳಾದ ಶಿರೋಮಣಿ ಅಕಾಲಿದಳ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ, ಸಮಾಜವಾದಿ ಪಕ್ಷ ಮತ್ತು ತೆಲಂಗಾಣ ರಾಷ್ಟ್ರಸಮಿತಿ ಪ್ರಸ್ತಾಪವನ್ನು ಬೆಂಬಲಿಸುತ್ತಿವೆ. ಕಾಂಗ್ರೆಸ್, ತೆಲುಗುದೇಶಂ ಪಕ್ಷ, ಎಡ ಪಕ್ಷಗಳು ಮತ್ತು ಜನತಾದಳ (ಜಾತ್ಯತೀತ) ಏಕಕಾಲದ ಚುನಾವಣೆಯನ್ನು ವಿರೋಧಿಸುತ್ತಿವೆಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್ ಅವರು ಇತ್ತೀಚೆಗೆ ಕಾನೂನಿನ ಚೌಕಟ್ಟು ರೂಪಿಸದ ವಿನಃ ಏಕಾಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಗಳೇ ಇಲ್ಲ. ಸಂಸದೀಯ ಚುನಾವಣೆ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆಗಳನ್ನೂ ನಡೆಸಲು ೨೪ ಲಕ್ಷ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಅಂದರೆ ಕೇವಲ ಸಂಸದೀಯ ಚುನಾವಣೆಗೇ ಬೇಕಾಗುವ ವಿದ್ಯುನ್ಮಾನ ಯಂತ್ರಗಳ ದುಪ್ಪಟು ಸಂಖ್ಯೆಯ ಇವಿಎಂಗಳು ಬೇಕಾಗುತ್ತದೆ ಎಂದು ಹೇಳಿದ್ದರು.  ಉತ್ತಮ ಆಡಳಿತವನ್ನು ಮುಖ್ಯಪವಾಹಕ್ಕೆ ತಂದ ಶ್ರೇಯಸ್ಸೂ ವಾಜಪೇಯಿ ಅವರಿಗೇ ಸಲ್ಲುತ್ತದೆ ಎಂದೂ ಮೋದಿ ಹೇಳಿದರು.  ‘ಆದರೆ ನಾನು ದಂತಕತೆಯಾಗಿರುವ ಅಟಲ್ ಜಿ ಅವರ ವ್ಯಕ್ತಿತ್ವದ ಇತರ ಮುಖಗಳನ್ನು ಅವಲೋಕಿಸಲು ಬಯಸುತ್ತೇನೆ. ಅದು ಅಟಲ್ ಜಿ ಅವರು ಭಾರತಕ್ಕೆ ಕೊಟ್ಟ ರಾಜಕೀಯ ಸಂಸ್ಕೃತಿ. ನಮ್ಮ ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನ ಅವರ ಪ್ರಯತ್ನಗಳು, ಭಾರತಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅನುಕೂಲಕರವಾಗುವ ಕ್ರಮಗಳನ್ನು ಸಂಘಟಿತ ಚೌಕಟ್ಟಿನಲ್ಲಿ ಎರಕ ಹುಯ್ಯುವ ಯತ್ನವನ್ನು ಅವರು ಮಾಡಿದ್ದರು ಎಂದು ಮೋದಿ ನುಡಿದರು. ಪ್ರಧಾನಿ ನಿರ್ದಿಷ್ಟವಾಗಿ ೨೦೦೩ರಲ್ಲಿ ತರಲಾದ ೯೧ನೇ ಸಂವಿಧಾನ ತಿದ್ದುಪತಿ ಕಾಯ್ದೆಯನ್ನು ಉಲ್ಲೇಖಿಸಿದರು. ತಿದ್ದುಪಡಿಯು ರಾಜ್ಯ ಸಚಿವ ಸಂಪುಟಗಳ ಗಾತ್ರವನ್ನು ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆ ಶೇಕಡಾ ೧೫ಕ್ಕೆ ಮಿತಿಗೊಳಿಸಿದೆ. ಹಲವಾರು ವರ್ಷಗಳವರೆಗೆ ಭಾರತದಲ್ಲಿ ಗಜಗಾತ್ರದ ಸಂಪುಟ ರಚಿಸುವ ಸಂಸೃತಿ ಇತ್ತು. ರಾಜಕೀಯ ನಾಯಕರನ್ನು ಸಂತುಷ್ಟಿಗೊಳಿಸುವ ಸಲುವಾಗಿ ಗಜಗಾತ್ರದ ಸಂಪುಟ ರಚನೆಯ ಕ್ರಮದ ದುರುಪಯೋಗವಾಗುತ್ತಿತ್ತು, ಅಟಲ್ ಜಿ ಅದನ್ನು ಬದಲಿಸಿದರು. ಅವರ ಯತ್ನವು ಹಣ ಮತ್ತು ಸಂಪನ್ಮೂಲಗಳನ್ನು ಉಳಿಸಿತು. ಇದು ದಕ್ಷತೆ ಸುಧಾರಿಸಲೂ ನೆರವಾಯಿತು. ಸಂವಿಧಾನ ತಿದ್ದುಪಡಿಯು ಪಕ್ಷಾಂತರ ನಿಷೇಧ ಕಾನೂನು ಅನ್ವಯದ ಮಿತಿಯನ್ನು ಮೂರನೇ ಒಂದರಿಂದ ಮೂರನೇ ಎರಡಕ್ಕೆ ಏರಿಸುವುದರ ಜೊತೆಗೆ ಪಕ್ಷಾಂತರಿಗಳನ್ನು ಅನರ್ಹಗೊಳಿಸಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ರಚನೆಯನ್ನೂ ಮಾಡಿತು ಎಂದು ಪ್ರಧಾನಿ ನುಡಿದರು. ಮುಂಗಡಪತ್ರವನ್ನು ಬ್ರಿಟಿಷ್ ಕಾಲದ ಸಂಪ್ರದಾಯದಂತೆ ಸಂಜೆ ಗಂಟೆಗೆ ಮಂಡಿಸುವ ಬದಲು ಬೆಳಗ್ಗೆ ೧೧ ಗಂಟೆಗೆ ಮಂಡನೆ ಮಾಡುವ ಕ್ರಮಕ್ಕೆ ನಾಂದಿ ಹಾಡಿದ್ದಕ್ಕಾಗಿಯೂ ಮೋದಿ ಅವರು ವಾಜಪೇಯಿ ಅವರನ್ನು ಪ್ರಶಂಸಿಸಿದರು. ಲಂಡನ್ನಿನಲ್ಲಿ ಸಂಸತ್ತು ವೇಳೆಗೆ ಆರಂಭವಾಗುತ್ತಿದ್ದುದರಿಂದ ಸಂಪ್ರದಾಯ ಅನುಸರಿಸಲಾಗುತ್ತಿತ್ತು. ೨೦೦೨ರಲ್ಲಿ ಧ್ವಜ ಸಂಹಿತೆಯನ್ನು ರೂಪಿಸಿದ್ದು ಕೂಡಾ ಭಾರತಕ್ಕೆ ಇನ್ನೊಂದು ಸ್ವಾತಂತ್ರ್ಯವನ್ನು ಒದಗಿಸಿತು. ಇದು ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜ ಅರಳಿಸಲು ಅವಕಾಶ ಮಾಡಿಕೊಟ್ಟಿತುಹೆಚ್ಚು ಹೆಚ್ಚು ಪ್ರಜೆಗಳಿಗೆ ನಮ್ಮ ರಾಷ್ಟ್ರಧ್ವಜವನ್ನು ಅರಳಿಸಲು ಅವಕಾಶ ಕಲ್ಪಿಸುವ ಮೂಲಕ ನಮ್ಮ ಪ್ರೀತಿಯ ತ್ರಿವರ್ಣ ರಂಜಿತ ಧ್ವಜ ಜನಸಾಮಾನ್ಯವರೆಗೂ ತಲುಪಲು ಧ್ವಜಸಂಹಿತೆ ಅನುಕೂಲ ಮಾಡಿಕೊಟ್ಟಿತು ಎಂದು ಪ್ರಧಾನಿ ನುಡಿದರು.

