ನಾನು ಮೆಚ್ಚಿದ ವಾಟ್ಸಪ್

Tuesday, August 18, 2020

ಇಂದಿನ ಇತಿಹಾಸ History Today ಆಗಸ್ಟ್ 18

 ಇಂದಿನ ಇತಿಹಾಸ  History Today ಆಗಸ್ಟ್ 18

2020:ನವದೆಹಲಿಪಿಎಂ ಕೇರ್ಸ್ ನಿಧಿಯ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್ಡಿಆರ್ಎಫ್ವರ್ಗಾಯಿಸುವಂತೆ ಆದೇಶ ನೀಡಲು ಸುಪ್ರೀಂ ಕೋರ್ಟ್ 2020 ಆಗಸ್ಟ್ 18ರ ಮಂಗಳವಾರ ನಿರಾಕರಿಸಿತುಇವೆರಡೂಸಂಪೂರ್ಣವಾಗಿ ವಿಭಿನ್ನ ರೀತಿಯ ದೇಣಿಗೆಗಳು ಎಂದು ಸುಪ್ರೀಂಕೋರ್ಟ್ ಹೇಳಿತುನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ನ್ಯಾಯಪೀಠವು ಪಿಎಂ ಕೇರ್ಸ್ ನಿಧಿಯು ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುತ್ತಿದೆ ಮತ್ತು ಬಜೆಟ್ ಹಂಚಿಕೆಗಳು ಸಾರ್ವಜನಿಕ ಟ್ರಸ್ಟ್ ರೂಪದಲ್ಲಿವೆ ಎಂದು ಅಭಿಪ್ರಾಯಪಟ್ಟಿತು. ಮತ್ತೊಂದೆಡೆಎನ್ಡಿಆರ್ಎಫ್ ಶಾಸನಬದ್ಧವಾಗಿ ರಚಿಸಲಾದ ನಿಧಿಯಾಗಿದ್ದುಇದು ಪಿಎಂ ಕೇರ್ಸ್ ನಿಧಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು ಎರಡರಲ್ಲಿ ಯಾವುದಕ್ಕೆ ಬೇಕಾದರೂ ದೇಣಿಗೆ ನೀಡಲು ಜನರು ಸ್ವತಂತ್ರರುಮತ್ತು ಸರ್ಕಾರವು ತನ್ನ ವಿವೇಚನೆಯಿಂದ ಪಿಎಂ ಕೇರ್ಸ್ ನಿಧಿಯಿಂದ ಎನ್ಡಿಆರ್ಎಫ್ಗೆ ಹಣವನ್ನು ವರ್ಗಾಯಿಸಬಹುದು ಎಂದು ಪೀಠ ಹೇಳಿತುಪಿಎಂ ಕೇರ್ಸ್ ಮತ್ತು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತ ಮನವಿಯನ್ನು ಇತ್ಯರ್ಥ ಪಡಿಸಿದ ನ್ಯಾಯಾಲಯವು ತನ್ನ ೨೦೧೯  ರಾಷ್ಟ್ರೀಯ ಯೋಜನೆಯನ್ನು ಜಾರಿಗೆ ತಂದಿರುವುದಕ್ಕಾಗಿ ಸರ್ಕಾರಕ್ಕೆ  ಮೆಚ್ಚುಗೆ ಸೂಚಿಸಿತುಕೋವಿಡ್ -೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊಸ ಯೋಜನೆಯ ಅಗತ್ಯವಿಲ್ಲ ಮತ್ತು ಹಾಲಿ ಯೋಜನೆಯು ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳಬಹುದು ಎಂದು ಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ’ಪಿಎಂ ಕೇರ್ಸ್ ನಿಧಿಗೆ ಜಮೆಯಾದ ಎಲ್ಲ ಹಣವನ್ನೂ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಬೇಕು ಎಂಬುದಾಗಿ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 2020 ಆಗಸ್ಟ್ 18ರ ಮಂಗಳವಾರ ತಳ್ಳಿಹಾಕಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿಕೋವಿಡ್-೧೯ ವಿರೋಧಿ ಸಮರವನ್ನು ದುರ್ಬಲಗೊಳಿಸುವ ಒಂದೂ ಅವಕಾಶವನ್ನು ರಾಹುಲ್ ಬಿಟ್ಟಿಲ್ಲ ಎಂದು ಹೇಳಿತು. "ರಾಹುಲ್ ಗಾಂಧಿಯವರು ಪಿಎಂ ಕೇರ್ಸ್ ನಿಧಿಯನ್ನು ಪ್ರಶ್ನಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಅವರ ಎಲ್ಲಾ ವಾದಗಳನ್ನು ಹೊಡೆದುರುಳಿಸಿದೆ. ಪಿಎಂ ಕೇರ್ಸ್ ಕೋವಿಡ್ ತರಹದ ತುರ್ತು ಪರಿಸ್ಥಿತಿU ಸಲುವಾಗಿ ನೋಂದಣಿಯಾಗಿರುವ ಸಾರ್ವಜನಿಕ ಟ್ರಸ್ಟ್ ಆಗಿದೆ ಎಂದು ಪ್ರಸಾದ್ ಹೇಳಿದರು. ವೈರಸ್ ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಸಂಕಲ್ಪವನ್ನು ದುರ್ಬಲಗೊಳಿಸುವ ಒಂದೂ ಅವಕಾಶವನ್ನು ರಾಹುಲ್ ಗಾಂಧಿ ಎಂದಿಗೂ ಬಿಟ್ಟಿಲ್ಲ ಎಂದು ನುಡಿದರು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ ) ಅಧಿಕಾರದಲ್ಲಿದ್ದ ಸಮಯದಲ್ಲಿ, ಮನಮೋಹನ್ ಸಿಂಗ್ ಯುಗದಲ್ಲಿ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಹಣವನ್ನು ಬೇರೆ ಕಡೆಗೆ ತಿರುಗಿಸಿ ರಾಜೀವಗಾಂಧಿ ಪ್ರತಿಷ್ಠಾನಕ್ಕೆ ನೀಡಲಾಗಿತ್ತು ಎಂದು ಆಪಾದಿಸಿದ್ದ ಬಿಜೆಪಿ ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಬಿಡುಗಡೆ ಮಾಡಿತ್ತು. ಸೋನಿಯಾ ಗಾಂಧಿ ಅವರು ಪ್ರತಿಷ್ಠಾನದ ಮುಖ್ಯಸ್ಥರಾಗಿದ್ದು, ಆಡಳಿತ ಮಂಡಳಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರೂ ಸೇರಿದ್ದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಒಂದು ಪ್ರಾಮಾಣಿಕ ಸರ್ಕಾರವಾಗಿದೆ ಎಂದೂ ಪ್ರಸಾದ್ ಪ್ರತಿಪಾದಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಶೋಕ ಲವಾಸಾ ಅವರು 2020 ಆಗಸ್ಟ್ 18ರ ಮಂಗಳವಾರ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್- ಎಡಿಬಿ) ಉಪಾಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿದ್ದಾರೆ  ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿದವು. ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ಲವಾಸಾ ಮುಂಚೂಣಿ ಸ್ಥಾನದಲ್ಲಿ ಇದ್ದರು. ಲಾವಸಾ ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದ್ದಾರೆ ಮತ್ತು ಆಗಸ್ಟ್ ೩೧ ರಂದು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ತಿಂಗಳಲ್ಲಿ ತಾವು ಫಿಲಿಪೈನ್ಸ್ ಮೂಲದ ಎಡಿಬಿಗೆ ಸೇರಲಿರುವುದಾಗಿ ಎಂದು ಅವರು ಹೇಳಿದರು. ಲವಾಸಾ ಅವರನ್ನು ಕಳೆದ ತಿಂಗಳು ಏಷ್ಯಾ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರದ್ದಾಗಿರುವ ಅಂತಾರಾಷ್ಟ್ರೀಯ ವಾಯುಯಾನ ಇನ್ನೂ ಪ್ರಾರಂಭವಾಗಿಲ್ಲ, ಮಧ್ಯೆ ಭಾರತವು ನೆರೆಹೊರೆಯ ಐದು ರಾಷ್ಟ್ರಗಳೊಂದಿಗೆ ವಿಮಾನಯಾನ ಸಂಚಾರಕ್ಕಾಗಿಟ್ರಾವಲ್ ಏರ್ ಬಬಲ್ ಸ್ಥಾಪನೆಯ ಪ್ರಸ್ತಾಪವನ್ನು ಇಟ್ಟಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ 2020 ಆಗಸ್ಟ್ 18ರ ಮಂಗಳವಾರ ಹೇಳಿದರು. ಏರ್ ಬಬಲ್ಗಳು ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತವೆ. ಅದರೆ ಪಾಕಿಸ್ತಾನ ಐದು ದೇಶಗಳ ಪಟ್ಟಿಯಲ್ಲಿಲ್ಲ. "ನಮ್ಮ ನೆರೆಹೊರೆಯ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ಥಾಮ, ನೇಪಾಳ ಮತ್ತು ಭೂತಾನ್ ಜೊತೆ ಏರ್ ಬಬಲ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾವು ಇತರ ದೇಶಗಳೊಂದಿಗೆ ಅಂತಹ ವ್ಯವಸ್ಥೆಗಳನ್ನು ಪರಿಗಣಿಸುತ್ತೇವೆ. ಸಿಕ್ಕಿಬಿದ್ದ ಪ್ರತಿಯೊಬ್ಬ ಪ್ರಜೆಯನ್ನೂ ತಲುಪುವುದು ಯಾವಾಗಲೂ ನಮ್ಮ ಪ್ರಯತ್ನ. ಯಾವುದೇ ಭಾರತೀಯನನ್ನೂ ಬಿಡುವುದಿಲ್ಲ ಎಂದು ಪುರಿ ಟ್ವೀಟ್ ಮಾಡಿದರು. ಭಾರತದ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳು ಪ್ರಸ್ತುತ ವಂದೇ ಭಾರತ ಮಿಷನ್ (ವಿಬಿಎಂ) ಅಡಿಯಲ್ಲಿ ವಿವಿಧ ದೇಶಗಳಿಂದ ತನ್ನ ನಿವಾಸಿಗಳನ್ನು ಸ್ಥಳಾಂತರಿಸಲು ಮಾತ್ರ ಸೀಮಿತವಾಗಿವೆ. "ನಾವು ವಂದೇ ಭಾರತ ಮಿಷನ್ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್ ಮತ್ತು ಮಾಲ್ಡೀವ್ಸ್ ಜೊತೆ ವಿಮಾನ ಪ್ರಯಾಣ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ನಾವು ಈಗ ಪ್ರಯತ್ನಗಳನ್ನು ಮುಂದಕ್ಕೆ ಒಯ್ಯುತ್ತಿದ್ದೇವೆ ಮತ್ತು ಅಂತಹ ವ್ಯವಸ್ಥೆಗಳನ್ನು ಸ್ಥಾಪಿಸಲು ಇನ್ನೂ ೧೩ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಭೋಪಾಲ್: ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ದೇಶಾದ್ಯಂತ ಜನರು ಉದ್ಯೋಗ ಬಿಕ್ಕಟ್ಟು ಎದುರಿಸುತ್ತಿರುವಾಗ ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಜನರಿಗೆ ಮೀಸಲಿಡುವ ವಿವಾದಾಸ್ಪದ ನಿರ್ಧಾರವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2020 ಆಗಸ್ಟ್ 18ರ ಮಂಗಳವಾರ ಪ್ರಕಟಿಸಿದರು. ನಿರ್ಧಾರವನ್ನು ಜಾರಿಗೆ ತರಲು ಶೀಘ್ರವೇ ಕಾನೂನು ಬದಲಾಯಿಸಲಾಗುವುದು ಎಂದು ಅವರು ಹೇಳಿದರು"ಮಧ್ಯಪ್ರದೇಶ ಸರ್ಕಾರ ಇಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಯುವಕರಿಗೆ ಮಾತ್ರ ನೀಡಲು ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಮಧ್ಯಪ್ರದೇಶದ ಸಂಪನ್ಮೂಲಗಳು ಮಧ್ಯಪ್ರದೇಶದ ಮಕ್ಕಳಿಗೆ ಮಾತ್ರ" ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.  