ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸಲ್ಲಿಸಿದ ಮೇಲ್ಮನವಿಗಳ ಆರು ದಿನಗಳ ನಿರಂತರ ವಿಚಾರಣೆಯನ್ನು 2022 ಆಗಸ್ಟ್ 11 ರ ಗುರುವಾರ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ
ಉದಯ್ ಉಮೇಶ್ ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ
ಅವರನ್ನೊಳಗೊಂಡ ತ್ರಿಸದಸ್ಯ
ನ್ಯಾಯಮೂರ್ತಿಗಳ ಪೀಠವು 6 ದಿನಗಳ ವಿಚಾರಣೆಯ
ನಂತರ ತೀರ್ಪನ್ನು ಕಾಯ್ದಿರಿಸಿತು.
2018 ರಲ್ಲಿ, ಕೇರಳ ಹೈಕೋರ್ಟ್, ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 [2014 ತಿದ್ದುಪಡಿ ಯೋಜನೆ] ರದ್ದುಗೊಳಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ
ಮಾಡಿಕೊಟ್ಟಿತ್ತು. ಪಿಂಚಣಿ ಯೋಜನೆಗೆ ಸೇರಲು ಯಾವುದೇ ಕಟ್-ಆಫ್ ದಿನಾಂಕ ಇರಬಾರದು ಎಂದು
ಹೈಕೋರ್ಟ್ ಹೇಳಿತ್ತು.
2019 ರಲ್ಲಿ, ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಇಪಿಎಫ್‌ಒ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು
(ಎಸ್ ಎಲ್ ಪಿ) ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನಂತರ, ಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರವು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಪೀಟು ಎಸ್‌ಎಲ್‌ಪಿ ವಜಾವನ್ನು ಹಿಂಪಡೆದಿತ್ತು ಮತ್ತು ಅರ್ಹತೆಯ
ಮೇಲೆ ವಿಚಾರಣೆಗಾಗಿ ವಿಷಯವನ್ನು ಮರು ಪರಿಶೀಲನೆಗೆ
ತೆಗೆದುಕೊಂಡಿತ್ತು.
2021ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸುವಂತೆ ಕೋರಿ ಮೇಲ್ಮನವಿಗಳನ್ನು ವಿಶಾಲ ಪೀಠಕ್ಕೆ ಒಪ್ಪಿಸಲು ಮನವಿ ಮಾಡಿತ್ತು:
1. ಉದ್ಯೋಗಿಗಳ ಪಿಂಚಣಿ
ಯೋಜನೆಗೆ ಪ್ಯಾರಾ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ
ಮತ್ತು
2. ಆರ್. ಸಿ. ಗುಪ್ತ ವಿರುದ್ಧ ಪ್ರಾದೇಶಿಕ
ಭವಿಷ್ಯ ನಿಧಿ ಆಯುಕ್ತರು (2016) ಪ್ರಕರಣದ ತೀರ್ಪು ಈ ಎಲ್ಲಾ ವಿಷಯಗಳನ್ನು ಇತ್ಯರ್ಥ ಪಡಿಸಲು ಆಧಾರವಾಗಿರಬೇಕೇ?