2018: ಜಕಾರ್ತ: ಮಹಿಳೆಯರ ೧೦೦ಮೀಟರ್ ಫೈನಲ್ ನಲ್ಲಿ ಡ್ಯೂಟೀ ಚಾಂದ್, ಮಹಿಳೆಯರ ೪೦೦ ಮೀಟರ್ ಫೈನಲ್ ನಲ್ಲಿ ಹಿಮಾದಾಸ್ ಮತ್ತು ಪುರುಷರ ೪೦೦ ಮೀಟರ್ ಫೈನಲ್ ನಲ್ಲಿ ಮುಹಮ್ಮದ್ ಅನಸ್ - ಮೂವರು ಇಂಡೋನೇಷ್ಯಾದ ಜರ್ಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಎಂಟನೇ ದಿನ ಭಾರತದ ಮುಡಿಗೆ ಮೂರು ಬೆಳ್ಳಿ ಪದಕಗಳನ್ನು ಏರಿಸಿದರು.  ‘ಲಿಂಗ ಪ್ರಕರಣದಲ್ಲಿ ಗೆದ್ದ ಬಳಿಕ ಡ್ಯೂಟೀ ಚಾಂದ್ ಅವರು ಈದಿನ ಮಹಿಳೆಯರ ೧೦೦ ಮೀಟರ್ ಫೈನಲ್ ನಲ್ಲಿ ಬಹರೈನಿನ ಎಡಿಡಿಯೊಂಗ್ ಒಡಿಯೊಂಗ್ ಅವರನ್ನು ೧೧.೩೨ ಸೆಕೆಂಡ್ಗಳಲ್ಲಿ ಓಡಿ ಪರಾಭವಗೊಳಿಸಿದರುಇದಕ್ಕೆ ಮುನ್ನ ಹಿಮಾದಾಸ್ ಮತ್ತು ಮುಹಮ್ಮದ್ ಅನಸ್ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ೪೦೦ ಮೀಟರ್ ಫೈನಲ್ ನಲ್ಲಿ ತಮ್ಮ ಬಲವನ್ನು ಪ್ರದರ್ಶಿಸಿ ವಿಜಯ ಸಾಧಿಸಿದರು

