Sunday, August 5, 2018

35ಎ ವಿಧಿಯ ಸಿಂಧುತ್ವ: ಸುಪ್ರೀಂ ವಿಚಾರಣೆ ಆ.27ಕ್ಕೆ ಮುಂದೂಡಿಕೆ

35 ವಿಧಿಯ ಸಿಂಧುತ್ವ: ಸುಪ್ರೀಂ ವಿಚಾರಣೆ .27ಕ್ಕೆ ಮುಂದೂಡಿಕೆ

ನವದೆಹಲಿ : ಸಂವಿಧಾನದ 35 ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು 6 ಆಗಸ್ಟ್ 2018 ಸೋಮವಾರ ಸುಪ್ರೀಂಕೋರ್ಟ್ ಆಗಸ್ಟ್ 27ಕ್ಕೆ ಮುಂದೂಡಿತು.

ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳು ಇರುವ ಪೀಠ ಆಲಿಸಬೇಕಾಗಿದೆ. ಈದಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಲಭ್ಯರಿಲ್ಲ. ಆದ್ದರಿಂದ ಪೀಠವು ಪ್ರಕರಣದ   ಅಹವಾಲು ಆಲಿಸಲಾಗದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹೇಳಿದರು.

ಸಂವಿಧಾನದ 35 ವಿಧಿಯ ಸಾಂವಿಧಾನಿಕ ಸಿಂಧುತ್ವ ಕುರಿತಾಗಿ ಸುಪ್ರೀಂ ಕೋರ್ಟಿನಿಂದ ಇವತ್ತು ಯಾವ ರೀತಿಯ ತೀರ್ಪು ಬರುವುದೆಂಬ ಬಗ್ಗೆ ಇಡಿಯ ದೇಶವೇ ಕಾತರದಿಂದಿತ್ತು.

ಸಂವಿಧಾನದ 35 ವಿಧಿಯು ಜಮ್ಮು ಕಾಶ್ಮೀರದ "ಕಾಯಂ ನಿವಾಸಿಗಳ'' ವ್ಯಾಖ್ಯಾನ ಮಾಡುವ ಅಧಿಕಾರವನ್ನು ರಾಜ್ಯವಿಧಾನ ಸಭೆಗೆ ನೀಡುತ್ತದೆ ಮಾತ್ರವಲ್ಲದೆ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕನ್ನು ಕೂಡ ನೀಡುತ್ತದೆ.

ಈದಿನ ವಿಚಾರಣೆ ಕೈಗೊಳ್ಳಬೇಕಿದ್ದ ಸುಪ್ರಿಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೈಕಿ ಒಬ್ಬರು ಗೈರಾಗಿರುವ ಕಾರಣ, ವಿಚಾರಣೆಯನ್ನು ಪೀಠವು ಆಗಸ್ಟ್ 27ಕ್ಕೆ ನಿಗದಿ ಪಡಿಸಿತು. 

No comments:

Post a Comment