ಇಪಿಎಫ್‌ಒ ಎತ್ತಿದ
ಪ್ರಮುಖ ವಾದವೆಂದರೆ ಪಿಂಚಣಿ ನಿಧಿ ಮತ್ತು ಭವಿಷ್ಯ ನಿಧಿಗಳು ವಿಭಿನ್ನವಾಗಿವೆ ಮತ್ತು ಪಿಂಚಣಿ ಯೋಜನೆಯ ಸದಸ್ಯತ್ವು ಭವಿಷ್ಯ ನಿಧಿಯ ಸದಸ್ಯತ್ವಕ್ಕೆ ಸ್ವಯಂಚಾಲಿತವಾಗಿ ಪರಿವರ್ತನೆಯಾಗುವುದಿಲ್ಲ. ಪಿಂಚಣಿ ಯೋಜನೆಯನ್ನು ಕಡಿಮೆ ವಯಸ್ಸಿನ
ಉದ್ಯೋಗಿಗಳಿಗೆ ಉದ್ದೇಶಿಸಲಾಗಿದೆ ಮತ್ತು ಕಟ್-ಆಫ್ ಮಿತಿಗಿಂತ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳಿಗೆ
ಪಿಂಚಣಿ ಪಡೆಯಲು ಅವಕಾಶ ನೀಡಿದರೆ, ಅದು ಮೂಲನಿಧಿಯೊಳಗೆ ದೊಡ್ಡ ಅಸಮತೋಲನವನ್ನು
ಉಂಟುಮಾಡುತ್ತದೆ ಎಂದು ವಾದಿಸಲಾಯಿತು. 2014 ರ
ತಿದ್ದುಪಡಿಗಳನ್ನು ಪಿಂಚಣಿ ಮತ್ತು ಭವಿಷ್ಯ ನಿಧಿಗಳ ನಡುವಿನ ಅಡ್ಡ-ಸಬ್ಸಿಡಿಕರಣದ ಸಮಸ್ಯೆಯನ್ನು
ಪರಿಹರಿಸಲು ತರಲಾಯಿತು ಎಂದೂ ಇಪಿಎಫ್ ಒ ಹೇಳಿತು.
ಇಪಿಎಫ್‌ಒ ಎತ್ತಿರುವ
ಆರ್ಥಿಕ ಹೊರೆಯ ವಾದವನ್ನು ಪಿಂಚಣಿದಾರರು ವಿರೋಧಿಸಿದರು.
ಮೂಲನಿಧಿ ಹಾಗೆಯೇ ಸ್ಥಿರವಾಗಿ ಉಳಿದಿದೆ ಮತ್ತು ಅದಕ್ಕೆ ಬರುವ ಬಡ್ಡಿಯಿಂದ ಪಿಂಚಣಿ ಪಾವತಿ ಮಾಡಲಾಗುತ್ತಿದೆ
ಎಂದು ಪಿಂಚಣಿದಾರರು ವಾದಿಸಿದರು.
ಪಿಂಚಣಿ ಯೋಜನೆಗೆ
ಸೇರಲು ಕಟ್-ಆಫ್ ಅವಧಿಯೊಳಗೆ ಪ್ರತ್ಯೇಕ ಆಯ್ಕೆಯನ್ನು ಬಳಸಬೇಕು ಎಂಬ ಇಪಿಎಫ್‌ಒನ ವಾದವನ್ನು
ಪಿಂಚಣಿದಾರರು ವಿರೋಧಿಸಿದರು ಮತ್ತು ಇಪಿಎಫ್‌ಒ ನಿಲುವು ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.
ವಿವಿಧ ದಿನಗಳ
ವಿಚಾರಣೆಗಳ ವಿವರವಾದ ವರದಿಗಳನ್ನು ಕೆಳಗೆ ನೀಡಲಾಗಿದೆ (ಕೊನೆಯ ದಿನದ ವಾದಗಳ ಪ್ರತ್ಯೇಕ ವರದಿ ಬರಲಿದೆ.)
ಪ್ರಕರಣ: ಇಪಿಎಫ್ ಒ ವಿರುದ್ಧ ಸುನಿಲ್ ಕುಮಾರ್ ಮತ್ತು ಇತರರು.
ಹಿಂದಿನ ವಿಚಾರಣೆಗಳ ವರದಿಗಳಿಗೆ ಕೆಳಗೆ ಕ್ಲಿಕ್ ಮಾಡಿರಿ
ಇಪಿಎಫ್
ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ
ಸಬ್ಸಿಡಿ, ಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರ, ಇಪಿಎಫ್ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ
ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ
ಕೊರತೆ ಇಲ್ಲ'
ಭವಿಷ್ಯ
ನಿಧಿ ಪಿಂಚಣಿ ಪ್ರಕರಣ: ಆಗಸ್ಟ್ 10ಕ್ಕೆ ಮುಂದಿನ ವಿಚಾರಣೆ
No comments:
Post a Comment