2018: ಲಂಡನ್: ತಮ್ಮ ತಂದೆಯವರ ಕಾಲದಿಂದಲೂ ತಮ್ಮ ಕುಟುಂಬವು ಅಧಿಕಾರದಲ್ಲಿ ಇಲ್ಲ ಎಂದು ಇಲ್ಲಿ ಪ್ರತಿಪಾದಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮನ್ನು ಸಾಮರ್ಥ್ಯವನ್ನು ನೋಡಿ ಅಳೆಯಬೇಕೇ ಹೊರತು ಕುಟುಂಬದ ಹಿನ್ನೆಲೆಯನ್ನು ನೋಡಿ ಅಲ್ಲ ಎಂದು ಇಲ್ಲಿ ಒತ್ತಿ ಹೇಳಿದರು.  ‘ಪ್ರತಿಯೊಂದು ರಂಗದಲ್ಲೂ ಬಿಡುವಿಲ್ಲದೆ ದಾಳಿ ನಡೆಸುವ ಮೂಲಕ ರಾಜಕೀಯ ನಾಯಕನಾಗಿ ತನ್ನನ್ನು ತಾನು ವೃದ್ಧಿ ಪಡಿಸಿಕೊಳ್ಳಲುಆರೆಸ್ಸೆಸ್ ಅಗಾಧ ನೆರವು ನೀಡುತ್ತಿದೆ ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷವು ಪರಿಣಾಮಕಾರಿಯಾಗಿ ಒಂದು ಕುಟುಂಬದಿಂದ ನಡೆಸಲ್ಪಡುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ರಾಹುಲ್ ಅವರುಮೊದಲ ವಿಚಾರ, ನನ್ನ ಕುಟುಂಬವು ತನ್ನ ತಂದೆ ಪ್ರಧಾನಿಯಾಗಿದ್ದ ಕಾಲದ ಬಳಿಕ ಅಧಿಕಾರದಲ್ಲಿ ಇಲ್ಲವೇ ಇಲ್ಲ, ಇದು ಮರೆತುಹೋದ ವಿಚಾರ ಎಂದು ಉತ್ತರಿಸಿದರು. ‘ಎರಡನೇಯದಾಗಿ ಹೌದು, ನಾನು ಒಂದು ಕುಟುಂಬದಲ್ಲಿ ಹುಟ್ಟಿದ್ದೇನೆನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಕೇಳಿಸಿಕೊಳ್ಳಿ. ನನ್ನ ಬಳಿ ವಿಷಯಗಳ ಬಗ್ಗೆ ಮಾತನಾಡಿ, ವಿದೇಶ ನೀತಿ, ಆರ್ಥಿಕತೆ, ಭಾರತದ ಅಭಿವೃದ್ಧಿ, ಕೃಷಿ ಬಗ್ಗೆ ಮುಕ್ತವಾಗಿ ಚರ್ಚಿಸಿ. ಯಾವುದೇ ಪ್ರಶ್ನೆಯೊಂದಿಗೆ ನನ್ನ ಬಳಿಗೆ ಬನ್ನಿ. ಬಳಿಕ ನಾನು ಏನು ಎಂದು ತೀರ್ಮಾನಿಸಿ ಎಂದು ರಾಹುಲ್ ನುಡಿದರು. ‘ಭಾರತದ ಪ್ರಧಾನ ಮಂತ್ರಿಯವರು ರೀತಿಯ ಸಂಭಾಷಣೆ ನಡೆಸಲು ಕಷ್ಟಪಡುತ್ತಾರೆ ಎಂಬುದು ನನಗೆ ಅತ್ಯಂತ ಕುತೂಹಲಕರ. ಅವರು ಇಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರು ಹಿಂದೆಂದೂ ಹೀಗೆ ಮಾಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅದು ವಿಷಯಗಳನ್ನು ತಿಳಿದುಕೊಳ್ಳುವ ವಿಚಾರ ಎಂದು ಅವರು ಹೇಳಿದರು.  ‘ನಾನು ರಾಜಕೀಯ ವ್ಯವಸ್ಥೆಯಲ್ಲಿ ೧೪-೧೫ ವರ್ಷ ದುಡಿದಿದ್ದೇನೆ. ನಾನು ಪೆಟ್ಟು ತಿಂದಿದ್ದೆನೆ ಮತ್ತು ಅದರಿಂದ ಸಾಕಷ್ಟು ಕಲಿತಿದ್ದೇನೆ. ನಾನು ಇತರ ವ್ಯಕ್ತಿಗಳ ಕಲ್ಪನೆಗಳನ್ನು ಗೌರವಿಸುವ ಮತ್ತು ಆಲಿಸುವ ವ್ಯಕ್ತಿ. ಅತ್ಯಂತ ಮುಖ್ಯವಾದ ವಿಷಯವೇನೆಂದರೆ ದ್ವೇಷದ ಮುಖಾಂತರವೂ ನಾನು ನೋಡಬಲ್ಲೆ. ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ನುಡಿದರು.  ‘ಆದರೆ, ಕಟ್ಟ ಕಡೆಗೆ ಅದು ನಿಮ್ಮ ಆಯ್ಕೆ. ನೀವು ನಾನು ಬಂದಿರುವ ಕುಟುಂಬಕ್ಕಾಗಿ ನನ್ನನ್ನು ಖಂಡಿಸಬಹುದು ಅಥವಾ ಸಾಮರ್ಥ್ಯವನ್ನು ನೋಡಿ ನೀವು ನನ್ನನ್ನು ಅಳೆಯಬಹುದು. ಅದು ನಿಮಗೆ ಬಿಟ್ಟದ್ದು, ನನಗೇನಿಲ್ಲ ಎಂದು ಅವರು ಹೇಳಿದರುಪ್ರಧಾನಿಯಾಗುವ ಕನಸಿಲ್ಲ: ನನಗೆ ಪ್ರಧಾನ ಮಂತ್ರಿಯಾಗುವ ಯಾವುದೇ ಕನಸಿಲ್ಲ. ೨೦೧೯ರ ಲೋಕಸಭಾ ಚುನಾವಣೆಯ ಬಳಿಕ ನಾಯಕತ್ವದ ಪ್ರಶ್ನೆಯನ್ನು ನಿರ್ಧರಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.  ‘ಇಂತಹ ಯಾವುದೇ ದೃಷ್ಟಿ ನನಗಿಲ್ಲ. ನಾನು ಸೈದ್ಧಾಂತಿಕ ಸಮರದಲ್ಲಿ ತೊಡಗಿದ್ದೇನೆ. ಇದು ನಿಜವಾಗಿಯೂ ೨೦೧೪ರ ಬಳಿಕ ನನ್ನಲ್ಲಿ ಆಗಿರುವ ಬದಲಾವಣೆ ಎಂದು ರಾಹುಲ್ ಗಾಂಧಿ ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ಜೊತೆಗಿನ ಸಂವಾದದಲ್ಲಿ ನುಡಿದರು. ನಾಯಕತ್ವ ಕುರಿತ (ಇತರ ಪಕ್ಷಗಳ ಜೊತೆಗಿನ) ಮಾತುಕತೆಗಳು, ಚುನಾವಣೆಯಲ್ಲಿ ನಾವು ಬಿಜೆಪಿ ಮತ್ತು ಆರೆಸ್ಸೆಸ್ಸನ್ನು ಮೂಲೆಗುಂಪು ಮಾಡಿದ ಬಳಿಕ ನಡೆಯುತ್ತವೆ ಎಂದು ಅವರು ನುಡಿದರು. ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗೆಗಿನ ಪ್ರಶ್ನೆಗೆನೀವು ನನಗೆ ವ್ಯೂಹಾತ್ಮಕ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ನಾವು ವಿಶಾಲ ಮೈತ್ರಿಕೂಟಕ್ಕಾಗಿ ಶ್ರಮಿಸುತ್ತಿದ್ದೇವೆ. ಬಂಗಾಳದಲ್ಲಿ, ನಮ್ಮ ಸಂಘಟನೆ ಇದೆ. ನಾನು ನನ್ನ ಬಂಗಾಳದ ಘಟಕವನ್ನು ಕೇಳಬೇಕು ಮತ್ತು ಅವರಿಗೆ ನಿರ್ಧರಿಸಲು ಬಿಡಬೇಕು. ಮಾತುಕತೆಗಳು ಇನ್ನೂ ನಡೆಯುತ್ತವೆ. ನಾವಿನ್ನೂ ನಿರ್ಧರಿಸಿಲ್ಲ ಎಂದು ರಾಹುಲ್ ಉತ್ತರಿಸಿದರು. ‘ಆದರೆ ಎಲ್ಲ ವಿರೋಧ ಪಕ್ಷಗಳ ನಾಯಕರಲ್ಲೂ ಇರುವ ಒಮ್ಮತದ ಅಭಿಪ್ರಾಯ ಏನೆಂದರೆ ಆರೆಸ್ಸೆಸ್ ಭಾರತದ ಸಾಂಸ್ಥಿಕ ವ್ಯವಸ್ಥೆಗೇ ಅಪಾಯ ಒಡ್ಡುತ್ತಿದೆ, ಅವರು ವ್ಯವಸ್ಥಿತವಾಗಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಮತ್ತು ತಮ್ಮ ಜನರನ್ನು ಅದರೊಳಕ್ಕೆ ತುಂಬಿಸುತ್ತಿದ್ದಾರೆ ಎಂಬುದು ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷವು ಮುಂದಿನ ವರ್ಷ ನಡೆಯಲಿರುವ ಮಹಾ ಚುನಾವಣಾ ಸಿದ್ಧತೆ ಸಲುವಾಗಿ ಮೂರು ನಿರ್ಣಾಯಕ ಸಮಿತಿಗಳಾದ ಸಮನ್ವಯ ಸಮಿತಿ, ಪ್ರಣಾಳಿಕ ಸಮಿತಿ ಮತ್ತು ಪ್ರಚಾರ ಸಮಿತಿಗಳನ್ನು ರಚಿಸಿದೆ.