27 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿಯವರಿಂದ ಪ್ರಕಟಣೆ ಹೊರಬಿದ್ದಿದೆ. ಚುನಾವಣಾ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ. ಮಧ್ಯಪ್ರದೇಶದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಚೌಹಾಣ್ ಹಿಂದೆ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ತಿರುವನಂತಪುರಂ: ’ಖರೀದಿಸಿ ಮತ್ತು ಕೊರೋನಾ ಬಂದರೆ ೫೦ ಕೆ ಕ್ಯಾಶ್ಬ್ಯಾಕ್ ಪಡೆಯಿರಿ ಎಂಬುದಾಗಿ ವಿಲಕ್ಷಣ ಜಾಹೀರಾತು ನೀಡಿದ ಕೇರಳದ ಅಂಗಡಿಯೊಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವರದಿ 2020 ಆಗಸ್ಟ್ 18ರ ಮಂಗಳವಾರ ಬಂದಿತು. ಕೇರಳದ ಎಲೆಕ್ಟ್ರಾನಿಕ್ಸ್ ಸರಕುಗಳ ಅಂಗಡಿಯು ಕೊರೋನಾವೈರಸ್ನ್ನು ಬಳಸಿಕೊಂಡು ಜಾಹೀರಾತು ನೀಡಿ ತೊಂದರೆಯ ಸುಳಿಯಲ್ಲಿ ಸಿಲುಕಿದೆ. ಶಾಪಿಂಗ್ ಮಾಡಿದ ೨೪ ಗಂಟೆಗಳ ಒಳಗೆ ಗ್ರಾಹಕರಿಗೆ ಕೊರೊನಾವೈರಸ್ ಸೋಂಕು ತಗುಲಿದರೆ, ಜಿಎಸ್ಟಿ ರಹಿತವಾಗಿ ೫೦,೦೦೦ ರೂಪಾಯಿ ನಗದು ವಾಪಸ್ ಎಂಬುದಾಗಿ ಎಲೆಕ್ಟ್ರಾನಿಕ್ಸ್ ಅಂಗಡಿ ಜಾಹೀರಾತು ನೀಡಿತ್ತು. ಜಾಹೀರಾತಿನ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಅಂಗಡಿಗೆ ಗ್ರಾಹಕರು ದಾಂಗುಡಿ ಇಡಲು ಆರಂಭಿಸಿದರು. ಅಂಗಡಿಯಲ್ಲಿ ಜನದಟ್ಟಣೆ ಕಂಡು ಬರುತ್ತಿದ್ದಂತೆಯೇ ಆಡಳಿತವು ಚುರುಕಾಗುವಂತಾಯಿತು. ಆಗಸ್ಟ್ ೧೫ ಮತ್ತು ೩೦ ನಡುವಣ ಅವಧಿಗೆ ಮಾನ್ಯವಾಗಿದ್ದ ಪ್ರಸ್ತಾಪವನ್ನು ಅಂಗಡಿಯವರು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ್ದರು.ವಿವಾದಾತ್ಮಕ ಜಾಹೀರಾತಿನಿಂದ ಗಾಬರಿಗೊಂಡ ಕೊಟ್ಟಾಯಂನ ಪಾಲಾ ಪುರಸಭೆಯ ಸದಸ್ಯ ಹಾಗೂ ವಕೀಲ ಬಿನು ಪುಲಿಕಕ್ಕಂಡಂ ಅವರು ಪ್ರಚಾರ ಪ್ರಸ್ತಾಪವನ್ನು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ನಾಲ್ಕು ಅಂಶಗಳ ಅರ್ಜಿಯಲ್ಲಿ, ಪ್ರಸ್ತಾಪವು ಕೋವಿಡ್ -೧೯ ಸಕಾರಾತ್ಮಕ ವ್ಯಕ್ತಿಗೆ ತನ್ನ ಆರೋಗ್ಯ ಸ್ಥಿತಿಯನ್ನು ಮರೆಮಾಚುವ ಮೂಲಕ ಖರೀದಿಸಿ ನಂತರ ಕ್ಯಾಶ್ಬ್ಯಾಕ್ ಪಡೆಯಲು ಪ್ರೇರೇಪಣೆ ನೀಡಬಹುದುಎಂದು ಅವರು ಆಕ್ಷೇಪಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 18 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment