ನಾನು ಮೆಚ್ಚಿದ ವಾಟ್ಸಪ್

Tuesday, September 29, 2020

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

 ಇಂದಿನ ಇತಿಹಾಸ  History Today ಸೆಪ್ಟೆಂಬರ್ 29

2020: ನವದೆಹಲಿ: ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ) ತಾನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ಖಡಕ್ಕಾಗಿ ಹೇಳಿದ್ದು, ಚೀನಾದೊಂದಿಗಿನ ವಿವಿಧ ಒಪ್ಪಂದಗಳು ಎರಡೂ ದೇಶಗಳನ್ನು ಗಡಿಯ ಜೋಡಣೆಯ ಸಾಮಾನ್ಯ ತಿಳುವಳಿಕೆಗೆ ಬದ್ಧವಾಗಿರಿಸಿವೆ ಎಂದು ತಿಳಿಸಿತು. ಚೀನಾದ ಪ್ರಧಾನ ಮಂತ್ರಿ ಚೌ ಎನ್ ಲೈ ಅವರು ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನವೆಂಬರ್ , ೧೯೫೯ ಪತ್ರದಲ್ಲಿ ಪ್ರಸ್ತಾಪಿಸಿದ ಎಲ್ಎಸಿಗೆ ಬದ್ಧವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಪತ್ರಿಕಾ ವರದಿಯೊಂದಕ್ಕೆ ವಿದೇಶಾಂಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಕ್ರಿಯೆಯನ್ನು ನೀಡಿತು. ೧೯೬೧ರಲ್ಲಿ ಚೀನಾದ ನಿಲುವನ್ನು ಮೊದಲ ಬಾರಿಗೆ ತಿರಸ್ಕರಿಸಿದಂದಿನಿಂದ ಕಳೆದ ೬೧ ವರ್ಷಗಳಿಂದ ಭಾರತವು ಚೀನೀಯರ ಕಲ್ಪನಾ ಗಡಿಯನ್ನು ತಿರಸ್ಕರಿಸುತ್ತಲೇ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತು. ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಭಾರತ ಎಂದಿಗೂ ಸ್ವೀಕರಿಸಿಲ್ಲ. ನಿಲುವು ಸ್ಥಿರವಾದುದಾಗಿದ್ದು ಚೀನಾವೂ ಸೇರಿದಂತೆ ಎಲ್ಲರಿಗೂ ಗೊತ್ತಿರುವಂತಹುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ೧೦ ರಾಜ್ಯಗಳಲ್ಲಿನ ೫೪ ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಕ್ರಮವಾಗಿ ನವೆಂಬರ್ ಮತ್ತು ರಂದು ಉಪ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗ 2020 ಸೆಪ್ಟೆಂಬರ್ 29ರ ಮಂಗಳವಾರ ಪ್ರಕಟಿಸಿತು. ನವೆಂಬರ್ ರಂದು ಬಿಹಾರದ ವಾಲ್ಮೀಕಿ ನಗರದ ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿವೆ. ಅದೇ ದಿನ ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ ೧೨ರಂದು ನಡೆಯಲಿದ್ದು, ಚುನಾವಣೆಯ ಫಲಿತಾಂಶಗಳನ್ನು ನವೆಂಬರ್ ೧೨ ರೊಳಗೆ ಪ್ರಕಟಿಸಲಾಗುವುದು. ಅಕ್ಟೋಬರ್ ೨೮ ರಿಂದ ನವೆಂಬರ್ ರವರೆಗೆ ನಡೆಯಲಿರುವ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಉಪಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿ: ಪ್ರತಿಭಟನೆಗಳ ಹೆಸರಿನಲಿ ರೈತರು ಪೂಜಿಸುವ ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ಅವರು ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಸೆಪ್ಟೆಂಬರ್ 29ರ ಮಂಗಳವಾರ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ದೆಹಲಿಯ ಹೃದಯ ಭಾಗದಲ್ಲಿರುವ ಇಂಡಿಯಾಗೇಟ್ ಹುಲ್ಲುಹಾಸಿನ ಬಳಿಯ ರಾಜಪಥದಲ್ಲಿ ಪಂಜಾಬ್ ಕಾಂಗ್ರೆಸ್ಸಿನ ಯುವ ಘಟಕದ ಸದಸ್ಯರು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ ವಿಪಕ್ಷಗಳ ವಿರುದ್ಧ ಹರಿ ಹಾಯುವುದರ ಜೊತೆಗೆ ಕೃಷಿ ಮಸೂದೆಗಳನ್ನು ಪ್ರಬಲವಾಗಿ ಸಮರ್ಥಿಸಿದರು. ದೊಡ್ಡ ರೈತರ ಗುಂಪುಗಳು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ, ಹೊಸ ಕಾನೂನುಗಳನ್ನು ಪ್ರತಿಭಟಿಸುವುದನ್ನು ಮುಂದುವರೆಸುತ್ತಿವೆ, ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿಯಂತ್ರಣ ರದ್ದು ಕ್ರಮದಿಂದ ಕೃಷಿ ವ್ಯವಹಾರಗಳಲ್ಲಿ ಪ್ರಬಲ ಕಾರ್ಪೋರೇಟ್ ನಿಯಂತ್ರಣ ಹೆಚ್ಚಾಗುತ್ತದೆ ಮತ್ತು ರೈತರ ಚೌಕಾಶಿ ಬಲವು ಇನ್ನಷ್ಟು ಕುಗ್ಗುತ್ತದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಕೃಷಿ ಸುಧಾರಣೆ ಕಾಯ್ದೆಯನ್ನು ವಿರೋಧಿಸಿರುವ ಭಾರತೀಯ ಜನತಾ ಪಕ್ಷದ ಹಳೆಯ ಮಿತ್ರ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವು ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ ಡಿಎ) ಹೊರ ಬಂದಿದೆ. ರೈತರ ಸ್ವಾತಂತ್ರ್ಯವನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಆಪಾದಿಸಿದ ಪ್ರಧಾನಿ, ರಾಷ್ಟ್ರ ಹಿತದ ಎಲ್ಲವನ್ನೂ ವಿರೋಧಿಸುವುದನ್ನು ಜನರು ಚಾಳಿಯಾಗಿ ಮಾಡಿಕೊಂಡಿದ್ದಾರೆ. ಇವರ ರಾಜಕೀಯದಲ್ಲಿ ಇರುವ ಏಕೈಕ ಮಾರ್ಗವೆಂದರೆ ವಿರೋಧಿಸುವುದು ಎಂದು ಚುಚ್ಚಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನದೆಹಲಿ: ಪಾಕಿಸ್ತಾನದಮನಸ್ಸಿಲ್ಲದ ಮತ್ತು ಅಸಹಕಾರ ಮನೋಭಾವದ ಪರಿಣಾಮವಾಗಿ ೨೦೦೮ ಮುಂಬೈ ದಾಳಿ ಮತ್ತು ಪಠಾಣ್ಕೋಟ್ ವಾಯುನೆಲೆಯ ಮೇಲಿನ ೨೦೧೬ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರಕಿಲ್ಲ ಎಂದು ಭಾರತ ಹೇಳಿದೆ. ಭಯೋತ್ಪಾದನೆಯ ಸಂತ್ರಸ್ತರ ಗುಂಪಿನ ಮಂತ್ರಿಮಂಡಲದ ಸಭೆಯಲ್ಲಿ 2020 ಸೆಪ್ಟೆಂಬರ 28ರ ಸೋಮವಾರ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವ) ವಿಜಯ್ ಠಾಕೂರ್ ಸಿಂಗ್, ’ತಮ್ಮ ವಿರುದ್ಧದ ಅಪರಾಧಗಳಿಗಾಗಿ ಭಯೋತ್ಪಾದನೆಗೆ ಒಳಗಾದವರ ನ್ಯಾಯ ಪಡೆಯುವ ಹಕ್ಕನ್ನು ವಿಶ್ವ ಸಮುದಾಯವು ಕಳೆದುಕೊಳ್ಳಬಾರದು ಎಂದು ಹೇಳಿದರು. ವರ್ಚುವಲ್ ಸಭೆಯನ್ನು ಅಫ್ಘಾನಿಸ್ತಾನ ಮತ್ತು ಸ್ಪೇನ್ ವಿದೇಶಾಂಗ ಸಚಿವರು, ಗುಂಪಿನ ಸಹ-ಅಧ್ಯಕ್ಷರು ಮತ್ತು ವಿಶ್ವಸಂಸ್ಥೆ ಭಯೋತ್ಪಾದನಾ ನಿಗ್ರಹ ಕಚೇರಿ (ಯುಎನ್ಒಸಿಟಿ) ಆಯೋಜಿಸಿತ್ತು.  "೨೦೦೮ ಮುಂಬೈ ಭಯೋತ್ಪಾದಕ ದಾಳಿ ಮತ್ತು ೨೦೧೬ ಪಠಾಣ್ಕೋಟ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರಕಿಲ್ಲ ಎಂದು ನಾನು ಗಮನ ಸೆಳೆಯಲು ಬಯಸುತ್ತೇನೆ. ಇದಕ್ಕೆ ಒಂದು ನಿರ್ದಿಷ್ಟ ದೇಶದ ಇಷ್ಟವಿಲ್ಲದಿರುವಿಕೆ ಮತ್ತು ಅಸಹಕಾರ ಮನೋಭಾವದ ವರ್ತನೆ ಕಾರಣ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿ: ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಚುನಾವಣೆ ನಡೆಸುವ ಮತ್ತು ನೆರೆಯ ತನ್ನ ಐದನೇ ಪ್ರಾಂತ್ಯವನ್ನಾಗಿ ಮಾಡುವ ಪಾಕಿಸ್ತಾನದ ಯೋಜನೆಯನ್ನು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ತೀವ್ರವಾಗಿ ವಿರೋಧಿಸಿತು, ಇಸ್ಲಾಮಾಬಾದ್ ತಾನು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ವಸ್ತುಸ್ಥಿತಿ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿತು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಾನಮಾನದ ಬಗ್ಗೆ ಉಭಯ ದೇಶಗಳು ಇತ್ತೀಚಿನ ವಾರಗಳಲ್ಲಿ ಹಲವಾರು ಬಾರಿ ವಿಶ್ವಸಂಸ್ಥೆಯಂತಹ  ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ವಿಷಯವನ್ನು ಕಿಡಿಕಾರಿವೆ. ಗಿಲ್ಗಿಟ್-ಬಾಲ್ಟಿಸ್ತಾನದ ಶಾಸಕಾಂಗ ಸಭೆಗೆ ನವೆಂಬರ್ ೧೫ ರಂದು ಚುನಾವಣೆ ನಡೆಸಲು ಪಾಕಿಸ್ತಾನ ಸರ್ಕಾರ ಯೋಜಿಸಿದೆ. ಬಳಿಕ ಪ್ರದೇಶವನ್ನು ಪೂರ್ಣ ಪ್ರಮಾಣದ ಪ್ರಾಂತ್ಯವನ್ನಾಗಿ ಮಾಡುವತ್ತ ಸಾಗಲು ಪಾಕಿಸ್ತಾನ ಉದ್ದೇಶಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು (ಎಐಕೆಎಸ್ಸಿಸಿ) ಅಕ್ಟೋಬರ್ ರಿಂದ ಬೃಹತ್ ಅಖಿಲ ಭಾರತ ರೈತರ ಪ್ರತಿಭಟನೆ ನಡೆಸುವ ಯೋಜನೆಯನ್ನು 2020 ಸೆಪ್ಟೆಂಬರ್ 29ರ ಮಂಗಳವಾರ ಪ್ರಕಟಿಸಿತು. ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿದ ಒಂದು ದಿನದ ನಂತರ ಅವರಿಂದ ನಿರ್ಧಾರ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯನ್ನುರೈತರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ. ಮಧ್ಯೆ, ಮೂರು ಕೃಷಿ ಕಾನೂನುಗಳ ಬಗ್ಗೆ ಆಂದೋಲನ ನಡೆಸುತ್ತಿರುವ ಪಂಜಾಬಿನ ರೈತರು ಇಂದು ತಮ್ಮರೈಲು ರೋಕೊ ಕೋಲಾಹಲವನ್ನು ಆರನೇ ದಿನವೂ ಮುಂದುವರೆಸಿದರು ಮತ್ತು ಅದನ್ನು ಅನಿರ್ದಿಷ್ಟ ಅವಧಿಗೆ ವಿಸ್ತರಿಸಲು ನಿರ್ಧರಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

No comments:

Post a Comment