2018: ನವದೆಹಲಿ: ಪ್ರವಾಹ ಹಾನಿಯಿಂದ ತತ್ತರಿಸಿದ ಕೇರಳದ ಜನರತ್ತ ಕೇಂದ್ರ ಸರ್ಕಾರತನ್ನ ಬೆನ್ನು ತಿರುಗಿಸಿದೆ ಎಂಬುದಾಗಿ ಆಪಾದಿಸಿ ರಾಜ್ಯಸಭಾ ಸದಸ್ಯ ಹಾಗೂ ಕೇರಳದ ಮಾಜಿ ಸಚಿವ ಬಿನೋಯ್ ವಿಶ್ವಮ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಕೇಂದ್ರ ಸರ್ಕಾರವು ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿಲ್ಲ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ನಂತಹ (ಯುಎಇ) ವಿದೇಶಗಳಿಗೆ ರಾಜ್ಯಕ್ಕೆ ತನ್ನ ಹಿಂದಿನ ವೈಭವವನ್ನು ತಂದುಕೊಡಲು ಮರುನಿರ್ಮಾಣ ಮಾಡುವ ನಿಟ್ಟಿನಲ್ಲಿ ನೆರವಾಗಲೂ ಅವಕಾಶ ನೀಡಿಲ್ಲ ಎಂದು ಅವರು ಹೇಳಿದರು. ಸಂವಿಧಾನದ ೧೪೨ನೇ ಪರಿಚ್ಛೇದ ಅಡಿಯಲ್ಲಿಸಂಪೂರ್ಣ ನ್ಯಾಯ ಒದಗಿಸಲು ತನಗಿರುವ ಅಸಾಧಾರಣ ಸಾಂವಿಧಾನಿಕ ಅಧಿಕಾರಗಳನ್ನು ಬಳಸಿಕೊಳ್ಳುವಂತೆ ಮತ್ತು ಕೇರಳದಲ್ಲಿ ಪರಿಹಾರ ಹಾಗೂ ಪುನರ್ ವಸತಿ ಕಾರ್ಯಕ್ಕೆ ವಿದೇಶೀ ನೆರವಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಿಶ್ವಮ್ ಅವರು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದಾರೆ.
೨೦೦೪ರಿಂದ ಅನುಸರಿಸಲಾಗುತ್ತಿರುವ, ಅಗತ್ಯ ಎನಿಸುವವರೆಗೆ ವಿಪತ್ತು ನಿಧಿಗೆ ವಿದೇಶೀ ನೆರವನ್ನು ರಾಷ್ಟ್ರವು ಸ್ವೀಕರಿಸುವುದಿಲ್ಲ ಎಂಬಅಲಿಖಿತ ನೀತಿಯನ್ನು ಉಲ್ಲೇಖಿಸಿ ಕೇರಳಕ್ಕೆ ವಿದೇಶೀ ನೆರವನ್ನು ನಿರಾಕರಿಸಲಾಗಿದೆ ಎಂದು ಸಂಸದ ಹೇಳಿದರು. ಈ ನೀತಿಯು ಕೇರಳದ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫, ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿ ೨೦೦೯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ೨೦೧೬ ಇವುಗಳಿಗೂ ವಿರುದ್ಧವಾಗಿದೆ ಎಂದು ವಿಶ್ವಮ್ ಅವರ ಅರ್ಜಿ ಪ್ರತಿಪಾದಿಸಿತು. ಕೇರಳವು ಪ್ರವಾಹಗಳಿಂದಾಗಿ ೨೧,೦೦೦ ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಮತ್ತು ೧೦,೦೦೦ ಕಿಮಿಗಳಷ್ಟು ರಸ್ತೆ ಜಾಲ ನಾಶಗೊಂಡಿದೆ ಎಂದು ಸಂಸದ ಬೊಟ್ಟು ಮಾಡಿದರು. ರಾಜ್ಯ ಸರ್ಕಾರವು ಕೇಂದ್ರಕ್ಕೆ ೧೨೦೦ ಕೋಟಿ ರೂಪಾಯಿಗಳ ತತ್ ಕ್ಷಣದ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಆದರೆ ಆಘಾತಕರವಾಗಿ ಕೇಂದ್ರವು ಕೇವಲ ೧೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತು.  ’ಇದು ರಾಜ್ಯವು ಮಾಡಿದ ಮನವಿಯ ೧೦ನೇ ಒಂದು ಭಾಗಕ್ಕಿಂತಲೂ ಕಡಿಮೆ ಎಂದು ಸುಪ್ರೀಂಕೋರ್ಟಿನಲ್ಲಿ ವಿಶ್ವಮ್ ಅವರನ್ನು ಪ್ರತಿನಿಧಿಸಿದ ವಕೀಲರಾದ ಶ್ರೀರಾಮ್ ಪರಕ್ಕತ್ ಮತ್ತು ಸರತ್ ಜನಾರ್ದನನ್ ಅಹವಾಲು ಮಂಡಿಸಿದರು. ತನ್ನ ಎರಡನೇ ಮನವಿಯಲ್ಲಿ ರಾಜ್ಯ ಸರ್ಕಾರವು ೨೦೦೦ ಕೋಟಿ ರೂಪಾಯಿಗಳ ನೆರವನ್ನು ಕೋರಿತು. ಪ್ರತಿಭಟನೆಗಳ ಬಳಿಕ ಕೇಂದ್ರ ಸರ್ಕಾರವು ೫೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತು. ಇತರ ರಾಜ್ಯಗಳು ೨೦೦ ಕೋಟಿ ರೂ. ದೇಣಿಗೆ ನೀಡಿದವು.. ಅನಿವಾಸಿ ಭಾರತೀಯರೂ ಪ್ರವಾಹ ಪರಿಹಾರಕ್ಕೆ ದೇಣಿಗೆ ನೀಡಿದ್ದಾರೆ ಎಂದು ಅರ್ಜಿ ತಿಳಿಸಿತು. ಆದರೆ ಈವರೆಗೆ ಬಂದಿರುವ ನಿಧಿ, ಪುನರ್ ವಸತಿ ಮತ್ತು ಕೇರಳದ ಮರು ನಿರ್ಮಾಣ ಕಾಮಗಾರಿಗಳಿಗೆ ಏನೇನೂ ಸಾಲದು. ಕೇರಳವು ತನ್ನ ಹಿಂದಿನ ವೈಭವದ ಹಾದಿಗೆ ಬರಲು ಹಲವಾರು ವರ್ಷಗಳೇ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ವಿಶ್ವಮ್ ಹೇಳಿದರು. ಇನ್ನೊಂದೆಡೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೇರಳ ಮತ್ತು ಅರಬ್ ಜಗತ್ತಿನ ನಡುವಣ ವಿಶೇಷ ಬಾಂಧವ್ಯ ಹಿನ್ನೆಲೆಯಲ್ಲಿ ಹಣ ನೀಡಲು ಒಪ್ಪಿದೆ. ಯುಎಎಇಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೇರಳದ ಜನರಿದ್ದಾರೆ ಎಂದು ಅರ್ಜಿ ಹೇಳಿತುಅರಬ್ ರಾಷ್ಟ್ರಗಳು ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಅನಿವಾಸಿ ಭಾರತೀಯರಿಗೆ ಕೇರಳ ತಾಯ್ನಾಡು. ಅವರು ರಾಷ್ಟ್ರಗಳ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ವಿಶ್ವಮ್ ತಿಳಿಸಿದರು. 

2017: ನವದೆಹಲಿ: ಕಾಳಧನ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮಾಂಸ ರಫ್ತು ಉದ್ಯಮಿ ಮೊಯಿನ್ ಖುರೇಷಿ ಅವರನ್ನು ಹಿಂದಿನ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದರು.  ಖುರೇಷಿ ಅವರನ್ನು ನವದೆಹಲಿಯಲ್ಲಿ ಬಂಧಿಸಲಾಗಿಯಿತು. ಖುರೇಷಿ ಅವರನ್ನು ವಿಚಾರಣೆಗೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡಿದ್ದರುತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಅಧಿಕಾರಿಗಳು ಅವರನ್ನು ಬಂಧಿಸಿದರು. ತೆರಿಗೆ ವಂಚನೆ, ಲಂಡನ್ ಮತ್ತು ದುಬೈಗಳಲ್ಲಿ ನಡೆಸುತ್ತಿದ್ದ ಹವಾಲಾ ದಂಧೆ ಹೀಗೆ ಹಲವಾರು ಪ್ರಕರಣಗಳಲ್ಲಿ ಖುರೇಷಿ ಆರೋಪಿ. ಜಾರಿ ನಿರ್ದೇಶನಾಲಯವು 2014 ಮತ್ತು 2015ರಲ್ಲಿ ಖುರೇಷಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
2017: ಪಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ
ಸಮೀಕ್ಷೆ ನಡೆಸಿ ಐನೂರು ಕೋಟಿ ರೂ.ಗಳ ತತ್ಕ್ಷಣದ ಪರಿಹಾರವನ್ನು ಘೋಷಿಸಿದರುಪ್ರವಾಹದಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಘೋಷಿಸಲಾಗಿರುವ ತಲಾ 2 ಲಕ್ಷ ರೂ. ಪರಿಹಾರದ ಹೊರತಾಗಿ 500 ಕೋಟಿ ರೂ. ಪರಿಹಾರವನ್ನು ಮೋದಿ ಘೋಷಿಸಿದರು. ಪ್ರವಾಹದಿಂದಾಗಿ ಉಂಟಾಗಿರುವ ನಾಶ ನಷ್ಟವನ್ನು ಅಂದಾಜಿಸುವ ಸಲುವಾಗಿ ಶೀಘ್ರವೇ ಕೇಂದ್ರ ತಂಡವೊಂದನ್ನು ಬಿಹಾರಕ್ಕೆ ಕಳುಹಿಸಲಾಗುವುದು ಎಂದು ಮೋದಿ ಪ್ರಕಟಿಸಿದರುಬೆಳೆ ನಾಶವನ್ನು ಅಂದಾಜಿಸಲು ತುರ್ತಾಗಿ ಅಂದಾಜಿಸಿ ರೈತರಿಗೆ ತತ್ಕ್ಷಣದ ಪರಿಹಾರ ದೊರಕಿಸಲು ತಮ್ಮ ಸಿಬಂದಿಯನ್ನು  ಕಳುಹಿಸುವಂತೆ ಮೋದಿ ವಿಮಾ ಕಂಪೆನಿಗಳಿಗೆ ಸೂಚಿಸಿದರು

2017:
ಸಿರ್ಸಾಅತ್ಯಾಚಾರ ಪ್ರಕರಣದಲ್ಲಿ ತಪ್ಪಿಸ್ತರಾಗಿ ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ,
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಆಶ್ರಮಕ್ಕೆ ಸೇನೆ ಮುತ್ತಿಗೆ ಹಾಕಿತು.  ಸಿರ್ಸಾದಲ್ಲಿರುವ ಆಶ್ರಮಕ್ಕೆ ಸಾವಿರಾರು ಸಿಆರ್ಪಿಎಫ್ ಪಡೆಯ ಯೋಧರು ಮುತ್ತಿಗೆ ಹಾಕಿದ್ದು , ಆಶ್ರಮದ ಒಳಗಿದ್ದ ಬಾಬಾ ಭಕ್ತರನ್ನು ಸ್ಥಳದಿಂದ ತೆರವು  ಮಾಡಿದರು. ಸೈನಿಕರ ಮೇಲೂ ಕಲ್ಲು: ಸೈನಿಕರು ಆಶ್ರಮಕ್ಕೆ ಮುತ್ತಿಗೆ ಹಾಕುವ ವೇಳೆ ಉದ್ರಿಕ್ತ ಭಕ್ತರು  ಕಲ್ಲು ತೂರಾಟ ನಡೆಸಿದರು ಎಂದು ವರದಿ ತಿಳಿಸಿತು. ಹಿಂದಿನ ದಿನ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಬಾಬಾ ದೋಷಿ ಎಂದು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದು   32ಕ್ಕೂ ಹೆಚ್ಚು  ಮಂದಿ ಸಾವನ್ನಪ್ಪಿದ್ದರು. ಪಂಚಕುಲದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್, ದೆಹಲಿ, ರಾಜಸ್ಥಾನಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿತ್ತು. 8 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ: ಬಾಬಾ ಬಂಧನಕ್ಕೆ ತೀವ್ರ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಬಾಬಾನ  6 ಮಂದಿ ಖಾಸಗಿ ಅಂಗರಕ್ಷಕರು , ಇಬ್ಬರು ಭಕ್ತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಇದೇ ವೇಳೆ ಶನಿವಾರ ಸಿರ್ಸಾ ಆಶ್ರಮದಲ್ಲಿ 15 ಮಂದಿ ಪುಂಡ ಭಕ್ತರನ್ನು ಬಂಧಿಸಿ ಜೈಲಿಗಟ್ಟಲಾಯಿತು.  

2017: ಜಮ್ಷೆಡ್ಪುರಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಅವರ ಕುಟುಂಬ ಸದಸ್ಯರು
ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡ ಹೊರತಾಗಿಯೂ ಅವರೆಲ್ಲರೂ ಪವಾಡ ಸದೃಶ ಪಾರಾದ ಘಟನೆ ಘಟಿಸಿತು. ಪಶ್ಚಿಮ ಸಿಂಘಭೂಮ್ ಜಿಲ್ಲೆಯ ಚಕ್ರಧಾರಪುರ ಬ್ಲಾಕ್ ಕರಂಜೋ ಎಂಬಲ್ಲಿಗೆ ಸಮೀಪ ಕೋಡಾ ಅವರ ಕಾರಿನ ಒಂದು ಟೈರ್ ನ್ಪೋಟಗೊಂಡಿತು. ಆದರೂ ಅದೃಷ್ಟವಶಾತ್ ಕಾರು ಪಲ್ಟಿಯಾಗದ ಕಾರಣ ಎಲ್ಲರೂ ಪಾರಾದರು. ಕಾರಿನಲ್ಲಿ ಮಧು ಕೋಡಾ, ಅವರ ಶಾಸಕಿ ಪತ್ನಿ ಗೀತಾ ಮತ್ತು ಪುತ್ರಿ ಇದ್ದರು. ಕೋಡಾ ಅವರು ಮಝಗಾಂವ್ನಲ್ಲಿ ುಟ್ಬಾಲ್ ಪಂದ್ಯ ವೀಕ್ಷಿಸಲು ಮುಖ್ಯ ಅತಿಥಿಯಾಗಿ ಹೋಗುತ್ತಿದ್ದರು. ಅವಘಡದ ಬಳಿಕ ಕೋಡಾ ಮತ್ತು ಅವರ ಕುಟುಂಬದವರು ಬೇರೊಂದು ಕಾರಿನಲ್ಲಿ  ಗಮ್ಯ ತಾಣವನ್ನು ತಲುಪಿದರುಕೋಡಾ ಅವರ ಪತ್ನಿ ಗೀತಾ ಪಶ್ಚಿಮ ಸಿಂಘಭೂಮ್ ಜಗನ್ನಾಥಪುರ ಕ್ಷೇತ್ರದಿಂದ ಜಯಿಸಿರುವ ಪಕ್ಷೇತರ ಶಾಸಕಿ

2016: ನವದೆಹಲಿ: ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡುವಂತಾಗಲು ಕಾರ್ಯಪಡೆ (ಟಾಸ್ಕ್ ಪೋರ್ಸ್) ಸಮಿತಿ ರಚಿಸಲು ಕೇಂದ್ರ ಸರಕಾರ ನಿರ್ಧರಿಸಿತು. ಮುಂದಿನ ಮೂರು ಒಲಿಂಪಿಕ್ಸ್ ಗಳಲ್ಲಿ ನಮ್ಮ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಲು ಸಹಾಯವಾಗುವಂತೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.  ಈ ಟಾಸ್ಕ್ ಫೋರ್ಸ್ ಸಮಿತಿ  ಕ್ರೀಡಾಪಟುಗಳಿಗೆ ಉತ್ತಮ ಸೌಕರ್ಯ, ತರಬೇತಿ, ಆಯ್ಕೆ ವಿಧಾನ ಮತ್ತು ಇನ್ನಿತರ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯವೆಸಗಲಿದೆ. ವಾರಗಳ ಹಿಂದೆಯಷ್ಟೇ ಮುಗಿದ ರಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿತ್ತು. ಸೌಕರ್ಯದ ಕೊರತೆ ಇದ್ದರೂ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದುವ ಮೂಲಕ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಹಿಂದಿಕ್ಕಿದರು.  ಆಗಸ್ಟ್‌ 25 ಲೆಕ್ಕಾಚಾರದ ಪ್ರಕಾರ ಬಚ್ಚನ್ ಅವರನ್ನು 2 .20ಕೋಟಿ ಜನರು ಹಿಂಬಾಲಿಸುತ್ತಿದ್ದರು. ಮೋದಿ ಅವರು 2.21ಕೋಟಿ ಹಿಂಬಾಲಕರ ಮೂಲಕ ಸಣ್ಣ ಅಂತರದಿಂದ ಮುಂದೆ ಸಾಗಿದರು. ಇದೇ ಜನವರಿಯಲ್ಲಿ 1.73 ಕೋಟಿ ಹಿಂಬಾಲಕರನ್ನು ಹೊಂದಿದ್ದ ಶಾರುಖ್ ಖಾನ್ ಅವರನ್ನು ಮೋದಿ 1.74 ಕೋಟಿ ಹಿಂಬಾಲಕರನ್ನು ಪಡೆದು ಹಿಂದಿಕ್ಕಿದ್ದರು. ಸದ್ಯ 2.09 ಕೋಟಿ ಹಿಂಬಾಲಕರನ್ನು ಹೊಂದಿರು ಶಾರುಖ್  ಮೂರನೇ ಸ್ಥಾನದಲ್ಲಿದ್ದಾರೆ. ಮೋದಿ ಅವರ (@narendramodi) ಖಾತೆಯನ್ನು 2015ರಲ್ಲಿ ಪ್ರತಿ ಎರಡು ತಿಂಗಳಿಗೆ 10 ಲಕ್ಷ ಜನರು ಹಿಂಬಾಲಿಸುತ್ತಿದ್ದರು.. ಕಳೆದ ಸೆಪ್ಟೆಂಬರ್ನಲ್ಲಿ 1.5 ಕೋಟಿ, ನವೆಂಬರ್ನಲ್ಲಿ 1.6 ಕೋಟಿ ಹಿಂಬಾಲಕರಿದ್ದರು. 2016 ಎಂಟು ತಿಂಗಳ ಅವಧಿಯಲ್ಲಿ ಸುಮಾರು 50 ಲಕ್ಷ ಜನರು ಪಟ್ಟಿಗೆ ಸೇರ್ಪಡೆಯಾಗಿದ್ದರು. 2009ರಿಂದ ಟ್ವಿಟರ್ನಲ್ಲಿ ಸಕ್ರಿಯರಾಗಿರುವ ಮೋದಿ ಅವರು ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಗತ್ತಿನ ರಾಜಕಾರಣಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಒಬಾಮ ಅವರದ್ದು ಮೊದಲ ಸ್ಥಾನ.


2016: ಬೆಂಗಳೂರು: ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲಸಾಧಿಸಬೇಕೆಂಬ ಛಲ ಮನಸ್ಸಿನಲ್ಲಿ ಇದ್ದರೆ, ಗುರಿಯ ಹಾದಿ ತಲುಪುವುದು ಸುಲಭ. ದೃಢವಿಶ್ವಾಸ, ಸತತ ಪ್ರಯತ್ನದ ಮೂಲಕ ತಾವು ಅಂದುಕೊಂಡ ಕ್ಷೇತ್ರದಲ್ಲಿ  ಸಾಧನೆಗೈದ  ವ್ಯಕ್ತಿಗಳು ಇತಿಹಾಸದ ಪುಟ ಸೇರುತ್ತಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿರುವ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಪುರುಷೋತ್ತಮ ದೇರಾಜೆ   ಅಂತಹ ವಿಶಿಷ್ಟ ಸಾಧನೆಯೊಂದನ್ನು ಮಾಡಿದರು.ಅತಿ ವೇಗದ ತಲೆ ನಡಿಗೆ (Fastest Head stand Moving) ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಅವರದ್ದು. 35ವರ್ಷದ ಪುರುಷೋತ್ತಮ ದೇರಾಜೆ ಮೂಲತಃ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಅರಂತೋಡು ಗ್ರಾಮದವರು. ಕೃಷಿಕ ಕುಟಂಬದ ಸರಸ್ವತಿಸಣ್ಣಯ್ಯಗೌಡ ದಂಪತಿಯ ಪುತ್ರ. ಒಮ್ಮೆ ಸೋದರನೊಬ್ಬ ಮನೆಯಲ್ಲಿ ತಲೆ ಕೆಳಗೆ ಮಾಡಿ ಅಭ್ಯಾಸ ಮಾಡುತ್ತಿದ್ದುದನ್ನು ಗಮನಿಸಿದ ಪುರೋಷೋತ್ತಮ ಅದನ್ನೇ ಅನುಕರಿಸಿದರು. ಬಾಲ್ಯದ ತುಂಟಾಟದಲ್ಲಿ ಅನುಕರಣೆಯ ದಾರಿ ಹಿಡಿದ ಅವರು ಮುಂದೆ ತಲೆನಡಿಗೆಯಲ್ಲೇ ದಾಖಲೆ ಮಾಡಿ ಸೈ ಎನಿಸಿಕೊಂಡರು. ತಲೆಕೆಳಗೆ ಮಾಡಿ ಒಂದು ನಿಮಿಷಕ್ಕೆ ಅತಿವೇಗವಾಗಿ 7ಮೀಟರ್ ದೂರ ಚಲಿಸುವ ಮೂಲಕ ವಿಶ್ವದಾಖಲೆಯ ಪುಟ ಸೇರಿದ್ದಾರೆ. ಪುದುಚೆರಿಯ Assist World Record Research Foundation ಇವರ ಸಾಧನೆಯನ್ನು  ವಿಶ್ವ ದಾಖಲೆಯ ಪಟ್ಟಿಗೆ ಸೇರಿಸಿತು. ಈ ಸಾಧನೆಗಾಗಿ ಅವರು ಅಪಾರ ಪರಿಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಕಲೆಯನ್ನು ಅಭ್ಯಾಸವಾಗಿ ಮಾಡಿಕೊಂಡಿದ್ದ ಅವರು, ಕಠಿಣ ಪರಿಶ್ರಮದ ಮೂಲಕ ಸಾಧನೆಯ ಶಿಖರ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಸಾಧನೆ ಸಿದ್ಧಿಸಲು ಯೋಗ ಕೂಡ ಸಹಕಾರಿಯಾಯಿತು. ಎಂಟು ವರ್ಷದಿಂದ ಯೋಗಾಸಕ್ತರಿಗೆ  ತರಬೇತಿ ನೀಡುತ್ತಿದ್ದೇನೆ. ನಾನು ಕೂಡ ಸತತವಾಗಿ ಅಭ್ಯಾಸ  ಮಾಡುತ್ತಿದ್ದೇನೆಒಂದು ನಿಮಿಷಕ್ಕೆ ಏಳು ಮೀಟರ್ ದೂರ ತಲೆಯಿಂದ ಚಲಿಸುವುದು  ಕಷ್ಟದ ಕೆಲಸ. ಆದರೆ, ಛಲ ಬಿಡದಂತೆ ಅಭ್ಯಾಸ ಮಾಡಿದ್ದರಿಂದಲೇ ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತುಎಂದು  ಅವರು ಪರಿಶ್ರಮದ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ

2015:ಅಹಮದಾಬಾದ್ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿಗಲಭೆಯಲ್ಲಿ ಒಟ್ಟು 6 ಜನರುಮೃತರಾದರು. ಪಟೇಲ್ ಸಮುದಾಯದ ಮುಖಂಡ ಹಾರ್ದಿಕರ್​ನ್ನು 25ರ ರಾತ್ರಿಯೇ ಬಿಡುಗಡೆಗೊಳಿಸಿದ್ದರೂಹೋರಾಟ ತೀವ್ರ ರೂಪ ಪಡೆಯಿತು. ರಾಜ್ಯ ಸಾರಿಗೆ ಸಂಸ್ಥೆಯ ನೂರಕ್ಕೂ ಅಧಿಕ ಬಸ್​ಗಳಿಗೆ
ಬೆಂಕಿ ಹಚ್ಚಲಾಯಿತು..ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ಷಿಪ್ರಕಾರ್ಯಾಚರಣಾ ಪಡೆಸಿಆರ್​ಪಿಎಫ್ಬಿಎಸ್​ಎಫ್ ಯೋಧರನ್ನು ಕಳುಹಿಸಿತು. ಈದಿನಸಂಭವಿಸಿದ ಗಲಭೆಗೆ 6 ಜನರು ಬಲಿಯಾದರು. ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ,ಸಿಎಂ ಆನಂದಿಬೆನ್ ಪಟೇಲ್ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಹಿಂದಿನರಾತ್ರಿ ಹಾರ್ದಿಕ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಅಹಮದಾಬಾದ್ ನಗರದಲ್ಲಿ 20 ಕಡೆಗಳಲ್ಲಿ ಪೊಲೀಸರಮೇಲೆ ಕಲ್ಲುತೂರಾಟವಾಹನಗಳಿಗೆ ಬೆಂಕಿಹಚ್ಚಿ ಹಿಂಸಾಚಾರ ಆರಂಭಿಸಿದರುಪರಿಸ್ಥಿತಿನಿಯಂತ್ರಿಸಲು ಅಹಮದಾಬಾದ್ ವ್ಯಾಪ್ತಿಯ ರಾಮೊಲ್ನಿಕೋಲ್ಬಾಪೂನಗರ್,ಘಾಟ್ಲೋಡಿಯಾನರನ್​ಪುರಒಧವ್ನರೋಡಾಕೃಷ್ಣಾನಗರ ಹಾಗೂ ವಡಾಜ್ 9ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿಗೊಳಿಸಿತು. ಈದಿನ ಮುಂಜಾನೆ 3 ಗಂಟೆವೇಳೆಗೆ ಪಟೇಲ್ ಸಮುದಾಯ ಬಹುಸಂಖ್ಯಾತರಾಗಿರುವ ವಡೋದರಾಸೂರತ್,ರಾಜ್​ಕೋಟ್ಭರೂಚ್ಜಾಮ್ಗರಭಾವನಗರ ಹಾಗೂ ವಲ್ಸಾಡ್​ಗಳಲ್ಲಿ ಸಾವಿರಾರುಮಂದಿ ವಾಹನಗಳನ್ನು ತಡೆದು ಬೆಂಕಿ ಹಚ್ಚಿದರುಮತ್ತೊಂದೆಡೆಬಿಜೆಪಿ ಸರ್ಕಾರದಪಟೇಲ್ ಸಮುದಾಯದ ಶಾಸಕರುಸಂಸದರುಸಚಿವರ ಮನೆ ಹಾಗೂ ಕಚೇರಿಗಳಮೇಲೂ ಕಲ್ಲುತೂರಾಟ ನಡೆಸಿದರು.
2015: ನವದೆಹಲಿಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿಮುಖರ್ಜಿಯನ್ನು ಬಂಧಿಸಿದ ಬೆನ್ನಲ್ಲೇ ಇನ್ನೊಬ್ಬ ಆರೋಪಿ ಎಂದೇ ಹೇಳಲಾಗುತ್ತಿರುವಸಂಜೀವ್ ಖನ್ನಾರನ್ನೂ ಮುಂಬೈ ಪೊಲೀಸರು ಬಂಧಿಸಿದರು. ಸೋದರಿ ಹತ್ಯೆಗೆಇಂದ್ರಾಣಿಗೆ ಸಹಕರಿದ್ದ ಎನ್ನುವ ಹಿನ್ನೆಲೆಯಲ್ಲಿ ಸಂಜೀವ್ ಖನ್ನಾರನ್ನು ಕೋಲ್ಕತದಲ್ಲಿಬಂಧಿಸಲಾಯಿತು. ಪಶ್ಚಿಮ ಬಂಗಾಳ ಪೊಲೀಸರು ಖನ್ನಾ ಬಂಧನಕ್ಕೊಳಗಾಗಿರುವಮಾಹಿತಿಯನ್ನು ಖಚಿತಪಡಿಸಿದರು. ಅಷ್ಟಕ್ಕೂ ಸಂಜೀವ್ ಮತ್ಯಾರೂ ಅಲ್ಲಇಂದ್ರಾಣಿಮೊದಲ ಪತಿಕಳೆದ ಕೆಲ ದಿನಗಳಿಂದ ಆದ ಮಹತ್ವದ ಬೆಳವಣಿಗೆಯಲ್ಲಿ ಶೀನಾಬೋರಾ ಹತ್ಯೆ ಪ್ರಕರಣ ಹೊಸ ರೂಪ ಪಡೆದುಕೊಂಡಿತು. ಸ್ಟಾರ್ ಇಂಡಿಯಾದ ಮಾಜಿಸಿಇಒ ಪೀಟರ್ ಮುಖರ್ಜಿ ಪತ್ನಿಯಾಗಿರುವ ಇಂದ್ರಾಣಿಯವರನ್ನು ಹಿಂದಿನ ದಿನಬಲವಾದ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
2008: ಜಗದ್ವಿಖ್ಯಾತ ತಿರುಪತಿ ತಿರುಮಲ ದೇವಾಲಯ ನಗರಿಯಲ್ಲಿ ಇತಿಹಾಸ ಮರುಕಳಿಸಿತು. ಅಲ್ಲಿನ ಅವಿಲಾಲ ಚೆರುವು ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ತಮ್ಮ ನೂತನ `ಪ್ರಜಾ ರಾಜ್ಯಂ' ಪಕ್ಷಕ್ಕೆ ನಾಂದಿ ಹಾಡಿದರು. ಬಿಳಿ, ಹಸಿರು ವರ್ಣದ ನಡುವೆ ಉದಯಿಸುತ್ತಿರುವ ಸೂರ್ಯನ ಲಾಂಛನವಿರುವ ಪಕ್ಷದ ಪತಾಕೆ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಆರೋಹಣಗೊಳ್ಳುತ್ತಿದ್ದಂತೆಯೇ, ಆಂಧ್ರ ಪ್ರದೇಶದ ರಾಜಕೀಯದಲ್ಲಿ ಸಂಚಲನವೊಂದು ಸೃಷ್ಟಿಯಾಯಿತು. 1982ರಲ್ಲಿ ಇದೇ ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲೇ ದಿವಂಗತ ಎನ್. ಟಿ. ರಾಮರಾವ್ ಅವರು ಆರಂಭಿಸಿದ್ದ `ತೆಲುಗುದೇಶಂ' ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿತ್ತು.

2008: ನೇಪಾಳದಲ್ಲಿ ಕೋಶಿ ನದಿ ತುಂಬಿ ಹರಿದು ಪ್ರವಾಹ ತಡೆಗೆ ನಿರ್ಮಿಸಿದ ಏರಿ ಒಡೆದ ಪರಿಣಾಮ ತಗ್ಗು ಪ್ರದೇಶವಾದ ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿ 45 ಮಂದಿ ಮೃತರಾದರು. ಲಕ್ಷಾಂತರ ಜನರು ಅಪಾಯದಲ್ಲಿ ಸಿಲುಕಿದರು.

2007: `ಗೋವನ್ನು ನಾವೆಲ್ಲರೂ ಎರಡನೇ ಮಾತೆ ಎಂದು ಕರೆಯುತ್ತೇವೆ. ಆದರೆ ಗೋವು ತಾಯಿಗೆ- ತಾಯಿಯಾದ್ದರಿಂದ ನಮ್ಮೆಲ್ಲರ ಮೊದಲ ಮಾತೆ ಎಂದು ಕರೆಯಬೇಕು' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಆರ್.ಟಿ. ನಗರದ ಎಚ್. ಎಂ.ಟಿ ಬಡಾವಣೆಯಲ್ಲಿ 'ಗೋ ಸಂಧ್ಯಾ' ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ದೇಶ ಮತ್ತು ಸಂಸ್ಕೃತಿಯನ್ನು ಉಳಿಸುವ ದೇಶೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ರಾಮಚಂದ್ರಾಪುರ ಮಠ ನಿಂತಿದೆ. ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ 70 ಬಗೆಯ ದೇಶೀಯ ತಳಿಗಳ ಪೈಕಿ ಪ್ರಸ್ತುತ 32 ತಳಿಗಳು ಮಾತ್ರ ಉಳಿದಿವೆ. ಈ ಸಂಖ್ಯೆಯಲ್ಲಿ ಗೋತಳಿಗಳು ನಶಿಸಲು ಕಾರಣವೇನು ಎಂದು ದೇಶದ ಸಂಸತ್ತು ಹಾಗೂ ವಿಧಾನಸೌಧಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದರು. ರಾಮಚಂದ್ರಾಪುರ ಮಠದಲ್ಲಿರುವ ಗೋವಿನ ಒಂದು ತಳಿಯನ್ನು ಸಂರಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರನಟ ವಿವೇಕ ಒಬೆರಾಯ್ ಕುಟುಂಬ ವಹಿಸಿಕೊಂಡಿದೆ ಎಂದು ಮಠವು ಈ ಸಂದರ್ಭದಲ್ಲಿ ಪ್ರಕಟಿಸಿತು.

2007: ``ಸುವರ್ಣ ವಿಧಾನಸೌಧ ಶಂಕುಸ್ಥಾಪನೆಯೊಂದಿಗೆ ಬೆಳಗಾವಿ ನಗರ ರಾಜ್ಯದ ಎರಡನೇ ರಾಜಧಾನಿಯಾಗಿ ಅಸ್ತಿತ್ವ ಪಡೆದಿದೆ'' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುವರ್ಣ ವಿಧಾನಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಹೇಳಿದರು. ಇದು ಜೆಡಿ ಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ದೂರದೃಷ್ಟಿಯ ಫಲ. ಇದು ಸರ್ಕಾರದ ಸಾಧನೆ ಎಂದು ಅವರು ಬಣ್ಣಿಸಿದರು.

2007: ಹೈದರಾಬಾದಿನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 43ಕ್ಕೆ ಏರಿತು.

2007: ಅಂಡಮಾನ್ ದ್ವೀಪದ ವಿವಿಧ ಭಾಗಗಳಲ್ಲಿ ಈದಿನ ಮುಂಜಾನೆ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಯಿತು.

2006: ಇರಾನಿನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದ ಭಾಗವಾಗಿರುವ ಖೊಂಡಬ್ ಭಾರಜಲ ಘಟಕವನ್ನು ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಉದ್ಘಾಟಿಸಿದರು.

2006: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟ್ ಪಟು ಕ್ಲೈಡ್ ವಾಲ್ಕಾಟ್ (80) ಬ್ರಿಜ್ ಟೌನಿನಲ್ಲಿ ನಿಧನರಾದರು. ಐವತ್ತರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ಟಿನ ವಿಖ್ಯಾತ ಮೂವರು ಡಬ್ಲ್ಯುಗಳು ಎಂದೇ ಖ್ಯಾತರಾಗಿದ್ದವರಲ್ಲಿ ವಾಲ್ಕಾಟ್ ಒಬ್ಬರಾಗಿದ್ದರು. ಫ್ರಾಂಕ್ ವೊರೆಲ್, ಎವರ್ಟನ್ ವೀಕ್ಸ್ ಇತರ ಇಬ್ಬರು ಖ್ಯಾತ ಡಬ್ಲ್ಯುಗಳು.

2006: ನೇಪಾಳದ ಕಠ್ಮಂಡುವಿನಲ್ಲಿ ಇದೇ ಪ್ರಥಮ ಬಾರಿಗೆ ಸಲಿಂಗಪ್ರೇಮಿಗಳ ಮದುವೆ ನಡೆಯಿತು. 29ರ ಹರೆಯದ ಅನಿಲ್ ಮಹಜು ಮತ್ತು 23ರ ಹರೆಯದ ದಿಯಾ ಮಹಜು ಇವರೇ ಮದುವೆಯಾದ ಸಲಿಂಗ ಪ್ರೇಮಿಗಳು.

2001: ಪೆಂಟ್ಯಾಲ ಹರಿಕೃಷ್ಣ ಅವರು 15ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. 1987ರಲ್ಲಿ ವಿಶ್ವನಾಥನ್ ಆನಂದ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಮೊತ್ತ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಹರಿಕೃಷ್ಣ ಮೀರಿಸಿದರು.

1978: ರಷ್ಯದ ಸೋಯುಜ್ 31ರ ಮೂಲಕ ಗಗನಕ್ಕೆ ಏರಿದ ಸಿಗ್ಮಂಡ್ ಜಾನ್ ಅವರು ಬಾಹ್ಯಾಕಾಶಕ್ಕೆ ಏರಿದ ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಭಾಜನರಾದರು.

1874: ತತ್ವಜ್ಞಾನಿ, ರಾಜಕಾರಣಿ, ಈಶ್ವರ ಶರಣ್ ಮುನ್ಷಿ ಜನನ.

1965: ಸಾಹಿತಿ ಎಂ.ಎಸ್. ವೇದಾ ಜನನ.

1959: ಸಾಹಿತಿ ರಹಮತ್ ತರೀಕೆರೆ ಜನನ.

1955: ಸಾಹಿತಿ ಟಿ.ಪಿ. ಅಶೋಕ ಜನನ.

1933: ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಜನನ.

1920: ಅಮೆರಿಕದಲ್ಲಿ ಈದಿನವನ್ನು `ಮಹಿಳಾ ಸಮಾನತಾ ದಿನ' ಎಂಬುದಾಗಿ ಆಚರಿಸಲಾಗುತ್ತದೆ. 72 ವರ್ಷಗಳ ಹೋರಾಟದ ಬಳಿಕ ಈದಿನ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1918: `ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು. ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1883: ಕ್ರಾಕಟೋವಾ ಜ್ವಾಲಾಮುಖಿ ಭೀಕರವಾಗಿ ಬಾಯ್ದೆರೆದ ದಿನವಿದು. ಮಧ್ಯಾಹ್ನ 1 ಗಂಟೆಗೆ ಮೊದಲ ಬಾರಿಗೆ ಸ್ಫೋಟಗಳ ಸರಣಿ ಸಂಭವಿಸಿತು. 2 ಗಂಟೆಗೆ ಬೂದಿಯ ಕರಿಮೋಡ ಕ್ರಾಕಟೋವಾದ ಮೇಲೆ 17 ಮೈಲುಗಳಷ್ಟು ಎತ್ತರಕ್ಕೆ ಎದ್ದು ನಿಂತಿತು. ಮರುದಿನ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತು. ಆಗ ಸಂಭವಿಸಿದ ಸ್ಫೋಟದ ಸದ್ದು 2200 ಮೈಲು ದೂರದ ಆಸ್ಟ್ರೇಲಿಯಾಕ್ಕೂ ಕೇಳಿಸಿತು. ಐವತ್ತು ಮೈಲುಗಳಷ್ಟು ದೂರಕ್ಕೆ ಬೂದಿ ಚಿಮ್ಮಿತು.

No comments:

Post a Comment